Tag: saudi arabia

  • ರಕ್ಷಣಾ ಒಪ್ಪಂದಕ್ಕೆ ಪಾಕಿಸ್ತಾನ-ಸೌದಿ ಅರೇಬಿಯಾ ಸಹಿ; ಭಾರತ ಹೇಳಿದ್ದೇನು?

    ರಕ್ಷಣಾ ಒಪ್ಪಂದಕ್ಕೆ ಪಾಕಿಸ್ತಾನ-ಸೌದಿ ಅರೇಬಿಯಾ ಸಹಿ; ಭಾರತ ಹೇಳಿದ್ದೇನು?

    – ಇಬ್ಬರಲ್ಲಿ ಯಾರ ಮೇಲೆಯೇ ಯುದ್ಧ ನಡೆದರೂ, ಎರಡೂ ದೇಶಗಳ ವಿರುದ್ಧ ಆಕ್ರಮಣ ಎಂದೇ ಪರಿಗಣನೆ

    ರಿಯಾದ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ರಿಯಾದ್ ಭೇಟಿಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ (Saudi Arabia – Pakistan) ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ‘ಇಬ್ಬರಲ್ಲಿ ಯಾರ ಮೇಲೆಯೇ ಯುದ್ಧ ನಡೆಯಲಿ, ಎರಡೂ ದೇಶಗಳ ವಿರುದ್ಧ ಆಕ್ರಮಣ ಎಂದು ಪರಿಗಣಿಸುವುದು’ ಒಪ್ಪಂದದ ಪ್ರಮುಖ ಷರತ್ತಾಗಿದೆ.

    ಈ ಕುರಿತು ಭಾರತ ಪ್ರತಿಕ್ರಿಯೆ ನೀಡಿದ್ದು, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ವರದಿಗಳನ್ನು ನಾವು ನೋಡಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ

    ಈ ಬೆಳವಣಿಗೆಯಿಂದ ನಮ್ಮ ರಾಷ್ಟ್ರೀಯ ಭದ್ರತೆಗೆ, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡುತ್ತೇವೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

    ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪಾಕಿಸ್ತಾನ ಪ್ರಧಾನಿ ಬುಧವಾರ ರಿಯಾದ್‌ಗೆ ಭೇಟಿ ನೀಡಿದ್ದರು. ಸೌದಿ ಪ್ರಿನ್ಸ್ ರಿಯಾದ್‌ನ ಅಲ್-ಯಮಾಮಾ ಅರಮನೆಯಲ್ಲಿ ಷರೀಫ್ ಅವರನ್ನು ಭೇಟಿಯಾದರು. ಇದನ್ನೂ ಓದಿ: ವೆನೆಜುವೆಲಾದ ಮಾದಕವಸ್ತು ಬೋಟ್‌ ಮೇಲೆ ಅಮೆರಿಕ ದಾಳಿ; ಮೂವರು ಸಾವು

    ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಸುಮಾರು 8 ದಶಕಗಳಿಂದ ಐತಿಹಾಸಿಕ ಪಾಲುದಾರಿಕೆ ಇದೆ. ಹೀಗಾಗಿ, ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಸ್ಲಾಮಿಕ್‌ ರಾಷ್ಟ್ರಗಳ ಒಗ್ಗಟ್ಟಿನ ದೃಷ್ಟಿಯಿಂದ ಒಪ್ಪಂದ ಆಗಿದೆ. ಈ ಒಪ್ಪಂದ ಎರಡೂ ದೇಶಗಳ ನಡುವಿನ ನಿಕಟ ರಕ್ಷಣಾ ಸಹಕಾರವನ್ನು ಆಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

  • ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ

    ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ

    ರಿಯಾಧ್: ಹೈದರಾಬಾದ್ ಮಹಿಳೆಯು ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೌದಿ ಅರೇಬಿಯಾದ (Saudi Arabia) ಅಲ್ ಖೋಬರ್‌ನಲ್ಲಿ ನಡೆದಿದೆ.

    ಅವಳಿ ಪುತ್ರರಾದ ಸಾದಿಕ್ ಅಹ್ಮದ್ (7), ಅಡೆಲ್ ಅಹ್ಮದ್ (7) ಮತ್ತು ಯೂಸುಫ್ ಅಹ್ಮದ್ (3) ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಮೊಹಮ್ಮದಿ ಲೈನ್ಸ್ ನಿವಾಸಿಯಾಗಿದ್ದ ಸಯ್ಯದಾ ಹುಮೇರಾ ಅಮ್ರೀನ್ ತನ್ನ ಮೂವರು ಗಂಡು ಮಕ್ಕಳನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಯತ್ನಿಸಿದ್ದಾರೆ. ಇದನ್ನೂ ಓದಿ: ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ಪತಿ ಮೊಹಮ್ಮದ್ ಶಹನವಾಜ್ ಅವರು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಹೀಗಾಗಿ ಅಮ್ರೀನ್ ಅವರು ಪತಿಯನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ಸೌದಿಗೆ ತೆರಳಿದ್ದರು. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಕೆಲಸದಿಂದ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    ಪ್ರಾಥಮಿಕ ವರದಿಯ ಪ್ರಕಾರ, ಅಮ್ರೀನ್ ಅವರು ಕೆಲ ಸಮಯದಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು. ಅಲ್ಲದೇ ಕೌಟುಂಬಿಕ ಕಲಹದಿಂದ ಬೆಸತ್ತಿದ್ದರು ಎನ್ನಲಾಗಿದೆ. ಘಟನೆಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಸೌದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ

    ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ

    ರಿಯಾಧ್: ಹೈದರಾಬಾದ್ ಮಹಿಳೆಯು ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೌದಿ ಅರೇಬಿಯಾದ (Saudi Arabia) ಅಲ್ ಖೋಬರ್‌ನಲ್ಲಿ ನಡೆದಿದೆ.

    ಅವಳಿ ಪುತ್ರರಾದ ಸಾದಿಕ್ ಅಹ್ಮದ್ (7), ಅಡೆಲ್ ಅಹ್ಮದ್ (7) ಮತ್ತು ಯೂಸುಫ್ ಅಹ್ಮದ್ (3) ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಮೊಹಮ್ಮದಿ ಲೈನ್ಸ್ ನಿವಾಸಿಯಾಗಿದ್ದ ಸಯ್ಯದಾ ಹುಮೇರಾ ಅಮ್ರೀನ್ ತನ್ನ ಮೂವರು ಗಂಡು ಮಕ್ಕಳನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಯತ್ನಿಸಿದ್ದಾರೆ. ಇದನ್ನೂ ಓದಿ: ನನಗೆ ಕನ್ನಡ ಬರಲ್ಲ, ಏನು ಮಾಡ್ತಿಯಾ? – ಪೌರ ಕಾರ್ಮಿಕನೊಂದಿಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿಯ ಮೊಂಡುತನ

    ಪತಿ ಮೊಹಮ್ಮದ್ ಶಹನವಾಜ್ ಅವರು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಹೀಗಾಗಿ ಅಮ್ರೀನ್ ಅವರು ಪತಿಯನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ಸೌದಿಗೆ ತೆರಳಿದ್ದರು. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಕೆಲಸದಿಂದ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    ಪ್ರಾಥಮಿಕ ವರದಿಯ ಪ್ರಕಾರ, ಅಮ್ರೀನ್ ಅವರು ಕೆಲ ಸಮಯದಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು. ಅಲ್ಲದೇ ಕೌಟುಂಬಿಕ ಕಲಹದಿಂದ ಬೆಸತ್ತಿದ್ದರು ಎನ್ನಲಾಗಿದೆ. ಘಟನೆಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಸೌದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?

    ಕಾಲಿಟ್ಟಲ್ಲೆಲ್ಲಾ ಮರಳಿದ್ದರೂ ಸೌದಿ ಅರೇಬಿಯಾ ಮರಳು ಆಮದು ಮಾಡಿಕೊಳ್ಳುವುದು ಏಕೆ?

    ವಿಶಾಲವಾದ ಮರುಭೂಮಿ ಹೊಂದಿರುವ ದೇಶ ಸೌದಿ ಅರೇಬಿಯಾ. ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಬರೀ ಮರಳೇ ಕಾಣಸಿಗುತ್ತದೆ. ಕಾಲಿಟ್ಟಲ್ಲೆಲ್ಲಾ ಮರಳು ಸಿಗುವ ದೇಶವಾದ ಸೌದಿ ಅರೇಬಿಯಾ (Saudi Arabia) ದುಬಾರಿ ಹಣ ಕೊಟ್ಟು ಮರಳನ್ನು ಆಮದು (Sand Import) ಮಾಡಿಕೊಳ್ಳುತ್ತದೆ. ಅರೇ ತನ್ನಲ್ಲೇ ಅಷ್ಟೊಂದು ಮರಳನ್ನು ಇಟ್ಟುಕೊಂಡು ಹಣಕೊಟ್ಟು ಆಮದು ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಹಾಗಿದ್ರೆ ಸುತ್ತಲೂ ಮರಳು ಹೊಂದಿದ್ದರೂ ಬೇರೆಡೆಯಿಂದ ಮರಳು ಆಮದು ಮಾಡಿಕೊಳ್ಳುತ್ತಿರುವುದು ಏಕೆ? ಅಲ್ಲಿರುವ ಮರಳನ್ನು ಯಾಕೆ ಬಳಕೆ ಮಾಡುತ್ತಿಲ್ಲ‌ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮರಳು ಭೂಮಿಗೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾದಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಸೌದಿ ಅರೇಬಿಯಾ ಆಸ್ಟ್ರೇಲಿಯಾ, ಚೀನಾ ಮತ್ತು ಬೆಲ್ಜಿಯಂನಂತಹ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಸೌದಿಯಲ್ಲಿ ಲಭ್ಯವಿರುವ ಮರಳು ಬಳಕೆಗೆ ಮತ್ತು ನಿರ್ಮಾಣ ಕಾರ್ಯಗಳಿಗೆ ಸೂಕ್ತವಲ್ಲ. ಅಲ್ಲದೇ ಸೌದಿಯಲ್ಲಿ ಮರಳು ಬೇಡಿಕೆ ಕೂಡ ಹೆಚ್ಚಿದೆ. ಆದ್ದರಿಂದ ಸೌದಿ ಅರೇಬಿಯಾ ದುಬಾರಿ ಹಣ ನೀಡಿ ಬೇರೆಬೇರೆ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ.

    ಸೌದಿಯಲ್ಲಿನ ಮರಳು ಬಳಕೆಗೆ ಯೋಗ್ಯವಲ್ಲ:
    ಸೌದಿ ಅರೇಬಿಯಾದಲ್ಲಿ ದೊರಕುವ ಮರಳು ಬಳಕೆಗೆ ಯೋಗ್ಯವಲ್ಲ. ಕೇವಲ ಕೆಲವು ಪ್ರದೇಶಗಳ ಮರಳು ಮಾತ್ರವೇ ಬಳಕೆಗೆ ಯೋಗ್ಯವಾಗಿದೆ. ಇದರಿಂದಾಗಿ ಸೌದಿ ಅರೇಬಿಯಾ ಬೇರೆಡೆಯಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ವಿಷನ್‌ 2030 ಯೋಜನೆ ಘೋಷಣೆಯಾದ ಬಳಿಕ ಸೌದಿಯಲ್ಲಿ ಮರಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ದೊಡ್ಡ ಮಟ್ಟದ ನಿರ್ಮಾಣ ಕಾರ್ಯಗಳಿಗೆ ಮರಳಿನ ಅವಶ್ಯಕತೆಯಿದೆ. ಹೀಗಾಗಿ ಸೌದಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. 

    ಸೌದಿಯಲ್ಲಿ ಸಿಗುವ ಮರಳನ್ನು ಬಳಸದಿರಲು ಕಾರಣವೇನು?
    ಸೌದಿಯಲ್ಲಿ ಸಿಗುವ ಮರಳು ಗಾಳಿಯ ತೀವ್ರತೆಗೆ ಸವೆದು ಹೋಗಿರುತ್ತದೆ .ಮರುಭೂಮಿಯ ಮರಳು ಸಾಮಾನ್ಯವಾಗಿ ನಯವಾಗಿರುತ್ತದೆ ಮತ್ತು ದುಂಡಾಗಿರುತ್ತದೆ. ಏಕೆಂದರೆ ಗಾಳಿಯಿಂದ ಉಂಟಾಗುವ ಸವೆತದಿಂದಾಗಿ ಇದು ಸಿಮೆಂಟ್‌ನೊಂದಿಗೆ ಬಳಸಲು ಸೂಕ್ತವಲ್ಲ.ನಿರ್ಮಾಣದ ವೇಳೆ ನೀರು ಮತ್ತು ಸಿಮೆಂಟ್‌ನೊಂದಿಗೆ ಚೆನ್ನಾಗಿ ಬೆರೆಯುವಂತಹ ಒರಟಾದ ಮರಳನ್ನು ಬಳಸಲಾಗುತ್ತದೆ. ಈ ರೀತಿಯ ಮರಳು ಸಾಮಾನ್ಯವಾಗಿ ನದಿಪಾತ್ರಗಳು, ಸರೋವರಗಳು ಮತ್ತು ಸಮುದ್ರತಳಗಳಲ್ಲಿ ಕಂಡುಬರುತ್ತದೆ. 

    ಆದರೆ ಸೌದಿಯಲ್ಲಿ ದೊರಕುವ ಮರಳು ನಯವಾಗಿದ್ದು, ಸಿಮೆಂಟ್‌ನೊಂದಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲದೇ ಈ ಮರಳಿನಿಂದ ಕಟ್ಟಡ ನಿರ್ಮಿಸಿದರೆ ಗಟ್ಟಿಯಾಗಿ ಉಳಿಯುವುದಿಲ್ಲ.  ಸೌದಿ ಅರೇಬಿಯಾ ಜೊತೆಗೆ, ಯುಎಇ ಮತ್ತು ಕತಾರ್ ಕೂಡ ಇದೇ ಕಾರಣಕ್ಕಾಗಿ ಮರಳನ್ನು ಆಮದು ಮಾಡಿಕೊಳ್ಳುತ್ತವೆ. 

    ದುಬೈ ಮತ್ತು ಅಬುಧಾಬಿಯಂತಹ ನಗರಗಳು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿವೆ ಮತ್ತು ಅಲ್ಲಿ ನಿರ್ಮಿಸುವ ಎತ್ತರದ ಕಟ್ಟಡಗಳು ಮತ್ತು ಆಧುನಿಕ ಮೂಲಸೌಕರ್ಯಗಳಿಗೆ ಉತ್ತಮ ಗುಣಮಟ್ಟದ ಮರಳಿನ ಅಗತ್ಯವಿದೆ. ಗಲ್ಫ್ ರಾಷ್ಟ್ರಗಳ ತ್ವರಿತ ಬೆಳವಣಿಗೆಯು ಜಾಗತಿಕವಾಗಿ ಮರಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತಿದೆ ಎಂದು 2024ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವರದಿ ತಿಳಿಸಿದೆ.

    ಸದ್ಯ ಸೌದಿ ಅರೇಬಿಯಾ ದುಬಾರಿ ಬೆಲೆ ನೀಡಿ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಆಸ್ಟ್ರೇಲಿಯಾ ಮರಳು ರಫ್ತು ಮಾಡುತ್ತಿದೆ. ದೇಶವು 2023ರಲ್ಲಿ ಒಟ್ಟು 273 ಮಿಲಿಯನ್ ಡಾಲರ್ ಮೌಲ್ಯದ ಮರಳನ್ನು ರಫ್ತು ಮಾಡಿದೆ. ಇದು ಜಾಗತಿಕವಾಗಿ ಎರಡನೇ ಅತಿದೊಡ್ಡ ಮರಳಿನ ರಫ್ತುದಾರ ರಾಷ್ಟ್ರವಾಗಿದೆ. ‌

    ಹಾಗೆ ಸೌದಿ ಅರೇಬಿಯಾ ಆಸ್ಟ್ರೇಲಿಯಾದಿಂದ ಮಾತ್ರವೇ ಬರೋಬ್ಬರಿ 140,000 ಡಾಲರ್‌ ಮೌಲ್ಯದ ಮರಳನ್ನ ಒಂದೇ ವರ್ಷದಲ್ಲಿ ಆಮದು ಮಾಡಿಕೊಂಡಿದೆ.

    ನೈಸರ್ಗಿಕ ಮರಳಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳು M-ಸ್ಯಾಂಡ್‌ನಂತಹ ಪರ್ಯಾಯಗಳನ್ನು ಅನ್ವೇಷಿಸುತ್ತಿವೆ. ಇದನ್ನು ನಿರ್ಮಾಣದಲ್ಲಿ ಬಳಸಲು ಸೂಕ್ತವಾಗಿಸಲು ಬಂಡೆಗಳನ್ನು ಪುಡಿಮಾಡಿ ತಯಾರಿಸಲಾಗುತ್ತದೆ. 

    ಇನ್ನು ಸೌದಿಯಲ್ಲಿ ಮರಳು ಮಾತ್ರವಲ್ಲದೇ ಒಂಟೆಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಿಂದ ಸೌದಿ ಅರೇಬಿಯಾ ಭಾರೀ ಪ್ರಮಾಣದ ಒಂಟೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರೇಲಿಯಾದಲ್ಲಿ ಕಾಡು ಒಂಟೆಗಳ ದೊಡ್ಡ ಹಿಂಡುಗಳಿವೆ. ಅದು ಬಹಳ ತಳಿಗಳನ್ನು ಹೊಂದಿದೆ ಮತ್ತು ಸೌದಿ ಅರೇಬಿಯಾದಲ್ಲಿನ ಒಂಟೆಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಒಂಟೆಗಳು ಹೆಚ್ಚು ಆರೋಗ್ಯಕರವಾಗಿದ್ದು, ರೋಗ ನಿರೋಧಕಗಳನ್ನು ಹೊಂದಿದೆ. 

    ಸೌದಿ ಅರೇಬಿಯಾದಲ್ಲಿ ಒಂಟೆಗಳನ್ನು ಸಾಗಾಣಿಕೆ, ಆಹಾರ, ಮತ್ತು ಸೌಂದರ್ಯದ ಸಂಕೇತವಾಗಿ ಬಳಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿ ವಿಶೇಷ ಉತ್ಸವಗಳನ್ನು ನಡೆಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ ಕಿಂಗ್ ಅಬ್ದುಲಜೀಜ್ ಒಂಟೆ ಉತ್ಸವವನ್ನು ನಡೆಸಲಾಗುತ್ತದೆ. ಇದರಲ್ಲಿ ಒಂಟೆಗಳ ಸೌಂದರ್ಯ ಮತ್ತು ಓಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಒಂಟೆ ಮಾಂಸ ಮತ್ತು ಹಾಲು ಸೌದಿ ಅರೇಬಿಯಾದಲ್ಲಿ ಜನಪ್ರಿಯ ಆಹಾರವಾಗಿದೆ. ಹೀಗಾಗಿ ಸೌದಿ ಒಂಟೆಗಳನ್ನು ಕೂಡ ಆಮದು ಮಾಡಿಕೊಳ್ಳುತ್ತದೆ.  

     

  • 20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ `ಸ್ಲೀಪಿಂಗ್ ಪ್ರಿನ್ಸ್’ ನಿಧನ

    20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ `ಸ್ಲೀಪಿಂಗ್ ಪ್ರಿನ್ಸ್’ ನಿಧನ

    ರಿಯಾದ್: 20 ವರ್ಷಗಳ ಕಾಲ ಕೋಮಾದಲ್ಲಿದ್ದ (Coma) ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ (Saudi Arabia) ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ (Prince Alwaleed Bin Khaled) ನಿಧನರಾಗಿದ್ದಾರೆ.

    ಶನಿವಾರ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಭಾನುವಾರ (ಇಂದು) ರಿಯಾದ್‌ನಲ್ಲಿ ನಡೆಯಲಿದೆ ಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ. 2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಅಪಘಾತವಾಗಿತ್ತು. ಅಂದಿನಿಂದ 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದರು. ಇದನ್ನೂ ಓದಿ: ವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು – ಹಲವರು ಮಿಸ್ಸಿಂಗ್‌

    ಅಬ್ದುಲಜೀಜ್ ಅವರು ಮಗನ ಮೇಲೆ ಹೊಂದಿದ್ದ ಕರುಣೆ ವಿಶ್ವದೆಲ್ಲೆಡೆ ಹಬ್ಬಿತ್ತು. ಅವನ ಸಾವು ಬದುಕು ದೇವರಿಚ್ಛೆ ಎಂದು ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

  • ಇಂದಿನಿಂದ 2 ದಿನ ಸೌದಿ ಅರೇಬಿಯಾ ಪ್ರವಾಸ – ಮೋದಿಗೆ ಸೌದಿ ಆಗಸದಲ್ಲಿ ಗೌರವ

    ಇಂದಿನಿಂದ 2 ದಿನ ಸೌದಿ ಅರೇಬಿಯಾ ಪ್ರವಾಸ – ಮೋದಿಗೆ ಸೌದಿ ಆಗಸದಲ್ಲಿ ಗೌರವ

    ರಿಯಾಧ್: ಸೌದಿ ಅರೇಬಿಯಾದ (Saudi Arabia) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಆಗಸದಲ್ಲಿ ಯುದ್ಧ ವಿಮಾನಗಳ (Fighter Planes) ಮೂಲಕ ಸ್ವಾಗತಕೋರಲಾಗಿದೆ.

    ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಸೌದಿಗೆ ತೆರಳಿದ್ದಾರೆ. ಈ ವೇಳೆ ಸೌದಿಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ರಾಯಲ್ ಸೌದಿ ವಾಯುಪಡೆಯ ಎಫ್-15 ವಿಮಾನಗಳು ಅವರ ವಿಮಾನವನ್ನು ಎಸ್ಕಾರ್ಟ್‌ ಮಾಡಿವೆ. ಇದನ್ನೂ ಓದಿ: 6 ವರ್ಷದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ

    ಸೌದಿ ಅರೇಬಿಯಾಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿಯವರು, ಭಾರತವು ಸೌದಿ ಅರೇಬಿಯಾದೊಂದಿಗಿನ ದೀರ್ಘ ಮತ್ತು ಐತಿಹಾಸಿಕ ಸಂಬಂಧಗಳನ್ನು ಬಹಳವಾಗಿ ಗೌರವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಸಂಬಂಧ ಬಲವಾಗಿದೆ. ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ.

    ಮೊದಲ ಬಾರಿಗೆ ಮೋದಿಯವರು ಸೌದಿಯ ಜೆದ್ದಾಗೆ ಭೇಟಿ ನೀಡಿದ್ದಾರೆ. 1982ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಜಿದ್ದಾಗೆ ಭೇಟಿ ನೀಡಿದ್ದರು. ಇನ್ನೂ 40 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಈ ನಗರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.

    ಮೋದಿ ಸೌದಿ ಭೇಟಿ ನಿರೀಕ್ಷೆಗಳೇನು?
    ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಮೋದಿಯವರ ಸಭೆಯಲ್ಲಿ ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಮತ್ತು ಸಂಪರ್ಕ ಉಪಕ್ರಮಗಳ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

    ಈ ಭೇಟಿಯ ಸಮಯದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

  • 6 ವರ್ಷದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ

    6 ವರ್ಷದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ

    ನವದೆಹಲಿ: 6 ವರ್ಷದ ಬಳಿಕ ನಾಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೌದಿ ಅರೇಬಿಯಾಕ್ಕೆ (Saudi Arabia) ಭೇಟಿ ನೀಡುತ್ತಿದ್ದು, 2 ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ.

    ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman Al Saud) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿದ್ದು, ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಭೇಟಿ ಇದಾಗಿದೆ.ಇದನ್ನೂ ಓದಿ: ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ಏ.22 ಹಾಗೂ 23ರಂದು ಎರಡು ದಿನಗಳ ಕಾಲ ಭೇಟಿ ನೀಡುತ್ತಿದ್ದು, ಇದಕ್ಕೂ ಮೊದಲು 2016 ಹಾಗೂ 2019ರಲ್ಲಿ 2 ಬಾರಿ ಸೌದಿ ಅರೇಬಿಯಾಗೆ ಭೇಟಿ ನೀಡಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಲು ಸೌದಿ ಅರೇಬಿಯಾ ಪ್ರಧಾನಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ನವದೆಹಲಿಗೆ ಭೇಟಿ ನೀಡಿದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾಗೆ ಭೇಟಿ ನೀಡಲಿದ್ದಾರೆ.

    ಸದ್ಯ ಈ ಭೇಟಿಯಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಜೊತೆಗೆ ರಾಜಕೀಯ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ವಿವಿಧ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ದ್ವಿಪಕ್ಷೀಯ ಮಾತುಕತೆ ಬಳಿಕ ಇಂಧನ, ರಕ್ಷಣೆ ಮತ್ತು ವ್ಯಾಪಾರದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಜೊತೆಗೆ ಸೌದಿಯ ರಾಜಧಾನಿ ರಿಯಾದ್‌ನ 100 ಬಿಲಿಯನ್ ಡಾಲರ್ ಹೂಡಿಕೆ ಯೋಜನೆಯನ್ನು ಭಾರತಕ್ಕಾಗಿ ತ್ವರಿತಗೊಳಿಸುವ ಸಾಧ್ಯತೆಯಿದೆ. ಬಳಿಕ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

    ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ಮೋದಿ-ಸಲ್ಮಾನ್ ದ್ವಿಪಕ್ಷೀಯ ಮಾತುಕತೆಯ ನಂತರ ಹಸಿರು ಹೈಡ್ರೋಜನ್ ಸೇರಿ ಹಲವು ಒಪ್ಪಂದಗಳಿಗೆ ಎರಡೂ ಕಡೆಯವರು ಸಹಿ ಹಾಕುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು.

    ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ.ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅಂತ್ಯಕ್ರಿಯೆ

  • ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌ – ʻಗ್ರ್ಯಾಂಡ್ ಸ್ಲಾಮ್‌ʼ ಕ್ರಿಕೆಟ್‌ಗೆ 4,347 ಕೋಟಿ ಹೂಡಿಕೆಗೆ ಚಿಂತನೆ

    ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌ – ʻಗ್ರ್ಯಾಂಡ್ ಸ್ಲಾಮ್‌ʼ ಕ್ರಿಕೆಟ್‌ಗೆ 4,347 ಕೋಟಿ ಹೂಡಿಕೆಗೆ ಚಿಂತನೆ

    ದುಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಪ್ಲ್ಯಾನ್‌ ಮಾಡಿದೆ. 500 ಮಿಲಿಯನ್‌ ಡಾಲರ್‌ (ಸುಮಾರು 4,347 ಕೋಟಿ ರೂಪಾಯಿ) ಹೂಡಿಕೆ ಮಾಡಿ ಟಿ20 ಕ್ರಿಕೆಟ್‌ (Grand Slam Cricket) ಲೀಗ್‌ವೊಂದನ್ನ ಆರಂಭಿಸಲು ಚಿಂತನೆ ನಡೆಸಿದೆ.

    8 ತಂಡಗಳ ಟೆನ್ನಿಸ್‌ ಗ್ರ್ಯಾಂಡ್‌ಸ್ಲ್ಯಾಮ್‌ ಮಾದರಿಯಲ್ಲೇ ಕ್ರಿಕೆಟ್‌ ಲೀಗ್‌ ನಡೆಸಲು ಉದ್ದೇಶಿಸಿದೆ. ಈ ವ್ಯವಸ್ಥೆಯಲ್ಲಿ ತಂಡಗಳು ಒಂದು ವರ್ಷದಲ್ಲಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಒಟ್ಟು ಸೇರುತ್ತವೆ. ಎ-ಲೀಗ್‌ನ ಮಾಜಿ ಸಿಇಒ ಡ್ಯಾನಿ ಟೌನ್‌ಸೆಂಡ್ ನೇತೃತ್ವದ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಲೀಗ್‌ನ ಪೋಷಕನಾಗಲಿದೆ ಎಂದು ವರದಿಗಳು ತಿಳಿಸಿವೆ.

    ಕಳೆದ ಒಂದು ವರ್ಷದಿಂದಲೂ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನಡುವೆ ಈ ಟಿ20 ಲೀಗ್‌ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಟೂರ್ನಿ ಆಯೋಜಿಸುವ ಕುರಿತು ಒಂದು ವರ್ಷದಿಂದಲೂ ರಹಸ್ಯ ಮಾತುಕತೆ ನಡೆಯುತ್ತಿದೆ. ಈ ಪರಿಕಲ್ಪನೆಯ ಹಿಂದಿರುವ ಪ್ರಮುಖ ವ್ಯಕ್ತಿ ಆಸ್ಟ್ರೇಲಿಯಾದ ಎನ್‌ಎಸ್‌ಡಬ್ಲ್ಯು ಮತ್ತು ವಿಕ್ಟೋರಿಯ ತಂಡಗಳ ಮಾಜಿ ಆಲ್‌ರೌಂಡರ್ ನೀಲ್ ಮ್ಯಾಕ್ಸ್‌ವೆಲ್ ಎನ್ನಲಾಗಿದೆ. ಇದನ್ನೂ ಓದಿ: ಭಾರತದ ಟೆಸ್ಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ರೋಹಿತ್ ಶರ್ಮಾ – ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನಾಯಕತ್ವಕ್ಕೆ ಬೂಸ್ಟ್!

    ಈ ಯೋಜನೆಯ ಮುಖ್ಯ ಉದ್ದೇಶ ಕ್ರಿಕೆಟ್‌ನ ‘ಅತ್ಯಂತ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ದೈತ್ಯ ತಂಡಗಳನ್ನು ಮೀರಿ ಕ್ರಿಕೆಟ್‌ ಉಳಿಸುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 | ಶ್ರೀಮಂತ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿದ ವೀರರು ಇವರೇ…

  • ಹಾಲಿವುಡ್ ಸಿನೆಮಾದಲ್ಲಿ ಸಲ್ಮಾನ್ ಖಾನ್ ಆಟೋ ಡ್ರೈವರ್‌? – ಸೌದಿ ಅರೇಬಿಯಾದ ಶೂಟಿಂಗ್ ವಿಡಿಯೋ ಲೀಕ್!

    ಹಾಲಿವುಡ್ ಸಿನೆಮಾದಲ್ಲಿ ಸಲ್ಮಾನ್ ಖಾನ್ ಆಟೋ ಡ್ರೈವರ್‌? – ಸೌದಿ ಅರೇಬಿಯಾದ ಶೂಟಿಂಗ್ ವಿಡಿಯೋ ಲೀಕ್!

    2021ರ ಅರ್ಜೆಂಟೈನಾದ (Argentina) ಸೆವೆನ್ ಡಾಗ್ಸ್ ಸಿನೆಮಾದ ರಿಮೇಕ್ (Remake) ಸೌದಿ ಅರೇಬಿಯಾದಲ್ಲಿ ನಡೆಯುತ್ತಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಸಲ್ಮಾನ್ ಖಾನ್ ಫಸ್ಟ್ ಲುಕ್ ಆನ್‌ಲೈನ್‌ನಲ್ಲಿ ವೈರಲ್ ಆಗ್ತಿದ್ದಂತೆ, ಆಟೋ ಡ್ರೈವರ್ ವೇಷ ಧರಿಸಿರುವ ಹಲವಾರು ವಿಡಿಯೊಗಳು ವೈರಲ್ ಆಗುತ್ತಿವೆ. ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಸ್ನೇಹಿತ ಮತ್ತು ನಟ ಸಂಜಯ್ ದತ್ ಇದ್ದರು. ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನ – ಮುಂಬೈಗೆ 4 ವಿಕೆಟ್‌ಗಳ ರೋಚಕ ಜಯ

    ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಕಂದು ಬಣ್ಣದ ಶರ್ಟ್‌ನೊಂದಿಗೆ ಚೆಕ್ಸ್ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ, ಆಟೋ ರಿಕ್ಷಾದ ಮೇಲೆ ಪೋಸ್ ಕೊಟ್ಟಿದ್ದಾರೆ. ಸಂಜಯ್ ದತ್ ನೀಲಿ ಸೂಟ್ ಧರಿಸಿದ್ದಾರೆ. ಇದನ್ನೂ ಓದಿ: Champions Trophy: ರಿಯಾನ್ ರಿಕಲ್ಟನ್ ಶತಕ – ಅಫ್ಘಾನ್​ ವಿರುದ್ಧ ದ.ಆಫ್ರಿಕಾಗೆ 107 ರನ್‌ಗಳ ಭರ್ಜರಿ ಜಯ 

    ಇನ್ನೊಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಭಾರೀ ಭದ್ರತೆಯ ನಡುವೆ ಶೂಟಿಂಗ್ ಸ್ಥಳಕ್ಕೆ ಆಗಮಿಸುತ್ತಿರುವುದು ಸೆರೆಯಾಗಿದೆ. ದುಬೈನಲ್ಲಿ ನಿರ್ಮಿಸಲಾದ ಬೃಹತ್ ಸೆಟ್ ಮುಂಬೈನ ಧಾರಾವಿ ಸ್ಲಮ್‌ನ್ನು ಹೋಲುವಂತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಟಲ್‌ಜೀ ಸಂಘಟನೆ, ಹೋರಾಟವು ಕಾರ್ಯಕರ್ತರಿಗೆ ಪ್ರೇರಣಾಶಕ್ತಿ: ಯಡಿಯೂರಪ್ಪ

    ಇದಕ್ಕೂ ಮೊದಲು ಇನ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ, ಸೂಪರ್‌ಸ್ಟಾರ್ ಮತ್ತು ರಷ್ಯಾದ ಮಾಜಿ ಮಿಶ್ರ ಕಲಾವಿದ ಖಬೀಬ್ ನೂರ್ಮಗೊಮೆಡೋವ್ ಅವರೊಂದಿಗಿನ ಫೋಟೋಗಳನ್ನು ʻಎರಡು ಲೆಜೆಂಡ್‌ಗಳು ಒಂದೇ ಫ್ರೇಮ್‌ನಲ್ಲಿ’ ಎಂದು ಬರೆದುಕೊಂಡು ಹಂಚಿಕೊಂಡಿದ್ದರು. ಇದನ್ನೂ ಓದಿ: 43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

     

    View this post on Instagram

     

    A post shared by shera (@beingshera)

    ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರವನ್ನು ಗೌಪ್ಯವಾಗಿಡಲಾಗಿತ್ತು, ಆದರೂ ವೈರಲ್ ಆಗಿರುವ ವಿಡಿಯೋಗಳ ಮೂಲಕ ರಿವೀಲ್ ಆಗಿದೆ. ಈ ಮೂಲಕ ಬಾಲಿವುಡ್‌ನಿಂದ ಹಾಲಿವುಡ್‌ಗೆ ಕಾಲಿಟ್ಟ ಭಾರತೀಯ ನಟರ ಸಾಲಿಗೆ ಸಲ್ಮಾನ್ ಖಾನ್ ಸಹ ಸೇರಿದ್ದಾರೆ. ಇದನ್ನೂ ಓದಿ: ಟೋಲ್ ಗೇಟ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ವಾಹನ ಚಾಲಕ ಎಸ್ಕೇಪ್

  • 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    2025ರಲ್ಲಿ ಹಜ್‌ (Hajj) ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ (Saudi Arabia) ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಅಲ್ಲದೇ ವೀಸಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೂಡ ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿದೆ. ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳ ಮೇಲೆ ನಿಷೇಧವೇಕೆ? ವೀಸಾಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಹಜ್‌ ಯಾತ್ರೆಯಲ್ಲಿ ಮಕ್ಕಳಿಗೆ ನಿಷೇಧವೇಕೆ?
    2025ರ ಜೂನ್‌ನಲ್ಲಿ ಪ್ರಾರಂಭವಾಗುವ ಹಜ್‌ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾ ಸರ್ಕಾರ ಈ ಬಾರಿ ಮಕ್ಕಳನ್ನು ಹಜ್‌ ಯಾತ್ರೆಗೆ ಅನುಮತಿಸುವುದಿಲ್ಲ ಎಂದು ಹೇಳಿದೆ. ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಜ್‌ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

    ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.

    ಇದರೊಂದಿಗೆ, 2025ರ ಹಜ್ ಯಾತ್ರೆ ಕೈಗೊಳ್ಳಲು ಮೊದಲ ಬಾರಿಯ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಮುಸ್ಲಿಮರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಯಾತ್ರೆಯ ಅವಕಾಶ ಮಾಡಿಕೊಡಲು ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.

    ಹಜ್‌ ಯಾತ್ರೆಗೆ ನೋಂದಣಿ ಹೇಗೆ?
    ಈ ವರ್ಷದ ಹಜ್ ನೋಂದಣಿ ಆರಂಭವಾಗಿದೆ. ಸೌದಿ ಪ್ರಜೆಗಳು ಮತ್ತು ವಿದೇಶಿ ನಿವಾಸಿಗಳಿಗೆ ನೋಂದಣಿ ಆರಂಭವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ‘ನುಸ್ಕ್’ ಆ್ಯಪ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.

    ಹಜ್‌ಗೆ ಹೋಗಲು ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಯಲ್ಲಿ ಹೋಗುವವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅರ್ಜಿ ಸ್ವೀಕರಿಸಿದ ನಂತರ, ಪ್ಯಾಕೇಜ್‌ಗಳು ಲಭ್ಯವಾದಾಗ ಬುಕ್ ಮಾಡಲು ಬಯಸುವವರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆ ಹಜ್ ಮಾಡದವರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

    ಕಠಿಣ ವೀಸಾ ನಿಯಮ:
    ಹಜ್ ಯಾತ್ರೆಯಲ್ಲಿ ಅನಧಿಕೃತ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸೌದಿ ಅರೇಬಿಯಾ ತನ್ನ ವೀಸಾ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕುಟುಂಬ ಭೇಟಿಗಳಿಗಾಗಿ ಒಂದು ವರ್ಷದ ಬಹು-ಪ್ರವೇಶ ವೀಸಾಗಳನ್ನು ಸರ್ಕಾರ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ.

    ಫೆಬ್ರವರಿ 1, 2025ರಿಂದ ಭಾರತ ಸೇರಿದಂತೆ 14 ದೇಶಗಳ ನಿವಾಸಿಗಳು ಮಾತ್ರ ಏಕಪ್ರವೇಶ ವೀಸಾ (Single Entry Visa) ಗಳಿಗೆ ಅರ್ಹರಾಗಲಿದ್ದಾರೆ. ಈ ನಡೆಯು ಬಹುಪ್ರವೇಶ ವೀಸಾಗಳ ದುರ್ಬಳಕೆಯನ್ನು ಮಟ್ಟ ಹಾಕುವ ಉದ್ದೇಶ ಹೊಂದಿದ್ದು, ಕೆಲವು ಪ್ರವಾಸಿಗರು ಅಧಿಕೃತ ನೋಂದಣಿ ಇಲ್ಲದೆ ಹಜ್ ನಲ್ಲಿ ಭಾಗವಹಿಸುತ್ತಿರುವುದಿಂದ ಈ ನೀತಿಯನ್ನು ಜಾರಿಗೊಳಿಸಲಾಗಿದೆ.

    ಫೆಬ್ರವರಿ 1ರಿಂದ ಈ ನಿಯಮಗಳು ಅನ್ವಯವಾಗಿದೆ. ಭಾರತ ಸೇರಿದಂತೆ 14 ದೇಶಗಳ ವ್ಯಕ್ತಿಗಳು 30 ದಿನಗಳವರೆಗೆ ಮಾನ್ಯವಾಗಿರುವ ಏಕ-ಪ್ರವೇಶ ವೀಸಾಗಳಿಗೆ ಮಾತ್ರ ಅರ್ಹರಾಗಿರುತ್ತಾರೆ. ಈ ನಿಯಮಗಳು ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳಿಂದ ಭೇಟಿ ನೀಡುವ ಜನರಿಗೆ ಅನ್ವಯಿಸುತ್ತದೆ.

    ಈ ಹಿಂದೆ ಸೌದಿ ಅರೇಬಿಯಾಕ್ಕೆ ಬಹು-ಪ್ರವೇಶ ವೀಸಾಗಳನ್ನು ಹೊಂದಿರುವ ಅನೇಕ ಜನರು ನೋಂದಣಿ ಇಲ್ಲದೇ ಹಜ್‌ನಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಜನದಟ್ಟಣೆ ಉಂಟಾಗಿತ್ತು. 2022ರಲ್ಲಿ ಸುಮಾರು 2.5 ಮಿಲಿಯನ್ ಭಾರತೀಯರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.

    2024ರಲ್ಲಿ, 1,200ಕ್ಕೂ ಹೆಚ್ಚು ಯಾತ್ರಿಕರು ತೀವ್ರ ಶಾಖ ಮತ್ತು ಜನದಟ್ಟಣೆಯಿಂದ ಸಾವನ್ನಪ್ಪಿದ್ದರು. ಯಾವುದೇ ನೋಂದಣಿಯಿಲ್ಲದೇ ಅನಧಿಕೃತವಾಗಿ ಹಜ್‌ ಯಾತ್ರೆಗೆ ಆಗಮಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2024ರಲ್ಲಿ 18.3 ಕೋಟಿಗೂ ಹೆಚ್ಚು ಮುಸ್ಲಿಮರು ಹಜ್ ಯಾತ್ರೆ ಮಾಡಿದ್ದಾರೆ. ಈ ಪೈಕಿ 22 ದೇಶಗಳಿಂದ 16 ಕೋಟಿಗೂ ಹೆಚ್ಚು ಜನರು ಆಗಮಿಸಿದ್ದರು. ಸುಮಾರು 2,22,000 ಸೌದಿ ನಾಗರಿಕರು ಮತ್ತು ನಿವಾಸಿಗಳು ಹಜ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ಸೌದಿ ಹಜ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, 2015ರಲ್ಲಿ, ಹಜ್ ಸಮಯದಲ್ಲಿ ಮಿನಾದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 2,400ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದರು. ಹಜ್ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ ಇದಾಗಿದೆ. ಇದಕ್ಕೂ ಮೊದಲು 1990ರಲ್ಲಿ ನಡೆದ ಕಾಲ್ತುಳಿತದಲ್ಲಿ 1,426 ಮಂದಿ ಮೃತಪಟ್ಟಿದ್ದರು.