Tag: sathish jarakiholi

  • ಹೊಂದಾಣಿಕೆ ಕೊರತೆ, 8 ಸ್ಥಾನ ಕಳೆದುಕೊಂಡ ಕಾಂಗ್ರೆಸ್ – ಸತೀಶ್ ಆತ್ಮಾವಲೋಕನ

    ಹೊಂದಾಣಿಕೆ ಕೊರತೆ, 8 ಸ್ಥಾನ ಕಳೆದುಕೊಂಡ ಕಾಂಗ್ರೆಸ್ – ಸತೀಶ್ ಆತ್ಮಾವಲೋಕನ

    ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಹೊಂದಾಣಿಕೆ ಇಲ್ಲದೇ ಕೆಲವು ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೊದಲೇ ಹೈಕಮಾಂಡ್ ಗೆ ತಿಳಿಸಿದಂತೆ ನಮ್ಮ ನಿಗದಿತ 15 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವುದಾಗಿ ಹೇಳಿದ್ದೆವು. ಹಾಗಾಗಿ ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. ಆದರೆ ನಗರದ ಉತ್ತರ ಕ್ಷೇತ್ರದಲ್ಲಿ ನಮ್ಮ ಆಂತರಿಕ ಹೊಂದಾಣಿಕೆ ಕಾರಣದಿಂದಾಗಿ 8 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

    ಈಗಾಗಲೇ ಬಿಜೆಪಿ ಪಾಲಿಕೆ ಗದ್ದುಗೆಗೇರಲು ಅಗತ್ಯವಿರುವ ಬಹುಮತವನ್ನು ತನ್ನಲ್ಲೇ ಹೊಂದಿದೆ. ಇನ್ನು ಪಕ್ಷೇತರರಲ್ಲಿ ಎಷ್ಟೇಜನ ಕಾಂಗ್ರೆಸ್‍ಗೆ ಬೆಂಬಲ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

  • ಬೆಳಗಾವಿಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ್ರೆ ಬಿಜೆಪಿ ಅಭ್ಯರ್ಥಿ ಗೆಲ್ತಾರೆ : ಪ್ರಹ್ಲಾದ್ ಜೋಶಿ

    ಬೆಳಗಾವಿಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ್ರೆ ಬಿಜೆಪಿ ಅಭ್ಯರ್ಥಿ ಗೆಲ್ತಾರೆ : ಪ್ರಹ್ಲಾದ್ ಜೋಶಿ

    ಬೆಳಗಾವಿ: ಇನ್ನೂ 20 ವರ್ಷ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ನೀವು ರಾಹುಲ್ ಗಾಂಧಿಯನ್ನು ಪ್ರಚಾರಕ್ಕೆ ಕರೆಸಬಹುದು. ಆದರೆ ನಿಮಗೆ ಅಧಿಕಾರ ಸಿಗುವುದಿಲ್ಲ. ರಾಹುಲ್ ಗಾಂಧಿ ಕಾಲಿಟ್ಟರೆ ಸಾಕು ಐದಾರು ಲಕ್ಷ ಮತಗಳ ಅಂತರದಲ್ಲಿ ಮಂಗಳ ಅಂಗಡಿ ಗೆಲ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ ಉಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ರಕ್ಷಣೆ, ಸಮಗ್ರತೆ ಪ್ರಶ್ನೆ ಬಂದಾಗ ಕಾಂಗ್ರೆಸ್ ಪಕ್ಷವು ವಿದೇಶಗಳೊಂದಿಗೆ ರಾಜಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಕಾಂಗ್ರೆಸ್ ಪಕ್ಷವು ಚೀನಾದಿಂದ ಹಣ ಪಡೆದುಕೊಂಡು ಉಚಿತ ವ್ಯಾಪಾರದ ಒಪ್ಪಂದವನ್ನು ಮಾಡಿಕೊಂಡು, ಭಾರತದ ವ್ಯಾಪಾರ-ವಹಿವಾಟುಗಳಿಗೆ ನಷ್ಟ ಮಾಡಿದೆ. ದೇಶದ ಹಿತದ ವಿರುದ್ದವಾದ ಒಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿಯನ್ನು ಇಲ್ಲಿ ಒತ್ತಾಯಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದೆ. ಡಿಕೆಶಿ ಸತೀಶ್ ಜಾರಕಿಹೊಳಿಯನ್ನು ಹಿಡಿದುಕೊಂಡು ಬಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ಗೆಲ್ಲುವ ಪ್ರಶ್ನೆ ಇಲ್ಲ. ಒಂದು ವೇಳೆ ಗೆದ್ದರೆ, ಪಾರ್ಲಿಮೆಂಟ್ ನಲ್ಲಿ ಸದನದ ಬಾವಿಯೊಳಗಿಳಿದು ಮೋದಿ ವಿರುದ್ದ ಧಿಕ್ಕಾರ ಎಂದು 51 ಜನ ಕೂಗುತ್ತಿರುತ್ತಾರೆ. ಅವರೊಂದಿಗೆ ಇವರು 52ನೇಯವರಾಗಿ ಸೇರಿಕೊಳ್ಳುತ್ತಾರೆ. ಈ ರೀತಿ ಸದನದೊಳಗೆ ಕೂಗಾಡುವವರು ಬೇಕೋ ಅಥವಾ ದೇಶದಲ್ಲಿ ಕೃಷಿಗಾಗಿ ಒಳ್ಳೆಯ ಕಾನೂನನ್ನು ತಂದು, ನೀರಾವರಿಗೆ ದುಡ್ಡು ಕೊಟ್ಟು, ಜಗತ್ತಿನಲ್ಲಿ ದೇಶದ ಗರಿಮೆಯನ್ನು ಜಾಸ್ತಿ ಮಾಡಿರುವ ಪಕ್ಷದ ನಾಯಕನ ಪರವಾಗಿ ಕೈ ಎತ್ತುವವರು ಬೇಕೋ ನೀವೇ ನಿರ್ಧರಿಸಿ ಎಂದು ಮನವಿ ಮಾಡಿದರು.

    ರಾಮಮಂದಿರ ನಿರ್ಮಾಣಕ್ಕೆ ಯಾರು ಒಂದು ನಯಾ ಪೈಸೆ ದುಡ್ಡು ಕೊಟ್ಟಿಲ್ಲವೋ ಅವರು ಲೆಕ್ಕ ಕೇಳ್ತಿದ್ದಾರೆ. ನೀವು ಹಣ ಕೊಟ್ಟಿಲ್ಲ. ಹಾಗಾಗಿ ನಿಮಗೆ ಲೆಕ್ಕ ಕೊಡಲ್ಲ. ಜನರಿಗೆ ಕೊಡ್ತೀವಿ. ಸಿದ್ದರಾಮಯ್ಯ ನಾನು ಸಿಎಂ ಆಗ್ತಿನೋ ಡಿಕೆಶಿ ಸಿಎಂ ಆಗ್ತಾರೋ ಅಂತ ಕನಸು ಕಾಣ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ಬರಲು ಸಾಧ್ಯವೇ ಇಲ್ಲ. ನೀವು ಸುಮ್ಮನೆ ಮನೆಗೆ ಹೋಗ್ತಿರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

  • ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ರು ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್..!

    ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ರು ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್..!

    – ಭರವಸೆಗಳ ಮಹಾಪೂರವೇ ಹರಿಸಿದ ಶ್ರೀರಾಮುಲು

    ಬೆಳಗಾವಿ/ರಾಯಚೂರು: ಲೋಕಸಭಾ ಚುನಾವಣೆಗೆ ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಈಗ ಒಗ್ಗಟ್ಟಿನ ಪ್ರದರ್ಶನ ಆಗ್ತಿದೆ.

    ಕಳೆದ ಬಾರಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ವೈಮನಸ್ಸು ಹೊಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕೆಲ ಹೊತ್ತು ಸಮಾಲೋಚನೆ ಮಾಡಿದ್ದಾರೆ. ಬಳಿಕ ಸತೀಶ್ ಜಾರಕಿಹೊಳಿ ಪರ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ರು.

    ಪ್ರಚಾರ ಭಾಷಣದ ವೇಳೆಯೂ ಸತೀಶ್ ಜಾರಕಿಹೊಳಿಯರನ್ನೂ ಸೂಕ್ತ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದಾರೆ. ಸತೀಶ್ ಜಾರಕಹೊಳಿ ಮಾತನಾಡಿ, ಇದು ಕಾರ್ಯಕರ್ತರು ಮಾಡುವ ಚುನಾವಣೆ, ಕೇಂದ್ರ ಸರ್ಕಾರದ 7 ವರ್ಷದ ವೈಫಲ್ಯವನ್ನ ಜನರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇತ್ತ ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಚಿವ ಶ್ರೀರಾಮುಲು ಮೀಸಲಾತಿ ನೀಡುವ ಕುರಿತ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನಾನೇ ಸಮಾಜ ಕಲ್ಯಾಣ ಸಚಿವನಾಗಿದ್ದೇನೆ. ಪರಿಶಿಷ್ಟ ಜಾತಿಯವರಿಗೆ ಶೇ.17, ಪರಿಶಿಷ್ಟ ವರ್ಗಕ್ಕೆ ಶೇ 7.5, ಮೀಸಲಾತಿ, ಲಿಂಗಾಯತರನ್ನ 2 ಎಗೆ, ಕುರುಬರನ್ನ ಎಸ್‍ಟಿಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಒಂದು ಲೋಕಸಭೆ, ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವು ನಿಶ್ಚಿತ ಅಂದ್ರು.

  • ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ: ಸತೀಶ್ ಜಾರಕಿಹೊಳಿ

    ಚಾಮರಾಜನಗರ: ಮಹಾರಾಷ್ಟ್ರದವರು ಹೇಳೋದು ಹೊಸದೇನಲ್ಲ. ಸುಮಾರು ವರ್ಷದಿಂದ ಇದನ್ನೇ ಹೇಳ್ತಿದ್ದಾರೆ. ಹೊಸ ಸರ್ಕಾರ ಬಂದ ವೇಳೆ ಇಂತಹ ಹೇಳಿಕೆ ಕೊಡ್ತಾರೆ. ಅದು ಮುಗಿದು ಹೋಗಿರುವ ಅಧ್ಯಾಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕ್ಯಾತೆ ಕುರಿತು ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕ್ಷ್ಯಚಿತ್ರ ರಿಲೀಸ್ ಮಾಡಿದ್ರೆ ಏನಾಯ್ತು. ನಾವೂ ಬೆಳಗಾವಿಯನ್ನು ಬಿಡೊಕ್ಕಾಗುತ್ತಾ. ಬೆಳಗಾವಿ ಕರ್ನಾಟಕದಲ್ಲಿದೆ, ಇಲ್ಲೆ ಇರುತ್ತೆ. ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಾನು ಕೂಡ ಹಲವು ಬಾರಿ ಈ ವಿಚಾರ ಮಾತನಾಡಿದ್ದೀವಿ. ಈಗ ಬಿಜೆಪಿ ಸರ್ಕಾರವಿರೋದ್ರಿಂದ ಅವರೇ ಈ ಕುರಿತು ಮಾತನಾಡಬೇಕು. ಮೂರು ರಾಜ್ಯದಲ್ಲೂ ಕೂಡ ಅವರದ್ದೇ ಸರ್ಕಾರವಿದೆ. ಆದರೆ ಯಾಕೆ ಮಹಾದಾಯಿ ವಿಚಾರ ಬಗೆಹರಿಸಿಲ್ಲ. ಇದು ರಾಜ್ಯ ಇಶ್ಯಾ ಇದೆ ಎಂದು ಕಿಡಿಕಾರಿದರು.

    ಮಹಾರಾಷ್ಟ್ರ ಸರ್ಕಾರಕ್ಕೆ ಕೇಳುವ ಹಕ್ಕಿದೆ. ಅದೇ ರೀತಿ ನಮಗೂ ಕೂಡ ಹಕ್ಕಿದೆ. ಕಾಂಗ್ರೆಸ್ಸಿನವರೂ ಬೆಳಗಾವಿ ಬಿಟ್ಟುಕೊಡಕ್ಕಾಗುತ್ತಾ? ನಾವೆಲ್ಲಾ ಬಿಡ್ತೀವಾ? ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿದ ಅವರು, ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡಲೇಬೇಕು, ಬೇರೆ ದಾರಿಯಿಲ್ಲ. ಪಕ್ಷ ಜವಾಬ್ದಾರಿ ವಹಿಸಿದ್ರೆ ಅದಕ್ಕೆ ಬದ್ಧನಾಗಿರುತ್ತೀನಿ ಎಂದರು.

    ಎಸ್‍ಟಿ ಸಮುದಾಯಕ್ಕೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕುರ್ಚಿಯ ಮೇಲೆ ಕುಳಿತ 24 ತಾಸಿನೊಳಗೆ ಏನೋ ಕೊಡ್ತೀನಿ ಅಂದ್ರು. ಡಿಸಿಎಂ ಕೊಡ್ತೀನಿ ಅಂತ ನಾಯಕರನ್ನು ಬುಟ್ಟಿಗೆ ಹಾಕಿಕೊಂಡ್ರು. ಇದೀಗ ಡಿಸಿಎಂ ಕೊಟ್ಟಿದ್ದಾರಾ? ಇಲ್ಲ. ಅಲ್ಲದೇ ಏಳೂವರೆ ಪರ್ಸೆಂಟ್ ಮೀಸಲಾತಿ ಕೊಡ್ತೀನಿ ಸಿಎಂ ಭಾಷಣ ಕೂಡ ಮಾಡಿದ್ದರು. ಭಾಷಣ ಮಾಡಿ ವೋಟ್ ಕೂಡ ಹಾಕಿಸಿಕೊಂಡಿದ್ದಾರೆ. ಯಾವಾಗ ಮೀಸಲಾತಿ ಕೊಡ್ತಾರೆ ಅಂತಾ ಅವರನ್ನೇ ಕೇಳಿ ಎಂದು ಹೇಳಿದರು.

  • ಸತೀಶ್ ಜಾರಕಿಹೊಳಿಗೆ ತಲೆ ಸರಿ ಇಲ್ಲ: ರಮೇಶ್ ಜಾರಕಿಹೊಳಿ

    ಸತೀಶ್ ಜಾರಕಿಹೊಳಿಗೆ ತಲೆ ಸರಿ ಇಲ್ಲ: ರಮೇಶ್ ಜಾರಕಿಹೊಳಿ

    ಕೊಪ್ಪಳ: ಸತೀಶ್ ಜಾರಕಿಹೊಳಿಗೆ ತಲೆ ಸರಿ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಕೊಪ್ಪಳ ತಾಲೂಕಿನ ಮುನಿರಾಬಾದನಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

    ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ನಿಭಾಯಿಸಲು ಸಾಗಲ್ಲ ಎಂದು ಈ ಹಿಂದೆ ಸತೀಶ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದು, ಆತನ ಬಗ್ಗೆ ಮಾತನಾಡುವುದು ಬೇಡ ಎಂದರು.

    ಕೊರೊನಾ ವೈರಸ್ ಬಗ್ಗೆ ಸಿಎಂ ಈಗಾಗಲೇ ಸಾಕಷ್ಟು ತಿಳಿಸಿದ್ದು, ಜಾಗೃತಿಯಿಂದ ಜನರು ಸ್ಪಂದನೆ ಮಾಡಬೇಕದೆ ಎಂದರು. ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸೂಚನೆ ಮೆರೆಗೆ ಈ ಹೆಜ್ಜೆ ತೆಗೆದುಕೊಂಡಿದೆ. ಒಂದು ವಾರದಲ್ಲಿ ಕೊರೊನಾ ವೈರಸ್ ಹತೋಟಿಗೆ ಬಂದು ರಾಜ್ಯದಲ್ಲಿ ಮೊದಲಿನಂತೆ ವ್ಯಾಪಾರ ವಹಿವಾಟು ಆಗಲಿದ್ದು, ಅನಿವಾರ್ಯವಾಗಿ ಜಾತ್ರೆಗಳನ್ನು ಸ್ಥಗಿತ ಮಾಡಬೇಕಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

  • ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    -ಸಿದ್ದರಾಮಯ್ಯಗೆ ಕುಂದಾನಗರಿಯ ಸಾರಥ್ಯ

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನರ್ಹಗೊಂಡಿರುವ ಎಲ್ಲ ಶಾಸಕರನ್ನು ಚುನಾವಣೆಯ ರಣರಂಗದಲ್ಲಿ ಎದುರಾಗುತ್ತೇನೆ. ಅಲ್ಲಿಯೇ ನಮ್ಮ-ನಿಮ್ಮ ಮುಖಾಮುಖಿ ಎಂದು ಸವಾಲು ಹಾಕಿದ್ದರು. ಆದರೆ ಇದೀಗ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಉಪ ಚುನಾವಣೆಯಿಂದ ದೂರ ಉಳಿಯುವಂತಾಗಿದೆ. ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.

    ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣ ಎಂದು ಡಿಕೆಶಿ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಗೋಕಾಕ್ ಅಖಾಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿ ಪರ ಕೈ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.

    ಪಕ್ಷ ತೊರೆದು ಸರ್ಕಾರ ಬೀಳಿಸಿದ್ದರಿಂದ ಸಹಜವಾಗಿ ರಮೇಶ್ ಜಾರಕಿಹೊಳಿ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಸೋದರನ ವಿರುದ್ಧ ಬಿರುಸಿನ ಪ್ರಚಾರದ ಪ್ಲಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯನ್ನ ಸೋಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿ ಹೊಳಿಯವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.

    ಬಂಡೆಗೆ ಸವಾಲ್ ಹಾಕಿದ ಸಾಹುಕಾರನಿಗೆ ಈಗ ಹೊಸ ಸವಾಲು ಎದುರಾಗಿದೆ. ಒಂದು ಕಡೆ ರಾಜಕೀಯ ಗುರು ಮತ್ತೊಂದು ಕಡೆ ಸಹೋದರ ಇಬ್ಬರ ಸವಾಲನ್ನ ಒಟ್ಟೊಟ್ಟಿಗೆ ರಮೇಶ್ ಜಾರಕಿಹೊಳಿ ಎದುರಿಸಬೇಕಾಗಿದೆ. ಎರಡೂ ಸವಾಲನ್ನ ಒಟ್ಟಿಗೆ ಎದುರಿಸಿ ಸಾಹುಕಾರ ಸೈ ಅನ್ನಿಸಿಕೊಳ್ಳುತ್ತಾರಾ ಅಥವಾ ಸೋತು ಕೈ ಚೆಲ್ತಾರಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ರಮೇಶ್ ಬಿಜೆಪಿಗೆ ಹೋಗುತ್ತಿರುವುದು ಏಕೆ? – ಸ್ಫೋಟಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ರಮೇಶ್ ಬಿಜೆಪಿಗೆ ಹೋಗುತ್ತಿರುವುದು ಏಕೆ? – ಸ್ಫೋಟಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ಬೆಳಗಾವಿ: ಅಣ್ಣ ಅಪ್ಪಿರಾವ್‍ನ ಮಹಾರಾಷ್ಟ್ರದ ಚಂದಗಢನಿಂದ ಶಾಸಕ ಮಾಡುವುದಾಗಿ ಪಣ ತೊಟ್ಟಿರುವ ಅಂಬಿರಾವ್‍ನೇ ರಮೇಶ್ ಜಾರಕಿಹೂಳಿ ಅವರನ್ನು ಬಿಜೆಪಿ ಕರೆದ್ಯೂಯುತ್ತಿದ್ದಾನೆ ಎಂದು ಸಚಿವ ಸತೀಶ್ ಜಾರಕಿಹೂಳಿ ಆರೋಪಿಸಿದ್ದಾರೆ.

    ಬುಧವಾರ ಗೋಕಾಕನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಸಂದರ್ಭದಲ್ಲಿ ಸಹೋದರ ರಮೇಶ್ ವಿರುದ್ಧ ಸತೀಶ್ ಈ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ತನ್ನ ಅಣ್ಣ ಅಪ್ಪಿರಾವ್ ಪಾಟೀಲ್‍ನನ್ನು ಮಹಾರಾಷ್ಟ್ರದ ಚಂದಗಢ ನಿಂದ ಶಾಸಕನಾಗಿಸಲು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಬಿಜೆಪಿ ರಮೇಶ್ ಜಾರಕಿಹೂಳಿಯರನ್ನು ಬಿಜೆಪಿ ಸೇರಿಸಿ ಅವರಿಂದ ಲಾಭಿ ನಡೆಸಿ ಅಣ್ಣನಿಗೆ ಟಿಕೆಟ್ ಕೂಡಿಸು ಹುನ್ನಾರ ಮಾಡಿದ್ದಾರೆ ಎಂದು ಸತೀಶ್ ಬಹಿರಂಗ ಮಾಡಿದರು.

    ಕಾಡನ್ನು ಕಡೆದು ಫಲವತ್ತಾದ ಭೂಮಿಯನ್ನು ಸಿದ್ಧಪಡಿಸಿದ್ದೇವೆ. ಭೂಮಿಯಲ್ಲಿ ಬೆಳೆದ ಗಿಡ- ಮರ, ಹೂವು-ಹಣ್ಣು ಕೊಡಬೇಕು ಎಂಬುದು ನಮ್ಮ ಬಯಕೆ. ಇದಕ್ಕಾಗಿ ಸಾಮ್ರಾಜ್ಯವನ್ನು ರಮೇಶ್ ಜಾರಕಿಹೊಳಿ ಕೈಯಲ್ಲಿ ಕೊಟ್ಟಿದ್ದೇವೆ. ಕೆಲವು ದಿನವರೆಗೆ ರಮೇಶ್ ನಿರ್ವಹಣೆ ಮಾಡಿದ್ದಾರೆ. ಅವರ ಅಳಿಯ ಅಂಬಿರಾಯ ಎಂಟ್ರಿ ಆದ್ಮೇಲೆ ಚಿತ್ರಣ ಬದಲಾಗಿದೆ. ಹೀಗಾಗಿ ಗೋಕಾಕ್ ಕ್ಷೇತ್ರದ ರೈಲು ಹಳಿ ತಪ್ಪಿದೆ ಅದನ್ನು ಸರಿಪಡಿಸಬೇಕಾಗಿದೆ. ಇದಕ್ಕೆ ನಿಮ್ಮ ಸಹಕಾರ ಬೇಕೆಂದು ಸತೀಶ್ ಸಭೆಯಲ್ಲಿ ಮನವಿ ಮಾಡಿದರು.

  • ಹೊಸ ರಾಜಕೀಯ ದಾಳ ಉರುಳಿಸಲು ಮುಂದಾದ ಮಾಜಿ ಸಿಎಂ..!

    ಹೊಸ ರಾಜಕೀಯ ದಾಳ ಉರುಳಿಸಲು ಮುಂದಾದ ಮಾಜಿ ಸಿಎಂ..!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಸಿದ್ದರಾಮಯ್ಯ ಅವರು ತಮ್ಮ ಶಿಷ್ಯ ಸತೀಶ್ ಜಾರಕಿಹೊಳಿ ಮೂಲಕ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದು, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸೆಳೆಯಲು ಸತೀಶ್ ಜಾರಕಿಹೊಳಿಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಬೆಳಗಾವಿಯಲ್ಲಿ ಎರಡು ಲೋಕಸಭೆ ಕ್ಷೇತ್ರಗಳಿವೆ. ಆದರೆ ಈ ಬಾರಿ ಚಿಕ್ಕೋಡಿಯಿಂದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಕತ್ತಿ ಕುಟುಂಬವೂ ಕೂಡ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿದೆ. ಈ ಸಂದರ್ಭವನ್ನು ದಾಳವಾಗಿ ಉರುಳಿಸಿಕೊಂಡು ಅವರನ್ನು ಕಾಂಗ್ರೆಸ್ಸಿಗೆ ಏಕೆ ಕರೆತರಬಾರದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ.

    ಈಗಾಗಲೇ ಬೆಳಗಾವಿಯಲ್ಲಿ ವಿರುಪಾಕ್ಷ ಸಾದನವರ್ ಹಾಗೂ ಚಿಕ್ಕೋಡಿಗೆ ಪ್ರಕಾಶ್ ಹುಕ್ಕೇರಿಗೆ ಬಿ- ಫಾರಂ ನೀಡಲಾಗಿದೆ. ಈಗ ಇಬ್ಬರು ಅಭ್ಯರ್ಥಿಗಳನ್ನು ಕೂರಿಸಿ ಮಾತುಕತೆ ನಡೆಸಿ ಟಿಕೆಟ್ ತ್ಯಾಗ ಮಾಡಲು ಒಪ್ಪಿಸಿದ್ದಾರೆ. ರಮೇಶ್ ಕಾಂಗ್ರೆಸ್ಸಿಗೆ ಬಂದರೆ ಚಿಕ್ಕೋಡಿಯಿಂದ ರಮೇಶ್ ಕತ್ತಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಈ ಜವಾಬ್ದಾರಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸತೀಶ್ ಜಾರಕಿಹೊಳಿಗೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಪ್ರಕಾಶ್ ಹುಕ್ಕೇರಿ ಅವರು ಕೂಡ ಕಳೆದ ಬಾರಿ ಚಿಕ್ಕೋಡಿಯಿಂದ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ಈ ಬಾರಿಯೂ ಅಲ್ಲಿಯೇ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಆದರೆ ಪಕ್ಷದ ಸೂಚನೆ ಮೇರೆಗೆ ಅಲ್ಲಿಯೇ ಅನಿವಾರ್ಯವಾಗಿ ನಿಂತಿದ್ದಾರೆ. ಚಿಕ್ಕೋಡಿಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದಾರೆ.

    ಒಂದು ವೇಳೆ ಕತ್ತಿ ಸಹೋದರರು ಕಾಂಗ್ರೆಸ್ಸಿಗೆ ಬಂದರೆ ಸುಲಭವಾಗಿ ಚಿಕ್ಕೋಡಿ ಗೆಲ್ಲಬಹುದು. ಇತ್ತ ಕತ್ತಿ ಸಹೋದರರ ನೆರವಿನೊಂದಿಗೆ ಬೆಳಗಾವಿಯಲ್ಲೂ ಗೆಲುವಿನ ಬಾವುಟ ಹಾರಿಸಬಹುದು ಅನ್ನೋದು ಕೈ ಪಾಳಯದ ಲೆಕ್ಕಾಚಾರವಾಗಿದೆ. ರಮೇಶ್ ಕತ್ತಿಗೆ ಚಿಕ್ಕೋಡಿ ಬಿಟ್ಟುಕೊಟ್ಟು ಬೆಳಗಾವಿಯಿಂದ ಸ್ಪರ್ಧಿಸಲು ಪ್ರಕಾಶ್ ಹುಕ್ಕೇರಿ ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ.

  • ನನ್ನ ಸಾಮರ್ಥ್ಯವೇನು ಅನ್ನೋದನ್ನು ಬಾದಾಮಿಯಲ್ಲಿ ತೋರ್ಸಿದ್ದೀನಿ: ಸತೀಶ್ ಜಾರಕಿಹೊಳಿ

    ನನ್ನ ಸಾಮರ್ಥ್ಯವೇನು ಅನ್ನೋದನ್ನು ಬಾದಾಮಿಯಲ್ಲಿ ತೋರ್ಸಿದ್ದೀನಿ: ಸತೀಶ್ ಜಾರಕಿಹೊಳಿ

    ಬೆಂಗಳೂರು: ನಾನು ಎಲ್ಲರ ರೀತಿ ಶೋ ಮಾಡುವ ರಾಜಕಾರಣಿ ಅಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎಲ್ಲರ ರೀತಿ ಶೋ ರಾಜಕಾರಣಿ ಅಲ್ಲ. ಅವಶ್ಯಕತೆ ಇದ್ದಾಗ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ನನ್ನ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ವಿಧಾನಸಭಾ ಚುನಾವಣೆಯ ಬಾದಾಮಿ ಕ್ಷೇತ್ರದಲ್ಲಿ ತೋರಿಸಿದ್ದೇನೆ ಎಂದು ತಿಳಿಸಿದರು.

    ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಮೂರು ಭಾಗ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ನಮಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಯಾವುದೇ ಬೇಸರ ಇಲ್ಲ. ಆವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರಬಹುದು. ಆದರೆ ಅದನ್ನೆ ಹಿಡಿದು ಕೂರುವ ಜಾಯಮಾನ ನನ್ನದಲ್ಲ. ನನ್ನ ಸಾಮರ್ಥ್ಯವೇನು ಎಂಬುದನ್ನು ಬಾದಾಮಿಯಲ್ಲಿ ನಡೆದ ಚುನಾವಣೆಯಲ್ಲೆ ತೋರಿಸಿದ್ದೇನೆ. ಅಲ್ಲಿಂದಲೇ ಸಿದ್ದರಾಮಯ್ಯನವರು ಗೆದ್ದಿದ್ದಾರೆ ಎಂದ್ರು.

    ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ಯಾವುದೇ ಮನಸ್ತಾಪ ಇಲ್ಲ. ಅವರನ್ನು ಭೇಟಿ ಮಾಡುವ ಅವಶ್ಯಕತೆ ಇನ್ನೂ ಉಂಟಾಗಿಲ್ಲ. ಅಲ್ಲದೆ ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಅವರೇನಾದರೂ ಸಿಕ್ಕರೆ ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನಮ್ಮ ನಡುವೆ ಅಂತರ ಇದೆ ಅನ್ನುವ ಹೇಳಿಕೆಗಳು ತಪ್ಪು ಎಂದು ಸ್ಪಷ್ಟನೆ ನೀಡಿದರು.

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಈಗಾಗಲೇ ಲೀಡರ್ ಆಗಿದ್ದೇನೆ. ಸಚಿವನಾಗಿದ್ದುಕೊಂಡೇ ಕೆಲಸ ಮಾಡಬೇಕು ಅನ್ನುವುದು ತಪ್ಪು. ಈ ಮೊದಲು ಸಚಿವ ಸ್ಥಾನ ಹೋದ ಮೂರೇ ತಿಂಗಳಲ್ಲಿ ಗುಂಡ್ಲುಪೇಟೆ ಚುನಾವಣೆಯಲ್ಲಿ ಕೆಲಸಮಾಡಿ ನಮ್ಮ ಶಕ್ತಿ ತೋರಿಸಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಇದೆ: ಸತೀಶ್ ಜಾರಕಿಹೊಳಿ

    ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಇದೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಕೂಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ಬಗ್ಗೆ ರಮೇಶ್ ಜೊತೆಗೆ ಮಾತುಕತೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ಅವರು ಬೆಂಗಳೂರಿಗೆ ಹೋಗಿದ್ದಾರೆ. ನಾನೂ ಸಹ ಸಂಜೆ ಹೋಗುತ್ತೇನೆ. ರಮೇಶ್ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಹ ಯಾವುದೇ ಪ್ರಸ್ತಾಪ ಇಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

    ಹೈಕಮಾಂಡ್‍ನಿಂದ ದೆಹಲಿಗೆ ಬುಲಾವ್ ಬಂದಿರುವ ಬಗ್ಗೆ ಪ್ರಸ್ತಾಪಿಸಿದಾಗ, ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್‍ರೊಂದಿಗೆ ಅನೇಕ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅಲ್ಲದೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಮಾತನಾಡಿದ್ದೇನೆ. ಸಮ್ಮಿಶ್ರ ಸರ್ಕಾರದ ಮುಂದಿನ ಯೋಜನೆಗಳ ಬೆಳವಣಿಗೆ, ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಕರೆಯಲಾಗಿದೆ. ಅಲ್ಲದೇ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.

    ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಭೇಟಿಯಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಬಳಿಕ ಅವರನ್ನು ಭೇಟಿಯಾಗಲು ತೆರಳಿದ್ದಾರೆ. ಸರ್ಕಾರ ಬಿಳಿಸುವ ಹಾಗೂ ಬಿಜೆಪಿ ಸಂಪರ್ಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಶಾಸಕರ ಹೇಳಿರುವ ಹಾಗೆ ಕಳೆದ 4 ತಿಂಗಳಿನಿಂದಲೂ ಬಿಜೆಪಿಯವರು ಪಕ್ಷಕ್ಕೆ ಆಹ್ವಾನಿಸುತ್ತಿರುವ ವಿಚಾರ ತಿಳಿದಿದೆ ಅಷ್ಟೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv