Tag: Sathendra Jain

  • ಸತ್ಯೇಂದ್ರ ಜೈನ್ ವೈರಲ್ ವೀಡಿಯೋದಲ್ಲಿರೋದು ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್: ಬಿಜೆಪಿ

    ಸತ್ಯೇಂದ್ರ ಜೈನ್ ವೈರಲ್ ವೀಡಿಯೋದಲ್ಲಿರೋದು ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್: ಬಿಜೆಪಿ

    ನವದೆಹಲಿ: ಆಮ್ ಆದ್ಮಿ (AAP) ಪಕ್ಷದ ಸಚಿವ ಸತ್ಯೇಂದ್ರ ಜೈನ್ (Sathyendra Jain) ಅವರ ವೈರಲ್ ಆಗಿರುವ ವೀಡಿಯೋದಲ್ಲಿ ಇರುವುದು ಫಿಸಿಯೋಥೆರಪಿಸ್ಟ್ (Physiotherapist) ಅಲ್ಲ, ಅದು ರೇಪಿಸ್ಟ್ ಎಂದು ಇದೀಗ ಬಿಜೆಪಿ (BJP) ಗಂಭೀರ ಆರೋಪ ಮಾಡಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಇತ್ತೀಚೆಗಷ್ಟೇ ಬಿಜೆಪಿ ಆರೋಪಿಸಿತ್ತು. ಈ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿದೆ ಹೊರತು ಮಸಾಜ್ ಅಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು.

    ಈ ಬೆನ್ನಲ್ಲೇ ಬಿಜೆಪಿ ಮತ್ತೊಂದು ಆರೋಪ ಮಾಡಿದೆ. ಈ ಸಂಬಂಧ ಬಿಜೆಪಿ ವಕ್ತಾರ ಶೆಹ್‍ಜಾದ್ ಪೂನಾವಾಲಾ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಲ್ಲಿ ಸತ್ಯೇಂದ್ರ ಜೈನ್‍ಗೆ ಮಸಾಜ್ (Massage Vide) ಮಡುತ್ತಿರುವ ವ್ಯಕ್ತಿಯ ಹೆಸರು ರಿಂಕು (Rinku). ಈತ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಇದನ್ನೂ ಓದಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    ಅತ್ಯಾಚಾರ ಆರೋಪಿ ರಿಂಕು ಸತ್ಯೇಂದ್ರ ಜೈನ್‍ಗೆ ಮಸಾಜ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈತ ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೋ ಅಡಿಯಲ್ಲಿ ಬಂಧಿತನಾಗಿರುವ ಆರೋಪಿ. ಹೀಗಾಗಿ ಈತ ಫಿಸಿಯೋಥೆರಪಿಸ್ಟ್ ಅಲ್ಲ, ಬದಲಾಗಿ ರೇಪಿಸ್ಟ್ ಆಗಿದ್ದು, ಈತನಿಂದ ಅತ್ಯೇಂದ್ರ ಜೈನ್ ಮಸಾಜ್ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಆದೆ ಇದನ್ನು ಸಮರ್ಥಿಸಿಕೊಳ್ಳುವ ಮೂಲಕ ಕೇಜ್ರಿವಾಲ್ ಅವರು ಫಿಸಿಯೋಥೆರಪಿಸ್ಟ್ ಗಳಿಗೆ ಯಾಕೆ ಅವಮಾನ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೂನಾವಾಲಾ ಆಗ್ರಹಿಸಿದ್ದಾರೆ.

    ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ರಿಂಕು ಅವರ ಅಪ್ರಾಪ್ತ ಮಗಳು ಮಾಡಿದ ಅತ್ಯಾಚಾರದ ಆರೋಪದ ನಂತರ 2021 ರಲ್ಲಿ ಅವರನ್ನು ಬಂಧಿಸಲಾಯಿತು. ಬಳಿಕ ತಿಹಾರ್ ಜೈಲಿಗೆ ಅಟ್ಟಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಪ್ಪದ ಇಡಿ ಸಂಕಷ್ಟ – ಸತೇಂದ್ರ ಜೈನ್‍ಗೆ ಜೂನ್ 13ವರೆಗೂ ಕಸ್ಟಡಿ ವಿಸ್ತರಣೆ

    ತಪ್ಪದ ಇಡಿ ಸಂಕಷ್ಟ – ಸತೇಂದ್ರ ಜೈನ್‍ಗೆ ಜೂನ್ 13ವರೆಗೂ ಕಸ್ಟಡಿ ವಿಸ್ತರಣೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತೇಂದ್ರ ಜೈನ್ ಅವರ ಕಸ್ಟಡಿಯನ್ನು ಜೂನ್ 13ರವರೆಗೂ ವಿಸ್ತರಿಸಿ ಇಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

    ಒಂಭತ್ತು ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಂದು ರೋಸ್ ಅವೆನ್ಯೂ ಸಂಕೀರ್ಣದಲ್ಲಿರುವ ಇಡಿ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಇಡಿ ಅಧಿಕಾರಿಗಳು ಹಾಜರುಪಡಿಸಿದ್ದರು ಮತ್ತು ಮತ್ತಷ್ಟು ವಿಚಾರಣೆಗಾಗಿ ಅವರ ಕಸ್ಟಡಿ ಮುಂದುವರಿಸಲು ಮನವಿ ಮಾಡಿದರು. ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ- ದೈನಂದಿನ ಪ್ರಕರಣಗಳಲ್ಲಿ 39% ಜಿಗಿತ

    ಇಡಿ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ ರಾಜು, ಸತೇಂದ್ರ ಜೈನ್ ಬಂಧನ ಬಳಿಕ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ದಾಳಿ ವೇಳೆ 2.82 ಕೋಟಿ ರೂ. ನಗದು ಮತ್ತು 1.8 ಕೆ.ಜಿ ತೂಕದ 133 ಬಂಗಾರದ ನಾಣ್ಯಗಳು ಹಾಗೂ ಬಂಗಾರದ ಬಿಸ್ಕತ್‌ಗಳು ದೊರೆತಿವೆ. ಇದನ್ನೂ ಓದಿ: ಖ್ಯಾತ ಚಿತ್ರಸಾಹಿತಿ, ಪುಟ್ಟಣ್ಣ ಕಣಗಾಲ್ ಅಣ್ಣನ ಮಗ ಪುರುಷೋತ್ತಮ ಕಣಗಾಲ್ ನಿಧನ

    ಮೊದಲ ದಾಳಿಯ ವೇಳೆಯೂ ಅಪಾರ ಪ್ರಮಾಣದ ಸಂಪತ್ತು ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮಾಡಲು ಅವಕಾಶ ನೀಡಬೇಕು. ಪತ್ತೆಯಾಗಿರುವ ಆಸ್ತಿಯ ಬಗ್ಗೆ ಸತೇಂದ್ರ ಜೈನ್ ರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

    ಇದಕ್ಕೆ ಸತೇಂದ್ರ ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಇತ್ತೀಚೆಗೆ ಲಾಲ್ ಶೇರ್ ಸಿಂಗ್ ಮೆಮೋರಿಯಲ್ ಟ್ರಸ್ಟ್ ಮೇಲೆ ಇಡಿ ದಾಳಿ ಮಾಡಿದೆ. ಅಲ್ಲಿ ಹಣ ಮತ್ತು ಚಿನ್ನ ದೊರೆತಿದೆ. ಆದರೆ ಟ್ರಸ್ಟ್‌ಗೂ ಜೈನ್‍ಗೂ ಯಾವುದೇ ಸಂಬಂಧ ಇಲ್ಲ. ಜೈನ್ ಅದರ ಮಾಜಿ ಅಧ್ಯಕ್ಷರಾಗಿದ್ದರು. ಹಾಲಿಯಲ್ಲಿ ಟ್ರಸ್ಟ್‍ನಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಹೀಗಾಗಿ ಇಡಿ ಆರೋಪ ಸರಿಯಾಗಿಲ್ಲ ಎಂದು ಹೇಳಿದರು.

    ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇಡಿಗೆ ಮತ್ತಷ್ಟು ತನಿಖೆ ಮಾಡಲು ಅವಕಾಶ ನೀಡಿ ಜೂನ್ 13ರವರೆಗೂ ಕಸ್ಟಡಿ ವಿಸ್ತರಣೆ ಮಾಡಿತು. ಅಕ್ರಮ ಹಣ ವರ್ಗಾವಣೆ (PMLA) ಆರೋಪದ ಅಡಿಯಲ್ಲಿ ಮೇ 30 ರಂದು ಸತೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು.