Tag: sapta sagaradache yello

  • ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್

    ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್

    ಸ್ಯಾಂಡಲ್‌ವುಡ್ ಬ್ಯೂಟಿ ರುಕ್ಮಿಣಿ ವಸಂತ್‌ಗೆ (Rukmini Vasanth) ಟಾಲಿವುಡ್‌ನಲ್ಲಿ ಸಖತ್ ಬೇಡಿಕೆ ಶುರುವಾಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆದ ಬಳಿಕ ರುಕ್ಮಿಣಿ ವಸಂತ್‌ಗೆ ತೆಲುಗಿನ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ರುಕ್ಮಿಣಿಗೆ ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ.

    ‘ಬೀರ್‌ಬಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ, ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದರು. ಪ್ರಿಯಾ-ಮನು ಲವ್ ಸ್ಟೋರಿ ನೋಡುಗರಿಗೆ ಖುಷಿ ಕೊಟ್ಟಿತ್ತು. ರುಕ್ಮಿಣಿ ಆ್ಯಕ್ಟಿಂಗ್‌ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟರು. ಇದೇ ಚಿತ್ರ ತೆಲುಗಿಗೆ ಡಬ್ ಆಗಿ ಪ್ರೇಕ್ಷಕರ ದಿಲ್ ಗೆದ್ದಿದೆ. ಇದನ್ನೂ ಓದಿ:ರಜನಿಕಾಂತ್ ವಿರುದ್ಧ ಮತ್ತೆ ಗುಡುಗಿದ ವಾಟಾಳ್ ನಾಗರಾಜ್

    ‘ಸಪ್ತ ಸಾಗರಲು ದಾಟಿ’ ಈಗ ಟಾಲಿವುಡ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ತೆಲುಗಿನಿಂದ ನಟಿಗೆ ಒಳ್ಳೆಯ ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಒಳ್ಳೆಯ ಆಫರ್ ಸಿಕ್ಕರೆ ತೆಲುಗಿನಲ್ಲಿ ನಟಿಸುವೆ ಎಂದು ರುಕ್ಮಿಣಿ ಕೂಡ ಖುಷಿಯಿಂದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ತೆಲುಗಿನಲ್ಲಿ ಮೊದಲೇ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ (Sreeleela), ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಹಾವಳಿ ಮಾಡುತ್ತಿರುವ ಬೆನ್ನಲ್ಲೇ ಇದೀಗ ರುಕ್ಮಿಣಿ ವಸಂತ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಕನ್ನಡದ ನಟಿಯರ ನಡುವೆಯೇ ರುಕ್ಮಿಣಿ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರುಕ್ಮಿಣಿ ವಸಂತ್‌ ಎಂಗೇಜ್‌ ಆಗಿದ್ದಾರಾ? ನಟಿ ಸ್ಪಷ್ಟನೆ

    ರುಕ್ಮಿಣಿ ವಸಂತ್‌ ಎಂಗೇಜ್‌ ಆಗಿದ್ದಾರಾ? ನಟಿ ಸ್ಪಷ್ಟನೆ

    ಪ್ತ ಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ ಚಿತ್ರ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಸದ್ಯ ಟ್ರೆಂಡ್‌ನಲ್ಲಿರುವ ನಾಯಕಿ. ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಡ್ಯುಯೇಟ್ ಹಾಡಿದ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆ, ಮುದ್ದಾದ ನಗುವಿಗೆ ಫ್ಯಾನ್ಸ್ ಮನಸೋತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಯ್‌ಫ್ರೆಂಡ್ (Boyfriend) ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ನಟಿ ಕೂಡ ರಿಯಾಕ್ಟ್ ಮಾಡಿದ್ದಾರೆ.

    ಓರ್ವ ಹುಡುಗನ ಜೊತೆಯಿರುವ ರುಕ್ಮಿಣಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇಬ್ಬರ ಸಂಭಾಷಣೆ‌ ಜೊತೆ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿತ್ತು. ಹಾಗಾಗಿ ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ನಿಜನಾ ಎಂಬ ಪ್ರಶ್ನೆಗೆ ‘ನೋ’ ಎಂಬ ಉತ್ತರ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

    ವೈರಲ್ ಆದ ಫೋಟೋದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನಗಳ ಬಗ್ಗೆ ಜನ ಕೇರ್ ಮಾಡುತ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ. ಸುಳ್ಳು ಸುದ್ದಿಗಳು, ನೆಗೆಟಿವ್ ಕಾಮೆಂಟ್‌ಗಳು ಬೇಸರ ತರಿಸುತ್ತದೆ ಎಂದಿದ್ದಾರೆ.

    ರಕ್ಷಿತ್ ನಟನೆ, ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಸಿನಿಮಾ ತೆಲುಗು ವರ್ಷನ್‌ನಲ್ಲಿ ಸೆ.22ರಂದು ತೆರೆ ಕಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ‘ಬಾನ ದಾರಿಯಲ್ಲಿ’ (Banadariyali)  ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಪಲ್ ಸ್ಟಾರ್ ಮದುವೆ ಯಾವಾಗ? ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಸಿಂಪಲ್ ಸ್ಟಾರ್ ಮದುವೆ ಯಾವಾಗ? ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ (Saptasagaradacche Yello) ಸಿನಿಮಾ ಈಗ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆಗಿದೆ. ಇದರ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಶೆಟ್ಟಿ & ಟೀಮ್ ಬ್ಯುಸಿಯಾಗಿದೆ. ಇದೀಗ ಸಂದರ್ಶನವೊಂದರಲ್ಲಿ, ರಕ್ಷಿತ್ ಮದುವೆ ಬಗ್ಗೆ ಕೇಳಲಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ.

    ತೆಲುಗಿನ ‘ಸಪ್ತಸಾಗರಲು ದಾಟಿ’ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ, ರಕ್ಷಿತ್‌ಗೆ ಮದುವೆ (Wedding) ಬಗ್ಗೆ ಪ್ರಶ್ನೆ ಎದುರಾಗಿದೆ. ನಿಮ್ಮ ಬಗ್ಗೆ ಅತೀ ಹೆಚ್ಚು ಗೂಗಲ್ ಆಗಿರುವ ಪ್ರಶ್ನೆ ಅಂದರೆ ನಿಮ್ಮ ಮದುವೆ ಬಗ್ಗೆ. ನಿಮ್ಮ ಮದುವೆ ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ. ಖಂಡಿತವಾಗಿಯೂ ನಾನು ಮದುವೆ ಆಗುತ್ತೇನೆಂದು ಗೂಗಲ್‌ಗೆ ಗೊತ್ತಾಗುತ್ತೆ ಎಂದು ರಕ್ಷಿತ್ ಶೆಟ್ಟಿ ನಗುತ್ತಲೇ ಉತ್ತರಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತೀನಿ ಎಂದಿದ್ದಾರೆ. ಇದನ್ನೂ ಓದಿ:ಕಂಗನಾ ಅನಾರೋಗ್ಯ: 12 ತಿಂಗಳಲ್ಲಿ ಬಂದ ಕಾಯಿಲೆಗಳೆಷ್ಟು?

    ಸ್ಯಾಂಡಲ್‌ವುಡ್‌ನಲ್ಲಿ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ (Rukmini Vasanth) ಜೋಡಿ ಅಭಿಮಾನಿಗಳನ್ನ ಮೋಡಿ ಮಾಡಿದೆ.

    ಹಾಗಾಗಿ ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಸಪ್ತಸಾಗರಲು ದಾಟಿ’ ಎಂಬ ಟೈಟಲ್ ಮೂಲಕ ಟಾಲಿವುಡ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಇಂದು (ಸೆ.22) ಸಿನಿಮಾ ತೆರೆಕಂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಆಚಾರ್ (Chaithra Achar) ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    `ಮಹಿರ’ (Mahira) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೈತ್ರಾ, ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದಾರೆ. `ತಲೆದಂಡ’ (Thaledanda) ಚಿತ್ರದಲ್ಲಿ ಚೈತ್ರಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಸಂಚಾರಿ ವಿಜಯ್ (Sanchari Vijay) ಜೊತೆ ನಟಿ ತೆರೆಹಂಚಿಕೊಂಡಿದ್ದರು.

     

    View this post on Instagram

     

    A post shared by Chaithra J Achar (@chaithra.j.achar)

    ಕೆಂಪು ಬಣ್ಣದ ಮಾಡ್ರನ್ ಲುಕ್‌ನಲ್ಲಿ ನಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Chaithra J Achar (@chaithra.j.achar)

    `ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದಾರೆ. ಬ್ಲಿಂಕ್, ಸ್ಟ್ರಾಬೆರಿ, ಯಾರಿಗೂ ಹೇಳಬೇಡಿ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ.