Tag: Sara Ali Khan

  • ನಟಿ ಸಾರಾಳನ್ನು ನೋಡಿ ಭಿಕ್ಷುಕಿ ಎಂದ ನೆಟ್ಟಿಗರು

    ನಟಿ ಸಾರಾಳನ್ನು ನೋಡಿ ಭಿಕ್ಷುಕಿ ಎಂದ ನೆಟ್ಟಿಗರು

    ಮುಂಬೈ: ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಅವರ ಫೋಟೋವೊಂದನ್ನು ನೋಡಿ ನೆಟ್ಟಿಗರು ಭಿಕ್ಷುಕಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ಸಾರಾ ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಹರಿದ ಜೀನ್ಸ್ ಧರಿಸಿ ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದ್ದರು. ಸಾರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

     

    View this post on Instagram

     

    #ZoomLens: Spotted @saraalikhan95 while shooting for an ad in the city! ????

    A post shared by Zoom TV (@zoomtv) on

    ಸಾರಾ ಹರಿದ ಜೀನ್ಸ್ ಧರಿಸಿದ್ದಕ್ಕೆ ನೆಟ್ಟಿಗರು ಆಕೆಯನ್ನು ‘ಭಿಕ್ಷುಕಿ’ ಎಂದು ಕರೆದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಈ ಬಡ ಮಹಿಳೆಗೆ ಯಾರಾದರೂ ಉಡುಪು ನೀಡಿ. ದೀಪಾವಳಿ ಹಬ್ಬ ಕೂಡ ಬರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಜೀನ್ಸ್ ನ ಜೇಬಿನಲ್ಲಿ ಬಾಂಬ್ ಬ್ಲ್ಯಾಸ್ಟ್ ಆಗಿದ್ದೀಯಾ ಎಂದು ಕಮೆಂಟ್ ಮಾಡಿದ್ದಾರೆ.

    ನಟ ವರುಣ್ ಧವನ್ ಜೊತೆ ಸಾರಾ ಅಲಿ ಖಾನ್ ‘ಕೂಲಿ ನಂ 1’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. 1995ರಲ್ಲಿ ನಟ ಗೋವಿಂದ ಹಾಗೂ ಕರೀಶ್ಮಾ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ರಿಮೇಕ್ ಚಿತ್ರದಲ್ಲಿ ಸಾರಾ ಹಾಗೂ ವರುಣ್ ನಟಿಸುತ್ತಿದ್ದಾರೆ.

    ಇದಾದ ಬಳಿಕ ಆರಾ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದ ‘ಆಜ್‍ಕಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾರಾಗೆ ನಾಯಕನಾಗಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ಪ್ರೇಮಿಗಳ ದಿನದಂದು ಈ ಚಿತ್ರ ಬಿಡುಗಡೆ ಆಗಲಿದೆ.

  • ವಿಚಿತ್ರವಾಗಿ ಬ್ಯಾಗ್ ಹಿಡಿದು ಶಾರ್ಟ್ಸ್ ಮುಚ್ಚಿಕೊಂಡ ನಟಿ ಸಾರಾ

    ವಿಚಿತ್ರವಾಗಿ ಬ್ಯಾಗ್ ಹಿಡಿದು ಶಾರ್ಟ್ಸ್ ಮುಚ್ಚಿಕೊಂಡ ನಟಿ ಸಾರಾ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ವಿಚಿತ್ರವಾಗಿ ಬ್ಯಾಗ್ ಹಿಡಿದುಕೊಂಡು ಶಾರ್ಟ್ಸ್ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವ ಫೋಟೋವೊಂದು ವೈರಲ್ ಆಗುತ್ತಿದೆ.

    ಸಾರಾ ಅವರು ತಮ್ಮ ಡ್ಯಾನ್ಸ್ ಕ್ಲಾಸ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ಕಪ್ಪು ಬಣ್ಣದ ಟಾಪ್ ಹಾಕಿ ಅದಕ್ಕೆ ಕಿತ್ತಳೆ ಬಣ್ಣದ ಶಾರ್ಟ್ಸ್ ಧರಿಸಿದ್ದರು. ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದ ಸಾರಾ ಕ್ಯಾಮೆರಾ ನೋಡುತ್ತಿದ್ದಂತೆ ಬ್ಯಾಗ್ ಅನ್ನು ವಿಚಿತ್ರವಾಗಿ ಹಿಡಿದುಕೊಂಡು ಶಾರ್ಟ್ಸ್ ಮುಚ್ಚಿಕೊಳ್ಳುತ್ತಿದ್ದರು.

    ಕ್ಯಾಮೆರಾ ಕಾಣಿಸುತ್ತಿದ್ದಂತೆ ಸಾರಾ ಅಲಿ ಖಾನ್ ಅವರು ಬಿಂದಾಸ್ ಆಗಿ ಪೋಸ್ ನೀಡುತ್ತಿದ್ದರು. ಆದರೆ ಈಗ ಅವರು ಕ್ಯಾಮೆರಾ ನೋಡುತ್ತಿದ್ದಂತೆ ವಿಚಿತ್ರವಾಗಿ ಬ್ಯಾಗ್ ಹಿಡಿದುಕೊಂಡಿದ್ದರು. ಅಲ್ಲದೆ ಕ್ಯಾಮೆರಾ ಮುಂದೆ ಹಾದು ಹೋದ ಬಳಿಕ ಅವರು ಮತ್ತೆ ತಮ್ಮ ಬ್ಯಾಗ್ ಅನ್ನು ಭುಜದ ಮೇಲೆ ಹಾಕಿಕೊಂಡರು.

    ಬಾಲಿವುಡ್‍ನಲ್ಲಿ ಈಗ ಸಾರಾ ಅಲಿ ಖಾನ್ ಹಾಗೂ ಅವರ ಗೆಳೆಯ, ನಟ ಕಾರ್ತಿಕ್ ಆರ್ಯನ್ ಅವರ ಆಫೆರ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ನಡುವೆ ಸಾರಾ ಅವರು ಫೋಟೋಗೆ ವಿಚಿತ್ರವಾಗಿ ಪೋಸ್ ನೀಡಿದ್ದು, ಕೂಡ ಹೆಚ್ಚು ಚರ್ಚೆಯಾಗುತ್ತಿದೆ.

  • ನಟಿ ಸಾರಾ ವಿಡಿಯೋದಿಂದ ಕಳೆದು ಹೋದ ಮಗ ಪತ್ತೆ

    ನಟಿ ಸಾರಾ ವಿಡಿಯೋದಿಂದ ಕಳೆದು ಹೋದ ಮಗ ಪತ್ತೆ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ವಿಡಿಯೋ ಮೂಲಕ ಕಳೆದು ಹೋದ ವ್ಯಕ್ತಿಯ ಸುಳಿವು ಸಿಕ್ಕಿದ್ದು, ಆತನ ಕುಟುಂಬಸ್ಥರು ಖುಷಿ ವ್ಯಕ್ತಪಡಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಯುವಕನೊಬ್ಬ ನಟಿ ಸಾರಾ ಅಲಿ ಖಾನ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವರ ಹತ್ತಿರ ಬರುತ್ತಾರೆ. ಯುವಕ ಹತ್ತಿರ ಬರುತ್ತಿದ್ದಂತೆ ಸಾರಾ ಹೆದರಿಕೊಂಡಿದ್ದರು. ಬಳಿಕ ಯುವಕನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಇಡೀ ಘಟನೆಯನ್ನು ಮಾಧ್ಯಮದವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಳಿಕ ವೆಬ್‍ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದರು.

    ಈ ವಿಡಿಯೋವನ್ನು ಮಧ್ಯಪ್ರದೇಶದ ರಾಯ್‍ಸೇನ್ ನಿವಾಸಿಯ ಸ್ವರೂಪ್ ಸಿಂಗ್ ಅವರ ಕುಟುಂಬ ನೋಡಿದೆ. ಸಾರಾ ಅವರ ಜೊತೆ ಸೆಲ್ಫಿಗೆ ಮುಗಿಬಿದಿದ್ದ ಯುವಕ ಅಜಯ್ ಸಿಂಗ್, ಸ್ವರೂಪ್ ಸಿಂಗ್ ಅವರ ಮಗನಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಜಯ್ ಸಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದ ಕಾರಣ ಆಗಸ್ಟ್ 17ರಂದು ಶಾಲೆಯಿಂದ ನಾಪತ್ತೆಯಾಗಿದ್ದನು. ಬಳಿಕ ಸ್ವರೂಪ್ ಸಿಂಗ್ ಎಲ್ಲಾ ಕಡೆ ತಮ್ಮ ಮಗನನ್ನು ಹುಡುಕಿದ್ದಾರೆ. ಆದರೆ ಮಗನ ಬಗ್ಗೆ ಸುಳಿವು ಸಿಗದಿದ್ದಾಗ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸ್ವರೂಪ್ ಸಿಂಗ್ ಸ್ವೀಟ್ ಅಂಗಡಿ ನಡೆಸುತ್ತಿದ್ದು, ವಿಡಿಯೋದಲ್ಲಿ ತಮ್ಮ ಮಗ ಸುರಕ್ಷಿತವಾಗಿರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಸ್ವರೂಪ್ ಅವರು ಈ ವಿಡಿಯೋವನ್ನು ಪೊಲೀಸರಿಗೆ ಹಾಗೂ ಮುಂಬೈನಲ್ಲಿರುವ ತಮ್ಮ ಪರಿಚಿತರಿಗೆ ಕಳುಹಿಸಿ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಅಜಯ್ ನಾಪತ್ತೆಯಾಗಿರುವ ವಿಷಯವನ್ನು ಆತನ ಸ್ನೇಹಿತರಿಗೆ ತಿಳಿಸಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಜಯ್‍ನನ್ನು ಹುಡುಕಲು ಶುರು ಮಾಡಿದ್ದಾರೆ. ಆದರೆ ಇದುವರೆಗೂ ಅಜಯ್ ಲೋಕೇಶನ್ ಬಗ್ಗೆ ಪತ್ತೆಯಾಗಿಲ್ಲ.

  • ಕರೀನಾ ನನಗೆ ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ ಅಷ್ಟೇ: ಸೈಫ್ ಮಗಳು

    ಕರೀನಾ ನನಗೆ ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ ಅಷ್ಟೇ: ಸೈಫ್ ಮಗಳು

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ನಟಿ ಕರೀನಾ ಕಪೂರ್ ನನ್ನ ಒಳ್ಳೆಯ ಸ್ನೇಹಿತೆ ಅಷ್ಟೇ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾರಾ ಅವರಿಗೆ ಕರೀನಾ ಅವರ ಬಗ್ಗೆ ಪ್ರಶ್ನಿಸಲಾಯಿತು. ಆಗ ಸಾರಾ, ಕರೀನಾ ನನ್ನ ಒಳ್ಳೆಯ ಸ್ನೇಹಿತೆ, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ. ನಾನು ಅವರನ್ನು ಗೌರವಿಸುತ್ತೇನೆ. ಅಲ್ಲದೆ ಅವರು ನನ್ನ ತಂದೆಯನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ನಾನು ಹಾಗೂ ಕರೀನಾ ಒಂದೇ ವೃತ್ತಿಯಲ್ಲಿ ಇರುವ ಕಾರಣ ನಮ್ಮ ಪ್ರಪಂಚವೊಂದೇ ಎಂದು ಹೇಳಿದ್ದಾರೆ.

    ಸಾರಾ ನಟ ಸೈಫ್ ಅವರ ಮೊದಲ ಪತ್ನಿ ಅಮೃತ ಸಿಂಗ್ ಮಗಳು. 2004ರಲ್ಲಿ ಸೈಫ್, ಅಮೃತ ಸಿಂಗ್ ಅವರಿಂದ ವಿಚ್ಛೇದನೆ ಪಡೆದು 2012ರಲ್ಲಿ ಕರೀನಾ ಕಪೂರ್ ಅವರನ್ನು ಮದುವೆಯಾದರು. ಕಳೆದ ವರ್ಷ ಸಾರಾ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನನ್ನ ತಾಯಿಯೇ ಅಪ್ಪನ ಮತ್ತೊಂದು ಮದುವೆಗೆ ರೆಡಿ ಮಾಡಿದ್ದರು ಎಂದು ಹೇಳಿದ್ದರು.

    ನಿಮಗೆ ಈಗಾಗಲೇ ಅದ್ಭುತ ತಾಯಿ ಸಿಕ್ಕಿದ್ದಾರೆ. ನಾನು ನಿಮ್ಮ ಒಳ್ಳೆಯ ಸ್ನೇಹಿತೆ ಆಗಲು ಸಾಧ್ಯ ಎಂದು ಕರೀನಾ ಈ ಹಿಂದೆ ಹೇಳಿದ್ದರು. ಅಲ್ಲದೆ ನನ್ನ ತಂದೆ ಕೂಡ, ಕರೀನಾ ನಿನಗೆ ಎರಡನೇಯ ತಾಯಿ ಎಂದು ನನಗೆ ಎಂದಿಗೂ ಹೇಳಲಿಲ್ಲ. ನಾನು ಕರೀನಾ ಚಿಕ್ಕ ಅಮ್ಮ(ಚೋಟಿ ಮಾ) ಎಂದು ಕರೆದರೆ ಅವರು ಹಾಗೆ ಕರೆಯಬೇಡ ಎಂದು ಹೇಳುತ್ತಾರೆ ಎಂದು ಸಾರಾ ಅಲಿ ಖಾನ್ ತಿಳಿಸಿದ್ದರು.

  • ಫಸ್ಟ್ ಟೈಮ್ ಸಾರಾ ಕ್ಯಾಟ್ ವಾಕ್

    ಫಸ್ಟ್ ಟೈಮ್ ಸಾರಾ ಕ್ಯಾಟ್ ವಾಕ್

    ನವದೆಹಲಿ: ಬಾಲಿವುಡ್ ಯಂಗೆಸ್ಟ್ ಸೂಪರ್ ಸ್ಟಾರ್ ಸಾರಾ ಅಲಿ ಖಾನ್ ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ಹಜ್ಜೆ ಹಾಕಿದ್ದಾರೆ.

    ನವದೆಹಲಿಯಲ್ಲಿ ಶುಕ್ರವಾರ ನಡೆದ ಫಾಲ್ಗುಣಿ ಶನೆ ಪೀಕಾಕ್ ಅಟ್ ಇಂಡಿಯಾ ಕೋಟೂರೆ ವೀಕ್ 2019 ನಲ್ಲಿ ಸಾರಾ ಅಲಿ ಖಾನ್ ಕೂಡ ಭಾಗವಹಿಸಿದ್ದರು. ರ‍್ಯಾಂಪ್‌ ಮೇಲೆ ಸಾರಾ ಅಲಿ ಖಾನ್ ತಳುಕು-ಬಳುಕಿನಿಂದ ಮನೋಹರವಾಗಿ ಹೆಜ್ಜೆ ಹಾಕಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ರ‍್ಯಾಂಪ್‌ ವಾಕ್ ಮಾಡುತ್ತ ಬಂದ ಸಾರಾ ಸ್ವಲ್ಪ ಹೊತ್ತು ನಿಂತು ಹಿಂದೂ ಶೈಲಿಯಲ್ಲಿ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದರು. ಬಳಿಕ ಒಂದೇ ಕೈನಿಂದ ಮುಸ್ಲಿಂ ಶೈಲಿಯಂತೆ ಪ್ರೇಕ್ಷಕರಿಗೆ ನಮಿಸಿದರು. ಇದನ್ನು ನೋಡಿದ ಪ್ರೇಕ್ಷಕರು ಫುಲ್ ಫಿದಾ ಆದರು.

    ಸಾರಾ ಅಲಿ ಖಾನ್ ರ‍್ಯಾಂಪ್‌ ವಾಕ್ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದನ್ನು ನೋಡಿದ ಸಹೋದರ ಇಬ್ರಾಹಿಂ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ದಂಗಾದರು. ಸಾರಾ ಅಲಿ ಖಾನ್ ತಳುಕು ಬಳುಕಿನ ನಡುಗೆಯನ್ನು ಈ ಇಬ್ಬರು ಕಣ್ಣರಳಿಸಿ ನೋಡಿ ಸಂಭ್ರಮಿಸಿದ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ರ‍್ಯಾಂಪ್‌ ವಾಕ್‍ನ ಮೊದಲ ಅನುಭವದ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಾ ಅಲಿ ಖಾನ್, ನಾನು ತುಂಬಾ ನರ್ವಸ್ ಆಗಿದ್ದೆ. ಆದರೆ ಇದು ತುಂಬಾ ಖುಷಿ ತಂದು ಕೊಟ್ಟಿದೆ ಎಂದು ಹೇಳಿದ್ದಾರೆ.

    https://www.instagram.com/p/B0Z7zcXhNyx/

  • ಶಾರೂಖ್‍ರನ್ನ ಅಂಕಲ್ ಅಂದಿದ್ದಕ್ಕೆ ಸಾರಾ ವಿರುದ್ಧ ಅಭಿಮಾನಿಗಳು ಗರಂ

    ಶಾರೂಖ್‍ರನ್ನ ಅಂಕಲ್ ಅಂದಿದ್ದಕ್ಕೆ ಸಾರಾ ವಿರುದ್ಧ ಅಭಿಮಾನಿಗಳು ಗರಂ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅವರನ್ನು ನಟಿ ಸಾರಾ ಅಲಿ ಖಾನ್ ವೇದಿಕೆ ಮೇಲೆ ‘ಅಂಕಲ್’ ಎಂದು ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

    ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ಶಾರೂಖ್ ಖಾನ್ ನಿರೂಪಕರಾಗಿ ಭಾಗಿಯಾಗಿದ್ದರು. ಈ ವೇಳೆ ನನ್ನ ತಂದೆ ಹಾಗೂ ಶಾರೂಖ್ ಅಂಕಲ್ ಜೊತೆಗೂಡಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಸಾರಾ ಶಾರೂಖ್‍ರನ್ನು ಅಂಕಲ್ ಎಂದು ಕರೆದಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರಾ ಈ ರೀತಿ ಶಾರೂಖ್‍ರನ್ನ ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ನಟಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಇನ್‍ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಾ ಈ ರೀತಿ ಸ್ಟಾರ್ ನಟನಿಗೆ ಅಂಕಲ್ ಅಂದಿರುವುದು ಸರಿಯಲ್ಲ. ವೃತ್ತಿ ವಿಷಯಕ್ಕೆ ಬಂದಾಗ ತಮಗಿಂತ ಹಿರಿಯ ನಟರಿಗೆ ಗೌರವದಿಂದ ಸರ್, ಮೇಡಂ ಎಂದು ಕರೆಯಬೇಕು. ಆದ್ರೆ ಎಲ್ಲರ ಮುಂದೆ ಶಾರೂಖ್‍ಗೆ ಸಾರಾ ಅಂಕಲ್ ಅಂದಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ. ಇದಕ್ಕೆ ಸಾರಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಟೀಕಿಸುತ್ತಿರುವುದಕ್ಕೆ ರೊಚ್ಚಿಗೆದ್ದು ಶಾರೂಖ್ ಅಭಿಮಾನಿಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಶಾರೂಖ್ ಖಾನ್ ಮಕ್ಕಳು ಸೈಫ್ ಆಲಿ ಖಾನ್‍ರನ್ನು ಅಂಕಲ್ ಎಂದೇ ಕರೆಯುತ್ತಾರೆ. ಸಾರಾ ಆ ರೀತಿ ಕರೆದು ಗೌರವಿಸಿದ್ದಾರೆ ಅಷ್ಟೇ ಎಂದು ಸಾರಾ ಪರ ನಿಂತಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಹಾಗೂ ಶಾರೂಖ್ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ಶುರುವಾಗಿದೆ. ಅಲ್ಲದೆ ಸಾರಾ ವಸರ್ಸ್ ಶಾರೂಖ್ ಟ್ರೋಲ್‍ಗಳು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

  • ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    -ಸೈಫ್ ಎರಡನೇ ಮದ್ವೆ ಹಿಂದಿನ ರಹಸ್ಯ ಬಿಚ್ಚಿಟ್ಟ ಪುತ್ರಿ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಮ್ಮ ತಂದೆಯ ಎರಡನೇ ಮದುವೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ಸಾರಾ ಅಲಿ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ ಸಂದರ್ಶಕ ಸೈಫ್ ಅಲಿ ಖಾನ್ ಅವರ ಎರಡನೇ ಮದುವೆ ಬಗ್ಗೆ ಸಾರಾ ಅಲಿ ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ಎರಡನೇ ಮದುವೆಯಾಗುವಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ್ದಾರೆ.

    ನನ್ನ ತಂದೆ ಎರಡನೇ ಮದುವೆ ಆಗುವ ವಿಷಯ ನನಗೆ ತಿಳಿದಿತ್ತು. ನಾನು ಕರೀನಾ ಕಪೂರ್ ಅವರ ಅಭಿಮಾನಿ. ಅವರು ನನ್ನ ಜೀವನದಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ ಅವರು ಈಗ ಮಲತಾಯಿ ಆಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಸಾರಾ ಅಲಿ ಖಾನ್ ಉತ್ತರಿಸಿದ್ದಾರೆ.

    ನನ್ನ ತಂದೆ ಕರೀನಾ ಕಪೂರ್ ಅವರನ್ನು ಮದುವೆ ಆಗುತ್ತಿದ್ದೀನಿ ಎಂದು ಹೇಳಿದ್ದಾಗ ನಾನು ಯಾವ ಉಡುಪು ಧರಿಸಬೇಕು ಎಂದು ನನ್ನ ತಾಯಿಯ ಬಳಿ ಕೇಳಿದೆ. ಆಗ ನನ್ನ ತಾಯಿ ನೀನು ಯಾವ ಉಡುಪನ್ನು ಧರಿಸುತ್ತೀಯಾ? ಎಂದು ಕೇಳಿದ್ದರು. ನನ್ನ ತಾಯಿ ಕೂಡ ನನ್ನ ತಂದೆಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಸಾರಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಣ್‍ವೀರ್ ದೀಪಿಕಾರನ್ನು ಮದ್ವೆ ಆಗಿಲ್ಲ: ಸೈಫ್ ಪುತ್ರಿ ಸಾರಾ

    ರಣ್‍ವೀರ್ ದೀಪಿಕಾರನ್ನು ಮದ್ವೆ ಆಗಿಲ್ಲ: ಸೈಫ್ ಪುತ್ರಿ ಸಾರಾ

    ಮುಂಬೈ: ನವೆಂಬರ್ 14ರಂದು ಇಟಲಿಯಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಮದುವೆ ಬಳಿಕ ರಣ್‍ವೀರ್ ತಮ್ಮ ಮುಂಬರುವ ಸಿಂಬಾ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡದೊಂದಿಗೆ ಬ್ಯುಸಿಯಾಗಿದ್ದಾರೆ. ಇಂದು ನಡೆದ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಂಬಾ ನಾಯಕಿ ಸಾರಾ ಅಲಿಖಾನ್, ರಣ್‍ವೀರ್ ಸರ್ ದೀಪಿಕಾರನ್ನು ಮದುವೆ ಆಗಿಲ್ಲ. ಸಿಂಹಿಣಿಯನ್ನು ಮದುವೆ ಆಗಿದ್ದಾರೆ. ಹುಷಾರ್ ಸರ್ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.

    ಈಗಾಗಲೇ ರಣ್‍ವೀರ್ ಅವರನ್ನು ಮದುವೆ ಎಂಬ ಬಂಧನದಲ್ಲಿ ಎನ್‍ಕೌಂಟರ್ ಮಾಡಲಾಗಿದೆ. ನನ್ನ ಕಡೆಯಿಂದಲೂ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಅವರಿಗೆ ಮದುವೆ ಶುಭಾಶಯಗಳು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದನ್ನೂ ಓದಿ: ಮಗಳ ಎದುರೇ ಪತ್ನಿ ಜೊತೆಗಿನ ಸೆಕ್ಸ್ ಲೈಫ್ ರಿವೀಲ್ ಮಾಡಿದ ಸೈಫ್!

    ರೋಹಿತ್ ಶೆಟ್ಟಿ ಆ್ಯಕ್ಷನ್ ಸಿನಿಮಾಗಳ ಕಿಂಗ್. ಶೂಟಿಂಗ್ ಸೆಟ್ ನಲ್ಲಿ ಪ್ರತಿಯೊಬ್ಬರೊಂದಿಗೆ ರೋಹಿತ್ ಸರ್ ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಇದೂವರೆಗೆ ನಾನು ಇಂತಹ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಇಡೀ ಚಿತ್ರತಂಡವನ್ನು ತಮ್ಮ ಮಾತುಗಳಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹೀಗಾಗಿ ರೋಹಿತ್ ಅವರ ಸಿನಿಮಾಗಳು ಯಶಸ್ವಿಯಾಗುತ್ತವೆ. ಇಂದು ನಾನು ಸಿಂಬಾ ಚಿತ್ರದ ಒಂದು ಭಾಗವಾಗಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ ಎಂದು ಸಾರಾ ನಿರ್ದೇಶಕರನ್ನು ಹೊಗಳಿದರು.

    ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಬಾ ಚಿತ್ರಕ್ಕೆ ಕರಣ್ ಜೋಹರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಬಂಡವಾಳ ಹಾಕಿದ್ದಾರೆ. ರಣ್‍ವೀರ್ ಸಿಂಗ್, ಸಾರಾ ಅಲಿಖಾನ್ ಮತ್ತು ಸೂನು ಸೂದ್ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರ ಇದೇ ತಿಂಗಳು 28ರಂದು ಬಿಡುಗಡೆ ಆಗಲಿದೆ.

    https://www.youtube.com/watch?v=V1OnAADB8hY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv