Tag: Satish Reddy

  • ಪುಡಿ ರೌಡಿಗಳ ಜೊತೆ ಶಾಸಕರ ಮೀಟಿಂಗ್? – ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ಸತೀಶ್ ರೆಡ್ಡಿ

    ಪುಡಿ ರೌಡಿಗಳ ಜೊತೆ ಶಾಸಕರ ಮೀಟಿಂಗ್? – ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ಸತೀಶ್ ರೆಡ್ಡಿ

    ಬೆಂಗಳೂರು: ಇತ್ತೀಚೆಗೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಬೊಮ್ಮನಹಳ್ಳಿ (Bommanahalli) ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಪುಡಿ ರೌಡಿಗಳ (Rowdy) ಜೊತೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ ಸತೀಶ್ ರೆಡ್ಡಿ (Satish Reddy) ಸಭೆಯನ್ನು ನಡೆಸಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಚುನಾವಣೆ ಹತ್ತಿರವಾಗುತ್ತಿದ್ದಂತೆ ಸತೀಶ್ ರೆಡ್ಡಿ ತಮ್ಮ ಮನೆಯಲ್ಲಿ ಕೆಲ ಹುಡುಗರನ್ನು ಕರೆಸಿ ಸಭೆಯೊಂದನ್ನು ಮಾಡಿದ್ದಾರೆ. ಅವರ ಜೊತೆ ತೆಲುಗಿನಲ್ಲಿ ಮಾತನಾಡುತ್ತಿರುವ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ‘ನಿಮಗೇನು ಸಪೋರ್ಟ್ ಬೇಕು ಅದನ್ನು ನಾನು ಕೊಡಿಸುತ್ತೇನೆ. ಚುನಾವಣೆ ಸಮಯದಲ್ಲಿ ಮೆಂಟಲಿ ಟಾರ್ಚರ್ ಕೊಡುತ್ತಿದ್ದಾರೆ. ನಿಮಗೆ ಯಾವ ಸಪೋರ್ಟ್ ಬೇಕು ಅದು ನಮ್ಮಿಂದ ಇರುತ್ತದೆ’ ಎನ್ನುವ ಮಾತುಗಳನ್ನಾಡಿರುವ ದೃಶ್ಯವಿದೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಚುನಾವಣೆ ಹಿನ್ನೆಲೆ ರೌಡಿಶೀಟರ್ ಹಾಗೂ ಪುಡಿ ರೌಡಿಗಳ ಜೊತೆ ಬೊಮ್ಮನಹಳ್ಳಿ ಶಾಸಕರು ಮೀಟಿಂಗ್ ಮಾಡಿದ್ದಾರೆ ಎಂಬುದಾಗಿ ಎಲ್ಲೆಡೆ ಈ ವೀಡಿಯೋ ಹರಿದಾಡುತ್ತಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉಮಾಪತಿ ಗೌಡ ವಿರುದ್ಧ ಗೆಲ್ಲಲು ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ.

    ಕಳೆದ ಕೆಲವು ದಿನಗಳ ಹಿಂದೆ ಪುಡಿ ರೌಡಿಯೊಬ್ಬ ಸತೀಶ್ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದ ಎನ್ನುವ ಆಡಿಯೋ ಬಯಲಾಗಿತ್ತು. ಇದಾದ ಬಳಿಕ ಈಗ ಸತೀಶ್ ರೆಡ್ಡಿ ರೌಡಿಗಳ ಜೊತೆ ಕಾಣಿಸಿಕೊಂಡಿದ್ದಾರೆ ಎನ್ನುವ ವೀಡಿಯೋ ಬಯಲಾಗಿದ್ದು, ಪ್ರತಿಪಕ್ಷಗಳಿಗೆ ಈ ವಿವಾದಗಳು ವರದಾನವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್

  • ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    ಬೆಂಗಳೂರು: ನನ್ನನ್ನ ಕೊಲ್ಲಲು ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ಕಾರಣಗಳು ಇರಬಹುದು ಎಂದು ಸತೀಶ್ ರೆಡ್ಡಿ (Satish Reddy) ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆಯ ಬಗ್ಗೆ ಸಿಎಂಗೆ ತಿಳಿಸಿದ್ದೇನೆ. ಭದ್ರತೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆದರೆ ನನಗೆ ಭದ್ರತೆ ಬೇಡ ಎಂದು ಹೇಳಿದ್ದೇನೆ. ಚುನಾವಣೆ ಸಮೀಪವಿದರಿಂದಾಗಿ ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಆದರೆ ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದರು.

    ನಾನು ಭಯ ಪಡಲ್ಲ. ಇದಕ್ಕೆಲ್ಲ ಹೆದರಲ್ಲ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆರೋಪಿಗಳು ನನ್ನ ಚಲನವಲನ ಮೇಲೆ ಗಮನ ಇಟ್ಟಿದರಂತೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಏನೇನು ಮಾಡಿದಾರೆ ಅಂತ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ ಸುಪಾರಿ ಬಗ್ಗೆ ಮಾತಾಡಿರುವವ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಪಾರದರ್ಶಕ ತನಿಖೆ ಆಗಲಿ ಎಂದು ಆಗ್ರಹಿಸಿದರು.

    ನಾನು ಪೂರ್ತಿ ರಾಜಕಾರಣದಲ್ಲೇ ಇದ್ದೇನೆ. ಈಗ ಯಾವುದೇ ಉದ್ಯಮದಲ್ಲಿ ನಾನು ಇಲ್ಲ. ಉದ್ಯಮ ಕಾರಣ ಸುಪಾರಿ ಹಿಂದೆ ಇಲ್ಲ. ರಾಜಕೀಯ ಕಾರಣವೇ ಸುಪಾರಿ ಹಿಂದೆ ಇದೆ. ಪೊಲೀಸರು ತನಿಖೆ ಮಾಡಿ ಅಪರಾಧಿಗಳನ್ನು ಜೈಲಿಗೆ ಕಳಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: 6 ತಿಂಗಳಾದ್ರೂ ಪತ್ನಿಗೆ ಸಂಬಳ ಬಂದಿಲ್ಲ ಎಂದ ವ್ಯಕ್ತಿಗೆ ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಸಚಿವ

    ಘಟನೆಯೇನು?: ಬಿಜೆಪಿ (BJP) ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ರೂ. ಸುಪಾರಿ ನೀಡಿರುವ ಆರೋಪದಲ್ಲಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ. ಆಕಾಶ್, ಗಗನ್ ಬಂಧಿತ ಆರೋಪಿಗಳು. ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ (ಎ1) ವಿಲ್ಸನ್ ಗಾರ್ಡನ್ ನಾಗ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು- ಹಗ್ಗ ಹಿಡಿದು ನದಿ ದಾಟಿ ಬರುತ್ತಿರೋ ಜನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ – ಇಬ್ಬರು ಅರೆಸ್ಟ್, ವಿಲ್ಸನ್ ಗಾರ್ಡನ್ ನಾಗ ಪರಾರಿ

    ಶಾಸಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ – ಇಬ್ಬರು ಅರೆಸ್ಟ್, ವಿಲ್ಸನ್ ಗಾರ್ಡನ್ ನಾಗ ಪರಾರಿ

    ಬೆಂಗಳೂರು: ಬಿಜೆಪಿ (BJP) ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ (Satish Reddy) ಕೊಲೆಗೆ 2 ಕೋಟಿ ರೂ. ಸುಪಾರಿ ನೀಡಿರುವ ಆರೋಪದಲ್ಲಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು (Bommanahalli Police) ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ.

    ಆಕಾಶ್, ಗಗನ್ ಬಂಧಿತ ಆರೋಪಿಗಳು. ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ (ಎ1) ವಿಲ್ಸನ್ ಗಾರ್ಡನ್ ನಾಗ (Wilson Garden Naga) ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
    ಶಾಸಕರ ಪಿಎ ಹರೀಶ್ ಬಾಬು ಅವರಿಗೆ ಫೆ.11 ರಂದು ಬೊಮ್ಮನಹಳ್ಳಿ ನಿವಾಸಿ ಚಂದ್ರು ಎಂಬುವವರು ಕರೆ ಮಾಡಿ, ಶಾಸಕ ಸತೀಶ್ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿಸಿದ್ದ. ಚಂದ್ರುಗೆ ಭೈರೇಶ್ ಎಂಬುವನು ಫೋನ್ ಮಾಡಿ ವಿಚಾರ ತಿಳಿಸಿದ್ದಾಗಿ ಹರೀಶ್ ಬಾಬು ಬಳಿ ಹೇಳಿದ್ದ. ಭೈರೇಶ್‍ಗೆ ಆತನ ಸ್ನೇಹಿತ ಹೊಳಲ್ಕೆರೆಯ ಆಕಾಶ್ ವಿಚಾರ ತಿಳಿಸಿದ್ದಾಗಿ ಹೇಳಿದ್ದ.

    ಶಾಸಕರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾಗಿ ಹೊಳಲ್ಕೆರೆಯ ಆಕಾಶ್, ಭೈರೇಶ್‍ಗೆ ಹೇಳಿದ್ದ. ಭೈರೇಶ್ ಈ ವಿಚಾರ ಚಂದ್ರುಗೆ ಹೇಳಿದ್ದ. ಚಂದ್ರು ಈ ವಿಚಾರವನ್ನ ಶಾಸಕರ ಪಿಎ ಹರೀಶ್ ಬಾಬುಗೆ ಹೇಳಿದ್ದ. ವಿಲ್ಸನ್ ಗಾರ್ಡನ್ ನಾಗ ಎರಡು ಕೋಟಿ ರೂ.ಗೆ ಸುಪಾರಿ ಪಡೆದಿದ್ದಾನೆ. ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಚಂದ್ರು ತಿಳಿಸಿದ್ದ. ಈ ವಿಚಾರ ತಿಳಿದು ಹರೀಶ್ ಬಾಬು ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.

    ಘಟನೆಗೆ ಸಂಬಂಧಿಸಿದಂತೆ ಮೊದಲು ಎನ್‍ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದ ಪೊಲೀಸರು, ನಂತರ ಕೋರ್ಟ್‍ನಿಂದ ಒಪ್ಪಿಗೆ ಪಡೆದು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ 2 ಕೋಟಿ ರೂ. ಹಣಕ್ಕೆ ಡೀಲ್ ನೀಡಲಾಗಿದೆ. ಕೊಲೆ ಮಾಡಲು ಸುಪಾರಿ ಪಡೆದಿದ್ದು ವಿಲ್ಸನ್ ಗಾರ್ಡ್‍ನ ನಾಗ ಎನ್ನುವುದು ಫೋಟೋ ಮುಖಾಂತರ ಬೆಳಕಿಗೆ ಬಂದಿದೆ. ಸದ್ಯ ತಮಿಳುನಾಡಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಆಶ್ರಯ ಪಡೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಟುಂಬ ಸಮೇತ ರಾಜ್ಯಪಾಲ ಗೆಹ್ಲೋಟ್‌ ಧರ್ಮಸ್ಥಳಕ್ಕೆ ಭೇಟಿ

    ಈ ಹಿಂದೆ ಶಾಸಕ ಸತೀಶ್ ರೆಡ್ಡಿ ನಿವಾಸದ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಫಾರ್ಚೂನರ್ ಕಾರು ಹಾಗೂ ಮಹೀಂದ್ರಾ ಥಾರ್ ಜೀಪ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ರಾಜ್ಯ ರಾಜಕೀಯದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೇ ದಿನಗಳಲ್ಲಿ ಆರೋಪಿಗಳ ಬಂಧನ ಆಗಿತ್ತು. ನಾಲ್ವರು ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ತಂದು ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಸಿದ್ದು ಪ್ರಚಾರಕ್ಕೆ ಕೋಲಾರದಲ್ಲಿ ವಾರ್‌ ರೂಂ ಓಪನ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಳೆ ಅವಾಂತರ ತಡೆಗೆ ಟಾಸ್ಕ್ ಫೋರ್ಸ್ ರಚನೆ

    ಮಳೆ ಅವಾಂತರ ತಡೆಗೆ ಟಾಸ್ಕ್ ಫೋರ್ಸ್ ರಚನೆ

    ಬೆಂಗಳೂರು: ಮಳೆ ಸೃಷ್ಟಿಸುತ್ತಿರುವ ಅವಾಂತರಗಳನ್ನು ತಡೆಯಲು ಬೆಂಗಳೂರಿನ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದ್ದಾರೆ.

    ಕಳೆದ 15 ದಿನಗಳಿಂದ ಮಳೆ ಪ್ರತಿನಿತ್ಯ ಒಂದಲ್ಲೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಬೊಮ್ಮನಹಳ್ಳಿಯ ಸುತ್ತಮುತ್ತ ಅನೇಕ ಸಮಸ್ಯೆಗಳು ಉಂಟಾಗಿದೆ ಇದನ್ನು ತಡೆಯಲು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಇಂದು ನಗರದ ಎಚ್‍ಎಸ್‍ಆರ್ ಬಡಾವಣೆ ಬಿಡಿಎ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಟಾಸ್ಕ್ ಫೋರ್ಸ್ ಗೆ ಚಾಲನೆ ನೀಡಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಚಳಿಗಾಲವೋ..? ಮಳೆಗಾಲವೋ..?- ಮಳೆಗಾಲ ಮುಗಿದ್ರೂ ತಗ್ಗದ ವರುಣಾರ್ಭಟ

    ಟಾಸ್ಕ್ ಫೋರ್ಸ್ ನಲ್ಲಿ 6 ಮಂದಿ ಬಿಬಿಎಂಪಿ ಸಿಬ್ಬಂದಿ 60 ಮಂದಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ, 40 ಮಂದಿ ಹೋಂಗಾರ್ಡ್‍ಗಳು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಮ್ ಅಧಿಕಾರಿಗಳು ಎಲ್ಲರೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ ಮೂರು ಶಿಫ್ಟ್ ಗಳಲ್ಲಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದ್ದು ಮಳೆ ಸಂಪೂರ್ಣವಾಗಿ ನಿಲ್ಲುವವರೆಗೆ ಈ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ ಮಳೆ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವ ಸಿಬ್ಬಂದಿ ಯಾವುದೇ ಸಮಯದಲ್ಲಾದರೂ ಸಹ ಸ್ಥಳಕ್ಕೆ ತಲುಪುವಂತಹ ಎಲ್ಲಾ ಸಿದ್ಧತೆಗಳು ಹಾಗೂ ಕ್ರಮಗಳು ಮೊದಲೇ ತೆಗೆದುಕೊಂಡು ಸಿದ್ಧರಿರುತ್ತಾರೆ ಎಂದು ಸತೀಶ್ ರೆಡ್ಡಿ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

  • ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ

    ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ

    – ಸೋಮವಾರ ಸಂಜೆ ಬೆಂಗಳೂರಿಗೆ ಆಗಮನ
    – ಇಂದು ಸಂಜೆ ಕೆನ್ನಾಲಿಗೆಗೆ ಭಾಗ್ಯರೇಖಾ ಬಲಿ

    ಬೆಂಗಳೂರು: ಬೊಮ್ಮನಹಳ್ಳಿ ಅಪಾರ್ಟ್‍ಮೆಂಟ್ ನಲ್ಲಿ ಅಗ್ನಿ ದುರಂತವಾಗಿದ್ದು, ಈ ಹಿನ್ನೆಲೆ ನನಗೆ ತುಂಬಾ ನೋವಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.

    ಅಗ್ನಿ ದುರಂತ ಸಂಜೆ 4:15 ರಿಂದ 4:30ರ ವೇಳೆ ಘಟನೆ ನಡೆದಿದೆ. ಲಕ್ಷ್ಮಿದೇವಿ(82), ಭಾಗ್ಯರೇಖಾ(59) ಮೃತಪಟ್ಟಿದ್ದಾರೆ. ಅಮೆರಿಕದಲ್ಲಿದ್ದ ಮಗಳ ಮನೆಯಿಂದ ಭಾಗ್ಯರೇಖಾ ಮತ್ತು ಪತಿ ಭೀಮಸೇನ್ ಬೆಂಗಳೂರಿಗೆ ನಿನ್ನೆ ಸಂಜೆ ಬಂದಿದ್ದರು. ಅವರು 210 ಫ್ಲಾಟ್ ನಲ್ಲಿ ಇದ್ದರು. ಪಕ್ಕದ 211 ಅವರ ಮಗಳು ವಾಸವಾಗಿದ್ದರು. ಎರಡು ಮನೆ ಅಕ್ಕ ಪಕ್ಕದಲ್ಲಿ ಇದೆ. ಭೀಮಸೇನ್ ಅವರು ಮಗಳ ಫ್ಲಾಟ್ ನಲ್ಲಿ ಮಲಗಿಕೊಂಡಿದ್ದರು. ಈ ಕಡೆ ಅವರ ಭಾಗ್ಯರೇಖಾ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಿದ್ದರು. 6 ತಿಂಗಳಿಂದ ಇವರು ಮನೆಯಲ್ಲಿ ಇಲ್ಲದ ಕಾರಣ ಈ ಘಟನೆ ಗ್ಯಾಸ್ ನಿಂದ ಆಗಿದ್ಯಾ? ಅಥವಾ ವಿದ್ಯುತ್‍ನಿಂದ ದುರಂತವಾಗಿದ್ಯಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕ್ರಮವಹಿಸಬೇಕು: ಕಾರಜೋಳ

    ಭೀಮ್ ಸೇನ್ ಅವರು ತಮ್ಮ ಮಗಳು ಪ್ರೀತಿ ಸಂತೋಷ ಅವರ ಮನೆಯಲ್ಲಿ ಇದ್ದಾಗ ಲಕ್ಷ್ಮಿ ಅವರು ಕರೆ ಮಾಡಿ ಬೆಂಕಿ ಬಗ್ಗೆ ಹೇಳಿದ್ದಾರೆ. ತಕ್ಷಣ ಅವರು ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದು, ಅವರಿಗೂ ಗಾಯಗಳಾಗಿವೆ. ಈ ವಿಷಯ ತಿಳಿದು ಭೀಮಸೇನ್ ಅವರು ಶಾಕ್ ನಲ್ಲಿದ್ದಾರೆ. ಅವರ ಕುಟುಂಬದವರ ಜೊತೆಗೆ ನಾನು ಮಾತನಾಡಿದ್ದೇನೆ. ಇದು ಅವರ ಕುಟುಂಬಕ್ಕೆ ನೋವು ತರುವಂತದ್ದು, ಅವರಿಗೆ ಎಷ್ಟೇ ನಾವು ಸಾಂತ್ವನ ಹೇಳಿದರೂ ಅದು ಸಾಲದು. ನಾನು ಈ ಬಗ್ಗೆ ನ್ಯೂಸ್ ನಲ್ಲಿ ನೋಡಿದಾಗ ತಕ್ಷಣ ವಿಧಾನ ಸಭೆ ಒಳಗಡೆಯೇ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ. ಈ ದುರಂತದ ವೀಡಿಯೋವನ್ನು ನೋಡಿ ಸಿಎಂ ಅವರು ಅಘಾತವನ್ನು ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ:  ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

    ಮಹಿಳೆ ತನ್ನ ಜೀವವನ್ನು ಉಳಿಸಿಕೊಳ್ಳಲು ಮಾಡುತ್ತಿದಂತಹ ಪ್ರಯತ್ನ ನೋಡಿದರೆ ನಿಜವಾಗಲೂ ತುಂಬಾ ನೋವು ತರುವಂತಹದ್ದು, ಎಂದು ಬೊಮ್ಮಾಯಿ ಅವರು ನೋವನ್ನು ವ್ಯಕ್ತಪಡಿಸಿದ್ದಾರೆ. ನಂತರ ಗೃಹಮಂತ್ರಿ ಅವರಿಗೂ ಈ ಸುದ್ದಿ ತಿಳಿಸಿ ತಕ್ಷಣ ಅಲ್ಲಿಂದ ನಾನು ಇಲ್ಲಿಗೆ ಬಂದೆ. ಪೊಲೀಸ್ ಅಧಿಕಾರಿಗಳ ಜೊತೆ ಮತ್ತು ಅಸೋಸಿಯೇಷನ್ ಅಧ್ಯಕ್ಷರ ಅವರ ಜೊತೆ ನಾನು ಮಾತನಾಡಿದ್ದೇನೆ. ಈ ಅಪಾರ್ಟ್‍ಮೆಂಟ್‍ನಲ್ಲಿದ್ದ ಜನರನ್ನು ಜಾನಮಿ ಅಪಾರ್ಟ್‍ಮೆಂಟ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಅಲ್ಲಿ ಅವರೆಲ್ಲರೂ ಸುರಕ್ಷವಾಗಿದ್ದಾರೆ. ನಾಳೆ ಇಲ್ಲಿ ಎಲೆಕ್ಟ್ರಿಕ್ ಸಮಸ್ಯೆ ಸರಿ ಹೋಗುವವರೆಗೂ ಯಾರನ್ನು ಇಲ್ಲಿಗೆ ಬಿಡುತ್ತಿಲ್ಲ. ಎಲ್ಲ ರೂಂ ಗಳನ್ನು ಲಾಕ್ ಮಾಡಲಾಗಿದೆ. ಅಲ್ಲಿ ಸಿಲಿಂಡರ್ ನನ್ನು ಆಫ್ ಮಾಡಿಸಿ, ಪರಿಶೀಲಿಸಲಾಗಿದೆ. ಪೊಲೀಸರು ಕಾವಲಿದ್ದು, ಯಾರನ್ನು ಅಲ್ಲಿಗೆ ಬಿಡುತ್ತಿಲ್ಲ. ಎಲ್ಲ ರೀತಿಯ ಜಾಗರುಕತೆಯನ್ನು ನಾವು ವಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಥಿಯೇಟರ್‍ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    6 ನಿಮಿಷಕ್ಕೆ ಬಂದ ಅಗ್ನಿಶಾಮಕ ದಳ!

    ಬಿಬಿಎಂಪಿಯ ಜಂಟಿ ಆಯುಕ್ತರು ಕೂಡ ಸ್ಥಳದಲ್ಲಿ ಇದ್ದಾರೆ. ಡಿಸಿಪಿ ಅವರು ಕೂಡ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದವರು ಕರೆ ಬಂದ 6 ನಿಮಿಷದ ಬಳಗೆ ಇಲ್ಲಿ ಬಂದು ಅಗ್ನಿ ತಡೆಯಲು ಶ್ರಮಿಸಿದ್ದಾರೆ. ಆದರೆ ಅಪಾರ್ಟ್‍ಮೆಂಟ್‍ನಲ್ಲಿ ಗ್ರೀಲ್ ಹಾಕಿದ್ದರಿಂದ ಆ ಮಹಿಳೆ ಹೊರಗಡೆ ಬರಲು ಆಗಲಿಲ್ಲ. ಇನ್ನೊಬ್ಬರಿಗೆ 82 ವರ್ಷ ವಯಸ್ಸಗಿದ್ದರಿಂದ ಅವರು ಆಚೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಇದು ತುಂಬಾ ದೊಡ್ಡ ದುರಂತ. ಮನಸ್ಸಿಗೆ ನೋವು ತರುವಂತಹದ್ದು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

    ಎಲ್ಲ ಇದ್ದರೂ ಈ ದೊಡ್ಡ ಅಪಘಾತದಿಂದ ಯಾರು ಒಳಗೆ ಹೋಗದ ಸ್ಥಿತಿ ಎದುರಾಗಿತ್ತು. ಈ ಘಟನೆ ಪೂರ್ತಿ ತನಿಖೆಯನ್ನು ಡಿಸಿಪಿ, ಎಸಿಪಿ ಅವರು ಮಾಡುತ್ತಿದ್ದಾರೆ. ತನಿಖೆ ನಂತರ ಇದು ಹೇಗೆ ಸಂಭವಿಸಿದೆ ಎಂದು ಹೇಳಬಹುದು. ಈಗ ನಾವು ಅವರಿಗೆ ಸಾಂತ್ವನ ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ.

  • ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

    ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಆರೋಪಿಗಳಾದ ಸಾಗರ್ ತಾಪ, ಶ್ರೀಧರ್ ಮತ್ತು ನವೀನ್ ಎಂಬ ಮೂವರನ್ನು ಬಂಧಿಸಿದ್ದ ಪೊಲೀಸರು, ಶನಿವಾರ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ತನಿಖೆ ಮುಂದುವೆಸಿದ ಪೊಲೀಸರು ಘಟನೆ ಸಂಬಂಧ ಶಾಸಕ ಸತೀಶ್ ರೆಡ್ಡಿ ಹೇಳಿಕೆ ಪಡೆದುಕೊಂಡಿದ್ದರು. ಈ ವೇಳೆ ಶಾಸಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಸದ್ಯ ಆರೋಪಿಗಳು ಹೇಳಿರುವ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ನನ್ನ ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿ ಹಾಕಿದ್ದರ ಹಿಂದೆ ಕೆಲ ಕಾಣದ ಕೈಗಳ ಕೈವಾಡ ಇದೆ. ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಬೆಂಕಿ ಹಾಕಲಾಗಿದೆ ಅನ್ನೋ ಹೇಳಿಕೆ ಸುಳ್ಳು. ಪೊಲೀಸರು ಸರಿಯಾದ ತನಿಖೆ ನಡೆಸಬೇಕು. ಆಗ ಆಸಲಿ ಕಾರಣ ತಿಳಿಯಲಿದೆ ಅಂತಾ ಪೊಲೀಸರ ಮುಂದೆ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳನ್ನು ಮತ್ತೆ ಬಾಡಿ ವಾರೆಂಟ್ ಮೇಲೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!

    ಶಾಸಕರ ಭೇಟಿಗೆ ಅವಕಾಶ ಕೊಟ್ಟಿಲ್ಲ, ಕೆಲಸವಿಲ್ಲದೇ ಬಡತನದ ಕಾರಣಕ್ಕೆ ಬೇಸತ್ತು ಕೃತ್ಯವೆಸಗಿದ್ದಾರಾ? ಅಥವಾ ಬೇರೆ ಏನಾದರೂ ಕಾರಣ ಇದೆಯಾ? ಆರೋಪಿಗಳ ಬೆನ್ನಿಗೆ ಯಾರಾದರೂ ಇದ್ದಾರಾ ಅನ್ನೋ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

  • ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಕಟೀಲ್

    ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಕಟೀಲ್

    ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾರ್ನಿಂಗ್ ನೀಡಿದ್ದಾರೆ.

    ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇನ್ನೂ ಕೃತ್ಯದ ಹಿಂದೆ ಬೇರೆ ಯಾವುದಾದರೂ ಷಡ್ಯಂತ್ರ ಇರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಸತೀಶ್ ರೆಡ್ಡಿಗೆ ಮತ್ತಷ್ಟು ಭದ್ರತೆವಹಿಸಿ ಎಚ್ಚರಿಕೆಯಿಂದ ಇರಲು ಪೊಲೀಸರು ಸೂಚನೆ ನೀಡಿದ್ದಾರೆ. ಹಾಗಾಗಿ ಮನೆಯ ಆವರಣದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಅಪರಿಚಿತರು ಭೇಟಿಗೆ ಮನೆಯ ಬಳಿ ಬರುವುದನ್ನು ನಿಷೇಧ ಹೇರಲಾಗಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಇಂದು ಸತೀಶ್ ರೆಡ್ಡಿ ಮನೆಗೆ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಧೈರ್ಯ ಹೇಳಿದ್ದು, ಈ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಸಹ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಮಂಗಳೂರಿನ ಕಬಕ ಗ್ರಾಮಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವದ ರಥದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಎಸ್‍ಡಿಪಿಐ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ, ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹೇರಲು ಅವರು ಯಾರು ಎಂದು ಪ್ರಶ್ನಿಸಿದ್ದು, ಈ ಘಟನೆ ಖಂಡನಾರ್ಹವಾಗಿದ್ದು ಈಗಾಗಲೇ ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

  • ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಪ್ರಕರಣ ಸಂಬಂಧ ಒಂದಿಷ್ಟು ಕ್ಲ್ಯೂ ಸಿಕ್ಕಿದೆ: ಕಮಲ್ ಪಂತ್

    ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಪ್ರಕರಣ ಸಂಬಂಧ ಒಂದಿಷ್ಟು ಕ್ಲ್ಯೂ ಸಿಕ್ಕಿದೆ: ಕಮಲ್ ಪಂತ್

    ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಮೇಲ್ನೋಟಕ್ಕೆ ಚಿಕ್ಕದು ಅನಿಸಿದರೂ ಅದರ ವ್ಯಾಪ್ತಿ ದೊಡ್ಡದಿದೆ. ಈ ಸಂಬಂಧ ಈಗಾಗಲೇ ನಮಗೆ ಒಂದಿಷ್ಟು ಕ್ಲ್ಯೂ ಸಿಕ್ಕಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

    ಇಂದು ನಗರದ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು 24 ಗಂಟೆಯಲ್ಲಿ ಹಿಡಿಯುವ ಗಡುವು ಎಲ್ಲಿಂದ ಬಂತು? ಸಿಆರ್‌ಪಿಸಿಯಲ್ಲಿ ಈ ಗಡುವು ಎಲ್ಲಿಯೂ ಇಲ್ಲ. ಮೇಲ್ನೋಟಕ್ಕೆ ಈ ಪ್ರಕರಣ ಚಿಕ್ಕದು ಅನಿಸಿದರೂ. ಇದರ ವ್ಯಾಪ್ತಿ ದೊಡ್ಡದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರು ಮಂದಿ ಪೊಲೀಸರು, ತಜ್ಞರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸಿಸಿಟಿವಿ ತಜ್ಞರು ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ನಮಗೆ ಒಂದಿಷ್ಟು ಕ್ಲ್ಯೂ ಸಿಕ್ಕಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಸ್ಪಷ್ಟ ಕಾರಣ ತಿಳಿಯುತ್ತದೆ ಎಂದಿದ್ದಾರೆ.

    ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಆದರೆ ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಅನಾವರಣ ಸಂಬಂಧ ಗಲಾಟೆ ಎಬ್ಬಿಸಲು ಈ ಕೃತ್ಯ ನಡೆದಿರಬಹುದೇ ಎಂಬ ಶಂಕೆ ಎದ್ದಿದೆ. ಈ ಬಗ್ಗೆ ಸತೀಶ್ ರೆಡ್ಡಿ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಇದೇ ಆಯಾಮದಲ್ಲಿ ತನಿಖೆ ಕೂಡ ನಡೆಸಿದ್ದು, ಈಗಾಗಲೇ ಹಲವು ಅನುಮಾನಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

    ಈ ಘಟನೆ ಸಂಬಂಧ ಶಾಸಕ ಸತೀಶ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, 25ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರನ್ನು ಕೃತ್ಯದಲ್ಲಿ ಭಾಗಿಯಾಗಿರೋದು ಮನವರಿಕೆಯಾಗಿದೆ. ಬೇರೆ ಬೇರೆ ಆಯಾಮಾಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಇಂದು ಸಂಜೆಯೊಳಗೆ ಕಾರುಗಳಿಗೆ ಬೆಂಕಿ ಹಚ್ಚಿದವರ ಬಂಧನ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಇದನ್ನೂ ಓದಿ:ಕಾರುಗಳಿಗೆ ಬೆಂಕಿ ಹಚ್ಚಿದವರನ್ನು ಸಂಜೆಯೊಳಗೆ ಬಂಧನ ಮಾಡೋ ಸಾಧ್ಯತೆ: ಸತೀಶ್ ರೆಡ್ಡಿ

  • ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ – ಓರ್ವ ವಶಕ್ಕೆ

    ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ – ಓರ್ವ ವಶಕ್ಕೆ

    ಬೆಂಗಳೂರು: ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಂಕಿತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಗುರುವಾರ  ನಸುಕಿನ ಜಾವ 1 ಗಂಟೆ 23 ನಿಮಿಷಕ್ಕೆ ಸಂದರ್ಭದಲ್ಲಿ ಸತೀಶ್ ರೆಡ್ಡಿಯ ಮನೆ ಹಿಂಭಾಗದಿಂದ ಆವರಣ ಪ್ರವೇಶಿಸಿದ ದುಷ್ಕರ್ಮಿಗಳು ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

    ಘಟನೆಯಲ್ಲಿ ಫಾರ್ಚುನರ್ ಕಾರು ಸೇರಿದಂತೆ ಎರಡು ಕಾರು ಬೆಂಕಿಗಾಹುತಿ ಆಗಿವೆ. ಕಾರಿನ ಬ್ಯಾಟರಿ ಸ್ಫೋಟಗೊಂಡಾಗ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸುವಷ್ಟರದಲ್ಲಿ ಕಾರುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಮಂತ್ರಿ ಅಶೋಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಶ್ವಾನ ಪಡೆ ಮೂಲಕ ಆರೋಪಿಗಳ ಪತ್ತೆಗೆ ಯತ್ನಿಸಿದ್ದಾರೆ. ಸುಮಾರು 200 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸಿಸಿಬಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಬೊಮ್ಮನಹಳ್ಳಿ ಪೆಟ್ರೋಲ್ ಬಂಕ್‍ನಲ್ಲಿ ಬೈಕಲ್ಲಿ ಬಂದ ಇಬ್ಬರು ಯುವಕರು ಬಾಟಲ್‍ಗೆ ಪೆಟ್ರೋಲ್ ತುಂಬಿಸಿಕೊಂಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇವರೇ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟಿರಬಹುದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಮಹಾದುರಂತದ ಸಮಯದಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಬೆಡ್ ಬ್ಲಾಕಿಂಗ್ ದಂಧೆಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾಕಷ್ಟು ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುವ ವಿಷಯ. ಈ ಕೂಡಲೇ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಂಜಪ್ಪ ಕಾಳೇಗೌಡ, ಹಲವು ವರ್ಷಗಳಿಂದ ಇವರ ಬಳಿ ಆಪ್ತ ಸಹಾಯಕನಾಗಿರುವ ಬಾಬು ಎಂಬಾತನನ್ನು ಹಾಗೂ ಇನ್ನಿತರರನ್ನು ಈಗಾಗಲೇ ಕೇಂದ್ರ ಅಪರಾಧ ದಳ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಬಗ್ಗೆ 200ಕ್ಕೂ ಹೆಚ್ಚು ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಹ ಈಗಾಗಲೇ ಸಲ್ಲಿಸಿದೆ. ಈ ಹಿಂದೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಾರ್ ರೂಂಗೆ ನುಗ್ಗಿ ಶಾಸಕರ ಬೆಂಬಲಿಗರು ಬೆಡ್ ಬ್ಲಾಕಿಂಗ್ ದಂಧೆಗೆ ಬೆಂಬಲ ನೀಡುತ್ತಿಲ್ಲವೆಂಬ ಕಾರಣಕ್ಕಾಗಿ ಕಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ಹಲ್ಲೆಯನ್ನು ಸಹ ನಡೆಸಲು ಪ್ರಯತ್ನಿಸಿ ಧಾಂದಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ ಪ್ರಕರಣ – ಸತೀಶ್ ರೆಡ್ಡಿ ಆಪ್ತನ ಬಂಧನಕ್ಕೆ ಸಿಸಿಬಿ ಸಿದ್ಧತೆ

     

    ಶಾಸಕರ ಆಪ್ತ ಸಹಾಯಕ ಶಾಸಕರ ಬೆಂಬಲವಿಲ್ಲದೆ ಇಂತಹ ದುಷ್ಕೃತ್ಯಗಳಲ್ಲಿ ತೊಡಗುವುದು ಖಂಡಿತ ಸಾಧ್ಯವಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಈ ಪ್ರಕರಣದಲ್ಲಿ ಶಾಸಕರ ಪಾತ್ರ ಏನು ಎಂಬುದನ್ನು ಸರ್ಕಾರ ಹಾಗೂ ತನಿಖಾ ಸಂಸ್ಥೆಯು ರಾಜ್ಯದ ಜನತೆಗೆ ಬಹಿರಂಗಗೊಳಿಸಬೇಕಿದೆ. ಕೇವಲ ಸಣ್ಣಪುಟ್ಟ ವ್ಯಕ್ತಿಗಳನ್ನು ಮಾತ್ರ ಬಂಧಿಸಿ ಪ್ರಭಾವಿ ಶಾಸಕರನ್ನು ಕರೆದು ವಿಚಾರಣೆಯನ್ನೂ ಸಹ ಮಾಡಿಲ್ಲ. ಬಿಜೆಪಿ ಸರ್ಕಾರವು ಅವರದೇ ಪಕ್ಷದ ಶಾಸಕನ ಪರ ನಿಂತಿರುವುದು ದೇಶದ ನ್ಯಾಯದಾನ ವ್ಯವಸ್ಥೆಗೆ ಅಪಮಾನ ತರುವ ವಿಷಯವಾಗಿದೆ. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಕೇಸ್ – ಸತೀಶ್ ರೆಡ್ಡಿ ಆಪ್ತ ಅರೆಸ್ಟ್

    ಬೆಡ್ ಬ್ಲಾಕಿಂಗ್ ನಂತಹ ಘೋರಾತಿಘೋರ ಅಪರಾಧ ಕೃತ್ಯದಿಂದ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಇವರುಗಳ ಸಾವಿಗೆ ಸೂಕ್ತ ನ್ಯಾಯವನ್ನು ಒದಗಿಸುವ ಇರಾದೆ ಹಾಗೂ ಕಿಂಚಿತ್ತು ಕಾಳಜಿ ಏನಾದರೂ ಸರ್ಕಾರಕ್ಕೆ ಇದ್ದಲ್ಲಿ ಈ ಕೂಡಲೇ ಸತೀಶ್ ರೆಡ್ಡಿ ಅವರನ್ನು ಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರಕರಣವು ಪ್ರಭಾವಿಗಳ ಒತ್ತಡದಿಂದ ಸಂಪೂರ್ಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.