Tag: sasikanth senthil

  • ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಆರೋಪಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದರು, ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಬಹುಮತದಿಂದ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಬಾರದು. ಅಂತಹ ದುಸ್ಸಾಹಸಕ್ಕೆ ಸೆಂಥಿಲ್ ಕೈಹಾಕಿದ್ದಾರೆ. ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಗುಡುಗಿದರು.

    ಸಸಿಕಾಂತ್ ಸೆಂಥಿಲ್ ಅವರ ಹೇಳಿಕೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರಿಗೂ ಕ್ರಮಕೈಗೊಳ್ಳುವ ಅಧಿಕಾರವಿದೆ. ಜನರು ಕೂಡ ಇದನ್ನು ಬಯಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಇರುವ ಕೈಗಳ ಕೈವಾಡ ಬೆಳಕಿಗೆ ಬರಬೇಕು. ಹೀಗಾಗಿ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

    ಸಂವಿಧಾನ ಬದ್ಧವಾಗಿ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಿರುವುದು ಸೂಕ್ತವಲ್ಲ. ಸಸಿಕಾಂತ್ ಸೆಂಥಿಲ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ದುರಂಹಕಾರ, ಅಸಭ್ಯತೆ ಮೆರೆದಿದ್ದಾರೆ. ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಂಸದರು ಭಾನುವಾರವೂ ಟ್ವೀಟ್ ಮೂಲಕ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿದ್ದ ಹೆಗ್ಡೆ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.

  • ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮಂಗಳೂರು: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ದಕ್ಷಿಣ ಕನ್ನಡ ಹೊಯ್ಗೆ(ಮರಳು) ಲಾರಿ ಮಾಲಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಜೈರಾಜ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ಯಾಮ್ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿ ಜೈರಾಜ್ ದೂರು ನೀಡಿದ್ದಾರೆ.

    ಈ ಎಲ್ಲ ವಿಚಾರದ ಬಗ್ಗೆ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ, ಮರಳು ಮಾರಿದ್ದಾರೆ. ಮೂರು ಸಾವಿರದ ಹೊಯ್ಗೆಯನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉಡುಪಿಯಲ್ಲಿ ಬ್ಲಾಕ್ ಲಿಸ್ಟಲ್ಲಿರುವ ಕಂಪನಿಗೆ ಜಿಪಿಎಸ್ ಟೆಂಡರ್ ಆಗಿದೆ. ಟಿ ಫೋರ್ ಯು ಎಂಬ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜೈರಾಜ್ ಆರೋಪಿಸಿದ್ದಾರೆ.

    ಹೊಯ್ಗೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟಿದ್ದರಲ್ಲೂ ಅಕ್ರಮವಾಗಿದೆ ಎಂದು ಜೈರಾಜ್ ಆರೋಪ ಮಾಡಿದ್ದಾರೆ.

  • ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

    ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

    ಮಂಗಳೂರು: ಐಎಎಸ್ ಅಧಿಕಾರಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಶುಕ್ರವಾರ ರಾಜೀನಾಮೆ ನೀಡಿ ಸೇವೆಯಿಂದ ದೂರ ಉಳಿದಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದರು ಅನ್ನೋದು ನಿಗೂಢವಾಗಿಯೇ ಇದ್ದು ಇಂದು ಸ್ಫೋಟಕ ಕಾರಣವನ್ನು ಹೊರ ಹಾಕಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಸೆಂಥಿಲ್ ಅವರನ್ನು ಮಾತನಾಡಿಸಿದಾಗ, ಕೇಂದ್ರ ಸರ್ಕಾರದ ಈಗಿನ ನೀತಿಯೇ ನನ್ನ ರಾಜೀನಾಮೆಗೆ ಕಾರಣ. ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಒಪ್ಪಿಗೆ ಇಲ್ಲ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಸಂಭಾಷಣೆ ಹೀಗಿದೆ:
    ಪ್ರತಿನಿಧಿ: ರಾಜೀನಾಮೆ ಕಾರಣ ಸರ್
    ಸಸಿಕಾಂತ್ ಸೆಂಥಿಲ್: ಕಾರಣ ಇಷ್ಟೇ, ಕೇಂದ್ರ ಸರ್ಕಾರದ ಪಾಲಿಸಿಗಳು ಸೈದ್ಧಾಂತಿಕವಾಗಿ ನನಗೆ ಒಪ್ಪಿಗೆ ಇಲ್ಲ ಅಷ್ಟೇ.
    ಪ್ರತಿನಿಧಿ: ಕೇಂದ್ರ ಸರ್ಕಾರನಾ ಸರ್ ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಬೇಸತ್ತು ಸಸಿಕಾಂತ್ ಸೆಂಥಿಲ್ ರಾಜೀನಾಮೆ?

    ಸಸಿಕಾಂತ್ ಸೆಂಥಿಲ್: ಅಂದ್ರೆ ನಮ್ಮ ರಾಜ್ಯ ಸರ್ಕಾರಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ. ಈಗ ನ್ಯಾಷನಲ್ ಲೆವೆಲ್ ಪಾಲಿಸಿ ಏನ್ ನಡೀತಾ ಇದೆ, ನನ್ನ ವೈಯಕ್ತಿಕ ನಿಲುವುಗಳಿಗೆ ಅದು ಸರಿ ಹೊಂದುತ್ತಿಲ್ಲ.
    ಪ್ರತಿನಿಧಿ :ಅದು ಕಷ್ಟ ಆಗ್ತಿದೆಯಾ ಸರ್

    ಸಸಿಕಾಂತ್ ಸೆಂಥಿಲ್: ಈಗ ತಾವು ನೋಡ್ತಾ ಇದ್ದೀರಲ್ಲ, ರಾಷ್ಟ್ರೀಯ ಲೆವಲ್‍ನಲ್ಲಿ ಏನೇನು ನಡೀತಿದೆ, ಯಾವ ರೀತಿ ರಾಜಕೀಯ ನಡೆಯುತ್ತಿದೆ ಅನ್ನೋದನ್ನು ನೀವೂ ನೋಡ್ತಿದ್ದೀರಲ್ಲ, ನನಗೂ ಅದಕ್ಕೂ ಒಪ್ಪಿಗೆ ಇಲ್ಲದಿರೋದ್ರಿಂದ ನಾನು ಸೇವೆಯಿಂದ ಹೊರಗೆ ಹೋಗ್ತಾ ಇದ್ದೇನೆ ಅಷ್ಟೇ. ನಮ್ಮ ರಾಜ್ಯ ಸರ್ಕಾರಕ್ಕೂ, ಅದಕ್ಕೂ ಸಂಬಂಧನೇ ಇಲ್ಲ

    ಪ್ರತಿನಿಧಿ: ಕಾಶ್ಮೀರ ವಿಚಾರ ಏನಾದ್ರೂ ಬೇಜಾರಾಗಿದ್ದೀಯಾ?
    ಸಸಿಕಾಂತ್ ಸೆಂಥಿಲ್: ಕಾಶ್ಮೀರ ವಿಚಾರನೂ ನನ್ನ ರಾಜೀನಾಮೆಯ ಒಂದು ಭಾಗ ಇದೆ.

    ಆಗಸ್ಟ್ 3ರಿಂದ ರಜೆಯಲ್ಲಿ ತೆರಳಿರುವ ಜಿಲ್ಲಾಧಿಕಾರಿ ಸೆಂಥಿಲ್ ಅವರು ಶುಕ್ರವಾರ ಧಿಡೀರ್ ಆಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ನೈತಿಕವೆಂದು ನನಗೆ ಅನಿಸುತ್ತಿಲ್ಲ. ಸಂವಿಧಾನದ ಮೂಲ ಆಶಯಗಳು ಕಾಣೆಯಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಅಡೆತಡೆ ಬರುವ ಸಾಧ್ಯತೆಯಿದೆ. ಜೊತೆಗೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.

    2009ರ ಬ್ಯಾಚಿನ ಈ ಅಧಿಕಾರಿ 2017 ಅಕ್ಟೋಬರ್ ತಿಂಗಳಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಸಸಿಕಾಂತ್ ಅವರು ಕೆಲಸ ಮಾಡಿದ್ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ. ರೂಪೇಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಯಾರು ಈ ಸಿಂಧೂ?
    ಮೈಸೂರು ಮೂಲದ ಸಿಂಧೂ ಬಿ.ಇ ಪದವೀಧರರಾಗಿದ್ದಾರೆ. ಎರಡು ವರ್ಷ ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ನಂತ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಯುಪಿಎಸ್‍ಸಿ ಪರೀಕ್ಷೆ ಬರೆದು 17ನೇ ರ್ಯಾಂಕ್ ಪಡೆದು ತೇರ್ಗಡೆಗೊಂಡಿದ್ದರು.