Tag: sarkaru vaari paata

  • ಮಹೇಶ್ ಬಾಬು ಚಾರ್ಮಿಂಗ್ ಲುಕ್‌ಗೆ ಫ್ಯಾನ್ಸ್ ಕೊಟ್ರು ಫುಲ್ ಮಾರ್ಕ್ಸ್

    ಮಹೇಶ್ ಬಾಬು ಚಾರ್ಮಿಂಗ್ ಲುಕ್‌ಗೆ ಫ್ಯಾನ್ಸ್ ಕೊಟ್ರು ಫುಲ್ ಮಾರ್ಕ್ಸ್

    ಟಾಲಿವುಡ್ ಅಂಗಳದ ಸ್ಟಾರ್ ನಟ ಮಹೇಶ್ ಬಾಬು ಮತ್ತೆ ಸುದ್ದಿಯಲ್ಲಿದ್ದಾರೆ. `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದ ಮಹೇಶ್ ಬಾಬು ಈಗ ತಮ್ಮ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ.

    ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಮೋಡಿ ಮಾಡಿರುವ ಪ್ರಿನ್ಸ್ ಮಹೇಶ್ ಬಾಬು ಸದ್ಯ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ಖುಷಿಯನ್ನ ಸವಿಯುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಜೊತೆಗೆ ವಿದೇಶದ ಟ್ರಿಪ್ ಮುಗಿಸಿ ಮತ್ತೆ ಹಿಂದಿರುಗಿದ್ದಾರೆ. ಸದ್ಯ ಮಹೇಶ್ ಬಾಬು ತಮ್ಮ ನಯಾ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ:ಗಂಟಲು ನೋವಿನ ಔಷಧಿ ವಿಚಾರಕ್ಕೆ ಸೋನು ಕಾಲೆಳೆದ ಕಿಚ್ಚ ಸುದೀಪ್

     

    View this post on Instagram

     

    A post shared by Mahesh Babu (@urstrulymahesh)

    ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋಶೂಟ್ ಶೇರ್ ಮಾಡಿ, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ. ಫೋಟೋದಲ್ಲಿ ಮತ್ತಷ್ಟು ಯಂಗ್ ಆಗಿ ಚಾರ್ಮಿಂಗ್ ಲುಕ್‌ನಲ್ಲಿ ಮಿಂಚಿದ್ದಾರೆ. ಮಹೇಶ್ ಬಾಬು ಅವರ ಲುಕ್ ನೋಡಿ ಫೀಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ನೆಚ್ಚಿನ ನಟ ಹೊಸ ಲುಕ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್ ಬಾಬು: ನೆಟ್ಟಿಗರು ಫುಲ್ ಗರಂ

    ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್ ಬಾಬು: ನೆಟ್ಟಿಗರು ಫುಲ್ ಗರಂ

    ಬಾಕ್ಸಾಫೀಸ್‌ನಲ್ಲಿ `ಸರ್ಕಾರು ವಾರಿ ಪಾಟ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಮೋಡಿಗೆ ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿದೆ. ಹೀಗಿರುವಾಗ ಚಿತ್ರದ ಕುರಿತು ಹೊಸ ವಿವಾದ ಹುಟ್ಟಿಕೊಂಡಿದೆ. ಈ ಚಿತ್ರತಂಡದ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

    `ಸರ್ಕಾರು ವಾರಿ ಪಾಟ’ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬೆನ್ನಲ್ಲೇ ವಿವಾದವೊಂದು ಚಿತ್ರತಂಡದ ಬೆನ್ನು ಹತ್ತಿದೆ. ಚಿತ್ರದ ದೃಶ್ಯವೊಂದರಲ್ಲಿ ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್ ಅವರನ್ನು ಮುಟ್ಟಿರುವುದಕ್ಕೆ ವಿವಾದ ಸೃಷ್ಟಿಯಾಗಿದೆ. ಚಿತ್ರದ ಸೀನ್‌ವೊಂದರಲ್ಲಿ ನಟ ಮಹೇಶ್ ಬಾಬು ಬಲವಂತದಿಂದ ಕೀರ್ತಿ ಸುರೇಶ್ ತನ್ನ ಪಕ್ಕ ಮಲಗುವಂತೆ ಮಾಡುತ್ತಾನೆ. ನಂತರ ತನ್ನ ಕಾಲು ಆಕೆಯ ಮೇಲೆ ಹಾಕುತ್ತಾನೆ. ಈ ದೃಶ್ಯ ಇದೀಗ ಚರ್ಚೆಗೆ ಕಾರಣವಾಗಿದೆ.

    ಈ ದೃಶ್ಯದ ಕುರಿತು ನಿರ್ದೇಶಕ ಪರಶುರಾಮ್ ಪ್ರತಿಕ್ರಿಯಿಸಿದ್ದಾರೆ, ಆ ದೃಶ್ಯದಲ್ಲಿ ಏನು ತಪ್ಪಿದೆ.ಮಗುವೊಂದು ತನ್ನ ತಾಯಿಯ ಪಕ್ಕ ಮಲಗಲು ಆಸೆಪಟ್ಟಂತೆ ಇಲ್ಲಿ ನಾಯಕ, ನಾಯಕಿಯ ಪಕ್ಕ ಮಲಗಿದ್ದಾರೆ ಎಂದು ಉತ್ತರಿಸಿದ್ದಾರೆ. ನಿರ್ದೇಶಕನ ಉತ್ತರಕ್ಕೆ ನೆಟ್ಟಿಗರು ಇದೀಗ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ತಾಯಿಗೂ ನಾಯಕಿಗೂ ಕಂಪೇರ್ ಮಾಡಬೇಡಿ. ಕೆಟ್ಟ ದೃಶ್ಯವನ್ನು ಚಿತ್ರೀಕರಿಸಿರುವುದಲ್ಲದೇ ಅದಕ್ಕೆ ಹೀಗೆ ಪ್ರತಿಕ್ರಿಯಿಸುತ್ತೀರಾ ನಾಯಕಿಯನ್ನು ಬೋಗದ ವಸ್ತಗಳಂತೆ ತೋರಿಸುವುದು ನಿಲ್ಲಿಸಿ ಎಂದು ನಿರ್ದೇಶಕ ಪರಶುರಾಮ್ ಮೇಲೆ ಕಿಡಿಕಾರಿದ್ದಾರೆ. ಈ ದೃಶ್ಯದ ಬಗ್ಗೆ ಅಭಿಮಾನಿಗಳು ಖಂಡಿಸಿದ್ದಾರೆ. ಈ ಎಲ್ಲಾ ವಿದಾದಗಳನ್ನು ಮೀರಿ ಮಹೇಶ್ ಬಾಬು ಇನ್ನಷ್ಟು ಉತ್ತಮ ಕಲೆಕ್ಷನ್ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.