Tag: Sara Ali Khan

  • ಸೈಫ್ ಅಲಿ ಖಾನ್ ಪುತ್ರಿಯ ಜೊತೆ ಶುಭಮನ್ ಗಿಲ್ ಡೇಟಿಂಗ್

    ಸೈಫ್ ಅಲಿ ಖಾನ್ ಪುತ್ರಿಯ ಜೊತೆ ಶುಭಮನ್ ಗಿಲ್ ಡೇಟಿಂಗ್

    ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಶುಭಮನ್ ಗಿಲ್ (Shubaman Gill) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. ಮುಂಬೈ ಟು ದೆಹಲಿಗೆ ಸಾರಾ, ಶುಭ್‌ಮನ್ ತೆರಳಿದ್ದಾರೆ.

    ಬಿಟೌನ್‌ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸದ್ಯ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಲವ್ವಿ ಡವ್ವಿ ವಿಚಾರ ನಿಜ ಎಂದು ಹೇಳಲಾಗುತ್ತಿದೆ.

    ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ಇದೀಗ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್‌ನಿಂದ ಇಬ್ಬರು ನಿರ್ಗಮಿಸಿದ್ದಾರೆ. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವೇಳೆ ಶುಭಮನ್ ಕೂಡ ಇದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಸದ್ಯ ಬಿಟೌನ್‌ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ  ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾವಿನ ಅಂಚಿಗೆ ತಲುಪಿದ್ದರ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಸಾರಾ- ಜಾನ್ವಿ ಕಪೂರ್

    ಸಾವಿನ ಅಂಚಿಗೆ ತಲುಪಿದ್ದರ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಸಾರಾ- ಜಾನ್ವಿ ಕಪೂರ್

    ಟಿ ಸಾರಾ ಆಲಿ ಖಾನ್ (Sara Ali Khan) ಮತ್ತು ಜಾನ್ವಿ ಕಪೂರ್ (Janhavi Kapoor) ಬಿಟೌನ್‌ನ ಸಾಲು ಸಾಲು ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇದರನಾಥಗೆ ಭೇಟಿ ಕೊಟ್ಟಾಗ ನಡೆದ ಆತಂಕಕಾರಿ ವಿಚಾರವೊಂದನ್ನ `ಕಾಫಿ ವಿತ್ ಕರಣ್’ (Coffe With Karan) ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ.

    ಬಾಲಿವುಡ್‌ನ ಸೆಲೆಬ್ರಿಟಿ ಕಿಡ್ಸ್‌ಗಳಾದ ಸಾರಾ ಮತ್ತು ಜಾನ್ವಿ ಕಪೂರ್ ಬಾಲ್ಯದಿಂದ ಸ್ನೇಹಿತರು. ಇಂದಿಗೂ ಅಷ್ಟೇ ಒಳ್ಳೆಯ ಬಾಂದವ್ಯವನ್ನಿಟ್ಟುಕೊಂಡು ಚಿತ್ರರಂಗದಲ್ಲಿ ಸಾರಾ ಮತ್ತು ಜಾನ್ವಿ ಕಮಾಲ್ ಮಾಡ್ತಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಬಂದಿದ್ದ ಸಾರಾ, ಜಾನ್ವಿ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ಕೇದರನಾಥ್‌ಗೆ ಹೋದಾಗ ಸಾವಿನ ಅಂಚಿಗೆ ತಲುಪಿದ್ದ ಅಚ್ಚರಿಯ ವಿಷ್ಯವನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು

    ಕೇದರನಾಥ್‌ಗೆ ಭೇಟಿ ಕೊಟ್ಟ ವೇಳೆಯಲ್ಲಿ ಪಾದಾಯಾತ್ರೆ ಮಾಡಲು ನಾವು ನಿರ್ಧರಿಸಿದ್ದೆವು. ಈ ವೇಳೆ ಬಂಡೆಯ ಮೇಲೆ ನಾವು ಹತ್ತಿದ್ದೆವು. ಬಂಡೆಗಳನ್ನು ಹತ್ತುವಾಗ ಸಿಲುಕಿಕೊಂಡಿದ್ದೆವು. ಅಂದು ಸಾವಿನ ಅಂಚಿಗೆ ಬಂದ ಪರಿಚಯ ನಮಗೆ ಆಗಿತ್ತು. ನಂತರ ಸಾರಾ, ಚಾಲಕ ಇದನ್ನೇಲ್ಲ ಗಮನಿಸಿ ಇತರರ ಸಹಾಯದಿಂದ ರಕ್ಷಿಸಿದ ವಿಚಾರವನ್ನ ಸಾರಾ ಮತ್ತು ಜಾನ್ವಿ ಶೋನಲ್ಲಿ ರಿವೀಲ್ ಮಾಡಿದ್ದಾರೆ.

    ಇನ್ನೂ ಸಾರಾ, ವಿಕ್ಕಿ ಕೌಶಲ್‌ಗೆ (Vicky Kaushal) ಜೋಡಿಯಾಗಿ ನಟಿಸುತ್ತಿದ್ದಾರೆ. ನಟ ರಾಜ್‌ಕುಮಾರ್ ರಾವ್ (Rajkumar Rao) ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತನಗಿಂತ 5 ವರ್ಷ ಕಿರಿಯ, ಟೀಂ ಇಂಡಿಯಾ ಆಟಗಾರನ ಜೊತೆ ಸಾರಾ ಆಲಿ ಖಾನ್ ಡೇಟಿಂಗ್

    ತನಗಿಂತ 5 ವರ್ಷ ಕಿರಿಯ, ಟೀಂ ಇಂಡಿಯಾ ಆಟಗಾರನ ಜೊತೆ ಸಾರಾ ಆಲಿ ಖಾನ್ ಡೇಟಿಂಗ್

    ಬಾಲಿವುಡ್ ಬ್ಯೂಟಿ ಸಾರಾ ಆಲಿ ಖಾನ್ ಡೇಟಿಂಗ್ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಕಾಲಿವುಡ್ ನಟ ಧನುಷ್ ಜೊತೆ ಸಾರಾ ಹೆಸರು ಥಳಕು ಹಾಕಿಕೊಂಡಿದ್ದು. ಇದೀಗ ತನಗಿಂತ 5 ವರ್ಷ ಚಿಕ್ಕವನೊಂದಿಗೆ ಸಾರಾ ಆಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸೈಫ್ ಆಲಿ ಖಾನ್ ಪುತ್ರಿ ಸಾರಾ, ಸಿನಿಮಾಗಿಂತ ಡೇಟಿಂಗ್ ವಿಚಾರವಾಗಿಯೇ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಸದ್ಯ ಸಾರಾ ಹೆಸರು ಶುಬ್‌ಮನ್ ಗಿಲ್ ಜೊತೆ ಸೌಂಡ್ ಮಾಡುತ್ತಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಭಾರತದ ಆರಂಭಿಕ ಯುವ ಆಟಗಾರ ಶುಬ್‌ಮನ್ ಗಿಲ್ ಸಾರಾಗಿಂತ 5 ವರ್ಷ ಚಿಕ್ಕವನಾಗಿದ್ದಾರೆ. ಶುಬ್‌ಮನ್ ಮತ್ತು ಸಾರಾ ಡೇಟಿಂಗ್ ವಿಚಾರ ನಿಜ ಎಂಬುದಕ್ಕೆ ಸದ್ಯ ಇವರಿಬ್ಬರು ಡಿನ್ನರ್ ಡೇಟ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದುಬೈನ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ಇನ್ನು ಈ ಹಿಂದೆ ಶುಬ್‌ಮನ್ ಗಿಲ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜತೆ ಡೇಟಿಂಗ್‌ನಲ್ಲಿದ್ದರು. ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈಗ ಸಾರಾ ಆಲಿ ಖಾನ್ ಜೊತೆ ಶುಭ್‌ಮನ್ ಡೇಟಿಂಗ್‌ನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧನುಷ್- ಐಶ್ವರ್ಯ ರಜನಿಕಾಂತ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ನಟಿ ಕಾರಣವಂತೆ!

    ಧನುಷ್- ಐಶ್ವರ್ಯ ರಜನಿಕಾಂತ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ನಟಿ ಕಾರಣವಂತೆ!

    ಕಾಲಿವುಡ್ ಟು ಹಾಲಿವುಡ್ ಅಂಗಳದವರೆಗೂ ಸೌಂಡ್ ಮಾಡುತ್ತಿರುವ ಧನುಷ್ ಸದ್ಯ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ.

    ಸದ್ಯ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬ್ಯುಸಿಯಿರುವ ಧನುಷ್, ಇತ್ತೀಚೆಗಷ್ಟೇ ಐಶ್ವರ್ಯ ರಜನೀಕಾಂತ್ ಜತೆಗಿನ 19 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಈವರೆಗೂ ಈ ಜೋಡಿ ಯಾವ ಕಾರಣಕ್ಕೆ ಬೇರೆ ಬೇರೆಯಾಗಿದ್ದಾರೆ ಎಂಬುದೇ ತಿಳಿದು ಬಂದಿಲ್ಲ. ಇಬ್ಬರು ದೂರ ದೂರ ಆಗಿರುವ ಈ ಮಾಜಿ ಜೋಡಿ ಸದ್ಯ ತಮ್ಮ ತಮ್ಮ ವೃತ್ತಿ ಬದುಕಿನತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಧನುಷ್ ಮತ್ತು ರಜನಿಕಾಂತ್ ಪುತ್ರಿಯ ಡಿವೋರ್ಸ್‌ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾರಣ ಅಂತಾ ಸಖತ್ ಚರ್ಚೆ ಆಗುತ್ತಿದೆ.

    ಬಾಲಿವುಡ್‌ನ `ಅತ್ರಂಗಿರೆ’ ಚಿತ್ರದಲ್ಲಿ ಸಾರಾ ಮತ್ತು ಅಕ್ಷಯ್ ಕುಮಾರ್ ಜತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಧನುಷ್ ಮತ್ತು ಸಾರಾಗೆ ಗೆಳೆತನ ಶುರುವಾಗಿತ್ತು. ಇದೀಗ ಇವರಿಬ್ಬರ ಓಡಾಟ, ಪಾರ್ಟಿ ಜೋರಾಗಿದೆಯಂತೆ. ಐಶ್ವರ್ಯ ಮತ್ತು ಧನುಷ್ ಬೇರೆಯಾಗಲು ಸಾರಾ ಅಲಿ ಖಾನ್ ಅವರೇ ಕಾರಣ ಅಂತಾ ಬೆರಳು ಮಾಡಿ ತೋರಿಸುತ್ತಿದ್ದಾರೆ.

    ಧನುಷ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿಜವಾಗಲೂ ಸಾರಾನೇ ಕಾರಣನಾ ಅಥವಾ ಇದೊಂದು ವದಂತಿ ಅಷ್ಟೇನಾ. ಮುಂದಿನ ದಿನಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ ಅಂತಾ ಧನುಷ್ ಮತ್ತು ಸಾರಾ ಮೌನ ಮುರಿಯುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

    ‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

    ಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮ ದಿನಕ್ಕೊಂದು ಹಾಟ್ ಟಾಪಿಕ್ ಒದಗಿಸುತ್ತಿದೆ. ಅದರಲ್ಲೂ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಜೊತೆ ನಡೆಸಿದ ಸಂದರ್ಶನದಲ್ಲಿ ಹತ್ತು ಹಲವು ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಕರಣ್ ಹೊರ ಹಾಕಿದ್ದಾರೆ. ತಮ್ಮ ಮುಂದೆ ಕೂತಿರುವುದು ತಮ್ಮ ಮಗಳ ವಯಸ್ಸಿನ ಇಬ್ಬರು ಹುಡುಗಿಯರು ಎನ್ನುವುದನ್ನೂ ಮರೆತು ಕರಣ್ ಪ್ರಶ್ನೆಗಳನ್ನು ಕೇಳಿದ್ದಾರೆ.

    ಮೊದಲ ಕಂತಿನಲ್ಲಿ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಅವರ ಎಕ್ಸ್ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದ ಕರಣ್, ಈ ಬಾರಿ ಎಕ್ಸ್ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೊಂದಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ಇಬ್ಬರನ್ನೂ ಮುಜುಗರಕ್ಕೀಡು ಮಾಡಿದ್ದಾರೆ. ತನ್ನ ಮುಂದಿ ಕೂತಿರುವವರು ಚಿಕ್ಕ ವಯಸ್ಸಿನ ನಟಿಯರು ಎನ್ನುವುದನ್ನೂ ಮರೆತು ಬೋಲ್ಡ್ ಆಗಿಯೇ ಪ್ರಶ್ನೆ ಕೇಳಿರುವ ಕರಣ್ ಜೋಹಾರ್, ‘ನಿಮ್ಮ ಎಕ್ಸ್ ಗಳ ಜೊತೆ ಸೆಕ್ಸ್ ಮಾಡುವುದಕ್ಕೆ ಆಸಕ್ತಿ ಹೊಂದಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಿದ್ದಂತೆಯೇ ಇಬ್ಬರೂ ಕೆಲ ಕ್ಷಣ ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕರಣ್ ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕನಸು ಮನಸಲ್ಲೂ ಎಣಿಸಿರದ ಆ ಯುವ ನಟಿಯರು ಸಾವರಿಸಿಕೊಂಡು ಸಾರಾ ‘ನೋ’ ಎಂದರೆ, ಜಾಹ್ನವಿ ಈ ಕುರಿತು ಮಾತನಾಡದೇ ಸುಮ್ಮನಾಗಿ ಬಿಡುತ್ತಾರೆ. ಆದರೂ, ಕರಣ್ ಸುಮ್ಮನಿರುವುದಿಲ್ಲ. ಮತ್ತೆ ಮತ್ತೆ ಆ ವಿಷಯವನ್ನೇ ಕೆದುಕುವುದಕ್ಕೆ ಪ್ರಯತ್ನಿಸುತ್ತಾರೆ. ಈ ಹಿಂದೆಯೂ ಕೂಡ ಈ ಇಬ್ಬರೂ ಅಣ್ಣ ತಮ್ಮಂದಿರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಷಯವನ್ನು ಇದೇ ಶೋನಲ್ಲಿ ಕರಣ್ ಬಹಿರಂಗ ಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಕರಣ್ ಜೋಹಾರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಬಿಸಿಬಿಸಿ ಸುದ್ದಿಗಳ ಕಾರಣದಿಂದಾಗಿ ಗಮನ ಸೆಳೆಯುತ್ತಿದೆ. ಸಿಲೆಬ್ರಿಟಿಗಳ ವೃತ್ತಿ ಬದುಕಿಗಿಂತ ಅವರ ಖಾಸಗಿ ಬದುಕಿನ ರಸನಿಮಿಷಗಳೇ ಹೆಚ್ಚು ಸದ್ದು ಮಾಡುತ್ತಿವೆ. ಹಾಗಾಗಿ ಸಿಲೆಬ್ರಿಟಿಗಳ ಒಂದು ರೀತಿಯಲ್ಲಿ ಭಯದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಾಗಿದೆ.

    ಡೇಟಿಂಗ್, ಬಾಯ್ ಫ್ರೆಂಡ್, ಬ್ರೇಕ್ ಅಪ್, ಅಕ್ರಮ ಸಂಬಂಧ ಕೇವಲ ಇಂಥದ್ದೇ ಪ್ರಶ್ನೆಗಳನ್ನು ಕೇಳುವ ಮೂಲಕ ಕರಣ್ ಜೋಹಾರ್ ಅತಿಥಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಕೆಲವರು ಈ ಕುರಿತು ಬೋಲ್ಡ್ ಆಗಿಯೇ ಉತ್ತರಿಸಿದ್ದರೆ, ಇನ್ನೂ ಕೆಲವರು ಮೌನಕ್ಕೆ ಜಾರುತ್ತಾರೆ. ಆದರೂ, ಕರಣ್ ಇಂತಹ ಪ್ರಶ್ನೆಗಳನ್ನು ಕೇಳದೇ ಬಿಡುವುದಿಲ್ಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರೂ ಕುಚಿಕು ಗೆಳೆತಿಯರು ಆಗಿರುವುದರಿಂದ ಮತ್ತು ಬಾಲಿವುಡ್ ನಲ್ಲಿ ಸಣ್ಣ ವಯಸ್ಸಿನಲ್ಲೇ ಡೇಟಿಂಗ್ ಮಾಡಿದವರು ಎಂದು ಹಣೆಪಟ್ಟ ಕಟ್ಟಿಕೊಂಡಿರುವುದರಿಂದ ಇವರು ಏನೆಲ್ಲ ಮಾತನಾಡಲಿದ್ದಾರೆ ಎನ್ನುವ ಕುತೂಹಲವಂತೂ ನೋಡುಗರಿಗೆ ಇತ್ತು. ಅದಕ್ಕೆ ತಕ್ಕಂತೆ ಕರಣ್ ಪ್ರಶ್ನೆ ಕೇಳಿದ್ದಾರೆ.

    ಅನೇಕ ಪ್ರಶ್ನೆಗಳನ್ನು ಈ ಜೋಡಿಗೆ ಕೇಳಿದ ಕರಣ್, ಅಚ್ಚರಿ ಎನ್ನುವಂತೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳುತ್ತಾರೆ. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತಾರೆ. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಡ್ತಾರೆ. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡುತ್ತಾರೆ ಕರಣ್. ಆದರೆ, ಈ ಕುರಿತು ಸಾರಾ ಆಗಲಿ, ಜಾಹ್ನವಿ ಆಗಲೇ ಏನೂ ಹೇಳದೇ ಮೌನಕ್ಕೆ ಜಾರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ನಲ್ಲಿದ್ದರು ಎನ್ನುವುದು ಈವರೆಗೂ ಗಾಸಿಪ್ ಕಾಲಂನಲ್ಲಿ ಕೇಳಿ ಬರುತ್ತಿತ್ತು. ಇಬ್ಬರೂ ಅಧಿಕೃತವಾಗಿ ಹೇಳಿಕೊಳ್ಳದೇ ಇರುವುದರಿಂದ ಅದು ಗಾಸಿಪ್ ಎಂದೂ ನಂಬಲಾಗಿತ್ತು. ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಬಾಲಿವುಡ್ ನಟ ಸಾರಾ ಅಲಿಖಾನ್ ಹೇಳಿದ್ದಾರೆ. ಅಲ್ಲಿಗೆ ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ನಲ್ಲಿ ಇದ್ದದ್ದು ಬಹಿರಂಗವಾಗಿದೆ.

    ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಜಾಹ್ನವಿ ಮತ್ತು ಸಾರಾ ಅಲಿಖಾನ್ ಭಾಗಿಯಾಗಿದ್ದರು. ಜಾಹ್ನವಿಗೆ ರಾಪಿಡ್ ರೌಂಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾ ದಲ್ಲಿ ಫಾಲೋವರ್ ಹೆಚ್ಚಾದ ಕುರಿತು ಪ್ರಶ್ನೆ ಕೇಳಲಾಗಿತ್ತು. ರಶ್ಮಿಕಾ ಮಂದಣ್ಣ ಬಗ್ಗೆ ಜಾಹ್ನವಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಾರಾ, ಈ ಇಬ್ಬರ ಡೇಟಿಂಗ್ ವಿಚಾರವನ್ನು ಮಾತನಾಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಗುಟ್ಟು ರಟ್ಟಾಗಿಸಿದರು. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಆತ್ಮಿಯ ಗೆಳೆಯರು ಅನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತೀರಾ ಹತ್ತಿರವಾಗಿದ್ದರು ಎನ್ನುವುದಕ್ಕೆ ಅವರು ಮಾಡಿದ ಪಾರ್ಟಿಗಳೇ ಸಾಕ್ಷಿ ಇವೆ. ಅಲ್ಲದೇ, ಇಬ್ಬರೂ ಜೊತೆಯಾಗಿ ಪ್ರವಾಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾತ್ರ ದೂರವಿದ್ದಾರೆ. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎನ್ನುವುದು ಇದೀಗ ಪಕ್ಕಾ ಆಗಿದೆ. ಆದರೆ, ಈ ಹೊತ್ತಿನಲ್ಲಿ ಇಬ್ಬರೂ ದೂರವಾಗಿದ್ದಾರೆ ಎನ್ನುವ ಸುದ್ದಿಯೂ ಇದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಒಪ್ಪಿದ ಸಾರಾ ಅಲಿಖಾನ್: ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್

    ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಒಪ್ಪಿದ ಸಾರಾ ಅಲಿಖಾನ್: ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್

    ತೆಲುಗು ಸಿನಿಮಾ ರಂಗದ ಖ್ಯಾತ ಯುವ ನಟ ವಿಜಯ್ ದೇವರಕೊಂಡ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಸಿನಿಮಾಗಳಿಗಿಂತಲೂ ಇವರು ಖಾಸಗಿ ವಿಚಾರಕ್ಕಾಗಿ ಹೆಚ್ಚು ಸದ್ದಾಗುತ್ತಾರೆ. ಅದರಲ್ಲೂ ತಾವು ಮಾಡದೇ ಇರುವ ತಪ್ಪಿಗಾಗಿಯೂ ಹೆಚ್ಚು ಸುದ್ದಿ ಆಗುತ್ತಾರೆ. ಇದೀಗ ಡೇಟಿಂಗ್ ವಿಚಾರವಾಗಿ ಮಾಧ್ಯಮಗಳಿಗೆ ಆಹಾರವಾಗಿದ್ದಾರೆ. ಅದೂ ಕೂಡ ತಾವು ಆಡದೇ ಇರುವ ಮಾತಿನಿಂದಾಗಿ ಎನ್ನುವುದು ವಿಶೇಷ.

    ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಾರಾ ಅಲಿಖಾನ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದು, ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮತ್ತು ಸಾರಾ ಆಲಿಖಾನ್ ಬಗ್ಗೆ ಸಲ್ಲದ ಸಂಶಯಗಳು ಶುರುವಾಗಿವೆ. ವಿಜಯ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಮಿಂಚುತ್ತಿರುವುದರಿಂದ, ಇದು ಸಾಧ್ಯವೂ ಆಗಬಹುದು ಎನ್ನುವ ಗಾಸಿಪ್ ಹರಡಿದೆ. ಇದನ್ನೂ ಓದಿ:ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

    ವಿಜಯ್ ಜೊತೆ ಡೇಟಿಂಗ್ ಮಾಡುತ್ತೇನೆ ಅಂದವರು ಸಾರಾ ಅಲಿಖಾನ್, ಅನಿಸಿಕೊಂಡವರು ವಿಜಯ್ ದೇವರಕೊಂಡ. ಆದರೆ, ಈ ವಿಷಯದಲ್ಲಿ  ಹೆಚ್ಚು ಟ್ರೋಲ್ ಗೆ ತುತ್ತಾಗಿದ್ದು ಮಾತ್ರ ರಶ್ಮಿಕಾ ಮಂದಣ್ಣ. ವಿಜಯ್ ಜೊತೆ ರಶ್ಮಿಕಾ ತುಂಬಾ ಕ್ಲೋಸ್. ಹೀಗಾಗಿ ರಶ್ಮಿಕಾನಿಂದ ಸಾರಾ ಅವರು ವಿಜಯ್ ದೇವರಕೊಂಡ ಅವರನ್ನು ಕಿತ್ತುಕೊಳ್ಳುತ್ತಾರೆ ಎನ್ನುವ ಅರ್ಥ ಬರುವಂತೆ ಟ್ರೋಲ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ಬಿಟ್ಟು ತೊಲಗಿ ಅಂತಿದ್ದಾರೆ ನಟಿ ಸಾರಾ ಆಲಿ ಖಾನ್

    ಭಾರತ ಬಿಟ್ಟು ತೊಲಗಿ ಅಂತಿದ್ದಾರೆ ನಟಿ ಸಾರಾ ಆಲಿ ಖಾನ್

    `ಕೇದರ್‌ನಾಥ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ನಟಿ ಸಾರಾ ಆಲಿ ಖಾನ್, ಮಾಡಿದ್ದು ಕೆಲವೇ ಕೆಲವು ಸಿನಿಮಾಗಳಾಗಿದ್ರು. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಅಂತಹದ್ದೇ ಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ. 1942 ಭಾರತ ಬಿಟ್ಟು ತೊಲಗಿ ಚಳುವಳಿಯ ಕುರಿತು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ.

    ಈಗಾಗಲೇ `ಲವ್ ಆಜ್ ಕಲ್’, `ಕೂಲಿ ನಂ 1′, ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟಿ ಸಾರಾ ಈ ಬಾರಿ 1942 ನಡೆದ ಕ್ವಿಟ್ ಇಂಡಿಯಾ ಮೂಮೆಂಟ್ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ. ಭಾರತ ಬಿಟ್ಟು ತೊಲಗಿ ಎಂಬ ಚಳುವಳಿಯ ಕಥೆಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

    ದಯನ್ ಕಣನ್ ಅಯ್ಯರ್ ನಿರ್ದೇಶದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಸಾರಾ ಆಲಿಯಾ ಖಾನ್ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಿದೆ. ಕರಣ್ ಜೋಹರ್ ಮತ್ತು ಧರ್ಮಟೆಕ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

    ಸದ್ಯ ವಿಕ್ರಾಂತ್ ನಟನೆಯ ಬಹುನಿರೀಕ್ಷಿತ ಚಿತ್ರ `ಗ್ಯಾಸ್‌ಲೈಟ್’ ಚಿತ್ರದಲ್ಲಿ ಸಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗುಜ್‌ರಾತ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಾರಾ ನಟನೆಯ ಮುಂಬರುವ ಚಿತ್ರ ಕ್ವೀಟ್ ಇಂಡಿಯಾ ಮೂಮೆಂಟ್ ಚಿತ್ರದ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

  • ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

    ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರಿಗೆ ಟ್ರೋಲಿಗರು ‘ನಿಮ್ಮ ಶಾಯರಿ ಏಕೆ ಇಷ್ಟು ಕೆಟ್ಟದಾಗಿದೆ’ ಎಂದು ಕೇಳಿದ್ದು, ಇದಕ್ಕೆ ಸಾರಾ ಖಡಕ್ ಉತ್ತರ ಕೊಟ್ಟಿದ್ದಾರೆ.

    ಸಾರಾ ಅಲಿ ಖಾನ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನಗೆ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂದು ಬರೆದುಕೊಂಡಿದ್ದರು. ಅಭಿಮಾನಿಗಳ ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ಸಾರಾ ಉತ್ತರ ಕೊಡುತ್ತಿದ್ದರು. ಈ ವೇಳೆ ಟ್ರೋಲಿಗರು, ನಿಮ್ಮ ಶಾಯರಿಗಳು ಕೆಟ್ಟದಾಗಿ ಇರುತ್ತೆ ಎಂದು ಕಳುಹಿಸಿದರು. ಇದನ್ನೂ ಓದಿ: ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು

    ಅದಕ್ಕೆ ಉತ್ತರಿಸಿದ ಸಾರಾ, ಆ ಶಾಯರಿಯಿಂದ ನಾನು ನಿಮ್ಮಂತಹ ಜನರನ್ನು ಹುಚ್ಚನನ್ನಾಗಿ ಮಾಡುತ್ತೇನೆ. ನಿಮ್ಮ ಅಸಭ್ಯ ಕಾಮೆಂಟ್ ಗಳು ನನಗೆ ನೋವನ್ನು ಉಂಟು ಮಾಡುವುದಿಲ್ಲ. ನಾನು ನನ್ನ ತಂದೆ, ತಾಯಿಯ ಪ್ರಯತ್ನ ಮೀರಿ ಬೆಳೆದಿದ್ದೇನೆ. ಇದು ನನ್ನ ನಗು ಮತ್ತು ನನ್ನ ಸುತ್ತಮುತ್ತಲಿನ ಸಕಾರತ್ಮಕ ಫಲಿತಾಂಶವಾಗಿದೆ. ನಾನು ಸಂತೋಷಪಡುತ್ತೇನೆ. ನೀವು ನಿಜವಾಗಿಯೂ ನನ್ನ ಶಾಯರಿಯನ್ನು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

    ಸಾರಾ ಅವರ ಶಾಯರಿಗಳ ಬಗ್ಗೆ ಹಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳಲ್ಲಿ ಉದಾಹರಣೆಗೆ: ನನ್ನ ಕೂದಲಿನಲ್ಲಿ ಗಾಳಿ ತಪ್ಪಿದೆ. ಸುಣ್ಣಬಣ್ಣದ ಮುಖ, ಗಲೀಜು ಕೂದಲು. ಹಾಗಾಗಿ ನಾನು ಹಂಚಿಕೊಳ್ಳಲು ಯೋಚಿಸಿದ ಒಂದು ಝಲಕ್ ಇಲ್ಲಿದೆ. ಇಡೀ ದಿನ ತಣ್ಣಗಾಗುವುದು – ಎಲ್ಲೆಡೆ ಸೂರ್ಯೋದಯ ಸೂರ್ಯಾಸ್ತದ ಅದ್ಭುತ ವೈಬ್‍ಗಳು ಎಂದು ಬರೆದು ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದರು.

    ಇದೇ ರೀತಿ ಸಾರಾ ತಮ್ಮ ಫೋಟೋಗಳಿಗೆ ಶಾಯರಿಗಳನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈ ಶಾಯರಿ ಓದಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ನಟನೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅವರ ಶಾಯರಿಗೆ ಫೇಮಸ್ ಆಗಿದ್ದಾರೆ.

    2018 ರಲ್ಲಿ ‘ಕೇದಾರನಾಥ್’ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ ಸಾರಾ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್, ರಣ್‍ವೀರ್ ಸಿಂಗ್ ಮತ್ತು ಕಾರ್ತಿಕ್ ಆರ್ಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರುಣ್ ಧವನ್ ಜೊತೆಗೆ ‘ಕೂಲಿ ನಂ 1’ ರಿಮೇಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ‘ಅತ್ರಾಂಗಿ ರೇ’ ಸಿನಿಮಾದಲ್ಲಿ ಸಾರಾ ಕೊನೆಯದಾಗಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡರು. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

     

    View this post on Instagram

     

    A post shared by Sara Ali Khan (@saraalikhan95)

    ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿಯಾಗಿದ್ದು, ಅವರು ಸಹ ಕಲಾವಿದರು. ಪ್ರಸ್ತುತ ಅಮೃತಾ ಸಿಂಗ್ ಅವರನ್ನು ಬಿಟ್ಟು ಸೈಫ್ ಅಲಿ ಖಾನ್, ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸಾರಾ ಅವರ ಅಜ್ಜಿ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಆಗಿದ್ದು, ಇವರ ಕುಟುಂಬವೇ ಸಿನಿಮಾರಂಗದಲ್ಲಿದೆ.