Tag: Sarja Family

  • ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ತಾವು ಪೋಷಕರಾಗುತ್ತಿರುವ ವಿಚಾರವನ್ನ ಪತ್ನಿ ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್ ಮೂಲಕ ಧ್ರುವ ಸರ್ಜಾ ತಿಳಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

    ಕನ್ನಡ ಚಿತ್ರರಂಗದ ಸ್ಟಾರ್ ನಟ ಧ್ರುವ ಸರ್ಜಾ ತಂದೆಯಾಗುತ್ತಿದ್ದಾರೆ. ಈ ಸಿಹಿ ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ನಟ ತಿಳಿಸಿದ್ದಾರೆ. ಹೊಸ ಅತಿಥಿಯ ಆಗಮನದ ಖುಷಿಯನ್ನ ಚೆಂದದ ಫೋಟೋಶೂಟ್ ಮೂಲಕ ತಿಳಿಸಿದ್ದಾರೆ. ಪತ್ನಿ ಪ್ರೇರಣಾ ಜೊತೆ ನಟ ಧ್ರುವ ಸರ್ಜಾ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ನಾವು ಜೀವನದ ಹಂತಕ್ಕೆ ಪ್ರವೇಶಿಸಿದ್ದೇವೆ. ಶೀಘ್ರದಲ್ಲಿ ಬರಲಿರುವ ಮಗುವನ್ನು ಆರ್ಶೀವದಿಸಿ ಎಂದು ಧ್ರುವ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಬೇಬಿ ಬಂಪ್ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ಜೋಡಿಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಇನ್ನು ನವೆಂಬರ್ 25, 2019ರಂದು ಧ್ರುವ ಸರ್ಜಾ ಮತ್ತು ಪ್ರೇರಣಾ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಇದೀಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಬೆಂಗಳೂರು: ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಇಂದು ಬಹಿರಂಗ ಪಡಿಸುವ ಮೂಲಕ ಮೇಘನಾ ರಾಜ್ ಸಿಹಿಸುದ್ದಿ ನೀಡಿದ್ದಾರೆ. ಈ ವೇಳೆ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿರುತ್ತದೆ ಎಂದು ಹೇಳಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣಮಾಡಿದ್ದು, ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಧ್ರುವ ಸರ್ಜಾ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

    druva sarja

    ನಂತರ ಈ ಸಮಯದಲ್ಲಿ ನಾನು ನನ್ನ ಚಿಕ್ಕಪ್ಪ, ನನ್ನ ಅಣ್ಣನನ್ನು ನೆನಪಿಸಿಕೊಳ್ಳಲಿ ಇಚ್ಛಿಸುತ್ತೇನೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರು ಹಾಗೂ ನನ್ನ ಅತ್ತಿಗೆ ಎಲ್ಲರೂ ಸಂತಸದಿಂದ ಇದ್ದಾರೆ. ನಾನು ಕೂಡ ಖುಷಿಯಾಗಿದ್ದೇನೆ. ದಿನ ದಿನ ನಾವು ಎಲ್ಲವನ್ನು ಸುಧಾರಿಸಿಕೊಳ್ಳುತ್ತಿದ್ದೇವೆ. ರಾಯನ್‍ಗೆ ಎಲ್ಲರೂ ಆಶೀರ್ವಾದಮಾಡಿ. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ. ಅವನು ಯುವರಾಜ ಎಂದು ಹೆಸರಿಟ್ಟಿರುವುದಲ್ಲ. ಅವನು ಯುವರಾಜನಂತೆಯೇ ಇರುತ್ತಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

  • ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ?

    ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ?

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ವಿವಾದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಚಿರು ಸರ್ಜಾ ಸಾವಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಜಾ ಕುಟುಂಬ ಇಂದ್ರಜಿತ್ ಲಂಕೇಶ್ ಮೇಲೆ ಕಾನೂನು ಸಮರಕ್ಕೆ ನಿಂತಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ: ಇಂದ್ರಜಿತ್ ಲಂಕೇಶ್

    ಸರ್ಜಾ ಕುಟುಂಬದಸ್ಥರು ಈ ಸಂಬಂಧ ಖ್ಯಾತ ವಕೀಲರೊಬ್ಬರನ್ನು ಸಂಪರ್ಕ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಸಾವಿನ ವಿಚಾರ ಎಳೆದು ತಂದಿದ್ದಕ್ಕೆ ಸರ್ಜಾ ಕುಟುಂಬದವರು ಇಂದ್ರಜಿತ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಮವಾರ ಸ್ಯಾಂಡಲ್‍ವುಡ್‍ನಲ್ಲಿ ಯಾರಿಗೆಲ್ಲಾ ಡ್ರಗ್ಸ್ ನಂಟಿದೆ, ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅನ್ನೋದರ ಬಗ್ಗೆ ಇಂದ್ರಜಿತ್ ಸಿಸಿಬಿ ಪೊಲೀಸರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್

    ಇದೇ ವೇಳೆ ಮಾತನಾಡಿದ್ದ ಇಂದ್ರಜಿತ್, ಯುವ ನಟ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ಕುರಿತು ನಾನು ಹೇಳಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಹೇಳಿದ್ದರು.

    ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದರು.

  • ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಬೆಂಗಳೂರು: ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ, ಧೃವ ಸರ್ಜಾ ಮುಂತಾದವರು ನೆಲೆ ಕಂಡುಕೊಂಡಿದ್ದಾರೆ. ಇದೀಗ ಬಿಡುಗಡೆಗೆ ತಯಾರಾಗಿರುವ ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಮತ್ತೋರ್ವ ಅಳಿಯ ಪವನ್ ತೇಜಾ ಕೂಡಾ ಹೀರೋ ಆಗಿ ಹೊರ ಹೊಮ್ಮಲಿದ್ದಾರೆ. ಮಾವನ ಬುದ್ಧಿಮಾತುಗಳನ್ನು ಪರಿಪಾಲಿಸುತ್ತಾ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳೋ ಹಾದಿಯಲ್ಲಿರೋ ಪವನ್ ತೇಜಾ ಆರಂಭ ಪ್ರಯತ್ನದಲ್ಲಿಯೇ ವಿಶಿಷ್ಟವಾದೊಂದು ಕಥೆಯ ಮೂಲಕ ಅನಾವರಣಗೊಳ್ಳುತ್ತಿದ್ದಾರೆ.

    ಅರುಣ್ ನಿರ್ದೇಶನದ ಅಥರ್ವ ಚಿತ್ರವನ್ನು ರಕ್ಷಯ್ ಎಸ್.ವಿ ನಿರ್ಮಾಣ ಮಾಡಿದ್ದಾರೆ. ಮನುಷ್ಯ ಜೀವನದ ಆರಂಭ ಮತ್ತು ಅಂತ್ಯಗಳ ನಡುವಿನ ಯಾನದ ಕಥಾನಕ ಹೊಂದಿರೋ ಈ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಜನಮನ ಸೆಳೆದುಕೊಂಡಿದೆ. ಬಹುಶಃ ಪವನ್ ತೇಜಾ ಅರ್ಜೆಂಟು ಮಾಡಿದ್ದರೆ ಅದ್ಯಾವತ್ತೋ ಹೀರೋ ಆಗುತ್ತಿದ್ದರು. ಖುದ್ದು ಪವನ್ ಗೇ ಅಂಥಾದ್ದೊಂದು ಅವಸರ ಇತ್ತಂತೆ. ಆದರೆ ಅದನ್ನೆಲ್ಲ ತಡೆದುಕೊಂಡು ಸಂಪೂರ್ಣ ಕಸರತ್ತು ಮುಗಿಸಿಕೊಂಡೇ ಚಿತ್ರರಂಗಕ್ಕೆ ಬರುವಂತೆ ಮಾಡಿದ್ದು ಅವರ ಮಾವ ಅರ್ಜುನ್ ಸರ್ಜಾ ಅವರ ಬುದ್ಧಿಮಾತು!

    ಸಿನಿಮಾ ವಾತಾವರಣದಲ್ಲಿಯೇ ಬೆಳೆದಿದ್ದ ಪವನ್ ಗೆ ಕಾಲೇಜು ದಿನಗಳಲ್ಲಿಯೇ ಹೀರೋ ಆಗುವ ತುಡಿತ ಇತ್ತಂತೆ. ಇದನ್ನು ತಡೆದುಕೊಳ್ಳಲಾಗದೆ ತನ್ನ ಮಾವ ಅರ್ಜುನ್ ಸರ್ಜಾ ಅವರ ಮುಂದೆ ಅದನ್ನು ಹೇಳಿಕೊಂಡಾಗ ಅವರಿಂದ ‘ಹೀರೋ ಆಗೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಅದಕ್ಕೆ ತಯಾರಿ ಬೇಕಾಗುತ್ತೆ. ಅಂಥಾ ತಯಾರಿ ಮಾಡಿಕೊಂಡು ಬಾ’ ಅಂದಿದ್ದರಂತೆ. ಆ ಕ್ಷಣದಿಂದಲೇ ನಾಟಕಗಳತ್ತ ಮುಖ ಮಾಡಿದ್ದ ಪವನ್ ರಂಗಭೂಮಿಯಲ್ಲಿ ಸಕ್ರಿಯರಾಗಿ ಇಪ್ಪತೈದಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಂತರವಷ್ಟೇ ಮಾವನ ಮಾತಿನಂತೆ ಹೀರೋ ಆಗಲು ಅಣಿಯಾಗಿದ್ದರಂತೆ.

    ಇದೀಗ ಅರುಣ್ ಅವರ ವಿಶಿಷ್ಟ ಕಥೆ ಮತ್ತು ಚಾಲೆಂಜಿಂಗ್ ಆದ ಪಾತ್ರದ ಮೂಲಕ ಪವನ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದ್ದಾರೆ! ಇದೇ ಜುಲೈ 13ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರುತ್ತಿದೆ.