Tag: sanya iyer

  • ಬಿಗ್ ಬಾಸ್ ಮನೆಯಿಂದ ವಿನೋದ್ ಗೊಬ್ಬರಗಾಲ ಔಟ್

    ಬಿಗ್ ಬಾಸ್ ಮನೆಯಿಂದ ವಿನೋದ್ ಗೊಬ್ಬರಗಾಲ ಔಟ್

    ಕಿರುತೆರೆಯ ಮಜಾಭಾರತ ರಿಯಾಲಿಟಿ ‌ಶೋ ಮೂಲಕ ಬೆಳಕಿಗೆ ‌ಬಂದ‌ ಪ್ರತಿಭೆ ವಿನೋದ್ ಗೊಬ್ಬರಗಾಲ (Vinod Gobaragala) ದೊಡ್ಮನೆಗೆ ಕಾಲಿಟ್ಟಿದ್ದರು. ಇದೀಗ ಈ ವಾರ‌ ಬಿಗ್ ಬಾಸ್ (Bigg Boss) ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ.

    ಟಿವಿ ಲೋಕದಲ್ಲಿ ಸಾಕಷ್ಟು ‌ರಿಯಾಲಿಟಿ ಶೋಗಳಲ್ಲಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗೊಬ್ಬರಗಾಲ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. ಇದೀಗ ಸಾನ್ಯ ಅಯ್ಯರ್ (Sanya Iyer) ಎಲಿಮಿನೇಷನ್ ನಂತರ ವಿನೋದ್ ಗೊಬ್ಬರಗಾಲ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಗೊಬ್ಬರಗಾಲ ಎಲಿಮಿನೇಷನ್ ಇದೀಗ ಮನೆ ‌ಮಂದಿಗೆ ಶಾಕ್ ಕೊಟ್ಟಿದೆ. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ವಿನೋದ್ ಗೊಬ್ಬರಗಾಲ ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ನಂತರ ಮದುವೆನಾ- ಸಿನಿಮಾನಾ: ಸಾನ್ಯ ಅಯ್ಯರ್ ಹೇಳಿದ್ದೇನು?

    ಬಿಗ್ ಬಾಸ್ ನಂತರ ಮದುವೆನಾ- ಸಿನಿಮಾನಾ: ಸಾನ್ಯ ಅಯ್ಯರ್ ಹೇಳಿದ್ದೇನು?

    ಷ್ಟು ದಿನ ಪುಟ್ಟಗೌರಿಯಾಗಿ (Puttagowri) ಮನೆಮಾತಾಗಿದ್ದ ನಟಿ ಸಾನ್ಯ ಅಯ್ಯರ್(Sanya Iyer) ಬಿಗ್ ಬಾಸ್ ಸ್ಪರ್ಧಿ ಆಗಿ ಹೈಲೈಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಸಾನ್ಯ ಔಟ್ ಆದ್ಮೇಲೆ ಏನ್ಮಾಡ್ತಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಸಾನ್ಯ ಮುಂದೇನು ಮಾಡ್ತಾರೆ ಎಂಬುದು ಸಾನ್ಯ ಅಭಿಮಾನಿಗಳಿಗೆ ಪ್ರಶ್ನೆಯಾಗಿದೆ. ಅದಕ್ಕೀಗ ಉತ್ತರವು ಸಿಕ್ಕಿದೆ.

    ಸಾಕಷ್ಟು ಸೀರಿಯಲ್, ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟಿ ಸಾನ್ಯ ಬಿಗ್ ಬಾಸ್ (Bigg Boss Kannada) ಒಟಿಟಿಗೆ ಕಾಲಿಟ್ಟಿದ್ದರು. ಬಳಿಕ ಟಿವಿ ಬಿಗ್ ಬಾಸ್‌ನಲ್ಲೂ ಮೋಡಿ ಮಾಡಿದ್ದರು. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ನಟಿಯ ಆಟದ ಜೊತೆ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಗೆಳೆತನವು ಹೈಲೈಟ್ ಆಗಿತ್ತು. ಸಾನ್ಯ ಎಲಿಮಿನೇಟ್ ಆದ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದೀಗ ಫ್ರೀ ಬರ್ಡ್ ಆಗಿ ಸಾನ್ಯ ಮುಂದೇನು ಮಾಡ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

    ದೊಡ್ಮನೆಯಿಂದ ಹೊರಬಂದ ಮೇಲೆ ಸಾನ್ಯ, ಮಾಧ್ಯಮ ಕಣ್ಣಿಗೂ ಬೀಳದೇ, ಸಂದರ್ಶನಕ್ಕೂ ಯಾವುದೇ ರಿಯಾಕ್ಷನ್ ಕೊಡದೇ ಫುಲ್ ಸೈಲೆಂಟ್ ಆಗಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಬಿಗ್ ಬಾಸ್ ನಂತರ ಮುಂದೇನು ಮಾಡ್ತೀರಾ ಎಂದು ಕೇಳಿದ್ದಾರೆ. ಜೊತೆಗೆ ಮದುವೆ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    ದೊಡ್ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಕಥೆ ಕೇಳುತ್ತಿದ್ದೇನೆ. ಮುಂದೆ ನಾನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ನನ್ನ ಮದುವೆಯ ಬಗ್ಗೆ ಸದ್ಯಕ್ಕೆ ಯಾವುದೇ ಪ್ಲ್ಯಾನ್ಸ್ ಇಲ್ಲಾ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‌ ಜೊತೆ ಕೊರಗಜ್ಜನ ಸನ್ನಿಧಾನಕ್ಕೆ ಬರುತ್ತೇನೆ ಎಂದ ಸಾನ್ಯ ಅಯ್ಯರ್

    ರೂಪೇಶ್‌ ಜೊತೆ ಕೊರಗಜ್ಜನ ಸನ್ನಿಧಾನಕ್ಕೆ ಬರುತ್ತೇನೆ ಎಂದ ಸಾನ್ಯ ಅಯ್ಯರ್

    ಬಿಗ್ ಬಾಸ್ (Bigg Boss) ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer), ದೊಡ್ಮನೆಯಿಂದ ಆರನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮನೆಯಿಂದ ಹೊರಬಂದ ಮೇಲೆ ಇದೀಗ ಲೈವ್‌ ಬಂದಿದ್ದಾರೆ. ಈ ವೇಳೆ ಸಾನ್ಯರನ್ನ ಫ್ಯಾನ್ಸ್ ಯಾವಾಗ ಮಂಗಳೂರಿಗೆ ಬರುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ.

    ದೊಡ್ಮನೆಯ ಪ್ರೇಮ ಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ರೂಪೇಶ್ ಶೆಟ್ಟಿ(Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer) ದೂರ ದೂರ ಆಗಿದ್ದಾರೆ. ಮನೆಯಲ್ಲಿ ಇಬ್ಬರು ಒಟ್ಟಿಗೆ ಇದ್ದಷ್ಟು ದಿನ ಒಬ್ಬರಿಗೊಬ್ಬರು ಸಾಥ್‌ ನೀಡುತ್ತಿದ್ದರು. ಈಗ ಮನೆಯಿಂದ ಹೊರಬಂದಿರುವ ಸಾನ್ಯ, ದೂರದಿಂದಲೇ ರೂಪೇಶ್ ಆಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಖಾಸಗಿ ಪೇಜ್‌ನಲ್ಲಿ ಲೈವ್‌ಗೆ ಬಂದ ವೇಳೆ ಮಂಗಳೂರಿನತ್ತ ಬರುವ ಬಗ್ಗೆ ಪುಟ್ಟಗೌರಿಗೆ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ರೂಪೇಶ್ ಶೆಟ್ಟಿ, ಬಿಗ್ ಬಾಸ್ ಗೆದ್ದು ಬರಲಿ. ಅವರು ಖಂಡಿತಾ ಗೆಲ್ಲುತ್ತಾರೆ. ನಾನು ಕೂಡ ಕೊರಗಜ್ಜನ(Koragajja) ಸನ್ನಿಧಿಗೆ ಬರಬೇಕು. ರೂಪು, ಹೊರ ಬಂದ ಮೇಲೆ ನಾನು ಮಂಗಳೂರಿಗೆ(Mangalore) ರೂಪೇಶ್ ಜೊತೆಗೆ ಬರುತ್ತೇನೆ ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇದೀಗ ಒಳ್ಳೆಯ ಸ್ಕ್ರಿಪ್ಟ್‌ಗಳು ಸಾನ್ಯಗೆ ಅರಸಿ ಬರುತ್ತಿದೆ. ಸೂಕ್ತ ಕಥೆಯೊಂದಿಗೆ ಸಿನಿಮಾ ಮಾಡುವುದಾಗಿ ಸಾನ್ಯ ಈ ವೇಳೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯಗಾಗಿ ಕಣ್ಣೀರಿಟ್ಟ ರೂಪೇಶ್ ಶೆಟ್ಟಿಗೆ ಸಿಕ್ಕಳು ಬಾತ್‌ರೂಮ್ ಸುಂದರಿ

    ಸಾನ್ಯಗಾಗಿ ಕಣ್ಣೀರಿಟ್ಟ ರೂಪೇಶ್ ಶೆಟ್ಟಿಗೆ ಸಿಕ್ಕಳು ಬಾತ್‌ರೂಮ್ ಸುಂದರಿ

    ಬಿಗ್ ಬಾಸ್ ಮನೆ(Bigg Boss Kannada) ಆಟ ಇದೀಗ ಮತ್ತಷ್ಟು ರೋಚಕವಾಗಿದೆ. ಸಾನ್ಯ ಅಯ್ಯರ್ ಎಲಿಮಿನೇಷನ್‌ನಿಂದ ನೊಂದಿದ್ದ ರೂಪೇಶ್ ಇದೀಗ ಚುರುಕಾಗಿದ್ದಾರೆ. ಎಲ್ಲವನ್ನೂ ಮರೆತು ಆಟದತ್ತ ಗಮನ ಕೊಡ್ತಿದ್ದಾರೆ. ಇದೀಗ ಸಾನ್ಯ(Sanya Iyer) ನಂತರ ರೂಪೇಶ್ ಶೆಟ್ಟಿಗೆ (Roopesh Shetty) ಬಾತ್‌ರೂಮ್ ಸುಂದರಿ ಸಿಕ್ಕಿದ್ದಾರೆ.

    ದೊಡ್ಮನೆಯಿಂದ ಆರು ಜನ ಸ್ಪಧಿಗಳು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅದರಲ್ಲೂ ಸಾನ್ಯ ಎಲಿಮಿನೇಷನ್‌ನಿಂದ ಕಣ್ಣೀರಿಟ್ಟಿದ್ದ ರೂಪೇಶ್ ಶೆಟ್ಟಿಗೆ ಈಗ ಬಾತ್‌ರೂಮ್ ಸುಂದರಿ ಸಿಕ್ಕಿದ್ದಾಳೆ. ಅವರಿಗೆ ಸ್ಯಾನ್ ಅಂತಾ ವಿಶೇಷವಾಗಿ ನಾಮಕರಣ ಮಾಡಿದ್ದಾರೆ. ಆಕೆಯ ಜೊತೆ ಕ್ಯೂಟ್ ಮಾತನಾಡಿ, ರೂಪೇಶ್ ರಾಜಣ್ಣ ಬಂದ್ರೆ ನಗಬೇಡ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾದ ಜರ್ಮನ್ ಅಂಧ ಗಾಯಕಿ

    ನಿನ್ನ ಹೆಸರು ಸ್ಯಾನ್ ಅಂತ ಆಯ್ತಾ, ಎಂತ ಕೇಳಿದ್ರೂ ನಗ್ತಿಯಲ್ಲಾ ಮಾರಾಯ್ತಿ. ನಿನ್ನ ಕಣ್ಣು ತುಂಬ ಚೆಂದ ಇದೆ, ಲೆನ್ಸ್ ಹಾಕಿದ್ದಾ ಅಂತ ಗೊತ್ತಿಲ್ಲ. ನಿನ್ನ ಸಿಂಪಲ್ ಕಿವಿ ರಿಂಗ್ ಚೆನ್ನಾಗಿದೆ. ಮೂಗುತಿ ಹಾಕಿದ್ರೆ ಸಖತ್ ಆಗಿ ಕಾಣಿಸ್ತೀಯಾ. ರೂಪೇಶ್ ರಾಜಣ್ಣ, ಗುರೂಜಿ ನನಗೆ ಫ್ರೆಂಡ್ಸ್, ಆದರೆ ಅವರ ಹತ್ರ ಏನೂ ಹೇಳಿಕೊಳ್ಳೋಕೆ ಆಗಲ್ಲ.

    ಅದಕ್ಕೆ ನಿನ್ನ ಹತ್ರ ಹೇಳಿಕೊಳ್ತೆ, ನಿನಗೆ ಅರ್ಥ ಆದರೆ ಒಳ್ಳೆಯದು, ಅರ್ಥ ಆಗದಿದ್ರೂ ಒಳ್ಳೆಯದು. ನಾನೇನ್ ಮಾಡಲಿಕ್ಕೆ ಆಗ್ತದೆ. ರೂಪೇಶ್ ರಾಜಣ್ಣ ಅವರು ಬಂದ್ರೆ ಸ್ಮೈಲ್ ಕೊಡಬೇಡ, ಮದುವೆಯಾಗಿದೆ, ಅವರಿಗೆ 39-40 ವರ್ಷ ಆಗಿದೆ. ರಾಜಣ್ಣ ಸೇಲೆ (ಅತಿಯಾದ ನಾಟಕ) ತರ ಮಾತನಾಡ್ತಾರೆ, ಅವರನ್ನು ಕ್ಯಾರೆ ಮಾಡಬೇಡ. ಗುರೂಜಿ ಬಂದ್ರೆ ಅವರು ಮಗಳ ತರ, ನೀ ಪೋಸ್ ಬೇಕಿದ್ರೂ ಕೊಡು, ಸಾನ್ಯ ಫೇಸ್ ತರ ಕಾಣಿಸತ್ತೆ. ನಾಳೆ ನಿನಗೆ ತುಂಬ ವಿಷಯ ಹೇಳ್ತೆ ಗುಡ್‌ನೈಟ್ ಎಂದು ಹೊಸ ಗೆಳತಿಗೆ ರೂಪೇಶ್ ಶೆಟ್ಟಿ ಬೈ ಮಾಡಿದ್ದಾರೆ. ಈ ಮೂಲಕ ಸಾನ್ಯಳನ್ನ ರೂಪೇಶ್‌ ನೆನಪು ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಎಲಿಮಿನೇಷನ್ ನಂತರವೂ ದೊಡ್ಮನೆಯಲ್ಲಿ ಸಾನ್ಯ ಟಾಕ್ ಆಗಿದ್ದಾರೆ. ಇದೀಗ ಸಂಬರ್ಗಿ ರೂಪೇಶ್‌ಗೆ ನೇರವಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಸಾನ್ಯನ ಮದುವೆಯಾಗುವ ಪ್ರಪೋಸಲ್ ಬಂದರೆ ಏನು ಮಾಡ್ತೀರಾ ಎಂದು ಕೇಳಿದ್ದಾರೆ.

    ದೊಡ್ಮನೆಯ ಪ್ರೇಮ ಪಕ್ಷಿಗಳು ಸಾನ್ಯ, ರೂಪೇಶ್ ದೂರ ದೂರ ಆಗಿದ್ದಾರೆ. ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಸಾನ್ಯ ಜೊತೆಗಿನ ಬಾಂಧವ್ಯ ನೋಡಿರುವ ಪ್ರಶಾಂತ್ ಸಂಬರ್ಗಿ ರೂಪೇಶ್‌ಗೆ, ಖಾಸಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ನಿಮ್ಮ ಫ್ಯಾಮಿಲಿಯವರು ಬಂದು, ನೀವಿಬ್ಬರು ಒಳ್ಳೆಯ ಜೋಡಿ, ನಿನಗೂ ಒಳ್ಳೆಯ ಜೋಡಿ ಅನಿಸಿದ್ದರೆ, ನೀವು ಸಾನ್ಯನ ಮುಂದಿನ 3 ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ಯಾ ಎಂದು ರೂಪೇಶ್‌ಗೆ ನೇರವಾಗಿ ಸಂಬರ್ಗಿ ಕೇಳಿದ್ದಾರೆ. ಇದನ್ನೂ ಓದಿ:ಸ್ಟಾರ್ ಮಕ್ಕಳ ನೆಪೋಟಿಸಂ ಬಗ್ಗೆ ಶ್ರುತಿ ಹಾಸನ್ ಸ್ಪಷ್ಟನೆ

    ನಿಮ್ಮ ಕುಟುಂಬದವರು, ನೀವಿಬ್ಬರು ಒಳ್ಳೆಯ ಜೋಡಿ ಎಂದ್ಹೇಳಿ, ನೀವು ಸಾನ್ಯನ ಮುಂದಿನ 3 ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ಯಾ ಎಂದು ರೂಪೇಶ್‌ಗೆ ನೇರವಾಗಿ ಸಂಬರ್ಗಿ ಕೇಳಿದಾಗ, ಅಷ್ಟೇಲ್ಲಾ ಯಾರು ಥಿಂಕ್ ಮಾಡುತ್ತಾರೆ ಈಗೆಲ್ಲಾ ನಾನು ಯೋಚನೆ ಮಾಡಿಲ್ಲ ಎಂದು ರೂಪೇಶ್ ಹೇಳುತ್ತಾರೆ. ಆಗ ರಾಜಣ್ಣ ಕೂಡ ನೇರವಾಗಿ ಹೇಳಿ ಎಂದು ಶೆಟ್ರಿಗೆ ಕೇಳುತ್ತಾರೆ. ಸಾನ್ಯ ನಿಮ್ಮನ್ನ ಜೀವನ ಸಂಗಾತಿಯಾಗಿ ಕಾಣುವ ದೃಷ್ಟಿಕೋನ ಇದ್ಯಾ ಎಂದಿದ್ದಾರೆ. ಈ ಬಗ್ಗೆ ನಾನು ಯೋಚನೆ ಮಾಡಿಲ್ಲ ಆದರೆ, ಪ್ರಪೋಸಲ್ ಬಂದ್ರೆ ನೋ ಅಂತಾ ಹೇಳಲ್ಲ. ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆನೇ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.

    ಇನ್ನೂ ಸಾನ್ಯ ಅಯ್ಯರ್ ವೈರ್ಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಂದಲ್ಲಿ ಸಾಕಷ್ಟು ರೋಚಕ ತಿರುವುಗಳನ್ನು ಪಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಬಿಗ್ ಬಾಸ್ ಮನೆಯಲ್ಲಿ(Bigg Boss House) ರೂಪೇಶ್ ಮತ್ತು ಸಾನ್ಯ ಜೋಡಿಯಾಗಿ ಹೈಲೈಟ್ ಆಗಿದ್ದರು. ಆದರೆ ದೊಡ್ಮನೆಯ ಎಲಿಮಿನೇಷನ್‌ನಿಂದ ಸಾನ್ಯ ಹೊರಬಂದಿದ್ದರು. ಇದಾದ ಬಳಿಕ ಸಾನ್ಯಗಾಗಿ ಕಣ್ಣೀರಿಡುತ್ತಲೇ ಎರಡೆರಡು ಪ್ಲೇಟ್ ಇಟ್ಟುಕೊಂಡು ಊಟ ಮಾಡಿದ್ದರು. ಇದೀಗ ಈ ವಿಷ್ಯವಾಗಿ ಶೆಟ್ಟ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ ಸಾನ್ಯ ಮತ್ತು ರೂಪೇಶ್ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದರು. ಜೊತೆಯಾಗಿಯೇ ಇರುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿಗೆ(Roopesh Shetty) ದೊಡ್ಡ ಆಘಾತವೇ ಆಗಿತ್ತು. ಪ್ರತಿದಿನ ಕಣ್ಣೀರಿಡುತ್ತಲೇ ಇದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯ ಹೋದ ನಂತರದಲ್ಲಿ ರೂಪೇಶ್‌ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯ ಅಯ್ಯರ್(Sanya Iyer) ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್‌ನ ಊಟವನ್ನು ಆ ಪ್ಲೇಟ್‌ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯ ನೆನಪಲ್ಲಿ ಎರಡು ಪ್ಲೇಟ್‌ನಲ್ಲಿ ಅವರು ಊಟ ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್‌ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ ಕಾಲೆಳೆದಿದ್ದಾರೆ ಕಿಚ್ಚ. ಆಪ್ತರಾದವರು ಬಿಟ್ಟು ಹೋದಾಗ ಊಟ ಮಾಡುವವರು ಊಟ ಬಿಟ್ಟಿದ್ದು ನೋಡಿದ್ದೀನಿ. ಗಡ್ಡ ಬಿಟ್ಟಿದ್ದನ್ನು ನೋಡಿದ್ದೀನಿ. ಆದರೆ, ಆಪ್ತರಾದವರು ಬಿಟ್ಟು ಹೋದಾಗ ಎರಡೆರಡು ಪ್ಲೇಟ್ ಊಟ ಮಾಡಿದ್ದು, ಎಕ್ಸ್ಟ್ರಾ ಮೊಟ್ಟೆ ತಿಂದ್ರಿ. ಮಿಸ್ ಮಾಡಿಕೊಂಡ್ರೆ ಹೀಗೆ ಮಿಸ್ ಮಾಡ್ಕೊಬೇಕು ಎಂದು ರೂಪೇಶ್ ಅವರ ಕಾಲೆಳೆದರು ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಅಂದಹಾಗೆ, ಸಾನ್ಯ ಅಯ್ಯರ್ 6ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದರು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷ್ಯ ನಿಜವೇ ಆದರೆ ಆಟದಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು. ಓಟಿಟಿ ಸೀಸನ್ ನಲ್ಲಿದ್ದ ಸೋನು ಗೌಡಗೆ ಬಿಗ್ ಬಾಸ್ ಸೀಸನ್ 9ಕ್ಕೂ ಹೋಗುತ್ತಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈವರೆಗೂ ಅದು ಆಗಲಿಲ್ಲ.

    ಸೋನು ಶ್ರೀನಿವಾಸ್ ಗೌಡ ಹೆಸರು ಕೇಳಿ ಬಂದ ಬೆನ್ನಲ್ಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರನ್ನು ಕಟ್ಟಿಹಾಕಲು ಚಕ್ರವರ್ತಿ ಚಂದ್ರಚೂಡ ಸರಿಯಾದ ಆಟಗಾರ. ಹಾಗಾಗಿ ಚಕ್ರವರ್ತಿ ಚಂದ್ರಚೂಡಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಯಿತು. ಆದರೆ, ಈವರೆಗೂ ಅದು ಕೂಡ ಆಗಿಲ್ಲ. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ  ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ. ಹಾಗಾಗಿ ಇಂಥದ್ದೊಂದು ಮಾತು ಕೇಳಿ ಬಂದಿದೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಸಾನ್ಯ ಅಯ್ಯರ್, ಸೋನು ಶ್ರೀನಿವಾಸ್ ಗೌಡ, ಚಕ್ರವರ್ತಿ ಚಂದ್ರಚೂಡ ಮುಂತಾದವರ ಹೆಸರು ಕೇಳಿ ಬರುತ್ತಿವೆ ಹೊರತು, ಈವರೆಗೂ ಯಾರೂ ಮನೆ ಒಳಗೆ ಪ್ರವೇಶ ಮಾಡಿಲ್ಲ. ಈ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇರತ್ತಾ ಎನ್ನುವುದು ಗೊತ್ತಿಲ್ಲ. ಆದರೂ, ವಾರದಿಂದ ವಾರಕ್ಕೆ ಒಬ್ಬೊಬ್ಬರ ಹೊಸ ಹೆಸರಂತೂ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿಗೆ ಶಿಕ್ಷೆ

    ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿಗೆ ಶಿಕ್ಷೆ

    ದೊಡ್ಮನೆಯಲ್ಲಿ ಮೊದಲ ಸೀಸನ್‌ನಿಂದಲೂ ಕೆಲವು ಪದ್ಧತಿಯನ್ನ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನೂ ಮನೆಯ ರೂಲ್ಸ್ ಫಾಲೋ ಮಾಡದೇ ಇದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇದೀಗ ರೂಪೇಶ್ ಶೆಟ್ಟಿ(Roopesh Shetty) ಮಾಡಿದ್ದ ಸಣ್ಣ ತಪ್ಪಿಗೆ ಬಿಗ್ ಬಾಸ್(Bigg Boss) ದೊಡ್ಡ ಶಿಕ್ಷೆಯನ್ನೆ ಕೊಟ್ಟಿದ್ದಾರೆ. ರೂಪೇಶ್ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ.

    ಸಾನ್ಯ(Sanya Iyer) ಎಲಿಮಿನೇಷನ್ ನೋವಿನಿಂದ ಇರುವ ರೂಪೇಶ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡುತ್ತಾರೆ. ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿ, ಇದಕ್ಕೆ ಪನಿಶ್​ಮೆಂಟ್ ನೀಡಲಾಗಿದೆ.

    ರೂಪೇಶ್ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಈ ಕಾರಣಕ್ಕೆ ಕಾಫಿ ಕಪ್​​ನ ಗಾತ್ರದ ಲೋಟ ಕೊಟ್ಟು ಅದರಲ್ಲಿ ಮಾತ್ರ ನೀರು ಕುಡಿಯುವಂತೆ ಆದೇಶ ಹೊರಡಿಸಿದ್ದಾರೆ ಬಿಗ್​ ಬಾಸ್. ಇದನ್ನು ಕೇಳಿ ರೂಪೇಶ್​ ಶೆಟ್ಟಿಗೆ ಶಾಕ್ ಆಗಿದೆ. ಅನಿವಾರ್ಯವಾಗಿ ಅವರು ಅದರಲ್ಲೇ ನೀರು ಕುಡಿಯೋಕೆ ಶುರು ಮಾಡಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ಅಮೂಲ್ಯ ಗೌಡ ಅವರು ರೂಪೇಶ್ ಅವರ ಗಾಜಿನ ಲೋಟವನ್ನು ಕಿತ್ತುಕೊಂಡು ಓಡಿದ್ದಾರೆ. ಇದರಿಂದ ರೂಪೇಶ್ ಪೇಚಿಗೆ ಸಿಲುಕಿದ್ದಾರೆ. ಈ ಪನಿಶ್​​ಮೆಂಟ್​ನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಂತೂ ನಿಜ. ಈ ಮೊದಲು ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಆದರೆ, ಅವರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡಿಲ್ಲ. ಈ ಬಗ್ಗೆ ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

    ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

    ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ(Roopesh Shetty) ಇದೀಗ ಬಿಗ್ ಬಾಸ್(Bigg Boss) ಸೀಸನ್ 9ರಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ಸಂಬರ್ಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನಿಸಿದ್ದರು ಎಂದು ಉಗ್ರ ಹೋರಾಟ ಮಾಡಿದ್ದರು. ಇದೀಗ ನಾನು ಗಡಿನಾಡ ಕನ್ನಡಿಗ ಎಂದು ಹೇಳಿರುವ ರೂಪೇಶ್ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿರೋಧಿಸುವ ಭರದಲ್ಲಿ ಕೆಲವರು ರೂಪೇಶ್ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ವಿರುದ್ಧ ಕೀಳುಮಟ್ಟದ ಕಮೆಂಟ್ ಹಾಕಿದ್ದಾರೆ. ಈಗ ಕಿಡಿಗೇಡಿಗಳ ವಿರುದ್ಧ ರೂಪೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

    ಸಾನ್ಯ(Sanya Iyer) ಎಲಿಮಿನೇಷನ್‌ನಿಂದ ನಂತರ ರೂಪೇಶ್ ಕೊಂಚ ಸೈಲೆಂಟ್ ಆಗಿದ್ದಾರೆ. ಆಕೆಯ ನೆನಪಿನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಗೀಗ ಬಿಗ್ ಬಾಸ್ ಒಳಗಿನ ವಿಚಾರಗಳು ದೊಡ್ಮನೆ ಆಚೆಗೂ ವಿರೋಧ ಹುಟ್ಟು ಹಾಕಿದೆ. ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್, ನಾನು ಗಡಿನಾಡ ಕನ್ನಡಿಗ ಅಂತ ಹೇಳಿ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ ಇದು ಕೆಲ ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಹಲವು ತುಳುವರು ರೂಪೇಶ್ ಬೆಂಬಲಕ್ಕೆ ನಿಂತರೂ ಮತ್ತೆ ಕೆಲವರು ರೂಪೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ರೂಪೇಶ್ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ದೂರು ನೀಡಿದ್ದಾರೆ. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್

    ಕಲಿತದ್ದು ನಾನು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ಆದರೆ ನಾನು ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ’ ಹೀಗೆ ರೂಪೇಶ್ ಶೆಟ್ಟಿ ಬಿಗ್ ಬಾಸ್‌ನಲ್ಲಿ ಹೇಳಿದ್ದರು.

    ಆದರೆ ತುಳುವ ಅಂತ ಹೇಳಿಕೊಳ್ತಾ ಇದ್ದ ರೂಪೇಶ್ ಶೆಟ್ಟಿ ಗಡಿನಾಡ ಕನ್ನಡಿಗ ಅಂತ ಹೇಳಿರೋದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಬೆರಳೆಣಿಕೆಯವ ಕೆಲವರು ರೂಪೇಶ್ ಶೆಟ್ಟಿ ನಟಿಸಿದ ತುಳು ಚಿತ್ರಗಳನ್ನು ಬಹಿಷ್ಕರಿಸೋ ಬಗ್ಗೆ ಪೋಸ್ಟ್ ಹಾಕಿದ್ದರೆ, ಮತ್ತೆ ಕೆಲವರು ರೂಪೇಶ್ ಶೆಟ್ಟಿ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ನಮ್ಮ ಬೆಂಬಲ ತುಳುವನಿಗೆ ಹೊರತು, ಗಡಿನಾಡ ಕನ್ನಡಿಗನಿಗೆ ಅಲ್ಲ ಅನ್ನೋ ಪೋಸ್ಟ್ ಕೂಡ ಹರಿದಾಡಿದೆ. ಜೊತೆಗೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ರೂಪೇಶ್ ಶೆಟ್ಟಿಯನ್ನ ಗಡಿನಾಡಿಗೆ ಓಡಿಸಬೇಕು ಅಂತ ಪೋಸ್ಟ್ ಹಾಕಲಾಗಿದೆ. ಇದೀಗ ಕಿಡಿಗೇಡಿಗಳಿಂದ ಬೆದರಿಕೆ ಬಂದ ಬೆನ್ನಲ್ಲೇ ಸೈಬರ್ ಠಾಣೆಯಲ್ಲಿ ರೂಪೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    `ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಮನೆಯ(Bigg Boss House) ಪ್ರೇಮ ಪಕ್ಷಿಗಳಾಗಿದ್ದ ಸಾನ್ಯ(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ಇದೀಗ ದೂರ ದೂರ ಆಗಿದ್ದಾರೆ. ಸಾನ್ಯಗಾಗಿ ರೂಪೇಶ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಿರುವಾಗ ಸಾನ್ಯಗಾಗಿ ರೂಪೇಶ್ ಗಟ್ಟಿ ನಿರ್ಧಾರ ಮಾಡಿದ್ದಾರೆ.

    ಓಟಿಟಿಯಿಂದ ಬಿಗ್ ಬಾಸ್ (Bigg Boss) ವರೆಗೂ ಮೋಡಿ ಮಾಡಿರುವ ಜೋಡಿ ಸಾನ್ಯ ಮತ್ತು ರೂಪೇಶ್, ಮನೆಯಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್ ಯಿಂದ ರೂಪೇಶ್ ಕೊಂಚ ಡಲ್ ಆಗಿದ್ದಾರೆ. ಸಾನ್ಯ ಮಿಸ್ ಯೂ ಅಂತಾ ಹಣೆಪಟ್ಟಿ ಕಟ್ಟಿಕೊಂಡು ಆಕೆಯ ಜಪ ಮಾಡುತ್ತಿದ್ದಾರೆ. ಪುಟ್ಟಗೌರಿಗಾಗಿ ಕಣ್ಣೀರಿಡುತ್ತಿದ್ದಾರೆ.

    ಅವಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳಿಲ್ಲದೆ ಊಟ ಮಾಡಲು ಆಗುತ್ತಿಲ್ಲ. ನನಗೋಸ್ಕರ ಅವಳು ಊಟಕ್ಕಾಗಿ ಕಾಯುತ್ತಿದ್ದಳು. ಆಗ ನಾನು ನೆಗ್ಲೆಟ್ ಮಾಡುತ್ತಿದ್ದೆ. ಈಗ ಅದರ ಬೆಲೆ ಅರ್ಥ ಆಗುತ್ತಿದೆ. ನಿಜಕ್ಕೂ ಬೇಸರ ಆಗುತ್ತಿದೆ’ ಎಂದು ಊಟ ಮಾಡುತ್ತಲೇ ಕಣ್ಣೀರು ಹಾಕಿದರು ರೂಪೇಶ್ ಶೆಟ್ಟಿ. ಪ್ರತಿ ಬಾರಿ ಊಟ ಮಾಡುವಾಗಲೂ ರೂಪೇಶ್ ಶೆಟ್ಟಿ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಹೊರಗೆ ಹೋಗಿರುವ ಸಾನ್ಯ ಬದಲಾದರೆ ಎಂಬ ಆತಂಕ ಕೂಡ ರೂಪೇಶ್‌ಗೆ ಕಾಡುತ್ತಿದೆ. ಇದನ್ನೂ ಓದಿ:ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ

    ಈಗಾಗಲೇ 6 ಜನ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದು, ಮುಂದಿನ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]