Tag: Saturn

  • ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ

    ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ

    ನವದೆಹಲಿ: ಶನಿ ಗ್ರಹ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ. ನಭೋಮಂಡಲದ ಈ ವಿದ್ಯಮಾನ ಕಾಣಲು ಖಗೋಳವಿಜ್ಞಾನಿಗಳು ಕಾತುರರಾಗಿದ್ದಾರೆ. ಆದ್ರೆ ಭಾರತದಲ್ಲಿ ಹಗಲು ಆಗಿದ್ದರಿಂದ ಇದರ ಗೋಚರ ಆಗಲ್ಲ.

    ಆಗಸ್ಟ್ 2ರ ಬೆಳಗ್ಗೆ 11.30ಕ್ಕೆ ಭೂಮಿ ಮತ್ತು ಶನಿ ಅತಿ ಸಮೀಪಕ್ಕೆ ಬರಲಿವೆ. ಈ ವಿದ್ಯಮಾನದಿಂದ ಪ್ರಕೃತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಂಭವಿಸಿಲ್ಲ. ಇದೊಂದು ಸೌರಮಂಡಲದ ಪ್ರಕ್ರಿಯೆ ಆಗಿರುತ್ತದೆ. ರಾತ್ರಿ ಆಗಿರುವ ದೇಶದ ಜನರು ಬರೀಗಣ್ಣಿನಿಂದ ನೋಡಬಹುದು ಎಂದು ಓಡಿಶಾ ತಾರಾಲಾಯದ ಉಪ ನಿರ್ದೇಶಕ ಪಠಾಣಿ ಸಾಮಂತ್ ಹೇಳಿದ್ದಾರೆ.

    ಆಕಾಶ ಮೋಡಗಳಿಂದ ಕೂಡಿದ್ದರೆ ಶನಿ ಗ್ರಹದ ಗೋಚರ ಆಗಲ್ಲ. ಈ ವಿದ್ಯಮಾನದ ಬಳಿಕ ಗುರು ಪ್ರಕಾಶಮಾನವಾಗಿ ಕಾಣಲಾರಂಭಿಸುತ್ತದೆ. ಶನಿಯ ಸ್ಥಾನವೂ ಗುರುವಿನ ಪಶ್ವಿಮಕ್ಕೆ ಇರಲಿದೆ. ಇದನ್ನೂ ಓದಿ: ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

  • ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    – ಗುರು ಜೊತೆ ಶನಿ ಬರೋದರಿಂದ ಏನಾಗುತ್ತೆ?

    ಬೆಂಗಳೂರು: ಇಂದು ನಡೆಯುವ ಗುರು-ಶನಿ ಸಮ್ಮಿಲದ ಖಗೋಳ ತಜ್ಞರಿಗೆ ನಭೋಮಂಡಲದ ಕೌತಕದ ವಿದ್ಯಮಾನ ಅಷ್ಟೆ. ಆದ್ರೆ ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಸಿಗುತ್ತವೆ. ಈ ಮಹಾಸಂಯೋಗದ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

    ಗುರು,ಶನಿ ಸಂಯೋಗ ಹೇಗೆ?: 60 ಸಂವತ್ಸರದಲ್ಲಿ ಶಾರ್ವರಿ ನಾಮ ಸಂವತ್ಸರವೂ ಒಂದಾಗಿದೆ. ಈ ಸಂಯೋಗ ಇದು ಯುಗ ಯುಗಗಳಲ್ಲಿ ನಡೆಯುವ ವೈಶಿಷ್ಯ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆ. 9 ಗ್ರಹಗಳು 12 ಮನೆಗಳಲ್ಲಿ ಸಂಚಾರ ಇರುತ್ತೆ. 9 ಗ್ರಹಗಳು 12 ಮನೆಗಳಲ್ಲಿ ಇಂತಿಷ್ಟು ವರ್ಷವೆಂದು ಸಂಚಾರ ಮಾಡುತ್ತವದೆ. ಮಕರ ರಾಶಿಗೆ ಶನಿ ಮತ್ತು ಗುರು ಗ್ರಹ ಪ್ರವೇಶವಾಗುತ್ತೆ. ಇಂದು ಸಂಧ್ಯಾಕಾಲ ಎರಡು ಗ್ರಹಗಳ ಪ್ರವೇಶ ಆಗಲಿದೆ.

    ಒಂದು ಸಂವತ್ಸರದಲ್ಲಿ ನಾಲ್ಕು ಕಾಲಗಳು ಬರುತ್ತೆ. ಪೂರ್ವ ಜನ್ಮದ ಕರ್ಮಗಳಿಗೆ ಅನುಸಾರವಾಗಿ ಫಲ ಲಭಿಸುತ್ತೆ. ಗ್ರಹಗಳು ರಾಶಿಗಳ ಮನೆಗೆ ಬಂದಾಗ ಹಿಂದಿನ ಸಂಸ್ಕಾರಗಳೇ ಫಲವಾಗಿ ಲಭಿಸುತ್ತೆ. ಗ್ರಹ ಪ್ರವೇಶ ಆದಾಗ ಒಳ್ಳೆಯದು ಆಗುತ್ತೆ.. ಕೆಟ್ಟದ್ದು ಆಗುವ ಸಾಧ್ಯತೆಗಳಿರುತ್ತವೆ. ಗುರು ಗ್ರಹ ಪ್ರವೇಶ ಆದಾಗ ಶುಭವೇ ಹೆಚ್ಚಾಗುತ್ತದೆ. ಒಳ್ಳೆಯದು ಮಾಡುವ ಗುರು ಜೊತೆ ಶನಿ ಬಂದಾಗ ಆತಂಕ ಜಾಸ್ತಿ. ಒಳ್ಳೆಯ ಗುರು ಜೊತೆ ಶನಿ ಬಂದಾಗ ಸ್ವಲ್ಪ ಕೆಡುಕಾಗಬಹುದು. ಮಕರ ರಾಶಿಯಲ್ಲಿ ಎರಡು ಗ್ರಹಗಳ ಸಮ್ಮಿಲನ ಒಂದು ವರ್ಷ ಇರುತ್ತೆ. ಗುರು ಗ್ರಹ 2 ತಿಂಗಳು ಬಿಟ್ಟು ವಾಪಾಸ್ ಹೋಗ್ತಾನೆ. 2 ತಿಂಗಳು ಬಿಟ್ಟು ಮತ್ತೆ ವಾಪಸ್ ಹೋಗುವಾಗ ಫಲ ಲಭಿಸಲಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳುತ್ತಾರೆ.

    ರಾಶಿಗಳ ಮೇಲೆ ಬೀಳುವ ಪರಿಣಾಮ ಏನು?: ಗುರು-ಶನಿ ಸಂಯೋಗ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಇದ್ದೇ ಇರುತ್ತದೆ. ಪಂಚಮ ಶನಿ ಅಂದರೆ 5ನೇ ಮನೆಯಲ್ಲಿ ಶನಿ ಇದ್ದಾಗ ತೊಂದರೆ. ಮಕರ ರಾಶಿಯವರಿಗೆ ಏಳೂವರೆ ವರ್ಷದ ಶನಿ ಕಾಟದಿಂದ ಮುಕ್ತವಾಗಲಿದೆ. ಶನಿಕಾಟ ವಿಮೋಚನೆದಿಂದ ಗುರು-ಶನಿಯಿಂದ ಅನುಕೂಲ. ಗುರು ಜೊತೆ ಶನಿ ಬರುತ್ತಿರುವುದರಿಂದ ಒಳ್ಳೆಯದು ಆಗಲಿದೆ. ಮಕರ ರಾಶಿಯವರ ಸಮೀಪ ಇರುವ ರಾಶಿಗಳಿಗೆ ಆತಂಕ. ಆತಂಕ ದೂರ ಮಾಡಿಕೊಳ್ಳಲು ಶನಿ ದೇವರನ್ನು ಪ್ರಾರ್ಥಿಸಬೇಕು ಎಂದು ಸೂಚಿಸಿದ್ದಾರೆ.

    ರಾಶಿಗಳಿಗೆ ಪರಿಹಾರ ಏನು?: ಗುರು ಅಂದರೆ ದಕ್ಷಿಣಾಮೂರ್ತಿ, ಶನಿ ಅಂದರೆ ಈಶ್ವರ. ಹಾಗಾಗಿ ಈಶ್ವರನ ಆರಾಧನೆ ಮತ್ತು ಪೂಜೆ ಮಾಡಬೇಕು ಮತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು. ತಮ್ಮ ಅನುಕೂಲಕ್ಕೆ ತಕ್ಕಂತೆ ಎಳ್ಳು, ಎಳ್ಳೆಣ್ಣೆ, ಕಡ್ಲೆಕಾಳು ದಾನ ಮಾಡಬೇಕು. ಗುರು, ಶನಿ ಇಬ್ಬರೂ ಇರುವುದರಿಂದ ಈ ವೇಳೆ ಪ್ರಾರ್ಥನೆ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಏನಾದ್ರು ದೋಷಗಳಿದ್ರೂ ಪರಿಹಾರ ಆಗುತ್ತೆ.

    ಪರಿಸರದ ಮೇಲೆ ಏನು ಪರಿಣಾಮ?: ಶನಿ ಅಂದರೆ ಯುದ್ಧ ಭೀತಿ ಎಂದರ್ಥ. ಗುರು ಅಂದರೆ ಸೌಮ್ಯ ಅಂತರ್ಥ. ಎಲ್ಲಾ ದೇಶದವರಿಗೂ ಪ್ರಾಕೃತಿಕ ಸಂಯಮ ಇದೆ. ಒಂದೇ ಮನೆಯಲ್ಲಿ 2 ಗ್ರಹಗಳ ಬರುತ್ತಿರೋದರಿಂದ ಒಳ್ಳೆಯದು ಆಗುತ್ತೆ ಕೆಟ್ಟದ್ದು ಆಗುತ್ತೆ. ಇಂಥದ್ದೇ ಆಗುತ್ತೆಂದು ಹೇಳಲಾಗಲ್ಲ. ಜಲಪ್ರವಾಹ, ಅಗ್ನ ಅವಘಡ, ಭೂಕಂಪ ಸಂಭವಿಸಬಹುದು ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ: ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ರಾಜಕೀಯದ ಮೇಲೆ ಪರಿಣಾಮ ಏನು?: ಗ್ರಹಣಗಳ ಕಾಲದಲ್ಲಿ ರಾಜಕೀಯದ ವಿಶ್ಲೇಷಣೆ ಮಾಡಬಹುದು, ಗ್ರಹಗಳ ನಡುವೆ ನಡೆಯುವ ಸಮ್ಮಿಲನದಿಂದ ಹೇಳಲು ಆಗಲ್ಲ. ಯುಗಾದಿ ನಂತರ ಕುಜ ರಾಜನಾಗಿ ಬರ್ತಾನೆ. ಅನುಕೂಲ, ಅನಾನುಕೂಲ ಎರಡೂ ಆಗಬಹುದು.

  • ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ಬೆಂಗಳೂರು: ಇಂದು ಸಂಜೆ ನಭೋಮಂಡಲ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ. ಈ ಮಹಾಸಂಗಮದಿಂದ ಯಾವ ರಾಶಿಗಳಿಗೆ ಕಂಟಕ ಆಗಬಹುದು? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

    ಮೇಷ: ಹಣಕಾಸಿನ ತೊಂದರೆ ಹೆಚ್ಚಾಗಬಹುದು, ನಿಮ್ಮ ಪ್ರಯಾಣದಲ್ಲಿ ಸಂಕಷ್ಟ ಎದುರಾಗಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಅನಾರೋಗ್ಯ ಸಮಸ್ಯೆ ಕಾಡಲಿದೆ.

    ವೃಷಭ: ಉದ್ಯೋಗದ ಸ್ಥಳದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ ಸಾಧ್ಯತೆ, ಉದ್ಯೋಗ ಕಳೆದುಕೊಳ್ಳುವ ಸಂಭವ.

    ಮಿಥುನ: ಜೀವನದಲ್ಲಿ ಏರುಪೇರು ಸಾಧ್ಯತೆ, ಆಕಸ್ಮಿಕ ದುರಂತ ಸಂಭವ, ರಾಜಕೀಯ ವ್ಯಕ್ತಿಗಳಿಗೆ ಸಮಸ್ಯೆ,ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಆರ್ಥಿಕ ಪರಿಸ್ಥಿತಿ ಉಲ್ಬಣ.

    ಕಟಕ: ದಾಂಪತ್ಯದಲ್ಲಿ ಜಗಳ, ಮುನಿಸು, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ರೋಗಬಾಧೆ ಉಲ್ಪಣ ಸಂಭವ, ಆನಾರೋಗ್ಯ ಸಮಸ್ಯೆ ಹೆಚ್ಚಾಗಬಹುದು.

    ಸಿಂಹ: ಶತ್ರುಗಳ ಕಾಟ ಹೆಚ್ಚಾಗಬಹುದು, ಆರ್ಥಿಕ ಸಮಸ್ಯೆ ಹೆಚ್ಚಿನ ಸಾಲ, ಮನಸ್ಸಿನ ಭಾವನಾತ್ಮಕ ವಿಚಾರದಲ್ಲಿ ಹಿನ್ನಡೆ, ಮಕ್ಕಳಿಂದ ಕಿರಿಕಿರಿ ಅಥವಾ ನಷ್ಟ, ಕೆಲಸಗಾರರಿಂದ ಸಮಸ್ಯೆ.

    ಕನ್ಯಾ: ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆ, ದಾಂಪತ್ಯದಲ್ಲಿ ಜಗಳ, ವಿರಸ, ಸಂಗಾತಿಗೆ ಆರೋಗ್ಯ ಕೈ ಕೊಡಬಹುದು, ಉದ್ಯೋಗದಲ್ಲಿ ಒತ್ತಡ, ಕಿರುಕುಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ತುಲಾ: ಮಾನಸಿಕ ಆಘಾತ, ನೆಮ್ಮದಿ ಘಾಸಿ, ದೈವವನ್ನ ದಿಕ್ಕರಿಸೋ ಸಾಹಸ, ಕುಟುಂಬ ಕಲಹ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಪ್ರಯಾಣ, ಶತ್ರು ಕಾಟ

    ವೃಶ್ಚಿಕ: ಬಂಧು-ಬಾಂಧವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರದಲ್ಲಿ ಎಚ್ಚರ ಇರಲಿ, ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ, ಪ್ರೀತಿ ಪ್ರೇಮ ವಿಚಾರದಲ್ಲಿ ಎಚ್ಚರ, ಆದಷ್ಟು ಎಚ್ಚರದಿಂದ ಇದ್ದರೆ ಒಳಿತು.

    ಧನಸ್ಸು: ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ, ಸ್ವಂತ ವ್ಯವಹಾರ ಬೇಡ, ಶುಭಕಾರ್ಯದಲ್ಲಿ ಸಮಸ್ಯೆ, ಅಂದುಕೊಂಡ ಕೆಲಸಗಳು ವಿಳಂಬ

    ಮಕರ: ಆರೋಗ್ಯದಲ್ಲಿ ಮುಂಜಾಗ್ರತೆ ಇರಲಿ, ಸ್ವಂತ ಉದ್ಯಮದ ಬಗ್ಗೆ ಜಾಗ್ರತೆ, ಕೋರ್ಟ್ ವ್ಯಾಜ್ಯ ಸಂಭವ, ಜೈಲುವಾಸ ಸಾಧ್ಯತೆ

    ಕುಂಭ: ಲಾಭದ ಪ್ರಮಾಣದಲ್ಲಿ ಕುಂಠಿತ, ಖರ್ಚು ಹೆಚ್ಚಳ, ಕುಟುಂಬದಲ್ಲಿ ವಿರೋಧ, ಮಾತಿನಿಂದ ಸಮಸ್ಯೆ, ದಾಯಾದಿ ಕಲಹ, ಹೆಸರಿಗೆ ಅಪಖ್ಯಾತಿ, ಅಪವಾದ

    ಮೀನ: ಮುಂಬರುವ 15 ದಿನಗಳ ಕಾಲ ಜಾಗ್ರತೆ, ಧನ ಲಾಭ ನಿರೀಕ್ಷೆ, ಸೇವಾ ವೃತ್ತಿದಾರರು ಎಚ್ಚರ, ಆರೋಗ್ಯ ವಿಚಾರದಲ್ಲಿ ಜಾಗ್ರತೆ

  • ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    – ಮಹಾ ಸಂಗಮ ನೋಡೋಕೆ ಆಗಸದತ್ತ ಜನರ ನೋಟ

    ಬೆಂಗಳೂರು: ಇಂದು ಸಂಜೆ ಬಾನಂಗಳದಲ್ಲಿ 800 ವರ್ಷಗಳ ಬಳಿಕ ಅಪರೂಪದ ವಿದ್ಯಮಾನ ಜರುಗಲಿದೆ. ಸೂರ್ಯಾಸ್ತದ ಬಳಿಕ ಗುರು, ಶನಿ ಗ್ರಹಗಳ ಸಂಗಮ ದೃಶ್ಯ ಬರಿಗಣ್ಣಿಗೆ ಗೋಚರಿಸಲಿದೆ. ಈ ಎರಡು ಗ್ರಹಗಳು ಕ್ರಿಸ್‍ಮಸ್ ಸ್ಟಾರ್ ರೀತಿಯಲ್ಲಿ ಕಾಣಲಿವೆ. ಈ ವಿಶೇಷಕ್ಕಾಗಿ ಮತ್ತೆ 60 ವರ್ಷಗಳ ಬಳಿಕ ಕಾಯಬೇಕು.

    ಗುರು-ಶನಿ ಸಂಯೋಗ: ಈ ಎರಡು ಗ್ರಹಗಳು ಭೂಮಿಗೆ ನೇರವಾಗಿ ಒಂದೇ ರೇಖೆಯಲ್ಲಿ ಬರುವುದರಿಂದ ಒಂದೇ ಗ್ರಹದಂತೆ ಗೋಚರವಾಗುತ್ತವೆ. ಆದರೆ, ಗ್ರಹಗಳು ಒಂದರ ಹಿಂದೆ ಒಂದು ಇರಲಿದೆ. ಹಾಗಾಗಿ ಇದನ್ನು ಬಾಹ್ಯಾಕಾಶ ವಿಜ್ಞಾನಿಗಳು ಮಹಾ ಸಂಗಮ ಎಂದು ಕರೆಯುತ್ತಾರೆ. ಒಂದೇ ರೇಖೆಯಲ್ಲಿ ಗುರು, ಶನಿ, ಚಂದ್ರ ಬರೋದರಿಂದ ಆಗಸದಲ್ಲಿ ತ್ರಿಕೋನಾಕೃತಿಯಲ್ಲಿ ಸಂಯೋಗ ಗೋಚರವಾಗುತ್ತದೆ. ಮುಂದೆ 2080ರಲ್ಲಿ ಈ ವಿದ್ಯಮಾನ ಘಟಿಸಲಿದೆ.

    ಸಮಯ: ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ.

    ಗುರು,ಶನಿ ಸಮಾಗಮ ಎಂದರೇನು?: ಆಕಾಶಕಾಯಗಳ ಸಾಮೀಪ್ಯದ ವಿಶೇಷವೇ ಖಗೋಳ ವಿದ್ಯಮಾನ. 20 ವರ್ಷಗಳಿಗೊಮ್ಮೆ ಕಾಣುವ ವಿದ್ಯಮಾನವನ್ನ ಗ್ರೇಟ್ ಕಂಜಂಕ್ಷನ್ ಅಂತ ಕರೆಯುತ್ತಾರೆ. ಈ ಎರಡು ಗ್ರಹಗಳ ಅಂತರ 6.1 ಅರ್ಕ್ ಮಿನಿಟ್, ಅಂದ್ರೆ 0.1 ಡಿಗ್ರಿ ಇರುತ್ತೆ. ಹಿಂದೆ 1623ರಲ್ಲಿ ಈ ವಿದ್ಯಮಾನ ನಡೆದಿತ್ತು ಆದರೆ ಅದು ಗೋಚರಿಸಿರಲಿಲ್ಲ. ಅದಕ್ಕೂ ಹಿಂದೆ 1226 ರಲ್ಲಿ ಅದ್ರೆ 794 ವರ್ಷದ ಹಿಂದೆ ಗೋಚರಿಸಿತ್ತು. ಮತ್ತೊಮ್ಮೆ, 0.1 ಡಿಗ್ರಿ ಅಂತರದ ಸಮಾಗಮ ವೀಕ್ಷಿಸಲು 2080ರವರೆಗೆ ಕಾಯಬೇಕು. ಈ ವೈಶಿಷ್ಯವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಸಮಾಗಮ 1 ಗಂಟೆ 45 ನಿಮಿಷ ಮಾತ್ರ ಕಾಣಸಿಗುತ್ತದೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

    ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತಿರುತ್ತದೆ. ಭೂಮಿಯಿಂದ ನೋಡಿದಾಗ ಈ ಗ್ರಹಗಳೂ ಗೋಚರವಾಗುತ್ತವೆ. ಇಂತಹ ಸಂದರ್ಭದಲ್ಲಿ ಗುರು, ಶನಿ ಗ್ರಹಗಳು ಸಮೀಪ ಬಂದಂತೆ ಭಾಸವಾಗುತ್ತೆ. ಈ ವಿದ್ಯಮಾನವೇ ಯುತಿ ಅಥವಾ ಸಮಾಗಮ ಅಂತಾರೆ. ಎಲ್ಲ ಗ್ರಹಗಳು ಸಮಾಗಮ ಹೊಂದುತ್ತವೆ. ಇಂದು ಗುರು-ಶನಿ ಗ್ರಹಗಳು ಭೂಮಿ ಸಮೀಪ ಬಂದತೆ ಭಾಸವಾಗುತ್ತೆ. 800 ವರ್ಷಗಳ ಬಳಿಕ ನಡೆಯುತ್ತಿದೆ. 800 ವರ್ಷಗಳ ಬಳಿಕ ಇಷ್ಟು ಹತ್ತಿರ ಬಂದಿರುವುದು ಇದೇ ಮೊದಲು ಎಂದು ಖಗೋಳಶಾಸ್ತ್ರಜ್ಞ ಸುಂದರ್ ಮಾಹಿತಿ ನೀಡಿದ್ದಾರೆ.

  • 353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು, ನಾಳೆ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಡಿಸೆಂಬರ್ 21 ಅತ್ಯಂತ ಕಡಿಮೆ ಹಗಲಿನ ದಿನವಾಗಿದ್ದು, ರವಿ, ಶನಿ ಜೊತೆಯಾಗಿ ಸಂಚಾರ ಮಾಡುವ ಕಾರಣ ಬಹಳ ಅಪಾಯಕಾರಿ ದಿನ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.

    ಜ್ಯೋತಿಷಿಗಳು ಹೇಳೋದು ಏನು?
    ಇದು ಅತಿ ವಿರಾಳವಾದ ದಿನವಾಗಿದ್ದು, ನಾಳೆ ಕಷ್ಟಕ್ಕೆ ಸಿಲುಕಿದರೆ ಇನ್ನು 1 ವರ್ಷ ಪರಿಣಾಮ ಅನುಭವಿಸಬೇಕಾಗುತ್ತದೆ. ಇನ್ನೊಂದು ವರ್ಷ ಶನಿ ಕಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಅಗ್ನಿ ಆಕಸ್ಮಿಕ ಹೆಚ್ಚಾಗಿ ಸಂಭವಿಸುತ್ತದೆ. ಅಪಘಾತಗಳು ಜಾಸ್ತಿ ಆಗುತ್ತವೆ. ಮನೆಯಲ್ಲಿನ ಹಿರಿಯರು ದೈವಾಧೀನರಾಗುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಯಾವುದೇ ಹೊಸ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    https://www.youtube.com/watch?v=E1FfyUkMeUY