Tag: sardar 2

  • ತಮಿಳು ನಟ ಕಾರ್ತಿಗೆ ಆಶಿಕಾ ರಂಗನಾಥ್ ಜೋಡಿ

    ತಮಿಳು ನಟ ಕಾರ್ತಿಗೆ ಆಶಿಕಾ ರಂಗನಾಥ್ ಜೋಡಿ

    ನ್ನಡದ ನಟಿ ಆಶಿಕಾ ರಂಗನಾಥ್‌ಗೆ (Ashika Ranganath) ಇಂದು (ಆ.5) ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ತಮಿಳಿನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿರುವ ಆಶಿಕಾ, ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ತಮಿಳಿನ ಸ್ಟಾರ್ ನಟ ಕಾರ್ತಿ (Karthi) ಜೊತೆ ನಟಿ ಡ್ಯುಯೆಟ್ ಹಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸರ್ದಾರ್ 2ಗೆ (Sardar 2) ಮತ್ತೋರ್ವ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಸ್ವತಃ ಆಶಿಕಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ನನ್ನ ಮುಂದಿನ ಸಿನಿಮಾದ ಅನೌನ್ಸ್‌ಮೆಂಟ್. ತಮಿಳಿನಲ್ಲಿ ನನ್ನ 3ನೇ ಸಿನಿಮಾವಾಗಿದ್ದು, ಕಾರ್ತಿ ಸರ್ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ನಿರ್ದೇಶಕ ಪಿ.ಎಸ್ ಮಿತ್ರನ್ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ. ಥ್ರಿಲಿಂಗ್ ಆಗಿರುವ ಕಥೆಯಲ್ಲಿ ಭಾಗವಾಗಿರೋದಕ್ಕೆ ಖುಷಿಯಾಗಿದ್ದೇನೆ ಎಂದು ನಟಿ ತಿಳಿಸಿದ್ದಾರೆ. ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ತಂಡಕ್ಕೂ ನಟಿ ಧನ್ಯವಾದ ತಿಳಿಸಿದ್ದಾರೆ.

    ಕಾರ್ತಿ ಜೊತೆ ಈ ಸಿನಿಮಾದಲ್ಲಿ ಆಶಿಕಾ, ಮಾಳವಿಕಾ ಮೋಹನನ್, ಎಸ್ ಸೂರ್ಯ ಸೇರಿದಂತೆ ಹಲವರು ನಟಿಸಲಿದ್ದಾರೆ. ಒಟ್ನಲ್ಲಿ ಚುಟು ಚುಟು ಸುಂದರಿ ಈಗ ಕಾಲಿವುಡ್‌ನಲ್ಲಿ ನೆಲೆ ನಿಲ್ಲುವತ್ತ ಹೆಜ್ಜೆ ಹಾಕ್ತಿದ್ದಾರೆ.

  • ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ನ್ನಡದ ನಟಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ ಅಂಗಳದ ಸೆನ್ಸೇಷನ್ ಹೀರೋಯಿನ್ ಆಗಿದ್ದಾರೆ. ಹೀಗಿರುವಾಗ ತಮಿಳಿನ ಸಿನಿಮಾವೊಂದರ ವಿಚಾರವಾಗಿ ನಟಿ ಸದ್ದು ಮಾಡುತ್ತಿದ್ದಾರೆ. ಕಾರ್ತಿ ನಟನೆಯ ಚಿತ್ರವೊಂದನ್ನು ನಟಿ ತಿರಸ್ಕರಿಸಿದ್ದಾರೆ.

    ‘ಕಿಸ್’ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಸೆಟಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮಿಳು ನಟ ಕಾರ್ತಿ (Karthi) ನಟನೆಯ ‘ಸರ್ದಾರ್ 2’ (Sardar 2) ಚಿತ್ರವನ್ನು ಶ್ರೀಲೀಲಾ ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

    ‘ಸರ್ದಾರ್ 2’ ಸಿನಿಮಾದಲ್ಲಿ ಇಬ್ಬರೂ ನಾಯಕಿಯರಿದ್ದರು. ಸಿಂಗಲ್ ಹೀರೋಯಿನ್ ಆಗಿ ತೆಲುಗಿನಲ್ಲಿ ಸೈ ಎನಿಸಿಕೊಂಡಿದ್ದಾರೆ. ಆದರೆ ತಮಿಳಿನಲ್ಲಿ ಮತ್ತೊರ್ವ ನಟಿಯ ಜೊತೆ ತೆರೆಹಂಚಿಕೊಳ್ಳಲು ಶ್ರೀಲೀಲಾ ಒಪ್ಪದೇ ಚಿತ್ರವನ್ನು ಕೈಬಿಟ್ಟಿದ್ದಾರೆ.

    ಸಕ್ಸಸ್‌ಫುಲ್ ನಟಿ ಎನಿಸಿಕೊಂಡಿರುವ ಶ್ರೀಲೀಲಾಗೆ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದಿದ್ದಾರೆ. ಕಥೆ ಮತ್ತು ಪಾತ್ರಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಅಂದಹಾಗೆ, ರಾಬಿನ್‌ಹುಡ್‌, ಪವನ್‌ ಕಲ್ಯಾಣ್‌ ಜೊತೆಗಿನ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ 2 ಚಿತ್ರಗಳನ್ನು ನಟಿ ಒಪ್ಪಿದ್ದಾರೆ.

  • ‘ಸರ್ದಾರ್ 2’ ಸೆಟ್‌ನಲ್ಲಿ ಅವಘಡ- 20 ಅಡಿ ಮೇಲಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು

    ‘ಸರ್ದಾರ್ 2’ ಸೆಟ್‌ನಲ್ಲಿ ಅವಘಡ- 20 ಅಡಿ ಮೇಲಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು

    ಮಿಳು ನಟ ಕಾರ್ತಿ (Karthi) ನಟನೆಯ ‘ಸರ್ದಾರ್ 2’ (Sardar 2) ಸಿನಿಮಾ ಸೆಟ್‌ನಲ್ಲಿ ಅವಘಡ ನಡೆದಿದ್ದು, ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ (Stuntman)  ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಜು.15ರಂದು ಚೆನ್ನೈ ಸಾಲಿಗ್ರಾಮಂದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ‘ಸರ್ದಾರ್ 2’ ಶೂಟಿಂಗ್ ಆರಂಭಿಸಲಾಗಿತ್ತು. ಕಾರ್ತಿ ನಟನೆಯ ಈ ಸಿನಿಮಾ ಸಾಹಸ ದೃಶ್ಯ ಶೂಟಿಂಗ್ ಮಾಡುವ ವೇಳೆ, 20 ಅಡಿ ಎತ್ತರದಿಂದ ಕುಸಿದು ಬಿದ್ದು, 54 ವರ್ಷದ ಎಜುಮಲೈ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಸ್ಥಳದಲ್ಲಿದ್ದ ಕಲಾವಿದರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಎಜುಮಲೈ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಿತ್ರತಂಡ ಇದೀಗ ಸಂತಾಪ ಸೂಚಿಸಿದೆ.