ಮೈಸೂರು: ನಟ ದರ್ಶನ್ ನಮ್ಮ ಜಿಲ್ಲೆಯವರು, ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಈ ಘಟನೆಯಿಂದ ನಾವೆಲ್ಲ ತಲೆ ತಗ್ಗಿಸುವಂತಾಗಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ (Sara Mahesh) ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಬಂಧನ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ನಮ್ಮ ಜಿಲ್ಲೆಯವರು. ಸಾಕಷ್ಟು ಎತ್ತರಕ್ಕೆ ಬೆಳೆದು ಒಳ್ಳೆಯ ಹೆಸರು ಮಾಡಿದ್ದರು. ಆದರೆ ಇದೀಗ ಘಟನೆಯಿಂದ ನಾವೆಲ್ಲ ತಲೆ ತಗ್ಗಿಸುವಂತಾಗಿದೆ. ಪ್ರಕರಣದಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದರು.
ರಾಜ್‍ಕುಮಾರ್, ಯಶ್, ಸುದೀಪ್, ಶಿವಕುಮಾರ್ ಇವರೆಲ್ಲರಿಗೂ ಅಭಿಮಾನಿಯಾಗಿದ್ದೆ. ದರ್ಶನ್ ನಮ್ಮ ಜಿಲ್ಲೆಯವರು ಎನ್ನುವ ಕಾರಣಕ್ಕೆ ಅವೆ ಮೇಲೆ ವಿಶೇಷ ಅಭಿಮಾನ ಇತ್ತು. ದರ್ಶನ್‍ಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ನನಗೆ ಅಭಿಮಾನ ಅಷ್ಟೇ ಅಲ್ಲ, ವೈಯಕ್ತಿಕವಾಗಿ ಕೂಡ ಸಾಕಷ್ಟು ಬಾರಿ ಮಾತನಾಡಿಸಿದ್ದೆ ಎಂದು ಹೇಳಿದರು.
ಮೈಸೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆಯ ತೋಟದ ಮನೆಯಲ್ಲಿ ಸಿಕ್ಕಿಲ್ಲ ಎಂದು ಶಾಸಕ ಸಾರಾ ಮಹೇಶ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ (G.T Devegowda), ಶಾಸಕ ಸಾರಾ ಮಹೇಶ್ (Sara Mahesh) ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ರೇವಣ್ಣ ವಿರುದ್ಧ ಕೆ.ಆರ್. ನಗರದಲ್ಲಿ ಕೇಸ್ ದಾಖಲು ಆಗವುದಕ್ಕೆ ಮುಂಚೆಯೇ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು? ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಯಾಕೆ ಬಂದಿಲ್ಲ?. ಅಷ್ಟಕ್ಕೂ ಸಂತ್ರಸ್ತ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ. ಹುಣಸೂರಿನ ಕರಿಗೌಡ ರಸ್ತೆಯಲ್ಲಿರುವ ಸಂತ್ರಸ್ತೆಯ ಸಂಬಂಧಿ ಮನೆಯಿಂದ ಆಕೆಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ. ಎಸ್‍ಐಟಿಯಲ್ಲಿ ಇರುವ ಕೆಲ ಅಧಿಕಾರಿಗಳು ಕಾಂಗ್ರೆಸ್‍ನ ಕೈ ಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಜೆಡಿಎಸ್ ಮುಖಂಡರನ್ನು ಹತ್ತಿಕುವ ಕೆಲಸ ಈ ಪ್ರಕರಣದ ಮೂಲಕ ಆಗ್ತಿದೆ. ಸಂತ್ರಸ್ತ ಮಹಿಳೆಯನ್ನು ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ?. ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಿರಾ?. ಎಸ್‍ಐಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಡಿಕೆಶಿ ಅಪ್ಪಣೆ ಪಡೆದು ಕಾರ್ತಿಕ್ ಪೆನ್‍ಡ್ರೈವ್ ಹಂಚಿಕೆ: ಇದೇ ಮಾತನಾಡಿದ ಜಿಟಿಡಿ, ಡ್ರೈವರ್ ಕಾರ್ತಿಕ್ ನನ್ನು ಹೊರ ದೇಶಕ್ಕೆ ಕಳಿಸಿದ್ದು ಕಾಂಗ್ರೆಸಿಗರು. ಡಿ.ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ. ಯಾರನ್ನು ಬಂಧಿಸಬೇಕು, ಯಾರನ್ನು ಎ.1 ಮಾಡಬೇಕು ಯಾರನ್ನು ಎ. 2 ಮಾಡಬೇಕು ಎಂಬ ನಿರ್ದೇಶನ ಸಿಎಂ ಹಾಗೂ ಡಿಸಿಎಂ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ಆಗಬೇಕು. ಡಿಸಿಎಂ ಈ ವಿಚಾರದಲ್ಲಿ ಸಂಪೂರ್ಣ ನೇತೃತ್ವ ವಹಿಸಿದ್ದಾರೆ. ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ. ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರ ಅವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು.
ಮೈಸೂರು: ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಾರಾ ಮಹೇಶ್ (Sara Mahesh) ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಕಳೆದ ನಾಲ್ಕು ದಿನಗಳಿಂದ ದಟ್ಟವಾಗಿ ಶುರುವಾಗಿತ್ತು. ಈ ಹಬ್ಬಿದ ವೇಗದಲ್ಲೇ ಈ ಮಾತನ್ನು ಖುದ್ದು ಸಾರಾ ಮಹೇಶ್ ಕಡಿಮೆ ಮಾಡುವ ಮಾತಾಡಿದ್ದಾರೆ. ಅಷ್ಟು ಮಾತ್ರವಲ್ಲ ತಮಗೆ ಚುನಾವಣಾ ರಾಜಕೀಯವೇ ಸಾಕಾಗಿದೆ ಎಂಬ ರೀತಿ ವೈರಾಗ್ಯದ ಮಾತನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ನಾನು ಲೋಕಸಭಾ ಚುನಾವಣೆಯ (Loksabha Elections 2024) ಆಕಾಂಕ್ಷಿಯಲ್ಲ. ನಾನು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಕುಸಿದಿದ್ದೇನೆ. ನನಗೆ ರೆಸ್ಟ್ ಬೇಕಿದೆ. ಹೀಗಾಗಿ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ವಿಧಾನಸಭಾ ಚುನಾವಣೆಯ ಸೋಲು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂಬುದನ್ನು ಬಹಿರಂಗವಾಗಿಯೆ ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ನರೇಂದ್ರ ಮೋದಿ ಮತ್ತೊಮ್ಮೆ ಪಿಎಂ ಆಗಬೇಕು. ಸಂಸದ ಪ್ರತಾಪ್ ಸಿಂಹ 10 ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಮುಖಂಡರು ನನ್ನ ಅಭ್ಯರ್ಥಿಯಾಗುವ ವಿಚಾರದಲ್ಲಿ ಸಂಪರ್ಕಿಸಿದ್ದಾರೆ ಎಂಬುದೆಲ್ಲಾ ಊಹಾಪೋಹ ಎನ್ನುವ ಮೂಲಕ ಪ್ರತಾಪ್ ಸಿಂಹ ಪರವೂ ಬ್ಯಾಟ್ ಬೀಸಿದ್ದಾರೆ.
ಮೈಸೂರು: ಕೆ.ಆರ್ ನಗರ ಕ್ಷೇತ್ರ (K R Nagar Constituency) ದಲ್ಲಿ ಚುನಾವಣೆ ಜಿದ್ದಾಜಿದ್ದು ಜೋರಾಗಿದೆ. ಅಪ್ಪನ ಪರ ಪ್ರಚಾರಕ್ಕೆ ಹೋದ ಮಗನಿಗೆ ಒಂದೇ ಊರಿನಲ್ಲಿ ಸನ್ಮಾನ ಮತ್ತು ಟೀಕೆ ಎರಡೂ ಸಿಕ್ಕಿದೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಕುಲುಮೆ ಹೊಸೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಶಾಸಕ ಸಾ.ರಾ ಮಹೇಶ್ ಕುಕ್ಕರ್ ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಹಲವು ದಿನಗಳಿಂದ ಖುದ್ದು ಪ್ರತಿಯೊಂದು ಗ್ರಾಮಗಳಿಗೆ ಸಾ.ರಾ ಮಹೇಶ್ ಪುತ್ರ ಸಾ.ರಾ ಜಯಂತ್ (Sara Jayanth) ತೆರಳಿ ಜನರನ್ನು ಮಾತಾಡಿಸುತ್ತಿದ್ದಾರೆ. ಇದನ್ನೂ ಓದಿ: ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು
ಈ ವೇಳೆ ಶಾಸಕ ಸಾ.ರಾ ಮಹೇಶ್ (Sara Mahesh) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥ, ನಾನು ಕಾಂಗ್ರೆಸ್ ನ ರವಿಶಂಕರ್ ಓಟ್ ಹಾಕ್ತೇನೆ ಎನ್ನುವ ಮೂಲಕ ಜೆಡಿಎಸ್ ಕಾರ್ಯಕರ್ತರ ಜೊತೆ ಜಗಳಕ್ಕೆ ಇಳಿದಿದ್ದಾನೆ. ಆಗ ಕೆಲ ಕಾಲ ಸಾ.ರಾ ಮಹೇಶ್ ಬೆಂಬಲಿಗರು ಹಾಗೂ ಗ್ರಾಮಸ್ಥನ ನಡುವೆ ಮಾತಿನ ಚಕಮಕಿ ಆಗಿದೆ. ಪರಿಸ್ಥಿತಿ ಅರಿತು ಸ್ಥಳದಿಂದ ಶಾಸಕರ ಪುತ್ರ ಅಲ್ಲಿಂದ ಮುಂದೆ ಸಾಗಿದ್ದಾರೆ. ಅದೇ ಗ್ರಾಮದ ಮತ್ತೊಬ್ಬ ಗ್ರಾಮಸ್ಥ ಸಾ.ರಾ ಮಹೇಶ್ ಪುತ್ರನಿಗೆ ಹಾರ ಹಾಕಿ ಸನ್ಮಾನ ಮಾಡಿ ಕಳುಹಿಸಿದ್ದಾರೆ.
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಶಾಸಕ ಸಾ.ರಾ.ಮಹೇಶ್ 1,500 ಪುಟಗಳಷ್ಟು ದಾಖಲೆಗಳನ್ನ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಕರ್ತವ್ಯ ಲೋಪ ಎಸಗಿದ ಆರೋಪ ಸಂಬಂಧ ತನಿಖೆ ಆರಂಭವಾಗಿದೆ. ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಅಬಕಾರಿ ಇಲಾಖೆಯ ಆಯುಕ್ತ ಡಾ.ಜೆ ರವಿಶಂಕರ್ ನೇತೃತ್ವದಲ್ಲಿ ಮೈಸೂರು ಡಿಸಿ ಕಚೇರಿಯ ಸಭಾಂಗಣದಲ್ಲಿ ತನಿಖೆ ನಡೆಯುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಈ ಹಿಂದೆ ಪ್ರಕರಣಗಳ ತನಿಖೆ ಸಂಬಂಧ ಡಾ.ಜೆ.ರವಿಶಂಕರ್ ಅವರು ಶಾಸಕ ಸಾ.ರಾ.ಮಹೇಶ್ ಅವರಿಗೆ ನೋಟಿಸ್ ನೀಡಿದ್ದರು. ಇದೀಗ ತನಿಖಾಧಿಕಾರಿ, ರವಿಶಂಕರ್ ಅವರಿಗೆ ಶಾಸಕರು 1,500 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಡ್ ನೈಟ್ ಕಾಯಿಲ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವು
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು 30 ದಿನದಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯುತ್ತದೆ. ಈ ಪ್ರಕರಣದಲ್ಲಿ ನಾನು ಮಾಡಿದ್ದ ಎಲ್ಲಾ ಆರೋಪಕ್ಕೂ ದಾಖಲೆಗಳನ್ನು ನೀಡಿದ್ದೇನೆ. ಐಎಎಸ್ ಅಧಿಕಾರಿಯನ್ನ ಅಮಾನತು ಮಾಡಬೇಕಾಗಿದೆ. ನನಗೆ ತನಿಖೆಯ ಮೇಲೆ ವಿಶ್ವಾಸವಿದೆ. ನಾನು ಯಾವ ದುರುದ್ದೇಶದಿಂದಲೂ ಈ ಆರೋಪಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್
ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ದುರುದ್ದೇಶದ ಭೂ ಅಕ್ರಮ ಆರೋಪ ಮಾಡಿದ್ದರು. ಈ ತನಿಖೆಯ ವರದಿ ಬಂದ ಮೇಲೆ ಜನರಿಗೆ ಆ ಅಧಿಕಾರಿಯ ನಿಜ ಬಣ್ಣ ಗೊತ್ತಾಗಲಿದೆ. ಆ ಐಎಎಸ್ ಅಧಿಕಾರಿಯ ಬಣ್ಣ ಬಯಲು ಮಾಡುವುದೇ ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕಾರ್ಯ ವೈಖರಿ ಬಗ್ಗೆ ಅವಾಚ್ಯ ಪದಗಳಲ್ಲಿ ವಿದ್ಯಾರ್ಥಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜು ವೇದಿಕೆಯಲ್ಲಿ ಶಾಸಕ ಸಾರಾ ಮಹೇಶ್ ಕಣ್ಣೀರು ಹಾಕುತ್ತಾ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಕ್ಷೇತ್ರದ ಸರಕಾರಿ ಕಾಲೇಜು ಕಟ್ಟಡ ಉದ್ಘಾಟನೆ ವಿಚಾರವಾಗಿ ಅವಹೇಳಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿ ಪೋಸ್ಟ್ ಹಾಕಿದ್ದ. ಕಾಲೇಜು ಕಟ್ಟಡ ಉದ್ಘಾಟಿಸಿ ಕಾಲೇಜು ವೇದಿಕೆಯಲ್ಲೇ ಕಣ್ಣೀರು ಹಾಕಿದ ಶಾಸಕ ಸಾ.ರಾ. ಮಹೇಶ್, ವಿದ್ಯಾರ್ಥಿ ಹಾಕಿದ್ದ ಪೋಸ್ಟ್ ಓದುತ್ತಾ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಯಾಕೆ ಈ ರೀತಿ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇಂತಹ ಆಯೋಗ್ಯನನ್ನು ಇಟ್ಟುಕೊಂಡಿದ್ದರಲ್ಲ ಎಂದು ಪ್ರಾಂಶುಪಾಲರಿಗೆ ಪ್ರಶ್ನಿಸಿದರು. ನಾನು ಮನಸ್ಸು ಮಾಡಿದ್ರೆ ಸಸ್ಪಂಡ್ ಮಾಡಿಸುತ್ತಿದ್ದೆ. ನಮ್ಮ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾನು ನಿಮ್ಮ ಜಾತಿಯವನಲ್ಲ ಎಂಬ ಕಾರಣಕ್ಕೆ ಕೆಟ್ಟ ಪದ ಉಪಯೋಗಿಸಿದ್ದೀರಾ. ನನಗೂ ಸ್ವಾಭಿಮಾನ ಇದೆ. ಪ್ರತಿ ನಿತ್ಯ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳ ರೀತಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಮನಃಸಾಕ್ಷಿ ಬೇಡ ನಿಮಗೆ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸಿದರು. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ
ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ. ಜಿಲ್ಲಾ ಪಂಚಾಯ್ತಿಯಲ್ಲಿ ಮೂರು ಬಾರಿ ಗೆದ್ದು ಏನೇನು ಮಾಡಿದ್ದಾನೆ ಅಂತ ಕೇಳು ಹೋಗಿ, ಹುಷಾರ್ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ನನಗೂ ಇವನಷ್ಟುದ್ದದ ಮಗನಿದ್ದಾನೆ. ಮೊದಲನೇಯವನು ಅವರ ಅಮ್ಮನ ರೀತಿ ಒಳ್ಳೆಯವನು. ಎರಡನೇಯವನು ನನ್ ಥರಾ ಕೆಟ್ಟವನು ಹುಷಾರ್ ಎಂದು ಹೇಳಿದರು.
ನನಗೆ ಬೈರಿ, ನನ್ನ ತಾಯಿಗೆ ಬೈದ್ರೆ ಹೇಗೆ ಎಂದು ಪ್ರಶ್ನಿಸಿದರು. ಎಷ್ಟು ನೋಯಿಸಿದ್ರು ಅಷ್ಟೇ ಪಣ್ಯಾತ್ಮರು ನನ್ನ ಕೈ ಹಿಡಿಯುತ್ತಾರೆ. ನಿನ್ನಂತವರು ಎಷ್ಟು ಬೊಗಳಿದ್ರು ನಾನು ಏನೂ ಆಗಲ್ಲ. ನಾನು ಹುಟ್ಟುತ್ತಲೇ ಶ್ರೀಮಂತ ಅಲ್ಲ, ಸೈಕಲ್ ಹೊಡ್ಕೊಂಡೆ ಬೆಳೆದದ್ದು. ದೇವರು ನನ್ನ ಚೆನ್ನಾಗಿ ಇಟ್ಟಿದ್ದಾನೆ. ವಿದ್ಯಾರ್ಥಿಗಳು ಸೈಕಲ್ ಮತ್ತು ಸ್ಕೂಟರ್ ಗಳನ್ನ ಸ್ಟ್ಯಾಂಡ್ ನಲ್ಲೇ ನಿಲ್ಲಿಸಬೇಕು. ಕಾಲೇಜಿನ ಕಾರಿಡಾರ್ ನಲ್ಲಿ ಕಂಡ್ರೆ ನೀವ್ ಹುಬ್ಬಳ್ಳಿ, ಅಥವಾ ಧಾರವಾಡದಲ್ಲಿರ್ತೀರಾ ಎಂದು ಹೇಳುತ್ತಾ ವೇದಿಕೆಯಲ್ಲೇ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದರು.
Live Tv
[brid partner=56869869 player=32851 video=960834 autoplay=true]
ಮೈಸೂರು: ಒಂದು ವರ್ಷದ ಹಿಂದೆ ನಾನಾ-ನೀನಾ ಎಂದು ಪರಸ್ಪರ ದಿನವೂ ಕಿತ್ತಾಡಿಕೊಂಡು ಆಣೆ ಪ್ರಮಾಣ ಮಾಡಲು ಹೊರಟಿದ್ದ ಮೈಸೂರಿನ ಎಚ್.ವಿಶ್ವನಾಥ್ ಹಾಗೂ ಸಾರಾ ಮಹೇಶ್ ಈಗ ದೋಸ್ತಿಗಳು.
ಹೌದು, ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣಕ್ಕೆ ಹೋಗಿದ್ದ ಸಾರಾ ಮಹೇಶ್ ಈಗ ಎಚ್. ವಿಶ್ವನಾಥ್ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೆ.ಆರ್. ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ಎಚ್. ವಿಶ್ವನಾಥ್ ಹುಟ್ಟುಹಬ್ಬ ನಡೆಯಲಿದೆ. ಈ ಸಮಾರಂಭ ಆಯೋಜನೆಗೆ ಸಾರಾ ಮಹೇಶ್ ಅಧ್ಯಕ್ಷರಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಮಹೇಶ್, ಇದು ರಾಜಕೀಯ ದೋಸ್ತಿಯಲ್ಲ. ಮಾನವೀಯವಾದ ಸ್ನೇಹ. ಎಚ್. ವಿಶ್ವನಾಥ್ ಕೆ.ಆರ್. ನಗರದ ಹಿರಿಯ ರಾಜಕಾರಣಿ. ಅವರ 75ನೇ ಹುಟ್ಟುಹಬ್ಬ ಮಾಡುವುದು ನಮ್ಮ ಕರ್ತವ್ಯ ಇದರಲ್ಲಿ ರಾಜಕಾರಣ ಇಲ್ಲ. ನಮ್ಮಷ್ಟು ರಾಜಕೀಯವಾಗಿ ಕಿತ್ತಾಡಿಕೊಂಡವರು ಯಾರು ಇಲ್ಲ. ಅಷ್ಟು ಬೈಯ್ದಾಡಿಕೊಂಡಿದ್ದೇವೆ. ಆದರೆ, ಇದು ಸ್ನೇಹ ಪೂರ್ವಕವಾಗಿ ಸಮಾರಂಭ ಮಾಡುತ್ತಿದ್ದೇವೆ. ರಾಜಕಾರಣದ ಬಂದಾಗ ಮತ್ತೆ ಹೇಳಿಕೆ ಪ್ರತಿ ಹೇಳಿಕೆ ಇರುತ್ತದೆ ಎಂದರು. ಇದನ್ನೂ ಓದಿ: ಮಸೀದಿಗಳಿಗೆ ಶ್ರೀರಾಮುಲು ದೇಣಿಗೆ- ಇದು ಓಲೈಕೆ ರಾಜಕಾರಣ ಎಂದ ಮುಸ್ಲಿಮರು
ಮೈಸೂರು: ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವುದೇ ಮೋಸ ಮಾಡಿಲ್ಲ. ಅವರು ಯಾಕೆ ನಮ್ಮ ಪಕ್ಷವನ್ನು ದೂರುತ್ತಿದ್ದಾರೆ ಗೊತ್ತಿಲ್ಲ ಎಂದು ಜೆಡಿಎಸ್‌ನ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಯಾರೂ ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ಹಾಗೆಯೇ ನಮಗೇ ಹೆಚ್.ಡಿ ದೇವೆಗೌಡರೇ ಯಾವತ್ತಿದ್ದರೂ ನಾಯಕ. ನೀವು ನೆನಪಿಟ್ಟುಕೊಳ್ಳಿ ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರುವುದು. ನಿಮ್ಮ ಅವಧಿ ಮುಗಿಯೋವರೆಗೂ ನೀವು ಪಕ್ಷದ ಪರವಾಗಿ ಇರಿ ಎಂದು ಜಿ.ಟಿ ದೇವೆಗೌಡರಿಗೆ ಸಾರಾ ಮಹೇಶ್ ತಿರುಗೇಟು ಕೊಟ್ಟಿದ್ದಾರೆ.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ ನಿಜ. ಆದರೆ ಕೆಲ ವ್ಯಕ್ತಿಗಳಿಂದ ನಮಗೆ ಗೆಲುವು ಕಷ್ಠ ಆಯಿತು ಎಂಬುವುದು ಸುಳ್ಳು. ಜೆಡಿಎಸ್ ಶಕ್ತಿ ಹಳೆ ಮೈಸೂರು ಭಾಗದಲ್ಲಿ ಇನ್ನೂ ಇದೇ. ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ದೂರ ಇರಬೇಕೋ ಅಥವಾ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುವುದು ಹೆಚ್.ಡಿ ದೇವೇಗೌಡ ಮಾಡುತ್ತಾರೆ. ಆದರೆ ಎರಡು ಪಕ್ಷಗಳಿಂದ ದೂರ ಇರಬೇಕು ಎಂಬುವುದು ನನ್ನ ವೈಯುಕ್ತಿಕ ತೀರ್ಮಾನ ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಹೆಚ್‍ಡಿಕೆ ಹುಟ್ಟುಹಬ್ಬ- ಕಾರ್ಯಕರ್ತರಲ್ಲಿ ಮಾಜಿ ಸಿಎಂ ಮನವಿ
ವಿಧಾನ ಪರಿಷತ್‌ನಲ್ಲಿ ಗೆದ್ದ ಅಭ್ಯರ್ಥಿಯು ಜೆಡಿಎಸ್ ವರಿಷ್ಠಿಗೆ ವರದಿ ಕೊಡುತ್ತಾರೆ. ಬಳಿಕ ವರದಿಯ ಅನುಸಾರವಾಗಿ ನಮ್ಮ ಪಕ್ಷದ ಶಾಸಕರಿಂದಲೇ ಆದ ತೊಂದರೆ ಬಗ್ಗೆಯೂ ವಿವರಿಸಿ ಜೆಡಿಎಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಸಾರಾ ಮಹೇಶ್ ಹೇಳಿದ್ದಾರೆ. ಇದನ್ನೂ ಓದಿ: ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ
ಆರೋಪ ಗಂಭೀರವಾಗಿದ್ದು ಚರ್ಚೆ ನಡೆಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರೂ ಸ್ಪೀಕರ್ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಚರ್ಚೆಗೆ ಪಟ್ಟು ಹಿಡಿದ ಸಾರಾ ಮಹೇಶ್ ಸದನದ ಬಾವಿಗಿಳಿದು ಧರಣಿ ನಡೆಸಿದರು. ಕೊನೆಗೆ ಸ್ಪೀಕರ್ ಕಾಗೇರಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಬಳಿಕ ಸಾರಾ ಮಹೇಶ್ ಧರಣಿಯನ್ನು ವಾಪಸ್ ಪಡೆದರು.
ಮೈಸೂರು: ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗುತ್ತಾ ಎಂದು ಪ್ರಶ್ನಿಸಿರುವ ಶಾಸಕ ಸಾ.ರಾ ಮೇಶ್ ಅವರು ನೀವೇ ಸರ್ವೆಗೆ ಬನ್ನಿ ಎಂದು ಸ್ವಾಗತಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ವೆಗೆ ನನ್ನ ಸ್ವಾಗತವಿದೆ. ಸರ್ವೆಗೆ ಆಯುಕ್ತರೇ ಬರಲಿ. ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗಲ್ಲ. ಹೀಗಾಗಿ ಸರ್ವೆಗೆ ನೀವೇ ಬನ್ನಿ ಎಂದು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ.
ರಾಜಕಾಲುವೆ, ಗೋಮಾಳದ ಒಂದೇ ಒಂದು ಗುಂಟೆ ಒತ್ತುವರಿ ಆಗಿದ್ದರೆ ಚೆಕ್ ಮಾಡಿ ಬನ್ನಿ. ನಾನೇ ನಿಮಗೆ ಬೊಕ್ಕೆ ನೀಡಿ ಸರ್ವೆಗೆ ಸ್ವಾಗತಿಸುತ್ತೇನೆ. ನಿಮ್ಮ ಶಿಷ್ಯೆನೋ, ಜ್ಯೂನಿಯರ್ ಇದ್ದಾರಲ್ಲ ಅವರು ಆಸ್ತಿ ಘೋಷಣೆ ಮಾಡಿದ್ದಾರಾ ಮನೀಷ್ ಮುದ್ಗಲ್ ಅವರೇ? ಕಾನೂನಿನಲ್ಲಿ ಅವಕಾಶ ಇದ್ದರೂ ಶಿಷ್ಯೆಗಾಗಿ ಸರ್ವೆಗೆ ಆದೇಶ ಮಾಡಿದ್ದೀರಿ. ನಿಮ್ಮ ಕುಚುಕು ಶಿಷ್ಯೆಗಾಗಿ ಆದೇಶ ಮಾಡಿದ್ದೀರಿ ಎಂದು ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ
ಸಾರಾಗೆ ಭೂ ಕಂಟಕ:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್‍ಬ್ಯಾಕ್ ಆರೋಪ ಮಾಡಿದ್ದ ಶಾಸಕ ಸಾ.ರಾ ಮಹೇಶ್‍ಗೆ ಮತ್ತೆ ಭೂಕಂಟಕ ಎದುರಾದಂತೆ ಇದೆ. ಮೈಸೂರು-ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ಹೊಸ ತಂಡ ರಚಿಸಿ ಭೂಕಂದಾಯ ಇಲಾಖೆ ಆಯುಕ್ತ ಮನಿಷ್ ಮೌದ್ಗಿಲ್ ಆದೇಶ ಹೊರಡಿಸಿದ್ದರು.
ಕೇರಗಳ್ಳಿಯ ಸರ್ವೇ ನಂಬರ್ 115, ಯಡಹಳ್ಳಿಯ ಸರ್ವೇ ನಂಬರ್ 69,72, ದಟ್ಟಗಳ್ಳಿಯ ಸರ್ವೇ ನಂಬರ್ 130/3, ಲಿಂಗಾಬುದಿ ಸರ್ವೇ ನಂಬರ್ 10ರಲ್ಲಿ ನಡೆದ ಭೂಒತ್ತುವರಿಗಳ ತನಿಖೆ ನಡೆಸಿ 10 ದಿನದಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ದಟ್ಟಗಳ್ಳಿ ಮತ್ತು ಲಿಂಗಾಬುದಿ ಸರ್ವೇ ನಂಬರ್ ಗಳಲ್ಲಿ ಸಾರಾ ಮಹೇಶ್ ಒಡೆತನದ ತೋಟ, ಕಲ್ಯಾಣ ಮಂಟಪ ಇದೆ. ಹೀಗಾಗಿ ಸಹಜವಾಗಿಯೇ ಇವುಗಳ ಸರ್ವೇ ಕೂಡ ನಡೆಯಲಿದೆ.