Tag: Sarayu River

  • ಮಾಘ ಪೂರ್ಣಿಮೆ; ಪುಣ್ಯಸ್ನಾನಕ್ಕಾಗಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಜನಸಾಗರ

    ಮಾಘ ಪೂರ್ಣಿಮೆ; ಪುಣ್ಯಸ್ನಾನಕ್ಕಾಗಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಜನಸಾಗರ

    ಲಕ್ನೋ: ಇಂದು ಮಾಘ ಪೂರ್ಣಿಮೆಯ (Magh Purnima) ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸಾವಿರಾರು ಮಂದಿ ಭಕ್ತರು ಪಣ್ಯಸ್ನಾನಕ್ಕಾಗಿ ಆಗಮಿಸಿದ್ದಾರೆ.

    ಪವಿತ್ರ ಸ್ನಾನ ಮಾಡಲು ಅಯೋಧ್ಯೆಯ ಸರಯೂ ನದಿಗೆ  (Saryu River)  ಆಗಮಿಸಿದ ಭಕ್ತರೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನನಗೆ ಇಂದು ತುಂಬಾ ಸಂತೋಷವಾಗುತ್ತಿದೆ. ನಾವು ಕಾಶಿಯಿಂದ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಮಾಡಿರುವ ವ್ಯವಸ್ಥೆ ಕೂಡ ಚೆನ್ನಾಗಿದೆ ಎಂದಿದ್ದಾರೆ.

    ಮಾಘ ಪೂರ್ಣಿಮೆಯನ್ನು ಹುಣ್ಣಿಮೆಯ ದಿನ ಎಂದೂ ಕರೆಯುತ್ತಾರೆ. ಈ ದಿನ ಭಕ್ತರು ಪ್ರಾರ್ಥನೆಯ ಮೂಲಕ ಚಂದ್ರ ದೇವರಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ. ಹೀಗಾಗಿ ಇಂದು ಭಕ್ತರು, ಗಂಗಾ ನದಿಯಂತಹ (Ganga River) ಪವಿತ್ರ ನದಿಗಳ ಪವಿತ್ರ ನೀರಿನಲ್ಲಿ ಮುಳುಗುವುದು. ಈ ಆಚರಣೆಯು ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧೀಕರಿಸುತ್ತದೆ. ಈ ಮೂಲಕ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಗೊಳಿಸುತ್ತದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಉತ್ತರ ಕಾಶ್ಮೀರದಲ್ಲಿ ‘ಕನ್ನಡ’ ಬಾವುಟ ಹಾರಿಸಿದ ಧಾರವಾಡದ ಯುವತಿ

    ದಿನದ ವಿಶೇಷವೇಶವೇನು..?: ಭಕ್ತರು ವಿಶೇಷವಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರ ಜೊತೆಗೆ ಭಕ್ತರು, ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವ ಮೂಲಕ ದಾನ ಕಾರ್ಯಗಳಲ್ಲಿ ತೊಡಗುತ್ತಾರೆ. ಬಡವರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆಯನ್ನು ಒದಗಿಸಲು ಇದು ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ. ಸತ್ಯನಾರಾಯಣ ವ್ರತವನ್ನು ಆಚರಿಸುವುದು ಮತ್ತು ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುವುದು. ಜೊತೆಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಈ ದಿನದ ವಿಶೇಷ ಸಂಪ್ರದಾಯವಾಗಿದೆ.

    ಒಟ್ಟಿನಲ್ಲಿ ಪುಣ್ಯಸ್ನಾನದ ಬಳಿಕ ಭಕ್ತರು ರಾಮಮಂದಿರಕ್ಕೆ (Ayodhya Ram Mandir) ತೆರಳಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಈ ಮೂಲಕ ಅಯೋಧ್ಯೆ ರಾಮಮಂದಿರದಲ್ಲಿಯೂ ಭಕ್ತರ ದಂಡೇ ಜಮಾಯಿಸಿದೆ.

  • ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

    ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

    – ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು
    – ಕರ್ನಾಟಕದಲ್ಲಿಯೂ ರಾಮಜ್ಯೋತಿ ಬೆಳಗಿಸಿದ ಭಕ್ತರು

    ಅಯೋಧ್ಯೆ: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪಟ್ಟಾಭಿಷೇಕ ನೆರವೇರಿದೆ. ಆರಾಧ್ಯ ದೈವ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನನ್ನ ಕಣ್ತುಂಬಿಕೊಂಡು ಕೋಟ್ಯಂತರ ಭಕ್ತರು ಧನ್ಯರಾಗಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

    ರಾಮಮಂದಿರ ಉದ್ಘಾಟನೆ ವಿಜಯದ ಇಡೀ ದೇಶಾದ್ಯಂತ ನೆಲೆಸಿರುವ ರಾಮಭಕ್ತರು, ಪ್ರತಿ ಮನೆ-ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಖ್ಯಾತ ನಟ-ನಟಿಯರು ರಾಮ ಜ್ಯೋತಿ (Ram Jyoti) ಬೆಳಗಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ದೀಪ ಬೆಳಗಿಸುವ ಮೂಲಕ ದೇಶದ ಜನರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್

    ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು:
    ಅಯೋಧ್ಯೆಯ ಸರಯೂ ನದಿ ತೀರದ ರಾಮ್​ ಕಿ ಪಾಡಿಯಲ್ಲಿ ಸರಿಸುಮಾರು 10 ಲಕ್ಷ ದೀಪ ಬೆಳಗುತ್ತಿದ್ದು, ಇದರ ನಡುವೆ ಲೇಸರ್​​ ಲೈಟ್​ ಶೋಗಳೂ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ. ಇದರೊಂದಿಗೆ ಕರ್ನಾಟಕದಲ್ಲಿಯೂ ಶ್ರೀರಾಮನ ಭಕ್ತರು ತಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ದೀಪೋತ್ಸವ ನೆರವೇರಿಸಿದ್ದಾರೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಪ್ರತಿ ಮನೆ ಮನೆಗಳಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಕರೆ ನೀಡಿದ್ದರು. ಹೊಸ ಯುಗದ ಆಗಮನದ ಸಂಕೇತವಾಗಿ ಸಂಜೆ ನಿಮ್ಮ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸಿ ಶ್ರೀರಾಮನಲ್ಲಿ ಪ್ರಾರ್ಥಿಸಿ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ

    ಅಯೋಧ್ಯೆ ತುಂಬ ರಾಮ ನಾಮ ಸ್ಮರಣೆ: ದೇಶದೆಲ್ಲೆಡೆ ರಾಮಾಲಯ (ರಾಮಮಂದಿರ) ಆರಂಭೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ. ಅಯೋಧ್ಯೆಯ ತುಂಬಾ ರಾಮ ನಾಮ ಸ್ಮರಣೆ ಮಾರ್ದನಿಸಿದೆ. ಎಲ್ಲಿ ನೋಡಿದರೂ ರಾಮಧ್ವಜ, ರಾಮಜ್ಯೋತಿ, ಕೇಸರಿ ಶಾಲು ಧರಿಸಿದ ಭಕ್ತಗಣವೇ ಕಾಣುತ್ತಿದೆ.  ರಾಮಭಜನೆ, ಭಗವದ್ಗೀತೆ ಪಠಣ, ಪೂಜೆ ಪುನಸ್ಕಾರಗಳು ದೇಶದ ಮೂಲೆಮೂಲೆಯಲ್ಲಿ ನಡೆದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಮೆರಿಕ, ಪ್ಯಾರಿಸ್‌, ಮೆಕ್ಸಿಕೋ ಹಾಗೂ ರಷ್ಯಾ ದೇಶಗಳಲ್ಲಿಯೂ ಭಾರತೀಯ ಮೂಲದ ರಾಮಭಕ್ತರು ಈ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.