Tag: sarees

  • ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ಬೆಂಗಳೂರು: ಹಬ್ಬಗಳೆಂದರೆ ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ. ಈಗ ದೀಪಾವಳಿ (Deepawali) ಹಬ್ಬ ಬರುತ್ತಿದೆ. ಹಬ್ಬದ ದಿನ ಮನೆಯನ್ನಷ್ಟೇ ಅಲ್ಲ ತಾವೂ ಸಿಂಗಾರ ಮಾಡಿಕೊಂಡು ಮಿಂಚುವುದೆಂದರೆ ಖುಷಿ. ಈಗಿನ ಮಹಿಳೆಯರು ಹೊಸ ಟ್ರೆಂಡ್‌ನ ಸಾಂಪ್ರದಾಯಿಕ ದಿರಿಸುಗಳನ್ನು ಧರಿಸಲು ಬಯಸುತ್ತಾರೆ. ಅಂತಹವರಿಗಾಗಿ ‘ಅವಂತ್ರ ಬೈ ಟ್ರೆಂಡ್ಸ್’ (AVANTRA by TRENDS) ಸ್ಟೋರ್‌ ಬಗೆ ಬಗೆಯ ಆಕರ್ಷಕ ಸೀರೆಗಳ (Sarees) ಸಂಗ್ರಹವನ್ನು ಹೊಂದಿದೆ.

    ಮಹಿಳೆಯರಿಗೆ ವಿಶಿಷ್ಟ ಅನುಭವ ನೀಡುವಂಥ ಸಾಂಪ್ರದಾಯಿಕ ದಿರಿಸುಗಳ ಡೆಸ್ಟಿನೇಶನ್ ಸ್ಟೋರ್ ಆದ ‘ಅವಂತ್ರ ಬೈ ಟ್ರೆಂಡ್ಸ್’ ಇದೀಗ ಬೆಳಕಿನ ಹಬ್ಬ ದೀಪಾವಳಿಯ ಸಂಗ್ರಹವನ್ನು ಆರಂಭ ಮಾಡಿದೆ. ಈ ಹಬ್ಬದ ಸಂಗ್ರಹದಲ್ಲಿ ಕಾಂಜೀವರಂ, ಪಟೋಲ ರೇಷ್ಮೆಗಳು, ಸಂಬಲ್‌ಪುರಿ, ಕಲಂಕರಿ, ಮೈಸೂರು ರೇಷ್ಮೆ, ಜಮದಾನಿ, ಗದ್ವಾಲ್ ಬನಾರಸಿ ಹೀಗೆ ದೇಶದ ವಿವಿಧ ಭಾಗಗಳಿಂದ ಒಳಗೊಂಡಿರುವ ಕರಕುಶಲ ವಸ್ತುಗಳು ಇವೆ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಟ್ರೆಂಡ್ಸ್‌ ಪ್ರಕಾರ, ಈ ಹಬ್ಬದ ಋತುವಿನಲ್ಲಿ ಅವಂತ್ರದಿಂದ ಈ ಸುಂದರವಾದ ಸೀರೆಗಳೊಂದಿಗೆ ವಾರ್‌ಡ್ರೋಬ್ ಸಂಗ್ರಹವನ್ನು ವೈಶಿಷ್ಟ್ಯ ಹಾಗೂ ವಿನೂತನಗೊಳಿಸಬಹುದು. ಹಬ್ಬದ ಉಡುಗೆ ಖರೀದಿಸಲು ನೀವು ಬಯಸಿದ್ದರೆ ಅವಂತ್ರ ಬೈ ಟ್ರೆಂಡ್ಸ್‌ ಅಂಗಡಿಗೆ ಭೇಟಿ ನೀಡಬಹುದು. ಟ್ರೆಂಡ್ಸ್‌ ಗ್ರಾಹಕ ಸ್ನೇಹಿಯಾಗಿದ್ದು, ಖರೀದಿಯ ಮೇಲೆ ಅದ್ಭುತ ಉಡುಗೊರೆಗಳು ಹಾಗೂ ಕೊಡುಗೆಗಳನ್ನೂ ಗ್ರಾಹಕರು ಪಡೆಯಬಹುದಾಗಿದೆ.

    ಎಲ್ಲೆಲ್ಲಿ ಮಳಿಗೆಗಳು?
    ಬೆಂಗಳೂರು, ಬೆಳಗಾವಿ, ದಾವಣಗೆರೆ, ಚೆನ್ನೈ, ಹೈದರಾಬಾದ್, ಗುಂಟೂರು, ನೆಲ್ಲೂರು, ತಿರುಪತಿ, ವಿಜಯವಾಡ, ಪ್ರೊದತ್ತೂರು, ದುರ್ಗಾಪುರ, ಕಾಯಂಕುಲಂ, ಕೊಚ್ಚಿ ಮತ್ತು ವೆಲ್ಲೂರುಗಳಲ್ಲಿ ಮಳಿಗೆಗಳಿವೆ. ‘ಅವಂತ್ರ ಬೈ ಟ್ರೆಂಡ್ಸ್’ 25ರಿಂದ 40 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಿಗೆ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಸೀರೆಗಳ ಸಂಗ್ರಹದ ಕೇಂದ್ರವಾಗಿದೆ. ಯಾರು ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುತ್ತಾರೋ ಅಂಥವರಿಗಾಗಿಯೇ ಅವಂತ್ರ ಬೈ ಟ್ರೆಂಡ್ಸ್‌ ರೂಪುಗೊಂಡಿದೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ವಿಶೇಷತೆ ಏನು?
    ವೈವಿಧ್ಯದಿಂದ ಕೂಡಿದ ಜವಳಿ ಕರಕುಶಲ ಮತ್ತು ಅತ್ಯುತ್ತಮವಾದ ಸಾಂಪ್ರದಾಯಿಕ-ದಿರಿಸಿನ ಬ್ರ್ಯಾಂಡ್‌ಗಳ ವರ್ಣರಂಜಿತ ಪುಷ್ಪಗುಚ್ಛಕ್ಕೆ ನೆಲೆಯಾಗಿದೆ. ಸೀರೆಗಳು ಅತ್ಯುತ್ತಮವಾದ ಫ್ಯಾಶನ್, ಗುಣಮಟ್ಟವನ್ನು ಹೊಂದಿದ್ದು, ಬೆಲೆಯಲ್ಲೂ ಗ್ರಾಹಕ ಸ್ನೇಹಿಯಾಗಿದೆ. ‘ಅವಂತ್ರ ಬೈ ಟ್ರೆಂಡ್ಸ್’ನಲ್ಲಿ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆಗಳು ದೊರೆಯುತ್ತವೆ. ದೇಶದ ನಾನಾ ಭೌಗೋಳಿಕ ಭಾಗಗಳಲ್ಲಿ ಧರಿಸುವ ವಿವಿಧ ಹಾಗೂ ವೈಶಿಷ್ಟ್ಯಪೂರ್ಣ ಸೀರೆಗಳು, ಬ್ಲೌಸ್‌ಗಳು, ಕುರ್ತಾಗಳು, ಆಭರಣಗಳು, ಪಾದರಕ್ಷೆಗಳು, ಪರಿಕರಗಳೂ ದೊರೆಯುತ್ತವೆ. ನೀವು ಮಳಿಗೆಗೆ ಪ್ರವೇಶಿಸಿದರೆ ವಿಶಿಷ್ಟ ಬಗೆಯ ಉಡುಗೆ, ತೊಡುಗೆಗಳನ್ನು ನೋಡಬಹುದು. ಅಷ್ಟೇ ಅಲ್ಲ ಅನುಕೂಲಕರ ಇನ್-ಸ್ಟೋರ್ ಟೈಲರಿಂಗ್ ಸೇವೆಗಳನ್ನು ಒಳಗೊಂಡಿರುವ ಪೂರಕ ಉತ್ಪನ್ನ ವಿಭಾಗಗಳೊಂದಿಗೆ ಎಲ್ಲವೂ ಒಂದೇ ಕಡೆ ದೊರೆಯುವಂಥ ತಾಣ ಇದಾಗಿದೆ.

    ದೇಶದಲ್ಲಿ ಸೀರೆ ಶಾಪಿಂಗ್ ಮಾಡುವವರಿಗೆ ವಿಶಿಷ್ಟ ಅನುಭವ ನೀಡುವ ಧ್ಯೇಯದೊಂದಿಗೆ ನಿರ್ಮಿಸಲಾದ ಮಳಿಗೆಯು ರಿಲಯನ್ಸ್ ರೀಟೇಲ್ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಹೊಂದಿದೆ. ಕೈಗೆಟುಕುವ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು ಇಲ್ಲಿ ಸಿಗುತ್ತವೆ. ಗ್ರಾಹಕರು ದೇಶಾದ್ಯಂತ ಸಿಗುವ ವಿಶಿಷ್ಟ ಮಾದರಿಯ ಉಡುಗೆ, ತೊಡುಗೆಗಳನ್ನು ಒಂದೇ ಮಳಿಗೆಯಲ್ಲಿ ನೋಡಬಹುದು. ಸೀರೆಗಳು, ಲೆಹೆಂಗಾಗಳು, ಕುರ್ತಾಗಳು, ಆಭರಣಗಳು, ಪಾದರಕ್ಷೆ ಹಾಗೂ ಇತರೆ ಪರಿಕರಗಳು ಸಹ ಸಿಗುತ್ತವೆ. ಇದನ್ನೂ ಓದಿ: ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಅವಂತ್ರ ಬೈ ಟ್ರೆಂಡ್ಸ್‌ ಆಧುನಿಕ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ಜೊತೆಗೆ ಗ್ರಾಹಕಸ್ನೇಹಿ ಸೀರೆಗಳು, ಆಭರಣಗಳು ದೊರೆಯುತ್ತವೆ. ಸೀರೆಗಳ ಬೆಲೆಯು 399 ರೂ. ರಿಂದ ಹಿಡಿದು 39,999 ರೂ. ತನಕ ಇದೆ. ದೈನಂದಿನ ಉಡುಗೆ ಮತ್ತು ವಿಶೇಷ ಸಂದರ್ಭಗಳಲ್ಲಿ ಧರಿಸಬಹುದಾದ ಉಡುಪುಗಳು ಸಹ ಲಭ್ಯವಿವೆ. ಸೀರೆ ವಿಭಾಗಗಳಲ್ಲಿ ರೇಷ್ಮೆ ಸೀರೆಗಳು, ಕರಕುಶಲ ಸೀರೆಗಳು, ಕಾಟನ್ ಸೀರೆಗಳು, ಫ್ಯಾನ್ಸಿ ಸೀರೆಗಳು ಸೇರಿದಂತೆ ಅನೇಕ ಬಗೆಯ ಸೀರೆಗಳು ಸಿಗುತ್ತವೆ. ಸೀರೆಯಲ್ಲದ ವಿಭಾಗದಲ್ಲಿ ಆಫರ್ ಬೆಲೆಯಲ್ಲಿ 99 ರೂ. ರಿಂದ ಹಿಡಿದು 1,999 ರೂ. ತನಕ ವಸ್ತುಗಳು ಇವೆ.

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷ ಆಗುತ್ತಿದೆ. ಕರ್ನಾಟಕದ ಖಜಾನೆಯಲ್ಲಿ ಈಗಲೂ ಸೀರೆ, ಚಪ್ಪಲಿ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳಿವೆ. ಈಗ ಜಯಲಲಿತಾ ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಡಬೇಕು ಅಂತಾ ಕರ್ನಾಟಕದ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ದಿವಂಗತ ಜಯಲಲಿತಾ ಅವರ ಸೀರೆ, ಚಪ್ಪಲಿ ಎಷ್ಟು ಇತ್ತು? ಹರಾಜಿಗೆ ಇಟ್ಟರೆ ಏನು ಅನುಕೂಲ ಆಗುತ್ತದೆ ಈ ಎಲ್ಲದರ ಮಾಹಿತಿ ಈ ಕೆಳಗಿನಂತಿದೆ.

    karnataka highcourt

    ತಮಿಳುನಾಡಿನ ಮಾಜಿ ಸಿಎಂ ದಿವಂಗತೆ ಜಯಲಲಿತಾ ಮೃತರಾಗಿ ಇಂದಿಗೆ ಆರು ವರ್ಷ. ಮೃತರಾದ ಆರು ವರ್ಷದ ಬಳಿಕ ಅಕ್ರಮ ಆಸ್ತಿ ಗಳಿಕೆಯಲ್ಲಿ ಅವರಿಂದ ವಶಪಡಿಸಿಕೊಂಡಿದ್ದ ವಸ್ತುಗಳು ಈಗ ಚರ್ಚೆಗೆ ಬಂದಿವೆ. ಜಯಲಲಿತಾ ಅವರು 1991-96ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತ ಆರೋಪಿಸಿ ವಕೀಲ ಸುಬ್ರಮಣಿಯಮ್ ಸ್ವಾಮಿ ದೂರು ನೀಡಿದ್ದರು. ಸಿಬಿಐ 1997ರಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಆಕ್ರಮ ಆಸ್ತಿಯನ್ನು ಜಪ್ತಿ ಮಾಡಲಾಯಿತು. ರಾಷ್ಟ್ರೀಯ ಸಂಪತ್ತು ಅಂತಾ ಘೋಷಣೆ ಮಾಡಿ ಕರ್ನಾಟಕದ ಖಜಾನೆಯಲ್ಲಿ ಇಡಲಾಯಿತು. 26 ವರ್ಷಗಳಿಂದ ಅವರ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಾ ಇದ್ದು ನಿಷ್ಪ್ರಯೋಜಕ ಆಗುವುದು ಬೇಡ ಹರಾಜಿಗೆ ಇಟ್ಟರೆ ಅಭಿಮಾನಿಗಳು ತೆಗೆದುಕೊಳ್ಳುತ್ತಾರೆ. ಹರಾಜಿಗೆ ಇಡಲು ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಕೀಲ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!

    ವಿಧಾನಸೌಧದ ಖಜಾನೆಯಲ್ಲಿ ಜಯಲಲಿತಾರ 11,344 ಸೀರೆ, 750 ಜೊತೆ ಚಪ್ಪಲಿ ಮತ್ತು ೨೫೦ ಶಾಲುಗಳು 26 ವರ್ಷಗಳಿಂದ ಕೊಳೆಯುತ್ತಿವೆ. ಇದನ್ನು ಹಾಗೇ ಬಿಟ್ಟರೆ ನ್ಯಾಷನಲ್ ವ್ಯರ್ಥ ಆಗುತ್ತದೆ. ಇದನ್ನು ಹರಾಜಿಗೆ ಇಟ್ಟರೆ ಅವರ ಅಭಿಮಾನಿಗಳು ಒಂದು ಸಾವಿರ ಅಥವಾ ಹತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಏಕೆಂದರೆ ಜಯಲಲಿತಾ ಅವರು ಬದುಕಿಲ್ಲ. ಕೇಸ್ ಇದ್ದರೂ ಕೂಡ ಅವರಿಲ್ಲದ ಕಾರಣ ಏನು ಆಗುವುದಿಲ್ಲ. ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಟ್ಟರೆ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ನಿರ್ದೇಶನಕ್ಕೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದೇನೆ. ಆದೇಶ ನೀಡಿದರೆ ಅನುಕೂಲ ಆಗುತ್ತದೆ ಎಂದು ವಕೀಲ ನರಸಿಂಹಮೂರ್ತಿ ಹೇಳಿದ್ದಾರೆ.

    ಅಕ್ರಮ ಆಸ್ತಿ ಕೇಸ್ ವಿಚಾರಣೆಯನ್ನು ಹೊರ ರಾಜ್ಯದಲ್ಲಿ ಮಾಡಿಸಬೇಕು ಅಂತಾ ದೂರುದಾರರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆಗಾಗಿ ಕರ್ನಾಟಕ ರಾಜ್ಯದ ಖಜಾನೆಯಲ್ಲಿ ವಸ್ತುಗಳನ್ನು ಇಟ್ಟು ವಿಚಾರಣೆ ಮಾಡುತ್ತಿದ್ದರು. ವಿಚಾರಣೆ ಹಂತದಲ್ಲಿ ಇರುವಾಗಲೇ ಮೃತರಾದ ಕಾರಣ ವಸ್ತುಗಳನ್ನ ತಮಿಳುನಾಡು ಅಥವಾ ಕರ್ನಾಟಕ ಯಾವ ರಾಜ್ಯದಲ್ಲಾದರೂ ಹರಾಜಿಗೆ ಇಡಲು ಅವಕಾಶ ಮಾಡಿಕೊಡಬೇಕು. ಇದರಿಂದ ಅನುಕೂಲ ಇದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಸೆಲ್ ಕೊರತೆ- ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ: BMTC ಎಂಡಿ ಸ್ಪಷ್ಟನೆ

     ಒಟ್ಟಾರೆ ಜಯಲಲಿತಾ ಮೃತಪಟ್ಟಿದ್ದಾರೆ. 26 ವರ್ಷಗಳಿಂದ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಿವೆ. ನಿಷ್ಪ್ರಯೋಜಕ ಆಗದೇ ಪ್ರಯೋಜನ ಆಗಲಿ ಅಂತಾ ವಸ್ತುಗಳ ಹರಾಜಿಗೆ ವಕೀಲರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ. ಈ ವಕೀಲರ ಮನವಿಯನ್ನು ಪುರಸ್ಕರಿಸಿ ಹರಾಜಿಗೆ ನಿರ್ದೇಶನ ನೀಡುತ್ತಾರಾ ಅಥವಾ ತಟಸ್ಥ ಕಾಯ್ದುಕೊಳ್ಳುತ್ತಾರಾ, ಕಾದು ನೋಡಬೇಕಿದೆ.

    Live Tv

  • ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಸೀರೆಯಷ್ಟೇ ಬ್ಲೌಸ್ ಕೂಡ ಬಹಳ ಮುಖ್ಯ. ಮಹಿಳೆಯರು ಸೀರೆಗೆ ನೀಡುವಷ್ಟೇ ಪ್ರಾಮುಖ್ಯತೆ ಬ್ಲೌಸ್‍ಗೂ ಕೂಡ ನೀಡುತ್ತಾರೆ. ಸೀರೆಯ ಅಂದವನ್ನು ಹೆಚ್ಚಿಸುವುದೇ ಬ್ಲೌಸ್. ಇಂತಹ ಬ್ಲೌಸ್‍ಗಳಲ್ಲಿ ಸಾವಿರಾರು ವೆರೈಟಿ ಡಿಸೈನ್‍ಗಳಿಗೆ. ಹಾಗಾಗಿ ಬ್ಲೌಸ್ ಡಿಸೈನ್ ಆಯ್ಕೆ ಮಾಡುವ ವೇಳೆ ಬಹಳ ಜಾಗೃತರಾಗಿರಬೇಕು. ಅದರಲ್ಲಿಯೂ ಬ್ಲೌಸ್ ಸ್ಲೀವ್ಸ್ ಸ್ಲೀವ್‍ಲೆಸ್ ಡಿಸೈನ್ ನೋಡುವವರನ್ನೂ ಬೆರಗಾಗಿಸುವಂತೆ ಮಾಡುತ್ತದೆ. ಒಂದು ಬ್ಲೌಸ್‍ಗೆ ಕಂಪ್ಲೀಟ್ ಲುಕ್ ನೀಡುವುದೇ ಸ್ಲೀವ್ಸ್. ಆದರೆ ಯಾವ ಸೀರೆಗೆ ಯಾವ ರೀತಿಯ ಸ್ಲೀವ್ಸ್ ಸ್ಯೂಟ್ ಆಗುತ್ತದೆ ಎಂಬುವುದರ ಬಗ್ಗೆ ನಿಮಗೆ ತಿಳಿಯದಿದ್ದರೆ, ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ಓದಿ.

    ಸಿಂಪಲ್ ಬ್ಲೌಸ್ ಸ್ಲೀವ್ಸ್ ಡಿಸೈನ್
    ಕೇವಲ ಲೆಹೆಂಗಾಗಳಿಗೆ ಮಾತ್ರ ಸಿಂಪಲ್ ಸ್ಲೀವ್ಸ್ ಬ್ಲೌಸ್ ಸ್ಯೂಟ್ ಆಗುತ್ತದೆ ಎಂದು ಎಷ್ಟೋ ಮಂದಿ ಹೇಳುತ್ತಾರೆ. ಆದರೆ ಲೆಹೆಂಗಾಗೇ ನೀಡುವಷ್ಟೇ ಲುಕ್ ಸೀರೆಗೂ ಕೂಡ ಸಿಂಪಲ್ ಬ್ಲೌಸ್ ನೀಡುತ್ತದೆ. ಈ ಮೇಲಿನ ಫೋಟೋದಲ್ಲಿ ಸೀರೆಗೆ ಸರಿಹೊಂದುವಂತೆ ಬ್ಲೌಸ್‍ ಅನ್ನು ಸಿಂಪಲ್ ಆಗಿ ಹೋಲಿಸಿದ್ದರೂ, ಎಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ನೋಡಬಹುದು.

    ಪಫ್ ಬ್ಲೌಸ್ ಸ್ಲೀವ್ಸ್ ಡಿಸೈನ್
    ಹೊಸ ಟ್ರೆಂಡ್‍ಗಳಲ್ಲಿ ಪಫ್ ಸ್ಲೀವ್ಸ್ ಬ್ಲೌಸ್ ಕೂಡ ಒಂದು. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಈ ರೀತಿಯ ಬ್ಲೌಸ್‍ಗಳು ಔಪಚಾರಿಕ ಹಾಗೂ ಮಿನಿ ಪಾರ್ಟಿಗಳಿಗೆ ಹೆಚ್ಚಾಗಿ ಸ್ಯೂಟ್ ಆಗುತ್ತದೆ. ಈ ಬ್ಲೌಸ್ ತೋಳು ಕೊಂಚ ಫ್ರೀ ಆಗಿರುವುದರಿಂದ ರಕ್ತಪರಿಚಲನೆ ಸರಾಗವಾಗಿ ನಡೆಯಲು ಸಹಾಯಕವಾಗುತ್ತದೆ. ನೀವು ಅದ್ಭುತವಾಗಿ ಕಾಣಲು ಇಚ್ಛಿಸಿದರೆ ಈ ಸ್ಲೀವ್ಸ್ ಡಿಸೈನರ್ ಬ್ಲೌಸ್ ಧರಿಸಿ.

    3/4 ಬ್ಲೌಸ್ ಸ್ಲೀವ್ಸ್ ಡಿಸೈನ್
    ಫೇಮಸ್ ಮತ್ತು ಸ್ಟೈಲಿಶ್ ಲುಕ್ ನೀಡುವ 3/4 ಬ್ಲೌಸ್ ಅಂದರೆ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು. ಈ ರೀತಿ ಬ್ಲೌಸ್‍ಗಳು ಫಾರ್ಮಲ್ ಹಾಗೂ ಇನ್‍ಫಾರ್ಮಲ್ ಆಗಿ ಕೂಡ ಇರುತ್ತದೆ. ಈ ಬ್ಲೌಸ್‍ಗಳು ಹಬ್ಬ, ಮದುವೆ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಹ ಲುಕ್ ನೀಡುತ್ತದೆ. ಬಂಗಾರದ ಬಳೆ ಜೊತೆಗೆ ಈ ಬ್ಲೌಸ್ ನಿಮ್ಮನ್ನು ಮತ್ತಷ್ಟು ಸುಂದರಗೊಳಿಸುತ್ತದೆ.

    ನೆಟ್ ಬ್ಲೌಸ್ ಸೀವ್ಸ್ ಡಿಸೈನ್
    ನೆಟ್ ಬ್ಲೌಸ್ ಸ್ಲೀವ್ಸ್ ಡಿಸೈನ್ ಹೆಚ್ಚಾಗಿ ಯಂಗ್ ಹುಡುಗಿಯರಿಗೆ ಬಹು ಬೇಗ ಇಷ್ಟವಾಗುತ್ತದೆ. ಸದ್ಯದ ಫ್ಯಾಶನ್‍ಗಳಲ್ಲಿ ಈ ಡಿಸೈನ್‍ನನ್ನು ಹೆಚ್ಚಾಗಿ ಮಹಿಳೆಯರು ಆಯ್ಕೆ ಮಾಡುತ್ತಿದ್ದಾರೆ. ಅದರಲ್ಲಿಯೂ ಚಿಫೋನ್ ಸೀರೆಗೆ ನೆಟ್ ಸ್ಲೀವ್ಸ್ ಡಿಸೈನ್ ಬಹು ಬೇಗ ಸ್ಯೂಟ್ ಆಗುತ್ತದೆ.

    Live Tv

  • ನಿಮ್ಮ ಫ್ರೆಂಡ್ ಮದುವೆಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಇರಬೇಕಾ? ಹಾಗಿದ್ರೆ ಈ ಸೀರೆ ಬೆಸ್ಟ್

    ನಿಮ್ಮ ಫ್ರೆಂಡ್ ಮದುವೆಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಇರಬೇಕಾ? ಹಾಗಿದ್ರೆ ಈ ಸೀರೆ ಬೆಸ್ಟ್

    ನಿಮ್ಮ ಸ್ನೇಹಿತೆಯ ಮದುವೆ ಸಮಾರಂಭಗಳಲ್ಲಿ ನೀವು ಸ್ಟೈಲಿಶ್ ಹಾಗೂ ಹಾಟ್ ಆಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದರೆ ಒಂದಷ್ಟು ಬೆಸ್ಟ್ ವೆರೈಟಿ ಡಿಸೈನರ್ ಸೀರೆಗಳ ಕಲೆಕ್ಷನ್ ಇಲ್ಲಿದೆ. ಈ ಸೀರೆಗಳನ್ನು ನಿಮ್ಮ ಸ್ನೇಹಿತೆಯ ಮೆಹಂದಿ ಶಾಸ್ತ್ರ, ಪಾರ್ಟಿ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಧರಿಸಬಹುದಾಗಿದೆ. ಈ ಸೀರೆಗಳು ನಿಮಗೆ ಗ್ಲಾಮರ್ ಲುಕ್ ನೀಡುವುದರ ಜೊತೆಗೆ ಐಷಾರಾಮಿ ಲುಕ್ ಸಹ ನೀಡುತ್ತದೆ. ಅಲ್ಲದೇ ಈ ತರಹದ ಸೀರೆಗಳನ್ನು ನಿಮ್ಮ ಪ್ರೀತಿಪಾತ್ರರಿಗೂ ಸಹ ಗಿಫ್ಟ್ ಆಗಿ ನೀಡಬಹುದಾಗಿದೆ.

    ರೆಡ್ ರಫಲ್ ಸೀರೆ
    ಮದುವೆ ಸಮಾರಂಭಗಳಲ್ಲಿ ಈ ಸೀರೆ ನಿಮಗೆ ಅದ್ಭುತವಾದಂತಹ ನೋಟ ನೀಡುತ್ತದೆ. ಅದರಲ್ಲೂ ರೆಡ್ ಕಲರ್ ಸೀರೆ ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಈ ಸೀರೆಗೆ ಚಿಕ್ಕ ಆಭರಣ ಮತ್ತು ಸ್ಟೈಲಿಶ್ ಹೇರ್ ಕಟ್ ಮಾಡಿಸಿದ್ದರೆ ಸಖತ್ ಆಗಿ ಸೂಟ್ ಆಗುತ್ತದೆ. ಇದನ್ನೂ ಓದಿ : ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಎಂಬ್ರಾಯ್ಡರಿ ನೆಟ್ ಸೀರೆ
    ಈ ಸುಂದರವಾದ ಸೀರೆಗೆ ಎಂಬ್ರಾಯ್ಡರಿ ವರ್ಕ್‍ಗೊಳಿಸಲಾಗಿದ್ದು, ಇದು ಆಫ್‍ಬೀಟ್ ಕಲರ್‌ನಿಂದ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲರ ಸ್ಕಿನ್ ಕಲರ್‌ಗೆ ಸೂಟ್ ಆಗುತ್ತದೆ. ಈ ಸೀರೆ ಧರಿಸಲು ಬಹಳ ಸಾಫ್ಟ್ ಆಗಿದ್ದು, ಎಲ್ಲರನ್ನು ಆಕರ್ಷಿಸುತ್ತದೆ. ಇದು ಮದುವೆ ಸಮಾರಂಭಗಳಲ್ಲಿ ತೊಡಲು ಬೆಸ್ಟ್ ಸೀರೆ ಎಂದೇ ಹೇಳಬಹುದು.

    ಪ್ರಿ ಡ್ರಾಪ್ಡ್ ಸೀರೆ ವಿಥ್ ಪಾಂಟ್ಸ್
    ಇದು ಸಖತ್ ಕೂಲ್ ಫೀಲ್ ನೀಡುತ್ತದೆ. ಸದ್ಯ ಈ ಸೀರೆ ಟ್ರೆಂಡಿಯಾಗಿದ್ದು, ಫುಲ್ ನೆಕ್ ಡಿಸೈನ್ ಜೊತೆಗೆ ಬ್ಲೌವ್ಸ್ ಎಂಬ್ರಾಯ್ಡರಿಯಿಂದ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಸೀರೆಯನ್ನು ಪ್ಯಾಂಟ್ ರೀತಿ ಸುಲಭವಾಗಿ ಧರಿಸಬಹುದಾಗಿದೆ.

    ಸಿಕ್ವೇನ್ ಸೀರೆ
    ಸಿಕ್ವೇನ್ ಸೀರೆಗಳು ಹೆಚ್ಚಾಗಿ ಪಾರ್ಟಿಗಳಿಗೆ ಸೂಟ್ ಆಗುತ್ತದೆ. ಸದ್ಯ ಟ್ರೆಂಡ್‍ನಲ್ಲಿ ಸೀರೆಗಳಿಲ್ಲಿ ಒಂದಾಗಿರುವ ಈ ಸೀರೆಗಳನ್ನು ಹೆಚ್ಚಾಗಿ ಬಾಲಿವುಡ್ ಸೆಲೆಬ್ರಿಟಿಗಳು ಧರಿಸುತ್ತಾರೆ. ನೇರಳೆ ಬಣ್ಣದ ಈ ಸೀರೆ ಬೆಳಕಿನಲ್ಲಿ ಸಖತ್ ಶೈನಿಂಗ್ ಆಗಿ ಕಾಣಿಸುತ್ತದೆ. ಈ ಸೀರೆಗೆ ಸಿಲ್ವರ್ ಕಲರ್ ಸ್ಲೀವ್ ಲೆಸ್ ಬ್ಲೌವ್ಸ್ ಅಥವಾ ಬ್ಲ್ಯಾಕ್ ಕಲರ್ ಫುಲ್ ಸ್ಲೀವ್ಸ್ ಬ್ಲೌವ್ಸ್ ಸಖತ್ ಆಗಿ ಕಾಣಿಸುತ್ತದೆ. ಇದನ್ನೂ ಓದಿ : ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್!

     

  • ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    – ರಿತೇಶ್ ಐಡಿಯಾಗೆ ಮೆಚ್ಚುಗೆ
    – ಅಮ್ಮನ ಹಳೆ ಸೀರೆಯಿಂದ ಹೊಸ ಬಟ್ಟೆ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ದೀಪಾವಳಿಯ ಹೊಸ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮನ ಹಳೆ ಸೀರೆಯಿಂದ ತಾವು ಹಾಗೂ ಇಬ್ಬರು ಮಕ್ಕಳಿಗೂ ರಿತೇಶ್ ಕುರ್ತಾ ಹೊಲಿಸಿಕೊಂಡಿದ್ದಾರೆ.

    ಅಮ್ಮನ ಹಳೆಯ ಸೀರೆಯನ್ನ ಬಳಸಿ ಹೊಸ ಬಟ್ಟೆ ಮಾಡಿಕೊಂಡಿರುವ ವೀಡಿಯೋ ರಿತೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಮ್ಮನ ಹಳೆ ಸೀರೆ. ಮಕ್ಕಳು ಮತ್ತು ನನಗೆ ದೀಪಾವಳಿಯ ಹೊಸ ಬಟ್ಟೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ರಿತೀಶ್ ಬರೆದುಕೊಂಡಿದ್ದಾರೆ.

    ಇನ್ನು ರಿತೇಶ್ ಐಡಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ತಾವು ಸಹ ಅಮ್ಮನ ಸೀರೆಯಲ್ಲಿ ಕುರ್ತಾ ಹೊಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಮ್ಮನ ಸೀರೆಯಲ್ಲಿ ಆಕೆಯ ಪ್ರೀತಿ ಮತ್ತು ಆಶೀರ್ವಾದ ಇರುತ್ತೆ. ಇಂತಹ ಪ್ರೀತಿಯ ಕ್ಯೂಟ್ ವೀಡಿಯೋ ಶೇರ್ ಮಾಡಿಕೊಂಡ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ.

  • ಸೀರೆ ಉಟ್ಟು ಬ್ಯಾಟ್ ಮಾಡಿದ ಮಿಥಾಲಿ- ಟೀಂ ಇಂಡಿಯಾಗೆ ವಿಶೇಷ ಸಂದೇಶ

    ಸೀರೆ ಉಟ್ಟು ಬ್ಯಾಟ್ ಮಾಡಿದ ಮಿಥಾಲಿ- ಟೀಂ ಇಂಡಿಯಾಗೆ ವಿಶೇಷ ಸಂದೇಶ

    ನವದೆಹಲಿ: ಸೀರೆ ಉಟ್ಟು ಬ್ಯಾಟ್ ಮಾಡಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿರುವ ಟೀಂ ಇಂಡಿಯಾಗೆ ಒಂದು ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ.

    ನಾಳೆ ಇರುವ ವಿಶ್ವ ಮಹಿಳಾ ದಿನದ ಅಂಗವಾಗಿ ವಿಶೇಷವಾಗಿ ವಿಡಿಯೋ ಮಾಡಿರುವ ಮಿಥಾಲಿ, ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೀರೆ ಉಟ್ಟು ಬ್ಯಾಟ್ ಮಾಡಿರುವ ಮಿಥಾಲಿ ರಾಜ್, ಇಡೀ ಪ್ರಪಂಚಕ್ಕೆ ನಾವು ಕೂಡ ವಿಶ್ವಕಪ್ ಗೆಲ್ಲುತ್ತೇವೆ ಎಂದು ತೋರಿಸಬೇಕು. ಕಮಾನ್ ಟೀಂ ಇಂಡಿಯಾ ಟ್ರೋಫಿಯನ್ನು ಗೆದ್ದು ತನ್ನಿ ಎಂದು ಹೇಳಿದ್ದಾರೆ.

    ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಮಿಥಾಲಿ, ಪ್ರತಿ ಸೀರೆಯು ನಿಮಗಿಂತ ಹೆಚ್ಚು ಮಾತನಾಡುತ್ತದೆ ಎಂಬುದು ನನಗೆ ಗೊತ್ತು. ಅದು ನಿಮ್ಮನ್ನು ಫಿಟ್ ಆಗಿ ಇರಿ ಎಂದು ಹೇಳುವುದಿಲ್ಲ. ಬದಲಿಗೆ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಮಹಿಳಾ ದಿನದಂದು ಅಮೂಲ್ಯವಾದುದನ್ನು ಏನಾದರೂ ಪ್ರಾರಂಭಿಸೋಣ ಹಾಗೂ ನಾವು ಕೂಡ ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸೋಣ. ಜೀವನವನ್ನು ಆರಂಭಿಸುವ ಸಮಯವಿದು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B9UVMI8pXiv/

    ಇದರ ಜೊತೆಗೆ ಈ ವಿಡಿಯೋವನ್ನು ಹೆಣ್ಣು ಮಕ್ಕಳಿಗೆ ಅರ್ಪಣೆ ಮಾಡಲಾಗಿದ್ದು, 55 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮಿಥಾಲಿ ರಾಜ್ ಅವರು ಮಾಡಿದ ವಿಶೇಷ ಸಾಧನೆಗಳ ಬಗ್ಗೆಯೂ ಕೂಡ ತಿಳಿಸಲಾಗಿದೆ. 1999 ರಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಮಿಥಾಲಿ, ಇಲ್ಲಿಯವರೆಗೂ 209 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಹಾಗೂ ಏಕದಿನ ಕ್ರಿಕೆಟ್‍ನಲ್ಲಿ 6,000 ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇವರಿಗೆ 2003 ರಲ್ಲಿ ಅರ್ಜನ ಅವಾರ್ಡ್ ಹಾಗೂ 2015 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

    ಹರ್ಮನ್‍ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತದ ಮಹಿಳಾ ತಂಡ 2020ರ ಟಿ-20 ಮಹಿಳಾ ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದೆ. ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿದ ಟೀಂ ಇಂಡಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲೂ ಗೆಲವು ಸಾಧಿಸಿ 8 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಕಳೆದ ಗುರುವಾರ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಮಳೆಗೆ ರದ್ದಾದ ಕಾರಣ ಎ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ನೇರವಾಗಿ ಫೈನಲ್ ತಲುಪಿದೆ.

    2009ರಿಂದ ಐಸಿಸಿ ಮಹಿಳಾ ಟಿ-20 ಟೂರ್ನಿ ನಡೆಸುತ್ತಿದೆ. ಇಲ್ಲಿಯವರೆಗೂ ನಡೆದಿರುವ 7 ಟೂರ್ನಿಗಳಲ್ಲಿ ಭಾರತ ಒಂದು ಬಾರಿಯೂ ಫೈನಲ್ ಗೆ ಹೋಗಿರಲಿಲ್ಲ. ಕಳೆದ ಬಾರಿ ಸೆಮಿಫೈನಲ್‍ನಲ್ಲಿ ಎಡವಿದ್ದ ಭಾರತ, ಈ ಬಾರಿ ಶೆಫಾಲಿ ವರ್ಮಾ ಬ್ಯಾಟಿಂಗ್ ಬಲ ಮತ್ತು ಭಾರತ ಮಹಿಳಾ ಸ್ಪಿನ್ನರ್ ಗಳ ಬಿಗು ಬೌಲಿಂಗ್ ನೆರವಿನಿಂದ ಫೈನಲ್ ತಲುಪಿದೆ. ಮೊದಲ ಬಾರಿಗೆ ಫೈನಲ್ ತಲುಪಿರುವ ಭಾರತಕ್ಕೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

    ಗುರುವಾರ ಫೈನಲ್‍ಗೆ ಆಯ್ಕೆಯಾದ ಭಾರತ ತಂಡ ಮಾರ್ಚ್ 8 ರಂದು ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹೀಗಾಗಿ ಭಾರತದ ಪುರುಷ ತಂಡದ ನಾಯಕ ಕೊಹ್ಲಿ, ಕೆಲ್ ರಾಹುಲ್, ಶಿಖರ್ ಧವನ್, ಮಾಜಿ ಆಟಗಾರದ ಸಚಿನ್, ವಿವಿಎಸ್ ಲಕ್ಷ್ಮಣ್ ಎಲ್ಲರೂ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದರು. ಈಗ ಮಿಥಾಲಿ ರಾಜ್ ಅವರು ಸೀರೆ ಉಟ್ಟು ಬ್ಯಾಟ್ ಮಾಡುವ ಮೂಲಕ ಭಾರತದ ವನಿತೆಯರಿಗೆ ಕಪ್ ತೆಗೆದುಕೊಂಡು ಬನ್ನಿ ಎಂದು ಸಂದೇಶ ಕಳುಹಿಸಿದ್ದಾರೆ.

  • ಸೀರೆಯುಟ್ಟು ಝುಂಬಾ ಡಾನ್ಸ್ ಮಾಡಿ, ಓಡಿದ ನೀರೆಯರು

    ಸೀರೆಯುಟ್ಟು ಝುಂಬಾ ಡಾನ್ಸ್ ಮಾಡಿ, ಓಡಿದ ನೀರೆಯರು

    ಧಾರವಾಡ: ಸೀರೆ ಅನ್ನೋದು ಭಾರತೀಯ ಮಹಿಳೆಯರಿಗೆ ಅಚ್ಚುಮೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸೀರೆ ಕೇವಲ ಕೆಲವೇ ಸಂದರ್ಭಗಳಲ್ಲಿ ಉಟ್ಟುಕೊಳ್ತಾರೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಈ ಭಾರತೀಯ ದಿರಿಸು ಸೀರೆಯನ್ನೇ ಮುಖ್ಯವಾಗಿಟ್ಟುಕೊಂಡು ಧಾರವಾಡದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

    ಬೆಳ್ಳಂಬೆಳಗ್ಗೆ ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಧಾರವಾಡದ ಕರ್ನಾಟಕ ಕಾಲೇಜು ಆವರಣ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಭಾರತೀಯ ಪುರಾತನ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನೇ ಕೇಂದ್ರವಾಗಿಟ್ಟುಕೊಂಡು ನಗರದ ಖಾಸಗಿ ಸಂಸ್ಥೆಯೊಂದು ಮಹಿಳೆಯರಿಗಾಗಿ ಓಟ ಹಾಗೂ ನಡಿಗೆಯ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಒಂದೆಡೆ ನಾ ಮುಂದು ತಾ ಮುಂದು ಅಂತಾ ಓಡುತ್ತಿರೋ ನೀರೆಯರು, ಮತ್ತೊಂದು ಕಡೆ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿರೋ ಮಹಿಳೆಯರು. ಖುಷಿಯಿಂದ ಬಣ್ಣ ಬಣ್ಣದ ಸೀರೆಯನ್ನುಟ್ಟು ಸಂಭ್ರಮಿಸುತ್ತಿರೋ ಮಹಿಳೆಯರ ಗುಂಪು ಕಾರ್ಯಕ್ರದಲ್ಲಿ ನೆರೆದವರ ಗಮನ ಸೆಳೆಯಿತು.

    ಸ್ಪರ್ಧೆಯಲ್ಲಿ ಭಾಗವಹಿಸೋರು ಸೀರೆಯುಟ್ಟುಕೊಳ್ಳೋದು ಕಡ್ಡಾಯ. ಹೀಗೆ ಸೀರೆಯುಟ್ಟುಕೊಂಡು ನಗರದ ಕೆಸಿಡಿ ವೃತ್ತದಿಂದ ಕಲಾಭವನದವರೆಗೆ ಓಡಬೇಕು. ಓಡಲು ಸಾಧ್ಯವಾಗದವರು ನಡೆಯಬೇಕು. ಬೆಳ್ಳಂಬೆಳಗ್ಗೆಯೇ ಈ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

    ಮೊದಲಿಗೆ ಕಾಲೇಜು ಆವರಣದಲ್ಲಿ ಅರ್ಧ ಗಂಟೆ ಝುಂಬಾ ವ್ಯಾಯಾಮ ಡಾನ್ಸ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ನಿಂತಲ್ಲಿಯೇ ಸಂಗೀತಕ್ಕೆ ಮೈಮುರಿದು ನೃತ್ಯ ಮಾಡಿದರು. ಅದಾದ ಬಳಿಕವೇ ನಡೆಯೋ ಹಾಗೂ ಓಡೋ ಸ್ಪರ್ಧೆ. ಯುವತಿಯರು, ಮಹಿಳೆಯರು, ವೃದ್ಧೆಯರು ನಾ ಮುಂದು ತಾ ಮುಂದು ಅಂತ ಕಾಲೇಜು ರಸ್ತೆಯಲ್ಲಿ ಓಡಿ ಕಲಾಭವನ ತಲುಪಿದರು. ಸೀರೆಯನ್ನುಟ್ಟುಕೊಂಡು ಕೂಡ ಓಡಬಹುದು ಅನ್ನೋದನ್ನು ಮಹಿಳೆಯರು ನಿರೂಪಿಸಿದರು. ಆಯೋಜಕರು ನೂರು ಮಹಿಳೆಯರು ಭಾಗವಹಿಸಬಹುದು ಅಂದುಕೊಂಡಿದ್ದರು. ಆದರೆ ಅದಕ್ಕಿಂತ ಹೆಚ್ಚಿಗೆ ಮಹಿಳೆಯರು ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿ, ಆಯೋಜಕರಿಗೆ ಅಚ್ಚರಿ ಮೂಡಿಸಿದರು.

    ಇತ್ತೀಚಿನ ದಿನಗಳಲ್ಲಿ ಸೀರೆಯುಟ್ಟುಕೊಳ್ಳೋದು ಹಳೆಯ ಸಂಪ್ರದಾಯ ಅನ್ನೋ ಭಾವನೆ ಬಂದು ಬಿಟ್ಟಿದೆ. ಸೀರೆಗಿಂತ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಚೂಡಿದಾರ್ ಸಾಕಷ್ಟು ಕಂಫರ್ಟ್ ಕೊಡುತ್ತೆ ಅನ್ನೋ ಭಾವನೆಯಲ್ಲಿ ಯುವತಿಯರಿದ್ದಾರೆ. ಆದರೆ ಭಾರತೀಯ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನುಕೊಂಡರೆ ನಡೆದಾಡೋದೇನು ಓಡಲು ಕೂಡ ಸಾಧ್ಯ ಅನ್ನೋದನ್ನು ಇವತ್ತು ನಡೆದ ಸ್ಪರ್ಧೆ ಎತ್ತಿ ತೋರಿಸಿದ್ದಂತೂ ಸತ್ಯ.

  • ವೋಟಿಗೊಂದು ಕಲರ್‌ಫುಲ್‌ ಸೀರೆ- ಮಹಿಳೆಯರಿಗೆ ಎಲೆಕ್ಷನ್ ಗಿಫ್ಟ್‌ಗಾಗಿ ಭರ್ಜರಿ ಆಫರ್!

    ವೋಟಿಗೊಂದು ಕಲರ್‌ಫುಲ್‌ ಸೀರೆ- ಮಹಿಳೆಯರಿಗೆ ಎಲೆಕ್ಷನ್ ಗಿಫ್ಟ್‌ಗಾಗಿ ಭರ್ಜರಿ ಆಫರ್!

    ಬೆಂಗಳೂರು: ಅನರ್ಹರ ರಾಜೀನಾಮೆಯಿಂದ 15 ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಮತದಾರ ಪ್ರಭುಗಳ ಗಮನ ಸೆಳೆಯಲು ಖೆಡ್ಡಾ ರೆಡಿಯಾಗಿದೆ. ಅದರಲ್ಲೂ ಮಂಗಳಾರಾತಿ ಎತ್ತದಂತೆ ಮಹಿಳಾಮಣಿಗಳಿಗೆ ಒಲೈಸಲು ಭರ್ಜರಿ ಕಸರತ್ತು ಶುರುವಾಗಿದೆ. ಈ ಎಲೆಕ್ಷನ್ ಸೀರೆ ಆಫರ್ ಏನು ಅಂತ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಬಟಾಬಯಲು ಮಾಡಿದೆ.

    ಚಿಕ್ಕಪೇಟೆಗೂ ಮಹಿಳೆಯರಿಗೂ ಅದೇನ್ ನಂಟು ಅಂತಾ ಭಗವಂತನಿಗೆ ಗೊತ್ತಿರೋದಕ್ಕೆ ಸಾಧ್ಯವಿಲ್ಲ. ಹಬ್ಬ, ಹರಿದಿನ, ವೀಕೆಂಡ್ ಹೀಗೆ ಯಾವಾಗ ಹೋದರೂ ಚಿಕ್ಕಪೇಟೆ ಮಹಿಳೆಯರಿಂದ ಫುಲ್ ಬ್ಯುಸಿ ಇರುತ್ತೆ. ಈಗಂತೂ ಎಲೆಕ್ಷನ್ ಸಮಯ ಬೇರೆ, ಸೀರೆ ವ್ಯಾಪಾರವಂತೂ ಇನ್ನೂ ಸಖತ್ ಆಗಿ ನಡೀತಿದೆ. ವೋಟಿಗೊಂದು ಕಲರ್‌ಫುಲ್‌ ಸೀರೆ ಎನ್ನುವಂತೆ ಮಹಿಳೆಯರಿಗೆ ಎಲೆಕ್ಷನ್ ಗಿಫ್ಟ್‌ಗಾಗಿ ಅಂಗಡಿ ಮಾಲೀಕರು ಭರ್ಜರಿ ಆಫರ್ ಬಿಟ್ಟಿದ್ದಾರೆ.

    ನಮ್ಮಲ್ಲಿ ಹಾಫ್ ರೇಟ್, ಚೀಫ್ ರೇಟ್ ಸೀರೆ. ಸಿಲ್ಕ್ ಸೀರೆ, ಸಿಂಥೆಟಿಕ್, ಕಾಟನ್ ಯಾವುದ್ ಬೇಕು ಹೇಳಿ ಎಂದು ಚಿಕ್ಕಪೇಟೆಯಲ್ಲಿ ಮಾಮೂಲಿ ಕೇಳಿಬರುವ ಧ್ವನಿ. ಆದರೆ ಈಗ ಎಲೆಕ್ಷನ್ ವ್ಯಾಪಾರದ ಸಮಯವಾಗಿದ್ದು, ಹಾಫ್ ರೇಟ್, ಚೀಪ್ ರೇಟ್ ಎಲೆಕ್ಷನ್ ಸೀರೆಗಳ ಜೊತೆ ವ್ಯಾಪಾರಿಗಳು ಮೈಕೊಡವಿಕೊಂಡು ಜೈ ಎಂದು ಸೀರೆ ವ್ಯಾಪಾರಕ್ಕೆ ಪಟ್ಟಾಗಿ ಕುಂತುಬಿಟ್ಟಿದ್ದಾರೆ. ಥೇಟು ರಾಜಕೀಯ ನಾಯಕರಂತೆ ಇಲ್ಲಿನ ವ್ಯಾಪಾರಿಗಳು ಎಲೆಕ್ಷನ್ ಸೀರೆ ಸೇಲ್ ಮಾಡೋಕೆ ಸಿಕ್ಕಾಪಟ್ಟೆ ಸುಳ್ಳು, ಪೂಸಿ ಹೊಡೆಯುತ್ತಾರೆ. ಇದಕ್ಕೆ ಕಳ್ಳಬಿಲ್ ಲೆಕ್ಕಾನೂ ತೋರಿಸುತ್ತಾರೆ.

    ಎಲೆಕ್ಷನ್‍ಗೆ ಸೀರೆ ಬೇಕು ಅಂದ್ರೆ ಸಾಕು ವ್ಯಾಪಾರಿಗಳ ಕಣ್ಣರಳುತ್ತೆ. ಅಯ್ಯೋ ಬಿಡಿ ಸಾಬ್ ಎಲ್ಲಾ ಆರೇಂಜ್‍ಮೆಂಟ್ ನಮ್ಮದೇ, ನಿಮಗೆ ಎಷ್ಟು ಅಗ್ಗದ ಸೀರೆ ಬೇಕು ಅಷ್ಟು ಸಿಗುತ್ತೆ. ಕಲರ್ ಗಿಲರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪಟ್ಟಾಗಿ ಕುಂತು ಉಳಿದ ಕಸ್ಟಮರ್ ನತ್ತ ಕಣ್ಣುಹಾಯಿಸದೇ ವ್ಯಾಪಾರಕ್ಕೆ ನಿಂತುಬಿಡುತ್ತಾರೆ. ಕಳೆದ ವಾರವಷ್ಟೇ ಎಲೆಕ್ಷನ್ ಸೀರೆ ಸಖತ್ ವ್ಯಾಪಾರ ಆಗಿದೆ ಎಂದು ಸ್ವತಃ ಅಂಗಡಿ ಅವರೇ ಹೇಳುತ್ತಾರೆ. ಇನ್ನೂ ಕೆಲವು ಅಂಗಡಿಗಳಲ್ಲಿ, ನೀವು ಹೇಳಿದಷ್ಟು ಬಿಲ್ ಹಾಕಿಕೊಡ್ತೀವಿ ತಲೆಕೆಡಿಸಿಕೊಳ್ಳಬೇಡಿ, ನೀವು ಸೀರೆ ಕೊಡುವಾಗ ಎಷ್ಟು ಬೇಕಾದರೂ ದುಡ್ಡು ತಗೊಳ್ಳಿ ಎಂದು ಸ್ಪೆಷಲ್ ಐಡಿಯಾ ಕೂಡ ಕೊಡುತ್ತಾರೆ.

    ಪ್ರಚಾರ ಮಾಡುವಾಗ ರಾಜಕಾರಣಿಗಳು ಎಷ್ಟು ಹಣ ಬೇಕಾದರೂ ಸುರಿಯಲು ಸಿದ್ಧರಾಗುತ್ತಾರೆ. ಇದನ್ನೆ ಲಾಭ ಮಾಡಿಕೊಳ್ಳುವ ಮಧ್ಯವರ್ತಿಗಳು 200 ರೂ. ಬೆಲೆಯ ಸೀರೆಯನ್ನ 350 ಬೇಕಾದರೂ ಹ್ಯಾಂಡ್ ಬಿಲ್ ಮಾಡಿಸಿಕೊಳ್ಳುತ್ತಾರೆ. ಇದರಿಂದ ಮಳಿಗೆಗಳು ಜಿಎಸ್‍ಟಿ ಬೀಳಲ್ಲ. ಇತ್ತ ತಗೊಳ್ಳೊ ಮಧ್ಯವರ್ತಿಗಳು ದುಪ್ಪಟ್ಟು ಲೆಕ್ಕ ತೋರಿಸಿ ಹಣ ಪೀಕಬಹುದು ಎಂಬ ಪ್ಲಾನ್ ಮಾಡಲಾಗುತ್ತೆ.

    ಎಷ್ಟು ಸೀರೆ ಕೊಡಿಸಿದರೂ ಮಹಿಳೆಯರ ಬಾಯಲ್ಲಿ ಸಾಕು ಅನ್ನೋ ಮಾತೇ ಬರಲ್ಲ. ಇದನ್ನು ಅಭ್ಯರ್ಥಿಗಳು ಕೂಡ ಬಂಡವಾಳ ಮಾಡ್ಕೊಂಡಿದ್ದಾರೆ. ಎಲೆಕ್ಷನ್ ಸೀರೆ ಮಾರಾಟ ಮಾಡಲು ಎಲ್ಲದಕ್ಕೂ ವ್ಯಾಪಾರಿಗಳು ಸಿದ್ಧರಾಗಿದ್ದಾರೆ. ಹಲವು ಮಳಿಗೆಗಳು ಭರ್ಜರಿ ಸೀರೆ ಸೇಲ್‍ಗಾಗಿ ಖೆಡ್ಡಾ ಸಿದ್ಧಪಡಿಸಿದೆ. ಮತದಾರರ ಅಮೂಲ್ಯ ಮತ ಸೆಳೆಯಲು ಏನೆಲ್ಲಾ ಮಾಡುತ್ತಾರೆ. ಇಂತಹ ಆಮಿಷಕ್ಕೆ ಬಲಿಯಾಗದೇ ನೀವು ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ಮತದಾನ ಮಾಡಿ ಎನ್ನುವುದೇ ನಮ್ಮ ಆಶಯವಾಗಿದೆ.

  • ಹುಣಸೂರಿನಲ್ಲಿ ಹಂಚಲು ತಂದಿದ್ದ 30 ಸಾವಿರ ಸೀರೆ ವಶ

    ಹುಣಸೂರಿನಲ್ಲಿ ಹಂಚಲು ತಂದಿದ್ದ 30 ಸಾವಿರ ಸೀರೆ ವಶ

    ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‍ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ಜಸ್ಟ್ 10 ರೂ.ಗೆ ಒಂದು ಸೀರೆ- ಖರೀದಿಸಲು ಹೋಗಿ ಸಾವಿರಾರೂ ರೂ. ಕಳೆದುಕೊಂಡ್ರು

    ಜಸ್ಟ್ 10 ರೂ.ಗೆ ಒಂದು ಸೀರೆ- ಖರೀದಿಸಲು ಹೋಗಿ ಸಾವಿರಾರೂ ರೂ. ಕಳೆದುಕೊಂಡ್ರು

    ಹೈದರಾಬಾದ್: ಮಹಿಳೆಯರು ಸೀರೆ ಪ್ರಿಯರು, ಆಫರ್ ಇದ್ದರೆ ಸಾಕು ಮಳಿಗೆಗೆ ಮುಗಿಬಿದ್ದು ಖರೀದಿಸುತ್ತಾರೆ. ಇಂತದ್ದೇ ಪ್ರಸಂಗವೊಂದು ತೆಲಂಗಾಣದ ಹೈದರಾಬಾದ್ ಮಾಲ್‍ನಲ್ಲಿ ನಡೆದಿದ್ದು, ನೂಕುನುಗ್ಗಲಿಗೆ ಸುಮಾರು 15 ಜನ ಗಾಯಗೊಂಡಿದ್ದಾರೆ.

    ಹೈದರಾಬಾದ್ ನಗರದ ಸಿದ್ದಿಪೇಟೆಯ ಸಿಎಂಆರ್ ಮಾಲ್‍ನಲ್ಲಿ ಕೇವಲ 10 ರೂ. ಒಂದು ಸೀರೆ ಎಂದು ಆಫರ್ ಕೊಡಲಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಮಹಿಳೆಯರು, ಯುವತಿಯರು, ಯುವಕರು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ಮಾಲ್ ಒಳಗೆ ನುಗ್ಗಿದ್ದಾರೆ. ಪರಿಣಾಮ ಕಾಲ್ತುಳಿತಕ್ಕೆ ಸಿಕ್ಕು ಕೆಲವರು ಗಾಯಗೊಂಡಿದ್ದಾರೆ.

    ಸೀರೆ ಖರೀದಿಸಲು ಮಾಲ್‍ಗೆ ಬಂದಿದ್ದ ಮಹಿಳೆಯೊಬ್ಬರು 5 ಚಿನ್ನದ ಸರ, 6 ಸಾವಿರ ನಗದು ಹಾಗೂ ಡೆಬಿಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಹಿಳೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮಾಲ್ ಬಾಗಿಲನ್ನು ಮುರಿದು ಹೊರಬಂದಿದ್ದಾರೆ. ಈ ವೇಳೆ ತಳ್ಳಾಟವಾಗಿದ್ದು, ಕೆಲವರು ಕೆಳಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

    ಮಾಲ್‍ನ ನಿಷ್ಕಾಳಜಿಯಿಂದಾಗಿಯೇ ಘಟನೆ ನಡೆದಿದೆ ಎಂದು ಆರೋಪಿಸಿರುವ ಪೊಲೀಸರು, ಮಾಲ್‍ನ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv