Tag: sathish jarakiholi

  • ಮಗಳ ನಾಮಿನೇಷನ್‌ಗೆ ಯಾರೂ ಬರಬೇಡಿ: ಸತೀಶ್ ಜಾರಕಿಹೊಳಿ

    ಮಗಳ ನಾಮಿನೇಷನ್‌ಗೆ ಯಾರೂ ಬರಬೇಡಿ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಮಗಳ ನಾಮಿನೇಷನ್ ಸಿಂಪಲ್ ಆಗಿ ಮಾಡ್ತೀನಿ. ಯಾರೂ ಬರಬೇಡಿ‌. ಜನ ಸೇರುವುದು ಬೇಡ, ಕಾರ್ಯಕರ್ತರು ಬರೋದು ಬೇಡ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ (Satish Jarakiholi) ಹೇಳಿದರು.

    ಈ ಕುರಿತು ವೀಡಿಯೋ ಮೂಲಕ ಕಾರ್ಯಕರ್ತರಲ್ಲಿ ಮನವಿ ಮಾಡಿದ ಸತೀಶ್‌, ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ವೈಯಕ್ತಿಕ ಟೀಕೆ ಮಾಡಬೇಡಿ. ಪ್ರವಾಹದ ಸಂದರ್ಭದಲ್ಲಿ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ವಿದೇಶದಲ್ಲಿದ್ದರು ಎಂದು ಟ್ರೋಲ್ ಮಾಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿದ್ದಾರೆ.

    ಯಾವುದೇ ಕಾರಣಕ್ಕೂ ವೈಯಕ್ತಿಕ ಟೀಕೆ ಮಾಡಬೇಡಿ. ಕೇವಲ ರಾಜಕೀಯ ಆರೋಪಗಳಿಗೆ ಮಾತ್ರ ಸೀಮಿತವಾಗಿರಲಿ ಅವರ ವೈಫಲ್ಯ ಹೇಳುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಅಭಿಮಾನಿ

  • ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ- ಸಂತ್ರಸ್ತೆಗೆ 2 ಎಕರೆ ಜಮೀನು ಮಂಜೂರು

    ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ- ಸಂತ್ರಸ್ತೆಗೆ 2 ಎಕರೆ ಜಮೀನು ಮಂಜೂರು

    ಬೆಳಗಾವಿ: ಇಲ್ಲಿನ ಹೊಸ ವಂಟಮುರಿ ಗ್ರಾಮದಲ್ಲಿ ಇತ್ತೀಚೆಗೆ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ಸರ್ಕಾರವು 2.03 ಎಕರೆ ಜಮೀನು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ( Sathish Jarakiholi) ತಿಳಿಸಿದ್ದಾರೆ.

    ದೌರ್ಜನ್ಯಕ್ಕೆ ಒಳಗಾಗಿರುವ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ವಂಟಮುರಿ (Hosavantamuri Woman) ಗ್ರಾಮದ ಸಂತ್ರಸ್ತ ಮಹಿಳೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು ಮಾಡಿ ಆದೇಶಿಸಲಾಗಿರುತ್ತದೆ.

    ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಬಿ.ನಾಗೇಂದ್ರ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೊಂದ ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸುವ ದೃಷ್ಟಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನು ಮಂಜೂರು ಮಾಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅನುಮೋದನೆ ನೀಡಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

    2.03 ಎಕರೆ ಜಮೀನು ಮಂಜೂರಾತಿ ಜತೆಗೆ ಸರ್ಕಾರವು ಈಗಾಗಲೇ ಐದು ಲಕ್ಷ ರೂಪಾಯಿ ಪರಿಹಾರವನ್ನು ಕೂಡ ಘೋಷಿಸಿರುತ್ತದೆ.

  • ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಬಾಗಲಕೋಟೆ: ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿವಾದ ಕಾಂಗ್ರೆಸ್ ನಲ್ಲಿ (Congress) ತಾರಕಕ್ಕೇರಿದೆ. ಸಿಎಂ ಬದಲಾವಣೆ ಅಂತ ಕೆಲವರು ಹೇಳಿದ್ರೆ, ಕೆಲವರು ದಲಿತ ಸಿಎಂ ಅಂತಿದ್ದಾರೆ. ಈ ಮಧ್ಯೆ ದಲಿತ ಸಿಎಂ ಬಗ್ಗೆ ಪ್ರಸ್ತಾಪಿಸುತ್ತಾ ಸತೀಶ್ ಜಾರಕಿಹೊಳಿ (Sathish Jarakiholi) ಪರ ವಾಲ್ಮೀಕಿ ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ. ದಲಿತರು ಸಿಎಂ ಆಗಬಾರದಾ? ಕೇವಲ ವೋಟ್ ಬ್ಯಾಂಕ್ ಆಗಬೇಕಾ ಎಂದು ವಾಲ್ಮೀಕಿ ಸ್ವಾಮೀಜಿ ಗುಡುಗು ಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಕಿಚ್ಚೆಬ್ಬಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಅಸಮಾಧಾನಗಳು ಮೇಲಿಂದ ಮೇಲೆ ಸ್ಫೋಟಿಸುತ್ತಲೇ ಇವೆ. ಸಚಿವ ಸ್ಥಾನ ಆಗಿರಬಹುದು ಡಿಸಿಎಂ ಆಗಿರಬಹುದು ಕೈ ನಾಯರು ಒಂದಿಲ್ಲೊಂದು ಹೇಳಿಕೆ ಕೊಡುತ್ತಲೇ ಇದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಾಗಲಕೋಟೆಯಲ್ಲಿ (Bagalkote) ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತಾಡಿದ ವಾಲ್ಮೀಕಿ ಪ್ರಸನ್ನಾನಂದ ಶ್ರೀ, ದಲಿತ ಸಿಎಂ ಕೂಗೆಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಾಡಿನ ಸಿಎಂ ಆಗಲು ಎಲ್ಲ ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

    ವಾಲ್ಮೀಕಿ ಸಮುದಾಯದ ಸಚಿವ ಕೆ.ಎನ್ ರಾಜಣ್ಣ ಇತ್ತೀಚಿಗೆ ದಲಿತ ಸಿಎಂ ಹೆಸರಲ್ಲಿ ಪರಮೇಶ್ವರ್ ಹೆಸರು ಹೇಳಿದ್ದರು. ವಾಲ್ಮೀಕಿ ಸ್ವಾಮೀಜಿ ಸತೀಶ್ ಪರ ಬ್ಯಾಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಜಾಣ ಉತ್ತರ ನೀಡಿ ಸತೀಶ್ ಜಾರಕಿಹೊಳಿ ಜಾರಿಕೊಂಡರು. ಜೊತೆಗೆ ಪರೋಕ್ಷವಾಗಿ ಮನದಲ್ಲಿನ ಸಿಎಂ ಆಗುವ ಬಯಕೆ ಇರುವ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದರು. ನಮ್ಮ ಆಶಯ ಇರಬಹುದು ಸಮುದಾಯದ ಆಶಯ ಇರಬಹುದು ಅದು ಬೇರೆ. ಪಕ್ಷ ದೊಡ್ಡದು. ಪಕ್ಷದ ತೀರ್ಮಾನ ಅಂತಿಮ, ಸಮಯ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕಾಗಲ್ಲ ಎಂದರು. ಇದನ್ನೂ ಓದಿ; ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ಸಚಿವರ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕುತ್ತಿದೆ. ಇದೆ ವೇಳೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರದ ಮೂಲಕ ಜಾರಕಿಹೊಳಿ ಪರ ಬ್ಯಾಟ್ ಮಾಡಿದ್ದು, ಸಿಎಂ ಬದಲಾವಣೆ ಚರ್ಚೆ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗಿದೆ- ಖರ್ಗೆ ಆಪ್ತ ಶಾಸಕನಿಂದ ಹೊಸ ಬಾಂಬ್

    ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗಿದೆ- ಖರ್ಗೆ ಆಪ್ತ ಶಾಸಕನಿಂದ ಹೊಸ ಬಾಂಬ್

    ಯಾದಗಿರಿ: ಕಾಂಗ್ರೆಸ್ ನಲ್ಲಿ (Congress) ಮುಸುಕಿನ ಗುದ್ದಾಟದ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಪ್ತ, ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಹೊಸ ಬಾಂಬ್ ಸಿಡಿಸಿದ್ದಾರೆ.

    ಮಹರ್ಷಿ ವಾಲ್ಮೀಕಿ ಜಯಂತಿಯ (Valmiki Jayanthi) ವೇಳೆ ಸಭೆಯನ್ನ ಉದ್ದೇಶಿಸಿ ಮಾತನಾಡುವಾಗ, ಸರ್ಕಾರ ಬದಲಾವಣೆಯ ಕುರಿತು ಹೇಳಿಕೆಯೊಂದನ್ನು ನೀಡಿ ಚರ್ಚೆ ಹುಟ್ಟುಹಾಕಿದ್ದಾರೆ. ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್ ಗಳಿಗಿದೆ. ಆ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡ್ತಿದ್ದೇವೆ ಎಂದು ಹೇಳಿದ್ದು, ಇದೀಗ ಪಕ್ಷದ ಒಳಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬೆಳಗಾವಿ ನಾಯಕರ ಮುಸುಕಿನ ಗುದ್ದಾಟದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ವೆಂಕಟಪ್ಪ ನಾಯಕ ಹೇಳಿಕೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಬೆಂಬಲಿಸಿ ಶಾಸಕರು ಈ ಹೇಳಿಕೆ ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ, ಡಿಕೆಶಿ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ: ಸತೀಶ್ ಜಾರಕಿಹೊಳಿ

    ನನ್ನ, ಡಿಕೆಶಿ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಅಧಿವೇಶನ ಬಂದಾಗ ಒಬ್ಬರು ಗೋವಾ, ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಹೋಗ್ತಾರೆ. ಇನ್ಯಾರೋ ಹುಬ್ಬಳ್ಳಿಗೆ ಹೋಗ್ತಾರೆ, ಕೆಲವರು ನಮ್ಮ ಜೊತೆಗೆ ಊಟಕ್ಕೆ ಬರುತ್ತಾರೆ. ಈ ಸಾರಿ ಅಧಿವೇಶನದಲ್ಲಿ ಇದೆಲ್ಲವೂ ವಿಶೇಷ ಆಗೋದು ನಾವೇನೂ ಮಾಡಲು ಆಗಲ್ಲ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Sathish Jarakiholi) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಕುಸ್ತಿ ಇದ್ದೇ ಇರುತ್ತೆ. ಪಕ್ಷಕ್ಕೆ ಹೊಡೆತ ಬೀಳ್ತದೆ ಅಂದಾ ನೋಡೋಕೆ ಅಲ್ಲ. ಸರ್ಕಾರ ಹೇಗೆ ಬೀಳುತ್ತೆ, ಸರ್ಕಾರ ಬೀಳಿಸುವ ಪ್ರಶ್ನೆ ಉದ್ಭವ ಆಗಲ್ಲ ಎಂದರು.

    ಮಹಾನಗರ ಪಾಲಿಕೆ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧ ಮಾತನಾಡಿ, ಅಧಿಕಾರಿಗಳಿಂದ ಬರವಣಿಗೆ ಮಿಸ್ಟೇಕ್ ಆಗಿದೆ. ಅದನ್ನು ಶಾಸಕರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಹೊರಟಿದ್ದಾರೆ. ಮಹಾನಗರ ಪಾಲಿಯೂ ಸಹ ಸರ್ಕಾರದ ಮಾತು ಕೇಳಬೇಕು. ಸಣ್ಣ ಮಿಸ್ಟೇಕ್ ದೊಡ್ಡ ಮಟ್ಟದಲ್ಲಿ ಮಾಡಲು ಸೌಥ್ ಶಾಸಕರು ಹೋಗ್ತಿದ್ದಾರೆ. ಒಂದು ತಪ್ಪಿನಿಂದ ಸೂಪರ್ ಸೀಡ್ ಮಾಡಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ ಟೀಂಗೆ ಸಪೋರ್ಟ್ ಮಾಡೋಕೆ ಹೋಗಿದ್ರಾ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

    ಡಿಕೆ ಶಿವಕುಮಾರ್ (DK Shivakumar) ಮತ್ತು ಸತೀಶ್ ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ಇದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲವೇ ಇಲ್ಲಾ. ಯಾರು ಹೇಳಿದ್ರೂ ಇದೆ ಅಂತಾ. ಡಿಸಿಎಂ ಅವರು ಬರುವುದು ತಡರಾತ್ರಿ ಫಿಕ್ಸ್ ಆಗಿದೆ. ಮೇಡಂ ಅವರನ್ನ ಯಾಕೆ ಕೇಳ್ತಿಲ್ಲ ಅವರು ಇರಲಿಲ್ಲ ಅಂದು. ಮೇಡಂ, ಚೆನ್ನರಾಜ್ ಇರಲಿಲ್ಲ ಅವರನ್ನ ಕೇಳಿ ಯಾಕೆ ಇರಲಿಲ್ಲ ಅಂತಾ. ನಮ್ಮದು ಖಾಸಗಿ ಕಾರ್ಯಕ್ರಮ ಇತ್ತು ಹೋಗಿದ್ವಿ, ಲಕ್ಷ್ಮಣ ಸವದಿಯವರು ಯಾಕೆ ಬಂದಿಲ್ಲ ಕೇಳಿ ಎಂದರು. ಅಧ್ಯಕ್ಷರು ಬಂದಾಗ ಬರೋದು ನಮ್ಮ ಡ್ಯೂಟಿ. ಹಿಂದೆ ಬಂದಾಗ ನಾವೆಲ್ಲ ಅಧ್ಯಕ್ಷರ ಸ್ವಾಗತಕ್ಕೆ ಬಂದಿದ್ದೇವೆ. ಮುಂದೆ ಬಂದಾಗ ಎಲ್ಲರೂ ಕೂಡಿಕೊಂಡು ಸ್ವಾಗತ ಮಾಡ್ತೀವಿ. ಡಿಕೆ ಶಿವಕುಮಾರ್ ಜೊತೆಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಸತೀಶ್ ಹೇಳಿದರು.

    ಬೆಳಗಾವಿಗೆ ಅಧ್ಯಕ್ಷ ಬಂದಾಗ ಯಾರು ಬಾರದಿರುವ ವಿಚಾರದ ಕುರಿತು ಅಧ್ಯಕ್ಷರ ಜೊತೆ ಮಾತಾಡಿಲ್ಲ. ಅವರು ಸಿಕ್ಕಿಲ್ಲ, ಬೆಂಗಳೂರಿನಲ್ಲಿಯೂ ಅವರು ಇರಲಿಲ್ಲ. ಬೆಳಗಾವಿ ಬರುವ ಪೂರ್ವದಲ್ಲಿ ಅವರಿಗೆ ಭೇಟಿಯಾಗಿದ್ದೇನೆ.ಅದರ ಬಗ್ಗೆ ಗಂಭೀರವಾಗಿ ಚರ್ಚೆ ಅಗತ್ಯ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಹೊರಗಿನ ಯಾರೂ ತಲೆ ಹಾಕಿಲ್ಲ, ಯಾರೂ ಸಹ ಡಿಸ್ಟರ್ಬ್ ಮಾಡಿಲ್ಲ. ನನ್ನ ಮತ್ತು ಡಿಸಿಎಂ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದು ಹೇಲುವ ಮೂಲಕ ಸಚಿವ ಸತೀಶ್ ಜಾರಕಿಹೊಳಿಗೆ (Sathish Jarakiholi) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತಿರುಗೇಟು ನೀಡಿದ್ದಾರೆ.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ರಾಜಕಾರಣದ ಬಗ್ಗೆ ಬೆಳಗಾವಿ ಮಾಧ್ಯಮಗಳಿಗೆ ಗೊತ್ತಿದೆ. ಬೇರೆ ಜಿಲ್ಲೆಯ ವರದಿಗಾರರು ಕೇಳಿದ್ರೆ ಉತ್ತರ ಕೊಡುತ್ತಿದ್ದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಣ್ಣ ಸಮಸ್ಯೆಯಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡ್ತಿದ್ದೇವೆ ಎಂದರು.

    ಮೈಸೂರು ಪ್ರವಾಸದ ಲಿಸ್ಟ್ ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೆವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಮೈಸೂರಿನಲ್ಲಿ ಮಹಿಳಾ ದಸರಾ ಉದ್ಘಾಟನೆ ನಾನೇ ಮಾಡಬೇಕಿತ್ತು. ಆದರೆ ಬಾಯ್ಲರ್ ಉದ್ಘಾಟನೆ ಮಾಡಬೇಕಿತ್ತು, ಸಹೋದರ ಕರೆದ. ಅದಕ್ಕೆ ನಾನು ಬೆಳಗಾವಿಗೆ (Belagavi) ಮರಳಿ ನಂತರ ಭದ್ರಾವತಿಗೆ ಹೋದೆ ಎಂದು ಹೇಳಿದರು. ಇದನ್ನೂ ಓದಿ: ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ

    ಮೈಸೂರು ಪ್ರವಾಸ ಕ್ಯಾನ್ಸಲ್ ಆಗಿದ್ದೇಕೆ ನನಗೆ ಗೊತ್ತಿಲ್ಲ ಸತೀಶ್ ಅವರನ್ನು ಕೇಳಿ. ಡಿಕೆಶಿ ಬೆಳಗಾವಿಗೆ ಬಂದಾಗ ಯಾರದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದು ಹೇಳುವ ಮೂಲಕ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದರು.

    ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಮಾತನಾಡಿ, ಡಿಕೆಶಿ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ತಿಂಗಳಿಂದ ಹೊಂದುಕೊಂಡು ಹೋಗುತ್ತಿದ್ದೇನೆ. ಸೈಲೆಂಟ್ ಆಗಿರೋದೇ ನನ್ನ ವೀಕ್ನೆಸ್ ಅಲ್ಲ ಎಂದು ಹೇಳಿದ್ದರು. ಇದೀಗ ಸತೀಶ್ ಜಾರಕಿಹೊಳಿಗೆ ಅವರದ್ದೇ ಮಾತಿನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.

    ಒಂದೇ ವಿಮಾನದಲ್ಲಿ ಆಗಮನ: ಬೆಳಗಾವಿ ರಾಜಕೀಯದಲ್ಲಿ ಡಿಕೆ ಶಿವಕುಮಾರ ಹಸ್ತಕ್ಷೇಪ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಇಂದು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಮೂಲಕ ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ ಎನ್ನುವುದ ತೋರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಸಮಾಜವನ್ನು ಅಶ್ಲೀಲ ಎನ್ನುವರು ಹಿಂದೂಗಳ ಮತ ಬೇಡವೆಂದು ಹೇಳಲಿ: ಕಟೀಲ್

    ಹಿಂದೂ ಸಮಾಜವನ್ನು ಅಶ್ಲೀಲ ಎನ್ನುವರು ಹಿಂದೂಗಳ ಮತ ಬೇಡವೆಂದು ಹೇಳಲಿ: ಕಟೀಲ್

    ಚಿಕ್ಕೋಡಿ (ಬೆಳಗಾವಿ): ಹಿಂದೂ ಸಮಾಜವನ್ನು ಅಶ್ಲೀಲ ಎಂದು ಹೇಳಿರುವ ಸತೀಶ್ ಜಾರಕಿಹೋಳಿ (Sathish Jarakiholi) , ತಾಕತ್ತಿದ್ದರೆ ಹಿಂದೂ ಮತಗಳು ಬೇಡ ಅಂತ ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸವಾಲ್ ಹಾಕಿದ್ದಾರೆ.

    ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಬಸ್ಸಾಪೂರ ಗ್ರಾಮದಲ್ಲಿ ನಡೆದ ಬಿಜೆಪಿ (BJP) ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಯಾವ ಹಿಂದೂ ಸಮಾಜವನ್ನು ಅಶ್ಲೀಲ ಸಮಾಜ ಅಂತ ಹೇಳಿದ್ದಾರೆಯೋ, ಅವರು ತಾಕತ್ತಿದ್ದರೆ ಹಿಂದೂ (Hindu Vote) ಮತಗಳು ಬೇಡ ಅಂತ ಹೇಳಲಿ. ಹಿಂದೂ ಸಮಾಜ ಎದ್ದು ನಿಂತಿದೆ. ಯಾವ ಕ್ಷೇತ್ರದಲ್ಲಿಯೂ ಅವರು ನಿಲ್ಲಲಾಗುವುದಿಲ್ಲ. ಯಮಕನಮರಡಿ ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.‌ ಇದನ್ನೂ ಓದಿ: ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು

    ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ್ ನೇರಲಿ, ಮಾಜಿ ಸಚಿವ ಶಶಿಕಾಂತ್ ನಾಯಿಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಮಾತನಾಡಿದರು. ಯಮಕನಮರಡಿ ಉತ್ತರಮಂಡಲ ಬಿಜೆಪಿ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಸತೀಶ್ ಅಪ್ಪಾಜಿ, ಕರಕುಶಲ ಅಭಿವೃದ್ದಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ, ಚಿಕ್ಕೋಡಿ ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಸವರಾಜ್ ಹುಂದ್ರಿ, ಶಿವಾನಂದ್ ಮಸಗುಪ್ಪಿ, ಹುಕ್ಕೇರಿ ಕೆಇಬಿ ಅಧ್ಯಕ್ಷ ಕಲಗೌಡ ಪಾಟೀಲ್, ಸಿದ್ದಲಿಂಗ ಸಿದ್ದಗೌಡರ, ಮಹಾರುದ್ರ ಜರಳಿ, ನಿಂಗಪ್ಪಾ ದಾಸ, ಶಿವಾನಂದ ಪಡಗುರೇ, ರಾಮ ಚುರುಮುರೆ, ಶಂಕರಯ್ಯಾ ಗವಿಮಠ, ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯಾ ಜಾಜರಿ, ಶಿವಾನಂದ ಮಸಗುಪ್ಪಿ, ಮುರಗೇಶ ಹಿರೇಮಠ, ರಾಜುಗೌಡಾ ಪಾಟೀಲ್ ಮುಂತಾದವರು ಇದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸತೀಶ್ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿಪಡೆ- ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದು ಅಭಿಯಾನ

    ಸತೀಶ್ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿಪಡೆ- ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದು ಅಭಿಯಾನ

    ಬೆಂಗಳೂರು: ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ವಿರುದ್ಧ ಕೇಸರಿಪಡೆ ಸಿಡಿದೆದ್ದಿದ್ದು, ಸಚಿವ ಸುನೀಲ್ ಕುಮಾರ್ (Sunil Kumar) ‘ಸ್ವಾಭಿಮಾನಿ ಹಿಂದು’ ಅಭಿಯಾನ ಆರಂಭಿಸಿದ್ದಾರೆ.

    ಈ ಸಂಬಂಧ ಟ್ವೀಟ್ (Tweet) ಮಾಡಿರುವ ಅವರು, ಕಾಂಗ್ರೆಸ್ (Congress) ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು (Jawaharlal Nehru) ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದು, ಹಿಂದುತ್ವ ಹಾಗೂ ಹಿಂದು ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೆ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: `ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ: ಸತೀಶ್ ಜಾರಕಿಹೊಳಿ

    – ಸತೀಶ್ ಜಾರಕಿಹೊಳಿಗೆ ಹಿಂದು ಶಬ್ದ ಅಶ್ಲೀಲ.
    – ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ
    – ದೈವಾರಾಧನೆ ಹಾಗೂ ತೀರ್ಥ ಬಿ.ಟಿ.ಲಲಿತಾನಾಯಕರಿಗೆ ವಾಕರಿ ತರಿಸುತ್ತದೆ
    – ಡಿ.ಕೆ.ಶಿವಕುಮಾರ್ ಗೆ ಮುಸ್ಲಿಂರು ಸೋದರರು
    – ಎಂ.ಬಿ.ಪಾಟೀಲರಿಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ
    – ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಗೆ ಭಗವದ್ಗೀತೆ ಜಿಹಾದ್ ಆಗಿ ಕಾಣುತ್ತದೆ

    ಇವೆಲ್ಲವೂ ಕಾಂಗ್ರೆಸ್ ಒಳಮನಸಿನಲ್ಲಿರುವ ಹಿಂದು ವಿರೋಧಿ ಭಾವಗಳು ಎಂದು ಟೀಕೆ ಮಾಡಿದ್ದಾರೆ. ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆಗಳು ಮಿತಿಮೀರಿದೆ. ಕಾಂಗ್ರೆಸ್ ನಡೆಸುವ ಎಲ್ಲ ಯಾತ್ರೆ, ಅಭಿಯಾನದ ಹಿಂದಿರುವುದು ಹಿಂದು ದ್ವೇಷ. ಕಾಂಗ್ರೆಸ್ ಅಧಿನಾಯಕರ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ

    ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡಿ ರಾಷ್ಟ್ರದ ಕ್ಷಮೆ ಯಾಚಿಸಬೇಕು. ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಮಾನ್ಯ ಸುರ್ಜೇವಾಲಾ ಅವರೇ, ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನು ಸ್ವಾಭಿಮಾನಿ ಹಿಂದು….
    – ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ.
    – ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ.
    – ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ.

    ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ..

    ನಾನು ಸ್ವಾಭಿಮಾನಿ ಹಿಂದು…..
    – ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.
    – ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ ಇದೆ.
    – ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
    – ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.
    – ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.

    ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ..

    ಸತೀಶ್ ಜಾರಕಿಹೊಳಿ ಹೇಳಿದ್ದೇನು..? :ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಲ್ಲಿ ಟಿಕೆಟ್ ಫೈಟ್- ಹುಟ್ಟುಹಬ್ಬ ಆಚರಿಸಿಕೊಂಡು ಶಕ್ತಿ ಪ್ರದರ್ಶನ

    ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಲ್ಲಿ ಟಿಕೆಟ್ ಫೈಟ್- ಹುಟ್ಟುಹಬ್ಬ ಆಚರಿಸಿಕೊಂಡು ಶಕ್ತಿ ಪ್ರದರ್ಶನ

    ಚಿಕ್ಕೋಡಿ(ಬೆಳಗಾವಿ): ಮೊನ್ನೆ ಮೊನ್ನೆಯಷ್ಟೆ ಕರಕುಶಲ ಅಭಿವೃದ್ಧಿ ನಿಮಗಮದ ಅಧ್ಯಕ್ಷ ಸ್ಥಾನಕ್ಕೇರಿದ ಮಾರುತಿ ಅಷ್ಟಗಿಯವರ ಕೈ ಬಲಪಡಿಸಬೇಕು. ಅವರಿಗೆ ಶಕ್ತಿ ತುಂಬಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿನಿಧಿಸೋ ಕ್ಷೇತ್ರ ಯಮಕನಮರಡಿಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು.

    ಅದರ ಮಾರನೇ ದಿನವೇ ಯಮಕನಮರಡಿಯಲ್ಲಿ ಇನ್ನೋರ್ವ ಟಿಕೆಟ್ ಆಕಾಂಕ್ಷಿ ಬಸವರಾಜ್ ಹುಂದ್ರಿ ಅದ್ದೂರಿಯಾಗಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ನಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್‍ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್

    ಮಾರುತಿ ಅಷ್ಟಗಿ ಪರವಾಗಿ ಆಯೋಜನೆ ಮಾಡಲಾದ ಅಭಿನಂದನಾ ಸಮಾವೇಶ ಸಮಾರಂಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ಬೆನ್ನಲ್ಲೆ ಈಗ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಹುಂದ್ರಿ ಅವರು ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿ ಪಕ್ಷಕ್ಕೂ ಹಾಗೂ ಪಕ್ಷದ ವರಿಷ್ಠರಿಗೂ ಸಹ ತಮ್ಮ ಬೆಂಬಲ, ತಮ್ಮ ಶಕ್ತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಬಸವರಾಜ್ ಹುಂದ್ರಿ ಮಾಡಿದ್ದಾರೆ.

    ಮಾರುತಿ ಅಷ್ಟಗಿವರೊಂದಿಗೆ ಈ ಬಾರಿ ಬಿಜೆಪಿ ಟಿಕೆಟ್‍ಗೆ ಬಸವರಾಜ್ ಅವರೂ ಆಕಾಂಕ್ಷಿ ಅಂತ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಈ ಬಾರಿ ಬಸವರಾಜ್ ಹುಂದ್ರಿಯವರಿಗೂ ಸಹ ಟಿಕೇಟ್ ನೀಡಿ ಅಂತ ಕೇಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಮೇಶ್ ಜಾರಕಿಹೊಳಿ ಬಗ್ಗೆ ಸಹೋದರ ಸತೀಶ್ ಜಾರಕಿಹೊಳಿ ವ್ಯಂಗ್ಯ

    ರಮೇಶ್ ಜಾರಕಿಹೊಳಿ ಬಗ್ಗೆ ಸಹೋದರ ಸತೀಶ್ ಜಾರಕಿಹೊಳಿ ವ್ಯಂಗ್ಯ

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಒಗೆಯುತ್ತಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

    ಕಾಂಗ್ರೆಸ್ ಬಿಟ್ಟು 16 ಜನ ಬಿಜೆಪಿಗೆ ಬರುತ್ತಾರೆ ಎಂಬ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 120 ಸೀಟ್ ಇವೆ. ಆ ಸೀಟ್‍ಗಳು ಸಹ ಈಗಾಗಲೇ ಹೌಸ್ ಫುಲ್ ಆಗಿವೆ. ನೀವು ಇನ್ನೂ 16 ಜನರನ್ನು ಎಲ್ಲಿ ಕೂರಿಸುತ್ತೀರಿ. ಅವರನ್ನು ಟಾಪ್ ಮೇಲಾ, ಕೆಳಗಾ ಅಥವಾ ಡಿಕ್ಕಿಯಲ್ಲಾ ಎಲ್ಲಿ ಕೂರಿಸುತ್ತೀರಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ರಮೇಶ್ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಒಗೆಯುತ್ತಿರುತ್ತಾರೆ. ಕೆಲವು ಬಾಂಬ್ ಹಾರುತ್ತೆ ಕೆಲವು ಹಾಗೇ ಹಾರುವುದಿಲ್ಲ. ಅವರು ಬಾಂಬ್ ಹಾರುತ್ತೇ ಅಂತಾ ಕಿವಿ ಮುಚ್ಚಿಕೊಂಡು ನಿಲ್ಲಬೇಕಾಗುತ್ತೆ. ಅವರು ಟೈಮ್ ಪಾಸ್ ಮಾಡ್ತಿರುತ್ತಾರೆ ಅಷ್ಟೇ. ರಮೇಶ್ ಮತ್ತು ಲಖನ್ ಜಾರಕಿಹೊಳಿ ರಾಜಕೀಯ ವ್ಯಾಪಾರ ಮಾಡುತ್ತಾ ಕೂರುವವರು. ಇವರೇನೂ ಸಮಾಜ ಸೇವೆ ಮಾಡುವವರು ಅಲ್ಲಾ. ಬಿಜೆಪಿಗೆ ಹೋಗುತ್ತೇವೆ ಅಂತಾ ಕಾಂಗ್ರೆಸ್ ನವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಕಾಂಗ್ರೆಸ್‍ಗೆ ಹೋಗುತ್ತೇವೆ ಅಂತಾ ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. 6 ತಿಂಗಳ ನಂತರ ಆಕಡೆಯಿಂದ ಈಕಡೆ ಹೋಗೊದು ಎಲ್ಲವೂ ನಡೆಯುತ್ತೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ್ – ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ

    ಕಾಂಗ್ರೆಸ್ ನವರು ಬಿಜೆಪಿಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಜೆಡಿಎಸ್, ಬಿಜೆಪಿಯವರು ನಮ್ಮ ಪಕ್ಷಕ್ಕೆ ಖಂಡಿತವಾಗಿ ಬರುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಾಗೂ ನಮ್ಮ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವುದು ಸತ್ಯ. ನಮ್ಮ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಸಂಪರ್ಕದಲ್ಲಿದ್ದಾರೆ. ಕೆಲವು ಸಚಿವರು ಮತ್ತು ಜೆಡಿಎಸ್ ನವರು ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಮತ್ತೆ ಕಾಂಗ್ರೆಸ್‍ಗೆ ಬಂದೇ ಬರುತ್ತಾರೆ. ಯಾರು ಕಾಂಗ್ರೆಸ್‍ಗೆ ಬರುತ್ತಾರೆ ಅನ್ನುವುದು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಗೊತ್ತು ಎಂದರು.