Tag: sathyajit

  • ಕಲಾವಿದರ ಸಾವು ಉದ್ಯಮದಲ್ಲಿ ಸಂಪತ್ತಿನ ಕೊರತೆಯಂತೆ – ಸತ್ಯಜಿತ್ ನಿಧನಕ್ಕೆ ಎಸ್ ನಾರಾಯಣ್ ಕಂಬನಿ

    ಕಲಾವಿದರ ಸಾವು ಉದ್ಯಮದಲ್ಲಿ ಸಂಪತ್ತಿನ ಕೊರತೆಯಂತೆ – ಸತ್ಯಜಿತ್ ನಿಧನಕ್ಕೆ ಎಸ್ ನಾರಾಯಣ್ ಕಂಬನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ವಿಧಿವಶರಾಗಿದ್ದಾರೆ. ಸದ್ಯ ಸತ್ಯಜಿತ್ ನಿಧನಕ್ಕೆ ನಟ, ನಿರ್ದೇಶಕ ಎಸ್. ನಾರಾಯಣ್ ಕಂಬನಿ ಮಿಡಿದಿದ್ದಾರೆ.

    ಸತ್ಯಜಿತ್ ಜೊತೆ ಕಳೆದ ಕೆಲವು ದಿನಗಳ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್. ನಾರಾಯಣ್ ಅವರು, ಬದುಕಿರುವವರಿಗೆ ನೋವು ಕೊಡುವುದೇ ಪ್ರತಿ ಸಾವು. ನಾನು ಸಹ ನಿರ್ದೇಶಕನಾಗಿದ್ದಗಿಂದಲೂ ಸತ್ಯಜಿತ್ ಅವರು ನನಗೆ ಪರಿಚಯ. ನಿರ್ಮಾಪಕ ರಘು ವೀರ್ ನಿರ್ಮಿಸಿ, ಎ.ಟಿ ರಘು ಅವರು ನಿರ್ದೇಶಿಸಿದ್ದ ಅಜಯ್ ವಿಜಯ್ ಸಿನಿಮಾಕ್ಕೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಈ ವೇಳೆ ಸತ್ಯಜಿತ್ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿದ ಕೂಡಲೇ ನೇರವಾಗಿ ಶೂಟಿಂಗ್ ಸೆಟ್‍ಗೆ ಆಗಮಿಸುತ್ತಿದ್ದರು. ಬೆಳಗ್ಗೆ 6 ಗಂಟೆ ಅಥವಾ 7 ಗಂಟೆಗೆ ಶೂಟಿಂಗ್ ಎಂದ ಕೂಡಲೇ ಬಹಳ ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ 

    ಸತ್ಯಜಿತ್ ಅವರು ಎಂದೂ ಕೂಡ ಐಷಾರಾಮಿ ಜೀವನವನ್ನು ಬಯಸಿದವರಲ್ಲ. ಅವರೊಬ್ಬ ಅಪ್ರತಿಮ ಪ್ರತಿಭಾವಂತ ನಟ. ಸೈಯದ್ ಎಂಬ ಹೆಸರನ್ನು ಪಕ್ಕಕ್ಕೆ ತೆಗೆದು ಇಟ್ಟರೆ, ಅವರು ನಡೆದುಕೊಳ್ಳುವ ರೀತಿ ಹಾಗೂ ಸ್ವಭಾವದಲ್ಲಿ ಅವರು ಮುಸ್ಲಿಂ ಎಂಬುವುದು ಗೊತ್ತೆ ಆಗುವುದಿಲ್ಲ ಎಂದಿದ್ದಾರೆ.

    ಪ್ರಾಣ್ ಎಂಬ ಹಿಂದಿ ಕಲಾವಿದ ಎಂದರೆ ಸತ್ಯಜಿತ್ ಅವರಿಗೆ ಬಹಳ ಇಷ್ಟ. ಅವರಿಂದ ಸ್ಫೂರ್ತಿ ಪಡೆದು ಸತ್ಯಜಿತ್ ಅವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ನನ್ನ ಮೊದಲ ಸಿನಿಮಾ ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆಗ ನಾನು ಇನ್ನೂ ಚಿಕ್ಕ ಹುಡುಗನಾಗಿದ್ದೆ. ಆಗಲೇ ಇವರು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರು. ನಾನೊಬ್ಬ ಹಿರಿಯ ಕಲಾವಿದ ಈತ ಹೊಸ ನಿರ್ದೇಶಕ ಎಂದು ಕೂಡ ಪರಿಗಣಿಸದೇ ನನಗೆ ಈ ಸಿನಿಮಾ ಖಂಡಿತ ಚೆನ್ನಾಗಿ ಓಡುತ್ತದೆ ಮಾಡಿ ಎಂದು ಪ್ರೋತ್ಸಾಹ ನೀಡುತ್ತಿದ್ದರು.

    ಇದೀಗ ಬೆಳಗ್ಗೆ ಸತ್ಯಜಿತ್ ಅವರ ಅಗಲಿರುವ ವಿಚಾರ ತಿಳಿದು ನನಗೆ ಬಹಳ ಬೇಸರವಾಯಿತು. ಕಲಾವಿದರೂ ಒಬ್ಬೊಬ್ಬರೆ ಸಾವನ್ನಪ್ಪುತ್ತಿರುವ ವಿಚಾರ ಕೇಳಿದಾಗ ನಮ್ಮ ಉದ್ಯಮದಲ್ಲಿ ಸಂಪತ್ತುಗಳು ಕೊರತೆಯಾಗುತ್ತಿದೆ ಅನಿಸುತ್ತದೆ. ನಾವು ನಿರ್ದೇಶಕರು ಕಲಾವಿದರಿದ್ದರೆನೇ ಸಿನಿಮಾಗಳನ್ನು ತೆರೆಯಲು ಸಾಧ್ಯ. ಒಬ್ಬೊಬ್ಬರನ್ನು ಕಳೆದುಕೊಳ್ಳುತ್ತಿದ್ದಾಗಲೂ ಒಂದೊಂದೇ ಮರದ ರೆಂಬೆಗಳು ಮುರಿದು ಹೋಗುತ್ತಿದೆ ಎಂಬ ಭಾವನೆಯುಂಟಾಗುತ್ತದೆ ಎಂದಿ ಹೇಳಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ನಿಧನ – ದುಃಖ ತೋಡಿಕೊಂಡ ಪುತ್ರ

    ಒಂದು ವರ್ಷದ ಹಿಂದೆ ನಾನು ಅಚಾನಕ್ ಆಗಿ ಸತ್ಯಜಿತ್ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಕಾಲನ್ನು ಕಳೆದುಕೊಂಡಿದ್ದರು. ಅದನ್ನು ಕಂಡು ನನ್ನ ಮನಸ್ಸಿಗೆ ಬಹಳ ದುಃಖವಾಯಿತು. ಈ ವೇಳೆ ಸತ್ಯಜಿತ್ ಅವರು ನಾವು ಬರುವಾಗ ಏನೇನು ಪಡೆದುಕೊಂಡು ಬರುತ್ತೀವಿ ಎಂಬುವುದು ನಮಗೆ ತಿಳಿದಿರುವುದಿಲ್ಲ. ನಮ್ಮ ಜೀವನದ ಪಯಣದಲ್ಲಿ ಎಲ್ಲವೂ ಎದುರಾಗುತ್ತದೆ. ಆಗ ನಮ್ಮ ಕರ್ಮದ ಅರಿವಾಗುತ್ತದೆ. ಆದರೆ ನಮ್ಮಿಂದ ಬಹಳಷ್ಟು ಜನರು ಪಾಠ ಕಲಿಯಬೇಕು ಅಂತ ಹೇಳಿದ್ದರು. ಈ ಮಾತನ್ನು ಹೇಳಿದ ಕಾರಣ ಏನು ಎಂದು ನನಗೆ ತಿಳಿದಿಲ್ಲ. ನನ್ನ ಬದುಕು ತುಂಬಾ ಜನರಿಗೆ ಉದಾಹರಣೆಯಾಗುತ್ತದೆ. ನನ್ನ ಬದುಕು ಇಂದು ಬೀದಿಯಲ್ಲಿದೆ ಎಂದಿದ್ದರು ಎಂದು ತಿಳಿಸಿದ್ದಾರೆ.

  • ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

    ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

    – ನಟನಿಗೆ ಇಂಟರ್ನಲ್ ಬ್ಲೀಡಿಂಗ್

    ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ.

    ಕಳೆದ 6 ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರದವರೆಗೂ ನಟನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೆ ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿದೆ. ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದೆ. ಹೀಗಾಗಿ ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿದೆ. ಮೊನ್ನೆವರೆಗೂ ಮಾತನಾಡುತ್ತಿದ್ದರು, ಆದರೆ ನಿನ್ನೆಯಿಂದ ಮತ್ತೆ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ಸ್ವಲ್ಪ ಚೇತರಿಸಿಕೊಂಡ ಬಳಿಕ ಡಯಾಲಿಸೀಸ್ ಮಾಡಲು ವೈದ್ಯರು ತಿಳಿಸಿದ್ದಾರೆ ಎಂದು ಸತ್ಯಜಿತ್ ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ.

    ಕೆಲ ದಿನಗಳ ಹಿಂದೆ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಹೃದಯಾಘಾತ ಕೂಡ ಸಂಭವಿಸಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ಮತ್ತೆ ನಟನ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಭಾನುವಾರ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿದೆ. ಇದನ್ನೂ ಓದಿ: ನನ್ನ ಹೆಸರಿನಲ್ಲಿ ದುಡ್ಡು ಕೇಳಿದರೆ ಕೊಡಬೇಡಿ: ಎಸ್. ನಾರಾಯಣ್

    ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ತೆಗೆಯಲಾಗಿದೆ. ಗ್ಯಾಂಗ್ರಿನ್ ಬಲಗಾಲಿಗೂ ಸ್ಪ್ರೆಡ್ ಆಗುತ್ತಿದ್ದು ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಬಿಪಿ ಮತ್ತು ಶುಗರ್ ಏರುಪೇರಾಗುತ್ತಿದ್ದು, ವಯಸ್ಸು 70 ದಾಟಿರುವ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆದರೆ ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ ಎಂದು ಪುತ್ರ ಆಕಾಶ್ ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ರಸ್ತೆ ಗುಂಡಿ ಆಯ್ತು, ಈಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ..!

  • ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ

    ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ಕೆಲ ದಿನಗಳ ಹಿಂದೆ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಕಳೆದ ಶುಕ್ರವಾರ ಹೃದಯಾಘಾತ ಕೂಡ ಸಂಭವಿಸಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.

    ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಸದ್ಯ ನಟನ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಭಾನುವಾರ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿದೆ. ಇದನ್ನೂ ಓದಿ: ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

    ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ತೆಗೆಯಲಾಗಿದೆ. ಗ್ಯಾಂಗ್ರಿನ್ ಬಲಗಾಲಿಗೂ ಸ್ಪ್ರೆಡ್ ಆಗುತ್ತಿದ್ದು ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಬಿಪಿ ಮತ್ತು ಶುಗರ್ ಏರುಪೇರಾಗುತ್ತಿದ್ದು, ವಯಸ್ಸು 70 ದಾಟಿರುವ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆದರೆ ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ ಎಂದು ಪುತ್ರ ಆಕಾಶ್ ಜಿತ್ ಮಾಹಿತಿ ನಿಡಿದ್ದಾರೆ.

    ಇದೇ ವೇಳೆ ಕಳೆದ ಕೆಲ ವರ್ಷಗಳಿಂದ ಗ್ಯಾಂಗ್ರಿನ್ ನಿಂದ ಬಳಲುತ್ತಿರುವ ಕಾರಣ ಹಣದ ಸಮಸ್ಯೆ ಇರುವುದು ನಿಜ. ಆದರೆ ಜನರಿಂದ ಹಣ ಪಡೆಯುವುದು ಇಷ್ಟವಿಲ್ಲ. ಫಿಲ್ಮ್ ಚೇಂಬರ್, ಸರ್ಕಾರ ಅಥವಾ ಇನ್ಶೂರೆನ್ಸ್ ಕಡೆಯಿಂದ ಹಣ ಕೊಟ್ಟರೆ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂದು ಆಕಾಶ್ ಅಳಲು ತೋಡಿಕೊಂಡಿದ್ದಾರೆ.