ಬೆಂಗಳೂರು: ಬೇರೆ ಧರ್ಮಕ್ಕೆ ಮತಾಂತರವಾದ್ರೆ ಮುಗೀತು. ಆ ಧರ್ಮದ ಜೊತೆ ಜಾತಿ ಸೇರಿಸುವಂತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟನೆ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಜಾತಿಗಣತಿ ವಿಚಾರಕ್ಕೆ ಸದ್ಯ ಯಾವುದೇ ಗೊಂದಲಗಳಿಲ್ಲ. ಎಕ್ಸ್ಟ್ರಾ ಜಾತಿ ಸೇರಿಸಿದ್ದು ಗೊಂದಲವಾಗಿತ್ತು. ಸ್ಕೆಡ್ಯುಲ್ ಲಿಸ್ಟಲ್ಲಿ ಇರುವ ಜಾತಿಗಳನ್ನ ಮಾತ್ರ ಬರೆಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆ.22ರಿಂದ ನಡೆಯಬೇಕಿದ್ದ ಜಾತಿ ಜನಗಣತಿ ಮರುಸಮೀಕ್ಷೆ ಮುಂದೂಡಿಕೆ?
ಕ್ರಿಶ್ಚಿಯನ್ ಅಥವಾ ಬೇರೆ ಧರ್ಮಕ್ಕೆ ಮತಾಂತರವಾದ್ರೆ ಮುಗೀತು. ಆ ಧರ್ಮವನ್ನಷ್ಟೇ ಗಣತಿಯಲ್ಲಿ ಬರೆಸಬೇಕು. ಕ್ರಿಶ್ಚಿಯನ್ ಜೊತೆಗೆ ಜಾತಿ ಸೇರಿಸುವಂತಿಲ್ಲ. ಸೆ.22 ಕ್ಕೆ ಜಾತಿಗಣತಿ ಶುರುವಾಗುತ್ತೆ. ಜಾತಿಗಣತಿ ಮುಂದೂಡಿಕೆಯಾಗಲ್ಲ ಎಂದು ಹೇಳಿದ್ದಾರೆ.
ಎಕ್ಸ್ಟ್ರಾ ಜಾತಿಗಳನ್ನ ಕೈಬಿಡಲು ಶಿವರಾಜ್ ತಂಗಡಗಿ ಒಪ್ಪಿದ್ದಾರೆ. ಏಳೆಂಟು ಸಚಿವರಿಗೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಸಿಎಂ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
– ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕನಿಗೆ ರಸ್ತೆಯಲ್ಲೇ ಕ್ಲಾಸ್
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಮಾಜಿ ಸಂಸದ ರಮೇಶ ಕತ್ತಿ (Ramesh Katti) ನಡುವಿನ ಡಿಸಿಸಿ ಬ್ಯಾಂಕ್ ಚುನಾವಣೆಯ (DCC Bank Election) ಫೈಟ್ ಜೋರಾಗಿದ್ದು, ಇಬ್ಬರ ನಡುವಿನ ತಿಕ್ಕಾಟದಿಂದ ಶಾಂತವಾಗಿದ್ದ ಹುಕ್ಕೇರಿ ಕ್ಷೇತ್ರದಲ್ಲಿ ಗಲಾಟೆ ನಡೆದಿದೆ.
ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ರಾಜೇಂದ್ರ ಪಾಟೀಲ ವಿರುದ್ಧ ಅಕ್ಟೋಬರ್ 19 ರಂದು ಚುನಾವಣೆ ನಡೆಯಲಿದೆ. ಒಂದು ಪ್ರಾಥಮಿಕ ಕೃಷಿ ಪತ್ತಿನಿಂದ ಒಂದು ಮತ ಚಲಾಯಿಸುವ ಅಧಿಕಾರ ಇರುತ್ತದೆ. ಹುಕ್ಕೇರಿ ತಾಲೂಕಿನಲ್ಲಿ ಒಟ್ಟು 90 ಕೃಷಿ ಪತ್ತಿನ ಸಂಘಗಳಿದ್ದು ಒಟ್ಟು 90 ಮತಗಳ ಚಲಾವಣೆ ಆಗಬೇಕಿದೆ.
ಈ ಕಾರಣಕ್ಕೆ ಪ್ರತಿನಿತ್ಯ ಹುಕ್ಕೇರಿ ತಾಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರ ಬಹುಮತ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಇದಕ್ಕಾಗಿ ಸತೀಶ್ ಜಾರಕಿಹೊಳಿ ಎದುರೇ ಗಲಾಟೆ ಆಗಿದೆ. ಜಾರಕಿಹೊಳಿ ಬೆಂಬಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನ ಪತ್ನಿ ನಿರ್ದೇಶಕನ ಕೊರಳು ಪಟ್ಟಿ ಹಿಡಿದು ಎಳೆದಾಡಿ ಕಪಾಳ ಮೋಕ್ಷ ಮಾಡಿ ರಸ್ತೆಯಲ್ಲೇ ತರಾಟೆ ತೆಗೆದುಕೊಂಡಿದ್ದಾಳೆ.
ಮದಿಹಳ್ಳಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿಗೆ ಪತ್ನಿ ಲಗಮವ್ವ ಏಟು ನೀಡಿದ್ದಾಳೆ. ಗಂಡ ಹೆಂಡತಿ ಜಗಳ ಬಿಡಿಸಲು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬಂದ ಮಾಜಿ ಸಂಸದ ರಮೇಶ್ ಕತ್ತಿ ಕೂಡ ಬಂದಿದ್ದರಿಂದ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿತ್ತು.
ಬೆಳವಣಿಗೆಗಳ ನಡುವೆ ಬೆಲ್ಲದ ಬಾಗೇವಾಡಿ ಗ್ರಾಮದ ಕತ್ತಿ ಒಡೆತನದ ವಿಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ತಡರಾತ್ರಿ ಹೈಡ್ರಾಮಾ ನಡೆಯಿತು. ಪಾಶ್ಚಾಪೂರ ಗ್ರಾಮದ 6 ಪಿಕೆಪಿಎಸ್ ನಿರ್ದೇಶಕರನ್ನು ಯಮಕನಮರಡಿ ಪೊಲೀಸರು ಬಂದು ವಾಪಸ್ ಪಾಶ್ಚಾಪೂರ ಗ್ರಾಮಕ್ಕೆ ಕರೆ ತಂದಿದ್ದಾರೆ.
ಕೆಲದಿನಗಳಿಂದ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಯಮಕನಮರಡಿ ಪಿಐ ಜಾವೇದ ಮುಶಾಪೂರೆ ವಿಎಸ್‌ಎಲ್ ಕಾರ್ಖಾನೆಗೆ ತೆರಳಿ ವಾಪಸ್ ಕಳಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಯಾವುದೇ ಕಾರಣಕ್ಕೂ ವಾಪಸ್ ಕಳುಹಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು ಹಾಗೂ ರಮೇಶ ಕತ್ತಿ ನಡುವೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ನಿರ್ದೇಶಕರನ್ನು ವಾಪಸ್ ಪಾಶ್ಚಾಪೂರ ಗ್ರಾಮಕ್ಕೆ ಕರೆ ತಂದು ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ತಿಕ್ಕಾಟ ತಾರಕಕ್ಕೇರುತ್ತಿದ್ದು, ಮುಂದೆ ಬೆಳಗಾವಿ ಜಿಲ್ಲೆಯಲ್ಲಿ ಈ ಎರಡು ಕುಟುಂಬಗಳ ರಣಯುದ್ಧ ಹೊಸ ಅಧ್ಯಾಯ ಬರೆಯುವದರಲ್ಲಿ ಸಂಶಯವೇ ಇಲ್ಲ.
ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ (DCC Bank Election) ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಕಣದಿಂದ ಹಿಂದೆ ಸರಿದಿದ್ದಾರೆ.
ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸತೀಶ ಜಾರಕಿಹೊಳಿಯವರ (Satish Jarkiholi) ಮನವೊಲಿಕೆ ಹಿನ್ನೆಲೆಯಲ್ಲಿ ಚುನಾವಣೆ ಕಣದಿಂದ ಚನ್ನರಾಜ್ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ಇದನ್ನೂಓದಿ: ಬೆಂಗಳೂರು | 2 ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ –ಪತಿ ಅರೆಸ್ಟ್
ಈ ಬಗ್ಗೆ ಅಧಿಕೃತವಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಕಳೆದ ನಾಲ್ಕೈದು ತಿಂಗಳಿಂದ ಖಾನಾಪುರ ತಾಲೂಕಿನಿಂದ ಚನ್ನರಾಜ್ ಹಟ್ಟಿಹೊಳಿ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಖಾನಾಪುರದ ಪಿಕೆಪಿಎಸ್ ನಿರ್ದೇಶಕರ ಮನ ಗೆಲ್ಲಲು ಚನ್ನರಾಜ್ ಯಶಸ್ವಿಯಾಗಿದ್ದರು ಜಿಲ್ಲೆಯ ರಾಜಕಾರಣ ಹಾಗೂ ರಾಜಕೀಯ ದೃಷ್ಟಿಯಿಂದ ಚನ್ನರಾಜ್ ಸ್ಪರ್ಧೆಯಿಂದ ಹಿಂಪಡೆಯಲಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಕಣದಿಂದ ಚನ್ನರಾಜ್ ಹಿಂದೆ ಸರಿದಿದ್ದೇಕೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ: ಮಾಜಿ ಸಚಿವ ಕೆ ಎನ್ ರಾಜಣ್ಣ (KN Rajanna) ಅವರನ್ನು ಸಚಿವರ ಸ್ಥಾನದಿಂದ ವಜಾ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರಾಜಣ್ಣ ಅವರ ಕುರಿತು ಮಾತನಾಡಲು ಸಚಿವರು ಹಿಂದೇಟು ಹಾಕಿದ್ದಾರೆ. ರಾಜಕೀಯ ವಿಷಯದ ಕುರಿತು ಏನೂ ಚರ್ಚೆ ಬೇಡ ಎಂದು ಹೇಳಿದ ಅವರು, ನಾಳೆ ನಾಡಿದ್ದು ಸಮಯ ಇದೆ. ಇವತ್ತು ಒಂದು ದಿನ ಬೆಡ್ ರೆಸ್ಟ್ ಇದೆ ಎಂದಿದ್ದಾರೆ. ಇದನ್ನೂಓದಿ: ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಆಗುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ಏನು ಬರುತ್ತದೋ ಅದೇ ಅಂತಿಮ ಎಂದು ತಿಳಿಸಿದರು.
ಬೆಂಗಳೂರು: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ರಾಜಕೀಯದ ಪಾಠ ಹೇಳಿದ್ದಾರೆ.
ರಾಜಣ್ಣರನ್ನ (K N Rajanna) ಸಂಪುಟದಿಂದ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣರನ್ನ ವಜಾ ಮಾಡಿರುವುದು ಹೈಕಮಾಂಡ್‌ನ ನಿರ್ಧಾರ. ಅದರ ಬಗ್ಗೆ ರಾಜಣ್ಣ ಅವರೇ ಹೇಳಿದ್ದಾರೆ. ದೆಹಲಿಗೆ ಹೋಗೋದಾಗಿ ಅವರೇ ಹೇಳಿದ್ದಾರೆ. ಆಮೇಲೆ ಪಿತೂರಿ ಅಂತ ಹೇಳಿದ್ದಾರೆ. ಹೈಕಮಾಂಡ್ ಹತ್ರ ಹೋಗಿ ಅವರು ಮಾತಾಡ್ತಾರೆ. ವಜಾದ ಬಗ್ಗೆ ವ್ಯಾಖ್ಯಾನ ಮಾಡೋಕೆ ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ
ಇದನ್ನ ಸಮುದಾಯಕ್ಕೆ ಮಾಡಿದ ಮೋಸ ಅಂತ ಹೇಳಲಾಗೊಲ್ಲ. ಏನು ಅಂತ ರಾಜಣ್ಣ ಮುಂದೆ ಹೇಳ್ತೀನಿ ಅಂದಿದ್ದಾರೆ. ಮುಂದೆ ನೋಡೊಣ.ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ.ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ದೆಹಲಿಗೆ ರಾಜಣ್ಣ ಹೋಗ್ತೀನಿ ಅಂತ ಹೇಳಿದ್ದಾರೆ. ಆಗ ಎಲ್ಲವೂ ಸರಿ ಹೋಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು
ಇದು ನಮ್ಮ ಪಕ್ಷದ ನಿರ್ಧಾರ ವಿಪಕ್ಷಗಳು ಯಾಕೆ ಮಾತಾಡ್ತಾರೆ. ಸಿಎಂ ಅವರು ಸ್ಪಷ್ಟನೆ ಕೊಡ್ತಾರೆ. ದೆಹಲಿಗೆ ಹೋದ ಮೇಲೆ ಎಲ್ಲವೂ ತಿಳಿಯಾಗಬಹುದು. ರಾಜಕೀಯದಲ್ಲಿ ಹುಷಾರಾಗಿ ಇರಬೇಕು. ಇಲ್ಲದೆ ಹೋದ್ರೆ ಹೀಗೆ ಆಗುತ್ತದೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರೋದು ಸಾಮಾನ್ಯ ಎಂದು ಹೇಳಿದ್ದಾರೆ.
ಸೆಟಲ್‌ಮೆಂಟ್ ಪಾಲಿಟಿಕ್ಸ್ ಇದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದೆಲ್ಲವೂ ಇರುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದ್ರೆ ಹೀಗೆ ಆಗುತ್ತದೆ. ಹೈಕಮಾಂಡ್ ಅನ್ನು ಮನವೊಲಿಸುವ ಪ್ರಯತ್ನವನ್ನು ಮುಂದೆ ರಾಜಣ್ಣ ಮಾಡ್ತಾರೆ. ಆಗ ಸರಿ ಹೋಗಬಹುದು ಎಂದಿದ್ದಾರೆ.
– ಸೆಪ್ಟೆಂಬರ್ ಕ್ರಾಂತಿ ಗೊತ್ತಿಲ್ಲ, 3ನೇ ಕ್ರಾಂತಿ ಆಗಬಹುದು!
ಹುಬ್ಬಳ್ಳಿ: ನಾನು ಸಿಎಂ ಆಗೋಕೆ ಗುರು ಬಲ, ತಾರಾ ಬಲ ಬೇಕು, ಜೊತೆಗೆ ಶನಿಕಾಟ ಕಡಿಮೆ ಆಗ್ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿ, ನಾನು ಸಿಎಂ ಆಗಲು ಗುರುಬಲ, ತಾರಾ ಬಲ ಕೂಡಬೇಕು. ಶನಿಕಾಟ ಕಡಿಮೆಯಾಗಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿ ಸಮಸ್ಯೆ ಇವೆ. ನನಗೆ ಶನಿಕಾಟ ಇದೆ ಎಂದಿದ್ದಾರೆ.
ಸಿಎಂ ದೆಹಲಿ ಭೇಟಿ ವಿಚಾರವಾಗಿ, ಯಾವುದೇ ನಿಗಮ ಮಂಡಳಿ ನೇಮಕ ಪೈನಲ್ ಮಾಡುವುದಾದರೂ ರಾಹುಲ್ ಗಾಂಧಿಯವರಿಗೆ ಹೇಳಿ ಮಾಡ್ತಾರೆ. ವಾರಕ್ಕೊಮ್ಮೆ ದೆಹಲಿಗೆ ಹೋದರೂ ಕಡಿಮೆ. ನಿಗಮ ಮಂಡಳಿ ಚರ್ಚೆಗೆ ಹೋಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ಅಜೆರ್ಂಟ್ ಇಲ್ಲ. ನಮ್ಮ ಅಭಿಪ್ರಾಯ ನಾವು ಹೇಳಿರಬಹುದು. ಆದರೆ ಯಾವುದು ಸೂಕ್ತ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಎರಡು ಹುದ್ದೆ ಇವೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜಣ್ಣ ಅವರನ್ನು ಭೇಟಿಯಾಗಿ ಕೇಳ್ತೇನೆ. ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು. ಸಿಎಂ ಮತ್ತು ಕೆಪಿಸಿಸಿ ವಿಚಾರ ಬಿಟ್ಟು ಮೂರನೇ ಕ್ರಾಂತಿ ಆಗಬಹುದು ಎಂದಿದ್ದಾರೆ.
ಯತೀಂದ್ರ ಹೇಳಿಕೆ ವಿಚಾರವಾಗಿ, ಮಹಾರಾಜರು ಸಮಾಜ ಸುಧಾರಕರು. ಸಿದ್ದರಾಮಯ್ಯ ಕೂಡಾ ಸಮಾಜ ಸುಧಾರಕರು. ಕಳೆದ ಮೂವತ್ತು ವರ್ಷದಲ್ಲಿ ಸಿದ್ದರಾಮಯ್ಯ ಅನೇಕ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಹೋಲಿಕೆ ಮಾಡಿರಬಹುದು. ಅವರ ವ್ಯಕ್ತಿತ್ವ ಅವರಿಗೆ ಇರುತ್ತೆ. ಇವರ ವ್ಯಕ್ತಿತ್ವ ಇವರಿಗೆ ಇರುತ್ತದೆ. ಇದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.
ವಿಜಯಪುರ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಎಸ್‌ಐಟಿ (SIT) ರಚನೆಯಾಗಿದೆ, ಪೊಲೀಸರು ಕೆಲಸ ಮಾಡ್ತಿದ್ದಾರೆ, ಮಾಡಲು ಬಿಡಿ. ಪ್ರಕರಣದ ತನಿಖೆಯನ್ನ ರಾಜಕೀಕರಣಗೊಳಿಸಬೇಡಿ. ಅಡ್ವಾನ್ಸ್ ಜಡ್ಜ್ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶವಿದೆ, ಅದು ಹೊರಗೆ ಬರುತ್ತದೆ ಎಂದರು. ಇನ್ನೂ ಈ ಕುರಿತು ಬಿಜೆಪಿಯವರು ಏನಾದರೂ ಹಬ್ಬಿಸೋದು ಕಾಮನ್. ಚುನಾವಣೆ ಸಮಯದಲ್ಲಿಯೂ 6 ತಿಂಗಳು ಇರುವಾಗ ಶುರು ಮಾಡುತ್ತಾರೆ. ಆದರೆ ಈಗ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ. ಇದೇನು ಹೊಸದಲ್ಲ, ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಎಂದಿದ್ದರು. ಸಿಬಿಐ, ಎಸ್‌ಐಟಿ ರಚನೆ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದರು.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ
ಇದೇ ವೇಳೆ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ. ಬಿಜೆಪಿಯವರು ನಮಗೆ ಕೇವಲ 5 ಕೋಟಿ ರೂ. ಕೊಟ್ಟಿದ್ದರು. ನಾವು ಅವರಿಗಿಂತ ಹೆಚ್ಚಿಗೆ ಕೊಟ್ಟಿದ್ದೇವೆ ಎಂದು ಟಾಂಗ್ ಕೊಟ್ಟರು.
ಕೆಪಿಸಿಸಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಅದು ನಮ್ಮ ಹಂತದಲ್ಲಿ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದನ್ನು ನಾವು ಹೇಳೋಕೆ ಆಗಲ್ಲ. ಕಾದು ನೋಡೋಣ ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ವಿಚಾರವಾಗಿ ಮಾತನಾಡಿ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ಸಿಎಂ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ. ಜಾಗ ಖಾಲಿ ಇಲ್ಲ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ, ನಾವೇನು ಹೇಳಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್
ಬೆಂಗಳೂರು: ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ (CM Siddaramaiah) ಕ್ಲಿಯರ್ ಮೆಸೇಜ್‌ಗೆ ಆಪ್ತರು ದಿಲ್ ಖುಷ್ ಆಗಿದ್ದಾರೆ. ಬೆಂಗಳೂರಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಕ್ಲೋಸ್ ಡೋರ್ ಮೀಟಿಂಗ್ ನಡೆಸಿದರು. ಬಳಿಕ ಒಂದೇ ಕಾರಿನಲ್ಲಿ ಒಟ್ಟಿಗೆ ಸದಾಶಿವನಗರ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಷ್ಟೇ ಅಲ್ಲ ಜಮೀರ್, ದಿನೇಶ್ ಗುಂಡೂರಾವ್, ಪರಮೇಶ್ವರ್, ಈಶ್ವರ್ ಖಂಡ್ರೆ ಕೂಡ ಪ್ರತ್ಯೇಕವಾಗಿ ಖರ್ಗೆ ಭೇಟಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಮ್ಯಾಚ್ ಕ್ಲೋಸ್ ಆಗಿದೆ. ಸಿದ್ದರಾಮಯ್ಯ ಈಗ ಹೇಳಿಕೆ ಕೊಡುವ ಅವಶ್ಯಕತೆ ಇತ್ತು ಅಂತಾ ಟಕ್ಕರ್ ಕೊಟ್ರೆ, ಸಚಿವ ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಗಿ ಆಯ್ಕೆ ಆಗಿದ್ದಾg., ಸಿದ್ದರಾಮಯ್ಯ ಅವರೇ ಕ್ಲಿಯರ್ ಆಗಿ ಹೇಳಿದ್ದಾರೆ, ಅಲ್ಲಿಗೆ ಬದಲಾವಣೆ ಚರ್ಚೆ ಎಂಡ್ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (DK Shivakumar) ಸಿಎಂ ಆಗಲು ಅವಕಾಶ ಮಾಡಿಕೊಡಬೇಕು ಎಂಬ ರಂಭಾಪುರಿ ಶ್ರೀಗಳ (Rambhapuri Shree) ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ರಂಭಾಪುರಿ ಶ್ರೀಗಳಿಗೂ ಅದಕ್ಕೂ ಏನು ಸಂಬಂಧ? ಅದು ಪಾರ್ಟಿಗೆ ಸಂಬಂಧಪಟ್ಟ ವಿಚಾರ. ಸ್ವಾಮೀಜಿಗಳಿಗೂ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧ ಇರುವುದಿಲ್ಲ. ಅವರ ಕಾರ್ಯವ್ಯಾಪ್ತಿ ಬೇರೆ ನಮ್ಮ ಕಾರ್ಯ ವ್ಯಾಪ್ತಿ ಬೇರೆ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್ ಅಶೋಕ್
ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್. ಸ್ವಾಮೀಜಿಗಳು ಅವರ ಪರ ಹೇಳಿದರೆ, ಇವರೇ ಮುಂದುವರಿಯಬೇಕೆಂದು ಈ ಕಡೆ ಹತ್ತು ಜನ ಹೇಳುತ್ತಾರೆ. ಸಮಾಜ ಕಟ್ಟುವುದು, ಆಶೀರ್ವಾದ ಮಾಡುವುದು ಸ್ವಾಮೀಜಿಯವರ ಕೆಲಸ. ಈ ರೀತಿಯಾದ ಹೇಳಿಕೆಗಳನ್ನು ಸ್ವಾಮೀಜಿಗಳು ಕೊಡಬಾರದು. ಅವರಿಗೆ ಸಂಬಂಧಪಟ್ಟಿದ್ದಲ್ಲ ಎಂದರು.
ಇದೇ ವೇಳೆ ಗ್ಯಾರಂಟಿಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಸರಿಯಾದ ಉತ್ತರ ಸಿಗಬೇಕಾದರೆ ಜನರನ್ನು ಕೇಳಬೇಕು. ನಮ್ಮ ಪಕ್ಷದ ಕಾರ್ಯಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ಪಕ್ಷದವರು ತಮ್ಮ ಕಾರ್ಯಕ್ರಮಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಒಂದು ಸಾವಿರ ಜನರನ್ನು ಸಂದರ್ಶನ ಮಾಡಿದ್ರೆ ಉತ್ತರ ಸಿಗಲಿದೆ. ಪಕ್ಷ ನಿರ್ಧಾರ ನಾವು ಸಮರ್ಥನೆ ಮಾಡುತ್ತೇವೆ. ಆದರೆ ಜನರ ಉತ್ತರವೇ ಫೈನಲ್ ಎಂದು ಹೇಳಿದರು.ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಏಕೆ? ಹೈಕಮಾಂಡ್ ಏನೂ ಇಲ್ಲ ಅಂದಿದೆ: ಸತೀಶ್ ಜಾರಕಿಹೊಳಿ