Tag: Sara Ali Khan

  • ಸಾರಾಳಿಂದ ಡ್ರಗ್ಸ್ ಪಡೆದಿದ್ದ ರಿಯಾ ಚಕ್ರವರ್ತಿ

    ಸಾರಾಳಿಂದ ಡ್ರಗ್ಸ್ ಪಡೆದಿದ್ದ ರಿಯಾ ಚಕ್ರವರ್ತಿ

    ಮುಂಬೈ: ನ್ಯಾಯಾಂಗ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿ ಹಲವು ಬಾರಿ ನಟ ಸೈಫ್ ಅಲಿ ಖಾನ್ ಪುತ್ರಿ ನಟಿ, ಸಾರಾ ಬಳಿಯಲ್ಲಿ ಡ್ರಗ್ಸ್ ಪಡೆದುಕೊಂಡಿದ್ದರು ಎಂದು ಮಾಧ್ಯಮ ವರದಿ ಮಾಡಿದೆ. ಹಾಗೆ ಸಾರಾ ಅಲಿ ಖಾನ್ ಓರ್ವ ಹೈ ಪ್ರೊಫೈಲ್ ಡ್ರಗ್ಸ್ ಪೆಡ್ಲರ್ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಆರೋಪಗಳು ಸಹ ಕೇಳಿ ಬಂದಿವೆ.

    ಸಾರಾಳಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ರಿಯಾ ಅದನ್ನ ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಗೆ ತಲುಪಿಸುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಸಾರಾ ಜೊತೆ ಸಂಪರ್ಕ ಹೊಂದಿದ್ದ ಡ್ರಗ್ ಪೆಡ್ಲರ್ ಬಂಧನಕ್ಕಾಗಿ ಎನ್‍ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಎನ್‍ಸಿಬಿ ಮತ್ತೆ ಡ್ರಗ್ಸ್ ಕೇಸ್ ನಲ್ಲಿ ಕರಮ್ಜಿತ್ ಸಿಂಗ್ ಆನಂದ್, ಡ್ವೇನ್ ಫರ್ನಾಂಡೀಸ್, ಸಂಕೇತ್ ಪಟೇಲ್, ಅಂಕುಶ್ ಅನರೇಜಾ, ಸಂದೀಪ್ ಗುಪ್ತಾ ಮತ್ತು ಅಫ್ತಾಬ್ ಅನ್ಸಾರಿ ಆರು ಜನ ಬಂಧನವಾಗಿದೆ. ಸುಶಾಂತ್ ಸಿಂಗ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಅಧಿಕಾರಿಗಳು ರಿಯಾ ಸೇರಿದಂತೆ ಒಟ್ಟು 16 ಜನರನ್ನ ಬಂಧಿಸಿದೆ. ಇದನ್ನೂ ಓದಿ: ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ಬಂಧಿಯ ಕರಮ್ಜಿತ್ ಸಿಂಗ್ ಆನಂದ್ ವಿದೇಶದಿಂದ ಡ್ರಗ್ ಆಮದು ಮಾಡಿಕೊಂಡು ಸಿನಿಮಾ ರಂಗದಲ್ಲಿರುವವರಿಗೆ ಪೂರೈಕೆ ಮಾಡುತ್ತಿದ್ದನು. ಫನಾರ್ಂಡಿಸ್ ಗಾಂಜಾ ಮತ್ತು ಚರಸ್ ವ್ಯಾಪಾರಿಯಾಗಿದ್ದನು. ರಿಯಾ ಚಕ್ರವರ್ತಿಯ ಆಪ್ತ ವಲಯದಲ್ಲಿಯೂ ಫರ್ನಾಂಡಿಸ್ ಗುರುತಿಸಿಕೊಂಡಿದ್ದನು. ರಿಯಾ ಮಾತ್ರವಲ್ಲದೇ ಹಲವು ತಾರೆಯರಿಗೆ ಫರ್ನಾಂಡೀಸ್ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಶಂಕೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ರಿಯಾ ಬಂಗಾಳದ ಮಗಳು – ಚಕ್ರವರ್ತಿ ಬೆನ್ನಿಗೆ ನಿಂತ ಕಾಂಗ್ರೆಸ್

    ಡ್ರಗ್ಸ್ ಪ್ರಕರಣದಲ್ಲಿ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್‍ಗೆ ಎನ್‍ಸಿಬಿ ಸಮನ್ಸ್ ನೀಡಿದೆ ಎಂದು ಹೇಳಲಾಗಿದೆ. ಸುಶಾಂತ್ ಅಭಿನಯದ ‘ಕೇದಾರನಾಥ್’ ಸಿನಿಮಾದ ಮೂಲಕ ಸಾರಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.

  • ಡ್ರಗ್ಸ್ ಸುಳಿಯಲ್ಲಿ ಸಾರಾ, ರಕುಲ್ ಪ್ರೀತ್ ಸಿಂಗ್ – ಎನ್‍ಸಿಬಿ ಸಮನ್ಸ್

    ಡ್ರಗ್ಸ್ ಸುಳಿಯಲ್ಲಿ ಸಾರಾ, ರಕುಲ್ ಪ್ರೀತ್ ಸಿಂಗ್ – ಎನ್‍ಸಿಬಿ ಸಮನ್ಸ್

    -ಶುರುವಾಯ್ತು ಬಿಟೌನ್‍ನಲ್ಲಿ ಢವ ಢವ
    -ಚೆಲುವೆಯರಿಗೆ ಕಂಟಕವಾಗುತ್ತಾ ರಿಯಾ ಹೇಳಿಕೆ?

    ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಕಲೆವರಿಗೆ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ನಟಿ ರಿಯಾ ಚಕ್ರವರ್ತಿ ನೀಡಿರುವ ಹೇಳಿಕೆಯನ್ನಾಧರಿಸಿ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ.

    ಡಿಸೈನರ್ ಸಿಮೋನ್ ಖಂಬಟ್ಟಾ, ಸುಶಾಂತ್ ಗೆಳತಿ, ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ನಿರ್ಮಾಪಕ ಮುಕೇಶ್ ಛಾಬ್ರಾಗೆ ಎನ್‍ಸಿಬಿ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಬಾಲಿವುಡ್ ಐವರು ಸೆಲೆಬ್ರಿಟಿಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ವಿಚಾರವನ್ನ ರಿಯಾ ಹೊರ ಹಾಕಿದ್ದರು. ರಿಯಾ ತನ್ನ ಹೇಳಿಕೆಯಲ್ಲಿ 25 ಕಲಾವಿದರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಶೇ.80ರಷ್ಟು ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಅನುಮಾನ ವ್ಯಕ್ತಪಡಿಸಿದೆ. 15 ಜನ ಬಿ ಟೌನ್ ಸ್ಟಾರ್ ಗಳು ಮತ್ತು ಉಳಿದವರು ಬಿ ಕೆಟಗರಿ ಕಲಾವಿದರು ಎನ್ನಲಾಗಿದೆ.

    ಡ್ರಗ್ಸ್ ಮತ್ತು ಸುಶಾಂತ್ ಸಿಂಗ್ ರಜಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈ ಮತ್ತು ಗೋವಾದ ಏಳು ಸ್ಥಳಗಳಲ್ಲಿ ಎನ್‍ಸಿಬಿ ದಾಳಿ ನಡೆಸಿದೆ. ಇತ್ತ ವಿಚಾರಣೆ ವೇಳೆ ಸುಶಾಂತ್ ಹಣದಿಂದಲೇ ಡ್ರಗ್ಸ್ ಖರೀದಿ ಮಾಡುತ್ತಿದ್ದೆ. ಆತನ ಎಲ್ಲ ವ್ಯವಹಾರಗಳನ್ನ ನೋಡಿಕೊಳ್ಳುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದಾರೆ. ಹಾಗೆ ಡ್ರಗ್ಸ್ ಯಾರು ತರಬೇಕು? ಎಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ರಿಯಾ ನಿರ್ಧಾರ ಮಾಡುತ್ತಿದ್ದರು ಎಂದು ಎನ್‍ಸಿಬಿ ನ್ಯಾಯಾಲಯದ ಮುಂದೆ ಹೇಳಿತ್ತು.

    ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಭದ್ರತೆಯ ಕಾರಣಗಳಿಂದ ಜೈಲಿನಲ್ಲಿ ಪ್ರತ್ಯೇಕವಾಗಿ ಒಂದೇ ಕೋಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತಂಕಕಾರಿ ವಿಚಾರವೆಂದರೆ ಈಕೆ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತನಿಖೆಯಿಂದ ಈಗಾಗಲೇ ಗಮನಸೆಳೆದಿದ್ದು, ಈ ಹಿನ್ನೆಲೆಯಲ್ಲಿ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‍ಸ್ಟೇಬಲ್ ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ.

    ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದೆ. ಆದರೆ ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಲ್ ನಲ್ಲಿ ಫ್ಯಾನ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೋರ್ಟ್ ಒಪ್ಪಿದರೆ ಟೇಬಲ್ ಫ್ಯಾನ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

  • ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    – ಬಾಲಿವುಡ್‍ನಲ್ಲಿ ಶೇ.80 ಜನ ಡ್ರಗ್ ಅಡಿಕ್ಟ್ಸ್

    ಮುಂಬೈ: ನನ್ನ ಜೊತೆ ನಟಿಯರಾದ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಎನ್‍ಸಿಬಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.

    ಡ್ರಗ್ ಮಾಫಿಯಾ ಪ್ರಕರಣ ಇಡೀ ಭಾರತ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿ ತೋರುತ್ತಿದೆ. ದಿನಕ್ಕೊಂದು ನಟಿಮಣಿಯರ ಹೆಸರು ಈಗ ಈ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಅರೆಸ್ಟ್ ಆಗಿದ್ದರೆ, ಇತ್ತ ಸ್ಯಾಂಡಲ್‍ವುಡ್‍ನಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.

    ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಎನ್‍ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಹಲವು ನಟಿಯರ ಹೆಸರು ಹೇಳಿದ್ದು, ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್, ಡಿಸೈನರ್ ಸಿಮೋನೆ ಖಂಬಟ್ಟಾ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಭ್ರಾ ಎಲ್ಲರೂ ಡ್ರಗ್ ತೆಗೆದುಕೊಂಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಎಂದು ಟೈಮ್ಸ್ ನೌ ವರದಿ ವರದಿ ಮಾಡಿದೆ.

    ಸಾರಾ ಅಲಿ ಖಾನ್ ನಟ ಸೈಫ್ ಅಲಿ ಖಾನ್ ಪುತ್ರಿಯಾಗಿದ್ದು, ಈಕೆ 2018ರಲ್ಲಿ ತೆರೆಕಂಡ ಕೇದಾರನಾಥ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಸುಶಾಂತ್ ಸಿಂಗ್ ರಾಜಪೂತ್ ನಾಯಕನಾಗಿ ನಟಿಸಿದ್ದರು. ಈ ವಿಚಾರವಾಗಿ ಎನ್‍ಸಿಬಿ ತನಿಖೆಯಲ್ಲಿ ಮಾಹಿತಿ ನೀಡಿರುವ ರಿಯಾ, ಕೇದಾರನಾಥ್ ಸಿನಿಮಾ ಸಮಯದಲ್ಲಿ ಸಾರಾ ಅಲಿ ಖಾನ್, ಸುಶಾಂತ್ ಮತ್ತು ಅವರ ಸ್ನೇಹಿತರು ಥೈಲ್ಯಾಂಡ್‍ಗೆ ಟ್ರಿಪ್ ಹೋಗಿ 70 ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದರು ಎಂದು ಹೇಳಿದ್ದಾಳೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಈ ಹಿಂದೆ ಮಾತನಾಡಿದ್ದ ನಟ ಸುಶಾಂತ್ ಸಿಂಗ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್, ಕೇದಾರನಾಥ್ ಸಿನಿಮಾ ಶೂಟಿಂಗ್ ವೇಳೆ ಸಾರಾ ಅಲಿ ಖಾನ್ ಮತ್ತು ಸುಶಾಂತ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಿದ್ದರು. ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದ್ದು, ಮಗಳನ್ನು ಪ್ರೀತಿಸಿದಕ್ಕೆ ತಂದೆ ಸೈಫ್ ಅಲಿ ಖಾನ್ ಸುಶಾಂತ್‍ಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

    ಮೂಲಗಳ ಪ್ರಕಾರ ಎನ್‍ಸಿಬಿ ತನಿಖೆ ವೇಳೆ ರಿಯಾ ಚಕ್ರವರ್ತಿ ಡ್ರಗ್ ತೆಗೆದುಕೊಳ್ಳುತ್ತಿದ್ದ ಮತ್ತು ಸಂಗ್ರಹಿಸುತ್ತಿದ್ದ ಹಲವಾರು ಬಾಲಿವುಡ್ ತಾರೆಯರ ಹೆಸರನ್ನು ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಇದರಲ್ಲಿ ಈಗಾಗಲೇ 15 ಮಂದಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬಾಲಿವುಡ್‍ನಲ್ಲಿ 80% ಜನ ಡ್ರಗ್ ತೆಗೆದುಕೊಳ್ಳುತ್ತಾರೆ ಎಂದು ರಿಯಾ ಹೇಳಿದ್ದಾಳೆ. ಇದರಲ್ಲಿ 25 ಮಂದಿಗೆ ಎನ್‍ಸಿಬಿ ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿರುವ ರಿಯಾ, ನನಗೆ ಸುಶಾಂತ್ ಕೂಡ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ.

    ಜೂನ್ 14 ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾವನ್ನಪ್ಪಿದ ನಟ ಸುಶಾಂತ್‍ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‍ಸಿಬಿ ರಿಯಾಳನ್ನು ಅರೆಸ್ಟ್ ಮಾಡಿತ್ತು. ನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಾಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್, ಶುಕ್ರವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಈ ಮೂಲಕ ಮತ್ತೆ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ರಿಯಾ ಬೈಕುಲ್ಲಾ ಜೈಲಿನಲ್ಲಿ ಇದ್ದಾಳೆ.

  • ಹಾಟ್ ಅವತಾರದಲ್ಲಿ ಸೈಫ್ ಪುತ್ರಿ ಸಾರಾ ಅಲಿ ಖಾನ್

    ಹಾಟ್ ಅವತಾರದಲ್ಲಿ ಸೈಫ್ ಪುತ್ರಿ ಸಾರಾ ಅಲಿ ಖಾನ್

    -ಸೋಶಿಯಲ್ ಮೀಡಿಯಾದಲ್ಲಿ ಸಾರಾ ಸಂಚಲನ

    ಮುಂಬೈ: ಬಾಲಿವುಡ್ ಕೇದಾರನಾಥ್ ಚೆಲುವೆ, ನಟ ಸೈಫ್ ಪುತ್ರಿ ಸಾರಾ ಅಲಿಖಾನ್ ಹಾಟ್ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆ ಕೊಳ್ಳಿ ಇಡುತ್ತಿದ್ದಾರೆ.

    ಸಾರಾ ಇನ್‍ಸ್ಟಾಗ್ರಾಂನಲ್ಲಿ ಸ್ವಿಮಿಂಗ್‍ಪೂಲ್ ನಲ್ಲಿ ಪಿಂಕ್ ಬಿಕಿನಿ ತೊಟ್ಟು ಪಿಂಕಿಯಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಮಳೆಯಲ್ಲಿ ಮತ್ಸ್ಯಕನ್ನೆಯಂತೆ ಈಜಾಡಿ ಹುಡುಗರ ಕನಸಿನ ರಾಣಿಯಾಗಿದ್ದರು. ಇಂದು ಸಹ ಶಾರ್ಟ್ ಟಾಪ್ ತೊಟ್ಟು ಪೋಸ್ ಕೊಟ್ಟಿರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    Gulab in Gulabi on Gulabo ????????????????

    A post shared by Sara Ali Khan (@saraalikhan95) on

    ರಕ್ಷಾ ಬಂಧನದಂದು ಸೋದರ ಇಬ್ರಾಹಿಂ ಜೊತೆ ಈಜುಕೊಳದಲ್ಲಿ ಆಟ ಆಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದ ಸಾರಾ ರಾಕಿ ಹಬ್ಬದ ಶುಭಾಶಯ ತಿಳಿಸಿದ್ದರು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಕೆಲವರು ಸೆಕ್ಸಿ ಅಂತ ಕಮೆಂಟ್ ಮಾಡಿದ್ರೆ, ಹಲವರು ಸೋದರನ ಜೊತೆ ಈ ರೀತಿ ನಡೆದುಕೊಳ್ಳೋದಾ ಎಂದು ಬರೆದುಕೊಂಡಿದ್ದರು. ಒಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ಸುಂದರ ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ಸಾರಾ ಸದ್ದು ಮಾಡುತ್ತಿದ್ದಾರೆ.

  • ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    -ಸೈಫ್ ಪುತ್ರಿಯ ಸ್ವಿಮಿಂಗ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ, ಸೈಫ್ ಪುತ್ರಿ ಸಾರಾ ಅಲಿಖಾನ್ ಸ್ವಿಮಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡ್ತಿದೆ. ಈಜುಕೊಳದಲ್ಲಿ ಮತ್ಸಕನ್ನೆಯಂತೆ ಸಾರಾ ಈಜಾಡುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾನ್ಯರಂತೆ ಮುಂಬೈ ರಸ್ತೆಯಲ್ಲಿ ಸಾರಾ ಸೈಕಲ್ ಓಡಿಸಿದ್ದ ವಿಡಿಯೋ ವೈರಲ್ ಆಗಿತ್ತು.

    https://www.instagram.com/p/CDtoJSbpt7E/?utm_source=ig_embed

    ಸಾರಾ ಜೊತೆ ಸೋದರ ಇಬ್ರಾಹಿಂ ಅಲಿ ಖಾನ್ ಸಹ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸೋದರ ಇಬ್ರಾಹಿಂ ಜೊತೆಗಿನ ಸೈಕಲ್ ರೇಸ್ ವಿಡಿಯೋ ಸಾರಾ ಪೋಸ್ಟ್ ಮಾಡಿಕೊಂಡಿದ್ದರು.

    https://www.instagram.com/p/CDtR2Y5JZcH/

    ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರುವ ಸಾರಾ ಮೊದಲ ಚಿತ್ರದ ನಟನೆಗೆ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು. ತದನಂತರ ಸಿಂಬಾದಲ್ಲಿಯೂ ಸಾರಾ ನಟಿಸಿದ್ದಾರೆ. ಸದ್ಯ ವರುಣ್ ಧವನ್ ಗೆ ಜೊತೆಯಾಗಿ ಕೂಲಿ ನಂಬರ್ ಒನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    https://www.instagram.com/p/CDdqAhBJ-XV/

  • ಮುಂಬೈ ರಸ್ತೆಯಲ್ಲಿ ಸೈಕಲ್ ಓಡಿಸಿದ ಬಾಲಿವುಡ್ ನಟಿ

    ಮುಂಬೈ ರಸ್ತೆಯಲ್ಲಿ ಸೈಕಲ್ ಓಡಿಸಿದ ಬಾಲಿವುಡ್ ನಟಿ

    -ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮುಂಬೈನ ರಸ್ತೆಯಲ್ಲಿ ಸೈಕಲ್ ಓಡಿಸಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಹೆಚ್ಚು ಇಷ್ಟಪಡುತ್ತಿದ್ದಾರೆ.

    ಸಾಮಾನ್ಯರಂತೆ ಸೈಕಲ್ ಏರಿದ ಸಾರಾ ಮುಂಬೈ ಸುತ್ತಾಡಿದ್ದಾರೆ. ಮನೆಯಲ್ಲಿ ಧರಿಸಿರುವ ಸಾಮಾನ್ಯ ಬಟ್ಟೆಯನ್ನ ತೊಟ್ಟಿರುವ ಸಾರಾ ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಜನರು ನಟಿಯನ್ನು ಗುರುತಿಸಿಲ್ಲ. ಸಾರಾರನ್ನು ಗುರುತಿಸಿದ ಕೆಲವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಸಾರಾ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ಜೊತೆಯಾಗಿ ಸಾರಾ ನಟಿಸಿದ್ದರು. ರಣ್‍ವೀರ್ ಸಿಂಗ್ ನಟನೆಯ ಸಿಂಬಾ ಸಿನಿಮಾದಲ್ಲಿಯೂ ಸಾರಾ ನಟಿಸಿದ್ದಾರೆ. ಸದ್ಯ ಕೈಯಲ್ಲಿ ಕೂಲಿ ನಂಬರ್ ಒನ್ ಮತ್ತು ಅತರಂಗಿ ಸಿನಿಮಾಗಳಿವೆ. ಕೂಲಿ ನಂಬರ್ ಒನ್ ನಲ್ಲಿ ವರುಣ್ ಧವನ್ ನಾಯಕನಾದ್ರೆ, ಅತರಂಗಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ನಾಯಕ ನಟರಾಗಿದ್ದಾರೆ.

    https://www.instagram.com/p/CDEvs7yHl1V/

  • ‘ತಮ್ಮನ ಜೊತೆ ಈ ರೀತಿಯ ಡ್ರೆಸ್ ಹಾಕಲು ನಾಚಿಕೆಯಾಗಲ್ವಾ?’- ನೆಟ್ಟಿಗರಿಂದ ಸಾರಾಗೆ ಕ್ಲಾಸ್

    ‘ತಮ್ಮನ ಜೊತೆ ಈ ರೀತಿಯ ಡ್ರೆಸ್ ಹಾಕಲು ನಾಚಿಕೆಯಾಗಲ್ವಾ?’- ನೆಟ್ಟಿಗರಿಂದ ಸಾರಾಗೆ ಕ್ಲಾಸ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ತಮ್ಮನ ಜೊತೆಗಿರುವ ಬಿಕಿನಿ ಫೋಟೋ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಗುರುವಾರ ಸಾರಾ ಅಲಿ ಖಾನ್ ಇನ್‍ಸ್ಟಾದಲ್ಲಿ ತನ್ನ ತಮ್ಮ ಇಬ್ರಾಹಿಂ ಅಲಿ ಖಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಹಿಂದೆ ಸಾರಾ ಮಾಲ್ಡೀವ್ಸ್ ಗೆ ಹೋಗಿದ್ದಾಗ ಬಿಕಿನಿ ಧರಿಸಿ ಇಬ್ರಾಹಿಂ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋವನ್ನು ಸಾರಾ ಗುರುವಾರ ಇನ್‍ಸ್ಟಾದಲ್ಲಿ ಹಾಕಿ, ತನ್ನ ತಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು.

    ಸಾರಾ ಇನ್‍ಸ್ಟಾದಲ್ಲಿ ಬಿಕಿನಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡರು. ಕೆಲವರು ತಮ್ಮನ ಜೊತೆ ಬಿಕಿನಿ ಧರಿಸಿ ನಿಲ್ಲಲ್ಲು ನಾಚಿಕೆ ಆಗಲ್ವಾ ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, ಧರ್ಮದ ಬಗ್ಗೆ ಮಾತನಾಡಿ ಸಾರಾ ಅವರಿಗೆ ಕ್ಲಾಸ್ ತೆಗೆದುಕೊಂಡರು.

    ಮತ್ತೆ ಕೆಲವರು, ‘ಲವ್ ಆಜ್ ಕಲ್’ ಚಿತ್ರದಲ್ಲಿ ನಿಮ್ಮ ನಟನೆ ನೋಡಲು ಆಗುತ್ತಿರಲಿಲ್ಲ. ಇದೀಗ ಈ ಫೋಟೋ ನೋಡಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ತಮ್ಮನ ಮುಂದೆ ನಿಮಗೆ ಹೇಗೆ ಬಿಕಿನಿ ಧರಿಸಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

    ಸದ್ಯ ಸಾರಾ ತಮ್ಮ ಮುಂಬರುವ ‘ಅತರಂಗಿ ರೇ’ ಸಿನಿಮಾದ ಶೂಟಿಂಗ್‍ಗಾಗಿ ಬನಾರಸ್‍ನಲ್ಲಿ ಇದ್ದಾರೆ. ಈ ಚಿತ್ರವನ್ನು ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನ ಮಾಡುತ್ತಿದ್ದು, ಸಾರಾ ಜೊತೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ತಮಿಳು ನಟ ಧನುಶ್ ನಟಿಸುತ್ತಿದ್ದಾರೆ.

  • ಕಾರ್ತಿಕ್ ಕೈಯನ್ನ ಸೊಂಟದ ಮೇಲಿರಿಸಿಕೊಂಡ ಸೈಫ್ ಪುತ್ರಿ ಸಾರಾ

    ಕಾರ್ತಿಕ್ ಕೈಯನ್ನ ಸೊಂಟದ ಮೇಲಿರಿಸಿಕೊಂಡ ಸೈಫ್ ಪುತ್ರಿ ಸಾರಾ

    ಮುಂಬೈ: ಸೊಂಟದ ಮೇಲೆ ಕೈ ಇಡು ಎಂದು ಬಾಲಿವುಡ್‍ನ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಹ ನಟ, ಗೆಳೆಯ ಕಾರ್ತಿಕ್ ಆರ್ಯನ್‍ಗೆ ಸೂಚನೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ನಟನೆಯ ‘ಲವ್ ಆಜ್ ಕಲ್’ ಸಿನಿಮಾ ಪ್ರೇಮಿಗಳ ದಿನವಾದ ಫೆಬ್ರವರಿ 14ದಂದು ತೆರೆ ಕಾಣಲಿದೆ. ಹೀಗಾಗಿ ಈ ಜೋಡಿ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

    ಸಿನಿಮಾ ಪ್ರಚಾರದ ವೇಳೆ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ವೇದಿಕೆ ಮೇಲೆ ನಿಂತಿದ್ದರು. ಕಾರ್ಯಕ್ರಮದ ಬಳಿಕ ಕ್ಯಾಮೆರಾ ಪೋಸ್ ಕೊಡುತ್ತಿದ್ದಾಗ ಸಾರಾ ಗೆಳೆಯ ಆರ್ಯನ್ ಕೈಯನ್ನು ಹಿಡಿದುಕೊಂಡು ಸೊಂಟದ ಮೇಲೆ ಇಟ್ಟುಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ಕಾರ್ತಿಕ್ ಆರ್ಯನ್ ಜೊತೆ ಸಾರಾ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಚಿತ್ರದ ಲಿಪ್‍ಕಿಸ್ ದೃಶ್ಯ ವೈರಲ್ ಆಗಿತ್ತು. ಆದ್ರೆ ಸೆನ್ಸಾರ್ ಬೋರ್ಡ್ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದೆ.

    2009ರಲ್ಲಿ ಸೈಫ್ ಅಲಿ ಖಾನ್ ನಟನೆಯ `ಲವ್ ಆಜ್ ಕಲ್’ ಸಿನಿಮಾ ತೆರೆಗೆ ಬಂದಿತ್ತು. ದೀಪಿಕಾ ನಾಯಕಿಯಾಗಿದ್ದ ಈ ಚಿತ್ರಕ್ಕೆ ಇಮ್ತಿಯಾಜ್ ಅಲಿ ಖಾನ್ ನಿರ್ದೇಶನ ಮಾಡಿದ್ದರು. ಇದಾದ ಸುಮಾರು 10 ವರ್ಷಗಳ ಬಳಿಕ ಇದೇ ಶೀರ್ಷಿಕೆ ಇಟ್ಟುಕೊಂಡು ಅವರು ಆ್ಯಯಕ್ಷನ್ ಕಟ್ ಹೇಳಲಾಗಿದೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ.

  • ಸಾರಾಗೆ ಮುತ್ತು ಕೊಡಲು ಬಂದ ಅಭಿಮಾನಿ – ಕಕ್ಕಾಬಿಕ್ಕಿ ಆದ ನಟಿ: ವಿಡಿಯೋ

    ಸಾರಾಗೆ ಮುತ್ತು ಕೊಡಲು ಬಂದ ಅಭಿಮಾನಿ – ಕಕ್ಕಾಬಿಕ್ಕಿ ಆದ ನಟಿ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರಿಗೆ ಅಭಿಮಾನಿಯೊಬ್ಬ ಮುತ್ತು ಕೊಡಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಾರಾ ಅಲಿ ಖಾನ್ ಪ್ರತಿದಿನ ಜಿಮ್‍ಗೆ ಹೋಗುತ್ತಾರೆ. ಈ ವೇಳೆ ಅಲ್ಲಿಗೆ ಬರುವ ಪತ್ರಕರ್ತರ ಜೊತೆ ಹಾಗೂ ಅಭಿಮಾನಿಗಳನ್ನು ಮಾತನಾಡಿಸುತ್ತಾರೆ. ಹೀಗೆ ಸಾರಾ ಜಿಮ್‍ಯಿಂದ ಹೊರಗೆ ಬಂದು ಮಾತನಾಡಿಸುವಾಗ ಅಭಿಮಾನಿ ಮುತ್ತು ಕೊಡಲು ಮುಂದಾಗಿದ್ದಾನೆ. ಅಭಿಮಾನಿಯ ವರ್ತನೆಯಿಂದ ಸಾರಾ ಆಶ್ಚರ್ಯಗೊಂಡರು. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯಿಂದ ದೂರವಾದ ಸಾರಾ: ವಿಡಿಯೋ

    ಜಿಮ್‍ಯಿಂದ ಹೊರ ಬರುವಾಗ ಸಾರಾ ಅಲ್ಲಿದ್ದ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಸಾರಾ ಅವರಿಗೆ ಶೇಕ್ ಹ್ಯಾಂಡ್ ಕೊಟ್ಟು ಅವರ ಕೈ ಮೇಲೆ ಮುತ್ತು ಕೊಡಲು ಮುಂದಾಗಿದ್ದಾನೆ. ತಕ್ಷಣ ಸಾರಾ ತನ್ನ ಕೈಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸಾರಾ ಬಾಡಿಗಾರ್ಡ್ ಆ ವ್ಯಕ್ತಿಯನ್ನು ಹಿಂದೆ ತಳ್ಳುತ್ತಾರೆ. ಈ ವಿಡಿಯೋವನ್ನು ವೈರಲ್ ಭಯಾನಿ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಇತ್ತೀಚೆಗೆ ಸಾರಾ ರಜೆ ದಿನಗಳನ್ನು ಕಳೆಯಲು ಮಾಲ್ಡೀವ್ಸ್‍ಗೆ ಹೋಗಿದ್ದರು. ಸಾರಾ ತಮ್ಮ ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆ ಎಂಜಾಯ್ ಮಾಡಿದ್ದಾರೆ. ಸಾರಾ ರಜೆ ದಿನಗಳಲ್ಲಿ ಕಳೆದ ಫೋಟೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಮಾಲ್ಡೀವ್ಸ್ ಫೋಟೋಗಳು ತುಂಬಾ ವೈರಲ್ ಆಗುತ್ತಿದೆ. ಜೊತೆಗೆ ಸಾರಾ ಬಿಕಿನಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯಿಂದ ದೂರವಾದ ಸಾರಾ: ವಿಡಿಯೋ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯಿಂದ ದೂರವಾದ ಸಾರಾ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯಿಂದ ದೂರ ಹೋಗಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಸಾರಾ ಅಲಿ ಖಾನ್ ನ್ಯೂಯಾರ್ಕ್ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ್ದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಸಾರಾ ಮೊದಲು ಎಲ್ಲರ ಬಳಿಯೂ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಬಳಿಕ ಮತ್ತೊಬ್ಬ ಅಭಿಮಾನಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅಭಿಮಾನಿ ಅವರ ಹತ್ತಿರ ಬಂದಿದ್ದಾನೆ.

    ಅಭಿಮಾನಿ ಹತ್ತಿರ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸಾರಾ ಅವರಿಂದ ಒಂದು ಹೆಜ್ಜೆ ಹಿಂದೆ ಹೋಗಿ ಪೋಸ್ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಪೋಸ್ ನೀಡುವ ವೇಳೆ ಸಾರಾ ಅವರ ಕೈ ಅಭಿಮಾನಿಗೆ ಟಚ್ ಆಗುತ್ತದೆ. ಇದರಿಂದ ಸಾರಾ ಅವರಿಗೆ ಮುಜುಗರವಾಗುತ್ತದೆ. ಬಳಿಕ ಅವರು ದೂರದಲ್ಲಿ ನಿಂತುಕೊಂಡೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಸಾರಾ ಅಭಿಮಾನಿ ಬಳಿ ನಡೆದುಕೊಂಡ ವರ್ತನೆ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಟ ವರುಣ್ ಧವನ್ ಜೊತೆ ಸಾರಾ ‘ಕೂಲಿ ನಂ 1′ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. 1995ರಲ್ಲಿ ನಟ ಗೋವಿಂದ ಹಾಗೂ ಕರೀಶ್ಮಾ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ರಿಮೇಕ್ ಚಿತ್ರದಲ್ಲಿ ಸಾರಾ ಹಾಗೂ ವರುಣ್ ನಟಿಸುತ್ತಿದ್ದಾರೆ. ಇದಾದ ಬಳಿಕ ಸಾರಾ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದ `ಆಜ್‍ಕಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾರಾಗೆ ನಾಯಕನಾಗಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ.

     

    View this post on Instagram

     

    #saraalikhan is back from New York #airportdiaries #viralbhayani @viralbhayani

    A post shared by Viral Bhayani (@viralbhayani) on