Tag: sari

  • 5 ಸ್ಟಾರ್ ಹೊಟೇಲಿನಲ್ಲಿ ಸೀರೆಗೆ ಬೆಂಕಿ – ಮಹಿಳೆ ಸಾವು

    5 ಸ್ಟಾರ್ ಹೊಟೇಲಿನಲ್ಲಿ ಸೀರೆಗೆ ಬೆಂಕಿ – ಮಹಿಳೆ ಸಾವು

    ಗಾಂಧಿನಗರ: ಅಹಮದಾಬಾದ್‌ನ ಎಲಿಸ್‌ಬ್ರಿಡ್ಜ್ ಪ್ರದೇಶದ 5 ಸ್ಟಾರ್ ಹೊಟೇಲಿನಲ್ಲಿ ಮಹಿಳೆಯೊಬ್ಬರ ಸೀರೆಗೆ ಬೆಂಕಿ ತಗುಲಿದ್ದು, ಪರಿಣಾಮ ಮಹಿಳೆ ತೀವ್ರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ.

    ಮಣಿನಗರದ ಗಂಗೆಶ್ವರ್ ಸೊಸೈಟಿಯ ನಿವಾಸಿ ರಶ್ಮಿಕಾ ಶಾ(54) ಸೀರೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅವರ ದೇಹ ಬಹುಪಾಲು ಸುಟ್ಟು ಹೋಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭಿರವಾಗಿತ್ತು. ಪೊಲೀಸರು ಇದು ಆಕಸ್ಮಿಕ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ

    ಕಳೆದ ವಾರ ಮಹಿಳೆ ಹೊಟೇಲಿನಲ್ಲಿ ನಡೆದಿದ್ದ ಔತಣಕೂಟದಲ್ಲಿ ಊಟ ಮಾಡುತ್ತಿದ್ದ ಸಂದರ್ಭ ಸೀರೆಗೆ ಬೆಂಕಿ ಹೊತ್ತಿಕೊಂಡಿತ್ತು. ತೀವ್ರವಾದ ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೌಸ್ ಟ್ರ್ಯಾಪ್ ಹಿಡಿದು ಜನಜಾಗೃತಿಗೆ ಮಂದಾದ ಅಭ್ಯರ್ಥಿ

    ಮಹಿಳೆ ತಟ್ಟೆಗೆ ಆಹಾರ ಬಡಿಸಿಕೊಳ್ಳುತ್ತಿದ್ದಾಗ ತಮ್ಮ ಸಿಂಥೆಟಿಕ್ ಸೀರೆಗೆ ಅಲ್ಲೇ ಇದ್ದ ಒಲೆಯ ಬೆಂಕಿ ತಗುಲಿದೆ. ಹೊಟೇಲ್ ಸಿಬ್ಬಂದಿ ಹಾಗೂ ಸಮಾರಂಭದಲ್ಲಿ ನೆರೆದಿದ್ದವರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಆಗಾಗಲೇ ಮಹಿಳೆಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಹೀಗಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಮಾಸ್ಕೋ: ನಟಿ ತಾಪ್ಸಿ ಪನ್ನು ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ತಾಪ್ಸಿ ಪನ್ನು ತಮ್ಮತಂಗಿ ಶಗುನ್ ಪನ್ನು ಜೊತೆಗೆ ವಿದೇಶದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಅವರ ಪ್ರವಾಸದ ಚಿತ್ರಗಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ತಾಪ್ಸಿ ಸೀರೆಯನ್ನು ತೊಟ್ಟಿದ್ದಾರೆ. ಸೀರೆಯುಟ್ಟು ಶೂ ತೊಟ್ಟು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ತಾಪ್ಸಿ ಹಂಚಿಕೊಂಡಿದ್ದಾರೆ. ನೆಟ್ಟಗರು ಸೀರೆಯಲ್ಲಿ ತಾಪ್ಸಿ ವಿದೇಶ ಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  SSLC ಪರೀಕ್ಷೆ ನಡೆಸಬಾರದು: ವಾಟಳ್ ನಾಗರಾಜ್

     

    View this post on Instagram

     

    A post shared by Taapsee Pannu (@taapsee)

    ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಾಪ್ಸಿ ಸದ್ಯ ಕೊಂಚ ಬ್ರೇಕ್ ಪಡೆದಿದ್ದು ವಿದೇಶ ಪ್ರವಾಸದಲ್ಲಿದ್ದಾರೆ. ತನ್ನ ತಂಗಿಯ ಜೊತೆಗೆ ರಷ್ಯಾದ ಮಾಸ್ಕೋನಲ್ಲಿ ಸುತ್ತಾಡುತ್ತಿದ್ದಾರೆ. ವಿದೇಶ ಪ್ರವಾಸದಲ್ಲೂ ತಾಪ್ಸಿ ಭಾರತೀಯ ಸಂಸ್ಕೃತಿಯ ಉಡುಪನ್ನು ತೊಟ್ಟಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ಬಾಯ್‍ಫ್ರೆಂಡ್ ಮಥಿಯಾಸ್ ಜತೆ ಲವ್ ರಿಲೇಶನ್ ಶಿಪ್‍ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ಏನಿದ್ದರೂ ತನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ತಾಪ್ಸಿ ಹೇಳಿಕೊಂಡಿದ್ದರು.

    ನಟಿ ತಾಪ್ಸಿ ಪನ್ನು ಸದಾ ಒಂದಿಲ್ಲೊಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಈ ಬಾರಿ ಅವರು ಹಸೀನ್ ದಿಲ್‍ರುಬಾ ಚಿತ್ರಕ್ಕಾಗಿ ಹಾಟ್ ಅವತಾರ ತಾಳಿದ್ದಾರೆ. ಇತ್ತಿಚೇಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

  • ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    – ನಿಗೂಢ ಹೆಜ್ಜೆ ಇಡುತ್ತಿದೆ ಕೊರೊನಾ
    – ಹೆಚ್ಚಾಗುತ್ತಿದೆ ವಿಷಮ ಶೀತ ಜ್ವರ, ಸಾರಿ ಪ್ರಕರಣ
    – ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು ಬೆಂಗಳೂರಿನಲ್ಲಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಈಗ ನಿಗೂಢ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೆ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕದಿಂದ ಕೊರೊನಾ ಬರುತ್ತಿತ್ತು. ಆದರೆ ಈಗ ಯಾವುದೇ ಸಂಪರ್ಕ ಇಲ್ಲದೇ ಕೊರೋನಾ ಗುಪ್ತಗಾಮಿನಿಯಂತೆ ದೇಹ ಸೇರುತ್ತಿದೆ.

    ಲಾಕ್‌ಡೌನ್‌ ಸಮಯದಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಅನ್‌ಲಾಕ್‌ ಆಗುತ್ತಿದ್ದಂತೆ ಜನರ ಓಡಾಟದ ಜಾಸ್ತಿಯಾಗಿದ್ದು, ಅಂತರಾಜ್ಯ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಈಗ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕೊರೊನಾ ಬಗ್ಗೆ ಜನರಲ್ಲಿ ಸ್ವಲ್ಪವಾದರೂ ಭಯವಿತ್ತು. ಆದರೆ ಈಗ ಭಯ ಇಲ್ಲದಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧನವಾಗಿ ಹೆಚ್ಚಾಗುತ್ತಿದೆ.

    ಶೀತ, ಕೆಮ್ಮು, ಜ್ವರ ಬಂದಿದೆ ಎಂದು ಸುಮ್ಮನಾದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. 5 ದಿನಗಳಲ್ಲಿ ಬೆಂಗಳೂರಿನಲ್ಲಿ ವಿಷಮ ಶೀತ ಜ್ವರ(Influenza Like Illness -ಐಎಲ್‌ಐ) ಉಸಿರಾಟದ(ಸಾರಿ) ಪ್ರಕರಣ ಹೆಚ್ಚಾಗಿದೆ.

    ಯಾವ ದಿನ ಎಷ್ಟು?
    ಜೂನ್‌ 9 ರಂದು ಒಟ್ಟು 29 ಪ್ರಕರಣಗಳು ಬಂದಿದ್ದು ಇದರಲ್ಲಿ 2 ಐಎಲ್‌ಐ, ಜೂನ್‌ 10 ರಂದು ಬಂದ 42 ಪ್ರಕರಣಗಳಲ್ಲಿ 21 ಐಎಲ್‌ಐ ಆಗಿತ್ತು. ಜೂನ್‌ 11ರಂದು ಒಟ್ಟು 17 ಪ್ರಕರಣಗಳು ಬಂದಿದ್ದು 6 ಐಎಲ್‌ಐ ಆಗಿದ್ರೆ 1 ಸಾರಿ ಆಗಿತ್ತು. ಜೂನ್‌ 12 ರಂದು ಬಂದ 36 ರಲ್ಲಿ 11 ಮಂದಿಗೆ ಐಎಲ್‌ಐ, 5 ಮಂದಿಗೆ ಸಾರಿ ಬಂದಿತ್ತು. ಜೂನ್‌ 13 ರಂದು ಒಟ್ಟು 31 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 12 ಮಂದಿಗೆ ವಿಷಮಶೀತ ಜ್ವರ ಇದ್ದರೆ ಇಬ್ಬರಿಗೆ ಉಸಿರಾಟ ತೊಂದರೆಯಿದೆ.

    6 ದಿನಕ್ಕೆ 19 ಬಲಿ:
    ಬೆಂಗಳೂರಿನಲ್ಲಿ ಬರೋಬ್ಬರಿ 6 ದಿನಕ್ಕೆ 19 ಜನ ಮೃತಪಟ್ಟಿದ್ದಾರೆ. ಜೂ.8 ರಿಂದ 13ನೇ ತಾರೀಖಿನವರೆಗೆ ಬಲಿಯಾದ 19 ಮಂದಿ ಸಾರಿ, ಐಎಲ್‌ಐ ಕಾರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯ ಸಂಬಂಧಿ ಖಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಾ ಇದ್ದವರಿಗೆ ಐಎಲ್‌ಐ, ಸಾರಿ ಹೆಚ್ಚು ಬರುತ್ತಿರುವುದು ದೊಡ್ಡ ತಲೆನೋವಾಗಿದೆ.

    ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇವರಿಗೆ ಹೇಗೋ ಕೊರೊನಾ ವೈರಸ್‌ ತಗುಲಿ ಮತ್ತಷ್ಟು ಸಮಸ್ಯೆ ತಂದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಸದ್ಯ ಈಗ ಬೆಂಗಳೂರಿನಲ್ಲಿ 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ ಒಟ್ಟು 648 ಮಂದಿಗೆ ಸೋಂಕು ಬಂದಿದ್ದು, ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬೆಂಗಳೂರಿನಲ್ಲೇ  ಬಲಿಯಾಗಿದ್ದಾರೆ. 648ರ ಪೈಕಿ 319 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಬಿಡುಗಡೆಯಾಗಿದ್ದಾರೆ.

  • ಬೈದಿದ್ದಕ್ಕೆ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಮಗ!

    ಬೈದಿದ್ದಕ್ಕೆ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಮಗ!

    ಮುಂಬೈ: ಮನೆಕೆಲಸಕ್ಕೆ ಸಹಾಯ ಮಾಡಲಿಲ್ಲವೆಂದು ತಾಯಿ ಬೈದರು ಅಂತ ಮನನೊಂದು 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ನಗರದ ಅಂಬೋಲಿ ಮನೆಯಲ್ಲಿ ನೀಲೇಶ್ ಗುಪ್ತಾ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈಗಾಗಲೇ ನಿಲೇಶ್ ಗೆ ಪರೀಕ್ಷೆ ಮುಗಿದಿದ್ದು, ಹೀಗಾಗಿ ರಜೆಯಲ್ಲಿ ಮಜಾ ಮಾಡುತ್ತಿದ್ದನು. ಅಲ್ಲದೇ ಈತ ನಿಧಾನವಾಗಿ ತನ್ನ ಕೆಲಸಗಳನ್ನು ಮಾಡುತ್ತಿದ್ದನು. ಇದರಿಂದ ತಾಯಿ ಆತನ ವಿರುದ್ಧ ಸಿಟ್ಟುಗೊಂಡಿದ್ದರು. ಆತ ತಾಯಿಯೊಂದಿಗೆ ಮನೆ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಗುಪ್ತಾನಿಗೆ ಬೈಯುತ್ತಿದ್ದರು.

    ಸೋಮವಾರ ಮನೆಕೆಲಸ ಮಾಡು ಎಂದು ತಾಯಿ ಹೇಳಿದ್ದರೂ ಆತ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ. ಇದೇ ವಿಚಾರವಾಗಿ ಅಂದು ಸಂಜೆಯೂ ತಾಯಿ ಆತನಿಗೆ ಬೈದಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾನೆ.

    ತಾಯಿ ಮತ್ತು ಸಹೋದರಿ ಹೊರಹೋಗುವುದನ್ನೇ ಕಾಯುತ್ತಿದ್ದ ಆತ ಕೆಲಸ ನಿಮಿತ್ತ ಮನೆಯಿಂದ ಹೊರಗಡೆ ಇವರಿಬ್ಬರು ತೆರಳುತ್ತಿದ್ದಂತೆಯೇ ಅಂದ್ರೆ ರಾತ್ರಿ 9.30ರ ಸುಮಾರಿಗೆ ತನ್ನ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

    ತಾಯಿ ಹಾಗೂ ಸಹೋದರಿ ಮನೆಗೆ ಮತ್ತೆ ಹಿಂದಿರುಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಹಲವು ಬಾರಿ ಬಾಗಿಲು ಬಡಿದರೂ ಒಳಗಿದ್ದ ಗುಪ್ತಾ ಮಾತ್ರ ಬಾಗಿಲು ತೆರೆಯಲಿಲ್ಲ. ಇದರಿಂದ ಗಾಬರಿಗೊಳಗಾದ ಅವರು ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಬಾಗಿಲು ಒಡೆದು ಒಳಗೆ ಹೋದ್ರೆ ಗುಪ್ತಾ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನ್ನು ಕುಣಿಕೆಯಿಂದ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯ ಗುಪ್ತಾ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನೆಂದು ತಿಳಿಯಲು ಆತನ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಏನಾದ್ರೂ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೊಳಗಾಗಿದ್ದಾನೋ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಆತನೇ ಆತ್ಮಹತ್ಯೆಗೆ ಶರಣಾಗಿರುವುದು ನಿಜವೆಂದು ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಎಸ್‍ಪಿ ಭರತ್ ಗಾಯಕ್‍ವಾಡ್ ಸ್ಪಷ್ಟನೆ ನೀಡಿದ್ದಾರೆ.

  • ಶಾಕಿಂಗ್ ವಿಡಿಯೋ: ಹುಟ್ಟುಹಬ್ಬದ ದಿನವೇ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದ ಸೆಕ್ಯೂರಿಟಿ ಮ್ಯಾನೇಜರ್!

    ಶಾಕಿಂಗ್ ವಿಡಿಯೋ: ಹುಟ್ಟುಹಬ್ಬದ ದಿನವೇ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದ ಸೆಕ್ಯೂರಿಟಿ ಮ್ಯಾನೇಜರ್!

    ನವದೆಹಲಿ: ನಗರದ ಪಂಚತಾರಾ ಹೋಟೇಲಿನ ಸೆಕ್ಯೂರಿಟಿ ಮಾನೇಜರೊಬ್ಬ ತನ್ನ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ಬೆಳೆಕಿಗೆ ಬಂದಿದೆ.

    ಈ ಘಟನೆ ಜುಲೈ 29ರಂದು ದೆಹಲಿ ಏರ್‍ಪೋರ್ಟ್ ಬಳಿಯ ಪಂಚತಾರಾ ಹೊಟೇಲಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    33 ವರ್ಷದ ಮಹಿಳಾ ಸಹೋದ್ಯೋಗಿಯ ಹುಟ್ಟುಹಬ್ಬದ ದಿನವೇ ಈ ಘಟನೆ ನಡೆದಿದ್ದು, ಮಹಿಳೆಗೆ ಶಾಕ್ ನೀಡಿದೆ. ಇದೀಗ ಮಹಿಳೆ ಈ ದೃಶ್ಯವನ್ನು ಶೇರ್ ಮಾಡಿದ್ದು, ಬಳಿಕ ಸೆಕ್ಯೂರಿಟಿ ಮ್ಯಾನೇಜರ್ ನನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ.

    ಜುಲೈ 29ರಂದು ಹುಟ್ಟು ಹಬ್ಬವಾಗಿತ್ತು. ಸೆಕ್ಯೂರಿಟಿ ಮ್ಯಾನೇಜರ್ ಪವನ್ ದಾಹಿಯಾ  ತನ್ನ ಕ್ಯಾಬಿನ್ ಗೆ ಕರೆದ. ಬಳಿಕ ಆತನ ಕ್ರೆಡಿಟ್ ಕಾರ್ಡ್ ಹೊರ ತೆಗೆದು ನಿನಗೇನು ಬೇಕು ಅಂತ ಕೇಳಿದ್ದನು. ಅಲ್ಲದೇ ತನ್ನ ಎದುರುಗಡೆ ಕುಳಿತುಕೊಳ್ಳುವಂತೆ ಹೇಳಿದ್ದನು. ಆದ್ರೆ ಇದನ್ನು ನಾನು ನಿರಾಕರಿಸಿದೆ. ಈ ವೇಳೆ ಆತ ತನ್ನ ಸೀರೆ ಎಳೆದು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ ಅಲ್ಲೇ ಇದ್ದ ಸಹೋದ್ಯೋಗಿಯನ್ನು ಹೊರ ಹೋಗುವಂತೆ ಹೇಳಿದ್ದಾನೆ. ಇಷ್ಟು ಮಾತ್ರವಲ್ಲದೇ ಒಂದು ರಾತ್ರಿ ಹೊಟೇಲಿನಲ್ಲಿ ತನ್ನ ಜೊತೆ ಕಳೆಯುವಂತೆ ಕೂಡ ಹೇಳಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

    ವಿಡಿಯೋದಲ್ಲಿ ಆರೋಪಿ ಸೀರೆ ಎಳೆಯುತ್ತಿರುವಾಗ ಮಹಿಳೆ ತನ್ನ ಸೀರೆ ಬಿಚ್ಚದಂತೆ ಗಟ್ಟಿಯಾಗಿ ಹಿಡಿದುಕೊಳ್ಳುವುದನ್ನು ಕಾಣಬಹುದು. ಘಟನೆ ನಡೆದ ರಾತ್ರಿಯೇ ಮಹಿಳೆ ಹೊಟೇಲಿನ ಹೆಚ್ ಆರ್ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಿದ್ದಾರೆ. ಆದ್ರೆ ಹೆಚ್ ಆರ್ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ ಆಕೆಯ ಪತಿಯ ಸೂಚನೆಯಂತೆ ಆಗಸ್ಟ್ 1ರಂದು ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.