Tag: sapthasagaradacche yello

  • ದೇವರ ಹಾಡು ಹಾಡುತ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದವರಿಗೆ ಚೈತ್ರಾ ಆಚಾರ್ ರಿಯಾಕ್ಷನ್

    ದೇವರ ಹಾಡು ಹಾಡುತ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದವರಿಗೆ ಚೈತ್ರಾ ಆಚಾರ್ ರಿಯಾಕ್ಷನ್

    ಚಂದನವನದ (Sandalwood) ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ (Chaithra Achar) ಅವರು ಸದ್ಯ ಕನ್ನಡದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಡುವೆ ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾರೆ. ಚೈತ್ರಾ ಲುಕ್ ನೋಡಿ, ಇದೆಲ್ಲಾ ಅವತಾರ ಬೇಕಾ ನಿಮಗೆ ಅಂತಾ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು ಇದೆ. ಅಂತಹ ಮನಸ್ಥಿತಿಗಳಿಗೆ ನಟಿ ಖಡಕ್ ಉತ್ತರ ನೀಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಡಿಜಿಟಲ್ ಜೊತೆ ನಟಿ ಮಾತನಾಡಿದ್ದಾರೆ.

    ‘ಸಪ್ತಸಾಗರದಾಚೆ ಎಲ್ಲೋ’ (Sapthasagaradacche Yello) ಸಿನಿಮಾದ ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಅಂತಾ ಹೇಳಿದರೆ ತಪ್ಪಾಗಲಾರದು. ಸದಾ ತಮ್ಮ ಗಾಯನ, ಸಿನಿಮಾಗೆ ಸಂಬಂಧಿಸಿದ ಪೋಸ್ಟ್, ಬೋಲ್ಡ್- ಹಾಟ್ ಫೋಟೋಸ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ನಟಿಯ ಬೋಲ್ಡ್ ಅವತಾರಕ್ಕೆ ಅನೇಕರು ಗರಂ ಆಗಿದ್ದಾರೆ. ನೆಗೆಟಿವ್ (Negative Comments) ಕಾಮೆಂಟ್ ಮಾಡುವವರಿಗೆ ಚೈತ್ರಾ ಕಿವಿ ಮಾತು ಹೇಳಿದ್ದಾರೆ. ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದಾರೆ.

    ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್ ಮಾಡುತ್ತಾರೆ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್

    ನಾನು ನನ್ನ ಆಪ್ತರಿಂದ ಕಲಿತಿರೋದು ಏನೆಂದರೆ ನೆಗ್‌ಲೇಟ್ ಮಾಡಿ ಮುಂದಕ್ಕೆ ಹೋಗೋದು ಅಷ್ಟೇ. ನಾನು ನನ್ನ ಸಂಪಾದನೆಯಲ್ಲಿ ನನಗೆ ಹೇಗೆ ಬೇಕೋ ಹಾಗೇ ಖುಷಿಯಿಂದ ಬದುಕುತ್ತಾ ಇದ್ದೀನಿ. ನನ್ನ ಫಸ್ಟ್ ಸೈಮಾ ಕಾರ್ಯಕ್ರಮಕ್ಕೆ ನಾನೇ ಡಿಸೈನರ್ ತಿಳಿಸಿ ಆ ತರಹ ಬೋಲ್ಡ್ ಬಟ್ಟೆಯನ್ನ ಡಿಸೈನ್ ಮಾಡಿಸಿದ್ದೆ, ನಾನು ಮಾಡುವ ಪ್ರತಿ ಪಾತ್ರನೂ ಗ್ಲ್ಯಾಮರಸ್ ಆಗಿ ಇರೋದಿಲ್ಲ. ನಾನು ನಿಜ ಜೀವನದಲ್ಲಿ ತುಂಬಾ ಗ್ಲ್ಯಾಮರಸ್ ವ್ಯಕ್ತಿ. ನಾನು ಎಲ್ಲಾ ತರಹದ ಬಟ್ಟೆಯನ್ನ ಹಾಕುತ್ತೀನಿ. ಎಲ್ಲಿ ಯಾವ ತರಹದ ಬಟ್ಟೆ ಹಾಕಬೇಕು ಅನ್ನೋದು ನನಗೆ ಗೊತ್ತು. ನನಗೂ ಕೊಂಚ ಫ್ಯಾಷನ್ ಬಗ್ಗೆ ಅರಿವಿದೆ.

    ಹಾಡಿರೋದು ಹಾಡು ದೇವರದ್ದು, ಆದರೆ ಹಾಕುವ ಬಟ್ಟೆ ಈ ತರಹ ಅಂತಾ ಕಾಮೆಂಟ್ ಮಾಡಿದ್ದುಯಿದೆ. ಇವರೆಲ್ಲಾ ಯಾಕೆ ಹೀಗೆ.? ನಾನೇನು ಮಾಡೇಯಿಲ್ಲಾ ಅವರಿಗೆ, ಈ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಎರಡು ದಿನ ಭಾರಿ ಯೋಚನೆ ಮಾಡಿದ್ದುಂಟು. ನಾನು ಬೇಸರದಲ್ಲಿರೋದನ್ನ ನೋಡಿ ನನ್ನ ಸ್ನೇಹಿತರು ಪಾಸಿಟಿವ್ ಆಗಿ ನನ್ನ ಬೆಂಬಲಿಸಿದರು. ನನಗೆ ನೆಗೆಟಿವ್ ಕಾಮೆಂಟ್ ಮಾಡೋವವರಿಗೆ ಒಳ್ಳೆಯ ಬುದ್ಧಿ ಕೊಡಲಿ ಅಂತಾ ಆಶಿಸುತ್ತೇನೆ. ಬೇರೇ ಮನೆ ಹೆಣ್ಣು ಮಕ್ಕಳ ಮೇಲೆ ಇಸಿಯಾಗಿ ಕಾಮೆಂಟ್ ಮಾಡಬಾರದು. ಪಾಸಿಟಿವ್ ಕಾಮೆಂಟ್ ಮಾಡುವ ಹೆಚ್ಚುವ ಜನರಿದ್ದಾರೆ. ನಾನ್ಯಾಕೆ ನೆಗೆಟಿವ್ ಕಡೆ ಯೋಚನೆ ಮಾಡಲಿ. ನಾನು ಬೆಳಿತಾ ಇರುತ್ತೀನಿ ಅವರು ಕಾಮೆಂಟ್ಸ್ ಮಾಡಿಕೊಂಡು ಕೂತಿರುತ್ತಾರೆ ಅಷ್ಟೇ ಜೀವನ ಅಂತಾ ನಟಿ ಚೈತ್ರಾ ಆಚಾರ್ ಮನಬಿಚ್ಚಿ ಮಾತನಾಡಿದ್ದಾರೆ. ಈ ಮೂಲಕ ತನ್ನ ಬೋಲ್ಡ್ ಫೋಟೋಗಳಿಗೆ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ.‌

    ಚೈತ್ರಾ ಆಚಾರ್ ಅವರು ರಾಜ್ ಬಿ ಶೆಟ್ಟಿ ಜೊತೆ ‘ಟೋಬಿ'(Toby), ರಕ್ಷಿತ್ ಶೆಟ್ಟಿ ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ‘ಹ್ಯಾಪಿ ಬರ್ತಡೇ ಟು ಮಿʼ, ‘ಬ್ಲಿಂಕ್’ ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ರೆಡಿಯಾಗಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಬೀಚ್‌ನಲ್ಲಿ ಪೋಸ್ ಕೊಟ್ಟ ʻಸಪ್ತಸಾಗರದಾಚೆ ಎಲ್ಲೋʼ ನಟಿ ಚೈತ್ರಾ

    ಬೀಚ್‌ನಲ್ಲಿ ಪೋಸ್ ಕೊಟ್ಟ ʻಸಪ್ತಸಾಗರದಾಚೆ ಎಲ್ಲೋʼ ನಟಿ ಚೈತ್ರಾ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಆಚಾರ್ (Chaithra Achar) ಅವರು ಬೀಚ್‌ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಮಹಿರ’ (Mahira) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೈತ್ರಾ, ಆ ದೃಶ್ಯ, ಗಿಲ್ಕಿ, `ತಲೆದಂಡ’ ಚಿತ್ರಗಳಲ್ಲಿ ನಟಿಸಿದ್ದಾರೆ. ತಲೆದಂಡ ಚಿತ್ರದಲ್ಲಿ ಚೈತ್ರಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಸಂಚಾರಿ ವಿಜಯ್ ಜೊತೆ ನಟಿ ತೆರೆಹಂಚಿಕೊಂಡಿದ್ದರು.

     

    View this post on Instagram

     

    A post shared by Chaithra J Achar (@chaithra.j.achar)

    ರಕ್ಷಿತ್ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಶೂಟಿಂಗ್ ಪರ‍್ಣಗೊಂಡಿದೆ. ಈ ಬೆನ್ನಲ್ಲೇ ನಟಿ ವೇಕೆಷನ್ ಮೂಡ್‌ನಲ್ಲಿದ್ದಾರೆ. ಬೀಚ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಹಾಟ್ ಲುಕ್ ಇದೀಗ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

     

    View this post on Instagram

     

    A post shared by Chaithra J Achar (@chaithra.j.achar)

    ಚೈತ್ರಾ ಆಚಾರ್ ಲಿಸ್ಟ್‌ನಲ್ಲಿ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಜೊತೆ ಬ್ಲಿಂಕ್, ಸ್ಟ್ರಾಬೆರಿ, ಯಾರಿಗೂ ಹೇಳಬೇಡಿ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ.