Tag: saptha sagaradacche yello film

  • ದಕ್ಷಿಣದತ್ತ ‘ಸಪ್ತಸಾಗರದ’ ಚೆಲುವೆ- ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ರುಕ್ಮಿಣಿ ಬ್ಯುಸಿ

    ದಕ್ಷಿಣದತ್ತ ‘ಸಪ್ತಸಾಗರದ’ ಚೆಲುವೆ- ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ರುಕ್ಮಿಣಿ ಬ್ಯುಸಿ

    ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪುಟ್ಟಿ ಎಂದೇ ಫೇಮಸ್ ಆಗಿರುವ ರುಕ್ಮಿಣಿ ವಸಂತ್ (Rukmini Vasanth) ಅವರು ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ. ಇದನ್ನೂ ಓದಿ:‘ಕಿಸ್ಸಿಕ್‌’ ಬೆಡಗಿ ಶ್ರೀಲೀಲಾಗೆ ಖುಲಾಯಿಸಿದ ಅದೃಷ್ಟ- ನಟಿಗೆ ಬಿಗ್‌ ಆಫರ್

    ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿನಲ್ಲಿ ನಟಿಸಿದ್ಮೇಲೆ ರುಕ್ಮಿಣಿಗೆ ಅದೃಷ್ಟ ಖುಲಾಯಿಸಿದೆ. ತೆಲುಗು, ತಮಿಳಿನ ಸಿನಿಮಾದಲ್ಲಿ ನಟಿಸಲು ಬಂಪರ್ ಆಫರ್ ಸಿಕ್ಕಿದೆ. ಅವರು ಕೂಡ ಸಖತ್ ಚೂಸಿಯಾಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ತಿದ್ದಾರೆ.

    ಶಿವಕಾರ್ತಿಕೇಯನ್ ನಟನೆಯ 23ನೇ ಚಿತ್ರ ‘ಮದರಾಸಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.

    ಮಾಸ್ ಮಹಾರಾಜ ರವಿತೇಜ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಇದರೊಂದಿಗೆ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರದಲ್ಲಿ ರುಕ್ಮಿಣಿ ನಾಯಕಿ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಚಾರ ನಿಜನಾ? ಎಂಬುದು ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇನ್ನೂ ತಮಿಳು ನಟ ವಿಜಯ್ ಸೇತುಪತಿ ನಟನೆಯ ಹೊಸ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಚಿತ್ರ ರಿಲೀಸ್ ಆಗಲಿದೆ.

    ಅಂದಹಾಗೆ, ಸೌತ್‌ನಲ್ಲಿ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬಳಿಕ ರುಕ್ಮಿಣಿ ವಸಂತ್ ಕೂಡ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಹಾದಿಯನ್ನೇ ರುಕ್ಮಿಣಿ ಅನುಸರಿಸುತ್ತಿದ್ದಾರೆ.

  • ಕಿಶನ್, ಚೈತ್ರಾ ಆಚಾರ್ ಶೃಂಗಾರ ದೃಶ್ಯ ಕಾವ್ಯ

    ಕಿಶನ್, ಚೈತ್ರಾ ಆಚಾರ್ ಶೃಂಗಾರ ದೃಶ್ಯ ಕಾವ್ಯ

    ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ಚೈತ್ರಾ ಆಚಾರ್, ಅಂತಃಪುರದ ರಾಣಿಯಾಗಿ ಕಂಗೊಳಿಸಿದಲ್ಲದೇ ಹೀರೋ ಕಿಶನ್ ಬಿಳಗಲಿ (Kishen Bilagali) ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರ ಡ್ಯುಯೇಟ್‌ ಸಾಂಗ್‌ ವೈರಲ್‌ ಆಗಿದೆ.

    ಟೋಬಿ ನಟಿ ಆಗಾಗ ಹೊಸ ಪರಿಕಲ್ಪನೆಯ ಫೋಟೋಶೂಟ್ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಾರೆ. ಮತ್ತೆ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ, ಇದೀಗ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚೈತ್ರಾ ಬ್ಯೂಟಿಗೆ ಮತ್ತು ಡ್ಯಾನ್ಸ್‌ಗೆ ಡ್ಯಾನ್ಸರ್ ಕಿಶನ್ ಪಾಗಲ್ ಆಗಿದ್ದಾರೆ.‌ ಇದನ್ನೂ ಓದಿ:ಮೃಣಾಲ್ ಬ್ಯೂಟಿ ಬಗ್ಗೆ ಬಣ್ಣಿಸಿದ ವಿಜಯ್ ದೇವರಕೊಂಡ

    ರಣ್‌ಬೀರ್ ಕಪೂರ್ (Ranbir Kapoor), ತೃಪ್ತಿ ದಿಮ್ರಿ (Tripti Dimri) ನಟನೆಯ ‘ಅನಿಮಲ್’ (Animal) ಚಿತ್ರದ ಹಾಡಿಗೆ ರೊಮ್ಯಾಂಟಿಕ್ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಶೃಂಗಾರದ ಹಲವು ಸ್ಟೇಪ್ಸ್ ಹಾಕುವ ಮೂಲಕ ಈ ಜೋಡಿ ನೋಡುಗರ ಗಮನ ಸೆಳೆದಿದೆ. ಬಿಳಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಕರ್ಷಕವಾಗಿ ಹೆಜ್ಜೆ ಹಾಕುವ ಮೂಲಕ ಕಿಶನ್ ಮತ್ತು ಚೈತ್ರಾ ಸೈ ಎನಿಸಿಕೊಂಡಿದ್ದಾರೆ.

    ಈ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇಬ್ಬರ ಜೋಡಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಿಯಲ್ ಹಾಡನ್ನೇ ಮೀರಿಸುವಂತಿದೆ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.

    ನಟಿ ಚೈತ್ರಾ ಆಚಾರ್ ಇತ್ತೀಚೆಗೆ ನಟಿಸಿದ ‘ಟೋಬಿ’ (Toby Film) ಸಿನಿಮಾ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಎಲ್ಲರ ಗಮನ ಸೆಳೆದಿತ್ತು. ಕನ್ನಡದ ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ನಾಯಕಿ ಬ್ಯುಸಿಯಾಗಿದ್ದಾರೆ.

  • ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ಕ್ಷಿತ್ ಶೆಟ್ಟಿ(Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ತೆಲುಗು ನೆಲದಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ರಕ್ಷಿತ್ ಸಿನಿಮಾ, ಈಗ ತೆಲುಗಿನಲ್ಲಿ (Tollywood) ಅಬ್ಬರಿಸಲು ಬರುತ್ತಿದೆ. ಇದೇ ಸೆ.22ರಂದು ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌ನಲ್ಲಿ ಬರುತ್ತಿದೆ.

    ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ತೆಲುಗು ಅಂಗಳಕ್ಕೆ ಹಾರಲು ಸಜ್ಜಾಗಿದೆ. ‘ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಲ್ಲಿ ತೆಲುಗು ಸಿನಿಮಾ ಸೆ.22ರಂದು ಬಿಡುಗಡೆಯಾಗುತ್ತಿದೆ.

    ‘ಕವಲುದಾರಿ’ ಖ್ಯಾತಿಯ ಹೇಮಂತ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರಾ ಲೊಕೇಶ್, ರಮೇಶ್ ಇಂದಿರಾ, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

    ಕನ್ನಡ ಸಿನಿಮಾ ಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡ ಹಾಗೇ ತೆಲುಗು ವರ್ಷನ್‌ನಲ್ಲೂ ಗೆದ್ದು ಬೀಗುತ್ತಾ? ಕಾದು ನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]