Tag: satish ninasum

  • ‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ಸ್ಯಾಂಡಲ್‌ವುಡ್‌ನ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ (Rachita Ram) ಹಾಗೂ ಸತೀಶ್ ನೀನಾಸಂ (Satish Ninasam) ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ‘ಅಯೋಗ್ಯ 2’ ಸಿನಿಮಾಗಿ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಒಂದಾಗಿದ್ದಾರೆ. ಸೂಪರ್ ಹಿಟ್ ‘ಅಯೋಗ್ಯ’ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ.

    ಇಂದು (ಡಿ.11) ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ‘ಅಯೋಗ್ಯ 2’ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಡೈರೆಕ್ಟರ್ ಮಹೇಶ್ ಕುಮಾರ್ ಸಾರಥ್ಯದಲ್ಲಿ ‘ಅಯೋಗ್ಯ 2’ (Ayogya 2) ಮೂಡಿ ಬರುತ್ತಿದ್ದು‌, ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್‌ನಲ್ಲಿ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ:ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ಇನ್ನೂ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ‘ಅಯೋಗ್ಯ 2’ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯರ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು.

    ಪೂಜೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್, ಅಯೋಗ್ಯ  2 ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದ್ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

    ನೀನಾಸಂ ಸತೀಶ್ ಮಾತನಾಡಿ, ಅಯೋಗ್ಯ 2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ ಅವರು ಉತ್ತಮ ನಿರ್ಮಾಪಕರು. ಅಯೋಗ್ಯ 2 ಸಿನಿಮಾ ಕನ್ನಡ ಸಿನಿಮಾರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ ಎಂದು ಹೇಳಿದರು.

    ಇನ್ನೂ ನಟಿ ರಚಿತಾ ರಾಮ್ ಮಾತನಾಡಿ, ‘ಕಳೆದ 6 ವರ್ಷದ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಆಗಿತ್ತು. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಮ್ ಅವರ ಆಶೀರ್ವಾದವಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಯೋಗ್ಯ 2 ಮಾಡಬೇಕು ಅಂದಾಗ ಮೊದಲು ತಲೆಗೆ ಬಂದಿದ್ದು ಏನಮ್ಮಿ ಏನಮ್ಮಿ ಹಾಡಿಗೆ ರಿಪ್ಲೇಸ್ ಯಾವುದು ಅಂತ ಆದರೆ ಆ ಹಾಡಿಗೆ ಯಾವುದೇ ರಿಪ್ಲೇಸ್ ಇಲ್ಲ. ನಾನು ಮತ್ತು ಸತೀಶ್ ಟಾಮ್ ಅಂಡ್ ಜೆರ್ರಿ ಹಾಗೆ ಕಿತ್ತಾಡುತ್ತಿರುತ್ತೇವೆ ಎಂದು ಹೇಳಿದರು. ಇನ್ನೂ ಈ ಸಿನಿಮಾದಲ್ಲಿ ರಚಿತಾ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ರಚಿತಾ, ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿಯೇ ಇರುತ್ತೇನೆ ಎಂದರು.

    ನಿರ್ಮಾಪಕ ಎಂ ಮುನೇಗೌಡ ಮಾತನಾಡಿ, ‘ಕನ್ನಡ ಸಿನಿಮಾರಂಗಕ್ಕೆ ಉತ್ತಮ ಸಿನಿಮಾವಾಗಲಿದೆ. ಮಹೇಶ್ ಬಂದು ಅಯೋಗ್ಯ 2 ಮಾಡಬೇಕು ಅಂದಾಗೆ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಯೋಗ್ಯ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ರಚಿತಾ ಮೇಡಮ್ ಕೂಡ ಸಿನಿಮಾ ಮಾಡಿ ಎಂದರು. ಎಲ್ಲಾ ಉತ್ತಮ ಕಲಾವಿದರಿದ್ದಾರೆ ಎಂದು ಹೇಳಿದರು.

    6 ವರ್ಷದ ಹಿಂದೆ ಬಂದಿದ್ದ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದರು. ಈಗ ಮತ್ತದೇ ತಂಡ ‘ಅಯೋಗ್ಯ 2’ ಸಿನಿಮಾ ಮೂಲಕ‌ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಅಯೋಗ್ಯ 2ನಲ್ಲಿ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಮೊದಲ ಭಾಗದಲ್ಲಿ ಇದ್ದವರೇ ಮುಂದುವರೆಯುತ್ತಿರುವುದು ವಿಶೇಷ. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಶಿವರಾಜ್ ಕೆ ಆರ್ ಪೇಟೆ ಪಾರ್ಟ್ 2ನಲ್ಲೂ ಇದ್ದಾರೆ. ಈ ಬಾರಿ ಮಂಜು ಪಾವಗಡ ಕೂಡ ಅಯೋಗ್ಯ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಇನ್ನೂ ಮಾಸ್ತಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಕ್ಯಾಮರಾ, ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಗಿರಲಿದೆ.

    ‘ಅಯೋಗ್ಯ’ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ಕುತೂಹಲ ಹಾಗೂ ನಿರೀಕ್ಷೆಗಳೊಂದಿಗೆ ಅಯೋಗ್ಯ 2 ಸೆಟ್ಟೇರಿದೆ. ಮಂಡ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

  • ರಚ್ಚು- ಸತೀಶ್ ನೀನಾಸಂ ಕಡೆಯಿಂದ ಗುಡ್ ನ್ಯೂಸ್- ‘ಮ್ಯಾಟ್ನಿ’ ಚಿತ್ರದ ಅಪ್‌ಡೇಟ್

    ರಚ್ಚು- ಸತೀಶ್ ನೀನಾಸಂ ಕಡೆಯಿಂದ ಗುಡ್ ನ್ಯೂಸ್- ‘ಮ್ಯಾಟ್ನಿ’ ಚಿತ್ರದ ಅಪ್‌ಡೇಟ್

    ‘ಅಯೋಗ್ಯ’ (Ayogya) ಸಿನಿಮಾದ ಸೂಪರ್ ಹಿಟ್ ಜೋಡಿ ನೀನಾಸಂ ಸತೀಶ್- ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಮತ್ತೆ ಜೊತೆಯಾಗಿ ಬರೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಸಿನಿಮಾದ ಏನು ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಸಿನಿಮಾ ತಂಡ ಗುಡ್ ನ್ಯೂಸ್ ಕೊಟ್ಟಿದೆ. ಮ್ಯಾಟ್ನಿ (Matinee) ಸಿನಿಮಾ ರಿಲೀಸ್ ಯಾವಾಗ? ಸಿನಿಮಾ ಸಾಂಗ್, ಟೀಸರ್, ಟ್ರೈಲರ್ ರಿಲೀಸ್ ಆಗಲಿ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ‌ ಈಗ ಸಿಹಿಸುದ್ದಿ ಕೊಟ್ಟಿದ್ದಾರೆ. ಏನದು? ಇಲ್ಲಿದೆ ಅಪ್‌ಡೇಟ್.

    ಏನಮ್ಮಿ ಏನಮ್ಮಿ ಅಂತಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ಜೋಡಿ ಸತೀಶ್ ನೀನಾಸಂ- ರಚಿತಾ ರಾಮ್ ಫೇರ್ ಮತ್ತೆ ಮ್ಯಾಟ್ನಿ ಸಿನಿಮಾದ ಮೂಲಕ ಒಂದಾಗುತ್ತಿದೆ. ಮನೋಹರ್ ಕಾಂಪಳ್ಳಿ ನಿರ್ದೇಶನದ ‘ಮ್ಯಾಟ್ನಿ’ ಸಿನಿಮಾ ಮೂಡಿ ಬಂದಿದೆ. ಸತೀಶ್- ರಚ್ಚು ʼಮ್ಯಾಟ್ನಿʼ ಚಿತ್ರೀಕರಣ ಕೂಡ ಮುಗಿದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ಸಮನ್ವಿ ಕುಟುಂಬದಲ್ಲಿ ಸಂತಸ- ಮಗನ ಜೊತೆಗಿನ ಫೋಟೋ ಹಂಚಿಕೊಂಡ ಅಮೃತಾ

    ಸತೀಶ್ ನೀನಾಸಂಗೆ(Satish Ninasum) ರಚಿತಾ ರಾಮ್ ಮಾತ್ರ ನಾಯಕಿಯಲ್ಲ, ಅದಿತಿ ಪ್ರಭುದೇವ (Aditi Prabhudeva) ಕೂಡ ನಟಿಸಿದ್ದಾರೆ. ರಚಿತಾ ರಾಮ್, ಅದಿತಿ ಪಾತ್ರಕ್ಕೂ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಮ್ಯಾಟ್ನಿ ಮೂಲಕ ಡಿಫರೆಂಟ್ ಆಗಿರೋ ಕಥೆ ಹೇಳೋದ್ದಕ್ಕೆ ಈ ಸ್ಟಾರ್ಸ್ ರೆಡಿಯಾಗಿದ್ದಾರೆ. ಮ್ಯಾಟ್ನಿ ಶೋ ಯಾವಾಗ ಎಂಬುದೇ ಈಗ ಪ್ರಶ್ನೆಯಾಗಿದೆ. ಈ ಎಲ್ಲದ್ದರ ನಡುವೆ ‘ಮ್ಯಾಟ್ನಿ’ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಡ್ ನೀಡಿದ್ದಾರೆ.

    ಜುಲೈ 17ರಂದು ಮ್ಯಾಟ್ನಿ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡೊದಾಗಿ ಸಿನಿಮಾತಂಡ ಹಂಚಿಕೊಂಡಿತ್ತು. ಅದರಂತೆಯೇ ಮ್ಯಾಟ್ನಿ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ ಆಗೋದ್ದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪಾರ್ವತಿ ಗೌಡ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಫಸ್ಟ್ ಸಾಂಗ್ ಔಟ್ ಆಗುತ್ತಿದೆ. ರಚ್ಚು – ಸತೀಶ್ ನೀಸಾಸಂ ರೊಮ್ಯಾನ್ಸ್ ನೋಡೋದ್ದಕ್ಕೆ ಕೌಂಟ್ ಶುರುವಾಗಿದೆ. ಜುಲೈ 21ರಂದು ಸಂಜೆ 06:03ಕ್ಕೆ ಮ್ಯಾಟ್ನಿ ಸಾಂಗ್ ರಿವೀಲ್ ಆಗಲಿದೆ. ಒಟ್ನಲ್ಲಿ ‘ಅಯೋಗ್ಯ’ ನಂತರ ಮ್ಯಾಟ್ನಿ ಜೋಡಿಯನ್ನ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸತೀಶ್ ನೀನಾಸಂ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ಸ್‌: ದಾಖಲೆ ರೀತಿಯಲ್ಲಿ ಅಭಿಮಾನಿಗಳಿಗೆ ಉಡುಗೊರೆ

    ಸತೀಶ್ ನೀನಾಸಂ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ಸ್‌: ದಾಖಲೆ ರೀತಿಯಲ್ಲಿ ಅಭಿಮಾನಿಗಳಿಗೆ ಉಡುಗೊರೆ

    ಲೂಸಿಯಾ, ಬ್ಯೂಟಿಫುಲ್ ಮನಸುಗಳು, ಅಯೋಗ್ಯ, ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ನಟ ಸತೀಶ್ ನೀನಾಸಂ ಹುಟ್ಟು ಹಬ್ಬಕ್ಕೆ ಒಂದೇ ದಿನ ಬಾಕಿಯಿದ್ದು, ದಾಖಲೆಯ ರೀತಿಯಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆ.

    ಅಮೋಘ ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಿಟ್ಟಿ ನೆಲೆ ಕಂಡಿರುವ ಪ್ರತಿಭಾವಂತ ನಟ ಸತೀಶ್ ನೀನಾಸಂ (ಜೂ.20)ಕ್ಕೆ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ. ಸತೀಶ್ ನಟನೆಯ ಸಿನಿಮಾ ಅಪ್‌ಡೇಟ್ ಜತೆಗೆ ಚಿತ್ರದ ಲುಕ್, ಟೀಸರ್ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ.

    ಇನ್ನು ಅಯೋಗ್ಯ ಸೂಪರ್ ಸಕ್ಸಸ್ ನಂತರ ರಚಿತಾ ರಾಮ್ ಜತೆ ಸತೀಶ್ ನೀನಾಸಂ ನಟಿಸಿರುವ `ಮ್ಯಾಟ್ನಿ’, ಶ್ರದ್ಧಾ ಶ್ರೀನಾಥ್ ಜತೆ `ಡಿಯರ್ ವಿಕ್ರಮ್’, `ದಸರಾ’, ಹರಿಪ್ರಿಯಾ ಜತೆ `ಪೆಟ್ರೋಮ್ಯಾಕ್ಸ್’ ಮತ್ತು ತಮಿಳಿನ ಸಿನಿಮಾದಲ್ಲೂ ನಟಿಸಿದ್ದು, ಈ ಎಲ್ಲಾ ಚಿತ್ರದ ಪೋಸ್ಟರ್ಸ್ ಸತೀಶ್ ಹುಟ್ಟುಹಬ್ಬದಂದು ರಿವೀಲ್ ಆಗಲಿದೆ.‌ ಇದನ್ನೂ ಓದಿ: ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

    ಕಳೆದ ವರ್ಷ ಕೊರೊನಾ ನಿಮಿತ್ತ ನಟ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷವು ವಯಕ್ತಿಕ ಕಾರಣಗಳಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟಹಬ್ಬಕ್ಕೆ ಆಚರಿಸಿಕೊಳ್ಳಲಾಗುತ್ತಿಲ್ಲ. ಇದೀಗ ಬರ್ತಡೇ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಚಿತ್ರದ ಹೊಸ ಲುಕ್ ಮೂಲಕ ಗುಡ್ ನ್ಯೂಸ್ ಕೊಡ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಿದ್ದಾರೆ.

    Live Tv