Tag: Sashikumar

  • ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್

    ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್

    ಗರು ಸಿನಿಮಾದ ನಂತರ ಮತ್ತೆ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಎದುರಾಗಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬೈರಾಗಿ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಸೆಣಸಲಿದ್ದಾರೆ. ಇಂದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವುದನ್ನು ಟ್ರೇಲರ್ ಖಚಿತ ಪಡಿಸುತ್ತದೆ. ಇದನ್ನೂ ಓದಿ : ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ಶಿವರಾಜ್ ಕುಮಾರ್ ಇಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಹುಲಿಬಣ್ಣದ ಮುಖಹೊತ್ತು ರೌಡಿಗಳನ್ನು ಸೆರೆ ಬಡಿಯುವಂತಹ ದೃಶ್ಯಗಳು ಟ್ರೇಲರ್ ನಲ್ಲಿ ಹೇರಳವಾಗಿವೆ. ಡಾಲಿ ಪಾತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳದೇ ಇದ್ದರೂ, ಅದೊಂದು ಖಳನಾಯಕನ ಕ್ಯಾರೆಕ್ಟರ್ ಎನ್ನಲಾಗುತ್ತಿದೆ.   ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಬೈರಾಗಿಯ ಮತ್ತೊಂದು ವಿಶೇಷ ಅಂದರೆ, ನಾಲ್ವರು ನಾಯಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಜತೆ ಹಿರಿಯ ನಟ ಶಶಿಕುಮಾರ್, ದಿಯಾ ಸಿನಿಮಾದ ಪೃಥ್ವಿ ಅಂಬರ್ ಮತ್ತು ಡಾಲಿ ಧನಂಜಯ್. ಪೃಥ್ವಿ ಅಂಬರ್ ಮತ್ತು ಧನಂಜಯ್ ನೆಗೆಟಿವ್ ರೀತಿಯ ಪಾತ್ರ ಮಾಡಿದ್ದರೆ, ಶಶಿಕುಮಾರ್ ಅವರು ಪೊಲೀಸ್ ಅಧಿಕಾರಿಯ ಪಾತ್ರ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಟಗರು ಸಿನಿಮಾದ ಹಿಟ್ ನಂತರ ಡಾಲಿ ಮತ್ತು ಶಿವರಾಜ್ ಕುಮಾರ್ ಒಂದಾಗಿದ್ದಾರೆ. ಅಲ್ಲದೇ, ಇದೊಂದು ಮಾಸ್ ಸಿನಿಮಾವಾಗಿದ್ದರಿಂದ ಪಾತ್ರಗಳು ಕೂಡ ಅಷ್ಟೇ ಪವರ್ ಫುಲ್ ಆಗಿರುತ್ತವೆ. ಈ ಸಿನಿಮಾದಲ್ಲಿ ಇಬ್ಬರ ಕಾಳಗ ಹೇಗಿರಲಿದೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು.

  • ಸಾಮಾನ್ಯ ಸ್ಪರ್ಧಿಯಾಗಿ ಮಾಡ್ರನ್ ರೈತ ಬಿಗ್‍ಬಾಸ್ ಮನೆಗೆ ಎಂಟ್ರಿ

    ಸಾಮಾನ್ಯ ಸ್ಪರ್ಧಿಯಾಗಿ ಮಾಡ್ರನ್ ರೈತ ಬಿಗ್‍ಬಾಸ್ ಮನೆಗೆ ಎಂಟ್ರಿ

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ ಸೀಸನ್ 6 ಭಾನುವಾರ ಆರಂಭವಾಗಿದ್ದು, ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ 18 ಮಂದಿ ಬಿಸ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಆಧುನಿಕ ಶೈಲಿಯಲ್ಲಿ ಕೃಷಿ ಮಾಡಲು ಮುಂದಾಗಿರುವ ರೈತ ಯುವಕ ಶಶಿಕುಮಾರ್ ಬಿಸ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರೈತ ಯುವಕ ಶಶಿಕುಮಾರ್ ಬಿಸ್‍ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಪ್ರವೇಶಿಸಿದರು. ತಾನು ಕೇವಲ ರೈತ ಮಾತ್ರವಲ್ಲ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದೇನೆ. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದು, ಕೃಷಿಯಲ್ಲೂ ಸಾಧನೆ ಮಾಡಬಹುದು ಎಂದು ಸಾಬೀತು ಪಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು

    ಶಶಿಕುಮಾರ್ ಮಾತು
    ರೈತ ಅಂದರೆ ಪಂಚೆ ಹಾಕಿಕೊಂಡು ಅಥವಾ ಕಿತ್ತು ಹೋಗಿರುವ ಬಟ್ಟೆ ಹಾಕಿಕೊಂಡು ಮಣ್ಣಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಂದು ಜೀವನ ಶೈಲಿ ಇಲ್ಲ ಅಂದುಕೊಂಡಿರುತ್ತಾರೆ. ಇತ್ತೀಚೆಗೆ ರೈತ ಅಂದರೆ ಆತ್ಮಹತ್ಯೆ, ಸಬ್ಸಿಡಿ ಈ ರೀತಿಯ ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ ತಂತ್ರಗಾರಿಕೆಯಲ್ಲಿ ಜ್ಞಾನ ಪಡೆದುಕೊಂಡು ಆಧುನಿಕ ರೀತಿಯಲ್ಲಿ ಕೃಷಿ ಮಾಡಿ ಮುಂದುವರಿಯಬಹುದು ಎಂದು ಶಶಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:  ಬಿಗ್‍ಬಾಸ್ ಕನ್ನಡ ಸೀಸನ್ 6: ಸ್ಪರ್ಧಿಗಳು ಯಾರು? ಹಿನ್ನೆಲೆ ಏನು?

    https://www.facebook.com/ColorsSuper/videos/2175718015793083/

    ನಾನು ಆಧುನಿಕ ಶೈಲಿಯಲ್ಲಿ ಕೃಷಿ ಮಾಡುವುದರ ಜೊತೆ ಕರ್ನಾಟಕದ ಜಾನಪದ ನೃತ್ಯವಾದ ಡೊಳ್ಳು, ಪಟ್ಟಾ, ಪೂಜಾ, ಕಂಸಾಳೆಯನ್ನು ಕಲಿತಿದ್ದೇನೆ. ನಮ್ಮ ಸ್ನೇಹಿತರ ಒಂದು ತಂಡವಿದೆ. ನಾವೆಲ್ಲಾ ನಾಟಕ, ನೃತ್ಯವನ್ನು ಕಲಿತು ಎಲ್ಲ ಕಡೆ ಪ್ರದರ್ಶನ ಮಾಡಿದ್ದೇವೆ. 5 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದೇವೆ. ಬಿಗ್ ಬಾಸ್ ಮನೆಗೆ ಹೋಗಿ ಆಧುನಿಕವಾಗಿಯೂ ಕೃಷಿ ಮಾಡಿ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ತಿಳಿಸುವ ಮೂಲಕ ಎಲ್ಲ ರೈತರಿಗೂ ಮಾದರಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಭೇಟಿ ಖುಷಿ ನೀಡಿದೆ- ರಾಘಣ್ಣ ಸೆಲ್ಫಿ ಫೋಟೋ ವೈರಲ್

    ದರ್ಶನ್ ಭೇಟಿ ಖುಷಿ ನೀಡಿದೆ- ರಾಘಣ್ಣ ಸೆಲ್ಫಿ ಫೋಟೋ ವೈರಲ್

    ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವರಿಬ್ಬರ ಸೆಲ್ಫಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.

    ರಾಘವೇಂದ್ರ ರಾಜ್ ಕುಮಾರ್ ಮತ್ತು ದರ್ಶನ್ ಇಬ್ಬರ ಅಪರೂಪದ ಭೇಟಿಯ ಫೋಟೋವನ್ನು ರಾಘಣ್ಣ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ `ದರ್ಶನ್ ಅವರನ್ನ ಇಂದು ಭೇಟಿ ಮಾಡಿದ್ದು ಖುಷಿಯಾಗಿದೆ’ ಎಂದು ತಿಳಿಸಿದ್ದಾರೆ.

    ಸ್ಯಾಂಡಲ್‍ವುಡ್ ನ ಹಿರಿಯ ನಟ ಶಶಿಕುಮಾರ್ ಅವರ ಮಗ ಆದಿತ್ಯ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದ್ದರಿಂದ ಅವರ ಮೊದಲ ಸಿನಿಮಾ ಮುಹೂರ್ತ ಸಮಾರಂಭ ಭಾನುವಾರ ನೆರೆವೇರಿದೆ. ಈ ಮುಹೂರ್ತದ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ದರ್ಶನ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ಹಿಂದೆಯೇ ದರ್ಶನ್ ಮತ್ತು ಶಿವಣ್ಣ ಇಬ್ಬರು ಶಶಿಕುಮಾರ್ ಮಗನ ಚಿತ್ರದ ಮುಹೂರ್ತಕ್ಕೆ ಬರುವುದಾಗಿ ಹೇಳಿದ್ದರು. ಅದರಂತೆಯೇ ಎಲ್ಲರು ಭಾನುವಾರ ಬಂದು ಆದಿತ್ಯ ಅವರ ಚೊಚ್ಚಲ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ದರ್ಶನ್ ಮತ್ತು ರಾಘಣ್ಣ ಅಥವಾ ದರ್ಶನ್ ಹಾಗು ಶಿವಣ್ಣ ಭೇಟಿಯಾಗುವುದು ಅಪರೂಪ. ಇವರೆಲ್ಲರೂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಈಗ ಮೂವರು ಒಟ್ಟಿಗೆ ಭೇಟಿಯಾಗಿ ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿಕೊಂಡಿದ್ದಾರೆ.

    ಈ ಸಿನಿಮಾವನ್ನು ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ `ಮೊಡವೆ’ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಕ್ಟೋಬರ್ ನಲ್ಲಿ `ಮೊಡವೆ’ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹಂಪಿ, ಗುಲ್ಬರ್ಗ, ಬೀದರ್, ರಾಯಚೂರು, ಬಾದಮಿ, ಸೇರಿದಂತೆ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv