Tag: satya

  • ‘ಸತ್ಯ’ ಕಿರುಚಿತ್ರದ ಟ್ರೈಲರ್ ರಿಲೀಸ್: ಇದು ಮರ್ಡರ್ ಮಿಸ್ಟ್ರಿ ಕತೆ

    ‘ಸತ್ಯ’ ಕಿರುಚಿತ್ರದ ಟ್ರೈಲರ್ ರಿಲೀಸ್: ಇದು ಮರ್ಡರ್ ಮಿಸ್ಟ್ರಿ ಕತೆ

    ಸಿನಿಮಾ ಮಾಡಬೇಕೆಂಬ ಆಸಕ್ತಿಯಿಂದ ಐಟಿ ಕಂಪನಿಯಲ್ಲಿ ಒಳ್ಳೇ ಉದ್ಯೋಗವಿದ್ದರೂ ಸಹ  ಚಿತ್ರರಂಗಕ್ಕೆ ಬಂದಿದ್ದಾರೆ ಆನಂದ್ ಅಹಿಪತಿ. ಸಿನಿಮಾ ಮಾಡುವುದಕ್ಕೂ  ಮುನ್ನ ಅದೇ ಕ್ವಾಲಿಟಿಯಲ್ಲಿ ಸತ್ಯ (Satya) ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡ  ಆ ಶಾರ್ಟ್ ಫಿಲಂನ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

    ಆನಂದ್ ಅಹಿಪತಿ  (Anand Ahipati) ಅವರೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಯಾವುದೇ ಚಿತ್ರಕ್ಕೂ  ಕಮ್ಮಿಯಿಲ್ಲದ ಹಾಗೆ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಆನಂದ್, 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ವರ್ಕ್ ಮಾಡ್ತಿದ್ದೆ.  ಆದರೆ ನನಗೆ ಇಂಟರೆಸ್ಟ್ ಇದ್ದದ್ದು ಆಕ್ಟಿಂಗ್ ನಲ್ಲಿ. ಅನುಪಂ ಖೇರ್ ಇನ್ ಸ್ಟಿಟ್ಯೂಟ್ ನಲ್ಲಿ ಕೋರ್ಸ್ ಮುಗಿಸಿ, ಈ ಶಾರ್ಟ್ ಫಿಲಂನಲ್ಲಿ ಅಭಿನಯಿಸಿದೆ. ಹಠ ಹಿಡಿದು 38 ನಿಮಿಷಗಳ ಈ ಚಿತ್ರ ನಿರ್ದೇಶನ‌ ಮಾಡಿದ್ದೇನೆ. ಇದು ಪ್ರೀಕ್ವೇಲ್ ಟು ಫ್ಯೂಚರ್ ಫಿಲಂ ಅನ್ನಬಹುದು, ಹಣದ ಬಗ್ಗೆ ಯೋಚಿಸದೆ ಕ್ವಾಲಿಟಿ ಹೆಚ್ಚು ಆದ್ಯತೆ ಕೊಟ್ಟು ಈ ಚಿತ್ರ ಮಾಡಿದ್ದೇನೆ ಅಂತಾರೆ.

    ಮುಂದುವರೆದು ಮಾತನಾಡಿದ ಆನಂದ, ಸತ್ಯ ಅಂದ್ರೆ ನಿಜ, ಈತ ಒಬ್ಬ ಸೈಕೋ ಕಿಲ್ಲರ್, ಆತನ ಮನದಲ್ಲಿ  ಏನೇನು ನಡೀತಿದೆ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್. ಆತ ಏನೇನು ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅಂತ ಈ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೇವರೆಗೆ ನೋಡಿದಾಗ ಅದು ಅರ್ಥವಾಗುತ್ತದೆ ಎಂದರು. ನಾಯಕಿ ಪಾತ್ರ ಮಾಡಿರುವ ಸೌಮ್ಯ ಮಾತನಾಡಿ ಈ ಸಿನಿಮಾ ಆನಂದ್ ರ ಕನಸು, ಇದೊಂದು ವಿಭಿನ್ನ ಜಾನರ್ ಸಿನಿಮಾ,  ನಾನೊಬ್ಬ ಕಲಾವಿದೆಯಾಗೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ  ಎಂದರು.

     

    ದುರ್ಗಾ ಸಿನಿಮಾಸ್ ಮೂಲಕ ನಿರ್ದೇಶಕ ಆನಂದ್ ಅಹಿಪತಿ  ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಅಜಯ್  ಶಿವರಾಜ್ ಸಂಗೀತ ನಿರ್ದೆಶನ ಮಾಡಿದ್ದಾರೆ. ಕಾರ್ತೀಕ್  ಸಿದ್ದರಾಜು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

  • ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯರ ಹೊಸ ಚಿತ್ರದ ಅಪ್ ಡೇಟ್

    ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯರ ಹೊಸ ಚಿತ್ರದ ಅಪ್ ಡೇಟ್

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮಾ ರಾಮಾ ರೇ ಖ್ಯಾತಿಯ ಸತ್ಯ (Satya) ಇದೀಗ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಪಾತ್ರವೊಂದನ್ನೂ ನಿರ್ವಹಿಸಿದ್ದಾರೆ. ಸತ್ಯ ಪಿಕ್ಚರ್ಸ್ ಗೂಡಿನಿಂದ ಈ ಹೊಸ ಸಿನಿಮಾ ಬರುತ್ತಿದ್ದು, ಚಿತ್ರಕ್ಕೆ X&Y ಎಂದು ಹೆಸರಿಟ್ಟಿದ್ದಾರೆ.

    ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ. ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ಸತ್ಯ.

    ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ.  ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ.

     

    ಇದು ಈ ಸಂಸ್ಥೆಯ ನಾಲ್ಕನೇ ಸಿನಿಮಾ. ಈ ಹಿಂದಿನ ಮೂರು ಚಿತ್ರಗಳಿಗೆ ನೀವು ತೋರಿದ ಪ್ರೀತಿ, ತಪ್ಪುಮಾಡಿದಾಗ ನೀವು ತಿದ್ದಿದ ರೀತಿ, ಈ ಸಿನಿಮಾದಲ್ಲೂ ಬೇಕೇ ಬೇಕೆಂಬ ಬೇಡಿಕೆ ನಮ್ಮದು. ಮೊದಲ ಪೋಸ್ಟರನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ನಿಮ್ಮ ಅನಿಸಿಕೆಗಾಗಿ ಎದುರುನೋಡುತ್ತಿದ್ದೇನೆ ಎಂದು ಸತ್ಯ ಕೇಳಿಕೊಂಡಿದ್ದಾರೆ.

  • ‘ಮೆಲೋಡಿ ಡ್ರಾಮಾ’ಗಾಗಿ ಒಂದಾದ ಸೋನು ನಿಗಮ್, ಕೈಲಾಶ್ ಖೇರ್

    ‘ಮೆಲೋಡಿ ಡ್ರಾಮಾ’ಗಾಗಿ ಒಂದಾದ ಸೋನು ನಿಗಮ್, ಕೈಲಾಶ್ ಖೇರ್

    ಮಾರ್ಚ್ ಆರಂಭವಾಯಿತೆಂದರೆ ಬೇಸಿಗೆಯೂ ಆರಂಭವಾಯಿತು ಅಂತ..ಅದರಲ್ಲೂ ಏಪ್ರಿಲ್ ನಲ್ಲಿ ಬಿಸಿಲಿನದೇ ಆರ್ಭಟ.‌ ಈ ಬಾರಿ ಬಿರು ಬೇಸಿಗೆಗೆ ತಂಪೆರೆಯಲು ಸುಂದರ ‘ಮೆಲೋಡಿ ಡ್ರಾಮಾ’ ಬರಲಿದೆ. ಅಂದರೆ “ನಿನ್ನ ಕಥೆ ನನ್ನ ಜೊತೆ” ಎಂಬ ಅಡಿಬರಹ ಹೊಂದಿರುವ ‘ಮೆಲೋಡಿ ಡ್ರಾಮಾ. ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಪ್ರೈಮ್ ಸ್ಟಾರ್ ಸ್ಟುಡಿಯೊ ನಿರ್ಮಿಸಿರುವ ‘ಮೆಲೋಡಿ ಡ್ರಾಮಾ, ಚಿತ್ರ, ಪ್ರೀತಿ ಒಂದು ಸುಂದರ ಅನುಭವ, ನಂಬಿಕೆ. ಅದರ ಆಧಾರ ಇವೆರಡರ ನಡುವಿನ ಪಯಣದಲ್ಲಿ ಭಾವ ಭಾವನೆಗಳ ತೊಡಲಾಟವನ್ನು ವ್ಯಕ್ತ ಪಡಿಸುವ ಒಂದು ಸುಂದರಮಯ ಚಿತ್ರವಾಗಿದೆ.

    ಕನ್ನಡದ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿರುವ ಕಿರಣ್ ರವೀಂದ್ರನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಎಂಟು ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಸೋನು ನಿಗಮ್, ಕೈಲಾಶ್ ಖೇರ್ ಹಾಗೂ ಪಲಾಕ್ ಮುಚ್ಚಲ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.ಜಯಂತ್ ಕಾಯ್ಕಿಣಿ ,  ನಾಗೇಂದ್ರ ಪ್ರಸಾದ್, ಹೃದಯ ಶಿವ, ಧನಂಜಯ್ ರಂಜನ್ ಗೀತರಚನೆ ಮಾಡಿದ್ದಾರೆ.

    ‘ದ್ಪಿಪಾತ್ರ’ ಚಿತ್ರದ ಮೂಲಕ ನಾಯಕನ ಪಾತ್ರ ಆರಂಭಿಸಿದ    ಸತ್ಯ ಈ ಚಿತ್ರದ ನಾಯಕ. ಜನಪ್ರಿಯ ಧಾರಾವಾಹಿಗಳಲ್ಲಿ, “ಲಾಂಗ್ ಡ್ರೈವ್” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ  ಸುಪ್ರಿತಾ ಸತ್ಯನಾರಾಯಣ “ಮೊಲೋಡಿ ಡ್ರಾಮಾ” ಚಿತ್ರದ ನಾಯಕಿ. ಖ್ಯಾತ ನಟ ಚೇತನ್ ಚಂದ್ರ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಇನ್ನು ರಂಗಾಯಣ ರಘು, ಅನುಪ್ರಭಾಕರ್, ರಾಜೇಶ್ ನಂಟರಂಗ, ಬಲ ರಾಜವಾಡಿ, ಲಕ್ಷ್ಮಿ ಸಿದ್ದಯ್ಯ, ಅಶ್ವಿನ್ ರಾವ್ ಪಲ್ಲಕ್ಕಿ, ಅಶ್ವಿನ್ ಹಾಸನ್, ರಂಜನ್ ಸನತ್, ಬಿಗ್ ಬಾಸ್ ವಿನೋದ್ ಗೊಬ್ಬರ,  ಮುಂತಾದವರು ತಾರಾಬಳಗದಲ್ಲಿದ್ದಾರೆ.  ಇದನ್ನೂ ಓದಿ:ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ

    ಹದಿನೈದು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ, ಪಿ.ಎನ್ ಸತ್ಯ ಸೇರಿದಂತೆ ಕೆಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಮಂಜುಕಾರ್ತಿಕ್ ಜಿ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಶಿವಮೊಗ್ಗ, ಮಂಗಳೂರು, ಕುಂದಾಪುರ ಹಾಗೂ ವಿಜಯಪುರದ ರಮಣೀಯ ಸ್ಥಳಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮನು DB ಹಳ್ಳಿ ಛಾಯಾಗ್ರಹಣ ಹಾಗೂ ಮುನಿರಾಜ್ ಅವರ ಸಂಕಲನವಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಿದ್ದು, ಸದ್ಯದಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.

    ನಿರ್ಮಾಪಕರಾದ M ನಂಜುಂಡ ರೆಡ್ಡಿ (ನಡುವಲಮನೆ) ಚಿತ್ರಕ್ಕೆ ಯಾವುದೇ ರೀತಿಯ ಕೊರತೆ ಬಾರದಂತೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ,  ಚಿತ್ರಕ್ಕೆ ಮೇಲ್ವಿಚಾರಣೆ ಜೈಪ್ರಸಾದ್ ಕಲ್ಯಾಣಿ (ಜಗಳೂರು) ನಿರ್ವಹಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಈ ಚಿತ್ರ ಪ್ರೇಕ್ಷಕನಿಗೆ ಹೊಸ ಅನುಭವಗಳನ್ನು ನೀಡುವುದಲ್ಲದೆ ಹಳೆಯ ನೆನಪುಗಳನ್ನು ನೆನಪು ಹಾಕುವ ಹೊಸ ಭಾವವನ್ನು ನೀಡುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಜನಪ್ರಿಯತೆಯಲ್ಲೂ ಮುಂದಿದೆ. ಸತ್ಯಳ ಧೈರ್ಯ, ಅವಳ ಸಾಹಸಗಾಥೆ, ಹೇರ್ ಸ್ಟೈಲ್, ಅವಳ ಮ್ಯಾನರಿಸಂ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರು ಸತ್ಯಳನ್ನು ಅನುಕರಿಸುತ್ತಾರೆ. ಆದರೆ, ಇದೇ ಸತ್ಯ  ಇದೀಗ ತಮಿಳಿನ ಖ್ಯಾತ ನಟಿ ನಯನತಾರಾ ಅವರನ್ನು ಫಾಲೋ ಮಾಡಿದ್ದಾರೆ. ಗೌತಮಿಯ ಫೆವರೇಟ್ ನಟಿ ನಯನತಾರಾ ಆಗಿರುವುದರಿಂದ ಅದೇ ರೀತಿಯಲ್ಲಿ ಫೋಟೋ ಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ.

    ನಯನತಾರಾ ಮದುವೆಯಲ್ಲಿ ವಿಶೇಷ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿದ್ದರು. ಮದುವೆಯಲ್ಲಿ ತೊಟ್ಟಿದ್ದ ಕೆಂಪು ಸೀರೆಗೆ ಅನೇಕರು ಫಿದಾ ಆಗಿದ್ದರು. ಆ ಕಡು ಕೆಂಪು ಬಣ್ಣದ ಸೀರೆಯ ಜೊತೆಗೆ ಹಸಿರು ಬಣ್ಣದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದಿತ್ತು. ಆ ಸೀರೆಯ ಬೆಲೆ ಮತ್ತು ಜ್ಯುವೆಲರಿಯ ಡಿಸೈನ್ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಯ್ಸಳ ಕಾಲದ ಲುಕ್ ಹೊಂದಿದ್ದರಿಂದ ಇತಿಹಾಸವನ್ನೂ ಕೆದುಕುವ ಪ್ರಯತ್ನ ಮಾಡಲಾಗಿತ್ತು. ಅದೇ ಸೀರೆಗೆ ಗೌತಮಿ ಫಿದಾ ಆಗಿದ್ದಾರೆ. ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಗೌತಮಿ ಕೂಡ ಕಡು ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಜ್ಯುವೆಲರ್ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಖತ್ ವೈರಲ್ ಕೂಡ ಆಗಿದೆ. ಸತ್ಯಳನ್ನು ಫಾಲೋ ಮಾಡುತ್ತಿದ್ದವರು, ಸತ್ಯಳ ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಂಡು, ಇಬ್ಬರನ್ನೂ ಫಾಲೋ ಮಾಡುವುದಾಗಿ ಕೆಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ಬೆಂಗಳೂರು: ಸೀರಿಯಲ್ ಗಳಲ್ಲಿ ನಟಿಸುತ್ತಲೇ ಚಿತ್ರರಂಗಕ್ಕೆ ಬಂದು ದರ್ಶನ್ ರಂಥಾ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದವರು ರಚಿತಾ ರಾಮ್. ಆ ನಂತರದಲ್ಲಿ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರೋ ರಚಿತಾ ಈ ಕ್ಷಣದಲ್ಲಿಯೂ ಸೀತಾರಾಮ ಕಲ್ಯಾಣ, ಅಯೋಗ್ಯ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರೆ.

    ಈ ವಿಚಾರವನ್ನು ಖುಷಿಯಿಂದಲೇ ರಚಿತಾ ಹೇಳಿಕೊಂಡಿದ್ದಾರೆ. ಇದು 8 ಎಂಎಂ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಸತ್ಯ ನಿರ್ದೇಶನದ ಎರಡನೇ ಚಿತ್ರ. ಒಂದು ಹೆಣ್ಣಿನ ಸುತ್ತಾ ನಡೆಯೋ ಥ್ರಿಲ್ಲರ್ ಕತೆ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಕೇಂದ್ರ ಬಿಂದುವಾಗಿ ನಟಿಸಲಿದ್ದಾರೆ. ಇದುವರೆಗಿನ ಪಾತ್ರಗಳಿಗಿಂತಲೂ ಚಾಲೆಂಜಿಂಗ್ ಆಗಿರೋ ಈ ಪಾತ್ರವನ್ನು ಬಹಳಷ್ಟು ಇಷ್ಟಪಟ್ಟೇ ಅವರು ಒಪ್ಪಿಕೊಂಡಿದ್ದಾರಂತೆ.

    ಈ ಚಿತ್ರಕ್ಕೆ ಏಪ್ರಿಲ್ ಎಂಬ ಹೆಸರಿಡಲಾಗಿದೆಯಂತೆ. ಏಪ್ರಿಲ್ ತಿಂಗಳಿಗೂ ಈ ಚಿತ್ರಕ್ಕೂ ಏನಾದರೂ ಲಿಂಕಿದೆಯಾ ಅಂತ ನೋಡ ಹೋದರೆ, ಈ ಚಿತ್ರದಲ್ಲಿ ರಚಿತಾ ನಟಿಸಲಿರೋ ಪಾತ್ರದ ಹೆಸರೇ ಏಪ್ರಿಲ್ ಡಿಸೋಜಾ ಎಂಬ ಕುತೂಹಲಕಾರಿ ವಿಚಾರವೂ ಬಯಲಾಗುತ್ತದೆ. ಇನ್ನು ವಸಂತ ಮಾಸದ ಎರಡನೇ ತಿಂಗಳಾದ ಏಪ್ರಿಲ್ ಗೆ ಋತುಮಾನದ ವಿಶೇಷ ಗುಣಗಳೂ ಇರೋದರಿಂದ ಅದನ್ನೇ ಈ ಚಿತ್ರದ ಶೀರ್ಷಿಕೆಯಾಗಿಸಲಾಗಿದೆಯಂತೆ.

    ಇದುವರೆಗೂ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾಗೆ ಈ ಚಿತ್ರ ಹೊಸ ಅನುಭವವಾಗಲಿದೆ. ಇಡೀ ಚಿತ್ರ ಇವರ ಪಾತ್ರದ ಸುತ್ತಲೇ ಸುತ್ತೋದರಿಂದ ಈ ಚಿತ್ರಕ್ಕೆ ರಚಿತಾ ಅವರೇ ಹೀರೋ ಕಮ್ ಹೀರೋಯಿನ್. ಈಗಾಲೇ ಬಿಡುಗಡೆಯಾಗಿರೋ ಫಸ್ಟ್ ಲುಕ್ಕಿನಲ್ಲಿ ರಚಿತಾ ಪಾತ್ರದ ತೂಕದ ಅಂದಾಜು ಸಿಕ್ಕಿದೆ.

  • ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ನಿರ್ದೇಶಕ, ನಟ ಪಿ.ಎನ್ ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಚಿಕಿತ್ಸೆ ಫಲಿಸದೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸುಮಾರು 7.30ಕ್ಕೆ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಸದ್ಯ ಬಸವೇಶ್ವರನಗರದ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ದರ್ಶನ್‍ಗೆ ನಾಯಕ ನಟ ಇಮೇಜ್ ತಂದು ಕೊಟ್ಟಿದ್ದೇ ಈ ಸತ್ಯ.

    ಈ ಬಗ್ಗೆ ದರ್ಶನ್ ಕಂಬನಿ ಮಿಡಿದಿದ್ದು, “ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ `ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು.