Tag: Sara Mahesh

  • ಡೇಂಜರ್ ಜೋನ್‍ನಲ್ಲಿ ನಂಜನಗೂಡು – ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

    ಡೇಂಜರ್ ಜೋನ್‍ನಲ್ಲಿ ನಂಜನಗೂಡು – ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

    – ಸಾರಾ ಮಹೇಶ್ ಏಕಾಂಗಿ ಸಂಚಾರ

    ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ 8ಕ್ಕೆ ಏರಿದೆ. ಕೊರೊನಾ 52ನೇ ಸೋಂಕಿತನಿಂದ ಇತರೆ 5 ಮಂದಿಗೆ ಸೊಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ  ಸಂಪರ್ಕವನ್ನು ಕಡಿತ ಮಾಡಲಾಗಿದೆ.

    ಐದು ಮಂದಿಯು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳು. ಎಲ್ಲರು ನಂಜನಗೂಡು ಜ್ಯೂಬಿಲಿಯೇಟ್ ಫ್ಯಾಕ್ಟರಿ ನೌಕರರು. ಮೂರನೇ ಸೋಂಕಿತನಿಂದ ಈ ಐದು ಮಂದಿಗೆ ಸೋಂಕು ಬಂದಿದೆ. ಹೀಗಾಗಿ ಈಗ ನಂಜನಗೂಡು ಪಟ್ಟಣದ ಒಳಗೆ ಹೋಗುವುದಕ್ಕೆ ಮತ್ತು ಅಲ್ಲಿಂದ ಹೊರ ಬರುವವರ ಪ್ರವೇಶ ಕೂಡ ನಿಷೇಧಿಸಲಾಗಿದೆ.

    ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ನಂಜನಗೂಡಿಗೆ ಯಾರು ಬರುವಂತಿಲ್ಲ, ಹೋಗುವಂತಿಲ್ಲ. ಆದರೂ ಜಿಲ್ಲಾಡಳಿತದ ಮಾತು ಮೀರಿ ಜನರು ಹೊರಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರೇ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪಣ ತೊಟ್ಟಿದ್ದು, ಯುವಕರು ಗ್ರಾಮದ ನಿವಾಸಿಗಳಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ.

    ನಂಜನಗೂಡಿನ ಶ್ರೀರಾಂಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿದ್ದಾರೆ. ಈಗಲಾದರೂ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡುತ್ತಿದ್ದು, ಮಾಸ್ಕ್ ಕೊಟ್ಟು, ಈಗಲೇ ಧರಿಸಿಯೇ ಮನೆಯಲ್ಲಿರಬೇಕೆಂದು ಸೂಚಿಸಿದರು.

    ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿದರೂ ಜನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮೈಸೂರಿನ ಎಂಜಿ ರಸ್ತೆಯಲ್ಲಿನ ತರಕಾರಿ ಸಂತೆಯಲ್ಲಿ ಗಿಜಿಗಿಡುವಷ್ಟು ಜನ ಸೇರಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಜನರ ನಡುವೆ ಅಂತರ ಇಲ್ಲ. ಮಾಸ್ಕ್ ಕೂಡ ಹಾಕಿಕೊಂಡಿಲ್ಲ. ಅಲ್ಲಿಗೆ ಜನರಿಗೆ ಕೊರೊನಾ ಭಯವೂ ಇಲ್ಲದಂತಾಗಿದೆ.

    ಇನ್ನೂ ಮೈಸೂರಿನಲ್ಲಿ ಇಂದಿನಿಂದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಅಡಿಯಲ್ಲಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹಕ್ಕಿ ಜ್ವರದಿಂದ ಮಟನ್ ಮಾರಾಟ ನಿಲ್ಲಿಸಲಾಗಿತ್ತು. ಶಾಪ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾಂಸ ಖಾಲಿಯಾಗಿದೆ. ಭಾನುವಾರವಾದ ಕಾರಣ ಜನ ಮುಗಿಬಿದ್ದು ಮಾಂಸ ಖರೀದಿ ಮಾಡಿದ್ದಾರೆ. ಕಳೆದ 1 ವಾರದಿಂದ ಮಾಂಸ ಖರೀದಿ ಮಾಡಿರಲಿಲ್ಲ. ಇಂದು ಓಪನ್ ಆಗುತ್ತಿದ್ದಂತೆ 8  ಗಂಟೆ ವೇಳೆಯಲ್ಲೇ ಮಟನ್ ಖಾಲಿಯಾಗಿದೆ.

    ಸಾರಾ ಮಹೇಶ್ ಏಕಾಂಗಿ ಸಂಚಾರ:
    ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಶಾಸಕ ಸಾರಾ ಮಹೇಶ್ ಏಕಾಂಗಿ ಸಂಚಾರ ನಡೆಸಿದರು. ಕೆ.ಆರ್.ನಗರ ತಾಲೂಕಿನಲ್ಲಿ ಸ್ವತಃ ಶಾಸಕರು ಕಾರು ಚಲಾಯಿಸಿಕೊಂಡು ವೀಕ್ಷಣೆ ಮಾಡಿದರು. ಕೊರೊನಾ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.

  • ಪಾಕ್ ಪರ ಘೋಷಣೆ ಕೂಗಿದ್ದು ವಿಕೃತ ಮನಸ್ಸಿನವರು: ಅನಿತಾ ಕುಮಾರಸ್ವಾಮಿ

    ಪಾಕ್ ಪರ ಘೋಷಣೆ ಕೂಗಿದ್ದು ವಿಕೃತ ಮನಸ್ಸಿನವರು: ಅನಿತಾ ಕುಮಾರಸ್ವಾಮಿ

    ರಾಮನಗರ: ಪಾಕ್ ಪರ ಘೋಷಣೆ ಕೂಗುತ್ತಿರುವುದನ್ನು ನೋಡಿ ನಿಜವಾಗಿಯೂ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು ವಿಕೃತ ಮನಸ್ಸಿನವರು ಅಂತ ಹೇಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಮುಂದೆ ಇನ್ಯಾರು ಆ ರೀತಿ ಮಾಡಬಾರದು, ಆ ರೀತಿ ಕ್ರಮ ಕೈಗೊಂಡರೆ ಬೇರೆಯವರಿಗೂ ಹೆದರಿಕೆ ಇರುತ್ತದೆ. ಆ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿ, ದೇಶದಲ್ಲಿ ಬಾಳುವಂತಹ ಪ್ರತಿಯೊಬ್ಬರೂ ದೇಶಕ್ಕೆ ಋಣಿಯಾಗಿರಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಆದರೂ ಅಷ್ಟೇ. ಗುರುವಾರ ಆಗಿರುವ ಘಟನೆ ನಾವೆಲ್ಲರೂ ತಲೆ ತಗ್ಗಿಸುವ ವಿಚಾರ. ಆಯೋಜಕರು ಇದರ ಬಗ್ಗೆ ಸೂಕ್ಷ್ಮತೆ ಅರಿಯಬೇಕಿತ್ತು. ಯಾರೇ ಮಾಡಿದ್ದರೂ ಅದು ತಪ್ಪೇ, ನಿನ್ನೆಯೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು.

    ಹೋರಾಟಗಳಲ್ಲಿ ಕಿಡಿ ಹಚ್ಚುವವರ ವಿರುದ್ಧ ಪೊಲೀಸರು ಮೊದಲೇ ಕ್ರಮ ವಹಿಸಬೇಕಿತ್ತು. ಎಲ್ಲರಿಗೂ ಇದು ಮುಜುಗರ ತರುವಂತಹ ವಿಚಾರ. ಹೋರಾಟ ಮಾಡುವ ವೇಳೆ ಕೆಲವು ಕಿಡಿಗೇಡಿಗಳು ಇರುತ್ತಾರೆ. ಈ ವಿಚಾರವಾಗಿ ಆಯೋಜಕರು ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಅಲ್ಲದೆ ಪೊಲೀಸರು ಮುಂಜಾಗೃತಾ ಕ್ರಮ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಡೆದಿದ್ದೇನು?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.

  • ಪ್ರೀತಿಯ ಕೋತಿ ಸಾವು – ಸಾರಾ ಮಹೇಶ್‍ಗೆ ವೈರಾಗ್ಯ

    ಪ್ರೀತಿಯ ಕೋತಿ ಸಾವು – ಸಾರಾ ಮಹೇಶ್‍ಗೆ ವೈರಾಗ್ಯ

    – ಬಂಗಾರವೆಲ್ಲಾ ಬಿಚ್ಚಿಟ್ಟ ಸಾರಾ

    ಕೆ.ಪಿ. ನಾಗರಾಜ್
    ಮೈಸೂರು: ಮನೆಯಲ್ಲಿ ಸಾಕಿದ ಮುದ್ದು ಪ್ರಾಣಿಗಳು ಸತ್ತಾಗ ಮನೆಯವರಿಗೆ ನೋವು ಸಹಜ. ಆದರೆ ಆ ನೋವು ಬದುಕನ್ನು ವೈರಾಗ್ಯಕ್ಕೆ ನೂಕಿದ್ದು ಕಡಿಮೆ. ಆದರಲ್ಲೂ ರಾಜಕಾರಣಿಗಳಿಗೆ ವೈರಾಗ್ಯ ಕಾಡೋದು ಬಹಳ ಕಡಿಮೆ. ಆದರೆ ಈಗ ನಾವು ಈ ಸುದ್ದಿ ಓದಿದರೆ ಈ ವ್ಯಕ್ತಿಯೊಳಗೆ ಇಂಥಹದೊಂದು ಮಗುವಿನಂಥ ಮನಸ್ಸು ಇದೆಯಾ ಎಂದು ಅಚ್ಚರಿ ಪಡುತ್ತೀರಾ.

    ಸಾರಾ ಮಹೇಶ್, ಮೈತ್ರಿ ಸರ್ಕಾರ ಇದ್ದಾಗ ಮತ್ತು ಉರುಳಿದ್ದಾಗ ಹೆಚ್ಚು ಚರ್ಚೆಯಲ್ಲಿದ್ದ ಹೆಸರು. ಎಚ್‍ಡಿ ಕುಮಾರಸ್ವಾಮಿ ಪಾಲಿನ ಕುಚುಕು ಗೆಳೆಯ. ಈ ಗೆಳೆತನ ಇವರ ಪಾಲಿಗೆ ವರವೂ ಆಯಿತು ಮತ್ತು ಈ ಗೆಳೆತನ ಇವರ ಪಾಲಿಗೆ ಹಲವು ಶತ್ರುಗಳ ಸೃಷ್ಟಿ ಮಾಡಿಕೊಟ್ಟಿತ್ತು. ಇಂತಹ ಸಾರಾ ಮಹೇಶ್‍ಗೆ ಈಗ ಒಂದು ಥರದ ವೈರಾಗ್ಯ ಶುರುವಾಗಿದೆ.

    ಇದಕ್ಕೆ ಕಾರಣ ಅವರು ಪ್ರೀತಿಯಿಂದ ಸಾಕಿದ ಮುದ್ದು ಕೋತಿಯ ಸಾವು. ಸಾರಾ ಮಹೇಶ್ ಮೈಸೂರಿನ ದಟ್ಟಗಳ್ಳಿಯ ತೋಟದಲ್ಲಿ ಹೆಣ್ಣು ಕೋತಿ ಸಾಕಿದ್ದರು. ಅದಕ್ಕೆ ಚಿಂಟು ಎಂದು ಹೆಸರಿಟ್ಟಿದ್ದರು. ಈ ಚಿಂಟು ಇತ್ತೀಚೆಗೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತ್ತು. ಚಿಂಟು ಸಾವು ಕಂಡು ಸಾರಾ ಮಹೇಶ್ ಹಾಗೂ ಅವರ ಇಡೀ ಕುಟುಂಬ ಕಣ್ಣೀರಿಟ್ಟಿತ್ತು. ಧಾರ್ಮಿಕ ವಿಧಿ ವಿಧಾನದಂತೆ ಚಿಂಟುವಿನ ಅಂತ್ಯಕ್ರಿಯೆ ಅವರ ತೋಟದಲ್ಲಿ ನಡೆದಿದೆ. ಜೊತೆಗ ಚಿಂಟುನಾ ಈ ಸಾವು ಸಾರಾ ಮಹೇಶ್ ಅವರ ಒಳಗೆ ಒಂದು ವೈರಾಗ್ಯವನ್ನೆ ಸೃಷ್ಟಿಸಿದೆ.

    ಅವರು ತಾವು ಸದಾ ಹಾಕಿಕೊಳ್ಳುತ್ತಿದ್ದ ಬಂಗಾರದ ಸರ, ಉಂಗುರ ತೆಗೆದಿಟ್ಟಿದ್ದಾರೆ. ವಾಚ್ ಕಟ್ಟುವುದನ್ನು ಬಿಟ್ಟಿದ್ದಾರೆ. ಮನಸ್ಸಿನಲ್ಲೆ ವೈರಾಗ್ಯದ ಗುಡಿ ಕಟ್ಟಿಕೊಂಡು ಕೂತಿದ್ದಾರೆ. ತೋಟದಲ್ಲಿ ಚಿಂಟುವಿನ ಗುಡಿ ಕಟ್ಟುತ್ತಿದ್ದಾರೆ. ಹನುಮಂತ ದೇವರ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಚಿಂಟುವಿನ ಕಲ್ಲಿನ ಮೂರ್ತಿ ಕೆತ್ತಿಸಿ ಅಲ್ಲಿ ಇಡುತ್ತಿದ್ದಾರೆ. ಮುಂದಿನ ತಿಂಗಳ ಎರಡನೇ ವಾರ ಈ ದೇವಸ್ಥಾನ ಉದ್ಘಾಟನೆಯಾಗಲಿದೆ. ಒಂದರ್ಥದಲ್ಲಿ ಮಗನನ್ನೆ ಕಳೆದುಕೊಂಡಷ್ಟು ದುಃಖದಲ್ಲಿ ಸಾರಾ ಮಹೇಶ್ ಇದ್ದಾರೆ. ಸದಾ ರಾಜಕಾರಣ, ಬ್ಯುಸಿನೆಸ್ ಎಂದು ಮಾತನಾಡುತ್ತಿದ್ದಾ ಸಾರಾ ಮಹೇಶ್ ಈಗ ವೈರಾಗ್ಯದ ಮಾತನಾಡುತ್ತಿದ್ದಾರೆ. ಪ್ರಾಣಿಗಳ ತೋರುವ ನಿಷ್ಕಲ್ಮಶ ಪ್ರೀತಿ ಬಗ್ಗೆ ಮಾತನಾಡುತ್ತಿದ್ದಾರೆ.

  • ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಜುಗಲ್‍ಬಂದಿಯಾಗಿ ನಟಿಸಿರೋ ಶ್ರೀ ಭರತ ಬಾಹುಬಲಿ ಚಿತ್ರ ಜನವರಿ 17ಕ್ಕೆ ರಾಜ್ಯದ್ಯಂತ ತೆರೆ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಜನಪ್ರಿಯರಾಗಿದ್ದ ಮಂಜು ಮಾಂಡವ್ಯ ನಟನಾಗಿ ಅಭಿನಯಿಸುತ್ತಿರುವ ಚಿತ್ರವಿದು.

    ನಟನೆ ಜೊತೆಗೆ ಚಿತ್ರಕ್ಕೆ ನಿರ್ದೇಶನ ಕೂಡ ಮಂಜು ಮಾಂಡವ್ಯ ಮಾಡಿದ್ದಾರೆ. ಒಂದೊಳ್ಳೆ ಟೀಂ ಕಟ್ಟಿಕೊಂಡು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಇರೋ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ ಮಂಜು ಮಾಂಡವ್ಯ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್ ಕೂಡ ಒಳ್ಳೆಯ ಟಾಕ್ ಕ್ರಿಯೇಟ್ ಮಾಡಿದ್ದು ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಪರ್ವೇಜ್.ಕೆ ಸಿನಿಮಾಟೋಗ್ರಾಫಿ ಶ್ರೀ ಭರತ ಬಾಹುಬಲಿ ಚಿತ್ರಕ್ಕಿದೆ. ಶ್ರೀನಿವಾಸ್ ಮೂರ್ತಿ, ಪುಷ್ಪಲತಾ, ಕರಿಸುಬ್ಬು, ಶ್ರೇಯಾ ಶೆಟ್ಟಿ, ಅಚ್ಯುತ್ ರಾವ್ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 17ಕ್ಕೆ ಭರತ ಬಾಹುಬಲಿ ಕಥೆ ನೋಡಲು ರೆಡಿಯಾಗಿ.

  • ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಈಗ ತಾವೇ ಕ್ಯಾಮೆರಾ ಮುಂದೆ ಬಂದು ಡೈಲಾಗ್ ಹೇಳ್ತಿದ್ದಾರೆ.

    ಹೌದು, ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದು, ಟ್ರೈಲರ್ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡ್ತಿವೆ. ಜನವರಿ 17ಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು, ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಮೇಯರ್ ಸ್ಥಾನದ ಆಕಾಂಕ್ಷಿಗಳ ಜೊತೆ ಸಾರಾ ಮಹೇಶ್ ಸಭೆ

    ಮೇಯರ್ ಸ್ಥಾನದ ಆಕಾಂಕ್ಷಿಗಳ ಜೊತೆ ಸಾರಾ ಮಹೇಶ್ ಸಭೆ

    ಮೈಸೂರು: ಜನವರಿ 18ಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಇಂದು ಮೈಸೂರಿನ ಅತಿಥಿ ಗೃಹದಲ್ಲಿ ಸಭೆ ನಡೆಸಿದರು.

    ಜೆಡಿಎಸ್‍ನಲ್ಲಿ ನಾಲ್ವರು ಮೇಯರ್ ಆಕಾಂಕ್ಷಿಗಳಿದ್ದಾರೆ. ಮೇಯರ್ ಸ್ಥಾನದ ಆಕಾಂಕ್ಷಿಗಳು ಹಾಗೂ ಜೆಡಿಎಸ್‍ನ ಕಾರ್ಪೋರೇಟರ್‌ಗಳ ಜೊತೆ ಈ ಸಭೆ ನಡೆಸಿದರು. ಸಭೆಯಲ್ಲಿ ಪ್ರೊ.ರಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಮೇಯರ್ ರವಿಕುಮಾರ್, ಅಜೀಜ್ ಅಬ್ದುಲ್ಲಾ ಸೇರಿ ಹಲವರು ಭಾಗಿಯಾಗಿದ್ದರು.

    ಸಭೆಯಲ್ಲಿ 18 ಜನ ಜೆಡಿಎಸ್‍ನ ಪಾಲಿಕೆ ಸದಸ್ಯರು ಭಾಗಿಯಾಗಿದ್ದು, ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೇಯರ್ ಸ್ಥಾನದ ಆಕಾಂಕ್ಷಿಗಳಾದ ನಮ್ರತಾ ರಮೇಶ್, ನಿರ್ಮಲಾ ಹರೀಶ್, ತಸ್ಲೀಮ್ ಹಾಗೂ ರೇಷ್ಮಾಭಾನು ತಮಗೆ ಯಾಕೆ ಸ್ಥಾನ ನೀಡಬೇಕೆಂದು ಪ್ರತ್ಯೇಕವಾಗಿ ವಿವರಣೆ ನೀಡಿದ್ದಾರೆ.

  • ನನ್ನದು ಅಬ್ಬರಿಸುವ ಪಾಲಿಟಿಕ್ಸ್ ಅಲ್ಲ: ಜಿ.ಟಿ.ದೇವೇಗೌಡ

    ನನ್ನದು ಅಬ್ಬರಿಸುವ ಪಾಲಿಟಿಕ್ಸ್ ಅಲ್ಲ: ಜಿ.ಟಿ.ದೇವೇಗೌಡ

    ಮೈಸೂರು: ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

    ಜಿ.ಟಿ. ದೇವೇಗೌಡ ಅವರು ಹುಣಸೂರು ಉಪ ಚುನಾವಣೆಯಲ್ಲಿ ತಟಸ್ಥ ನಿಲುವು ಪ್ರಕಟಿಸಿದ್ದರು. ಈಗ ಮೈಸೂರು ಮಹಾ ನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವು ಪ್ರಕಟಿಸಿದ್ದಾರೆ. ತಾವು ತಟಸ್ಥ ನಿಲುವು ಪ್ರಕಟಿಸುವುದಕ್ಕೆ ಇಂದು ಮೈಸೂರಿನಲ್ಲಿ ಕಾರಣ ಕೂಡ ತಿಳಿಸಿದರು.

    ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮೌನದ ರಹಸ್ಯ ಬಿಚ್ಚಿಟ್ಟರು. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಹೇಳುವ ಮೂಲಕ ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವಿಗೆ ಜಿಟಿಡಿ ಸ್ಪಷ್ಟಿಕರಣ ನೀಡಿದರು.

    ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್‍ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ ಎಂದು ಮಾರ್ಮಿಕವಾಗಿ ಹೇಳಿದರು.

  • ಗಲಾಟೆ ವೇಳೆ ನನ್ನ ಸಹೋದರ ಸಂಧಾನಕ್ಕೆ ಹೋಗಿದ್ದೇ ತಪ್ಪು: ಸಾರಾ ಮಹೇಶ್

    ಗಲಾಟೆ ವೇಳೆ ನನ್ನ ಸಹೋದರ ಸಂಧಾನಕ್ಕೆ ಹೋಗಿದ್ದೇ ತಪ್ಪು: ಸಾರಾ ಮಹೇಶ್

    ಮೈಸೂರು: ಮಾಜಿ ಸಚಿವ ಸಾ.ರಾ ಮಹೇಶ್ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಸಾಲಿಗ್ರಾಮ ಗಲಭೆ ಪ್ರಕರಣದ ಕುರಿತು ಸ್ಪಷ್ಟೀಕರಣ ನೀಡಿದರು.

    ಸಾಲಿಗ್ರಾಮದ ಘಟನೆ ಎರಡು ಜಾತಿಗಳ ನಡುವೆ ನಡೆದಿರುವ ಗಲಭೆ ಅಲ್ಲ. ಅದು ಎರಡು ವ್ಯಕ್ತಿಗಳ ನಡುವೆ ನಡೆದಿರುವ ಗಲಾಟೆ. ದಯಮಾಡಿ ಅದಕ್ಕೆ ಜಾತಿ ಹಾಗೂ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಮನವಿ ಮಾಡಿದರು. ಡಿ.11ರ ಸಂಜೆ ಘಟನೆ ನಡೆದಿದ್ದು, ಆದರೆ ದೂರು ದಾಖಲಾಗಿರೋದು ಡಿ.12ರ ಮಧ್ಯರಾತ್ರಿ 12 ಗಂಟೆಗೆ. ಗಲಾಟೆ ನಡೆದಾಗ ನನ್ನ ತಮ್ಮ ಸಾ.ರಾ ರವೀಶ್ ಸ್ಥಳಕ್ಕೆ ಹೋಗಿ ಸಂಧಾನ ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಾದ ದಿನವೇ ದೂರು ದಾಖಲಾಗಿದ್ದರೆ ಇಷ್ಟು ದೊಡ್ಡ ಸಮಸ್ಯೆ ಆಗುತ್ತಿರಲಿಲ್ಲ ಎಂದು ವಿವರಿಸಿದರು.

    ನನ್ನ ತಮ್ಮ ಅಲ್ಲಿಗೆ ಸಂಧಾನಕ್ಕೆ ಹೋಗಿದ್ದು ತಪ್ಪು. ಯಾವ ಸಂದರ್ಭದಲ್ಲಿ ಸಂಧಾನ ಮಾಡಬೇಕು ಎಂಬ ಅರಿವು ನಮಗೆ ಇರಬೇಕು. ಈಗ ಅವನೇ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಯಾವ ತನಿಖೆ ಬೇಕಾದರೂ ಆಗಲಿ. ಪ್ರಕರಣವನ್ನ ಸಿಐಡಿ, ಸಿಬಿಐಗೆ ನೀಡಲಿ. ಆದರೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದರು.

    ನಾನು ಒತ್ತಡ ಹಾಕೋದಾಗಿದ್ದರೆ ತಮ್ಮನ ಮೇಲೆ ಎ1 ಆರೋಪ ಎಂಬ ಪಟ್ಟ ಬರುತ್ತಿತ್ತಾ ಎಂದು ಪ್ರಶ್ನಿಸಿದರು. ಹೊರಗಿನಿಂದ ಬಂದವರು ಸಾಲಿಗ್ರಾಮ ಗಲಾಟೆಯಿಂದ ತಾಲೂಕು ಶಾಂತಿ ಹಾಳು ಮಾಡಬೇಡಿ. ಊರಿನವರನ್ನ ಬಿಟ್ಟು ನಾವು ಇರೋಕಾಗೊಲ್ಲ. ನಮ್ಮನ್ನ ಬಿಟ್ಟು ಅವರು ಇರೋಕಾಗೊಲ್ಲ ಎಂದು ಹೇಳಿದರು.

    ಇದೇ ವೇಳೆ ಹುಣಸೂರು ಉಪಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಜಿ.ಟಿ ದೇವೇಗೌಡ ಹಾಗೂ ಅವರ ಮಗನ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ಮಾಧ್ಯಮಗಳ ಮುಂದೆ ಜಿಟಿಡಿ ಕುರಿತ ಪ್ರಶ್ನೆಗೆ ಕೈ ಮುಗಿದು ಉತ್ತರಿಸಿದರು. ಅವರ ಸಂಬಂಧಿತ ಪ್ರಶ್ನೆಗಳನ್ನು ಅವರನ್ನೆ ಕೇಳಿ. ನಾನು ಅವರ ಬಗ್ಗೆ ಮಾತನಾಡೋಲ್ಲ ಎಂದರು.

  • ನೆರೆ ಕಾಮಗಾರಿಗೆ ಬಂದ ಹಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಸಾರಾ ಮಹೇಶ್

    ನೆರೆ ಕಾಮಗಾರಿಗೆ ಬಂದ ಹಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಸಾರಾ ಮಹೇಶ್

    ಕೊಡಗು: ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಕಳೆದ ವರ್ಷದ ನೆರೆ ಕಾಮಗಾರಿಗಾಗಿ ಬಂದಿದ್ದ ಹಣವನ್ನು ದುರುಪಯೋಗ ಮಾಡಿದ್ದಾರೆ ಎನ್ನುವುದು ಸುಳ್ಳು. ಆ ಹಣದಲ್ಲಿ ಯಾವುದೇ ಅವ್ಯವಹಾರವೇ ನಡೆದಿಲ್ಲ ಎಂದು ವಿಧಾನ ಮಂಡಲ ಕಾಗದ ಪತ್ರ ಸಮಿತಿ ಅಧ್ಯಕ್ಷ ಸಾ.ರಾ ಮಹೇಶ್ ಸ್ಪಷ್ಟಪಡಿಸಿದ್ದಾರೆ.

    ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಇದೇ ವಿಷಯವಾಗಿ ನಡೆದ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಖಾಸಗಿ ಬ್ಯಾಂಕಿನಲ್ಲಿ ಹಣ ಇಟ್ಟಿರುವುದು ತಪ್ಪು ಎನ್ನಲಾಗಿತ್ತು, ಆದರೆ ನಿನ್ನೆ ನಾನು ಒಂದು ಸುತ್ತೋಲೆಯನ್ನು ನೋಡಿದ್ದೇನೆ. ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಬರುವ ಯಾವುದೇ ಬ್ಯಾಂಕಿನಲ್ಲಿ ಹಣವನ್ನು ಇರಿಸಬಹುದು ಎಂದಿದೆ. ಖಾತೆ ತೆರೆಯುವಾಗ ಜಿಲ್ಲಾಧಿಕಾರಿಯಿಂದ ಒಪ್ಪಿಗೆ ಪಡೆದಿಲ್ಲ ಎನ್ನುವುದನ್ನು ಬಿಟ್ಟರೆ ಹಣ ದುರುಪಯೋಗವಾಗಿಲ್ಲ ಎಂದು ಸಮಿತಿ ಅಧ್ಯಕ್ಷ ಸಾ.ರಾ ಮಹೇಶ್ ಹೇಳಿದ್ದಾರೆ.

    2018ರಲ್ಲಿ ಪ್ರಕೃತಿ ವಿಕೋಪವಾದಾಗ ಇದೇ ಎಂಜಿನಿಯರ್ ಸಾಕಷ್ಟು ಕೆಲಸ ಮಾಡಿದರು. ಅವರನ್ನು ಅಮಾನತುಗೊಳಿಸಿರುವುದಕ್ಕೆ ನ್ಯಾಯಾಲಯ ಸೋಮವಾರ ತಡೆ ನೀಡಿದೆ. ಮೈತ್ರಿ ಸರ್ಕಾರವಿದ್ದಾಗ ಪ್ರಕೃತಿಕ ವಿಕೋಪದ ಸಂತ್ರಸ್ತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ಜೊತೆಗೆ ಉತ್ತಮ ಮನೆಗಳನ್ನು ಕಟ್ಟಿಕೊಡಲಾಗಿದೆ. ಈಗಿರುವ ಸರ್ಕಾರ ಕೂಡ ಅಂತಹದ್ದೇ ಮನೆಯನ್ನು ಕಟ್ಟಿಕೊಡಲಿ ಎಂದು ಸಮಿತಿ ಒತ್ತಾಯಿಸುತ್ತದೆ ಎಂದರು.

    ಏನಿದು ವಿವಾದ?
    ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ ಸಮಯದಲ್ಲಿ ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಎಂಜಿನಿಯರ್ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್‍ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ಅವರು ನಿಯಮಗಳನ್ನು ಮೀರಿದ್ದಾರೆ ಎಂದು ಸಚಿವ ವಿ ಸೋಮಣ್ಣ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದ್ದರು.

  • ಸಾರಾ ಮಹೇಶ್ ರಾಜೀನಾಮೆ ರಹಸ್ಯ ಬಿಚ್ಚಿಟ್ಟ ಅನಿತಾ ಕುಮಾರಸ್ವಾಮಿ

    ಸಾರಾ ಮಹೇಶ್ ರಾಜೀನಾಮೆ ರಹಸ್ಯ ಬಿಚ್ಚಿಟ್ಟ ಅನಿತಾ ಕುಮಾರಸ್ವಾಮಿ

    ರಾಮನಗರ: ಸಮ್ಮಿಶ್ರ ಸರ್ಕಾರದಲ್ಲಿ ನೀಡಿದ ಯೋಜನೆಗಳನ್ನು ಬಿಜೆಪಿ ತಡೆ ಹಿಡಿದಿದೆ. ಅದಕ್ಕೆ ಮಾಜಿ ಸಚಿವ ಸಾರಾ ಮಹೇಶ್ ರಾಜೀನಾಮೆ ನೀಡಿದ್ದರು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

    ಇಂದು ರಾಮನಗರದ ಕೈಲಾಂಚದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾ.ರಾ ಮಹೇಶ್ ರಾಜೀನಾಮೆ ಕೊಟ್ಟಿದ್ದು ಬೇರೆ ಕಾರಣಕ್ಕೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಕ್ಕ ಅನುದಾನ ಯೋಜನೆಗಳನ್ನು ಬಿಜೆಪಿ ಸರ್ಕಾರ ಜೆಡಿಎಸ್-ಕಾಂಗ್ರೆಸ್ ಇರುವ ಕಡೆಗಳಲ್ಲಿ ತಡೆ ಹಿಡಿದಿದ್ದಾರೆ. ಆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು. ಈಗ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಶಾಸಕ ಸಾರಾ ಮಹೇಶ್ ಮತ್ತು ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರ ಆಣೆ- ಪ್ರಮಾಣ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ಹಿರಿಯ ನಾಯಕರೇ, ಅವರು ಒಬ್ಬರ ಮೇಲೊಬ್ಬರು ಆರೋಪ ಮಾಡೋದು ಬೇಕಾಗಿಲ್ಲ. ನಾನು ಸಾ.ರಾ ಮಹೇಶ್ ಜೊತೆ ಮಾತನಾಡಿದ್ದೇನೆ. ವಿಶ್ವನಾಥ್ ಹಿರಿಯರಿದ್ದಾರೆ, ಏನ್ ಬೇಕೋ ಮಾತಾಡಲಿ. ನೀವೇನೂ ರಿಯಾಕ್ಟ್ ಮಾಡೋಕೆ ಹೋಗಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

    ಕೆಲ ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗುವುದು ಕೇವಲ ರೂಮರ್ಸ್ ಅಷ್ಟೇ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದರು.