Tag: Saree

  • ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ಹೆಣ್ಣಿಗೆ ಸೀರೆ ಯಾಕೆ ಅಂದಾ! ಸೌಂದರ್ಯ ಪ್ರಿಯೇ ಹೆಣ್ಣಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಸೀರೆಯುಟ್ಟ ನವಿಲಿನಂತೆ ಕಂಗೊಳಿಸುವ ಹೆಣ್ಣುಮಕ್ಕಳು ವಿವಿಧ ಶೈಲಿಯ, ಬಣ್ಣಗಳ, ಚಿತ್ತಾರದ ಸೀರೆಯನ್ನು ತುಂಬಾ ಇಷ್ಟಪಡುತ್ತಾರೆ. ಸೀರೆಗಳಲ್ಲೇ ನಾವು ಹಲವಾರು ವಿಧಗಳನ್ನ ಕಾಣಬಹುದು. ಕಾಟನ್ ಸೀರೆ, ರೇಷ್ಮೆ ಸೀರೆ, ಬನಾರಸಿ ಸೀರೆ, ಜಾರ್ಜೆಟ್ ಸೀರೆ ಇನ್ನೂ ಹಲವಾರು ವಿಧದ ಸೀರೆಗಳು ನಾರಿಮಣಿಯರನ್ನು ಸುಂದರವಾಗಿ ಕಾಣಿಸುತ್ತದೆ.

    ಬರೀ ಸೀರೆ ಬಗ್ಗೆ ಹೇಳಿದ್ರೆ ಸಾಕಾ? ಇಲ್ಲ ಸೀರೆಯ ಲುಕ್ ಬದಲಿಸುವ ಇನ್ನೊಂದು ಬಹಳ ಮುಖ್ಯವಾದ ವಿಷಯ ಇದೆ. ಅದೇನಂದ್ರೆ ಬ್ಲೌಸ್ ಡಿಸೈನ್ಸ್. ಹೌದು, ಸೀರೆಯ ಲುಕ್ ಅನ್ನ ಗ್ರ್ಯಾಂಡ್ ಆಗಿ ಮತ್ತು ಬ್ಯೂಟಿಫುಲ್ ಆಗಿ ಕಾಣುವಂತೆ ಮಾಡುವುದೇ ಬ್ಲೌಸ್ ಡಿಸೈನ್. ಸೀರೆ ಸಿಂಪಲ್ ಆಗಿದ್ರೂ, ಬ್ಲೌಸ್ ಡಿಸೈನ್‌ಯಿಂದ ನಮ್ಮ ಬ್ಯೂಟಿ ಕ್ವೀನ್ಸ್‌ಗಳನ್ನು ಮತ್ತಷ್ಟು ಸೌಂದರ್ಯವತಿಯನ್ನಾಗಿಸುತ್ತದೆ. ಅಬ್ಬಬ್ಬಾ ಈಗಂತೂ ಬ್ಲೌಸ್ ಡಿಸೈನ್‌ಗಳನ್ನ ನೋಡೋಕೆ ಹೋದ್ರೆ ಅಲ್ಲೇ ಕನ್ಫ್ಯೂಸ್ ಆಗಿಬಿಡುತ್ತೇವೆ.

    ದಿನಕ್ಕೊಂದು ಸೀರೆಗಳ ಟ್ರೆಂಡ್ ಹೇಗೆ ಬದಲಾಗುತ್ತದೆಯೋ ಅದೇ ರೀತಿ ಡಿಸೈನರ್ಸ್‌ ಕೂಡ ತಾ ಮುಂದು ನಾ ಮುಂದು ಅಂತ ಹೊಸ ಹೊಸ ಡಿಸೈನ್ಸ್ ಗಳ ಮೂಲಕ ಅವರ ಕೈಚಳಕ ತೋರಿಸುತ್ತಿದ್ದಾರೆ. ದಿನೇ ದಿನೇ ಫ್ಯಾಶನ್ ವರ್ಲ್ಡ್‌ನಲ್ಲಿ ಟ್ರೆಂಡ್ ಚೇಂಜ್ ಆಗುತ್ತಿದ್ದು, ಇದೀಗ ಮಸಾಬ ಬ್ಲೌಸ್ ಡಿಸೈನ್ಸ್ ಸೆಲೆಬ್ರಿಟಿಗಳ ಮನ ಗೆದ್ದಿದೆ. ಮಾಡರ್ನ್ ಹಾಗೂ ಕಾಸಿಕ್ ವೇರ್‌ಗೂ ಮ್ಯಾಚ್ ಆಗುವ ಈ ಡಿಸೈನ್ ಈಗ ಸಖತ್ ಟ್ರೆಂಡ್ ನಲ್ಲಿದೆ.

    ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗಿನ ತಾರೆಯರು ಈ ಡಿಸೈನ್‌ಗೆ ಮಾರುಹೋಗಿದ್ದಾರೆ. ಸಿಂಪಲ್ ಆಗಿದ್ರುನೂ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸುತ್ತದೆ. ಈಗ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಒಂದು ಪ್ಯಾಟ್ರನ್‌ ಬ್ಲೌಸ್‌ನಲ್ಲಿ ಮಿಂಚುತ್ತಿರುತ್ತಾರೆ. ಹುಡುಗಿರಂತೂ ಕಾಲೇಜ್ ಡೇ, ಮದುವೆ, ಫ್ರೆಶರ್ ಪಾರ್ಟಿ ಅಂತ ಸೀರೆ ತೆಗೆದುಕೊಳ್ಳುವಾಗ ಟ್ರೆಂಡಿಂಗ್ ಡಿಸೈನ್‌ಗಳತ್ತ ನೋಡ್ತಾ ಇರ್ತಾರೆ.

    ಮಸಾಬ ಬ್ಲೌಸ್‌ನ ವಿಶೇಷತೆಗಳು:

    ಸೀರೆ ಫ್ಯಾಬ್ರಿಕ್ ಆಗಿರಲಿ, ಕಾಟನ್ ಆಗಿರಲಿ, ರೇಷ್ಮೆ ಅಥವಾ ಜಾರ್ಜೆಟ್ ಆಗಿರಲಿ ಎಲ್ಲಾ ಬಗೆಯ ಸೀರೆಗೆ ಈ ಬ್ಲೌಸ್‌ ಡಿಸೈನ್‌ ಸೂಟ್‌ ಆಗುತ್ತೆ ಎಂಬುವುದೇ ಇದರ ಮತ್ತೊಂದು ವಿಶೇಷತೆ. ನೀವು ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ಖ್ಯಾತಿಯ ಮೋಕ್ಷಿತ ಪೈ ಇತ್ತೀಚಿಗಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದಾಗ ಇದೇ ಮಸಾಬ ಡಿಸೈನ್ ಬ್ಲೌಸ್ ನಲ್ಲಿ ಮಿಂಚಿದರು. ಅಲ್ಲದೆ ಗಿಣಿರಾಮ ಖ್ಯಾತಿಯ ಕಾವೇರಿ ಬಾಗಲಕೋಟೆ ಸಹ ಇದೆ ಬ್ಲೌಸ್ ಡಿಸೈನ್‌ನಲ್ಲಿ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದರು.

    ನೀವು ಈ ಡಿಸೈನ್‌ ಬ್ಲೌಸ್ ಸ್ಟಿಚ್‌ ಮಾಡಿ ಗ್ರ್ಯಾಂಡ್‌ ಸೀರೆಗೆ ಹಾಕಬಹುದು. ಸಿಂಪಲ್‌ ಸೀರೆಗೂ ಬಳಸಬಹುದು. ಈ ಲುಕ್‌ ಸಖತ್ ಸ್ಟೈಲಿಷ್‌ ಲುಕ್‌ ನೀಡುತ್ತದೆ. ಅಲ್ಲದೆ ನಿಮಗೆ ಟ್ರೆಂಡಿ ಲುಕ್‌ ಕೂಡಾ ನೀಡುತ್ತದೆ. ಮಾಡ್ರನ್ ಲುಕ್ ಕೊಟ್ಟ ಮಸಾಬ ಬ್ಲೌಸ್ ಧರಿಸಿ ನ್ಯಾಷನಲ್ ಕ್ರಷ್ ರಶ್ಮಿಕ ಮಂದಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

    ಅಲ್ಲದೆ ಬಾಲಿವುಡ್‌ನ ನಟಿ ಶಾರ್ವರಿ ಸಹ ಹಳದಿ ಬಣ್ಣದ ಸೀರೆ ಉಟ್ಟು, ಮಸಾಬ ಬ್ಲೌಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಟಾಲಿವುಡ್‌ನ ಸುಂದ್ರಿ, ಮಿಲ್ಕಿ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ತಮನ್ನಾ ಭಾಟಿಯಾ ಮಾಡ್ರನ್ ಡ್ರೆಸ್ಸಿಗೆ ಹಸಿರು ಬಣ್ಣದ ಮಸಾಬ ಬ್ಲೌಸ್ ಧರಿಸಿದ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

    ಸ್ಲೀವ್‌ಲೆಸ್‌ ಅಥವಾ ಫುಲ್‌ಸ್ಲಿವ್ ರೀತಿಯಲ್ಲೂ ಇದನ್ನೂ ಧರಿಸಬಹುದು. ಹೀಗಾಗಿ ಸ್ಲೀವ್‌ಲೆಸ್‌ ಹಾಕುವುದೇ ಇಲ್ಲ ಎನ್ನುವವರು ಕೂಡ ಈ ಬ್ಲೌಸ್‌ ಡಿಸೈನ್‌ ಟ್ರೈ ಮಾಡಬಹುದು. ಟ್ರೆಡಿಷನಲ್ ಮತ್ತು ಮಾಡ್ರನ್ ಸೀರೆಗಳಿಗೆ ಮ್ಯಾಚ್ ಆಗುವ ಈ ಬ್ಲೌಸ್‌ನಲ್ಲಿ ನೀವೂ ಕೂಡಾ ಸೆಲೆಬ್ರಿಟಿಗಳ ರೀತಿಯಲ್ಲಿ ಪಾರ್ಟಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮಿಂಚಬಹುದು.

    ನೀವು ಧರಿಸುವ ಸೀರೆ, ಹೇರ್‌ ಸ್ಟೈಲ್, ಅಲಂಕಾರದ ಪ್ರಕಾರ ನಿಮ್ಮ ಲುಕ್ ಬದಲಾಗುವುದು. ಮಸಾಬ ಬ್ಲೌಸ್‌ನ ಬ್ಯಾಕ್‌ ಡಿಸೈನ್ ನಿಮಗೆ ಇಷ್ಟವಾಗುವಂತೆ ಸ್ಟಿಚ್‌ ಮಾಡಿಸಬಹುದು. ಅಲ್ಲದೆ ಇದು ಬ್ಯಾಕ್ ಬಟನ್ ಬ್ಲೌಸ್ ಆಗಿದೆ. ಇನ್ನು ಬೆನ್ನಿನ ಭಾಗಕ್ಕೆ ಥ್ರೆಡ್‌ ಅನ್ನು ಪ್ಲೈನ್ ಆಗಿ ಇಡಬಹುದು. ಇಲ್ಲದಿದ್ದರೆ ಆ ದಾರದ ಮೂಲಕವೇ ಮತ್ತಷ್ಟು ಟ್ರೆಂಡಿ ಆಗಿ ಕಾಣುವಂತೆ ವಿನ್ಯಾಸ ಮಾಡಬಹುದು.

    ಈ ವಿನ್ಯಾಸಕ್ಕೆ ಸೀರೆಯ ಸೆರಗು ಸಿಂಗಲ್‌ ಪಿನ್ ರೀತಿಯಲ್ಲಿ ಜೋತು ಬಿಟ್ಟರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಈ ಮಸಾಬ ಬ್ಲೌಸ್ ಡಿಸೈನ್ ಅನ್ನು ಕೇವಲ ಸೀರೆಗಳಿಗೆ ಮಾತ್ರ ಧರಿಸದೆ, ಲಂಗ ದಾವಣಿ ಅಥವಾ ಸ್ಕರ್ಟ್ ಆ್ಯಂಡ್ ಬ್ಲೌಸ್ ರೀತಿಯಲ್ಲಿ ಧರಿಸಿದರೆ ಟ್ರೆಂಡಿ ಹಾಗೂ ಬೋಲ್ಡ್ ಆಗಿ ಕಾಣಿಸುತ್ತೀರಾ. ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಈ ವಿನ್ಯಾಸದ ಬ್ಲೌಸ್‌ಗಳನ್ನ ಧರಿಸಿ ಟ್ರೆಂಡಿ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಿ.

  • ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

    ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

    – ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ

    ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆ ಚುನಾವಣಾಧಿಕಾರಿಗಳು (Election Officers) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆಗಳನ್ನು ಜಪ್ತಿ ಮಾಡಿದ್ದಾರೆ.

    ಬಿಡದಿಯ (Bidadi) ಹೊಸದೊಡ್ಡಿ ಗ್ರಾಮದ ಬಳಿ ಇರುವ ಗೋಡೌನ್‌ನಲ್ಲಿ ಅಕ್ರಮವಾಗಿ ಸೀರೆ ಮತ್ತು ಪಂಚೆಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಚನ್ನಪಟ್ಟಣ ಮತದಾರರಿಗೆ ಹಂಚಲು ಶೇಖರಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಾವುದೇ ದಾಖಲೆ ಇಲ್ಲದೇ ಶೇಖರಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಸೀರೆ ಮತ್ತು ಪಂಚೆಯನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸಾಗಿಸುತ್ತಿದ್ದ ‘ಈರುಳ್ಳಿ ಬಾಂಬ್’‌ ಸ್ಫೋಟಗೊಂಡು ಓರ್ವ ಸಾವು

    ಇನ್ನು ಈ ಕುರಿತು ಚುನಾವಣೆನೀತಿ ಸಂಹಿತೆ ಉಲ್ಲಂಘನೆ ಅಡಿ ದೂರು ದಾಖಲಿಸಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: 44 ವರ್ಷಗಳ ನಂಟು ಕಡಿದುಕೊಂಡ ಮುಂಬೈ ಕಾಂಗ್ರೆಸ್ ಮುಖಂಡ – 5 ಬಾರಿ ಕಾರ್ಪೋರೇಟರ್ ಆಗಿದ್ದ ರವಿರಾಜ ಬಿಜೆಪಿ ಸೇರ್ಪಡೆ

  • ಸೀರೆ ಉಟ್ಟರೆ ಬರುತ್ತಂತೆ ಕ್ಯಾನ್ಸರ್! – ವೃಷಣ ಕ್ಯಾನ್ಸರ್‌ ಹೇಗೆ ಬರುತ್ತೆ? ಸಮಸ್ಯೆಗಳಿಂದ ಪಾರಾಗುವುದು ಹೇಗೆ?

    ಸೀರೆ ಉಟ್ಟರೆ ಬರುತ್ತಂತೆ ಕ್ಯಾನ್ಸರ್! – ವೃಷಣ ಕ್ಯಾನ್ಸರ್‌ ಹೇಗೆ ಬರುತ್ತೆ? ಸಮಸ್ಯೆಗಳಿಂದ ಪಾರಾಗುವುದು ಹೇಗೆ?

    ಭಾರತದಲ್ಲಿ ಮಹಿಳೆಯರಲ್ಲಿ ಅತ್ಯಂತ ಜನಪ್ರಿಯ ಉಡುಪುಗಳಲ್ಲಿ ಸೀರೆಯನ್ನೂ ಸೇರಿಸಬಹುದು. ಫ್ಯಾಶನ್ ಓಟದಲ್ಲಿ ಪ್ರತಿದಿನ ಹೊಸ ಹೊಸ ಟ್ರೆಂಡ್‌ಗಳು ಜನಪ್ರಿಯವಾಗುತ್ತಿವೆ. ಆದರೆ ಸೀರೆಗಳು ಇನ್ನೂ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ. ಈ ನಡುವೆ ಸೀರೆ ಉಟ್ಟರೆ ಕ್ಯಾನ್ಸರ್ ಬರಬಹುದು ಎಂದು ಯಾರಾದರೂ ಹೇಳಿದರೆ ನೀವು ನಂಬಲ್ಲ. ಆದರೆ ಇತ್ತೀಚಿನ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

    ಸೀರೆ ಉಟ್ಟರೆ ಕ್ಯಾನ್ಸರ್!
    ಕ್ಯಾನ್ಸರ್ ಎಷ್ಟು ಅಪಾಯಕಾರಿ ಕಾಯಿಲೆ ಎಂದರೆ ಅದರ ಹೆಸರನ್ನು ಕೇಳಿದಾಗಲೇ ಒಂದು ರೀತಿಯ ಭಯ ಅಥವಾ ಗಾಬರಿ ನಮ್ಮಲ್ಲಿ ಹುಟ್ಟುತ್ತದೆ. ಆದರೆ ಈ ರೋಗವು ಯಾವುದೇ ಉಡುಗೆ ಅಥವಾ ಉಡುಪಿನಿಂದ ಬರುತ್ತೆ ಅಂದರೆ ನಂಬಲು ಅಸಾಧ್ಯ. ಇದು ಸ್ವಲ್ಪ ವಿಚಿತ್ರವೆನಿಸುತ್ತದೆ. ಆದರೆ ಮುಂಬೈನ ಆರ್‌ಎನ್ ಕೂಪರ್ ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಇದೇ ವಿಷಯ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಮಹಿಳೆ ಕಳೆದ 13 ವರ್ಷಗಳಿಂದ ಸೀರೆ ಉಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ಯಾನ್ಸರ್ ಗೆ ʼSaree Cancerʼ ಎಂದು ಹೆಸರಿಡಲಾಗಿದೆ. ಈ ವಿಚಾರ ಓದಿದಾಗ ನಿಮ್ಮಲ್ಲಿ ಸೀರೆ ಉಡುವುದಕ್ಕೂ ಕ್ಯಾನ್ಸರ್‌ಗೂ ಏನು ಸಂಬಂಧ ಎಂಬ ಕುತೂಹಲದ ಪ್ರಶ್ನೆ ಹುಟ್ಟಿಕೊಂಡಿರಬಹುದು. ಹಾಗಿದ್ರೆ ಈ ಕ್ಯಾನ್ಸರ್‌ ಹೇಗೆ ಬರುತ್ತದೆ ಎಂಬುದನ್ನು ನೋಡೋಣ.

    ಈ ಕ್ಯಾನ್ಸರ್‌ ಹೇಗೆ ಬರುತ್ತದೆ..?:
    ವಾಸ್ತವವಾಗಿ ಯಾವುದೇ ಬಟ್ಟೆಯನ್ನು ಒಂದೇ ಸ್ಥಳದಲ್ಲಿ ಬಿಗಿಯಾಗಿ ಧರಿಸುವುದರಿಂದ ಅಲ್ಲಿ ಒತ್ತಡ ಉಂಟಾಗುತ್ತದೆ. ಕೆಲವೊಮ್ಮೆ ಈ ಬಟ್ಟೆಯು ಚರ್ಮವನ್ನು ಸಹ ಸುಲಿಯುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಚರ್ಮದ ಮೇಲೆ ಗುರುತುಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಶಾಖ, ತೇವಾಂಶ ಮತ್ತು ಶುಚಿತ್ವದ ಕೊರತೆಯಿಂದಾಗಿ ಸಮಸ್ಯೆಗಳು ಹೆಚ್ಚಾಗಬಹುದು. ಈ ಸಂದರ್ಭಗಳು ಕ್ಯಾನ್ಸರ್ ಗೆ ಕಾರಣವಾಗಬಹುದು. ವೈದ್ಯಕೀಯ ಭಾಷೆಯಲ್ಲಿ, ಈ ಚರ್ಮದ ಕೋಶಗಳನ್ನು ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಅದಾಗ್ಯೂ ಈ ರೋಗದ ಬಗ್ಗೆ ಚಿಂತಿಸಬೇಕಾಗಿಲ್ಲ. ಸರಿಯಾದ ಶುಚಿತ್ವವನ್ನು ಗಮನಿಸಿದರೆ ಇದನ್ನು ತಪ್ಪಿಸಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಈ ಕಾಯಿಲೆಯಿಂದ ಪಾರಾಗಬಹುದು. ಈ ರೋಗವನ್ನು ತಪ್ಪಿಸಲು ನೀವು ಸೀರೆ ಉಡುವುದನ್ನು ಬಿಡುವ ಅಗತ್ಯವಿಲ್ಲ. ಬದಲಾಗಿ ಅದನ್ನು ಧರಿಸುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ತುಂಬಾ ಬಿಗಿಯಾಗಿ ಕಟ್ಟದಿರುವುದರಿಂದ ಪಾರಾಗಬಹುದು.

    ಬಿಹಾರ, ಜಾರ್ಖಂಡ್‌ನಲ್ಲಿ ವೇಗವಾಗಿ ಹರಡುತ್ತಿದೆ:
    ಹೆಚ್ಚು ಬಿಸಿಲು ಇರುವ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಲ್ಲಿ ಇದರ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಈ ರೋಗವು ಮಹಿಳೆಯರಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು ವರ್ಷವಿಡೀ ಸೀರೆ ಉಡುತ್ತಾರೆ. ಸೊಂಟದ ಮೇಲೆ ಸೀರೆ ಕಟ್ಟಿಕೊಂಡ ಗುರುತುಗಳಿವೆ. ಪೆಟ್ಟಿಕೋಟಿನೊಂದಿಗೆ ಸೊಂಟದ ಮೇಲೆ ಧರಿಸಿರುವ ಹತ್ತಿ ನಾದದಿಂದ ಈ ಗುರುತು ಉಂಟಾಗುತ್ತದೆ. ಇದು ಸೊಂಟವನ್ನು ಉಜ್ಜುತ್ತದೆ. ಈ ಕಾರಣದಿಂದಾಗಿ ಸೊಂಟದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ಅಂತಿಮವಾಗಿ ಚರ್ಮದ ಕ್ಯಾನ್ಸರ್ ಆಗಿ ಬದಲಾಗುತ್ತದೆ ಎಂದು ತಜ್ಞ ವೈದ್ಯರೊಬ್ಬರು ವಿವರಿಸಿದ್ದಾರೆ.

    ಕಾಂಗ್ರಿ ಕ್ಯಾನ್ಸರ್:
    ಅದೇ ರೀತಿ ಕಾಶ್ಮೀರದಲ್ಲಿ ಕಾಂಗ್ರಿ ಕ್ಯಾನ್ಸರ್ ಎಂಬ ಚರ್ಮದ ಕ್ಯಾನ್ಸರ್ ಇದೆ. ಇಲ್ಲಿ ಚಳಿಗಾಲದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಬಟ್ಟೆಯೊಳಗೆ ಅಗ್ಗಿಸ್ಟಿಕೆ ರೀತಿಯ ಮಣ್ಣಿನ ಪಾತ್ರೆಯಲ್ಲಿ ಬೆಂಕಿಯೊಂದಿಗೆ ಇಲ್ಲಿ ಕುಳಿತುಕೊಳ್ಳುತ್ತಾರೆ. ಈ ಮೂಲಕ ಅವರು ಮೈಯನ್ನು ಬಿಸಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತಾರೆ. ಆದರೆ ಹೊಟ್ಟೆ ಮತ್ತು ತೊಡೆಗಳಿಂದ ಪಡೆದ ನಿರಂತರ ಶಾಖವು ಕ್ರಮೇಣ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಇದನ್ನು ಕಾಂಗ್ರಿ ಕ್ಯಾನ್ಸರ್‌ ಎಂದು ಕರೆಯುತ್ತಾರೆ.

    ವೃಷಣ ಕ್ಯಾನ್ಸರ್:
    ಅಷ್ಟೇ ಅಲ್ಲ ವೃಷಣ ಕ್ಯಾನ್ಸರ್ ಕೂಡ ಬೆಳಕಿಗೆ ಬಂದಿದೆ. ತುಂಬಾ ಬಿಗಿಯಾದ ಜೀನ್ಸ್ ಧರಿಸುವುದರಿಂದ ಈ ಕ್ಯಾನ್ಸರ್ ಬರುತ್ತಿದೆ. ಸಂಶೋಧನೆಯ ಪ್ರಕಾರ, ಗಂಟೆಗಟ್ಟಲೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಪುರುಷರ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆಯು ಸಹ ಕಡಿಮೆಯಾಗುತ್ತದೆ. ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು. ಪ್ರಸ್ತುತ ಈ ಸಂಶೋಧನೆಯಿಂದ ಯಾವುದೇ ನಿರ್ದಿಷ್ಟ ಫಲಿತಾಂಶಗಳು ಇನ್ನೂ ಬಂದಿಲ್ಲ.

    ಇಂತಹ ಬಟ್ಟೆ ಧರಿಸಲೇಬೇಡಿ:
    ಬಟ್ಟೆ ಧರಿಸಿದ ಬಳಿಕ ನಿಮ್ಮ ಚರ್ಮದ ಮೇಲೆ ಗುರುತುಗಳು ಕಾಣಿಸಿಕೊಂಡರೆ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹಾಗೂ ಚರ್ಮವು ಉಜ್ಜಲು ಪ್ರಾರಂಭಿಸಿದರೆ ನೀವು ಧರಿಸಿದ ಬಟ್ಟೆ ತುಂಬಾ ಬಿಗಿಯಾಗಿದೆ ಎಂದು ಅರ್ಥ. ಈ ರೀತಿ ಕಂಡುಬಂದರೆ ಅಂತಹ ಬಟ್ಟೆಗಳನ್ನು ಧರಿಸಲೇಬೇಡಿ. ಇನ್ನು ಒಳ ಉಡುಪುಗಳು ತುಂಬಾ ಬಿಗಿಯಾಗಿದ್ದರೆ ಧರಿಸಬೇಡಿ. ಜೊತೆಗೆ ಜಿಮ್‌ಗಾಗಿ ಧರಿಸಿರುವ ಬಿಗಿಯಾದ ಬಟ್ಟೆಗಳು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ ಅಂತಹ ಬಟ್ಟೆಗಳನ್ನು ಸೀಮಿತ ಸಮಯದವರೆಗೆ ಧರಿಸಲಾಗುತ್ತದೆ ಮತ್ತು ಆದ್ದರಿಂದ ಕಡಿಮೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಮುನ್ನೆಚ್ಚರಿಕೆ:
    ಯಾರಾದರೂ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರೆ ಅವರು ಸ್ವಲ್ಪ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಿಗಿಯಾದ ಒಳಉಡುಪುಗಳನ್ನು ಧರಿಸುವುದನ್ನು ತಪ್ಪಿಸಿದಂತೆ. ಇದನ್ನು ಹೊರತುಪಡಿಸಿ, ಬಿಗಿಯಾದ ಬಟ್ಟೆಗಳನ್ನು ಧರಿಸಿ ಜಿಮ್‌ಗೆ ಹೋಗಬೇಡಿ.

  • ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಹೊಸ  ಹೊಸ ಫೋಟೋ ಶೂಟ್ ಗಳಲ್ಲಿ ಅವರು ಭಾಗಿ ಆಗುತ್ತಲೇ ಇದ್ದಾರೆ. ನಿನ್ನೆಯಷ್ಟೇ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ರವಿಕೆ ರಹಿತ ಸೀರೆ (saree) ತೊಟ್ಟು ಸಖತ್ತಾಗಿಯೇ ಪೋಸ್ ನೀಡಿದ್ದಾರೆ. ಆ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪ್ರಿಯಾಮಣಿ ಪ್ರತಿಭಾವಂತ ನಟಿ. ಯಾವುದೇ ಅಡ್ಡದಾರಿ ತುಳಿಯದೇ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗಾಗಿ ಯಾವುದಕ್ಕೂ ಮುಲಾಜು ನೋಡದೇ ನೇರವಾಗಿ ಹೇಳುತ್ತಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್‌ನ ಕರಾಳ ಸತ್ಯವನ್ನು ರವೀಲ್ ಮಾಡಿದ್ದರು. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದರು. ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದರು.

    ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದರು. ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದರು. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

    ನೇರವಂತಿಕೆಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ಅವರು ತೊಡಗಿದ್ದಾರೆ. ಮೊನ್ನೆಯಷ್ಟೇ ದೇವಸ್ಥಾನವೊಂದಕ್ಕೆ ಮೆಕ್ಯಾನಿಕಲ್ ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಪ್ರಿಯಾಮಣಿ. ನಟಿಯ ನಡೆಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ

    ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆಯನ್ನು ಗಿಫ್ಟ್ ಆಗಿ ಪ್ರಿಯಾಮಣಿ ನೀಡಿದ್ದಾರೆ. ಇದರ ಗಾತ್ರ ಮತ್ತು ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

     

    ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ರೋಬೋ ಆನೆಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

  • ಕಾಂಗ್ರೆಸ್‍ನಿಂದ ಸೀರೆ ಹಂಚಿಕೆ ಆರೋಪ- ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕಿಡಿ

    ಕಾಂಗ್ರೆಸ್‍ನಿಂದ ಸೀರೆ ಹಂಚಿಕೆ ಆರೋಪ- ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕಿಡಿ

    ರಾಮನಗರ: ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಈ ಸಂಬಂಧ ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್, 3,700 ಡ್ರೆಸ್ ಮೆಟೀರಿಯಲ್, ಸೀರೆಗಳ ಅಕ್ರಮ ಸಂಗ್ರಹ ಮಾಡಲಾಗಿದೆ. 14 ಲಕ್ಷ ಮೌಲ್ಯದ ವಸ್ತಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಶಾಸಕ ಇಕ್ಬಾಲ್ ಹುಸೇನ್‍ಗೆ ಸಂಬಂಧಿಸಿದ ವಸ್ತುಗಳು ಎಂದು ದಾಖಲೆ ಸಮೇತ ನಿಖಿಲ್ ಫೋಟೋ ಬಿಡುಗಡೆ ಮಾಡಿದ್ದಾರೆ.

    ಕಳೆದ 15-20ದಿನದಿಂದ ಕುಕ್ಕರ್, ಸೀರೆ ಹಂಚಲಾಗ್ತಿದೆ ಅಂತ ಆರೋಪಿಸಿರುವ ನಿಖಿಲ್, ಈ ಬಗ್ಗೆ ನಿನ್ನೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರೂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದ್ಯಾ ಎಂದು ಜಿಲ್ಲಾಡಳಿತವನ್ನು ನಿಖಿಲ್ (Nikhil Kumaraswamy) ಪ್ರಶ್ನೆ ಮಾಡಿದ್ದಾರೆ.

    ಕಾರ್ಯಕರ್ತರಿಗೆ ನಿಖಿಲ್ ಭರವಸೆ: ರಾಜ್ಯ ಚುನಾವಣಾ ಆಯೋಗದವರೇ ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಆಗ್ತಿದೆ. ಅಲ್ಲದೇ ಈ ಕುರಿತು ಇಂದು ನಾನು ಚುನಾವಣಾ ಆಯೋಗಕ್ಕೆ ದೂರು ನೀಡ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುವುದಾಗಿ ನಿಖಿಲ್ ಭರವಸೆ ನೀಡಿದರು.

    ಬಡವರ ಪಾಲಿನ ದೇವರು ಮಂಜುನಾಥ್: ಡಾ.ಮಂಜುನಾಥ್ (Dr C.N Manjunath) ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಬಡವರ ಪಾಲಿನ ದೇವರಾಗಿದ್ದಾರೆ. ಅಂತವರನ್ನ ಕಾಂಗ್ರೆಸ್ ಶಾಸಕರು ಟೀಕಿಸ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರು ಡಾ.ಮಂಜುನಾಥ್ ಗೆ ರಾಜಕೀಯ ತೆವಲು ಅಂದಿದ್ದಾರೆ. ತೆವಲು ಎನ್ನುವ ಪದದ ಅರ್ಥ ಗೊತ್ತಾ ನಿಮಗೆ..? ರಾಮನಗರ ಶಾಸಕರ ಪದ ಬಳಕೆಯನ್ನೂ ನೋಡಿದ್ದೇನೆ. ನಿಮ್ಮ ಎಲ್ಲಾ ವಿಚಾರಗಳೂ ನನಗೆ ಗೊತ್ತು. ನೀವು ಎಲ್ಲೆಲ್ಲಿ ಹಣ ಇಟ್ಟಿದ್ದೀರಿ ಎಂಬುದು ಗೊತ್ತು. ನಾನು ಕೂಡಾ ಇದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ನನ್ನ ಸೋಲಿಸಲು ನೀವು ಏನೇನು ಮಾಡಿದ್ರಿ ಎಲ್ಲಾ ಗೊತ್ತು. ಗಿಫ್ಟ್ ಕಾರ್ಡ್ ಕೊಟ್ಟು ಮತದಾರರನ್ನ ಯಾಮಾರಿಸಿದ್ದೀರಿ. ಮುಗ್ಧ ಜನರಿಗೆ ಆಮಿಷ ತೋರಿಸಿ ಎಲೆಕ್ಷನ್ ಮಾಡಿದ್ದೀರಿ. ಈಗ ಸಂಕ್ರಾಂತಿ ಗಿಫ್ಟ್ ಅಂತ ಮಾರ್ಚ್ ತಿಂಗಳಲ್ಲಿ ಕುಕ್ಕರ್ ಹಂಚುತ್ತಿದ್ದೀರಿ. ಕೂಡಲೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ರಾಮನಗರಕ್ಕೆ ಕಾಲಿಡಲ್ಲ: ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಹೆಚ್ಚಾಗ್ತಿದೆ. ನಮ್ಮ ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಲಿಲ್ಲ ಅಂದ್ರೆ ಕೇಸ್ ಹಾಕ್ತೀವಿ ಅಂತ ಹೆದರಿಸ್ತಿದ್ದೀರಿ. ನಿಮ್ಮ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ದಿನ ನಡೆಯಲ್ಲ. ನಮ್ಮ ಅಧಿಕಾರವಧಿಯಲ್ಲಿ ನಾವು ದುರುಪಯೋಗ ಮಾಡಿಕೊಂಡಿಲ್ಲ. ಒಬ್ಬ ಅಧಿಕಾರಿ, ಪೊಲೀಸರಿಗೆ ಫೋನ್ ಮಾಡಿ ಒತ್ತಡ ಹಾಕಿಲ್ಲ. ಹಾಗೇನಾದ್ರೂ ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರೆ ಇನ್ಮುಂದೆ ರಾಮನಗರಕ್ಕೆ ಕಾಲಿಡಲ್ಲ ಎಂದು ನಿಖಿಲ್ ಕಿಡಿಕಾರಿದರು.

  • ‘ಕೂರ್ಗ್’ನಲ್ಲಿ ಸೀರೆ ಶೂಟಿಂಗ್ ಶುರು ಮಾಡಿದ ರಾಮ್ ಗೋಪಾಲ್ ವರ್ಮಾ

    ‘ಕೂರ್ಗ್’ನಲ್ಲಿ ಸೀರೆ ಶೂಟಿಂಗ್ ಶುರು ಮಾಡಿದ ರಾಮ್ ಗೋಪಾಲ್ ವರ್ಮಾ

    ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂರ್ಗ್ (Coorg) ನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಹೊಸ ಸೀರೆ ಸಿನಿಮಾದ ಹಾಡಿನ ಚಿತ್ರೀಕರಣವನ್ನು (Shooting) ಅವರು ಕೊಡಗಿನಲ್ಲಿ ಮಾಡುತ್ತಿದ್ದು, ಆ ಸಣ್ಣದೊಂದು ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೂರ್ಗ್ ಅದ್ಭುತ ಲೋಕೇಷನ್ ಎಂದು ಹಾಡಿ ಹೊಗಳಿದ್ದಾರೆ.

    ವರ್ಮಾ ಈ ಹಿಂದೆ ‘ಸೀರೆ’ (Saree) ಹೆಸರಿನ ಸಿನಿಮಾವೊಂದನ್ನು ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಮಲಯಾಳಿ ನಟಿ ಆರಾಧ್ಯ ದೇವಿ (Aradhya Devi) ಅಲಿಯಾಸ್ ಶ್ರೀಲಕ್ಷ್ಮಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಯಾವಾಗ ಶೂಟಿಂಗ್ ಶುರುವಾಗಲಿದೆ ಎಂದು ಮಾಹಿತಿ ನೀಡಿರಲಿಲ್ಲ. ಈಗ ಚಿತ್ರೀಕರಣ ನಡೆಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.

    ಈ ಸಿನಿಮಾದ ಶೂಟಿಂಗ್ ಗಾಗಿ ಭರ್ಜರಿಯ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ ವರ್ಮಾ. ಚಿತ್ರೀಕರಣಕ್ಕೂ ಮುನ್ನ  ನಾಯಕಿಯು  ಬದಲಾದ ಪರಿಗೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಾಯಕಿ ಭಾರೀ ಬದಲಾವಣೆ ಆಗಿರುವ ಕುರಿತು ಮೊನ್ನೆಯಷ್ಟೇ ಮಾಹಿತಿ ನೀಡಿದ್ದರು ರಾಮ್ ಗೋಪಾಲ್ ವರ್ಮಾ.

    ಆರಾಧ್ಯ ದೇವಿಯ ಹೊಸ ಫೋಟೋ ಶೂಟ್ ಅನ್ನು ಹಂಚಿಕೊಂಡಿದ್ದ ಆರ್.ಜಿ.ವಿ ನಟಿಯ ಬದಲಾವಣೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅದಕ್ಕಾಗಿ ಅವರು ಮಾಡಿಕೊಂಡಿದ್ದ ತಯಾರಿಯನ್ನು ಹಾಡಿ ಹೊಗಳಿದ್ದರು. ಜೊತೆಗೆ ಕ್ಯಾಮೆರಾದಲ್ಲಿ ಆಕೆಯನ್ನು ಸೆರೆ ಹಿಡಿದವರನ್ನು ವರ್ಮಾ ನೆನೆದಿದ್ದರು. ಆರಾಧ್ಯ ಫೋಟೋ ಶೂಟ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

     

    ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯ ಹಿಂದೆ ಬಿದ್ದಿದ್ದಾರೆ. ನಿತ್ಯವೂ ಅಪ್ಸರಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುವ ವರ್ಮಾ, ಅದಕ್ಕೊಂದು ಕ್ಯಾಪ್ಷನ್ ಕೊಟ್ಟು ಕುತೂಹಲ ಮೂಡಿಸುತ್ತಿದ್ದಾರೆ.

  • ‘ಸೀರೆ’ ಹಿಂದೆ ಬಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

    ‘ಸೀರೆ’ ಹಿಂದೆ ಬಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

    ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈ ಹಿಂದೆ ‘ಸೀರೆ’ (Saree) ಹೆಸರಿನ ಸಿನಿಮಾವೊಂದನ್ನು ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಮಲಯಾಳಿ ನಟಿ ಆರಾಧ್ಯ ದೇವಿ (Aradhya Devi) ಅಲಿಯಾಸ್ ಶ್ರೀಲಕ್ಷ್ಮಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ಈ ಸಿನಿಮಾದ ಶೂಟಿಂಗ್ ಗೆ ಸಿದ್ಧ ಮಾಡಿಕೊಂಡಿದ್ದಾರೆ ವರ್ಮಾ. ಅದಕ್ಕೂ ಮೊದಲ ನಾಯಕಿಯು  ಬದಲಾದ ಪರಿಗೆ ಮೆಚ್ಚಿಕೊಂಡಿದ್ದಾರೆ.

    ಆರಾಧ್ಯ ದೇವಿಯ ಹೊಸ ಫೋಟೋ ಶೂಟ್ ಅನ್ನು ಹಂಚಿಕೊಂಡಿರುವ ಆರ್.ಜಿ.ವಿ ನಟಿಯ ಬದಲಾವಣೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದಕ್ಕಾಗಿ ಅವರು ಮಾಡಿಕೊಂಡಿದ್ದ ತಯಾರಿಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಕ್ಯಾಮೆರಾದಲ್ಲಿ ಆಕೆಯನ್ನು ಸೆರೆ ಹಿಡಿದವರನ್ನು ವರ್ಮಾ ನೆನೆದಿದ್ದಾರೆ. ಆರಾಧ್ಯ ಫೋಟೋ ಶೂಟ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

    ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯ ಹಿಂದೆ ಬಿದ್ದಿದ್ದಾರೆ. ನಿತ್ಯವೂ ಅಪ್ಸರಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುವ ವರ್ಮಾ, ಅದಕ್ಕೊಂದು ಕ್ಯಾಪ್ಷನ್ ಕೊಟ್ಟು ಕುತೂಹಲ ಮೂಡಿಸುತ್ತಿದ್ದಾರೆ.

    ಈ ರಾಮ್ ಗೋಪಾಲ್ ವರ್ಮಾಗೂ ಮತ್ತು ಅಪ್ಸರಾ (Apsara Rani) ನಡುವಿನ ಸಂಬಂಧವೇನು ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಿತ್ಯವೂ ಅಪ್ಸರಾ ಧ್ಯಾನವನ್ನೇ ವರ್ಮಾ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಆದರೆ, ಅಪ್ಸರಾರ ಹೊಸ ಫೋಟೋಗಳನ್ನು (Photoshoot) ಆರ್.ಜಿ.ವಿ ಪೋಸ್ಟ್ ಮಾಡುತ್ತಲೇ ಇದ್ದಾರೆ.

    ಅಪ್ಸರಾ ಜೊತೆ ವರ್ಮಾ ಸಲುಗೆಯಿಂದ ಇರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅಪ್ಸರಾ ರಾಣಿ ವಿಚಿತ್ರ ಪ್ರಶ್ನೆಯೊಂದನ್ನು ವರ್ಮಾಗೆ ಕೇಳಿದ್ದರು. ಅದಕ್ಕೆ ರಾಮ್ ಗೋಪಾಲ್ ವರ್ಮಾ ಸಖತ್ತಾಗಿಯೇ ಉತ್ತರ ಕೊಟ್ಟಿದ್ದರು.

     

    ಅಲ್ಲದೇ ಅಪ್ಸರಾ ರಾಣಿ ಈ ಹಿಂದೆ ಒಂದು ಹಾಟ್ ಹಾಟ್ ಆಗಿರುವ ವಿಡಿಯೋವನ್ನು ಟ್ವಿಟ್ ಮಾಡಿದ್ದರು. ಪಡ್ಡೆಗಳ ನಿದ್ದೆಗೆಡಿಸುವಂತಹ ಆ ವಿಡಿಯೋಗೆ ರಾಮ್ ಗೋಪಾಲ್ ವರ್ಮಾ ಅಷ್ಟೇ ಸುಂದರವಾಗಿ ಪದಗಳನ್ನು ಪೋಣಿಸಿದ್ದರು. ‘ಡೇಂಜರೆಸ್ ಹುಡುಗಿಯ ನೋಟವು, ಅಪಾಯಕಾರಿ ಅಲ್ಲವೆಂದು ಹೇಳುತ್ತದೆ’ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದರು.

  • ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

    ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರವಿಕೆ ಧರಿಸದೇ ಕಾರ್ಯಕ್ರಮಕ್ಕೆ ಬಂದ ಚೈತ್ರಾ: ನಟಿಯ ನಡೆಗೆ ನೆಟ್ಟಿಗರು ಗರಂ

    ರವಿಕೆ ಧರಿಸದೇ ಕಾರ್ಯಕ್ರಮಕ್ಕೆ ಬಂದ ಚೈತ್ರಾ: ನಟಿಯ ನಡೆಗೆ ನೆಟ್ಟಿಗರು ಗರಂ

    ಮ್ಮ ಸಿನಿಮಾ ರಿಲೀಸ್ ಇವೆಂಟ್ ವೇಳೆ ರವಿಕೆ ಧರಿಸದೇ ಬಂದ ಮಲಯಾಳಂ ನಟಿ ಚೈತ್ರಾ ಪ್ರವೀಣ್ (Chaitra Praveen) ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಜನರ ಮನಸ್ಸನ್ನು ಕೆರಳಿಸುವುದಕ್ಕಾಗಿ ಅವರು ಆ ರೀತಿಯಲ್ಲಿ ಬಂದಿದ್ದಾರೆ ಎಂದು ಕೆಲವರು ದೂರಿದ್ದಾರೆ. ಕಾಸ್ಟ್ಯೂಮ್ ವಿಷಯದಲ್ಲಿ ಅವರು ಪದೇ ಪದೇ ಹೀಗೆಲ್ಲ ಮಾಡುತ್ತಿದ್ದಾರೆ ಎಂದೂ ಆರೋಪ ಮಾಡಿದ್ದಾರೆ.

    ಸದ್ಯ ಚೈತ್ರಾ ನಟನೆಯ ಎಲ್.ಎಲ್.ಬಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂಬಂಧ ಅದ್ದೂರಿಯಾಗಿ ಇವೆಂಟ್ ವೊಂದನ್ನು ಆಯೋಜನೆ ಮಾಡಲಾಗಿತ್ತು. ಆ ವೇಳೆಯಲ್ಲಿ ಚೈತ್ರಾ ಕರಿ ಬಣ್ಣದ ಸೀರೆಯುಟ್ಟಿದ್ದರು. ಜೊತೆಗೆ ಮೈಬಣ್ಣದ ರವಿಕೆ ಹಾಕಿದ್ದರು. ಹೀಗಾಗಿ ಸಖತ್ ಹಾಟ್ ಹಾಟ್ ಆಗಿಯೇ ಕಂಡರು.

    ಇವೆಂಟ್ ವೇಳೆ ಅವರು ಡಾನ್ಸ್ ಮಾಡಿದಾಗ ಸೀರೆ ಜಾರಿದ ಪ್ರಸಂಗವೂ ನಡೆದಿದೆ. ಈ ಕುರಿತಾಗಿಯೂ ನೆಟ್ಟಿಗರು ನಟಿಗೆ ಚಳಿ ಬಿಡಿಸಿದ್ದಾರೆ. ಬೇಕು ಅಂತಾನೇ ಹೀಗೆಲ್ಲ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

     

    ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚೈತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರ ತೆಗೆದುಕೊಳ್ಳುವಂತಹ ಯಾವ ಉದ್ದೇಶವೂ ತನಗೆ ಇಲ್ಲ. ನನ್ನ ಅಮ್ಮ ಇಷ್ಟಪಟ್ಟು ಹಾಕಿದ ಸೀರೆ ಅದು. ನನಗೆ ಸೀರೆ ಎಂದರೆ ಇಷ್ಟ. ಮೈ ತೋರಿಸುವಂತಹ ಯಾವುದೇ ಖಯಾಲಿ ತಮಗೆ ಇಲ್ಲವೆಂದು ತಿರುಗೇಟು ನೀಡಿದ್ದಾರೆ.

  • ಅಯೋಧ್ಯೆಯಲ್ಲಿ ಮಿಂಚಿದ ಆಲಿಯಾ ಭಟ್ : ಸೀರೆ ಮೇಲೆ ಅಭಿಮಾನಿಗಳ ಕಣ್ಣು

    ಅಯೋಧ್ಯೆಯಲ್ಲಿ ಮಿಂಚಿದ ಆಲಿಯಾ ಭಟ್ : ಸೀರೆ ಮೇಲೆ ಅಭಿಮಾನಿಗಳ ಕಣ್ಣು

    ನಿನ್ನ ಅಯೋಧ್ಯಯಲ್ಲಿ ನಡೆದ ರಾಮನ ಪ್ರಾಣ ಪತ್ರಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ನಾನಾ ಭಾಗಗಳಲ್ಲಿ ಕಲಾವಿದರು, ಗಣ್ಯರು ಆಗಮಿಸಿದ್ದರು. ನಾನಾ ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಇವರೆಲ್ಲರ ಪೈಕಿ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಸಖತ್ ವೈರಲ್ ಆಗಿದ್ದಾರೆ. ಅವರ ಧರಿಸಿದ್ದ ಸೀರೆ ಈಗ ರಾಮನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

    ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯಗೆ ಬಂದಿದ್ದ ಆಲಿಯಾ ಭಟ್, ಹನುಮಾನ್, ಭಗವಾನ್ ರಾಮ ಹಾಗೂ ರಾಮಸೇತು ಚಿತ್ರಗಳನ್ನು ಇರುವಂತಹ ಸೀರೆಯನ್ನು ಅವರು ಧರಿಸಿದ್ದರು. ಈ ಸೀರೆ ಈಗ ರಾಮನ ಅಭಿಮಾನಿಗಳನ್ನು ಸೆಳೆದಿದೆ. ಆಲಿಯಾ ಭಟ್ ಅವರ ರಾಮನ ಬಗೆಗಿನ ಭಕ್ತಿಯನ್ನು ಎಲ್ಲರೂ ಕೊಂಡಾಡಿದ್ದಾರೆ.

    ಒಂದು ಕಡೆ ಆಲಿಯಾ ವೈರಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಕನ್ನಡದಿಂದ ಹೋಗಿದ್ದ ರಿಷಬ್ ಶೆಟ್ಟಿ ಮತ್ತು ಪತ್ನಿ ಫೋಟೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರು ನಿನ್ನೆ ನಡೆದ (ಜ.22) ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಜೊತೆ ಭಾಗಿಯಾಗಿದ್ದಾರೆ. ಈ ಕುರಿತ ಸುಂದರ ಫೋಟೋವನ್ನು ರಿಷಬ್ ಹಂಚಿಕೊಂಡಿದ್ದಾರೆ.

    500 ವರ್ಷಗಳ ನಂತರ ಎಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದಲ್ಲಿ ಭಾಗಿಯಾಗಿರೋದಕ್ಕೆ ರಿಷಬ್ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

     

    ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಎಂದು ಶೀರ್ಷಿಕೆ ಕೊಟ್ಟು ರಾಮಮಂದಿರದ ಮುಂದೆ ನಿಂತು ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ರಿಷಬ್ ದಂಪತಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕೂಡ ಭೇಟಿಯಾಗಿದ್ದಾರೆ.