Tag: sathish reddy

  • ಶಾಸಕ ಸತೀಶ್ ರೆಡ್ಡಿಗೆ ಮಾತೃವಿಯೋಗ

    ಶಾಸಕ ಸತೀಶ್ ರೆಡ್ಡಿಗೆ ಮಾತೃವಿಯೋಗ

    ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ (MLA Sathish Reddy Mother) ಅವರ ತಾಯಿ ವಿಧಿವಶರಾಗಿದ್ದಾರೆ.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಾಪಮ್ಮ ಅವರು ಇಂದು ಬೆಳಗ್ಗೆ ಸತೀಶ್ ರೆಡ್ಡಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್

    ಹೊಂಗಸಂದ್ರದ ಶಾಸಕರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಹೊಂಗಸಂದ್ರದ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

    ತಾಯಿಯ ಜೊತೆ ಅತೀವ ಪ್ರೀತಿ ಹೊಂದಿದ್ದ ಶಾಸಕರು ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ತಾಯಿ ಕಾಲಿಗೆ ಪೂಜೆ ಸಲ್ಲಿಸಿದ್ದರು. ಇದೀಗ ತಾಯಿಯ ನಿಧನದಿಂದ ತೀವ್ರ ದುಃಖಿತರಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!

    ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!

    – ಮತ್ತಷ್ಟು ಡ್ರಿಲ್‍ಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆ

    ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ರೋಚಕ ಕಹಾನಿ ಕೆದಕಿದಷ್ಟು ಬಯಲಿಗೆ ಬರುತ್ತಿದೆ.

    ಆಗಸ್ಟ್ 12 ರಾತ್ರಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ 2 ಕಾರ್‍ಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಒಂದೆಡೆ ಖಾಕಿ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿದ್ದರೆ, ಇತ್ತ ಪಕ್ಕದ ರೋಡಲ್ಲೇ ಆರೋಪಿಗಳ ರೌಂಡ್ಸ್ ಹೊಡೆಯುತ್ತಿದ್ದಾರೆ. ಮಧ್ಯರಾತ್ರಿ ಸುಮಾರು 1:30ಕ್ಕೆ ಬೆಂಕಿ ಹಚ್ಚಿ, 2:30ಕ್ಕೆ ಪಕ್ಕದ ರಸ್ತೆಯಲ್ಲೇ ಇದ್ದರಂತೆ. ಮನೆ ಮುಂದಿರೋ ಬೈಕ್‍ಗಳ ಕಳ್ಳತನಕ್ಕೆ ಆರೋಪಿಗಳು ಸರ್ಕಸ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್

    ಆ 1 ಗಂಟೆಯಲ್ಲಿ 50ಕ್ಕೂ ಹೆಚ್ಚು ಬೈಕ್ ಕದಿಯಲು ಯತ್ನ ಮಾಡಿದ್ದರು. ಕೊನೆಗೆ 2:32ಕ್ಕೆ ಪ್ಲಾಟಿನಾ ಬೈಕ್ ಕದ್ದು ಆರೋಪಿಗಳು ಕಾಲ್ಕಿತ್ತಿದ್ದಾರೆ. ಆರೋಪಿಗಳ ಬೈಕ್ ಕಳ್ಳತನದ ಫುಲ್‍ಸೀನ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಒಂದಲ್ಲ, ಎರಡಲ್ಲ 80 ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದೆ. ಇದುವರೆಗೆ 50ಕ್ಕೂ ಹೆಚ್ಚು ಸಿಸಿಕ್ಯಾಮೆರಾಗಳ ಪರಿಶೀಲನೆ ಮಾಡಲಾಗಿದೆ.

  • ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್

    ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್

    ಬೆಂಗಳೂರು: ನಗರದ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಒಳಗಿದ್ದ ಎರಡು ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಐದು ತಂಡಳಾಗಿ ತೀವ್ರ ಹುಡುಕಾಟ ನಡೆದಿದ್ದ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ನೇಪಾಳ ಮೂಲದ ಸಾಗರ್ ಮತ್ತು ಸ್ಥಳೀಯರಾದ ಶ್ರೀಧರ್ ಗೌಡ ಮತ್ತು ನವೀನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದ ವೇಳೆ ಲಾಕ್ ಡೌನ್ ನಂತರ ಈ ಮೂವರು ಕೆಲಸವಿಲ್ಲದೇ ತೀವ್ರ ಪರದಾಡಿದ್ದರು. ಆದರೆ ಎಲ್ಲೂ ಕೂಡ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಶಾಸಕ ಸತೀಶ್ ರೆಡ್ಡಿ ಬಳಿ ಸಹಾಯ ಕೇಳೋಕೆ ಅಂತಾ ಬಂದಿದ್ರು. ಮೂರು ಬಾರಿ ಶಾಸಕರನ್ನು ಭೇಟಿ ಮಾಡೋಕೆ ಟ್ರೈ ಮಾಡಿದರು ಕೂಡ ಎಂಎಲ್‍ಎ ಮನೆ ಸೆಕ್ಯೂರಿಟಿ ಗಾರ್ಡ್ ಒಳಗೆ ಬಿಟ್ಟಿರಲಿಲ್ಲ. ಇದನ್ನೂ ಓದಿ: ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

    ಇಡೀ ದಿನ ಕಾದರು ಕೂಡ ಒಮ್ಮೆ ಭೇಟಿಗೂ ಅವಕಾಶ ಕೊಟ್ಟಿರಲಿಲ್ವಂತೆ. ಹೊಟ್ಟೆಗೆ ಊಟವಿಲ್ಲದೇ ಇಡೀ ದಿನ ಕಾದರೂ ಒಮ್ಮೆಯೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡ ಮೂವರು ಆರೋಪಿಗಳು, ಕಂಠಪೂರ್ತಿ ಕುಡಿದು ಶ್ರೀಮಂತರು ಶ್ರೀಮತಾಗೇ ಇರ್ತಾರೆ ನಮ್ಮಂಥ ಬಡವರು ಬಡರಾಗೇ ಸಾಯಬೇಕು ಅಂತಾ ಹತಾಶೆಗೊಂಡಿದ್ರು. ಇದೇ ಮತ್ತಿನಲ್ಲಿ ಶಾಸಕರ ಮನೆ ಬಳಿ ಬಂದು ಬೈಕಿನಲ್ಲಿ ಪೆಟ್ರೋಲ್ ಕಳವು ಮಾಡಿ ಮನೆ ಬಳಿಯಿದ್ದ ಎರಡು ಕಾರುಗಳಿಗೆ ಬೆಂಕಿ ಹಾಕಿ ಎಸ್ಕೇಪ್ ಆಗಿದ್ದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.

    ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು ಬೇರೆ ಏನಾದರೂ ಕಾರಣ ಇದೆಯಾ ಅನ್ನೋದನ್ನು ತನಿಖೆ ಮಾಡ್ತಿದ್ದಾರೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

  • ಕಾರುಗಳಿಗೆ ಬೆಂಕಿ ಹಚ್ಚಿದವರನ್ನು ಸಂಜೆಯೊಳಗೆ ಬಂಧನ ಮಾಡೋ ಸಾಧ್ಯತೆ: ಸತೀಶ್ ರೆಡ್ಡಿ

    ಕಾರುಗಳಿಗೆ ಬೆಂಕಿ ಹಚ್ಚಿದವರನ್ನು ಸಂಜೆಯೊಳಗೆ ಬಂಧನ ಮಾಡೋ ಸಾಧ್ಯತೆ: ಸತೀಶ್ ರೆಡ್ಡಿ

    ಬೆಂಗಳೂರು: ಇಂದು ಸಂಜೆಯೊಳಗೆ ಕಾರುಗಳಿಗೆ ಬೆಂಕಿ ಹಚ್ಚಿದವರ ಬಂಧನಮಾಡುವ ಸಾಧ್ಯತೆಗಳಿವೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ 25 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರನ್ನ ಕೃತ್ಯದಲ್ಲಿ ಭಾಗಿಯಾಗಿರೋದು ಮನವರಿಕೆಯಾಗಿದೆ. ಬೇರೆ ಬೇರೆ ಆಯಾಮಾಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದರು.

    ನನಗೆ ವೈಯಕ್ತಿಕವಾಗಿ ಯಾರು ದ್ವೇಷಿಗಳಿಲ್ಲ. ಬೆಂಗಳೂರಿನಲ್ಲಿ ಯಾರು ಏನ್ ಬೇಕಾದ್ರು ಯಾವ ಶಾಸಕರ ಮನೆಗೂ ಹೋಗಬಹುದೆಂಬ ಸಂದೇಶ ಕಳಿಸುವ ದೃಷ್ಟಿಯಿಂದ ಕೃತ್ಯ ಎಸಗಿಸರೋ ಶಂಕೆ ಇದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಂಜೆಯೊಳಗೆ ಆರೋಪಿಗಳನ್ನು ಅರೆಸ್ಟ್ ಮಾಡುವ ಭರವಸೆ ನೀಡಿರುವುದಾಗಿ ರೆಡ್ಡಿ ಹೇಳಿದರು. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

    ಡಿಜೆ ಹಳ್ಳಿ ಗಲಭೆ ನಡೆದು ಬರೋಬ್ಬರಿ ಒಂದು ವರ್ಷ ಆಗೋದರೊಳಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯ ಎರಡು ಕಾರುಗಳು ಧಗಧಗಿಸಿವೆ. ಮಧ್ಯರಾತ್ರಿ 1 ಗಂಟೆ 23 ನಿಮಿಷಕ್ಕೆ ಸತೀಶ್ ರೆಡ್ಡಿಯ ಮನೆ ಹಿಂಭಾಗದಿಂದ ಆವರಣ ಪ್ರವೇಶಿಸಿದ ದುಷ್ಕರ್ಮಿಗಳು ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದರು. ಘಟನೆಯಲ್ಲಿ ಫಾರ್ಚುನರ್ ಕಾರು ಸೇರಿದಂತೆ ಎರಡು ಕಾರು ಬೆಂಕಿಗಾಹುತಿ ಆಗಿವೆ. ಕಾರಿನ ಬ್ಯಾಟರಿ ಸ್ಫೋಟಗೊಂಡಾಗ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸುವಷ್ಟರದಲ್ಲಿ ಕಾರುಗಳು ಸುಟ್ಟು ಕರಕಲಾಗಿವೆ.

    ವಿವಾದಿತ ಬೇಗೂರು ಕೆರೆಯಲ್ಲಿ ಪ್ರತಿಪ್ಠಾಪಿಸಿದ್ದ ಶಿವನ ವಿಗ್ರಹಕ್ಕೆ ಪೂಜೆ ಮಾಡಲು ಮುಂದಾಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಸತೀಶ್ ರೆಡ್ಡಿ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಇದೇ ಆಯಾಮದಲ್ಲಿ ತನಿಖೆ ಕೂಡ ನಡೆಸಿದ್ದಾರೆ. ಈಗಾಗಲೇ ಹಲವು ಅನುಮಾನಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

  • ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

    ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

    – ಪ್ರಕರಣವನ್ನು ರಾಜಕೀಯವಾಗಿ ತೆಗೆದುಕೊಳ್ಳಲ್ಲ

    ಆನೇಕಲ್: ಕೇವಲ 7 ನಿಮಿಷಗಳಲ್ಲಿ ಕಾರುಗಳಿಗೆ ಬೆಂಕಿ ಇಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

    ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಪ್ರಕಾರ 1 ಗಂಟೆ 23 ನಿಮಿಷಕ್ಕೆ ಇಬ್ಬರು ಎಂಟ್ರಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ ನಿಂದ ಇಬ್ಬರು ಎಸ್ಕೇಪ್ ಆಗಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

    ಹಿಂದಿನ ಗೇಟ್ ನಲ್ಲಿ ಸಿಸಿಟಿವಿ ಇದೆ ಅದರೆ ಅರಲ್ಲಿ ಮುಖ ಸರಿಯಾಗಿ ಕಾಣಿಸೋದಿಲ್ಲ. ಪೊಲೀಸ್, ವಾಚ್ ಮೆನ್ ಇಬ್ಬರು ಮುಂದಿನ ಗೇಟಿನ ಬಳಿ ಇದ್ದರು. ಬೈಕ್ ಗಳಲ್ಲಿ ಇಬ್ಬರು ಬಂದಿದ್ರು ಅನ್ನೋದು ಗೊತ್ತಾಗಿದೆ. ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ನನಿಗೆ ಇಲ್ಲಿ ಯಾವುದೇ ರಾಜಕೀಯ ವೈಷ್ಯಮ ಇಲ್ಲ. ಹೀಗಾಗಿ ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ. ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದ್ರೂ ಮಾಡಬಹುದು ಅಂತಾ ತೋರಿಸೋಕೆ ಹೀಗೆ ಮಾಡಿದ್ದಾರೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

  • ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಬೆಂಗಳೂರು: ಶಾಸಕ ಸತೀಶ್ ರೆಡ್ಡಿಗೆ ಸೇರಿದ ಎರಡು ಕಾರುಗಳು ಬೆಂಕಿಗಾಹುತಿಯಾಗಿದೆ.

    ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಫಾರ್ಚೂನರ್ ಕಾರು ಸೇರಿದಂತೆ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.

    ಸತೀಶ್ ರೆಡ್ಡಿಯವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

    ಈ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಕಾರಿಗೆ ಕಿಡಿಗೇಡಿಗಳು ಕಾರಿಗೆ ಬೆಂಕಿ ಹಾಕಿದ್ದಾರೆ. ಘಟನೆಯಲ್ಲಿ ಎರಡು ಕಾರುಗಳು ಭಸ್ಮವಾಗಿದೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾರು ಮಾಡಿದ್ದಾರೆ..? ಏಕೆ ಮಾಡಿದ್ದಾರೆ..? ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ದುಷ್ಕೃತ್ಯದ ಬಗ್ಗೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು ಸದ್ಯದಲ್ಲೆ ಆರೋಪಿ ಗಳ ಬಂಧಿಸುವ ವಿಶ್ವಾಸ ಇದೆ ಎಂದರು.

  • ಬೆಡ್ ಬ್ಲಾಕ್ ದಂಧೆ ಪ್ರಕರಣ – ಸತೀಶ್ ರೆಡ್ಡಿ ಆಪ್ತನ ಬಂಧನಕ್ಕೆ ಸಿಸಿಬಿ ಸಿದ್ಧತೆ

    ಬೆಡ್ ಬ್ಲಾಕ್ ದಂಧೆ ಪ್ರಕರಣ – ಸತೀಶ್ ರೆಡ್ಡಿ ಆಪ್ತನ ಬಂಧನಕ್ಕೆ ಸಿಸಿಬಿ ಸಿದ್ಧತೆ

    ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬಿಜೆಪಿ ಶಾಸಕ್ ಸತೀಶ್ ರೆಡ್ಡಿ ಆಪ್ತ ಬಾಬು ಬಂಧನಕ್ಕೆ ಸಿಸಿಬಿ ಸಕಲ ತಯಾರಿ ನಡೆಸಿದೆ.

    ಶಾಸಕ ಸತೀಶ್ ರೆಡ್ಡಿ ಹಾಗೂ ಪಿಎ ಹರೀಶ್‍ಗೆ ಕಿಂಗ್‍ಪಿನ್ ಬಾಬು ಖಾಸಾ ದೋಸ್ತಿ ಹೊಂದಿದ್ದಾನೆ. ಸತೀಶ್ ರೆಡ್ಡಿ ಮಾತಿನಂತೆಯೇ ಬಾಬು ಬೆಡ್ ಬ್ಲಾಕ್ ಮಾಡಿಸುತ್ತಿದ್ದಾಗಿ ತಿಳಿದು ಬಂದಿದೆ. ಜೊತೆಗೆ ಕೆಲವರಲ್ಲಿ ಪ್ರತ್ಯೇಕವಾಗಿ ಹಣ ಪಡೆದು ಬೆಡ್ ಬ್ಲಾಕ್ ಮಾಡಿರುವ ಸಾಧ್ಯತೆಯೂ ಇದೆ. ಬಾಬುಗೆ ಸಿಸಿಬಿ ಡ್ರಿಲ್ ಮಾಡಿದ ಬೆನ್ನಲ್ಲೇ ಈಗ ಬಿಪಿ ಏರುಪೇರಾಗಿ ಆಸ್ಪತ್ರೆ ಪಾಲಾಗಿದ್ದಾನೆ. ಈ ಬೆನ್ನಲ್ಲೇ ಕೊರೋನಾ ಪಾಸಿಟಿವ್ ಆಗಿದ್ಯಂತೆ.

    ತೇಜಸ್ವಿ ಸೂರ್ಯ ರೇಡ್ ಮಾಡಿದ್ದಾಗ ಸತೀಶ್ ರೆಡ್ಡಿ ಜೊತೆಯಲ್ಲೇ ಇದ್ದ ಬಾಬು, ವಾರ್‍ರೂಂ ಸಿಬ್ಬಂದಿಗೆ ಫುಲ್ ಅವಾಜ್ ಹಾಕಿದ್ದರು. ಸತೀಶ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಬೊಮ್ಮನಹಳ್ಳಿ ವಲಯದ ವಾರ್ ರೂಮ್‍ಗೆ ನುಗ್ಗಿ ಕರ್ತವ್ಯ ನಿರತ ವೈದ್ಯೆ ಪಲ್ಲವಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ, ನೊಡೇಲ್ ಆಫೀಸ್ ಯಶವಂತ್ ಅನ್ನೋವ್ರಿಗೆ ಬೆಡ್ ಹಂಚಿಕೆ ವಿಷಯವಾಗಿ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಬೆಡ್ ದಂಧೆ ನಡೆಯೋದು ಹೇಗೆ ಅನ್ನೋದನ್ನ ವಿವರಿಸಿದ ತೇಜಸ್ವಿ ಸೂರ್ಯ

    ಐಎಎಸ್ ಅಧಿಕಾರಿ ಕೈ ಮುಗಿದು ಮಾತನಾಡಲು ಅವಕಾಶ ಕೊಡಿ ಅಂದರೂ ಬಿಟ್ಟಿಲ್ಲ. ಈ ವೇಳೆ ನನಗೇನಾದರೂ ಆದರೆ ನಿಮ್ಮ ಮೇಲೆ ಎಫ್‍ಐಆರ್ ದಾಖಲಿಸ್ತೇನೆ ಅಂತ ಪೊಲೀಸರಿಗೆ ಯಶವಂತ್ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಸತೀಶ್ ರೆಡ್ಡಿ ಬೆಂಬಲಿಗರು ಮತ್ತಷ್ಟು ರಾದ್ಧಾಂತ ಸೃಷ್ಟಿಸಿದ್ದಾರೆ. ತೇಜಸ್ವಿ ಸೂರ್ಯ ರೇಡ್‍ಗೆ ಮುಂಚೆ ಅಂದರೆ ಏಪ್ರಿಲ್ 30ರಂದು ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

  • ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಡಿಕೆಶಿ ಅಭಿನಂದನೆ

    ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಡಿಕೆಶಿ ಅಭಿನಂದನೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕ್ ದಂಧೆಯನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಡಿಕೆಶಿ ಈ ಅಭಿನಂದನೆಯನ್ನು ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ಬೆಡ್ ಬ್ಲಾಕ್ ದಂಧೆ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾರ ನಿಯಂತ್ರಣದಲ್ಲಿದೆ ಬಿಬಿಎಂಪಿ..!? ಆ ಬಿಜೆಪಿ ಸಚಿವನೇ ನೇರ ಹೊಣೆ ಹೊರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಏನಿದು ಪ್ರಕರಣ..?
    ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿದೆ.

  • ಅನಂತ್ ಕುಮಾರ್ ಇಲ್ಲದಿರುವಿಕೆ ಎದ್ದು ಕಾಣ್ತಿದೆ – ಸಿಎಂ ವಿರುದ್ಧ ಸತೀಶ್ ರೆಡ್ಡಿ ಕೆಂಡಾಮಂಡಲ

    ಅನಂತ್ ಕುಮಾರ್ ಇಲ್ಲದಿರುವಿಕೆ ಎದ್ದು ಕಾಣ್ತಿದೆ – ಸಿಎಂ ವಿರುದ್ಧ ಸತೀಶ್ ರೆಡ್ಡಿ ಕೆಂಡಾಮಂಡಲ

    ಬೆಂಗಳೂರು: ಇಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಭಾರೀ ಹೈಡ್ರಾಮಾ ನಡೆಯುತ್ತಿದೆ. 7 ಮಂದಿ ಸಚುವರಾಗಿ ಪ್ರಮಾಣ ವಚನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಬೆನ್ನಲ್ಲೇ ಸ್ವಪಕ್ಷದವರೇ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂಬಂಧ ಶಾಸಕ ಸತೀಶ್ ರೆಡ್ಡಿ ಟ್ವೀಟ್ ಮಾಡಿ ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಇದೇ ವೇಳೆ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ, ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

  • ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಾಮೈದ ಎಂದು ಹೇಳಿಕೊಂಡು ಗೂಂಡಾಗಿರಿ- ಕಾರ್ ಗೆ ಸೈಡ್ ಬಿಡ್ಲಿಲ್ಲವೆಂದು ಚಾಲಕನ ಮೇಲೆ ಮರಣಾಂತಿಕ ಹಲ್ಲೆ

    ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಾಮೈದ ಎಂದು ಹೇಳಿಕೊಂಡು ಗೂಂಡಾಗಿರಿ- ಕಾರ್ ಗೆ ಸೈಡ್ ಬಿಡ್ಲಿಲ್ಲವೆಂದು ಚಾಲಕನ ಮೇಲೆ ಮರಣಾಂತಿಕ ಹಲ್ಲೆ

    ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಾಮೈದ ಅಂತ ಹೇಳಿಕೊಂಡು ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ.

    ಕೋರಮಂಗಲದ ಬಳಿ ಕಾರು ಮುಂದೆ ಹೋಗಲು ಬೇಗ ಸ್ಥಳಾವಕಾಶ ಮಾಡಿಕೊಡಲಿಲ್ಲ ಅಂತ ಚಾಲಕನನ್ನ ಅಡ್ಡಗಟ್ಟಿ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಾನು ಯಾರು ಗೊತ್ತಾ? ನನಗೆ ಸೈಡ್ ಬಿಡಲು ವಿಳಂಬ ಮಾಡ್ತಿಯಾ ಅಂತೆಲ್ಲಾ ಧಮ್ಕಿ ಹಾಕಿದ್ದಾನೆ.

    ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಚಾಲಕ ತಿಪ್ಪೇಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.

    ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ಶಾಸಕ ಸತೀಶ್ ರೆಡ್ಡಿ, ನನಗೆ ಬಾಮೈದನೇ ಇಲ್ಲ ಎಂದು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.