Tag: Satellite Images

  • ಪಹಲ್ಗಾಮ್ ದಾಳಿ ಹಿಂದೆ ಪಾಪಿ ಪಾಕ್ ಕೈವಾಡಕ್ಕೆ ಸಾಕ್ಷ್ಯ – ಅಮೆರಿಕದಿಂದ 3 ಲಕ್ಷಕ್ಕೆ ಸ್ಯಾಟ್‌ಲೈಟ್ ಚಿತ್ರ ಪಡೆದಿದ್ದ ಉಗ್ರರು?

    ಪಹಲ್ಗಾಮ್ ದಾಳಿ ಹಿಂದೆ ಪಾಪಿ ಪಾಕ್ ಕೈವಾಡಕ್ಕೆ ಸಾಕ್ಷ್ಯ – ಅಮೆರಿಕದಿಂದ 3 ಲಕ್ಷಕ್ಕೆ ಸ್ಯಾಟ್‌ಲೈಟ್ ಚಿತ್ರ ಪಡೆದಿದ್ದ ಉಗ್ರರು?

    ನವದೆಹಲಿ: ಪಹಲ್ಗಾಮ್ ದಾಳಿ (Pahalgam Terrorist Attack) ಹಿಂದೆ ಪಾಪಿ ಪಾಕಿಸ್ತಾನದ (Pakistan)  ಕೈವಾಡವಿದೆ ಎನ್ನುವುದಕ್ಕೆ ಮತ್ತಷ್ಟು ಸಾಕ್ಷ್ಯಗಳು ಸಿಗುತ್ತಿವೆ. ಇದೀಗ ಅಮೆರಿಕದ (America) ಕಂಪನಿಯೊಂದರಿಂದ 3 ಲಕ್ಷ ರೂ.ಕೊಟ್ಟು ಸ್ಯಾಟ್‌ಲೈಟ್ ಫೋಟೋವನ್ನು ಪಾಕ್ ಉಗ್ರರು ಪಡೆದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಾಗಿ ಫೆಬ್ರವರಿಯಲ್ಲೇ ಸಂಚು ಹೂಡಲಾಗಿತ್ತು. ಹೌದು, ಹಿಂದೂಗಳ ನರಮೇಧಕ್ಕೂ ಮುನ್ನ ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯಾದ ಮ್ಯಾಕ್ಸಾರ್ ಟೆಕ್ನಾಲಜಿಸ್‌ಗೆ (Maxar Technologies) ಸ್ಯಾಟಲೈಟ್ ಚಿತ್ರಗಳನ್ನು (Satellite Images) ನೀಡುವಂತೆ ಪಾಕ್‌ನಿಂದ ಭಾರೀ ಬೇಡಿಕೆಯಿತ್ತು. ಫೆ.2 ರಿಂದ 12ರ ಮಧ್ಯೆ ಪಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಉನ್ನತ-ಗುಣಮಟ್ಟದ ಸ್ಯಾಟ್‌ಲೈಟ್ ಚಿತ್ರಗಳಿಗೆ ಹೆಚ್ಚಿನ ಆರ್ಡರ್‌ಗಳು ಬಂದಿದ್ದವು ಎನ್ನುವ ಸ್ಫೋಟಕ ಅಂಶ ಬಯಲಾಗಿದೆ.ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ಬೆದರಿ ಬಂಕರ್‌ನಲ್ಲಿ ಅಡಗಿದ್ದ ಅಸಿಮ್‌ ಮುನೀರ್‌!

    ಈ ಚಿತ್ರಗಳಿಗೆ ಪಾಕಿಸ್ತಾನಿ ಸಂಸ್ಥೆಯಾದ ಬಿಸಿನೆಸ್ ಸಿಸ್ಟಮ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಆರ್ಡರ್‌ಗಳನ್ನು ನೀಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವರದಿ ಮಾಡಿದೆ.

    ಸ್ಯಾಟ್‌ಲೈಟ್ ಚಿತ್ರದ ಆರಂಭಿಕ ಬೆಲೆ 3 ಲಕ್ಷ ರೂ.ಗಳಾಗಿದ್ದು, ಹೆಚ್ಚಿನ ರೆಸಲ್ಯೂಶನ್‌ನ ಬೇಡಿಕೆಯಿದ್ದರೆ ಬೆಲೆ ಹೆಚ್ಚಾಗುತ್ತದೆ. ಮ್ಯಾಕ್ಸರ್ ಟೆಕ್ನಾಲಜೀಸ್ 15 ಸೆಂ.ಮೀ ನಿಂದ 30 ಸೆಂ.ಮೀವರೆಗಿನ ಪಿಕ್ಸೆಲ್ ರೆಸಲ್ಯೂಶನ್‌ಗಳೊಂದಿಗೆ ಹೈ-ಡೆಫಿನಿಷನ್ ಸ್ಯಾಟ್‌ಲೈಟ್ ಚಿತ್ರಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ. ಆದರೆ ಈ ಮೊದಲು ಮ್ಯಾಕ್ಸರ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಒಬೈದುಲ್ಲಾ ಸೈಯದ್, ಪಾಕಿಸ್ತಾನ ಪರಮಾಣು ಶಕ್ತಿ ಆಯೋಗಕ್ಕೆ ಅಕ್ರಮವಾಗಿ ಕಂಪ್ಯೂಟರ್ ಉಪಕರಣಗಳು ಮತ್ತು ಸಾಫ್ಟ್‌ವೇರ್‌ಗಳನ್ನು ರಫ್ತು ಮಾಡಿದ್ದರು. ಹೀಗಾಗಿ ಅಮೆರಿಕದ ಫೆಡರಲ್ ನ್ಯಾಯಾಲಯವು ಒಬೈದುಲ್ಲಾ ಸೈಯದ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

    ಸ್ಯಾಟ್‌ಲೈಟ್ ಚಿತ್ರಕ್ಕೆ ಪಾಕ್ ಬೇಡಿಕೆ ಇಟ್ಟಿದ್ಯಾಕೆ?
    * ಪಹಲ್ಗಾಮ್, ಬೈಸರನ್ ಕಣಿವೆಯ ಅತ್ಯುತ್ತಮ ಸ್ಯಾಟಲೈಟ್ ಚಿತ್ರ
    * ರಕ್ಷಣಾ ಸಂಸ್ಥೆ, ಸೈನಿಕರ ಚಲನವಲನ
    * ಶಸ್ತಾçಸ್ತç ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿ
    * ಗಡಿಯ ಅಕ್ರಮ ಚಲನೆ ಗಮನಿಸಲು ಬಳಕೆ
    * ಖಾಸಗಿ ಕಂಪನಿ ಮೂಲಕ ಉಗ್ರ ದಾಳಿಗೆ ಪಾಕ್ ಬಳಕೆ.ಇದನ್ನೂ ಓದಿ: ಪಾಕ್‌ನ ಮಿರಾಜ್‌ ವಿಮಾನವನ್ನು ಹೊಡೆದ ಹಾಕಿದ ಭಾರತ

  • ಇಡೀ ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ – ಆತಂಕ ಮೂಡಿಸುತ್ತಿದೆ ಉಪಗ್ರಹ ಚಿತ್ರ

    ಇಡೀ ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ – ಆತಂಕ ಮೂಡಿಸುತ್ತಿದೆ ಉಪಗ್ರಹ ಚಿತ್ರ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜೋಶಿಮಠದಲ್ಲಿ (Joshimath) ಆಗುತ್ತಿರುವ ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಉಪಗ್ರಹ ಚಿತ್ರಗಳನ್ನು (Satellite Images) ಬಿಡುಗಡೆಗೊಳಿಸಿದೆ.

    ಇಸ್ರೋ ಬಿಡುಗಡೆಗೊಳಿಸಿರುವ ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಎನ್‍ಆರ್‌ಎಸ್‌ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ನಿಧನ

     

    ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಮಿಯ ಕುಸಿತ ನಿಧಾನವಾಗಿ ಆರಂಭಗೊಂಡಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿತ್ತು. ಆದರೆ 2022ರ ಡಿಸೆಂಬರ್ 27 ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ. ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂದು ಆತಂಕಕಾರಿ ವರದಿ ನೀಡಿದೆ. ಇದನ್ನೂ ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಜೋಶಿಮಠದಲ್ಲಿನ ರಸ್ತೆ, ಮನೆಗಳು ಸೇರಿದಂತೆ ಅನೇಕ ಕಡೆ ಬಿರುಕುಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿ ವಾಸಿಸಲು ಅಪಾಯಕಾರಿ ಎಂದು ಗುರುತಿಸಲಾಗಿರುವ 600ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮಂಗಳವಾರ ಮುಂದಾಗಿತ್ತು. ಉತ್ತರಾಖಂಡ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಜೋಶಿಮಠವನ್ನು ಈಗಾಗಲೇ ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ. ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸರ್ಕಾರ ಪರಿಹಾರವನ್ನು ಘೋಷಿಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k