Tag: saptasagaradaache yello

  • Exclusive: ವಿಜಯ್ ಸೇತುಪತಿ ಜೊತೆ ನಟಿಸ್ತಿರೋದೇ ಅದ್ಭುತ ಫೀಲಿಂಗ್- ರುಕ್ಮಿಣಿ ವಸಂತ್

    Exclusive: ವಿಜಯ್ ಸೇತುಪತಿ ಜೊತೆ ನಟಿಸ್ತಿರೋದೇ ಅದ್ಭುತ ಫೀಲಿಂಗ್- ರುಕ್ಮಿಣಿ ವಸಂತ್

    ‘ಬೀರ್‌ಬಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಕನ್ನಡದಲ್ಲಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗಲೇ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ತಮ್ಮ ಪಾತ್ರ, ವಿಜಯ್ ಜೊತೆ ನಟಿಸಿದ ಅನುಭವವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರುಕ್ಮಿಣಿ ಹಂಚಿಕೊಂಡಿದ್ದಾರೆ.

    ‘ಘೋಸ್ಟ್’ ಶ್ರೀನಿ ನಿರ್ದೇಶನದ ಬೀರ್‌ಬಲ್ ಚಿತ್ರಕ್ಕೆ ನಾಯಕಿ ನಟಿಯಾಗಿ ಬೆಂಗಳೂರು ಬ್ಯೂಟಿ ರುಕ್ಮಿಣಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ (Goldenstar Ganesh) ಜೊತೆ ‘ಬಾನದಾರಿಯಲಿ’, ರಕ್ಷಿತ್ ಶೆಟ್ಟಿ(Rakshit Shetty) ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ಶ್ರೀಮುರಳಿ ಜೊತೆ ‘ಬಘೀರ’ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಈ ಬೆನ್ನಲ್ಲೇ ಕಾಲಿವುಡ್‌ನತ್ತ ರುಕ್ಮಿಣಿ ಮುಖ ಮಾಡಿದ್ದಾರೆ. ತಮಿಳಿನ ನಟ ವಿಜಯ್ ಜೊತೆ ನಟಿಸುವ ಅವಕಾಶ ಹೇಗೆ ಸಿಕ್ತು.? ಎಂಬುದನ್ನ ನಟಿ ತಿಳಿಸಿದ್ದಾರೆ.

    ಚಿತ್ರತಂಡ ಈ ಸಿನಿಮಾ ವಿಚಾರವಾಗಿ ನನಗೆ ಕರೆ ಮಾಡಿದ್ದರು. ಒಮ್ಮೆ ಭೇಟಿಯಾಗಿ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದೇವು. ನನಗೆ ತಮಿಳಿನಲ್ಲಿ ಸ್ಪಷ್ಟತೆ ಇಲ್ಲದಿರೋ ಕಾರಣ ನೀವು ಯೋಚಿಸಿ ಎಂದು ತಂಡಕ್ಕೆ ತಿಳಿಸಿದ್ದೆ, ಆದರೆ ಚಿತ್ರತಂಡ ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರಕ್ಕೆ ನೀವು ಸೂಕ್ತ ಎಂದಾಗ ಬಂದ ಅವಕಾಶವನ್ನ ಒಪ್ಪಿಕೊಂಡೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ತಮಿಳಿನ ನನ್ನ ಮೊದಲ ಸಿನಿಮಾದಲ್ಲೇ ವಿಜಯ್ ಸೇತುಪತಿ ಸರ್ ಜೊತೆ ನಟಿಸುವ ಆಫರ್ ಸಿಕ್ಕಿದ್ದರ ಬಗ್ಗೆ ತುಂಬಾನೇ ಖುಷಿಯಿದೆ. ಅವರ ಜೊತೆ ನಟಿಸ್ತಿರೋದು ಅದ್ಭುತ ಫೀಲಿಂಗ್, ನಾನು ಡೈಲಾಗ್ ಹೇಳುವಾಗ ವಿಜಯ್ ಸರ್ ತಾಳ್ಮೆಯಿಂದ ಕಾದು ನನಗೆ ಸಪೋರ್ಟ್ ಮಾಡುತ್ತಾರೆ. ಹೊಸಬರು ಎಂದೂ ದೂರದೇ ಕಂಫರ್ಟ್ ಫೀಲಿಂಗ್ ಕೊಡುತ್ತಾರೆ. ವಿಜಯ್ ಸರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ನನ್ನ ಅದೃಷ್ಟ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.

    ಆರ್ಮುಗ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಮಲೇಷಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್ ಇರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದೆ. ನಾನು ಮಲೇಷಿಯಾದ ಪ್ರಜೆಯಾಗಿರುತ್ತೇನೆ, ಇದೊಂದು ವಿಭಿನ್ನ ಪಾತ್ರವಾಗಿದೆ. ನನ್ನ ತಂಡದ ಬೆಂಬಲದಿಂದ ಈ ಪ್ರಾಜೆಕ್ಟ್ ಅಷ್ಟು ಕಷ್ಟ ಎಂದೇನಿಸುತ್ತಿಲ್ಲ. ಬಾನದಾರಿಯಲಿ, ಬಘೀರ, ಸಪ್ತಸಾಗರದಾಚೆ ಎಲ್ಲೋ, ಈ ಮೂರು ಸಿನಿಮಾದಲ್ಲಿ ನನ್ನ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಥೆ ಮತ್ತು ಪಾತ್ರ ಜನರ ಮನಸ್ಸಿಗೆ ತಲುಪುತ್ತದೆ ಎಂಬ ಭರವಸೆ ನನಗಿದೆ ಎಂದು ನಟಿ ರುಕ್ಮಿಣಿ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಭರವಸೆಯ ನಟಿಯಾಗಿ ಗಮನ ಸೆಳೆದಿರುವ ರುಕ್ಮಿಣಿ ವಸಂತ್ ಅವರು ತೆರೆಗೆ ರೆಡಿಯಿರುವ ಚಿತ್ರಗಳ ಮೂಲಕ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ‘ಬೀರ್‌ಬಲ್’ ಸುಂದರಿಯ ನಟನೆಯನ್ನ ಪ್ರೇಕ್ಷಕರ ಪ್ರಭುಗಳು ಒಪ್ಪಿಕೊಳ್ತಾರಾ ಕಾದುನೋಡಬೇಕಿದೆ.‌

    ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್

  • ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ (Rakshit Shetty) ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ʻಸಪ್ತಸಾಗರದಾಚೆ ಎಲ್ಲೋʼ ಚಿತ್ರದ ಶೂಟಿಂಗ್‌ ಮುಗಿಸಿ, ತೆರೆಗ ಮೇಲೆ ಅಬ್ಬರಿಸಲು ಸಿನಿಮಾ ರೆಡಿಯಾಗಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಇದೀಗ `ಸಪ್ತಸಾಗರದಾಚೆ ಎಲ್ಲೋ’ (Saptasagaradache Yello) ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ (Rukmini Vasanth) ಮತ್ತು ಚೈತ್ರಾ ಆಚಾರ್ (Chaitra Achar) ನಟಿಸಿದ್ದಾರೆ. ಇನ್ನೂ ಬರೋಬ್ಬರಿ 137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪ್ರೊಡಕ್ಷನ್ ವರ್ಕ್ ಶುರು ಮಾಡಿದೆ. ಇದನ್ನೂ ಓದಿ: ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    `ಕವಲು ದಾರಿ’ (Kavaludari) ಚಿತ್ರದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ಒಂದಷ್ಟು ದಿನ ವರ್ಕ್ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ.

     

    View this post on Instagram

     

    A post shared by Rakshit Shetty (@rakshitshetty)

    ತನ್ನ ಪಾತ್ರಕ್ಕಾಗಿ ರಕ್ಷಿತ್, 15 ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ. ಹಾಗೆಯೇ ಗಡ್ಡ ಬಿಟ್ಟು ರಗಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

    `777 ಚಾರ್ಲಿ’ ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.