Tag: Sara Annaiah

  • ಗ್ಲ್ಯಾಮರಸ್‌ ಅವತಾರದಲ್ಲಿ ಸಾರಾ ಅಣ್ಣಯ್ಯ ಮಿಂಚಿಂಗ್

    ಗ್ಲ್ಯಾಮರಸ್‌ ಅವತಾರದಲ್ಲಿ ಸಾರಾ ಅಣ್ಣಯ್ಯ ಮಿಂಚಿಂಗ್

    ನ್ನಡತಿ, ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ (Sara Annaiah) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಗ್ಲ್ಯಾಮರಸ್ ಅವತಾರ ತಾಳಿರುವ ಸಾರಾ ನಯಾ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬಿಳಿ ಬಣ್ಣದ ಲೆಹೆಂಗಾ ಧರಿಸಿ ನಟಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಮಿಂಚಿದ್ದಾರೆ. ಸಾರಾ ನಯಾ ಲುಕ್ ಈಗ ಪಡ್ಡೆಹುಡುಗರ ನಿದ್ದೆಕೆಡಿಸಿದೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್

    ಇನ್ನೂ ಜನಪ್ರಿಯ ಸೀರಿಯಲ್ ‘ಅಮೃತಧಾರೆ’ ಪ್ರಾಜೆಕ್ಟ್‌ನಿಂದ ಸಾರಾ ಹೊರನಡೆದಿದ್ದಾರೆ. ನಾಯಕ ಗೌತಮ್ ದಿವಾನ್ ತಂಗಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದರು. ಆದರೆ ಅವರ ಪಾತ್ರಕ್ಕೆ ಇಶಿತಾ ವರ್ಷ ಎಂಟ್ರಿ ಕೊಟ್ಟಿದ್ದಾರೆ. ಆದರೆ ಸಾರಾ ಯಾಕೆ ಸೀರಿಯಲ್‌ನಿಂದ ಹೊರನಡೆದರು ಎಂಬುದು ತಿಳಿದುಬಂದಿಲ್ಲ.

    ಈ ಹಿಂದೆ ‘ಕನ್ನಡತಿ’ ಸೀರಿಯಲ್‌ನಲ್ಲಿ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಜೊತೆ ಸಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಆಮೀರ್ ಖಾನ್ 3ನೇ ಮದುವೆ?

    2017ರಲ್ಲಿ ‘ನಮ್ಮೂರ ಹೈಕ್ಳು’ ಎಂಬ ಚಿತ್ರದಲ್ಲಿ ಸಾರಾ ನಟಿಸಿದ್ದರು. ಈ ಸಿನಿಮಾ ಮೂಲಕ ಕೊಡಗಿನ ಬೆಡಗಿ ಸದ್ದು ಮಾಡಿದ್ದರು.

  • ಎದೆಯ ಗೀಟು ಕಾಣುವಂತೆ ಹಾಟ್ ಆಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ

    ಎದೆಯ ಗೀಟು ಕಾಣುವಂತೆ ಹಾಟ್ ಆಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ

    ನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ (Amruthadaare) ಸೀರಿಯಲ್ ಮೂಲಕ ಗಮನ ಸೆಳೆದ ಸಾರಾ ಅಣ್ಣಯ್ಯ (Sara Annaiah) ಅವರು ಸದ್ಯ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಎದೆಯ ಗೀಟು ಕಾಣುವಂತೆ ಸಖತ್ ಬೋಲ್ಡ್ ಆಗಿ ಸಾರಾ ಕಾಣಿಸಿಕೊಂಡಿದ್ದಾರೆ.

    ಸಾರಾ ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಕಡಲ ತೀರದ ರೆಸಾರ್ಟ್‌ವೊಂದರಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ‘ನಾನು ದಾಲ್ಚಿನ್ನಿಯಂತೆ ಸ್ವೀಟ್’ ಅಂತ ಕ್ಯಾಪ್ಷನ್ ನೀಡಿ, ಸಾರಾ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಸಾರಾ ಲುಕ್ ನೋಡಿ ಹಾಟ್, ಕ್ಯೂಟ್, ಸೆಕ್ಸಿ ಅಂತೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

    ‘ನಮ್ಮೂರ ಹೈಕ್ಳು’ ಚಿತ್ರದ ಮೂಲಕ ನಾಯಕಿಯಾಗಿ ಸಾರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಮೊದಲ ಸಿನಿಮಾ ಅವರ ಕೈಹಿಡಿಯಲಿಲ್ಲ. ಚಿತ್ರರಂಗದಿಂದ ಈಗ ಹೇಳಿಕೊಳ್ಳುವಂತಹ ಅವಕಾಶ ಕೂಡ ಸಿಗುತ್ತಿಲ್ಲ. ಹಾಗಾಗಿ ಕಿರುತೆರೆಯಲ್ಲಿ ನಟಿ ಗುರುತಿಸಿಕೊಳ್ತಿದ್ದಾರೆ.

    ರಂಜನಿ ರಾಘವನ್- ಕಿರಣ್ ನಟನೆ ‘ಕನ್ನಡತಿ’ ಸೀರಿಯಲ್ ವರೂಧಿನಿ ಪಾತ್ರದಲ್ಲಿ ಸಾರಾ ನಟಿಸಿದ್ದರು. ಇದು ಕೂಡ ಲೀಡ್ ಪಾತ್ರವೇ ಆಗಿತ್ತು. ಹೀರೋ ಹಿಂದೆ ಬೀಳುವ ಪಾತ್ರ ಇದಾಗಿದೆ. ಇದನ್ನೂ ಓದಿ:ಅಬ್ಬಬ್ಬಾ! ಗೋಲ್ಡ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ ‘ಐರಾವತ’ ನಟಿ

    ಈಗ ಜನಪ್ರಿಯ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಹೀರೋ ಗೌತಮ್ ತಂಗಿ ಮಹಿಮಾ ಪಾತ್ರದ ಮೂಲಕ ಸಾರಾ ಗುರುತಿಸಿಕೊಳ್ತಿದ್ದಾರೆ. ಸಾರಾ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಸೀರಿಯಲ್‌ನಲ್ಲಿ ಹಲವು ಟ್ವಿಸ್ಟ್‌ಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಸಕ್ಸಸ್‌ಗಾಗಿ ಮತ್ತೆ ಮರಾಠಿ ಸಿನಿಮಾಗಳತ್ತ ರಿತೇಶ್ ದೇಶ್‌ಮುಖ್

    ಅಂದಹಾಗೆ, ಅಮೃತಧಾರೆ ಸೀರಿಯಲ್‌ಗೆ ಎಂಟ್ರಿ ಕೊಡುವ ಮೂಲಕ ‘ನಮ್ಮ ಲಚ್ಚಿ’ ಸೀರಿಯಲ್‌ನಲ್ಲಿ ಸಾರಾ ನಟಿಸುತ್ತಿದ್ದರು. ನೆಗೆಟಿವ್ ಶೇಡ್‌ನಲ್ಲಿದ್ದ ಈ ಪಾತ್ರವನ್ನು ಕೆಲ ತಿಂಗಳುಗಳ ಹಿಂದೆ ಬಿಟ್ಟು `ಅಮೃತಧಾರೆ’ ತಂಡ ಸೇರಿಕೊಂಡರು ನಟಿ ಸಾರಾ.

  • ನೀಲಿ ಬಣ್ಣದ ಬಿಕಿನಿಯಲ್ಲಿ ʼಕನ್ನಡತಿʼ ನಟಿ..!

    ನೀಲಿ ಬಣ್ಣದ ಬಿಕಿನಿಯಲ್ಲಿ ʼಕನ್ನಡತಿʼ ನಟಿ..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಅಮೃತಧಾರೆ’ ಸಾರಾ- ಕಾವ್ಯಾ ಗೌಡ

    ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಅಮೃತಧಾರೆ’ ಸಾರಾ- ಕಾವ್ಯಾ ಗೌಡ

    ಕಿರುತೆರೆಯ ಜನಪ್ರಿಯ ಅಮೃತಧಾರೆ (Amruthadaare) ಮತ್ತು ಭಾಗ್ಯಲಕ್ಷಿ (Bhagyalakshmi) ಸೀರಿಯಲ್ ನಟಿಯರು ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಒಟ್ಟಿಗೆ ಗೋವಾಗೆ ಜಾಲಿ ಟ್ರಿಪ್ ಮಾಡ್ತಿದ್ದಾರೆ. ಶ್ರೇಷ್ಠಾ ಮತ್ತು ಮಹಿಮಾ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ

    ಕನ್ನಡತಿ, ನಮ್ಮ ಲಚ್ಚಿ ಸೀರಿಯಲ್ ಮೂಲಕ ಗಮನ ಸೆಳೆದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ (Sara Annaiah) ಅವರು ಸದ್ಯ ಅಮೃತಧಾರೆ ಸೀರಿಯಲ್‌ನ ಮಹಿಮಾ ರೋಲ್‌ನಲ್ಲಿ ಮಿಂಚಿದ್ದಾರೆ. ಉದ್ಯಮಿ ಗೌತಮ್ ದಿವಾನ್ ಸಹೋದರಿ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ. ಜೀವಾ ಎಂಬ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸೋ ಹುಡುಗಿಯಾಗಿ ಸಾರಾ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್ ಒಳ್ಳೆಯ ಟಾಕ್‌ನಲ್ಲಿದೆ. ಸಖತ್ ಹೈಪ್ ಕ್ರಿಯೆಟ್ ಮಾಡಿದೆ.

    ಸಾರಾ ಅವರ ಫ್ರೆಂಡ್ ಕಾವ್ಯಾ ಗೌಡ (Kavya Gowda) , ಕೂಡ ಶ್ರೇಷ್ಠಾ ಎಂಬ ಪಾತ್ರದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮಿಂಚ್ತಿದ್ದಾರೆ. ಮದುವೆಯಾಗಿರುವ ಹೀರೋ ತಾಂಡವ್ ಹಿಂದೆ ಬೀಳುವ ಯುವತಿಯಾಗಿ ಕಾವ್ಯಾ ಕಾಣಿಸಿಕೊಂಡಿದ್ದಾರೆ.

    ಬಡವ ರಾಸ್ಕಲ್ (Badava Rascal) ನಟಿ ಅಮೃತಾ ಐಯ್ಯಂಗಾರ್ ಅವರ ಸ್ನೇಹಿತೆ ಈ ಕಾವ್ಯಾ ಗೌಡ. ಅಲ್ಲದೇ ರಿಂಗಾ ರಿಂಗಾ ರೋಸಸ್ ಸಿನಿಮಾದಲ್ಲೂ ಕಾವ್ಯ ನಟಿಸಿದ್ದಾರೆ. ಮತ್ತಷ್ಟು ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದಾರೆ. ಕಾವ್ಯಾ ಗೌಡ ಅವರು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರು ಸೀರಿಯಲ್, ಸಿನಿಮಾ ಅಂತಾ ಬ್ಯುಸಿಯಿದ್ದರು. ಈಗ ಶೂಟಿಂಗ್ ಬ್ರೇಕ್ ಹಾಕಿ ಗೋವಾಗೆ ಹಾರಿದ್ದಾರೆ. ಅಲ್ಲಿ ಬೋಲ್ಡ್ ಲುಕ್‌ನಲ್ಲಿ ಸಾರಾ- ಕಾವ್ಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ಫೋಟೋ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಕಾಶ ನೀಲಿ ಬಿಕಿನಿಯಲ್ಲಿ ‘ಕನ್ನಡತಿ’ ಸೀರಿಯಲ್ ನಟಿ ಸಾರಾ ಅಣ್ಣಯ್ಯ

    ಆಕಾಶ ನೀಲಿ ಬಿಕಿನಿಯಲ್ಲಿ ‘ಕನ್ನಡತಿ’ ಸೀರಿಯಲ್ ನಟಿ ಸಾರಾ ಅಣ್ಣಯ್ಯ

    ಬಾಲಿವುಡ್ ನಟಿಯರು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕೆ? ನಾವೇನೂ ಕಡಿಮೆ ಇಲ್ಲ ಅನ್ನುವಂತಿದೆ ಕನ್ನಡತಿ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಫೋಟೋ. ಆಕಾಶ ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಸಾರಾ ಅಣ್ಣಯ್ಯ, ಪಡ್ಡೆಗಳ ನಿದ್ದೆಗೆಡಿಸಿದ್ದಾರೆ. ಬಿಕಿನಿಯಲ್ಲಿ ತಮ್ಮ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾರೆ.

    ಕನ್ನಡತಿ ಸೀರಿಯಲ್ ನೋಡುವ ಪ್ರೇಕ್ಷಕರಿಗೆ ಸಾರಾ ಅಣ್ಣಯ್ಯ ಚಿರಪರಿಚಿತರು. ಈ ಧಾರಾವಾಹಿಯಲ್ಲಿ ಇಂಡಿಪೆಂಡೆಂಟ್ ವುಮನ್ ಪಾತ್ರದಲ್ಲಿ ಬೋಲ್ಡ್ ಆಗಿಯೇ ಕಾಣಿಸಿಕೊಂಡಿರುವ ಇವರು, ಮೂಲತಃ ಮಾಡೆಲ್. ಮಾಡೆಲಿಂಗ್ ಕ್ಷೇತ್ರದಿಂದ ಬಂದಿರುವ ಸಾರಾ ಅಣ್ಣಯ್ಯ, ಒಂದು ರೀತಿಯಲ್ಲಿ ಖಡಕ್ ಪಾತ್ರದ ಮೂಲಕವೇ ಕನ್ನಡ ಕಿರುತೆರೆ ಜಗತ್ತಿಗೆ ಪರಿಚಯವಾದವರು. ಸಂಪ್ರದಾಯಸ್ಥ ಕುಟುಂಬದ ಮಹಿಳೆಯರು, ಈ ನಟಿಯನ್ನು ಬೈದುಕೊಳ್ಳುತ್ತಲೇ ಇಷ್ಟ ಪಡುವುದಕ್ಕೆ ಕಾರಣ, ಅವರ ನಟನೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಈ ಪಾತ್ರದ ಮೂಲಕ ಮಾಡರ್ನ್ ಜಗತ್ತಿನ ಹುಡುಗಿಯರನ್ನು ಪರಿಚಯಿಸುತ್ತಿರುವ ನಿರ್ದೇಶಕರು, ಸಾರಾ ಅಣ್ಣಯ್ಯ ಮೂಲಕ ಹಲವು ವಿಚಾರಗಳನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಅಂತೆಯೇ ಸಾರಾ ಕೂಡ ವೈಯಕ್ತಿಕ ಜೀವನದಲ್ಲಿ ಅಷ್ಟೇ ಬೋಲ್ಡ್ ಆಗಿದ್ದಾರೆ ಎನ್ನುವುದಕ್ಕೆ ಅವರ ಬಿಕಿನಿ ಫೋಟೋಗಳೇ ಸಾಕ್ಷಿ. ಬಾಲಿವುಡ್ ನಟಿಯರಷ್ಟೇ ಅಲ್ಲ, ನಾವೂ ಕೂಡ ಇಂತಹ ಬಿಕಿನಿ ಧರಿಸಬಲ್ಲೆವು ಎಂದು ಅವರು ಸಾರಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.

    Live Tv

  • ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ: ರಂಜನಿ ರಾಘವನ್

    ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ: ರಂಜನಿ ರಾಘವನ್

    ಬೆಂಗಳೂರು: ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕನ್ನಡತಿ ಸಿರಿಯಲ್ ಖ್ಯಾತಿಯ ನಟಿ ರಂಜನಿ ರಾಘವನ್ ಹೇಳಿದ್ದಾರೆ.

    ಭಾನುವಾರ ಶೂಟಿಂಗ್ ಮುಗಿದ ನಂತರ ನಟಿ ರಂಜನಿ ರಾಘವನ್, ನಟ ಕಿರಣ್ ರಾಜ್ ಹಾಗೂ ಸಾರಾ ಅಣ್ಣಯ್ಯ ಗೂಡ್ಸ್ ಗಾಡಿಯೊಂದನ್ನು ಹತ್ತಿದ್ದರು. ಈ ವೇಳೆ ರಂಜನಿ ರಾಘವನ್ ಕತ್ತಲಿನಲ್ಲಿ ನೋಡುವವರಿಗೆ ನಾನು ಮೇಲ್ನೋಟಕ್ಕೆ ಹೊರಗಡೆ ನಗುತ್ತಿದ್ದೇನೆ ಆದರೆ ಒಳಗಡೆ ಭಯದಿಂದ ಒದ್ದಾಡುತ್ತಿದ್ದೇನೆ ಎಂದು ಹೇಳುತ್ತಾ, ಇದು ನೈಜ ಘಟನೆ ಆಧಾರಿತ ಥ್ರಿಲ್ಲರ್ ಕತೆ! ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ, ನಮ್ಮ ಅನುಭವ.. ಎಂದು ಥ್ರೀಲಿಂಗ್ ಕಥೆ ಹೇಳಿದ್ದರು. ಸದ್ಯ ಅದರ ಮುಂದುವರೆದ ಭಾಗ-2ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಲೈಟ್ ನೋಡಿ ಧೈರ್ಯಬರುತ್ತಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಕ್ಯಾಪ್ಷನ್‍ನಲ್ಲಿ, ಕತ್ತಲೆಯಲ್ಲಿ ಸುಮಾರು ಹದಿನೈದು ನಿಮಿಷ ಎದೆಬಡಿತ ಕಿವಿಗೆ ಕೇಳುವಷ್ಟು ಟೆನ್ಶನ್ ನಲ್ಲಿ ಹೋಗ್ತಿರುವಾಗ ಮಧ್ಯೆ ಒಂದು ಕಡೆ ಗಾಡಿ ಸಡನ್ ಆಗಿ ನಿಂತಿತು. “ಬರ್ತೀನ್ ಸರ್ ಡ್ರೈವರ್ ಗೆ 200 ರುಪಾಯಿ ಕೊಟ್ಬಿಡಿ” ಆ ಗಾಡಿಗೆ ಸಂಬಂಧಪಟ್ಟ ಕನ್ನಡದೋನು, ಅದೇ.. ಕುಡುಕ, ಹೇಳಿ ಹೊರಟುಹೋದ. ಏನು ಆಗಲ್ಲ ಅನ್ನಿಸಿದ್ದು ಎಷ್ಟು ಸತ್ಯಾನೋ, ಅಕಸ್ಮಾತ್ ಆದ್ರೆ ಏನ್ ಮಾಡೋಕೂ ಪ್ರಿಪೇರ್ ಇರಲಿಲ್ಲ ಅನ್ನೋದೂ ಅಷ್ಟೇ ಸತ್ಯ!

    ಮತ್ತೆ ಇನ್ನೊಂದು ಹತ್ತು ನಿಮಿಷ ಅದೇ ದಾರೀಲಿ ಹೋಗ್ತಿರುವಾಗ ಸ್ಟ್ರೀಟ್ ಲೈಟ್‍ಗಳು ಕಾಣಿಸಿ, ನನ್ನೊಳಗೂ ಲೈಟ್ ಆನ್ ಆಯ್ತು. ನಿಜವಾಗಿಯೂ, ಆ ಲಗೇಜ್ ಆಟೋ ನಮ್ಮ ಸೆಟ್ ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ ಆಗಿತ್ತಂತೆ, ಆ ಕನ್ನಡದವನು ನಮ್ಮ ಸೆಟ್ ಹುಡುಗರಿಗೆ ಪರಿಚಯ, ನಾವಿಲ್ಲಿ ಶೂಟಿಂಗ್ ಮಾಡುವ ಅಷ್ಟು ದಿನ ಅವರಿಗೆ ನಮ್ಮವರ ಜೊತೆ ವ್ಯವಹಾರ ಇರುತ್ತೆ, ಹಾಗೆಲ್ಲ ನಮಗೆ ಏನೂ ತೊಂದರೆ ಮಾಡುವುದಕ್ಕೆ ಆಗುವುದಿಲ್ಲ ಅಂತ ಕಿರಣ್ ಆಮೇಲೆ ಹೇಳಿದ್ರು. ಆದ್ರೂ ಆ ಒಂಟಿ ರೋಡ್ ನಲ್ಲಿ ಹಾಗೆ ಹೋಗಿದ್ದರ ಭಯ ಮಾತ್ರ ಕೇಳ್ಬೇಡಿ. ಒಟ್ನಲ್ಲಿ ನಾವು ನಮ್ಮ ಹೋಟೆಲ್ ಸುರಕ್ಷಿತವಾಗಿ ತಲುಪಿದ್ವಿ. ಇದನ್ನು ಓದಿ: ಶೂಟಿಂಗ್ ಮುಗಿಸಿ ಬರ್ತಿದ್ದ ರಂಜನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

    ಯುಫ್..! ದುಡುಕಿ ಏನನ್ನೂ ಮಾಡಬಾರದು, ರಿಸ್ಕ್ ತೆಗೆದುಕೊಂಡರೂ ಲೆಕ್ಕಚಾರ ಹಾಕಿ ರಿಸ್ಕ್ ತಗೊಬೇಕು ಅನ್ನೋದು ಈ ಕತೆಯ ನೀತಿ ಪಾಠ ಎಂದು ಹೇಳಿದ್ದಾರೆ.