Tag: sarath kumar

  • ಹೆಂಡತಿ ಗೆಲ್ಲಲು ಉರುಳು ಸೇವೆ ಮಾಡಿದ ನಟ ಶರತ್ ಕುಮಾರ್

    ಹೆಂಡತಿ ಗೆಲ್ಲಲು ಉರುಳು ಸೇವೆ ಮಾಡಿದ ನಟ ಶರತ್ ಕುಮಾರ್

    ತಮಿಳಿನ ಹೆಸರಾಂತ ನಟ ಶರತ್ ಕುಮಾರ್ (Radhika SarathKumar) ಪತ್ನಿ, ನಟಿ ರಾಧಿಕಾ ಶರತ್ ಕುಮಾರ್ ಈ ಬಾರಿ ತಮಿಳು ನಾಡಿನ ವಿರುದುನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ (Election) ಸ್ಪರ್ಧಿಸಿದ್ದಾರೆ. ಇಂದು ಚುನಾವಣೆ ಫಲಿತಾಂಶ ಘೋಷಣೆ ಆಗಲಿದ್ದು, ಅದಕ್ಕೂ ಮುನ್ನ ನಟ ಶರತ್ ಕುಮಾರ್ ತನ್ನ ಪತ್ನಿ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ.

     

    ವಿರುದುನಗರದ ಪರಾಶಕ್ತಿ ಮಾರಿಯಮ್ಮ ದೇವಸ್ಥಾನಕ್ಕೆ ನಿನ್ನೆ ಆಗಮಿಸಿದ್ದ ಶರತ್ ಕುಮಾರ್ (Sarath Kumar) , ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಪ್ರದಕ್ಷಣೆ ಹಾಕಿದರು. ಆಮೇಲೆ ಉರುಳು ಸೇವೆ ಮಾಡಿದ್ದಾರೆ. ತಮ್ಮ ಪತ್ನಿಯ ಗೆಲುವಿಗೆ ಪ್ರಾರ್ಥನೆ ಮಾಡಿದ್ದಾರೆ. ವಿರುದುನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.

     

    ರಾಧಿಕಾ ಶರತ್‌ಕುಮಾರ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರೆ, ಇತ್ತೀಚೆಗಷ್ಟೇ ನಿಧನರಾದ ಕ್ಯಾಪ್ಟನ್ ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಎಐಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಮಾಣಿಕಂ ಟ್ಯಾಗೋರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

  • ಉಪೇಂದ್ರ ಅಣ್ಣನ ಮಗ ಈಗ ಹಂಟರ್

    ಉಪೇಂದ್ರ ಅಣ್ಣನ ಮಗ ಈಗ ಹಂಟರ್

    ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ (Niranjan Sudhindra) ನಾಯಕನಾಗಿ ನಟಿಸುತ್ತಿರುವ ‘ಹಂಟರ್’ ಚಿತ್ರದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ‘ಹಂಟರ್’ (Hunter) ಬಗ್ಗೆ ಮಾತನಾಡಿದರು.

    ನಮ್ಮ ತ್ರಿವಿಕ್ರಮ್ ಸಿನಿಮಾಸ್ ಲಾಂಛನದಲ್ಲಿ ‘ಹಂಟರ್’ ಸಿನಿಮಾ ನಿರ್ಮಾಣವಾಗುತ್ತಿದೆ.  ನಿರಂಜನ್ ಸುಧೀಂದ್ರ ಈ ಚಿತ್ರದ ನಾಯಕ. ಸೌಮ್ಯ ಮೆನನ್ ನಾಯಕಿ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್, ಸಾಧುಕೋಕಿಲ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಪ್ಪತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ ತಿಳಿಸಿದರು. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಸೀಜರ್ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಹಂಟರ್. ಇದೊಂದು ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್. ಈ ಚಿತ್ರಕ್ಕಾಗಿ ಎಪ್ಪತ್ತೈದು ಕೆಜಿ ತೂಕವಿದ್ದ ನಿರಂಜನ್, ಮತ್ತಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಗಣೇಶ್ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್  ಅವರಂತಹ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಚಂದನ್ ಶೆಟ್ಟಿ ಹಂಟರ್  ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.  ಜೂನ್ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ ಎನ್ನುತ್ತಾರೆ ನಿರ್ದೇಶಕ ವಿನಯ್ ಕೃಷ್ಣ.

    ಈ ಚಿತ್ರ ಫೈಟ್ ನೊಂದಿಗೆ ಶುರುವಾಗಿ ಫೈಟ್ ನಲ್ಲೇ ಮುಕ್ತಾಯವಾಗುತ್ತದೆ. ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲೇ ಅದ್ದೂರಿ ಸಿನಿಮಾ ಇದು ಎಂದರೆ ತಪ್ಪಾಗಲಾರದು. ಉತ್ತರ ಹಾಗೂ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ ಎಂದು ನಾಯಕ ನಿರಂಜನ್ ಸುಧೀಂದ್ರ ತಿಳಿಸಿದರು.

    ನಾನು ಹೆಡ್ ಕಾನ್ಸ್‌ಟೇಬಲ್ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಹಾಗೂ ಶರತ್ ಕುಮಾರ್ (Sarath Kumar) ಬಹಳ ದಿನಗಳ ನಂತರ ಒಟ್ಟಾಗಿ ಅಭಿನಯಿಸುತ್ತಿದ್ದೇವೆ ಎಂದು ನಟ ಸುಮನ್ ಹೇಳಿದರು.  ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು.   ನನ್ನ ಪಾತ್ರ ಚೆನ್ನಾಗಿದೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು ನಟ ಶರತ್ ಕುಮಾರ್. ನಾನು ಮೂಲತಃ ಕೇರಳದವಳು. ಕನ್ನಡದಲ್ಲಿ ಮೊದಲ ಚಿತ್ರ ಎನ್ನುತ್ತಾರೆ ನಾಯಕಿ ಸೌಮ್ಯ ಮೆನನ್ (Soumya Manen) .  ಛಾಯಾಗ್ರಹಕ ಜೈ ಆನಂದ್ ಸಹ ಹಂಟರ್ ಬಗ್ಗೆ ಮಾತನಾಡಿದರು.

  • ಹಿರಿಯ ನಟ ಶರತ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

    ಹಿರಿಯ ನಟ ಶರತ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

    ನ್ನಡದ `ರಾಜಕುಮಾರ’, `ಜೇಮ್ಸ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟ ಶರತ್‌ಕುಮಾರ್ (Actor Sarathkumar) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಡಯಾರಿಯಾ, ಡಿಹೈಡ್ರೇಷನ್‌ನಿಂದ ಬಳಲುತ್ತಿದ್ದಾರೆ.

    68ನೇ ವರ್ಷ ವಯಸ್ಸಿನ ನಟ ಶರತ್‌ಕುಮಾರ್ ಅವರನ್ನು ಅನಾರೋಗ್ಯದ ಹಿನ್ನೆಯಲ್ಲಿ ಭಾನುವಾರ (ಡಿ.11) ಆಸ್ಪತ್ರೆಗೆ ದಾಖಲಿಸಲಾಗಿದೆ. ಶರತ್ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆಯೇ ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಶರತ್ ಕುಮಾರ್ (Radhika Sarathkumar) ಮತ್ತು ಪುತ್ರಿ ವರಲಕ್ಷ್ಮೀ (Varalakshmi) ಅವರು ಈಗಾಗಲೇ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: 5 ವರ್ಷದ ಪ್ರೀತಿಗೆ ಉಂಗುರದ ಮುದ್ರೆ – ಅಭಿಷೇಕ್‌, ಅವಿವಾ ಲವ್ ಕಹಾನಿ ಶುರುವಾಗಿದ್ದು ಹೇಗೆ?

    ಸದ್ಯ ಶರತ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಕುರಿತು ಅವರ ಕುಟುಂಬದವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಆಸ್ಪತ್ರೆ ಕಡೆಯಿಂದಲೂ ಯಾವುದೇ ಹೆಲ್ತ್ ಬುಲೆಟಿನ್ ಕೂಡ ರಿಲೀಸ್ ಆಗಿಲ್ಲ. ಈ ಹಿಂದೆ ಶರತ್‌ಕುಮಾರ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಇದೀಗ ಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಶರತ್‌ಕುಮಾರ್ ಬಳಲುತ್ತಿದ್ದು, ಶೀಘ್ರವೇ ಅವರು ಗುಣಮುಖರಾಗಲಿ ಎಂದು ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ದೇವರಾಗಿದ್ದಾರೆ ಎಂದು ಭಾವುಕರಾದ ಶರತ್ ಕುಮಾರ್

    ಅಪ್ಪು ದೇವರಾಗಿದ್ದಾರೆ ಎಂದು ಭಾವುಕರಾದ ಶರತ್ ಕುಮಾರ್

    ಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ `ಪುನೀತ ಪರ್ವ’ (Puneeth Parva)  ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆಗೆ ಬಹುಭಾಷಾ ತಾರೆಯರು ಸಾಥ್ ಕೂಡ ನೀಡಿದ್ದಾರೆ. ಸೌತ್ ಆಕ್ಟರ್ ನಟ ಶರತ್ ಕುಮಾರ್ ಕೂಡ ಪುನೀತ ಪರ್ವಕ್ಕೆ ಆಗಮಿಸಿದ್ದಾರೆ. ಈ ವೇಳೆ ಪುನೀತ್ ನೆನೆದು ಭಾವುಕರಾಗಿದ್ದಾರೆ.

    `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಶರತ್ ಕುಮಾರ್(Sarath Kumar) ಭಾಗಿಯಾಗಿದ್ದಾರೆ. ರಾಜಕುಮಾರ ಜೊತೆಗಿನ ನೆನಪನ್ನ ಈ ವೇಳೆ ಬಿಚ್ಚಿಟ್ಟಿದ್ದಾರೆ. ಮೊದಲು ನನಗೆ ಕರೆ ಮಾಡಿ, ರಾಜಕುಮಾರ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದರು. ಈ ಚಿತ್ರದ ಸೆಟ್‌ನಲ್ಲಿ ನಾವು ಮೊದಲು ಭೇಟಿಯಾಗಿದ್ವಿ. ಈ ಚಿತ್ರ ಬಿಗ್ ಹಿಟ್ ಆಯ್ತು. ಅಪ್ಪುಗೆ ಮಾನವೀಯ ಗುಣ ಉಳ್ಳವರಾಗಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದನ್ನೂ ಓದಿ:ನಿರ್ದೇಶನದತ್ತ ಶ್ರುತಿ ಹರಿಹರನ್: ನಟನೆಗೆ ಫುಲ್ ಸ್ಟಾಪ್?

    ಪುನೀತ್ ಅವರಲ್ಲಿ ನಾವು ಒಂದು ಫೇಸ್ ನೋಡಿದ್ದೀವಿ. ಆದರೆ ಅವರ ಸಾಕಷ್ಟು ಒಳ್ಳೆಯ ಮುಖಗಳು ಇದೀಗ ನಮಗೆ ತಿಳಿದು ಬಂದಿದೆ ಎಂದು ಪುನೀತ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಈಗ ದೇವರಾಗಿದ್ದಾರೆ ಎಂದು ಶರತ್ ಕುಮಾರ್ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]