Tag: satyaraj

  • ಡಾಲಿ ಧನಂಜಯ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಡಾಲಿ ಧನಂಜಯ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಡಾಲಿ ಧನಂಜಯ್ (Dhananjay) ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ‘ಜೀಬ್ರಾ’ (Zebra) ಎಂಬ ಹೆಸರನ್ನು ಇಡಲಾಗಿದೆ. ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

    ‘ಜೀಬ್ರಾ’ ಚಿತ್ರತಂಡಕ್ಕೆ ಇದೀಗ ‘ಕೆಜಿಎಫ್ 1 ಮತ್ತು 2’ ಮುಂತಾದ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ ‘ಭೋಲಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು, ಇದೀಗ ಜೀಬ್ರಾ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.

    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ಚಿತ್ರತಂಡಕ್ಕೆ  ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, ‘ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದು ಹೇಳಿದ್ದಾರೆ. ‘ಜೀಬ್ರಾ’ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ (Satyadev) ಜೊತೆಗೆ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ಬೆಂಗಳೂರು: ಮಾಹಿಷ್ಮತಿ ಸಾಮ್ರಾಜ್ಯದ ರಾಜಮಾತಾ ಶಿವಗಾಮಿ ಮತ್ತು ಅಂಗರಕ್ಷಕ ಕಟ್ಟಪ್ಪ ನಡುವಿನ ರೊಮ್ಯಾಂಟಿಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು, ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾಕೃಷ್ಣ ಮತ್ತು ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಇಬ್ಬರೂ ಜಾಹೀರಾತಿನಲ್ಲಿ ಸತಿ-ಪತಿಗಳಾಗಿ ಕಾಣಿಸಿಕೊಂಡಿದ್ದರೆ. ದೃಶ್ಯದಲ್ಲಿ ಇವರಿಬ್ಬರ ಕೋಳಿ ಜಗಳ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ವೀಡಿಯೋ ವೈರಲ್ ಆಗಿದ್ದೇಕೆ?:
    ಇತ್ತೀಚಿಗೆ ತೆರೆಕಂಡ ಬಾಹುಬಲಿ-2 ಸಿನಿಮಾ ಪೌರಾಣಿಕ ಕಥೆಯುಳ್ಳ ಸಿನಿಮಾ. ಚಿತ್ರದಲ್ಲಿ ಕಾಸ್ಟ್ಯೂಮ್ ಎಲ್ಲವೂ ರಾಜಮನೆತನದ ಶೈಲಿಯಲ್ಲಿದೆ. ಅಂತೆಯೇ ಈ ಜಾಹೀರಾತಿನಲ್ಲಿ ರಮ್ಯಾಕೃಷ್ಣ ಮತ್ತು ಸತ್ಯರಾಜ್ ಪೌರಾಣಿಕ ಪಾತ್ರಧಾರಿಗಳ ಉಡುಗೆ-ತೊಡುಗೆ ಕೂಡ ರಾಜಶೈಲಿಯಲ್ಲಿದೆ. ಜಾಹೀರಾತು ಸೆಟ್‍ನ್ನು ಸಹ ಬಾಹುಬಲಿ ಸಿನಿಮಾದ ಸೆಟ್ ಹಾಗೆ ನಿರ್ಮಿಸಿದ್ದರಿಂದ ವೀಡಿಯೋ ವೈರಲ್ ಆಗಿದೆ.

    ಇದೊಂದು ಬಟ್ಟೆ ಜವಳಿ ಶೋರೂಂ ಒಂದರ ಜಾಹೀರಾತಾಗಿದ್ದು, ಕೋಪಗೊಂಡ ಪತ್ನಿಯನ್ನು ಮನವೊಲಿಸಲು ಪತಿ ಸೀರೆ ನೀಡಿ ಇಂಪ್ರೆಸ್ ಮಾಡುವ ವೀಡಿಯೋ ಇದಾಗಿದೆ.

    ಇದನ್ನೂ ಓದಿ: ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಇದನ್ನೂ ಓದಿ: ಒಂದು ಸಾವಿರ ಕೋಟಿ ಕ್ಲಬ್ ಸೇರಿದ ಬಾಹುಬಲಿ: ಯಾವ ದಿನ ಎಷ್ಟು ಕೋಟಿ ರೂ. ಕಲೆಕ್ಷನ್ ಆಗಿತ್ತು?

    https://www.youtube.com/watch?v=eowa5h4RqYY

  • ಸತ್ಯರಾಜ್ ಕೇಳಿದ್ದು ವಿಷಾದ, ಕ್ಷಮೆಯಲ್ಲ ಅನ್ನೋ ಮಂದಿಗೆ ವಾಟಾಳ್ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಸತ್ಯರಾಜ್ ಕೇಳಿದ್ದು ವಿಷಾದ, ಕ್ಷಮೆಯಲ್ಲ ಅನ್ನೋ ಮಂದಿಗೆ ವಾಟಾಳ್ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಬೆಂಗಳೂರು: ಕ್ಷಮಾಪಣೆ – ವಿಷಾದ ಎನ್ನುವ ಪದಗಳಲ್ಲಿ ವ್ಯತ್ಯಾಸ ಇರ್ಬೋದು. ಆದ್ರೆ ಒಂದು ತೀರ್ಮಾನಕ್ಕೆ ಬಂದು ಸಮಗ್ರ ಕನ್ನಡಿಗರ ಎದುರು ಕ್ಷಮೆಯನ್ನು ಕೇಳ್ತೀನಿ ಅಂತಾ ಆ ಮನುಷ್ಯ ವಿಷಾದ ಅಂತಾ ಮಾಡಿದ್ದಾರೆ. ಹೀಗಾಗಿ ಬಾಹುಬಲಿ ಚಿತ್ರ ರಿಲೀಸ್ ಆಗೋದನ್ನ ತಡೆಯೊಲ್ಲ ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ರೂಮಿನಲ್ಲಿ ಕೂತು ಹೇಳಿದ್ರು ಎಲ್ಲಾ ಮಾಧ್ಯಮಗಳಲ್ಲಿ ಸತ್ಯರಾಜ್ ವಿಷಾದಪಡಿಸಿದ್ದಾರೆ. ಕ್ಷಮಾಪಣೆ ಮತ್ತು ವಿಷಾದ ಅದರಲ್ಲಿ ಭಾರೀ ದೊಡ್ಡ ವ್ಯತ್ಯಾಸವೇನಿಲ್ಲ. 30 ವರ್ಷ ಶಾಸನ ಸಭೆಯಲ್ಲಿದ್ದೆ. ಅಲ್ಲಿ ಅನೇಕ ಬಾರಿ ವಿಷಾದ ವ್ಯಕ್ತಪಡಿಸಿದ್ದೇನೆ. ಹೀಗಾಗಿ ವಿಷಾದ ಅನ್ನೋದು ಸಂಸದೀಯ ಭಾಷೆಯಾಗಿದೆ. ಇದನ್ನ ಜಾಸ್ತಿ ಬೆಳೆಸಬಾರದು. ಹೀಗಾಗಿ ಬಾಹುಬಲಿ ಚಿತ್ರವನ್ನ ತಡೆಯೋದಿಲ್ಲ. ಚಿತ್ರ ಹೋಗುತ್ತೆ. ನೀವೂ ಸೇರಿದಂತೆ ಎಲ್ರೂ ಚಿತ್ರ ನೋಡ್ಬೋದು ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

    ನಾನು ಹೇಳಿದ್ದು ತಪ್ಪಾಗಿದ್ರೆ ವಿಷಾದಿಸುತ್ತೇನೆ ಅಂತಾ ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಹೀಗಾಗಿ ನಮ್ಮ ಒಕ್ಕೂಟ ಒಂದು ತೀರ್ಮಾನಕ್ಕೆ ಬಂದಿದೆ. ಇದನ್ನ ಇಲ್ಲಿಗೆ ಕೈ ಬಿಡುವುದು ಒಳ್ಳೆಯದು. ಜಾಸ್ತಿ ಬೆಳೆಸಿಕೊಂಡು ಹೋಗೋದಕ್ಕಿಂತ ನಮಗೆ ಬೇರೆ ಬೇಕಾದಷ್ಟು ಹೋರಾಟಗಳಿವೆ ಅಂತಾ ಹೇಳಿದ್ರು.

    ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಕಟ್ಟಪ್ಪ

    ಸತ್ಯರಾಜ್ ಗೆ ಹೇಳ್ತಾ ಇದ್ದೀನಿ,`ನಿಮ್ದು ಬಾಯಿ, ನಾಯಿ ಭದ್ರ ಇರ್ಬೇಕು. ಇನ್ನು ಮುಂದಕ್ಕೆ ಎಲ್ಲೇ ಮಾತನಾಡ್ವಾಗ್ಲೂ ಯೋಚನೆ ಮಾಡಿ ಮಾತನಾಡಿ. ಇಲ್ಲೆ ಮಾತನಾಡಿದ್ರೂ ನಾನು ತಮಿಳುನಾಡು ಪರ ಅಂತಾ ಹೇಳಿ ನಮ್ಮದೇನೂ ಅಭ್ಯಂತರವಿಲ್ಲ. ಆದ್ರೆ ಕನ್ನಡಿಗರ ಬಗ್ಗೆ ಏನಾದ್ರೂ ಬಾಯ್ಬಿಟ್ಟು ಚಕಾರ ಎತ್ತಿದ್ರೆ ಮುಂದೆ ನೀವು ಯಾವುದೇ ಚಿತ್ರದಲ್ಲಿ ಪಾತ್ರ ಮಾಡಿದ್ರೂ, ಕರ್ನಾಟಕದಲ್ಲಿ ಸಂಪೂರ್ಣವಾಗಿ ಅದರ ಬಿಡುಗಡೆಗೆ ಅವಕಾಶ ಕೊಡಲ್ಲ ಅಂತಾ ವಾಟಾಳ್ ಎಚ್ಚರಿಕೆ ನೀಡಿದರು.

    https://www.youtube.com/watch?v=W4pA8G9kRWQ

  • ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಚಿತ್ರದ ಮೇಲೆ ತೋರಿಸಬೇಡಿ: ಕನ್ನಡಿಗರಲ್ಲಿ ರಾಜಮೌಳಿ ಮನವಿ

    ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಚಿತ್ರದ ಮೇಲೆ ತೋರಿಸಬೇಡಿ: ಕನ್ನಡಿಗರಲ್ಲಿ ರಾಜಮೌಳಿ ಮನವಿ

    ಹೈದರಾಬಾದ್: ಸತ್ಯರಾಜ್ ಅವರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ಮೇಲಿನ ಸಿಟ್ಟನ್ನು ಬಾಹುಬಲಿ ಸಿನಿಮಾದ ಮೇಲೆ ತೋರಿಸುವುದು ಸರಿಯಲ್ಲ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಕರ್ನಾಟಕದ ಜನತೆಯಲ್ಲಿ ಕನ್ನಡದಲ್ಲಿ ಕೇಳಿಕೊಂಡಿದ್ದಾರೆ.

    ಬಾಹುಬಲಿ- ಬಿಡುಗಡೆಗೆ ಕನ್ನಡ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಸತ್ಯರಾಜ್ ಅವರು ಬಾಹುಬಲಿಯ ನಿರ್ದೇಶಕರು, ನಿರ್ಮಾಪಕರು ಅಲ್ಲ, ಅವರು ಒಬ್ಬರು ಕಲಾವಿದರು. ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ಈ ಹಿಂದೆ ಅವರು ಅಭಿನಯಿಸಿದ ಚಿತ್ರಗಳು ಬಿಡುಗಡೆಯಾಗಿದೆ. ಹೀಗಾಗಿ ಅವರ ಹೇಳಿಕೆಗೂ ಬಾಹುಬಲಿಗೂ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ ಎಂದು ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಬಾಹುಬಲಿ ಒಂದು ಬಿಡುಗಡೆಯಾದಾಗ ಹೇಗೆ ನಮ್ಮನ್ನು ಪ್ರೋತ್ಸಾಹಿಸಿದ್ದೀರೋ ಅದೇ ರೀತಿಯಾಗಿ ಈ ಬಾರಿಯೂ ನಮ್ಮನ್ನು ಪ್ರೋತ್ಸಾಹಿಸಿ. ಈ ವಿಚಾರದ ಬಗ್ಗೆ ನಾವು ಸತ್ಯರಾಜ್ ಅವರ ಬಳಿ ತಿಳಿಸಿದ್ದೇವೆ. ನಮಗೆ ಸಂಬಂಧ ಇಲ್ಲದ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ ಎಂದು ಅವರು ಕನ್ನಡಿಗರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    https://www.youtube.com/watch?v=6J4v5wDplP8

  • ಚಿತ್ರಮಂದಿರದಲ್ಲಿ ಬಾಹುಬಲಿ ಟ್ರೇಲರ್ ಬಿಡುಗಡೆ ಮಾಡದಂತೆ ಕರವೇ ಪ್ರತಿಭಟನೆ

    ಚಿತ್ರಮಂದಿರದಲ್ಲಿ ಬಾಹುಬಲಿ ಟ್ರೇಲರ್ ಬಿಡುಗಡೆ ಮಾಡದಂತೆ ಕರವೇ ಪ್ರತಿಭಟನೆ

    ಬಳ್ಳಾರಿ: ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಳ್ಳಾರಿ ನಗರದ ರಾಧಿಕಾ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು.

    ಇಂದು ರಾಧಿಕಾ ಚಿತ್ರಮಂದಿರದಲ್ಲಿ ಬಾಹುಬಲಿ-2ರ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ನಟ ಸತ್ಯರಾಜ್ ಕರ್ನಾಟಕದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಟ್ರೇಲರ್ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರತಿಭಟಿಸಿದರು.

    ಕರವೇ ಕಾರ್ಯಕರ್ತರು ಚಿತ್ರಮಂದಿರದ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕೆಲ ಕಾಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಪೊಲೀಸರ ಸೂಚನೆ ಮೇರೆಗೆ ಚಿತ್ರಮಂದಿರ ಮಾಲೀಕರು ಟ್ರೇಲರ್ ಬಿಡುಗಡೆ ಮುಂದೂಡಿಕೆ ಮಾಡಿದ್ದಾರೆ.

    ಇಂದು ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೇಲರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಇಂದು ಬೆಳಗ್ಗೆ ಬಿಡುಗಡೆಯಾದ ಕೇವಲ 5 ಗಂಟೆಯಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಸಿನಿಮಾ ಏಪ್ರಿಲ್ 28 ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ.

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ?… ಬಾಹುಬಲಿ ಟ್ರೇಲರ್ ನೋಡಿ…