Tag: Sasaram

  • ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು

    ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು

    ಪಾಟ್ನಾ: ಬಿಹಾರದ (Bihar) ರೋಹ್ತಾಸ್ ಜಿಲ್ಲೆಯ ಸಸಾರಾಮ್ (Sasaram) ನಗರದಲ್ಲಿ ಬಾಂಬ್ ಸ್ಫೋಟಗೊಂಡು (Bomb Blast) 6 ಜನರು ಗಾಯಗೊಂಡ ಘಟನೆ ನಡೆದು 2 ದಿನಗಳಾದ ಬಳಿಕ ಮತ್ತೆ ಸೋಮವಾರ ಮುಂಜಾನೆ ಸ್ಫೋಟದ (Explosion) ಸದ್ದು ಕೇಳಿ ಬಂದಿದೆ.

    ಸೋಮವಾರ ಮುಂಜಾನೆ ನಗರದ ಮೋಚಿ ತೋಲಾ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್ ಇನ್ಸ್‌ಪೆಕ್ಟರ್ ರಾಮ್ ನರೇಶ್ ಸಿಂಗ್, ನಾವು ಮುಂಜಾನೆ ಸ್ಫೋಟದಂತಹ ಶಬ್ದವನ್ನು ಕೇಳಿದ್ದೇವೆ. ಆದರೆ ಅದು ಬಾಂಬ್ ಸ್ಫೋಟವೇ ಅಥವಾ ಪಟಾಕಿಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: 36 ಮಂದಿ ಸಾವಿಗೆ ಕಾರಣವಾಗಿದ್ದ ಇಂದೋರ್‌ ದೇವಸ್ಥಾನ ನೆಲಸಮ

    ಮಾರ್ಚ್ 31 ರಂದು ರಾಮನವಮಿ ಮೆರವಣಿಗೆಯ ಬಳಿಕ ಸಸಾರಾಮ್‌ನಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಪ್ರದೇಶದಲ್ಲಿ ಕಲ್ಲು ತೂರಾಟವೂ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಧಿಕಾರಿಗಳು ಸಸಾರಮ್ ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ.

    ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ನಂತರ ಸರಣಿ ಘರ್ಷಣೆಗಳು ವರದಿಯಾಗಿವೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೊಲೀಸರು ಮತ್ತು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ದುಷ್ಕರ್ಮಿಗಳನ್ನು ಹಿಡಿಯಲು ಬಿಹಾರ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸಸಾರಾಮ್‌ನಿಂದ ಇದುವರೆಗೆ 43 ಜನರನ್ನು ಬಂಧಿಸಲಾಗಿದೆ ಮತ್ತು 3 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸಸಾರಾಮ್ ನಗರದಾದ್ಯಂತ 27 ಸ್ಥಳಗಳಲ್ಲಿ ಭಾರೀ ಪಡೆಗಳನ್ನು ನಿಯೋಜಿಸಲಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು

  • ಅಮಿತ್ ಶಾ ಭೇಟಿ ರದ್ದಾದ ಪ್ರದೇಶದಲ್ಲಿ ಬಾಂಬ್ ಸ್ಫೋಟ – ಐವರಿಗೆ ಗಾಯ

    ಅಮಿತ್ ಶಾ ಭೇಟಿ ರದ್ದಾದ ಪ್ರದೇಶದಲ್ಲಿ ಬಾಂಬ್ ಸ್ಫೋಟ – ಐವರಿಗೆ ಗಾಯ

    – ರಾಮನವಮಿ ಹಿಂಸಾಚಾರ ನಡೆದ 1 ದಿನದ ಬಳಿಕ ಘಟನೆ

    ಪಾಟ್ನಾ: ರಾಮನವಮಿಯ (Ram Navami) ಹಿಂಸಾಚಾರದ (Violence) ಬಳಿಕ ಬಿಹಾರದಲ್ಲಿ (Bihar) ಶನಿವಾರ ಮತ್ತೆ ಘರ್ಷಣೆ ವರದಿಯಾಗಿದೆ. ಬಿಹಾರದ ಸಸಾರಾಮ್ (Sasaram) ಪಟ್ಟಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು (Bomb Blast), ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿದೆ. ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಸಸಾರಾಮ್ ಡಿಎಂ ಈ ಬಗ್ಗೆ ಮಾಹಿತಿ ನೀಡಿದ್ದು, ಸಸಾರಾಮ್‌ನಲ್ಲಿ ಬಾಂಬ್ ಸ್ಫೋಟವಾಗಿದೆ. ಗಾಯಾಳುಗಳನ್ನು ಬಿಹೆಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಘಟನೆ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ

    ಇದಕ್ಕೂ ಮುನ್ನ ಮಾರ್ಚ್ 31 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಬೇಕಿದ್ದ ನಳಂದದ ಬಿಹಾರಶರೀಫ್, ರೋಹ್ಯಾಸ್‌ನ ಸಸಾರಾಮ್‌ನಲ್ಲಿ ಘರ್ಷಣೆ ನಡೆದಿತ್ತು. ಜಿಲ್ಲೆಯಲ್ಲಿ ಘರ್ಷಣೆ ನಡೆದಿದ್ದ ಹಿನ್ನೆಲೆ ಸೆಕ್ಷನ್ 144 ಹೇರಲಾಗಿತ್ತು. ಮಾತ್ರವಲ್ಲದೇ ಅಮಿತ್ ಶಾ ಅವರ ಸಸಾರಾಮ್ ಭೇಟಿಯನ್ನೂ ರದ್ದುಗೊಳಿಸಲಾಗಿತ್ತು.

    ಪೊಲೀಸರ ಪ್ರಕಾರ ರಾಮನವಮಿ ಆಚರಣೆ ವೇಳೆ ಹಿಂಸಾಚಾರ ನಡೆದಿರುವ ಹಿನ್ನೆಲೆ ರಾಜ್ಯಾದ್ಯಂತ ಕೆಲ ಭಾಗಗಳಿಂದ 45 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಸಸಾರಾಮ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 18 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪ್ರಮುಖ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿಲ್ಲ ಅಭ್ಯರ್ಥಿಗಳು!