Tag: sanya iyer

  • ಬದಲಾಗಲು ಸಾಧ್ಯವೇ ಇಲ್ಲ ರೂಪಿ: ರೂಪೇಶ್ ಬಗ್ಗೆ ಸಾನ್ಯ ಭಾವುಕ

    ಬದಲಾಗಲು ಸಾಧ್ಯವೇ ಇಲ್ಲ ರೂಪಿ: ರೂಪೇಶ್ ಬಗ್ಗೆ ಸಾನ್ಯ ಭಾವುಕ

    ಬಿಗ್ ಬಾಸ್ ಮನೆಯ(Bigg Boss House) ಲವ್ ಬರ್ಡ್ಸ್ ಎಂದೇ ಹೈಲೈಟ್ ಆಗಿದ್ದ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇದೀಗ ದೂರ ದೂರ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬೆನ್ನಲ್ಲೇ ರೂಪೇಶ್ ಶೆಟ್ಟಿ(Roopesh shetty) ಬಗ್ಗೆ ಸಾನ್ಯ (Sanya Iyer) ಭಾವುಕರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾನ್ಯ ಪೋಸ್ಟ್ ಸಖತ್ ವೈರಲ್ ಆಗಿದೆ.

    ದೊಡ್ಮನೆಯ ಪ್ರೇಮ ಪಕ್ಷಿಗಳಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದರು. ಓಟಿಟಿ ಟು ಬಿಗ್ ಬಾಸ್ ಅಂಗಳದವರೆಗೆಗೂ 100 ದಿನದ ಆಟದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ 6 ವಾರಕ್ಕೆ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್‌ಗೆ ನುಂಗಲಾರದ ತುತ್ತಾಗಿದೆ. ಸಾನ್ಯ ಎಲಿಮಿನೇಟ್ ಬೆನ್ನಲ್ಲೇ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು.

    ಸಾನ್ಯ ತನ್ನ ಲೈಫ್ ಎಷ್ಟು ಮುಖ್ಯ ಎಂಬುದನ್ನ ತಮ್ಮ ಮಾತುಗಳ ಮೂಲಕ ರೂಪೇಶ್ ತಿಳಿಸಿದ್ದರು. ಈ ಬೆನ್ನಲ್ಲೇ ಸಾನ್ಯ, ರೂಪೇಶ್ ಬಗ್ಗೆ ಭಾವುಕರಾಗಿದ್ದಾರೆ. ತಮ್ಮ ಮನದ ಮಾತನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಬದಲಾಗಲು ಸಾಧ್ಯವೇ ಇಲ್ಲ ರೂಪಿ. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನೂ ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‌ಸ್ಟಾರ್ ಎಂದು ರೂಪೇಶ್ ಬಗ್ಗೆ ಸಾನ್ಯ ಬರೆದುಕೊಂಡಿದ್ದಾರೆ. ಮತ್ತೆ ದೊಡ್ಮನೆಗೆ ಹೋಗಲು ಸಾನ್ಯಗೆ ಅವಕಾಶ ಸಿಗಬೇಕು ಅಂತಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಬಿಗ್ ಬಾಸ್‌ನ ಲವ್ ಬರ್ಡ್ಸ್ ಎಂದೇ ಹೈಲೈಟ್ ಆಗಿದ್ದ ಸಾನ್ಯ ಅಯ್ಯರ್(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ಬೇರೆ ಬೇರೆಯಾಗಿದ್ದಾರೆ. ಆರನೇ ವಾರದ ಆರನೇ ಸ್ಪರ್ಧಿಯಾಗಿ ಸಾನ್ಯ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಸಾನ್ಯ ಎಲಿಮಿನೇಷನ್ ನಿಂದ ರೂಪೇಶ್ ಶೆಟ್ಟಿ ಗಳಗಳನೇ ಅತ್ತಿದ್ದಾರೆ.

    ಓಟಿಟಿ ಸೀಸನ್ ನಿಂದ ಟಿವಿ ಬಿಗ್ ಬಾಸ್‌ವರೆಗೂ(Bigg Boss Kannada) ಮೋಡಿ ಮಾಡಿದ ಜೋಡಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಇದೀಗ ದೂರ ದೂರ ಆಗಿದ್ದಾರೆ. ಸಾನ್ಯ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಅದರಲ್ಲೂ ರೂಪೇಶ್‌ಗೆ ಮತ್ತಷ್ಟು ಶಾಕ್ ಆಗಿದೆ. ಇದೀಗ ಸಾನ್ಯ ನಿರ್ಗಮನದಿಂದ ರೂಪೇಶ್ ಕಣ್ಣೀರಿಟ್ಟಿದ್ದಾರೆ. ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ನಿನ್ನ ನಾನು ತುಂಬ ಮಿಸ್ ಮಾಡಿಕೊಳ್ತೀನಿ. ನನ್ನೊಳಗಿನ ಫೀಲ್ ಬದಲಾಗಿದೆ. ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಲೇಸ್ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ನನಗೆ ನನ್ನ ಫ್ಯಾಮಿಲಿ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೀಯಾ. ನನ್ನಲ್ಲಿ ಇಷ್ಟೊಂದು ಮೌಲ್ಯ ಬರುವಂತೆ ಮಾಡಿದ್ದಿಯಾ. ನಾನು ಜೀವನವನ್ನು ನೋಡುವ ವಿಧಾನ ಬದಲಾಗಿದೆ.

    ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದ ಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರೋದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ಇದುವರೆಗೂ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೀನಿ, ಅದು ನಿನ್ನ ವಿಚಾರಕ್ಕೆ ಎಂದು ರೂಪೇಶ್ ಶೆಟ್ಟಿ(Roopesh Shetty) ಅವರು ಸಾನ್ಯಾ ಅಯ್ಯರ್ ಬಳಿ ಹೇಳಿಕೊಂಡು ಅತ್ತಿದ್ದಾರೆ. ಇದನ್ನೂ ಓದಿ:ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ನಾನು ನಿನಗೆ ಸಮಯ ಕೊಡಬೇಕಿತ್ತು. ಆಗಲಿಲ್ಲ, ನಿನಗೆ ನಾನು ಬೇಜಾರು ಮಾಡಿದ್ದರೆ ದಯವಿಟ್ಟು ಕ್ಷಮಿಸಿ. ಪ್ರತಿ ವಾರ ರೆಡ್ ಟೀ ಶರ್ಟ್ ಕಳಿಸು, ಅದರಲ್ಲಿ ಯೆಸ್ ಅಂತ ಇರಲಿ. ನಾನು ಯಾವತ್ತೂ ಅಳೋದಿಲ್ಲ. ಆದರೆ ನಿನಗೋಸ್ಕರ ಎರಡು ಬಾರಿ ಅತ್ತಿದ್ದೇನೆ. ಇದು ಯಾರಿಗೂ ಅರ್ಥವಾಗದೆ ಇರಬಹುದು, ಆದರೆ ನಿನಗೆ ಅರ್ಥವಾಗತ್ತೆ. ಇದು ನನ್ನ ಜೆನ್ಯೂನ್ ಫೀಲಿಂಗ್ ಎಂದು ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಬಳಿಕ ರೂಪೇಶ್‌ಗಾಗಿ ಸಾನ್ಯ ರಚಿಸಿದ್ದ ಹಾಡನ್ನ ಹಾಡಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss House) ಮೋಡಿ ಮಾಡಿದ್ದ ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer) ಇದೀಗ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್‌ನ 6ನೇ ವಾರಕ್ಕೆ ಸಾನ್ಯ ಆಟ ಅಂತ್ಯವಾಗಿದೆ.

    ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದೆ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) ಮತ್ತು ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್, ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು.‌ ಸಾನ್ಯ ಮಾತನಾಡುವ ಸ್ಪಷ್ಟ ಕನ್ನಡ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಇದೀಗ ಸಾನ್ಯ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

    ಟಿವಿ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಸಾನ್ಯ ಅಯ್ಯರ್ ಗುರುತಿಸಿಕೊಂಡಿದ್ದರು. ಜೊತೆಗೆ ರೂಪೇಶ್ ಶೆಟ್ಟಿ(Roopesh Shetty) ಜೊತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಸಾನ್ಯ ಹೈಲೈಟ್ ಆಗಿದ್ದರು. ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುತ್ತಲೇ ಬಂದಿತ್ತು. ಇದೀಗ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್ ಸೇರಿದಂತೆ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ

    ಪುಟ್ಟಗೌರಿಯ ಗಟ್ಟಿ ಆಟವನ್ನ ಮೆಚ್ಚಿಕೊಂಡಿರುವ ಆಕೆಯ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ 6ನೇ ವಾರಕ್ಕೆ ಸಾನ್ಯ ಔಟ್ ಆಗಿದ್ದಾರೆ. ಇನ್ನೂ ನಟಿಯ ಮುಂದಿನ ಸಿನಿಪಯಣಕ್ಕೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಹಾಡಿಗೆ ರೂಪೇಶ್ ಶೆಟ್ಟಿ ರಾಂಗ್

    ಸಾನ್ಯ ಅಯ್ಯರ್ ಹಾಡಿಗೆ ರೂಪೇಶ್ ಶೆಟ್ಟಿ ರಾಂಗ್

    ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಸಾನ್ಯ ಅಯ್ಯರ್(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh shetty) ನಡುವೆ ಮತ್ತೆ ಜಟಾಪಟಿ ಶುರುವಾಗಿದೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ದೊಡ್ಮನೆಯಲ್ಲಿ ಹೈಲೈಟ್ ಆಗಿದ್ದ ಸಾನ್ಯ, ರೂಪು ಜೋಡಿ ನಡುವೆ ಕಿರಿಕ್ ಶುರುವಾಗಿದೆ.

    ದೊಡ್ಮನೆಯಲ್ಲಿ ಕಳೆದ ಸೀಸನ್‌ನ ಜೋಡಿಯಾಗಿ ಅರವಿಂದ್ ಮತ್ತು ದಿವ್ಯಾ ಹೈಲೈಟ್ ಆಗಿದ್ದರು. ಇದೀಗ ಸೀಸನ್ 9ರ ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಹೈಲೈಟ್ ಆಗುತ್ತಿದ್ದಾರೆ. ಓಟಿಟಿಯಿಂದ ಶುರುವಾದ ಇವರಿಬ್ಬರ ಸ್ನೇಹ ಟಿವಿ ಬಿಗ್ ಬಾಸ್‌ನಲ್ಲೂ ಮುಂದುವರೆದಿದೆ. ಹೀಗಿರುವಾಗ ರೂಪೇಶ್‌ಗಾಗಿ ಸಾನ್ಯ ಹಾಡಿದ್ದ ಹಾಡೇ ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಿದೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅಯ್ಯರ್ ರೂಪೇಶ್‌ಗಾಗಿ ಒಂದು ಸಾಂಗ್ ಡೇಡಿಕೇಟ್ ಮಾಡಿದ್ದರು. ಹಾಡುವಾಗ ಅಪಸ್ವರ ಬಂದ ಕಾರಣ ತಾನು ಸರಿಯಾಗಿ ಹಾಡಿಲ್ಲ ಎಂದು ಸಾನ್ಯ ಬೇಸರ ಮಾಡಿಕೊಂಡಿದ್ದರು. ಅದಕ್ಕೆ ರೂಪೇಶ್ ಕೂಡ ಸುಮ್ಮನೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀಯಾ ಎಂದು ಕೇಳಿದ್ದಾರೆ. ನನಗೆ ಈ ಹಾಡು ಸರಿಯಾಗಿ ಹಾಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    ಚೆನ್ನಾಗಿ ಹಾಡಿದ್ಯಾ ಅಂತಾ ಹೇಳ್ತಿದ್ದೀನಿ ತಾನೇ ಎಂದು ರೂಪೇಶ್ ಹೇಳಿದ್ರೆ, ನೀನು ಏನು ನನ್ನ ಮೇಲೆ ಕೋಪಿಸಿಕೊಳ್ಳುವುದು ಎಂದು ಸಾನ್ಯ ರಾಂಗ್ ಆಗಿದ್ದಾರೆ. ಯಾಕೆ ಕೋಪ ಮಾಡಿಕೊಳ್ಳುತ್ತೀಯಾ ಚೆನ್ನಾಗಿ ಹಾಡಿಲ್ಲ ಅಂತಾ ತಾನೇ ಎಂದು ಸಾನ್ಯ ಕೇಳಿದಾಗ ನಿನ್ನ ತಂಟೆಗೆ ನಾನಿಲ್ಲ ಎಂದು ರೂಪೇಶ್ ಶೆಟ್ಟಿ ಕೈಮುಗಿದಿದ್ದಾರೆ. ಇವರಿಬ್ಬರ ಜಗಳಕ್ಕೆ ಮನೆಮಂದಿ ಮೂಕ ಪ್ರೇಕ್ಷಕರಾಗಿದ್ದಾರೆ. ಕಿಚ್ಚನ ಕ್ಲಾಸ್ ನಂತರ ದಿನದಿಂದ ದಿನಕ್ಕೆ ಇವರಿಬ್ಬರ ನಡುವೆ ಗ್ಯಾಪ್ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಜೋಡಿ ಮತ್ತೆ ಒಂದಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಗರಂ

    ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾನ್ಯ ಅಯ್ಯರ್ ಅವರ ನಡೆ, ನುಡಿ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದೀಗ ಮತ್ತೆ ಸಾನ್ಯ ಮಾತು ಪ್ರಶಾಂತ್ ಸಂಬರ್ಗಿ ಅವರ ಬೇಸರಕ್ಕೆ ಕಾರಣವಾಗಿದೆ. ಗರ್ಲ್‌ಫ್ರೆಂಡ್ಸ್‌ ಬಗ್ಗೆ ಕಿಚ್ಚನ ಮುಂದೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಕಿಡಿಕಾರಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲಿನಿಂದಲೂ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಸೇರಿ ರೂಪೇಶ್ ರಾಜಣ್ಣಗೆ ಬಕ್ರಾ ಮಾಡಿದ್ದರು. ಇದೀಗ ಸಾನ್ಯ ಮತ್ತು ಸಂಬರ್ಗಿ ನಡುವೆ ಕಿಡಿ ಹೊತ್ತಿಕೊಂಡಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಸಾನ್ಯಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಸಂಬರ್ಗಿ

    ಕಿಚ್ಚನ ವಾರ ಪಂಚಾಯಿತಿಯಲ್ಲಿ ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ ಎಂದು ಸಾನ್ಯಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ,ಪ್ರಶಾಂತ್ ಸಂಬರ್ಗಿಗೆ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್‌ಫ್ರೆಂಡ್ಸ್ ಫೋಟೋ ಬೇಕೋ, ಯಾವುದು ಬೇಕೋ ಅದು ಪಾಲಾಗುತ್ತೆ ಸರ್ ಎಂದರು ಸಾನ್ಯ. ಗರ್ಲ್‌ಫ್ರೆಂಡ್ಸ್ ವಿಚಾರ ಯಾಕೆ ಎಂದು ಕಿಚ್ಚ ಸುದೀಪ್ ಕೇಳಿದಾಗ, ಅವರು ಜಮಾನದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕಾಪಟ್ಟೆ ಗರ್ಲ್‌ಫ್ರೆಂಡ್ಸ್ ಇದ್ದರು. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಇದಾದ ಬಳಿಕ ಇದು ಡ್ಯಾಮೇಜಿಂಗ್ ಆಗಿದೆ ಎಂದು ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಕ್ಯಾಮೆರಾ ಮುಂದೆ ಹೇಳೋದಕ್ಕೂ, ಸ್ಟೇಜ್ ಮೇಲೆ ಮಾತನಾಡೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಪ್ರಶಾಂತ್ ಸಂಬರ್ಗಿ ಸಾನ್ಯಗೆ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೀಕೆಂಡ್ ಪಂಚಾಯಿತಿಯಲ್ಲಿ ಸಾನ್ಯಗೆ ಸುದೀಪ್ ಖಡಕ್ ಕ್ಲಾಸ್

    ವೀಕೆಂಡ್ ಪಂಚಾಯಿತಿಯಲ್ಲಿ ಸಾನ್ಯಗೆ ಸುದೀಪ್ ಖಡಕ್ ಕ್ಲಾಸ್

    ಬಿಗ್ ಬಾಸ್ ಮನೆಯ(Bigg Boss House) ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನ ಕ್ಲಾಸ್‌ಗೆ ಬಿಗ್ ಬಾಸ್ ಮನೆಯೇ ಗಪ್‌ಚುಪ್ ಎಂದಿದೆ. ಕ್ಯಾಪ್ಟೆನ್ಸಿ ವಿಚಾರದಲ್ಲಿ ಸಾನ್ಯ ಅಯ್ಯರ್ (Sanya Iyer) ವರ್ತನೆಗೆ ಕಿಚ್ಚ ಮತ್ತೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆ ಮಂದಿಗೂ ಅವರವರ ತಪ್ಪುಗಳನ್ನ ಸುದೀಪ್ (Kiccha Sudeep) ಮನವರಿಕೆ ಮಾಡಿಸಿದ್ದಾರೆ.

    ದೊಡ್ಮನೆಯ ಆಟ ಕುತೂಹಲಕಾರಿಯಾಗಿ ನಡೆಯುತ್ತಿದೆ. ಕಳೆದ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ವೀಕೆಂಡ್ ಎಲಿಮಿನೇಷನ್(Elimination) ನಡೆದಿತ್ತು. ಸುದೀಪ್‌ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ವಿದೇಶಕ್ಕೆ ಪತ್ನಿಯ ಜತೆ ತೆರಳಿದ್ದರು. ಹಾಗಾಗಿ ಕಳೆದ ವಾರದ ಮಾತುಕತೆಯ ಜೊತೆ ಈ ವಾರದ ಭರ್ಜರಿ ಕ್ಲಾಸ್ ಅನ್ನ ಮನೆಮಂದಿಗೆ ಸುದೀಪ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಕ್ಯಾಪ್ಟೆನ್ಸಿ ವೇಳೆಯಲ್ಲಿ ಸಾನ್ಯ ಮತ್ತು ದೀಪಿಕಾ ನಡೆದುಕೊಂಡ ರೀತಿಗೆ ಕಿಚ್ಚ ಜಬರ್‌ದಸ್ತ್ ಕ್ಲಾಸ್ ಮಾಡಿದ್ದಾರೆ. ಉಡುಗೊರೆ ಯಾರಿಗೆ ಬಂದಿದೆಯೋ, ಅವರಿಗೆ ಆಡೋಕೆ ಅವಕಾಶ ಇಲ್ಲ ಎನ್ನುವ ವಾತಾವರಣ ಕ್ರಿಯೇಟ್ ಆಗಿರೋದರ ಬಗ್ಗೆ ಸುದೀಪ್ ವಾರಾಂತ್ಯದಲ್ಲಿ ಪ್ರಸ್ತಾಪ ಮಾಡುತ್ತಾರೆ. ಇದನ್ನೂ  ಓದಿ:ಒಂದೇ ದಿನದಲ್ಲಿ ಕಾಡಿನಲ್ಲಿ ಶೂಟಿಂಗ್ – ಟವೆಲ್ ಸುತ್ತಿಡು ಕೊಂಅಭಿನಯಿಸಿದ್ದೆ

    ಸಾನ್ಯ ಅಯ್ಯರ್ ಕ್ಯಾಪ್ಟನ್ ಆಗಿದ್ದಾಗ ಹಲವು ನಿರ್ಧಾರಗಳು ತಪ್ಪಾಗಿದ್ವು. ಆಗ ಮನೆಯವರು ಅವರ ಕ್ಯಾಪ್ಟೆನ್ಸಿ ಇಷ್ಟ ಆಗಿಲ್ಲ ಎಂದು ಕಳಪೆ ಕೊಟ್ಟಿದ್ದರು. ಸಾನ್ಯ ನಿಮ್ಮ ದಾಟಿಯಿಂದ ಎಲ್ಲರಿಗೂ ನೋವಾಗಿದೆ. ನಿಮ್ಮ ನಿರ್ಧಾರದಿಂದ ಹಲವು ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಈ ಬಗ್ಗೆ ಸರಿಪಡಿಸಿಕೊಳ್ಳಿ ಎಂದು ಸಾನ್ಯಗೆ ಸುದೀಪ್ ಮನವರಿಕೆ ಮಾಡಿಸಿದ್ದರು.

    ದೀಪಿಕಾ ಕ್ಯಾಪ್ಟನ್ ಆಗಿದ್ದಾಗ ಒಂದು ತಂಡಕ್ಕೆ ಫೇವರಿಸಂ ಆಗಿದೆ ಎಂಬ ಚರ್ಚೆ ನಡೆದಿದೆ. ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ, ದೀಪಿಕಾ ಒಂದು ತಂಡಕ್ಕೆ ಫೇವರಿಸಂ ಮಾಡಿದ್ದಾರೆ ಎಂದು ಸುದೀಪ್‌ಗೆ ಹೇಳ್ತಾರೆ. ಆಗ ನೇಹಾ ಗೌಡ, ಕ್ಯಾಪ್ಟೆನ್ಸಿ ವೇಳೆ ದೀಪಿಕಾ ಅವರು ನಡೆದುಕೊಂಡ ರೀತಿ ನನಗೆ ಇಷ್ಟ ಆಗಲಿಲ್ಲ ಎಂದು ಹೇಳ್ತಾರೆ. ದೀಪಿಕಾ(Deepika Das) ಕ್ಯಾಪ್ಟೆನ್ಸಿಯಲ್ಲಿ ಒಂದು ತಂಡಕ್ಕೆ ಗೇಮ್ ವೇಳೆ, ಎಲ್ಲೋ ಒಂದು ಕಡೆ ಫೇವರಿಸಂ ಆಗಿದೆ ಎಂದು ಕಿಚ್ಚ ದೀಪಿಕಾಗೆ ತಿದ್ದಿದ್ದಾರೆ. ಬಳಿಕ ದೀಪಿಕಾ, ಫೇವರಿಸಂನಿಂದ ನನಗೇನೂ ಸಿಗಲ್ಲ ಅಂತಾ ನನಗೆ ಗೊತ್ತು. ಗೊಂದಲಗಳಿಂದ ಹೀಗೆ ಆಗಿದೆ ಎಂದು ಎಲ್ಲರಲ್ಲಿ ಕ್ಷಮೆ ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ವರ ಡೀಲ್ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್ ಗುರೂಜಿ

    ನಾಲ್ವರ ಡೀಲ್ ಬಗ್ಗೆ ಬಾಯ್ಬಿಟ್ಟ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್(Bigg Boss House) ಮನೆ ಈಗ ಮೊದಲಿನಂತೆ ಇಲ್ಲ. ದೊಡ್ಮನೆಯ ಅಸಲಿ ಆಟ ಇದೀಗ ಶುರುವಾಗಿದೆ. ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇದೀಗ ಸಾನ್ಯ, ರೂಪೇಶ್, ರಾಕೇಶ್ ಮತ್ತು ಗುರೂಜಿ ನಡುವೆ ನಡೆದ ಡೀಲ್ ಬಗ್ಗೆ ಇದೀಗ ಸ್ವತಃ ಗುರೂಜಿ ಬಾಯ್ಬಿಟ್ಟಿದ್ದಾರೆ.

    ಓಟಿಟಿಯಿಂದ ರಾಕೇಶ್ ಅಡಿಗ, ಸಾನ್ಯ, ರೂಪೇಶ್, ಗುರೂಜಿ ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಓಟಿಟಿ ಸ್ಪರ್ಧಿಗಳು ಸಖತ್ ಪೈಪೋಟಿ ಕೊಡುತ್ತಿದ್ದಾರೆ. ಹೀಗಿರುವಾಗ ಈ ನಾಲ್ವರ ಡೀಲ್ ಸ್ಟೋರಿಯನ್ನ ಗುರೂಜಿ(Aryavardhan Guruji) ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ. ಈ ವಿಷ್ಯ ಕೇಳಿ ಮನೆಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

    ಬಿಗ್ ಬಾಸ್‌ನಲ್ಲಿ ಎಲ್ಲರ ಮುಂದೆ ಸಾನ್ಯ ಅಯ್ಯರ್(Sanya Iyer) ನೇರವಾಗಿ ನಾಮಿನೇಟ್ ಮಾಡಿರುವುದು ಗುರೂಜಿ ಕೋಪಕ್ಕೆ ಕಾರಣವಾಗಿದೆ. ಈ ವಿಷ್ಯವಾಗಿ ಸಿಡಿದೆದ್ದ ಗುರೂಜಿ, ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೂರನೇ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಶೋ ಎಂದು ಆರೋಪ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ತಮ್ಮ ಡೀಲ್ ಬಗ್ಗೆ ಹೇಳಿದ್ದಾರೆ.

    ಓಟಿಟಿ ಮುಗಿದು ಟಿವಿ ಬಿಗ್ ಬಾಸ್(Bigg Boss)  ಶುರುವಾಗುವ ಗ್ಯಾಪ್‌ನಲ್ಲಿ ರಾಕೇಶ್, ಸಾನ್ಯ, ರೂಪೇಶ್, ಗುರೂಜಿ ರೆಸಾರ್ಟ್‌ನಲ್ಲಿ ವಾರಗಳ ಕಾಲ ಇರಿಸಲಾಗಿತ್ತು. ಈ ಸಮಯದಲ್ಲಿ ನಾಲ್ವರ ಮಧ್ಯೆ ಒಂದು ಡೀಲ್ ಆಗಿತ್ತು. ಯಾರನ್ನ ಯಾರು ನಾಮಿನೇಟ್ ಮತ್ತು ಕಳಪೆ ನೀಡಬಾರದು ಎಂದು ಮಾತಾಗಿತ್ತು. ಈ ಮಾತನ್ನ ಸಾನ್ಯ ತಪ್ಪಿರೋದಕ್ಕೆ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮಧ್ಯೆ ಇದ್ದ ಡೀಲ್ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

    ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

    ಬಿಗ್ ಬಾಸ್ ಮನೆಯ ಆಟ ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ಸ್ಪರ್ಧಿ ಕೂಡ ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ. ಸಾನ್ಯ ಕೂಡ ಓಟಿಟಿಯಂತೆ ಟಿವಿ ಬಿಗ್ ಬಾಸ್‌ನಲ್ಲೂ(Bigg Boss) ಆಕ್ಟೀವ್ ಆಗಿ ಆಡ್ತಿದ್ದಾರೆ. ನಾಲ್ಕನೇ ವಾರದ ಕ್ಯಾಪ್ಟನ್ ಆಗಿದ್ದ ಸಾನ್ಯ ಕ್ಯಾಪ್ಟೆನ್ಸಿಯ ವಿರುದ್ಧ ಇದೀಗ ಮನೆಮಂದಿ ತಿರುಗಿ ಬಿದ್ದಿದ್ದಾರೆ. ಸಾನ್ಯಳನ್ನ ರೂಪೇಶ್‌ ಶೆಟ್ಟಿ ಕೂಡ ಕಳಪೆ ಎಂದಿದ್ದಾರೆ.

    ಓಟಿಟಿಯಿಂದ ಸೌಂಡ್ ಮಾಡುತ್ತಿದ್ದ ಸಾನ್ಯ ಅಯ್ಯರ್ ಟಿವಿ ಬಿಗ್ ಬಾಸ್‌ನಲ್ಲೂ ಸಖತ್ ಮೋಡಿ ಮಾಡಿದ್ದರು. ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ಸಾನ್ಯ ಆಯ್ಕೆಯಾದರು. ಸಾನ್ಯ ಕ್ಯಾಪ್ಟೆನ್ಸಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕ್ಯಾಪ್ಟೆನ್ಸಿಯ ವಾರದ ಸಾನ್ಯ ಆಟ ಗಮನದಲ್ಲಿಟ್ಟುಕೊಂಡು ಮನೆಯ ಮಂದಿ ಕಳಪೆ ಬೋರ್ಡ್ ಕೊಟ್ಟು, ಇದೀಗ ಜೈಲಿಗೆ ಕಳುಹಿಸಿದ್ದಾರೆ.

    ಮನೆಯಲ್ಲಿ ಹಿರಿಯರಿಗೆ ಗೌರವ ಕೊಡದೇ ಸಾನ್ಯ ಮಾತನಾಡಿರುವುದು. ಕೆಲ ಟಾಸ್ಕ್ಅನ್ನು ಸಾನ್ಯ ಅರ್ಥ ಮಾಡಿಕೊಳ್ಳದೇ ಸ್ಪರ್ಧಿಗಳಿಗೆ ಮನೆಯಿಂದ ಕಳುಹಿಸಿದ ಗಿಫ್ಟ್ ಸಿಗದೇ ಇರುವುದು. ಹೀಗೆ ತಪ್ಪುಗಳ ಮೇಲೆ ತಪ್ಪನ್ನ ಮಾಡುತ್ತಲೇ ಬಂದರು ಸಾನ್ಯ. ಈಗ ಇದಕ್ಕೆಲ್ಲಾ ಬೆಲೆ ತರಬೇಕಾದ ಪರಿಸ್ಥಿತಿ ಸಾನ್ಯಗೆ ವದಗಿ ಬಂದಿದೆ. ಸಾನ್ಯ ಕ್ಯಾಪ್ಟೆನ್ಸಿಗೆ ಇಡೀ ಮನೆಯೇ ಜೀರೋ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ಅಷ್ಟೇ ಅಲ್ಲ, ಕಳೆದ ವಾರ ಸಾನ್ಯ ಆಟಕ್ಕೆ ಅತ್ಯುತ್ತಮ ಸ್ಪರ್ಧಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದೀಗ ಕ್ಯಾಪ್ಟೆನ್ಸಿ ವಿಚಾರಕ್ಕೆ ಕಳಪೆ ಹಣೆಪಟ್ಟಿ ಕೂಡ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಕೂಡ ಸಾನ್ಯಗೆ ಕಳಪೆ ಬೋರ್ಡ್ ಕೊಟ್ಟಿದ್ದಾರೆ. ಕ್ಯಾಪ್ಟನ್‌ ಆಗಿ ಸಾನ್ಯ ಎಡೆವಿದ್ದಾರೆ ಎಂದು ರೂಪೇಶ್‌ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ರೂಪೇಶ್‌ನ ಈ ನಡೆ ಮನೆಮಂದಿಗೆ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅನುಪಮಾ ಮನೆಯ ಜಾಮೂನ್ ಗುಳುಂ: ರೂಪೇಶ್ ಶೆಟ್ಟಿಗೆ ಸಾನ್ಯ ಕ್ಲಾಸ್

    ಅನುಪಮಾ ಮನೆಯ ಜಾಮೂನ್ ಗುಳುಂ: ರೂಪೇಶ್ ಶೆಟ್ಟಿಗೆ ಸಾನ್ಯ ಕ್ಲಾಸ್

    ದೊಡ್ಮನೆಯ ಆಟದ ರಂಗು ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಗೆ ಅವರ ಮನೆಯವರಿಂದ ಚೆಂದದ ಗಿಫ್ಟ್‌ಗಳನ್ನ ಕೊಡಲಾಗಿದೆ. ಅನುಪಮಾ ಅವರಿಗೆ ಮನೆಯಿಂದ ಜಾಮೂನ್ ಕಳುಹಿಸಿದ್ದರು. ಇದನ್ನ ರೂಪೇಶ್ ಶೆಟ್ಟಿ(Roopesh Shetty) ಖಾಲಿ ಮಾಡಿದ್ದಕ್ಕೆ ಸಾನ್ಯ(Sanya Iyer) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬಿಗ್ ಬಾಸ್ (Bigg Boss House) ಮನೆಯಲ್ಲಿ ಸಾನ್ಯ ಅಯ್ಯರ್ ಕ್ಯಾಪ್ಟನ್ ಆಗಿ ಮಿಂಚ್ತಿದ್ದಾರೆ. ದೊಡ್ಮನೆಯಲ್ಲಿ ಹಬ್ಬದ ಖುಷಿ, ಸಡಗರ ಮನೆ ಮಾಡಿದೆ. ಹಬ್ಬದ ಶುಭ ಸಂದರ್ಭದಲ್ಲಿ ಬಿಗ್‌ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನ ಗೆದ್ದು ಸ್ಪರ್ಧಿಗಳ ಮನೆಯಿಂದ ಬಂದಿರುವ ಗಿಫ್ಟ್‌ ಪಡೆಯುವ ಸವಾಲಿತ್ತು. ಅದರಂತೆ ಕ್ಯಾಪ್ಟೆನ್ಸಿ ಅಗ್ನಿ ಪರೀಕ್ಷೆ ಕೂಡ ನಡೆಯುತ್ತಿದೆ. ಅದರಂತೆ ಅನುಪಮಾ ಕೂಡ ಟಾಸ್ಕ್ ಪೂರ್ಣಗೊಳಿಸಿ, ಮನೆಯಿಂದ ಬಂದ ಜಾಮೂನ್ ತಮ್ಮದಾಗಿಸಿಕೊಂಡಿದ್ದರು.

    ಅನುಪಮಾ(Anupama Gowda)  ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್‌ಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅನುಪಮಾಗೆ ಬಂದಿರುವ ಜಾಮೂನ್ ಅನ್ನು ರೂಪೇಶ್ ಶೆಟ್ಟಿ ಕದ್ದು ತಿಂದಿದ್ದಾರೆ. ಅನುಪಮಾ ಬಂದು ವಿಚಾರಿಸಿದಾಗ ರೂಪೇಶ್ ತಿಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರ ಸಾನ್ಯ ಗಮನಕ್ಕೂ ಬಂದಿದ್ದು, ಸಾನ್ಯ ರೂಪೇಶ್‌ಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

    ಜಾಮೂನ್ ಅನುಪಮಾ ತಿನ್ನಲಿ ಎಂದು ಅವರು ಮನೆಯವರು ಕಳುಹಿಸಿರುತ್ತಾರೆ. ನೀವು ಯಾಕೆ ತಿಂದಿದ್ದು, ತಪ್ಪು ಅಲ್ವಾ ಎಂದು ಸಾನ್ಯ ರೂಪೇಶ್ ಮೇಲೆ ಗರಂ ಆಗಿದ್ದಾರೆ. ಇನ್ನೂ ಕಳೆದ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಮಯೂರಿ ಎಲಿಮಿನೇಟ್ ಆಗಿದ್ದರು. ಈ ವಾರ ಯಾವ ಸ್ಪರ್ಧಿ ಹೊರ ಬರಲಿದ್ದಾರೆ ಎಂಬುದರ ಬಗ್ಗೆ ಕ್ಯೂರಿಯಸ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ (Bigg Boss) ಮನೆಯ ಕೆಲವರನ್ನು ‘ಮಗ’, ‘ಮಗಳು’ ಎಂದು ಪ್ರೀತಿಯಿಂದ ಕರೆಯುತ್ತಾರೆ ಆರ್ಯವರ್ಧನ್ ಗುರೂಜಿ. ಅಂತಹ ಮಕ್ಕಳೇ ಇಂದು ತಿರುಗಿ ಬೀಳುವಂತಹ ಪ್ರಸಂಗಗಳು ದೊಡ್ಮನೆಯಲ್ಲಿ ನಡೆಯುತ್ತಿವೆ. ಅದರಲ್ಲೂ ಗುರೂಜಿ (Aryavardhan Guruji) ಯಾರನ್ನೂ ಅಭಿಮಾನದಿಂದ, ಅಕ್ಕರೆಯಿಂದ ಕರೆಯುತ್ತಿದ್ದರೋ ಅಂಥವರು ಗುರೂಜಿ ಬೆನ್ನಿಗೆ ಚೂರಿ ಹಾಕುತ್ತಿದ್ದಾರಂತೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಜಾರಾಗಿದೆ ಎಂದಿದ್ದಾರೆ.

    ದಿನವೂ ಒಂದೇ ತಟ್ಟೆಯಲ್ಲಿ ತಿಂದರೂ, ನಾಮಿನೇಷನ್ (nominated) ವಿಚಾರದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರು ವಿಭಿನ್ನವಾಗಿಯೇ ಯೋಚಿಸುತ್ತಾರೆ. ತಾನು ಸೇಫ್ ಆಗಿ ಇದ್ದರೆ ಸಾಕು ಎಂದೇ ಯೋಚನೆ ಮಾಡುತ್ತಾರೆ. ಸಾನ್ಯ ಅಯ್ಯರ್ (Sanya Iyer) ಮತ್ತು ಆರ್ಯವರ್ಧನ್ ಗುರೂಜಿ ವಿಚಾರದಲ್ಲೂ ಅದೇ ಆಯಿತು. ನಾಮಿನೇಷನ್ ಪ್ರಕ್ರಿಯೆ ನಡೆದಾಗ, ನೇರವಾಗಿ ನಾನು ಆರ್ಯವರ್ಧನ್ ಗುರೂಜಿಯನ್ನು ನಾಮಿನೇಟ್ ಮಾಡುವೆ ಎಂದು ಸಾನ್ಯ ಹೇಳಿದರು. ನಿಜಕ್ಕೂ ಇದು ಶಾಕಿಂಗ್ ವಿಚಾರವಾಗಿತ್ತು ಗುರೂಜಿಗೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಮನೆಯ ಕ್ಯಾಪ್ಟನ್ ಆಗಿದ್ದ ಸಾನ್ಯಗೆ ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಗುರೂಜಿಯನ್ನು ಅವರು ಆಯ್ಕೆ ಮಾಡಿಕೊಂಡರು. ಇದರಿಂದ ಕೋಪ ಮಾಡಿಕೊಂಡ ಗುರೂಜಿ, ‘ಈ ಸೇಡನ್ನು ನಾನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಮುಂದೊಂದು ದಿನ ನನಗೆ ಅಧಿಕಾರ ಬಂದರೆ, ಸಾನ್ಯರನ್ನು ನಾಮಿನೇಟ್ ಮಾಡುತ್ತೇನೆ ಎಂದು ಭದ್ರಕಾಳಿ ಮೇಲೆ ಶಪಥ ಮಾಡಿದರು ಆರ್ಯವರ್ಧನ್ ಗುರೂಜಿ.

    Live Tv
    [brid partner=56869869 player=32851 video=960834 autoplay=true]