Tag: Satish Jarakiholi

  • ಹಣ ಕೊಡದ ಸಮ್ಮಿಶ್ರ ಸರ್ಕಾರ – ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‍ಗೆ ಬೀಳುತ್ತಾ ಬೀಗ?

    ಹಣ ಕೊಡದ ಸಮ್ಮಿಶ್ರ ಸರ್ಕಾರ – ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‍ಗೆ ಬೀಳುತ್ತಾ ಬೀಗ?

    ಬೆಳಗಾವಿ: ನಗರದಲ್ಲಿನ ಬಡವರ್ಗದ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿತ್ತು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಆದರೆ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯನ್ನು ಈಗಿನ ಸರ್ಕಾರ ಕಡೆಗಣಿಸುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದ ಇಂದಿರಾ ಕ್ಯಾಂಟಿನ್ ಗಳಿಗೆ ಒಂದು ಪೈಸೆ ಹಣವನ್ನೂ ಸರ್ಕಾರದಿಂದ ಬಿಡುಗಡೆ ಮಾಡಿಲ್ಲ. ಈ ಹಣವನ್ನೆಲ್ಲಾ ಪಾಲಿಕೆಯವರೇ ಭರಿಸಬೇಕೆಂದು ಹೇಳಿದ್ದು, ಲಾಸ್ ನಲ್ಲಿರುವ ಪಾಲಿಕೆ ಹಣ ನೀಡುತ್ತಿಲ್ಲ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅತೀ ಕಡಿಮೆ ದರದಲ್ಲಿ ಹಸಿದ ಬಡ ಕೂಲಿ ಕಾರ್ಮಿಕರಿಗೆ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಸದ್ಯ ಬಂದ್ ಆಗುವ ಹಂತಕ್ಕೆ ಬಂದು ನಿಂತಿವೆ. ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನೀಡಲು ಆಗದೆ ಆ ಹೊಣೆಯನ್ನ ಆಯಾ ಜಿಲ್ಲಾ ಮಹಾನಗರ ಪಾಲಿಕೆಯವರ ಹೆಗಲ ಮೇಲೆ ಹಾಕಿದ್ದಕ್ಕೆ ಅನುದಾನ ಕೊರತೆಯಿಂದಾಗಿ ನಾಲ್ಕರಿಂದ ಆರು ತಿಂಗಳವರೆಗಿನ ಹಣ ಬಾಕಿ ಉಳಿಸಿಕೊಂಡಿವೆ. ಸದ್ಯ ಬೆಳಗಾವಿ ನಗರವೊಂದರಲ್ಲೇ 6 ಇಂದಿರಾ ಕ್ಯಾಂಟೀನ್‍ಗಳಿದ್ದು ಒಂದೂವರೆ ವರ್ಷದಿಂದ ಆರಂಭವಾಗಿರುವ ಈ ಕ್ಯಾಂಟೀನ್ ಗಳಿಗೆ ಆಗಾಗ ಮೂರ್ನಾಲ್ಕು ತಿಂಗಳು ಹಣ ನೀಡಿದ್ದನ್ನ ಬಿಟ್ಟರೆ ಇಲ್ಲಿವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ.

    ಈ ಸ್ಥಿತಿ ಕೇವಲ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ನಿರ್ಮಾಣವಾಗಿಲ್ಲ, ಇಡೀ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂಬುದು ವಿಶೇಷ. ಬಡ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗಳು ಸದ್ಯ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಹೀಗೆ ಮುಂದುವರಿದಿದ್ದೇ ಆದರೆ ಇನ್ನೆರಡು ತಿಂಗಳಲ್ಲಿ ಕದ ಹಾಕುವ ಸ್ಥಿತಿಗೆ ಇಂದಿರಾ ಕ್ಯಾಂಟೀನ್ ಗಳು ಬರಬಹುದು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೇರವಾಗಿ ಸರ್ಕಾರವೇ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಬಿಡುಗಡೆ ಮಾಡಿ ರೈತರ ಹೊಟ್ಟೆ ತುಂಬಿಸುತ್ತಿರುವ ಕ್ಯಾಂಟೀನ್ ಗಳನ್ನ ಉಳಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

    ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದ್ದು ಒಂದು ಬಾರಿಗೆ ಸುಮಾರು 500 ಪ್ಲೇಟ್ ಗಳನ್ನ ನೀಡಲಾಗುತ್ತದೆ. ಪ್ರತಿ ದಿನ ಒಂದು ಇಂದಿರಾ ಕ್ಯಾಂಟೀನ್ ಗೆ 97 ಸಾವಿರ ರೂಪಾಯಿ ಖರ್ಚಾಗುತ್ತಿದ್ದು ಇದರ ಹಣವನ್ನ ಪಾಲಿಕೆಯವರೇ ಭರಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

    ಬೆಳಗಾವಿಯಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳಿದ್ದು ತಿಂಗಳಿಗೆ 30 ಲಕ್ಷ ರೂ. ಕ್ಯಾಂಟೀನ್ ನಡೆಸಲು ಬೇಕಾಗುತ್ತದೆ. ಅನುದಾನ ಕೊರತೆ ಹಿನ್ನೆಲೆಯಲ್ಲಿ ನಾಲ್ಕರಿಂದ ಆರು ತಿಂಗಳಿನಿಂದ ಪಾಲಿಕೆಯವರು ಪೇಮೆಂಟ್ ನೀಡಿಲ್ಲ. ಆದರೂ ಕ್ಯಾಂಟೀನ್ ಬಂದ್ ಮಾಡದೇ ಇನ್ನೂ ಕೂಡ ನಡೆಸುವ ಪ್ರಯತ್ನ ಗುತ್ತಿಗೆದಾರರು ಮಾಡುತ್ತಿದ್ದಾರೆ. ಇತ್ತ ಬೆಳಗಾವಿ ಮಹಾನಗರ ಪಾಲಿಕೆ ಕೂಡ ನಷ್ಟದಲ್ಲಿದ್ದೂ ಅಂದಾಜು ಒಂದೂವರೆ ಕೋಟಿ ಹಣ ಪಾಲಿಕೆ ಬಾಕಿ ಉಳಿಸಿಕೊಂಡಿದೆ.

    ಒಂದು ವರ್ಷಕ್ಕೆ ಸುಮಾರು 3ಕೋಟಿಗೂ ಅಧಿಕ ಹಣ ಈ ಇಂದಿರಾ ಕ್ಯಾಂಟೀನ್ ಗೆ ಹೊರೆಯಾಗುತ್ತಿದ್ದು ಇದರಿಂದ ನಗರದಲ್ಲಿ ಮಹತ್ತರ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲು ಕೂಡ ಪಾಲಿಕೆ ಯೋಚಿಸಬೇಕಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕೇಳಿದರೆ, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂಬುದು ಗೊತ್ತಾಗಿದೆ. ಈ ಕೂಡಲೇ ಸಿಎಂ ಕುಮಾರಸ್ವಾಮಿ ಮತ್ತು ಸಂಬಂಧ ಪಟ್ಟ ಇಲಾಖೆಯ ಸಚಿವರ ಜೊತೆಗೆ ಚರ್ಚೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಹೇಳುತ್ತೆನೆ ಎಂದು ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ರಾಜ್ಯಾದ್ಯಾಂತ ಹಣದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಗಳು ಬಳಲುತ್ತಿವೆ. ಇತ್ತ ಲಾಸ್ ನಲ್ಲಿರುವ ಪಾಲಿಕೆಗಳು ನಾಲ್ಕು ದಿನ ಹಣ ಕೊಟ್ಟ ಹಾಗೇ ಮಾಡಿ ಈಗ ತಮ್ಮ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಿ ಸೈಲೆಂಟ್ ಆಗಿದ್ದಾರೆ. ಹಣ ಬಿಡುಗಡೆಗೊಳಿಸಬೇಕಿದ್ದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕ್ಯಾಂಟೀನ್ ಗಳಿಗೆ ಜೀವ ತುಂಬುತ್ತಾ ಅಥವಾ ಇದರಲ್ಲೂ ರಾಜಕೀಯ ಮಾಡಿ ಬಂದ್ ಮಾಡಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ – ಸತೀಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

    ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ – ಸತೀಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಸರ್ಕಾರದ ಯೋಜನೆಯಿಂದ ಅನ್ಯಾಯ ಆದರೆ ಆಗಲಿ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕೇ ವಿನಃ ಪರ್ಯಾಯ ಮಾರ್ಗವಿಲ್ಲ ಎಂದಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ರೈತರ ವಿರುದ್ಧವಾಗಿದ್ದರೆ ನಾನು ನನ್ನ ರೈತರ ಪರ ನಿಲ್ಲುತ್ತೇನೆ. ಏಕಾಏಕಿ ರೈತರ ಅನುಮತಿ ಇಲ್ಲದೇ ಯಾವುದೇ ಯೋಜನೆ ಕೈಗೊಳ್ಳಲು ಆಗಲ್ಲ. ಆದ್ದರಿಂದ ಈ ಬಗ್ಗೆ ಕೂಗು ಎದ್ದಿದೆ ಎಂದರು.

    ರೈತರ ಜಮೀನಿಗೆ ಕೇವಲ 3 ಲಕ್ಷ ರೂ. ಮಾತ್ರ ಮಾಡಿದ್ದು, 2009 ರಲ್ಲಿಯೇ ಇದರ ಅನುಮತಿ ಲಭಿಸಿದೆ. ಆದರೆ ಇಷ್ಟು ಕಡಿಮೆ ಹಣ ನೀಡಿ ರೈತನಿಗೆ ಮೋಸ ಮಾಡಲಾಗುತ್ತಿದೆ. ನಾನು ರೈತರ ಪರ ನಿಲ್ಲುತ್ತಿದ್ದು, ಇದುವರೆಗೂ ಸರ್ಕಾರದ ಕಡೆಯಿಂದ ರೈತರ ಒಂದು ಸಭೆಯನ್ನ ನಡೆಸಿಲ್ಲ. ನಾನು ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು, ಈಗ ರೈತರ ಪರಿಹಾರ ಹಣ ಹೆಚ್ಚಿಸುವ ಹಾಗೂ ಬೇರೆ ಜಮೀನು ನೀಡುವ ಆಶ್ವಾಸನೆ ನೀಡಿದ್ದಾರೆ ಎಂದರು.

    ನಾನು ರೈತರ ಪರ ನಿಂತಿತ್ತು, ಜಮೀನು ಈಗಾಗಲೆ ಸರ್ಕಾರದ ಕೈ ಸೇರಿದೆ. ರೈತರಿಗೆ ಕಾನೂನು ಪ್ರಜ್ಞೆ ಕಡಿಮೆ ಇರುವುದರಿಂದ ಈ ಸಮಸ್ಯೆ ಆಗಿದೆ. ಕಡಿಮೆ ಪರಿಹಾರ ನೀಡಿ ಅವರ ಜೀವನಕ್ಕೆ ಆಧಾರವಾಗಿದ್ದ ನೆಲೆಯನ್ನು ತೆಗೆದುಕೊಂಡಿದ್ದಾರೆ. ಸಚಿವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ಆದರೆ ರೈತರಿಗೆ ಅನ್ಯಾಯವಾದರೆ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕಿಯಾಗಿ ನಾವೇ ಹೊಣೆ ತೆಗೆದುಕೊಳ್ಳಬೇಕಾಗುತ್ತದೆ. ರೈತರು ಯಾವುದೇ ಕಠಿಣ ಕ್ರಮಕ್ಕೆ ಮುಂದಾದರೆ ಅದಕ್ಕೆ ಸರ್ಕಾರವೇ ಹೊಣೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ನನಗೆ ರೈತರ ಕ್ಷೇಮವೂ ಮುಖ್ಯ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ

  • ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಗದ್ದುಗೆಗೆ ಸರ್ಕಸ್: ಜಾರಕಿಹೊಳಿ- ಹೆಬ್ಬಾಳ್ಕರ್ ನಡುವೆ ಫೈಟ್!

    ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಗದ್ದುಗೆಗೆ ಸರ್ಕಸ್: ಜಾರಕಿಹೊಳಿ- ಹೆಬ್ಬಾಳ್ಕರ್ ನಡುವೆ ಫೈಟ್!

    ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಕಾಣಿಸತ್ತಿಲ್ಲ. ಸದ್ಯ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಎಲ್ಲವೂ ಸರಿ ಇಲ್ಲಾ ಅನ್ನುತ್ತಿದ್ದರೆ. ಇತ್ತ ಆ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಆರಂಭವಾಗಿದೆ.

    ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಗದ್ದುಗೆ ಹಿಡಿಯಲು 2 ಪಕ್ಷಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಒಂದು ಬಾರಿಯಾದರೂ ಅಧ್ಯಕ್ಷ ಗಾದಿ ಏರಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ರೆ, ಇತ್ತ ಕಾಂಗ್ರೆಸ್ ಕೂಡ ಶತಾಯಗತಾಯ ಪಟ್ಟಕ್ಕೇರಲು ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಅಧ್ಯಕ್ಷರಿದ್ದ ಮಾಜಿ ಶಾಸಕ ಫಿರೋಜ್ ಸೇಠ್ ಹಾಗೂ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ವಿನಯ್ ನಾವದಗಟ್ಟಿ ಸೇರಿದಂತೆ ಹಲವರು ಕಾಂಗ್ರೆಸ್‍ನಿಂದ ರೇಸ್‍ನಲ್ಲಿದ್ದಾರೆ.

    ಈ ಸ್ಪರ್ಧೆ ಮಧ್ಯೆನೇ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಜೆಡಿಎಸ್‍ನವರಿಗೆ ಸ್ಥಾನ ಬಿಟ್ಟು ಕೊಡುವ ಚಿಂತನೆಯಲ್ಲಿದ್ದಾರೆ. ಈ ಮೂಲಕ ತನ್ನ ಆಪ್ತ ಶಿವನಗೌಡ ಪಾಟೀಲ್‍ನ ಕೂರಿಸಿ ಬೂಡಾ [Belgaum Urban Development Authority(BUDA)]ವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.

    ಜೆಡಿಎಸ್‍ನಲ್ಲಿ ಶಿವನಗೌಡ ಜತೆಗೆ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಹಾಗೂ ಯೂಥ್ ವರ್ಕಿಂಗ್ ಜಿಲ್ಲಾಧ್ಯಕ್ಷ ಯೂಸುಫ್ ಅಥಣಿ ಕೂಡ ದೊಡ್ಡ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಇನ್ನೂ ಹಲವರು ಜೆಡಿಎಸ್ ವರಿಷ್ಠ ದೇವೇಗೌಡರ ಮೂಲಕ ಅಧ್ಯಕ್ಷಗಾದಿಗೇರುವ ಕನಸು ಕಾಣುತ್ತಿದ್ದಾರೆ. ವಿನಯ್ ನಾವದಗಟ್ಟಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ನಾಯಕರ ಸಪೋರ್ಟ್ ಮೂಲಕ ಸ್ಥಾನ ಗಿಟ್ಟಿಸಿಕೊಳ್ಳು ಪ್ರಯತ್ನ ನಡೆಸಿದ್ದಾರೆ.

    ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ಲೇಔಟ್‍ನ್ನು ಹಂಚಿ ಆ ಕ್ರೆಡಿಟ್‍ನ್ನು ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ತಮ್ಮ ಆಪ್ತರ ಮೂಲಕ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಬೆಳಗಾವಿ ರಾಜಕಾರಣದಲ್ಲಿ ಕೇಳಿ ಬರುತ್ತಿವೆ.

  • ರಾಜೀನಾಮೆಗೆ ಮುನ್ನವೇ ಅಖಾಡಕ್ಕಿಳಿದ ಬೆಳಗಾವಿ ಸಾಹುಕಾರ

    ರಾಜೀನಾಮೆಗೆ ಮುನ್ನವೇ ಅಖಾಡಕ್ಕಿಳಿದ ಬೆಳಗಾವಿ ಸಾಹುಕಾರ

    -ಸೋದರನ ಕ್ಷೇತ್ರದ ಮೇಲೆಯೇ ಕಣ್ಣಿಟ್ಟ ರಮೇಶ್ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದು, ಚುನಾವಣೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಸಹೋದರ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಈಗಿನಿಂದಲೇ ರಮೇಶ್ ಜಾರಕಿಹೊಳಿ ಸನ್ನದ್ಧಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಂದು ಕೆಎಂಎಫ್ ನಿರ್ದೇಶಕರ ಸಭೆಯ ಮುಕ್ತಾಯದ ಬಳಿಕ ಸತೀಶ್ ಜಾರಕಿಹೊಳಿಯ ಯಮಕನಮರಡಿ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡರ ಜೊತೆಗೆ ರಮೇಶ್ ಜಾರಕಿಹೊಳಿ ನಗರದ ಖಾಸಗಿ ಹೋಟೆಲಿನಲ್ಲಿ ರಹಸ್ಯ ಸಭೆಯೊಂದನ್ನು ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ಮುಖಂಡರ ಮುಂದೆ ಸತೀಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿಯೇ ಮಾತನಾಡಿ, ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮೇ 23ಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ನಮ್ಮ ಜತೆಗೆ ನಾಲ್ಕು ಜನ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.

    ರಾಜೀನಾಮೆ ಬಳಿಕ ಗೋಕಾಕ್ ನಿಂದ ಸ್ಪರ್ಧೆ ಮಾಡಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸೋದರ ಸತೀಶ್ ಜಾರಕಿಹೊಳಿ ಸ್ವಕ್ಷೇತ್ರ ಯಮಕನಕರಡಿಯಲ್ಲಿಯೇ ಸ್ಪರ್ಧೆ ಮಾಡಲಿದ್ದೇನೆ. ಈಗಿನಿಂದಲೇ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠಗೊಳಿಸಲು ಎಲ್ಲರೂ ಕೆಲಸ ಮಾಡಬೇಕಿದೆ. ಕ್ಷೇತ್ರದಲ್ಲಿ ಯಾರಿಗೂ ಹೆದರದಂತೆ ಕಾರ್ಯಕರ್ತರಿಗೆ ರಮೇಶ್ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ರಮೇಶ್ ಜಾರಕಿಹೊಳಿ ಇದ್ರೆ ಇರಲಿ, ಹೋದ್ರೆ ಹೋಗ್ಲಿ – ಸತೀಶ್ ಜಾರಕಿಹೊಳಿ ಗುಡುಗು

    ರಮೇಶ್ ಜಾರಕಿಹೊಳಿ ಇದ್ರೆ ಇರಲಿ, ಹೋದ್ರೆ ಹೋಗ್ಲಿ – ಸತೀಶ್ ಜಾರಕಿಹೊಳಿ ಗುಡುಗು

    ಬೆಳಗಾವಿ: ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಂಧಾನ ಬಾಗಿಲು ಬಂದ್ ಆಗಿದೆ. ರಮೇಶ್ ಜಾರಕಿಹೊಳಿ ಇದ್ದರೆ ಇರಲಿ, ಹೋದರೆ ಹೋಗಲಿ. ಪಕ್ಷ ಬಿಟ್ಟು ಹೋಗಿ ಎಂದು ಯಾರೂ ಹೇಳಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಗೆ ಗೈರಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಕೆಳ ಹಂತದ ಕಾರ್ಯಕರ್ತರವರೆಗೂ ಯಾರೂ ಬಿಟ್ಟು ಹೋಗಿ ಅಂತ ಹೇಳಿಲ್ಲ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ ಮುಗಿದ ಹೋದ ಅಧ್ಯಾಯ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಏನೂ ಉಳಿದಿಲ್ಲ ಎಂದರು.

    ಮಂತ್ರಿಯಾಗಿ ಅಧಿಕಾರಿಯಾಗಿ ಸ್ಥಾನ ನೀಡಿದ ಬಳಿಕ ಇಡೀ ಜಿಲ್ಲೆಯ ಜವಾಬ್ದಾರಿ ಅವರ ಮೇಲೆಯೇ ಇರುತ್ತದೆ. ಆದರೆ ಅವರು ಮಂತ್ರಿಯಾಗಿದ್ದಾಗಲೇ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ. ಜಿಲ್ಲೆಯನ್ನ ಸಂಬಾಳಿಸಬೇಕಿದ್ದ ಇವರನ್ನೇ ಸಂಬಾಳಿಸಬೇಕಿದೆ. ಪಕ್ಷದಲ್ಲಿ ಇರುವುದು ಬಿಡುವುದು ಅವರ ವಿಚಾರಷ್ಟೇ ಸ್ಪಷ್ಟಪಡಿಸಿದರು.

  • ಸ್ವಯಂಕೃತ ತಪ್ಪುಗಳೇ ರಮೇಶ್ ನಡೆಗೆ ಕಾರಣ: ಸತೀಶ್ ಜಾರಕಿಹೊಳಿ

    ಸ್ವಯಂಕೃತ ತಪ್ಪುಗಳೇ ರಮೇಶ್ ನಡೆಗೆ ಕಾರಣ: ಸತೀಶ್ ಜಾರಕಿಹೊಳಿ

    – 3 ಶಾಸಕರು ರಾಜೀನಾಮೆ ಕೊಟ್ರೆ ಸರ್ಕಾರ ಬೀಳಲ್ಲ

    ಬೆಂಗಳೂರು: ಮಾಜಿ ಸಚಿವ, ಸಹೋದರ ರಮೇಶ್ ಜಾರಕಿಹೊಳಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಅಗುವುದಿಲ್ಲ. ಇದನ್ನು ಅವರು ಆರ್ಥೈಸಿಕೊಳ್ಳಬೇಕಿದೆ ಎಂದು ಅರಣ್ಯ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮನ್ನು ಸುಖಾ ಸುಮ್ಮನೆ ಸದ್ದು ಮಾಡುತ್ತಿದ್ದಾರೆ ಅಷ್ಟೇ. ಆದರೆ ನಾವು ಪಕ್ಷದ, ಸರ್ಕಾರ ಜವಾಬ್ದಾರಿಯನ್ನ ಮಾತ್ರ ನಿರ್ವಹಿಸುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

    ಕಳೆದ 1 ವರ್ಷದ ಅವಧಿಯಿಂದ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಅವರು ಹೇಳುತ್ತಿದ್ದಾರೆ. ಆದರೆ ಅವರು ಬಿಜೆಪಿಯೊಂದಿಗೆ ಸೇರಿ ಮಾಡುತ್ತಿರುವ ಈ ಕಾರ್ಯ ಯಶಸ್ವಿ ಆಗುವುದಿಲ್ಲ. ನಾವು ಎಂದು ಕೂಡ ಅವರಿಗೆ ಪಕ್ಷದ ಸಭೆಗಳಿಗೆ ಗೈರಾಗುವಂತೆ ಹೇಳಲಿಲ್ಲ. ಗಣ್ಯರು ಜಿಲ್ಲೆಗೆ ಆಗಮಿಸಿದರೆ ಸ್ವಾಗತ ಮಾಡಬೇಡಿ ಎಂದು ಹೇಳಿಲ್ಲ. ಆದ್ದರಿಂದ ಸ್ವಯಂಕೃತ ತಪ್ಪುಗಳೇ ಅವರ ಈ ನಡೆಗೆ ಕಾರಣವಾಗಿದೆ. ಐದು ಬಾರಿ ಶಾಸಕರಾಗಿರುವ ಅವರಿಗೆ ಇವುಗಳನ್ನು ವಿಚಾರ ಮಾಡುವ ಶಕ್ತಿ ಇದೆ. ಆದರೆ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿದ್ದು, ಅವರ ಬಳಿ ಸಾಕಷ್ಟು ಸಂಖ್ಯಾಬಲ ಇಲ್ಲ. ಆದ್ದರಿಂದ ಅವರು ತಟಸ್ಥರಿದ್ದಾರೆ ಎಂದು ಹೇಳಿದರು.

    ಡಿಕೆಶಿ ಪರ ಬ್ಯಾಟಿಂಗ್: ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿತನದ ಆಧಾರದಲ್ಲಿ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ. ಉಸ್ತುವಾರಿ ಕೊಟ್ಟಿರುವುದರ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಹಿರಿಯರಾದ ಕಾರಣ ಅವರಿಗೆ ಈ ಹಿಂದೆಯೂ ಹಲವು ಜವಾಬ್ದಾರಿಯನ್ನ ನೀಡಲಾಗಿತ್ತು. ಯಶಸ್ವಿಯಾಗಿ ಅದನ್ನು ನಿರ್ವಹಿಸಿದ್ದಾರೆ. ಚಿಂಚೋಳಿ, ಕುಂದಗೋಳ ಉಪಚುನಾವಣೆಯಲ್ಲೂ ನಾವೇ ಗೆಲುವು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    – ಸೇನೆಗೆ ಇವತ್ತು ಅಗ್ನಿ ಆರಿಸುವ ವಿಶ್ವಾಸ

    ಚಾಮರಾಜನಗರ: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿಯ ನರ್ತನಕ್ಕೆ ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ತೀವ್ರತೆ ಮುಂಜಾನೆ ವೇಳೆಗೆ ಇಳಿಕೆಯಾದ್ರೆ, ಮಧ್ಯಾಹ್ನದ ವೇಳೆಗೆ ತೀವ್ರವಾಗುತ್ತಿದೆ.

    ತಡವಾಗಿಯಾದರೂ ಎಚ್ಚೆತ್ತುಕೊಂಡ ಸರ್ಕಾರ ಬೆಂಕಿ ನಂದಿಸಲು ಸೇನಾ ಹೆಲಿಕಾಪ್ಟರ್ ಗಳ ಮೊರೆ ಹೋಗಿದೆ. ಒಂದೆಡೆ ಬೆಂಕಿ ಬಿದ್ದ ಅರಣ್ಯ ಪ್ರದೇಶದ ಬಗ್ಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವೈಮಾನಿಕ ಸಮೀಕ್ಷೆ ನಡೆಸಿದ್ರೆ, ಇತ್ತ ಬಂಡೀಪುರದ ಹಿರೆಕೆರೆಯಲ್ಲಿ ನೀರು ಸಂಗ್ರಹಿಸಿದ ಸೇನಾ ಹೆಲಿಕಾಪ್ಟರ್‍ಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು.

    ಒಟ್ಟಾರೆ ಬಂಡೀಪುರದಲ್ಲಿ ಧಗಧಗನೇ ಉರಿದ ಬೆಂಕಿ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇದಲ್ಲದೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಂಡೀಪುರಕ್ಕು ಹರಡುವ ಸಾಧ್ಯತೆಗಳಿದ್ದು, ಬೆಂಕಿ ಹರಡದಂತೆ ಜಾಗ್ರತೆ ವಹಿಸಲಾಗಿದೆ. ಇನ್ನೂ ಮುನ್ನೇಚರಿಕಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು ಗೋಪಾಲಸ್ವಾಮಿ ದೇವಸ್ಥಾನ ಬಂದ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಪಾಲಸ್ವಾಮಿ ಬೆಟ್ಟಿ ಇದೀಗ ಬಿಕೋ ಎನ್ನುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್‍ನಲ್ಲೇ ಇರೋದಾಗಿ ರಮೇಶ್ ಜಾರಕಿಹೊಳಿ ಬರೆದುಕೊಟ್ಟಿದ್ದಾರೆ: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್‍ನಲ್ಲೇ ಇರೋದಾಗಿ ರಮೇಶ್ ಜಾರಕಿಹೊಳಿ ಬರೆದುಕೊಟ್ಟಿದ್ದಾರೆ: ಸತೀಶ್ ಜಾರಕಿಹೊಳಿ

    ದಾವಣಗೆರೆ: ಮೋಡ ಇದ್ದಾಗ ಗುಡುಗು ಸಾಮಾನ್ಯ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಬರೆದುಕೊಟ್ಟಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 20 ಶಾಸಕರು ದೂರ ಇಲ್ಲಾ, ಎಲ್ಲರೂ ಒಟ್ಟಿಗೆ ಇದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲಾ. ಅವರು ಬಂದ ಮೇಲೆ ಅಸಮಾಧಾನದ ಕುರಿತು ಚರ್ಚೆ ಮಾಡುತ್ತೇನೆ. ಅಲ್ಲದೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲೇ ಇರುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದರು ತಿಳಿಸಿದರು.

    ಸಿಎಂ ಆಗೋ ಆಸೆ: ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ #MyCMSatish Jarkiholi ಅಭಿಯಾನದ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಯಾರಿಗೆ ಆಸೆ ಇರುವುದಿಲ್ಲ. ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರಿಗೂ ಆಸೆ ಇರುತ್ತೆ. ಅದೇ ರೀತಿ ನಮಗೂ ಇದೆ, ಅದಕ್ಕೆ ಇನ್ನು ಸಮಯವಿದೆ ಎಂದು ಸಿಎಂ ಆಗುವ ಕನಸನ್ನು ಬಿಚ್ಚಿಟ್ಟರು.

    ನಮ್ಮ ಸಮುದಾಯದವರು ಸಿಎಂ ಆಗಬೇಕೆನ್ನುವುದು ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸದ್ಯ ಸಮ್ಮಿಶ್ರ ಸರ್ಕಾರ ರಚನೆ ಆಗಿರುವುದರಿಂದ ಕೆಲ ಸಮಸ್ಯೆ ಇದ್ದೇ ಇದೆ. ನಿರಂತರವಾಗಿ ಇಂತಹ ಸಮಸ್ಯೆಗಳು ಬರುತ್ತದೆ. ಅದನ್ನು ಸಿಎಂ ಎಚ್‍ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಭಾಯಿಸುತ್ತಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ತಿಂಗಳ 8 ಮತ್ತು 9 ಕ್ಕೆ ರಾಜನಹಳ್ಳಿ ವಾಲ್ಮೀಕಿ ಮಠದ ಜಾತ್ರೆ ನಡೆಯಲಿದ್ದು, ಈ ಕಾರಣ ಜಾತ್ರೆಯ ಸ್ಥಳ ಪರಿಶೀಲನೆ ನಡೆಸಲು ಸಚಿವರು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾಗಲ್ಲ: ಸತೀಶ್ ಜಾರಕಿಹೊಳಿ

    ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾಗಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ, ಎಚ್.ಡಿ ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ನಡೆಸುವುದು ಅಷ್ಟು ಸುಲಭವಲ್ಲ. ಆದ್ರೆ ಈ ಹಿಂದೆ ಸಮ್ಮಿಶ್ರ ಸರ್ಕಾರ ನಡೆಸಿದ ಅನುಭವ ಸಿಎಂ ಕುಮಾರಸ್ವಾಮಿಗೆ ಇದೆ. ಸಣ್ಣಪುಟ್ಟ ಘಟನೆಯಿಂದ ಮನಸ್ಸಿಗೆ ನೋವಾಗಿರಬಹುದು, ಅದನ್ನೆಲ್ಲ ಮೀರಿ ಸಿಎಂ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರ ನಿಭಾಯಿಸುತ್ತಾರೆ. ಕಾಂಗ್ರೆಸ್ ಶಾಸಕರು ಅವರ ವ್ಯಯಕ್ತಿಕ ಅಭಿಪ್ರಾಯ ಹೊರಹಾಕಿದ್ದಾರೆ ಅಷ್ಟೇ. ಕುಮಾರಸ್ವಾಮಿ ಅವರು ಇಂತಹ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಉತ್ತಮವಾಗಿ ಸರ್ಕಾರ ನಡೆಸುತ್ತಾರೆ ಎಂದು ಸಿಎಂ ಪರ ಹೇಳಿಕೆ ನೀಡಿದರು. ಇದನ್ನೂ ಓದಿ: ಕೈ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳಿದರೆ ತಪ್ಪೇನು: ಪರಮೇಶ್ವರ್ ಪ್ರಶ್ನೆ

    ಮೈತ್ರಿ ಸರ್ಕಾರದಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಸಮನ್ವಯ ಸಮಿತಿ ಇದೆ, ಅಲ್ಲಿ ನಾವು ಚರ್ಚೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆ. ಇಷ್ಟೇ ಅಲ್ಲದೆ ಜಂಟಿಯಾಗಿ ಎರಡು ಪಕ್ಷಗಳ ಸಿಎಲ್‍ಪಿ ಸಭೆ ನಡೆಸಲು ಅವಕಾಶವಿದೆ. ಕೆಲವೊಮ್ಮೆ ಮನಸ್ಸಿಗೆ ನೋವಾದ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಬರುತ್ತವೆ. ಶಾಸಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದ್ರೆ ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ಯಾವುದೇ ಚರ್ಚೆಯಾಗಿಲ್ಲ ಎಂದು ಪಕ್ಷದವರ ಹೇಳಿಕೆಯನ್ನ ಸಮರ್ಥಿಸಿಕೊಂಡರು.

    https://www.youtube.com/watch?v=OflAzK4wALY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲಕ್ಕೆ ಹೊಸ ವ್ಯಾಖ್ಯಾನ ನೀಡಿದ ಸತೀಶ್ ಜಾರಕಿಹೊಳಿ

    ಆಪರೇಷನ್ ಕಮಲಕ್ಕೆ ಹೊಸ ವ್ಯಾಖ್ಯಾನ ನೀಡಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಆಪರೇಷನ್ ಕಮಲಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೊಸ ವ್ಯಾಖ್ಯಾನ ನೀಡುವ ಮೂಲಕ ಬಿಜೆಪಿಯ ಕಾಲೆಳೆದಿದ್ದಾರೆ.

    ಇನ್ನು ನಾಲ್ಕು ವರ್ಷ ಮೂರು ತಿಂಗಳು ಬಿಜೆಪಿ ಆಪರೇಷನ್ ಕಮಲ ಮಾಡುತ್ತಲೇ ಇರುತ್ತದೆ. ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು. ಇಲ್ಲದಿದ್ರೆ ನಮ್ಮ ಮೇಲೆ ಫೈರ್ ಮಾಡಿ ಬಿಡುತ್ತಾರೆ ಅಂತಾ ರಾಜಕೀಯವನ್ನು ಯುದ್ಧಭೂಮಿಗೆ ಹೋಲಿಕೆ ಮಾಡಿ ಮಾತನಾಡಿದ್ರು. ಕಾಶ್ಮೀರದ ಎಲ್.ಒ.ಸಿಯಲ್ಲಿ ನಾವಿದ್ದೇವೆ ಅವರು ಫೈರ್ ಮಾಡಿದ್ರೇ ನಾವು ಮಾಡುತ್ತೇವೆ. ಈಗ ನಾವು ಗೆದ್ದಿದ್ದೇವೆ ಎಂದು ಸಚಿವರು ತಿಳಿಸಿದರು.

    ಶಾಸಕ ಗಣೇಶ್ ಮತ್ತು ಆನಂದ್ ಸಿಂಗ್ ಗಲಾಟೆ ವಿಚಾರವಾಗಿ ಮಾತನಾಡಿದ ಸಚಿವರು, ಕೇವಲ ಒಂದು ದಿನ ಈಗಲಟನ್ ರೆಸಾರ್ಟ್ ನಲ್ಲಿ ನಾನಿದ್ದೆ. ಮರುದಿನ ನೀವು ಇಲ್ಲಿರೋದು ಅವಶ್ಯಕತೆ ಇಲ್ಲ ಎಂದು ಪಕ್ಷದ ಹಿರಿಯರು ನಮ್ಮನ್ನು ಕಳುಹಿಸಿದರು. ಮರುದಿನ ಗಲಾಟೆ ನಡೆದಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಗಲಾಟೆಗೂ ಮುನ್ನ ಅಲ್ಲಿ ಸಂದರ್ಭ ಏನಿತ್ತು? ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವೊಂದು ಬಾರಿ ಈ ರೀತಿಯ ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಶಾಸಕ ಗಣೇಶ್ ವಿರುದ್ಧ ಯಾರು ದೂರು ದಾಖಲಿಸಿರಲಿಲ್ಲ. ಇದೀಗ ದೂರು ದಾಖಲಾಗಿದ್ದು, ಪೊಲೀಸರು ಶಾಸಕರನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.

    ಆನಂದ್ ಸಿಂಗ್ ಹಲ್ಲೆಯ ಬಳಿಕ ನಾಯಕರ ಭಿನ್ನ ಹೇಳಿಕೆಗಳ ಕುರಿತು ಉತ್ತರಿಸಿದ ಸಚಿವರು, ರಾಜಕಾರಣದಲ್ಲಿ ಯಾವಗಳು ಒನ್ ಪ್ಲಸ್ ಒನ್ ಟು ಆಗಲ್ಲ. ಕೆಲವೊಮ್ಮೆ ಥ್ರೀ ಫೋರ್ ಆಗುತ್ತೆ ಎಂದು ಹೇಳಿ ನಕ್ಕರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv