Tag: satellites

  • ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಕಾಶ ಸಂಸ್ಥೆ (ISRO) ಭಾನುವಾರ ಬೆಳಗ್ಗೆ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ 36 ಉಪಗ್ರಹಗಳನ್ನು ಹೊತ್ತ ರಾಕೆಟ್ (Rocket) ಅನ್ನು ಉಡಾವಣೆ ಮಾಡಿದೆ.

    ಒನ್ ವೆಬ್ ಇಂಡಿಯಾ -2 (OneWeb India-2) ಮಿಷನ್‍ನ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್ ಅನ್ನು ಕಕ್ಷೆಗೆ ಹಾರಿಸಿದೆ. ಬ್ರಿಟನ್ ಮೂಲದ ಒನ್‍ವೆಬ್ ಗ್ರೂಪ್‍ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್ – 3 ಉಡಾವಣಾ ನೌಕೆ ನಭಕ್ಕೆ ಹಾರಿತು.

    ಉಪಗ್ರಹ ಉಡಾವಣೆ ಬೆನ್ನಲ್ಲೇ ಒನ್‍ವೆಬ್ ಟ್ವೀಟ್ ಮಾಡಿದೆ. ಯಶಸ್ವಿ ಉಡಾವಣೆಗಾಗಿ ಇಸ್ರೋ ಹಾಗೂ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ. ಇದು ಸರ್ಕಾರಕ್ಕೆ ಹಾಗೂ ಕಂಪನಿಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದೆ.

    ಈ ವರ್ಷ ಇಸ್ರೋ ನಡೆಸಿದ 2ನೇ ರಾಕೆಟ್ ಉಡಾವಣೆ ಇದಾಗಿದೆ. ಈ ಉಡಾವಣೆಯೊಂದಿಗೆ ಒನ್‍ವೆಬ್ ತನ್ನ 616 ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ. ಈ ಮಿಷನ್ ಭಾರತದಿಂದ ಉಡಾವಣೆ ಮಾಡುತ್ತಿರುವ ಒನ್‍ವೆಬ್‍ನ ಎರಡನೇ ಉಪಗ್ರಹವಾಗಿದೆ. ಬ್ರಿಟನ್ ಮತ್ತು ಭಾರತೀಯ ಬಾಹ್ಯಾಕಾಶ ಉದ್ಯಮಗಳ ನಡುವಿನ ಸಹಯೋಗಕ್ಕೆ ಇದು ಮಾದರಿಯಾಗಿದೆ ಎಂದು ಒನ್‍ವೆಬ್ ಈ ಹಿಂದೆ ಹೇಳಿತ್ತು.

    ಮೊದಲ ಬಾರಿ 2022ರ ಅಕ್ಟೋಬರ್ 23ರಂದು ಇಸ್ರೋನ 36 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದನ್ನೂ ಓದಿ: ದೇಶದಲ್ಲೇ ಮೊದಲ ಉಪಚುನಾವಣೆ ನಡೆದಿದ್ದು ಚಿಕ್ಕಮಗಳೂರಿನ ತರೀಕೆರೆಯಲ್ಲಿ

  • ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

    ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

    ಉಡುಪಿ: ಕರಾವಳಿ ಆಗಸದಲ್ಲಿ ಸೋಮವಾರ ರಾತ್ರಿ ಕೌತುಕವೊಂದು ನಡೆದಿದೆ. ಸಾಲಿನಲ್ಲಿ ನಕ್ಷತ್ರಗಳು ಚಲಿಸಿದಂತೆ ಉಪಗ್ರಹಗಳು ಬಾನಿನಲ್ಲಿ ಗೋಚರಿಸಿದ್ದು ಉಡುಪಿ ಜನತೆಯನ್ನು ನಿಬ್ಬೆರಗಾಗಿಸಿದೆ.

    ಅಮೇರಿಕಾದ ಕ್ಯಾಲಿಫೋರ್ನಿಯಾದಿಂದ ಉಪಗ್ರಹಗಳು ಇಂಟರ್‌ನೆಟ್ ಶನಿವಾರ ಲಾಂಚ್ ಮಾಡಲಾಗಿದೆ. ಈ ಉಪಗ್ರಹ ಬಾನಲ್ಲಿ ಸಾಲಾಗಿ ಪರಿಭ್ರಮಿಸುತ್ತದೆ. ಈ ದೃಶ್ಯ ಉಡುಪಿಯಲ್ಲಿ ಜನರ ಬರಿಗಣ್ಣಿಗೆ ಕಾಣಿಸಿದೆ. ಎಲೋನ್‌ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಸೇರಿದ ಉಪಗ್ರಹಗಳು ಇವು. ಸ್ಟಾರ್ ಲಿಂಕ್ ಕಂಪನಿಯು ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಇಂತಹ ಉಪಗ್ರಹಗಳನ್ನು ನಭಕ್ಕೆ ಬಿಡುಗಡೆ ಮಾಡಿದೆ. ಈ ಪೈಕಿ 52 ಉಪಗ್ರಹ ಒಂದೇ ದಿನ ಉಡಾವಣೆ ಮಾಡಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ 1 ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ನಮ್ಮ ಶಾಪ ತಟ್ಟದೇ ಇರಲ್ಲ: ಬಸವಪ್ರಕಾಶ ಸ್ವಾಮೀಜಿ

    ಮುಂದಿನ ದಿನಗಳಲ್ಲಿ ಸುಮಾರು 1,800 ಇಂಟರ್‌ನೆಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ತಯಾರಿ ನಡೆಸಲಾಗುತ್ತಿದ್ದು, ಮುಂದೊಂದು ದಿನ ವಿಶ್ವಕ್ಕೆ ಉಚಿತ ಅಥವಾ ಬಹಳ ಕಡಿಮೆ ಮೊತ್ತಕ್ಕೆ ಇಂಟರ್‌ನೆಟ್ ಲಭ್ಯ ಆಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಇಂಟರ್‌ನೆಟ್ ಸುಲಭವಾಗಿ ಜನರ ಮೊಬೈಲ್ ಕಂಪ್ಯೂಟರ್‌ಗಳಿಗೆ ಕೊಡಿಸುವ ಉದ್ದೇಶ ಸಂಸ್ಥೆಗೆ ಇದೆ. ಇದನ್ನೂ ಓದಿ: ಇಸ್ರೋ ವಿಶ್ವದಾಖಲೆ ಮುರಿದ ಸ್ಪೇಸ್ ಎಕ್ಸ್ – ಕಡಿಮೆ ಬೆಲೆಯಲ್ಲಿ ಉಪಗ್ರಹ ಉಡಾವಣೆ

  • ಇಸ್ರೋದಿಂದ ಕಾರ್ಟೊಸ್ಯಾಟ್ 2 ಸೇರಿದಂತೆ 31 ಉಪಗ್ರಹಗಳ ಉಡಾವಣೆ ಯಶಸ್ವಿ

    ಇಸ್ರೋದಿಂದ ಕಾರ್ಟೊಸ್ಯಾಟ್ 2 ಸೇರಿದಂತೆ 31 ಉಪಗ್ರಹಗಳ ಉಡಾವಣೆ ಯಶಸ್ವಿ

    ನವದೆಹಲಿ: ದೇಶದ ಹೆಮ್ಮೆಯ ಇಸ್ರೋ ಕಾರ್ಟೊಸ್ಯಾಟ್ 2  ಸೇರಿದಂತೆ 31 ಉಪಗ್ರಹಗಳ ಉಡಾವಣೆ ಮಾಡಿದೆ.

    ಇಂದು ಬೆಳಗ್ಗೆ 9.29ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ ಮೂಲಕ ಒಟ್ಟು 31 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದ್ರಲ್ಲಿ ಕಾರ್ಟೋಸ್ಯಾಟ್ 2 ಮತ್ತು ವಿಶ್ವವಿದ್ಯಾಲಯವೊಂದರ ಚಿಕ್ಕ ಉಪಗ್ರಹವಿದ್ದು, ಇನ್ನುಳಿದ 29 ಉಪಗ್ರಹಗಳು 14 ವಿವಿಧ ದೇಶಗಳಿಗೆ ಸೇರಿದ್ದಾಗಿವೆ. ಉಪಗ್ರಹ ಉಡಾವಣೆಗೆ ಗುರುವಾರ ಸಂಜೆಯಿಂದ ಕೌಂಟ್‍ಡೌನ್ ಶುರುವಾಗಿತ್ತು.

    ಪಿಎಸ್‍ಎಲ್‍ವಿ ರಾಕೆಟ್‍ನ ಎಕ್ಸೆಲ್ ಮಾದರಿಯು, 712 ಕೆಜಿ ತೂಕದ ಕಾರ್ಟೊಸಾಟ್ 2 ಸರಣಿ ಉಪಗ್ರಹ ಮತ್ತು 30 ಸಹಪ್ರಯಾಣಿಕ ಸ್ಯಾಟಲೈಟ್‍ಗಳನ್ನ(29 ವಿದೇಶಿ ಸಹ ಪ್ರಯಾಣಿಕ ಸ್ಯಾಟಲೈಟ್ ಹಾಗೂ 1 ಭಾರತೀಯ ನ್ಯಾನೋ ಸ್ಯಾಟ್‍ಲೈಟ್) ಒಟ್ಟಾಗಿ ಹೊತ್ತೊಯ್ದಿದೆ.30 ಉಪಗ್ರಗಳ ತೂಕ 243 ಕೆಜಿ ಹಾಗೂ ಕಾರ್ಟೋಸ್ಯಾಟ್ ಉಪಗ್ರಹ ಸೇರಿದಂತೆ 31 ಉಪಗ್ರಹಳ ಒಟ್ಟು ತೂಕ 955 ಕೆಜಿ ಇದೆ ಎಂದು ಇಸ್ರೋ ಹೇಳಿದೆ.

    ಕಾರ್ಟೊಸ್ಯಾಟ್ 2 ಉಪಗ್ರಹ 500 ಕಿಮೀ ಎತ್ತರದಲ್ಲಿ ಭೂಮಿ ಸುತ್ತ ಸುತ್ತಲಿದೆ. ಈ ಉಪಗ್ರಹವು ವೈರಿ ಪ್ರದೇಶದಲ್ಲಿ ಎಷ್ಟು ಸೇನಾ ಟ್ಯಾಂಕ್‍ಗಳಿವೆ ಎಂದು ಎಣಿಸಬಲ್ಲುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತ ಈಗಾಗಲೇ ಇಂತಹ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಇದು ಆರನೆಯದ್ದಾಗಿದೆ. ಈಗಿರುವ ಉಪಗ್ರಹಗಳು ಅಭಿವೃದ್ಧಿ ಚಟುವಟಿಕೆಗಳಿಗೆ ಬೇಕಾಗಿರುವ ಹೈ ರೆಸಲ್ಯೂಷನ್ ಮಾಹಿತಿ ಪಡೆಯಲು ಸಾಕಾಗುವುದಿಲ್ಲ. ಆದ್ದರಿಂದ 6ನೇ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷಾದ ಕಿರಣ್ ಕುಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    30 ಸಹಪ್ರಯಾಣಿಕ ಉಪಗ್ರಹಗಳಲ್ಲಿ ಆಸ್ಟ್ರಿಯಾ, ಬೆಲ್ಜಿಯಂ, ಬ್ರಿಟನ್, ಚಿಲಿ, ಝೆಚ್ ರಿಪಬ್ಲಿಕ್, ಫಿನ್‍ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲುಥಿಯಾನಾ, ಸ್ಲೋವ್ಯಾಕಿಯಾ ಹಾಗೂ ಅಮೆರಿಕ ಸೇರಿದಂತೆ 14 ದೇಶಗಳ 29 ಸಹಪ್ರಯಾಣಿಕ ಉಪಗ್ರಗಳಗಳು ಹಾಗೂ ಒಂದು ಭಾರತೀಯ ನ್ಯಾನೋ ಉಪಗ್ರಹ ಇದೆ. ಭಾರತದ ನ್ಯಾನೋ ಉಪಗ್ರಹವಾದ 15 ಕೆಜಿ ತೂಕದ NUISAT ತಮಿಳುನಾಡಿನ ನೂರ್ ಇಸ್ಲಾಂ ವಿಶ್ವವಿದ್ಯಾಲಯಕ್ಕೆ ಸೇರಿದ್ದಾಗಿದೆ.

  • ಭಾರತ 104 ಉಪಗ್ರಹಗಳ ಉಡಾವಣೆ ಮಾಡಿದ್ದಕ್ಕೆ ಅಮೆರಿಕ ಗುಪ್ತಚರ ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ

    ಭಾರತ 104 ಉಪಗ್ರಹಗಳ ಉಡಾವಣೆ ಮಾಡಿದ್ದಕ್ಕೆ ಅಮೆರಿಕ ಗುಪ್ತಚರ ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ

    ವಾಷಿಂಗ್ಟನ್: ಭಾರತ ಒಂದೇ ಬಾರಿಗೆ 104 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಿದ ಸುದ್ದಿ ಓದಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಶಾಕ್ ಆದ್ರಂತೆ.

    ಹೌದು. ಈ ಬಗ್ಗೆ ಮಂಗಳವಾರದಂದು ಹೇಳಿಕೆ ನೀಡಿರೋ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡಾನ್ ಕೋಟ್ಸ್, ಸುದ್ದಿ ಓದಿ ನನಗೆ ಶಾಕ್ ಆಯಿತು ಎಂದಿದ್ದಾರೆ. ಗುಪ್ತಚರ ಸೆನೆಟ್ ಆಯ್ಕೆ ಸಮಿತಿ ಉದ್ದೇಶಿಸಿ ಮಾತನಾಡಿದ ಕೋಟ್ಸ್, ಅಂದು ನಾನು, ಭಾರತ ಒಂದೇ ರಾಕೆಟ್‍ನಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನ ಉಡಾವಣೆ ಮಾಡಿದೆ ಎಂಬ ಸುದ್ದಿ ಓದಿ ಶಾಕ್ ಆದೆ. ಅಮೆರಿಕ ಹಿಂದೆ ಉಳಿಯೋದನ್ನ ನೋಡಲು ಸಾಧ್ಯವಿಲ್ಲ ಅಂದ್ರು.

    ಉಪಗ್ರಹಗಳು ಗಾತ್ರದಲ್ಲಿ ಚಿಕ್ಕದಿರಬಹುದು ಅಘವಾ ಏನೇ ಇರಬಹುದು ಆದ್ರೆ ಒಂದೇ ರಾಕೆಟ್‍ನಲ್ಲಿ ಉಡಾವಣೆ ಮಾಡಿದ್ದಾರೆ ಅಂದ್ರು.

    ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಫೆಬ್ರವರಿ 15 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಒಂದೇ ರಾಕೆಟ್‍ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದೆ. 104 ಉಪಗ್ರಹಗಳ ಪೈಕಿ ಭಾರತದ 4, ಅಮೆರಿಕದ 96 ಉಪಗ್ರಹಗಳು ಕಕ್ಷೆ ಸೇರಿದವು. ಉಳಿದಂತೆ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‍ನಲ್ಲಿ ಕಕ್ಷೆ ಸೇರಿದವು. ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವೊಂದು ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿತು.

    2014ರಲ್ಲಿ ರಷ್ಯಾ ಒಂದೇ ರಾಕೆಟ್‍ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು. ಅಮೆರಿಕದ ನಾಸಾಕ್ಕೆ ಹೋಲಿಸಿದರೆ ಇಸ್ರೋದ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ.