Tag: Sarjapur Police Station

  • ಶಿಕ್ಷಕಿ ಮನೆಯಲ್ಲಿ ಕಳ್ಳತನ – ಗೋಡೆ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ವಿಕೃತಿ

    ಶಿಕ್ಷಕಿ ಮನೆಯಲ್ಲಿ ಕಳ್ಳತನ – ಗೋಡೆ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ವಿಕೃತಿ

    ಆನೇಕಲ್: ಖಾಸಗಿ ವಸತಿ ಶಾಲೆಯ ಶಿಕ್ಷಕರ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಶಿಕ್ಷಕಿ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಅದು ಅಲ್ಲದೇ ಮನೆಯ ಗೋಡೆಗಳ ಮೇಲೆ ಅಶ್ಲೀಲ ಚಿತ್ರ ಬಿಡಿಸುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ನಡೆದಿದೆ.

    ದೊಮ್ಮಸಂದ್ರ ಗ್ರಾಮದ ಬಳಿಯಿರುವ ಟಿಬಿಐಎಸ್ ಖಾಸಗಿ ಶಾಲೆಯಲ್ಲಿನ ಶಿಕ್ಷಕರ ಕ್ವಾಟ್ರಸ್ ಗೆ ಇದೇ ತಿಂಗಳು 2ನೇ ತಾರೀಖಿನಂದು ಕಳ್ಳರು ನುಗ್ಗಿದ್ದಾರೆ. ಈ ವೇಳೆ ಕೇರಳ ಮೂಲದ ಶಿಕ್ಷಕಿ ಮನೆಯಲ್ಲಿ 120 ಗ್ರಾಂ ಚಿನ್ನ, ಮೊಬೈಲ್ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ:  ದಾರಿಯಲ್ಲಿ ಸಿಕ್ಕ 10 ಸಾವಿರ ರೂ. ಮಾಲೀಕರಿಗೆ ಹಿಂತಿರುಗಿಸಿದ ಹೈಸ್ಕೂಲ್ ವಿದ್ಯಾರ್ಥಿನಿಯರು

    ಶಿಕ್ಷಕಿ ಹೊಸವರ್ಷದ ಸಲುವಾಗಿ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ತವರಿನಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.