Tag: sathyaprakash

  • ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

    ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

    ರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿದೆ ಅದ್ದೂರಿ ಸೆಟ್ ಗಳು.  ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ,  ಸಂದೇಶ್ ನಾಗರಾಜ್ (MLC) ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ “ಘೋಸ್ಟ್‌” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

    ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿರುವ ಹದಿನೈದಕ್ಕೂ ಅಧಿಕ ಸೆಟ್ ಗಳಲ್ಲಿ 28ದಿನಗಳ ಚಿತ್ರೀಕರಣ ನಡೆದಿದೆ. ಶಿವರಾಜಕುಮಾರ್, ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಮುಂತಾದ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮೋಹನ್ ಬಿ ಕೆರೆ ಈ ಚಿತ್ರದ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ದ್ವಿತೀಯ ಹಂತದ ಚಿತ್ರೀಕರಣ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ಆರಂಭವಾಗಲಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ನಿರ್ದೇಶಕ ಶ್ರೀನಿ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್‌ ” ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಶಿವರಾಜಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 2016ರಲ್ಲಿ ವಿಜಯ ಪ್ರಸಾದ್, ಸತ್ಯಪ್ರಕಾಶ್ ಇಬ್ಬರೇ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾ ಮಾಡಿದ್ದಾರೆ: ಅನುಪ್ ಸಿಳೀನ್

    2016ರಲ್ಲಿ ವಿಜಯ ಪ್ರಸಾದ್, ಸತ್ಯಪ್ರಕಾಶ್ ಇಬ್ಬರೇ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾ ಮಾಡಿದ್ದಾರೆ: ಅನುಪ್ ಸಿಳೀನ್

    ಬೆಂಗಳೂರು: 2016ರಲ್ಲಿ ನನ್ನ ಪ್ರಕಾರ ಇಬ್ಬರೇ ನಿರ್ದೇಶಕರು ಅಚ್ಚ ಕನ್ನಡದ ಸ್ವಚ್ಛ ಸಿನಿಮಾ ಮಾಡಿರುವರು. ಇವರದೇ ಹೊಸತನ ಮತ್ತು ಎಲ್ಲೂ ನಕಲು ಮಾಡಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸಿಳೀನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿರುವ ಅವರು, ನಿರ್‍ದೋಸೆಯ ವಿಜಯ ಪ್ರಸಾದ್ ಮತ್ತು ರಾಮಾ ರಾಮಾ ರೇಯ ಡಾ ಸತ್ಯಪ್ರಕಾಶ್ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾವನ್ನು ಮಾಡಿದ್ದಾರೆ. ಒಂದೊಂದು ದೃಶ್ಯದಲ್ಲೂ ಸ್ವಂತಿಕೆಯಿದೆ. ಎಲ್ಲಾ ತಂತ್ರಜ್ಞರಿಂದಲೂ ಅದೇ ರೀತಿ ಕೆಲಸ ಮಾಡಿಸಿದ್ದಾರೆ. ಇವರು ಮಾತ್ರ ನನಗೆ ಪರಿಪೂರ್ಣ ಫಿಲ್ಮ್ ಮೇಕರ್ಸ್ ಅನ್ನಿಸೋದು. ಯಾಕೆಂದರೆ ಸಿನಿಮಾದ ಎಲ್ಲಾ ವಿಭಾಗದಲ್ಲೂ ಹಿಡಿತ ಇಟ್ಟುಕೊಂಡು ಎಲ್ಲೂ ಅವರತನ ಬಿಟ್ಟುಕೊಡದೆ ಕಳ್ಳತನ ಮಾಡದೆ ಒಂದು ಅದ್ಭುತವಾದ ಸಿನಿಮಾ ಮಾಡಿಹರು ಎಂದು ಅನುಪ್ ಸಿಳೀನ್ ಬರೆದಿದ್ದಾರೆ.

    ಇವರ ಈ ಅಭಿಪ್ರಾಯಕ್ಕೆ ಬಹಳಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೇರವಾಗಿ ಹೇಳಿದ್ದೀರಿ ಎಂದು ಜನರು ಅಭಿನಂದಿಸಿದ್ದಾರೆ.

    ನಾವು ವಿದ್ಯಾರ್ಥಿಗಳು: ಈ ಪೋಸ್ಟ್ ಗೆ ನಿರ್‍ದೋಸೆಯ ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಅವರು ಪ್ರತಿಕ್ರಿಯಿಸಿದ್ದಾರೆ. “ಅನೂಪನ ಪ್ರೀತಿ ಅಭಿಮಾನ ಮತ್ತು ನೇರ ನುಡಿಗಳನ್ನ ನಾನು ನೆನ್ನೆ ಮೊನ್ನೆಯಿಂದ ನೋಡಿದ್ದಲ್ಲ. ಬಹು ಕಾಲದ ಒಡನಾಟದ ಪ್ರಯಾಣ ನಮ್ಮಿಬ್ಬರದು. ಆತನ ಅಭಿಪ್ರಾಯಕ್ಕೆ ಈಗ ನಾನು ಏನೇ ಪ್ರತಿಕ್ರಿಯೆಸಿದರೂ ನಮ್ಮ ಚಿತ್ರದ ಬಗ್ಗೆ ನಾವೇ ಮತ್ತು ನಮ್ಮನ್ನು ನಾವೇ ಬೆಂಬಲಿಸಿಕೊಂಡಿದ್ದಾರೆ ಎಂದಾದರೂ ಸರಿಯೇ ಇಲ್ಲಿ ನನ್ನ ಅಭಿಪ್ರಾಯವನ್ನ ದಾಖಲು ಮಾಡಲೇಬೇಕಾಗಿದೆ” ಎಂದು ಬರೆದಿದ್ದಾರೆ.

    “ಅನೂಪ ಭ್ರಮೆಯಿಂದ ಕೂಡಿದವನಲ್ಲ. ಹಾಗೆ ಮತ್ತೊಬ್ಬರ ಚಿತ್ರ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲವೆಂಬೂದು ಅಲ್ಲ. ಇಲ್ಲಿ ಮೂಲ ಪ್ರಸ್ತಾವನೆ ಸ್ವಂತಿಕೆಯ ಬಗ್ಗೆ. ನಿಜಕ್ಕೂ ರಾಮ ರಾಮಾ ರೇ ನನಗೆ ಬಹಳವೇ ಇಷ್ಟವಾಯಿತು. ಮೂರು ಬಾರಿ ನೋಡಿದ್ದೇನೆ. ಇಡೀ ಚಿತ್ರವೇ ಸ್ವಂತಿಕೆಯ ಅಡಿಪಾಯದಲ್ಲಿ ಕಟ್ಟಲ್ಪಟ್ಟಿದೆ. ನಿಜವಾಗಿಯೂ ಆ ಚಿತ್ರಕ್ಕೆ ಮತ್ತು ಇಡೀ ಚಿತ್ರತಂಡದವರಿಗೆ ಮಾರು ಹೋಗಿದ್ದೇನೆ” ಎಂದು ಹೇಳಿದ್ದಾರೆ.

    “ಇದರ ಜೊತೆಗೆ ಆತ ಹೇಳಿರುವುದು 2016ರ ಸಿನಿಮಾಗಳು. ತಿಥಿ ಬಹುಶಃ 2015 ಕ್ಕೆ ಸೇರಬಹುದೆಂದುಕೊಂಡಿದ್ದೇನೆ. ತಿಥಿ ಚಿತ್ರವೂ ನನಗೆ ತುಂಬಾ ಆಪ್ತವೆನಿಸಿತು. ಇದನ್ನೂ ಮೂರ್ನಾಲ್ಕು ಬಾರಿ ನೋಡಿದ್ದೇನೆ. ನಿಜಕ್ಕೂ ತಿಥಿ ವಾಸ್ತವತೆಯ ದೃಶ್ಯಕಾವ್ಯ. ಇನ್ನು ನೀರ್ ದೋಸೆ ಬಗ್ಗೆ ಪ್ರಸ್ತಾವಿಸುವುದು ಬೇಡ. ನಿಜಕ್ಕೂ ಸ್ವಂತಿಕೆ ಇದೆಯೋ ಇಲ್ಲವೋ ಎಂಬುದನ್ನ ಪ್ರಾಮಾಣಿಕವಾಗಿ ಅವರವರಲ್ಲೇ ಕೇಳಿಕೊಳ್ಳಲಿ. ಸ್ವಂತಿಕೆಯ ಯಾವ ಸಿನಿಮಾವೇ ಆಗಲಿ ಹಾಗೆ ಯಾರೇ ಆಗಲಿ, ನಾವು ಅವರ ವಿದ್ಯಾರ್ಥಿಗಳು…! ಇದಕ್ಕಿಂತ ಬೇಕೇ? ಚರ್ಚೆಗಳು ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ನಡೆಯಲಿ. ಕ್ಷಮೆಯೊಂದಿಗೆ ಎಲ್ಲರಿಗೂ ನಮಸ್ಕಾರಗಳು” ಎಂದಿದ್ದಾರೆ.

    ಅನುಪ್ ಸೀಳಿನ್ ಅವರು ತನ್ನ ಪಟ್ಟಿಯಲ್ಲಿ ನೀರ್‍ದೋಸೆಯನ್ನು ಸೇರಿಸಿದ್ದಕ್ಕೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, “ನಾವೇ ಹೇಳಿದ್ದೇವೆ ನಮ್ಮ ಸಿನಿಮಾ ಅದ್ಭುತ ಸಿನಿಮಾವೂ ಅಲ್ಲ ಯಾವುದೇ ಟಾಪ್ ಲಿಸ್ಟಿಗೂ ಸೇರದ ಸಿನಿಮಾಂತ. ಇಲ್ಲಿ ವಿಚಾರ ಸ್ವಂತಿಕೆಯದು. ಅದು ಅರಿವಾದರೇ ಸಾಕು ಅಷ್ಟೇ ….ಸ್ವಂತಿಕೆ ಬಂದರೇ ಆಯಾಮಗಳೇ ಬೇರೆ, ವಿಚಾರವೇ ಬೇರೆ” ಎಂದು ವಿಜಯ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

    ವಿಜಯ ಪ್ರಸಾದ್ ನಿರ್ದೇಶನದ ನೀರ್‍ದೋಸೆ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಿತ್ತು. ಅನುಪ್ ಸೀಳಿನ್ ಸಂಗೀತವಿರುವ ಈ ಚಿತ್ರದಲ್ಲಿ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ್ ಇತರರು ನಟಿಸಿದ್ದರು.

    ಸತ್ಯ ಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಚಿತ್ರ ಅಕ್ಟೋಬರ್ 21ರಂದು ಬಿಡುಗಡೆಯಾಗಿತ್ತು. ವಾಸುಕಿ ವೈಭವ್ ಸಂಗೀತವಿರುವ ಚಿತ್ರದಲ್ಲಿ ಕೆ.ಜಯರಾಮ್, ನಟರಾಜ್ ಎಸ್.ಭಟ್, ಧರ್ಮಣ್ಣ ಕಡೂರು ಇತರರು ಅಭಿನಯಿಸಿದ್ದರು.