Tag: sarakki park

  • ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಬೆಂಗಳೂರು: ಜೆಪಿನಗರದ ಸಾರಕ್ಕಿ ಪಾರ್ಕ್‍ನಲ್ಲಿ (Sarakki Park) ನಡೆದ ಜೋಡಿ ಕೊಲೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಇಂದು ಸಂಜೆ 4:15ರ ಸುಮಾರಿಗೆ ಪಾರ್ಕ್‍ನಲ್ಲಿ 25 ವರ್ಷದ ಅನುಷಾಳನ್ನು ಕೊಚ್ಚಿ ಕೊಂದ್ರೆ, 46 ವರ್ಷದ ಸುರೇಶ್‍ನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

    ಟ್ವಿಸ್ಟ್ ಏನು..?: ಸುರೇಶ್ ಮತ್ತು ಅನುಷಾಳಿಗೆ ಐದು ವರ್ಷಗಳಿಂದ ಪರಿಚಯವಿದ್ದು, ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸುರೇಶ್, ನನಗೆ ಮದುವೆಯಾಗಿಲ್ಲ ಎಂದು ಅನುಷಾಳನ್ನ ನಂಬಿಸಿ ಪ್ರೀತಿಸಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ ಬಗ್ಗೆ ಗೊತ್ತಾಗಿತ್ತು. ಈತನಿಗೆ ಮದುವೆಯಾಗಿ ಮಕ್ಕಳಿವೆ ಎಂದು ತಿಳಿದುಕೊಂಡಿದ್ದ ಅನುಷಾ ಬಳಿಕ ಇವೆಂಟ್ ಮ್ಯಾನೆಜ್ಮೆಂಟ್ ಬಿಟ್ಟು ಹೋಂ ನರ್ಸಿಂಗ್ (ಮನೆಯಲ್ಲಿ ವಯಸ್ಸಾಗಿದ್ದವರ ಶುಶ್ರೂಷೆ) ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಇದಾಗಿಯೂ ಸುರೇಶ್ ಅನುಷಾಳ ಬಿಡಲು ಒಪ್ಪಿರಲಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್ ಮರ್ಡರ್- ಪಾರ್ಕ್‍ನಲ್ಲಿ ಕುಳಿತಿದ್ದ ಜೋಡಿಯ ಬರ್ಬರ ಕೊಲೆ

    ಸುರೇಶ್ ವರ್ತನೆಯಿಂದ ಬೇಸತ್ತ ಅನುಷಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಸುರೇಶ್‍ಗೆ ಬುದ್ಧಿ ಹೇಳಿ ಅಂತಾ ಅನುಷಾ ಜೆಪಿ ನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಳು. ಸುರೇಶ್ ಎಂಬಾತ ತನಗೆ ಪರಿಚಯ ಇದ್ದು ತನ್ನನ್ನು ಪೀಡಿಸುತ್ತಿದ್ದಾನೆ ಈತನಿಗೆ ವಾರ್ನ್ ಮಾಡಿ ಎಂದು ಕೇಳಿಕೊಂಡಿದ್ದಳು. ಹೀಗಾಗಿ ಪೊಲೀಸರು ಇಬ್ಬರನ್ನು ಕರೆದು ಸುರೇಶ್ ಗೆ ವಾರ್ನ್ ಮಾಡಿ ಮುಂದೆ ಯುವತಿಯ ತಂಟೆಗೆ ಬಾರದಂತೆ ಸೂಚಿಸಿದ್ದರು. ಈ ಸಂಬಂಧ ಇಂದು ಬೆಳಗ್ಗೆ ಜೆಪಿ ನಗರದ ಠಾಣೆಯಲ್ಲಿ ಸುರೇಶ್ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

    ಇದಾದ ಬಳಿಕ ಕೊನೆಯದಾಗಿ ಭೇಟಿ ಮಾಡಿ ಮಾತಾಡಬೇಕು ಎಂದು ಅನುಷಾಳನ್ನು ಪಾರ್ಕ್ ಗೆ ಕರೆದಿದ್ದಾನೆ. ಸುರೇಶ್ ಭೇಟಿ ಮಾಡುವ ಮೊದಲು ಅನುಷಾ ತನ್ನ ತಾಯಿ ಗೀತಾಳಿಗೂ ಮಾಹಿತಿ ನೀಡಿ ಬಂದಿದ್ದಳು. ಅನುಷಾ ಬಂದು ಮಾತನಾಡುತ್ತಿರುವಾಗ ಸುರೇಶ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಸುರೇಶ್ ಮಗಳಿಗೆ ಚಾಕುವಿನಿಂದ ಇರಿಯುತ್ತಿರುವಾಗ ಪಾರ್ಕ್ ಗೆ ಎಂಟ್ರಿ ಕೊಟ್ಟಿದ್ದ ಅನುಷಾ ತಾಯಿ ಗೀತಾ, ನನ್ನ ಮಗಳಿಗೆ ಚುಚ್ಚಬೇಡ ಬಿಡು ಬಿಡು ಎಂದು ಕೇಳಿಕೊಂಡರು. ಆದರೆ ಯಾವಾಗ ಎರಡು ಮೂರು ಬಾರಿ ಸುರೇಶ್ ಅನುಷಾಳಿಗೆ ಇರಿದಿದ್ದನೋ, ಆಗ ಗೀತಾ ಅವರು ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆ ಮೇಲೆ ಎತ್ತಿ ಹಾಕಿದ್ದಾರೆ. ಪರಿಣಾಮ ಅನುಷಾ ಜೊತೆ ಸುರೇಶ್ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

  • ಬೆಂಗ್ಳೂರಲ್ಲಿ ಡಬಲ್ ಮರ್ಡರ್- ಪಾರ್ಕ್‍ನಲ್ಲಿ ಕುಳಿತಿದ್ದ ಜೋಡಿಯ ಬರ್ಬರ ಕೊಲೆ

    ಬೆಂಗ್ಳೂರಲ್ಲಿ ಡಬಲ್ ಮರ್ಡರ್- ಪಾರ್ಕ್‍ನಲ್ಲಿ ಕುಳಿತಿದ್ದ ಜೋಡಿಯ ಬರ್ಬರ ಕೊಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್ ನಡೆದಿದೆ. ಪಾರ್ಕ್‍ನಲ್ಲಿ ಇಬ್ಬರನ್ನು ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

    ಬೆಂಗಳೂರಿನ ಜೆಪಿ ನಗರದ ಸಾರಕ್ಕಿ ಪಾರ್ಕ್‍ನಲ್ಲಿ (Sarakki Park JP Nagar) ಇಂದು ಸಂಜೆ 4:15 ರ ಸುಮಾರಿಗೆ ನಡೆದಿದೆ. ಮೃತರನ್ನು ಸುರೇಶ್ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಸುರೇಶ್ ಗೊರಗುಂಟೆಪಾಳ್ಯ ನಿವಾಸಿಯಾದರೆ ಅನುಷಾ ಜೆ.ಪಿ.ನಗರ ಬಳಿಯ ಶಾಂಕಾಬಾರಿ ನಗರ ನಿವಾಸಿ.

    ಸುರೇಶ್ ಹಾಗೂ ಅನುಷಾ ಪಾರ್ಕ್ ನಲ್ಲಿ ಮಾತನಾಡ್ತಾ ಕುಳಿತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಗಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ

    ಸದ್ಯ ಕೊಲೆ ಮಾಡಿದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.