Tag: Sara Ali Khan

  • ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

    ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಜಾನ್ವಿ ಕಪೂರ್ ಬಗ್ಗೆ ಮಾತನಾಡಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

    ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರನ್ನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟೀಸ್ ಎನ್ನಲಾಗುತ್ತಿದೆ. ಅವರಿಬ್ಬರು ಯಾವಾಗಲೂ ಒಟ್ಟಿಗೆ ಟ್ರಿಪ್ ಹೋಗುವುದು, ಒಂದೇ ಜಿಮ್ ಟ್ರೈನರ್ ತೆಗೆದುಕೊಂಡಿರುವುದನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ

    ಜಾನ್ವಿ ಕಪೂರ್ ಜೊತೆಗಿನ ಬಾಂಧವ್ಯದ ಕುರಿತು ಮಾತನಾಡಿದ ಸಾರಾ, ಜನರು ಯೋಚಿಸಿದಂತೆ ಜಾನ್ವಿ ಮತ್ತು ನಾನು ಹೆಚ್ಚು ಸಾಮ್ಯತೆ ಹೊಂದಿದ್ದೇವೆ. ನಾವು ಉತ್ತಮ ಸ್ನೇಹಿತರಲ್ಲ. ನಾವಿಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರಲ್ಲಿಯೂ ಮಹತ್ವಾಕಾಂಕ್ಷೆಗಳಿವೆ. ವೃತ್ತಿ ಜೀವನದಲ್ಲಿ ಇಬ್ಬರು ಒಂದೇ ವೃತ್ತಿಯಲ್ಲಿದ್ದೇವೆ. ನಾವಿಬ್ಬರು ಬಲಿಷ್ಠ ಹುಡುಗಿಯರು ಎಂದರು.

     

    View this post on Instagram

     

    A post shared by Janhvi Kapoor (@janhvikapoor)

    ನಾವು ಈ ಕೋವಿಡ್ ಕಾರಣದಿಂದ ನಮ್ಮ ವೃತ್ತಿಜೀವನದ ಎರಡು ವರ್ಷಗಳನ್ನು ಕಳೆದುಕೊಂಡಿದ್ದೇವೆ. ರಾಧಿಕಾ ಮದನ್ ಆಗಿರಲಿ ಅಥವಾ ಜಾನ್ವಿಯಾಗಿರಲಿ, ನಾನು ಅವರಿಬ್ಬರನ್ನೂ ನಿಜವಾಗಿಯೂ ಇಷ್ಟಪಡುತ್ತೇನೆ. ನಮಗೆ ನಮ್ಮ ಬಗ್ಗೆ ಗೊತ್ತಿದೆ. ಈ ಕಾರಣಕ್ಕೆ ಅನನ್ಯಾ ಪಾಂಡೆ, ರಾಧಿಕಾ, ಜಾನ್ವಿ ಅಥವಾ ನಾನು ಎಲ್ಲರೂ ಇಂದು ಇಲ್ಲಿರಲು ಸಾಧ್ಯವಾಗಿದೆ. ನಮ್ಮೆಲ್ಲರಲ್ಲಿಯೂ ಒಂದೊಂದು ವಿಶೇಷತೆ ಇದೆ. ನಾವು ಅದನ್ನು ನಂಬಬೇಕು ಎಂದು ವಿವರಿಸಿದರು.

    ನಾನು ಸೆಟ್‍ನಲ್ಲಿ ನನ್ನ ಜೀವನ ಒಗ್ಗಿಕೊಳ್ಳುವ ಹೊತ್ತಿಗೆ, ಲಾಕ್‍ಡೌನ್ ಬಂತು. ಈ ಕೊರೊನಾದಿಂದ ನನ್ನ ಎಲ್ಲ ಯೋಜನೆಗಳು ನಿಂತು ಹೋಗಿದೆ. ಅದು ನಮ್ಮನ್ನು ಕಟ್ಟಿ ಹಾಕ್ಕಿತ್ತು. ನಾನು ಜಾನ್ವಿಗಿಂತ ಹೆಚ್ಚು ಸೆಟ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?

    ಜಾನ್ವಿ ಮತ್ತು ಸಾರಾ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಸಾರಾ, ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿರುವ ವಿಕ್ಕಿ ಕೌಶಲ್ ಮುಖ್ಯ ಭೂಮಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ‘ಗುಡ್ ಲಕ್ ಜೆರ್ರಿ’ ಮತ್ತು ‘ದೋಸ್ತಾನಾ 2’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

  • ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗೆ ಕಾಶ್ಮೀರ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಸದ್ಯ ಕಾಶ್ಮೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಸಾರಾ ಅಲಿ ಖಾನ್ ಅಲ್ಲಿ ಕೆಲವೊಂದಷ್ಟು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ನೋಟ ಪಡೆಯಿತು ರಾಜ್ ಕುಂದ್ರಾ ಇನ್‍ಸ್ಟಾಗ್ರಾಮ್ ಪ್ರೊಫೈಲ್

    ಫೋಟೋದಲ್ಲಿ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಹಿಂದೆ ಹಿಮದ ಗಡ್ಡೆ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ವೀಡಿಯೋವೊಂದರಲ್ಲಿ ಇಬ್ರಾಹಿಂ ಅಲಿ ಖಾನ್ ಐಸ್ ಮೇಲೆ ಸ್ಕೇಟಿಂಗ್ ಆಡಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಕ್ಯಾಪ್ಷನ್‍ನಲ್ಲಿ ಸಹೋದರ ಎಲ್ಲಿರುತ್ತಾನೋ ಅದೇ ಮನೆಯಾಗಿರುತ್ತದೆ ಎಂದು ಪ್ರೀತಿಯಿಂದ ಸಾರಾ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Sara Ali Khan (@saraalikhan95)

    ಸಾರಾ ಶೇರ್ ಮಾಡಿರುವ ಮೊದಲ ಫೋಟೋದಲ್ಲಿ ಇಬ್ರಾಹಿಂ ಜೊತೆ ಕಾರಿನ ಮೇಲೆ ಕುಳಿತುಕೊಂಡಿದ್ದಾರೆ, ಎರಡನೇ ಫೋಟೋದಲ್ಲಿ ಪಿಂಕ್ ಕಲರ್ ಟೋಪಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಮತ್ತೊಂದರಲ್ಲಿ ಸ್ನೇಹಿತರೊಂದಿಗೆ ಮಂಜು ಗಡ್ಡೆಯಿಂದ ಹಿಮಮಾನವನನ್ನು ನಿರ್ಮಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ

    ಒಟ್ಟಾರೆ ಹಲವಾರು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಾರಾ ಅಲಿ ಖಾನ್ ಅವರು ಕಾಶ್ಮೀರದಲ್ಲಿನ ತಾಪಮಾನ ಮೈನಸ್ 7ಡಿಗ್ರಿ ಇತ್ತು ಎಂದು ತಿಳಿಸಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಹಲವಾರು ಲೈಕ್ಸ್‍ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಸಾರಾ ಹಾಗೂ ಇಬ್ರಾಹಿಂ ಇಬ್ಬರೂ ಸುರಕ್ಷಿತವಾಗಿರಿ ಮತ್ತು ಅದ್ಭುತವಾದಂತಹ ಸಮಯ ಕಳೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ತಾಯಿ ಜೊತೆ ಹಿಂದೂ ದೇವಾಲಯಕ್ಕೆ  ಭೇಟಿಕೊಟ್ಟ ಸಾರಾ ಅಲಿ ಖಾನ್

    ತಾಯಿ ಜೊತೆ ಹಿಂದೂ ದೇವಾಲಯಕ್ಕೆ ಭೇಟಿಕೊಟ್ಟ ಸಾರಾ ಅಲಿ ಖಾನ್

    ಮುಂಬೈ: ಬಾಲಿವುಟ್ ನಟಿ ಸಾರಾ ಅಲಿ ಖಾನ್ ಅವರು ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ತಾಯಿ ಅಮೃತಾ ಸಿಂಗ್ ಜೊತೆಗೆ ಸಾರಾ ತಮ್ಮ ಪ್ರವಾಸದ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಮಾ ಔರ್ ಮಹಾಕಾಲ್ ಎಂದು ಶಿರ್ಷಿಕೆಯನ್ನು ನೀಡಿದ್ದಾರೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾರಾ ಭಕ್ತಿಕಂಡ ಅಭಿಮಾನಿಗಳು ಕಾಮೆಂಟ್‍ಗಳ ವಿಭಾಗದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

     

    View this post on Instagram

     

    A post shared by Sara Ali Khan (@saraalikhan95)

    ನಟ ವಿಕ್ಕಿ ಕೌಶಲ್ ಅವರೊಂದಿಗೆ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿರುವ ಸಾರಾ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಶೂಟಿಂಗ್ ದಿನಗಳ ಗ್ಲಿಂಪ್‍ಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ.

    ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ. ಸೈಫ್ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜೊತೆ ಇದ್ದಾರೆ. ಇತ್ತೀಚೆಗೆ ಸಾರಾ ತಾವು ಮದುವೆಯಾಗುವ ಹುಡುಗ ಹೇಗೆ ಇರಬೇಕು ಎಂದು ಕೆಲವು ಕಂಡೀಶನ್ ಹಾಕಿದ್ದರು. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜೊತೆ ವಾಸ ಮಾಡಬೇಕು. ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜೊತೆ ಇರಬೇಕು ಎಂದು ಹೇಳಿದ್ದರು.

  • ಬೈಕ್‌ಗೆ ನಕಲಿ ನಂಬರ್ ಪ್ಲೇಟ್ – ವಿಕ್ಕಿ ಕೌಶಲ್ ವಿರುದ್ಧ ಕೇಸ್

    ಬೈಕ್‌ಗೆ ನಕಲಿ ನಂಬರ್ ಪ್ಲೇಟ್ – ವಿಕ್ಕಿ ಕೌಶಲ್ ವಿರುದ್ಧ ಕೇಸ್

    ಇಂದೋರ್: ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ಮಧ್ಯಪ್ರದೇಶದ ಇಂದೋರ್ ಮೂಲದ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ. ಫೋಟೋ ಹಾಗೂ ದಾಖಲೆ ಸಮೇತ ಕೇಸು ದಾಖಲಿಸಲಾಗಿದೆ.

    ಸಿನಿಮಾವೊಂದರ ಶೂಟಿಂಗ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿಖಾನ್ ಅವರು ಬೈಕ್‌ನಲ್ಲಿ ಸಂಚರಿಸುತ್ತಿರುವ ಟೀಸರ್ ಬಿಡುಗಡೆಯಾಗಿತ್ತು. ಆದರೆ ಆ ಬೈಕ್‌ನಲ್ಲಿ ತನ್ನ ವಾಹನದ ನಂಬರ್ ಪ್ಲೇಟ್ ಅನ್ನು ತನ್ನ ಅನುಮತಿಯಿಲ್ಲದೆ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ದರಿಂದ ಈ ವಿಚಾರವಾಗಿ ದೂರು ನೀಡಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಇಂದೋರ್‌ನ ಬಂಗಾಂಗದ ಸಬ್ ಇನ್ಸ್ ಪೆಕ್ಟರ್ ಮಾತನಾಡಿ, ಈ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಯಾದವ್ ಅವರು ತಮ್ಮ ಲೈಸೆನ್ಸ್ ಪ್ಲೇಟ್ ನಂಬರ್ ಹಾಗೂ ದೂರಿನ ಪ್ರತಿಯನ್ನು ಅವರು ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅವರ ಡಿ ಗ್ಲಾಮ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಫೋಟೋದಲ್ಲಿ ಇಬ್ಬರೂ ಬಾಲಿವುಡ್ ಸ್ಟಾರ್‌ಗಳು ಇಂದೋರ್ ಸ್ಟ್ರೀಟ್‌ನಲ್ಲಿ ಸುತ್ತಾಡುವುದನ್ನು ಕಾಣಬಹುದು. ಇದನ್ನೂ ಓದಿ: ಇಂದಿನಿಂದ 15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ

  • ಫ್ಯೂಚರ್ ಗಂಡನಿಗೆ ಈಗಲೇ ಷರತ್ತು ಹಾಕಿದ ಸಾರಾ ಅಲಿ ಖಾನ್

    ಫ್ಯೂಚರ್ ಗಂಡನಿಗೆ ಈಗಲೇ ಷರತ್ತು ಹಾಕಿದ ಸಾರಾ ಅಲಿ ಖಾನ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಫ್ಯೂಚರ್ ಗಂಡನಿಗೆ ಕೆಲವು ಷರತ್ತುಗಳನ್ನು ಹಾಕಲಿದ್ದಾರೆ ಅಂತೆ. ಈ ಕುರಿತಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಸುದ್ದಿಯಾಗುತ್ತಿದೆ.

    ಫ್ಯೂಚರ್ ಗಂಡನಿಗೆ ಈಗಲೇ ಷರತ್ತು ಹಾಕಿದ ಸಾರಾ ಅಲಿ ಖಾನ್

    ಸಾರಾ ಅಲಿ ಖಾನ್ ನಟನೆಯ ರೇ ಸಿನಿಮಾ ಕ್ರಿಸ್‍ಮಸ್ ಪ್ರಯುಕ್ತ ಈ ಚಿತ್ರ ಡಿಸೆಂಬರ್ 24ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾರಾ ಬ್ಯುಸಿ ಆಗಿದ್ದಾರೆ. ಇದೇ ವೇಳೆ ಅವರು ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳುವುದರ ಜೊತೆಗೆ ಅವರ ಷರತ್ತು ಏನು ಎಂಬುದನ್ನು ಹೇಳಿದ್ದಾರೆ. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    sara ali khan

    ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ. ಸೈಫ್ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜೊತೆ ಇದ್ದಾರೆ. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜೊತೆ ವಾಸ ಮಾಡಬೇಕು. ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜೊತೆ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

  • ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟ ಸಾರಾ ಅಲಿಖಾನ್

    ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟ ಸಾರಾ ಅಲಿಖಾನ್

    ಜೈಪುರ: ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಹೋಗಿದ್ದು, ಈ ವೇಳೆ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    sara ali khan

    ಬಾಲಿವುಡ್‍ನ ಯುವ ನಟಿಯರಲ್ಲಿ ಸಾರಾ ಅಲಿಖಾನ್ ಕೂಡ ಒಬ್ಬರಾಗಿದ್ದು, ಸದ್ಯ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಷ್ಟು ದಿನ ಮಾಲ್ಡೀವ್ಸ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಾರಾ ಇದೀಗ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ನೆಮ್ಮದಿಯಿಂದ ಕಾಲ ಕಳೆಯುತ್ತಿರುವ ಸಾರಾ ಅಲಿ ಖಾನ್ ಕೆಲವು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಾರಾ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    sara ali khan

    ಕೆಲವು ದಿನಗಳ ಹಿಂದೆಯಷ್ಟೇ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಾರತೀಯ ಸೈನಿಕರನ್ನು ಭೇಟಿಯಾಗಿದ್ದ ಸಾರಾ ಅಲಿ ಖಾನ್ ಇದೀಗ ಉದಯಪುರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಮತ್ತು ಸರೋವರವೊಂದರ ಬಳಿ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳನು ಸಾರಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

    ಇತ್ತೀಚೆಗಷ್ಟೇ ಸಾರಾ ಅಲಿ ಖಾನ್ ಮಾಲ್ಡೀವ್ಸ್ ಭೇಟಿ ನೀಡಿದ್ದ ಹಳೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಸಾರಾ ನೀಲಿ ಬಣ್ಣದ ಸ್ವಿಮ್ಮಿಂಗ್ ಡ್ರೆಸ್ ತೊಟ್ಟು ತಂಪಾದ ಗಾಳಿ ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by Sara Ali Khan (@saraalikhan95)

    ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಕಾಲಿವುಡ್ ನಟ ಧನುಷ್ ಜೊತೆ ಅತ್ರಂಗಿ ರೇ ಎಂಬ ಸಿನಿಮಾದಲ್ಲಿ ಸಾರಾ ಅಲಿಖಾನ್ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಈ ಸಿನಿಮಾಕ್ಕಾಗಿ ಡಬ್ ಮಾಡಿದ್ದಾರೆ. ಈ ಮುನ್ನ ರಣ್‍ವೀರ್ ಸಿಂಗ್ ಜೊತೆ ಸಿಂಬಾ, ನಟ ಕಾರ್ತಿಕ್ ಲವ್ ಆಜ್ ಕಲ್-2, ದಿವಗಂತ ನಟ ಸುಸಾಂತ್ ಸಿಂಗ್ ಜೊತೆ ಕೇದರನಾಥ್ ಸಿನಿಮಾದಲ್ಲಿ ಅಭಿನಯಿಸಿದ್ದರು.

  • ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    ಮುಂಬೈ: ಬಾಲಿವುಡ್‍ನ ಸ್ಟಾರ್ ನಟ ಸೈಫ್ ಅಲಿ ಖಾನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರ 2ನೇ ಮಗನ ಮುದ್ದಾದ ಫೋಟೋ ವೈರಲ್ ಆಗಿದೆ.

    ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯ ಮಗಳು ಸಾರಾ ಆಲಿ ಖಾನ್ ತಂದೆಯ ಜನ್ಮದಿನಕ್ಕೆ ಶುಭಕೋರಿ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಜಹಾಂಗೀರ್ ಅಲಿ ಖಾನ್ ಪೋಸ್ ಗಮನ ಸೆಳೆಯುತ್ತಿದೆ. ಕರೀನಾ ತಮ್ಮ ಮುದ್ದು ಮಗನ ಫೋಟೋವನ್ನು ಇಲ್ಲಿವರೆಗೂ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಆದರೆ ಕೆಲವು ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. ಇದನ್ನೂ ಓದಿ:  ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

     

    View this post on Instagram

     

    A post shared by Sara Ali Khan (@saraalikhan95)

    ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನನ್ನ ಪಾಲಿನ ಸೂಪರ್ ಹೀರೋ ಆಗಿರುವುದಕ್ಕೆ ನಿಮಗೆ ಧನ್ಯವಾದಗಳು. ಬುದ್ಧಿವಂತ ಸ್ನೇಹಿತ, ಒಳ್ಳೆಯ ಮಾತುಗಾರ ಮತ್ತು ನನಗೆ ದೊಡ್ಡ ಸಪೋರ್ಟ್‍ರ್ ಆಗಿದ್ದೀರಿ. ಲವ್ ಯೂ ಎಂಬ ಕ್ಯಾಪ್ಷನ್‍ನೊಂದಿಗೆ ಸಾರಾ ಆಲಿ ಖಾನ್ ಈ ಫೋಟೋ ಶೇರ್ ಮಾಡಿದ್ದಾರೆ. ಜಹಾಂಗೀರ್ ತುಂಬಾ ಮುದ್ದಾಗಿದ್ದಾನೆ ಎಂದು ಜನರೆಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಸೈಫ್ ಅವರ ಇನ್ನೋರ್ವ ಪುತ್ರ ತೈಮೂರ್ ಅಲಿ ಖಾನ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾನೆ. ಇದನ್ನೂ ಓದಿ:  ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಅಭಿಮಾನಿಗಳು ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಂದ ಸೋಶಿಯಲ್ ಮೀಡಿಯಾ ಮೂಲಕ ಸೈಫ್‍ಗೆ ಶುಭಾಶಕೊರುತ್ತಿದ್ದಾರೆ. ಹಾಗೂ ಜಹಾಂಗೀರ್ ಅಲಿ ಖಾನ್ ಅನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಡ್ರಗ್ಸ್ ಸೇವಿಸಲ್ಲ, ಸ್ಮೋಕ್ ಮಾಡ್ತೀನಿ: ಸಾರಾ ಅಲಿ ಖಾನ್

    ಡ್ರಗ್ಸ್ ಸೇವಿಸಲ್ಲ, ಸ್ಮೋಕ್ ಮಾಡ್ತೀನಿ: ಸಾರಾ ಅಲಿ ಖಾನ್

    -ಧರ್ಮ ಪ್ರೊಡೆಕ್ಷನ್ ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್ ಅರೆಸ್ಟ್
    -ಡ್ರಗ್ಸ್ ಸೇವನೆ ಆರೋಪ ತಳ್ಳಿ ಹಾಕಿದ ಶ್ರದ್ಧಾ
    -ವಿಚಾರಣೆ ಮುಗಿಸಿ ಬಂದ ಸಾರಾ, ಶ್ರದ್ಧಾ

    ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಮುಂದೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಹಾಜರಾಗಿದ್ದರು. ವಿಚಾರಣೆ ವೇಳೆ ಸಾರಾ ಮತ್ತು ಶ್ರದ್ಧಾ ಡ್ರಗ್ಸ್ ಸೇವನೆಯ ಆರೋಪವನ್ನ ತಳ್ಳಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇತ್ತ ಬಿಟೌನ್ ಪದ್ಮಾವತಿ ದೀಪಿಕಾ ಪಡುಕೋಣೆ ವಿಚಾರಣೆ ಅಂತ್ಯವಾಗಿದ್ದು, ಮ್ಯಾನೇಜರ್ ಕರೀಷ್ಮಾ ಜೊತೆ ಎನ್‍ಸಿಬಿ ಕಚೇರಿಯಿಂದ ಹೊರ ಬಂದಿದ್ದಾರೆ. ಇದನ್ನೂ ಓದಿ: ಐದೂವರೆ ಗಂಟೆ ದೀಪಿಕಾಗೆ ಎನ್‍ಸಿಬಿ ಡ್ರಿಲ್-ಡ್ರಗ್ಸ್ ವ್ಯೂಹದಿಂದ ಹೊರ ಬರ್ತಾರಾ?

    ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸ್ನೇಹ, ಥೈಲ್ಯಾಂಡ್ ಪ್ರವಾಸ ಮತ್ತು ಡ್ರಗ್ಸ್ ಚಾಟ್, ಸೇವನೆ ಕುರಿತಾಗಿ ಶ್ರದ್ಧಾ ಕಪೂರ್ ಅವರನ್ನ ಪ್ರಶ್ನೆ ಮಾಡಲಾಗಿದೆ. ವಿಚಾರಣೆ ವೇಳೆ ಡ್ರಗ್ಸ್ ಸೇವನೆಯ ಆರೋಪವನ್ನ ಶ್ರದ್ಧಾ ತಳ್ಳಿ ಹಾಕಿದ್ದಾರೆ. ಸಿಬಿಡಿ ಆಯಿಲ್ ಗೆ ಸಂಬಂಧಿಸಿದಂತೆ ಜಯಾ ಸಾಹಾ ಜೊತೆ ತಾವು ಚಾಟ್ ನಡೆಸಿರೋದನ್ನ ಶ್ರದ್ಧಾ ಒಪ್ಪಿಕೊಂಡಿದ್ದಾರೆ. ಚಿಚೋರೆ ಸಿನಿಮಾಗಾಗಿ ಸುಶಾಂತ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆದ್ರೆ ಶ್ರದ್ಧಾ ಕಪೂರ್ ನೀಡಿರುವ ಉತ್ತರಗಳಲ್ಲಿ ತನಿಖಾಧಿಕಾರಿಗಳಿಗೆ ಸ್ಪಷ್ಟತೆ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆರು ಗಂಟೆಯ ವಿಚಾರಣೆ ಎದುರಿಸಿದ ಶ್ರದ್ಧಾ ಕಪೂರ್ ಹೊರ ಬಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ- ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ

    ಇತ್ತ ಸಾರಾ ಅಲಿ ಖಾನ್ ಸಹ ಡ್ರಗ್ಸ್ ಸೇವನೆ ಮಾಡಿಲ್ಲ. ಸುಶಾಂತ್ ಜೊತೆಯಲ್ಲಿ ಸ್ಮೋಕ್ ಮಾಡುತ್ತಿದ್ದೆ. ಕೇದಾರನಾಥ್ ಸಿನಿಮಾದಿಂದಾಗಿ ಇಬ್ಬರ ಮಧ್ಯೆ ಒಳ್ಳೆಯ ಸ್ನೇಹವಿತ್ತು. ಸುಶಾಂತ್ ಫಾರ್ಮ್ ಹೌಸ್ ನಲ್ಲಿ ನಡೆದ ಪಾರ್ಟಿಗೆ ಹೋಗಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ಸಂಜೆ 5.30ಕ್ಕೆ ವಿಚಾರಣೆ ಮುಗಿಸಿ ಎನ್‍ಸಿಬಿ ಕಚೇರಿಯಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಡ್ರಗ್ಸ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

    https://www.instagram.com/p/CFmV_RinWv2/

    ಕ್ಷಿತಿಜ್ ಪ್ರಸಾದ್ ಅರೆಸ್ಟ್: ಇಂದು ವಿಚಾರಣೆಗೆ ಹಾಜರಾಗಿದ್ದ ಧರ್ಮ ಪ್ರೊಡೆಕ್ಷನ್ ಎಕ್ಸ್‍ಕ್ಯೂಟಿವ್ ಪ್ರೊಡ್ಯೂಸರ್ ಕ್ಷಿತಿಜ್ ಪ್ರಸಾದ್ ಎಂಬವರನ್ನ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖೆ ಸಹಕರಿಸದ ಹಿನ್ನೆಲೆ ಕ್ಷಿತಿಜ್ ಬಂಧನವಾಗಿದೆ. ಬಂಧನಕ್ಕೊಳಗಾಗಿರುವ ಕ್ಷಿತಿಜ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ದೇಶ ವಿರೋಧಿಗಳ ಜತೆ ದೀಪಿಕಾ ನಿಲ್ತಿದ್ರು: ಬಿಜೆಪಿ ನಾಯಕ

    https://www.instagram.com/p/CFmabz6HRHO/

    ದೀಪಿಕಾ ಮೊಬೈಲ್ ವಶಕ್ಕೆ: ಎನ್‍ಸಿಬಿ ಅಧಿಕಾರಿಗಳ ಪ್ರಶ್ನೆಗೆ ದೀಪಿಕಾ ನೇರವಾಗಿ ಉತ್ತರ ನೀಡದ ಹಿನ್ನೆಲೆ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ನೀವು ಡ್ರಗ್ಸ್ ತೆಗೆದುಕೊಳ್ತೀರಾ ಪ್ರಶ್ನೆಗೆ ದೀಪಿಕಾ ಸ್ಪಷ್ಟವಾದ ಉತ್ತರ ನೀಡಿಲ್ಲ. ಹಾಗೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೇ ಮೌನವಾಗಿದ್ದರು ಎಂದು ಮಾಧ್ಯಮಗಳು ಬಿತ್ತರಿಸಿವೆ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

    https://www.instagram.com/p/CFmMgszHH6k/

    ತಪ್ಪೊಪ್ಪಿಕೊಂಡ ಪೀಕು?: ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವಾಟ್ಸಪ್ ಚಾಟ್ ತಮ್ಮದೇ ಎಂದು ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ವಾಟ್ಸಪ್ ಗ್ರೂಪ್ ಗಳ ಮುಖಾಂತರ ಸಿಗರೇಟ್ ತರಿಸಲಾಗುತ್ತಿತ್ತು ಎಂದು ಮಾತ್ರ ಹೇಳಿದ್ದು, ಚಾಟ್‍ಗೆ ಸಂಬಂಧಿಸಿದ ಪ್ರಶ್ನೆಗಳಿಗೂ ದೀಪಿಕಾ ಉತ್ತರಿಸಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    https://www.instagram.com/p/CFmaPZ-HU-q/

  • ದೀಪಿಕಾ, ಶ್ರದ್ಧಾ, ರಕುಲ್, ಸಾರಾಗೆ ಎನ್‍ಸಿಬಿ ಸಮನ್ಸ್

    ದೀಪಿಕಾ, ಶ್ರದ್ಧಾ, ರಕುಲ್, ಸಾರಾಗೆ ಎನ್‍ಸಿಬಿ ಸಮನ್ಸ್

    ಮುಂಬೈ: ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಗೆ ಎನ್‍ಸಿಬಿ ಸಮನ್ಸ್ ನೀಡಿರೋದು ಅಧಿಕೃತವಾಗಿ ದೃಢಪಟ್ಟಿದೆ. ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಸಮನ್ಸ್ ನೀಡಿದೆ.

    ನಾಲ್ವರು ನಟಿಯರು ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಬಟ್ಟಾ ಎನ್‍ಸಿಬಿ ಈ ವಾರ ಸಮನ್ಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆ ಕೆಲವು ದಿನಗಳ ಹಿಂದೆ ರಿವೀಲ್ ಆಗಿದೆ. ಸಮನ್ಸ್ ನೀಡಿರೋದು ಖಚಿತವಾಗಿದ್ದು, ಯಾವ ದಿನ ವಿಚಾರಣೆಗೆ ಹಾಜರಾಗಲು ಎನ್‍ಸಿಬಿ ಸೂಚಿಸಿದೆ.

    ಸೆಪ್ಟೆಂಬರ್ 24ಕ್ಕೆ ಸಿಮೋನ್ ಖಂಬಟ್ಟಾ, ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 25ಕ್ಕೆ ದೀಪಿಕಾ ಪಡುಕೋಣೆ ಮತ್ತು ಸೆಪ್ಟೆಂಬರ್ 26ಕ್ಕೆ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ವಿಚಾರಣೆಗೆ ಹಾಜರಾಗಬೇಕಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಿದೆ ಎನ್ನಲಾಗಿದೆ. ರಿಯಾ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸುಮಾರು 25 ತಾರೆಯರ ಹೆಸರು ಹೇಳಿದ್ದಾರೆ ಎಂದು ವರದಿಯಾಗಿದೆ.

    ಎರಡು ದಿನಗಳ ಹಿಂದೆ ಡ್ರಗ್ಸ್ ಖರೀದಿಗಾಗಿ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

    ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್ ಸ್ಕ್ರೀನ್‍ಶಾಟ್ ರಿವೀಲ್ ಆಗಿತ್ತು ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಆದ್ರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

  • ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

    ಈ ವಾರ ಸಾರಾ, ಶ್ರದ್ಧಾ, ರಕುಲ್‍ಗೆ ಎನ್‍ಸಿಬಿ ಸಮನ್ಸ್?

    ಮುಂಬೈ: ಈ ವಾರ ಬಾಲಿವುಡ್ ತಾರೆಯರಾದ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಭಾಟಾರಿಗೆ ಸಮನ್ಸ್ ನೀಡಲು ಎನ್‍ಸಿಬಿ ಸಿದ್ಧತೆ ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಲಿದೆ ಎನ್ನಲಾಗಿದೆ. ವಿಚಾರಣೆ ವೇಳೆ ರಿಯಾ ಚಕ್ರವರ್ತಿ ನಾಲ್ವರ ಹೆಸರು ಹೇಳಿದ್ದಾರೆ ಎಂದು ಹೇಳಲಾಗಿದೆ. ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    ತನ್ನ ಪರಿಚಯಕ್ಕೂ ಮೊದಲು ಸುಶಾಂತ್ ಗಾಂಜಾ ಸೇವನೆ ಮಾಡ್ತಿದ್ದರು. ಕೇದಾರನಾಥ್ ಚಿತ್ರೀಕರಣ ವೇಳೆಯೂ ಸುಶಾಂತ್ ಹೆಚ್ಚು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಡ್ರಗ್ಸ್ ತೆಗೆದುಕೊಳ್ಳುವದರಿಂದ ಹೆಚ್ಚು ಹಸಿವು ಆಗುತ್ತದೆ. ಕೇದಾರನಾಥ್ ಸಿನಿಮಾ ಬಳಿಕ ಸುಶಾಂತ್ ಮತ್ತು ಸಾರಾ ತೂಕ ಹೆಚ್ಚಾಗಿತ್ತು ಎಂದು ರಿಯಾ ವಿಚಾರಣೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್- ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

    ಸದ್ಯ ಈ ನಾಲ್ವರಿಗೂ ಎನ್‍ಸಿಬಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಎಲ್ಲ ಕಾನೂನು ರೀತಿಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಸುಶಾಂತ್ ಒಡೆತನದ ಲೋನಾವಾಲಾ ಫಾರ್ಮ್‍ಹೌಸ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಈ ನಾಲ್ವರು ಭಾಗಿಯಾಗುತ್ತಿದ್ದರಂತೆ. ಸುಶಾಂತ್ ಫಾರ್ಮ್‍ಹೌಸ್ ನಲ್ಲಿ ಗಾಂಜಾ ಸೇವನೆಗೆ ಬಳಸಲಾಗುವ ಕೆಲ ವಸ್ತುಗಳ ಸಹ ಲಭ್ಯವಾಗಿವೆ. ಇದನ್ನೂ ಓದಿ: ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಡ್ರಗ್ಸ್ ಆಯಾಮವನ್ನ ಪಡೆದುಕೊಂಡಿದ್ದರಿಂದ ಎನ್‍ಸಿಬಿ ತನಿಖೆಗೆ ಇಳಿದಿತ್ತು. ತನಿಖೆಯ ಆಳಕ್ಕೆ ಹೋದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಹೆಸರು ಮುನ್ನಲೆಗೆ ಬರುತ್ತಿವೆ. ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಆತನ ಇಬ್ಬರ ಸಹಚರರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

    ಹೈಕೋರ್ಟ್ ಮೊರೆ ಹೋದ ರಕುಲ್: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತನ್ನ ಹೆಸರು ಪ್ರಕಟಣೆಗೆ ತಡೆ ನೀಡಬೇಕೆಂದು ಕೋರಿ ನಟಿ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಮಾಧ್ಯಮಗಳು ರಿಯಾ ಚಕ್ರವರ್ತಿ ಹೇಳಿಕೆಯನ್ನು ಆಧಾರಿಸಿ ಡ್ರಗ್ಸ್ ಪ್ರಕರಣದಲ್ಲಿ ತನ್ನ ಕಕ್ಷಿದಾರರ ಹೆಸರನ್ನು ಪ್ರಕಟಿಸುತ್ತಿವೆ. ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿರುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಕುಲ್ ಪರ ವಕೀಲರು ಮನವಿ ಮಾಡಿದ್ದರು. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

    ನ್ಯಾ.ನವೀನ್ ಚಾವ್ಲಾ ಅವರಿದ್ದ ಏಕಸದಸ್ಯ ಪೀಠದಲ್ಲಿ ಇಂದು ರಾಕುಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ರಾಕುಲ್ ಪರ ವಕೀಲರು, ಡ್ರಗ್ಸ್ ಪ್ರಕರಣದಲ್ಲಿ ರಾಕುಲ್‍ಗೆ ಸಂಬಂಧವಿದೆ ಎಂದು ದುರುದ್ದೇಶಪೂರ್ವಕವಾಗಿ ಸುದ್ದಿ ಪ್ರಸಾರವಾಗಿದೆ. ಯಾವುದೋ ಫೋಟೋ, ವಿಡಿಯೋಗಳಿಗೆ ಡ್ರಗ್ಸ್ ಪ್ರಕರಣವನ್ನು ಜೋಡಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸಂವಿಧಾನ ಪರಿಚ್ಛೇದ 21ರ ಅಡಿ ಬರುವ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಸುದ್ದಿ ಪ್ರಸಾರ ಸಂಘಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.