`ಗಿರಿಗಿಟ್’ (Girgit Film) ಹೀರೋ ಕರಾವಳಿ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ವಿನ್ನರ್ (Bigg Boss Winner) ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಜರ್ನಿ, ಸಾನ್ಯ ಜೊತೆಗೆ ಸಿನಿಮಾ ಮಾಡುವ ಬಗ್ಗೆ ರೂಪೇಶ್ ಶೆಟ್ಟಿ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಬಿಗ್ ಬಾಸ್ ಒಟಿಟಿ ಟಾಪರ್ ಆಗಿ, ಟಿವಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದವರು ರೂಪೇಶ್ ಶೆಟ್ಟಿ ಈಗ ಮತ್ತೆ ಸಿನಿಮಾಗಳ ಕಡೆ ಗಮನ ಹರಿಸುವ ತಯಾರಿಯಲ್ಲಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಬಗ್ಗೆ ರೂಪೇಶ್ ಶೆಟ್ಟಿ ಗಮನ ಕೊಡುತ್ತಾರೆ. ಹೀಗಿರುವಾಗ ದೊಡ್ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿದ್ದ ಸಾನ್ಯ (Sanya Iyer) ಮತ್ತು ರೂಪೇಶ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಹೇಳೋದೇನು?

ಖಂಡಿತಾ ನಾನು ಮತ್ತು ಸಾನ್ಯ ಅಯ್ಯರ್ ಒಟ್ಟಿಗೆ ಸಿನಿಮಾ ಮಾಡ್ತೀವಿ. ಆದರೆ ಒಳ್ಳೆಯ ಕಥೆ ಸಿಗಬೇಕು. ಬಿಗ್ ಬಾಸ್ ಮನೆಯಲ್ಲಿ ನಮ್ಮ ಫ್ರೆಂಡ್‌ಶಿಪ್ ಜೋಡಿನ ಇಷ್ಟಪಟ್ಟಿದ್ದರು ಅಂತಾ ಸಿನಿಮಾ ಮಾಡೋದಲ್ಲ. ಕಥೆಗೆ ನಾವು ಬೇಕಿದ್ರೆ, ನಾವು ಸೂಕ್ತ ಅಂತಾ ಅನಿಸಿದ್ರೆ ಒಟ್ಟಿಗೆ ಸಿನಿಮಾ ಮಾಡುತ್ತೀವಿ ಎಂದು ರೂಪೇಶ್ ಶೆಟ್ಟಿ ಈ ವೇಳೆ ಮಾತನಾಡಿದ್ದಾರೆ.
ಸದ್ಯ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿರುವ ಖುಷಿಯಲ್ಲಿ ತೇಲುತ್ತಿದ್ದಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡಲಿದ್ದಾರೆ.













ಬಿಗ್ ಬಾಸ್ ಸೀಸನ್ 5ರಲ್ಲಿ(Bigg Boss) ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ಪ್ರವೀಣರ ಸಾಲಿನಲ್ಲಿ ಅನುಪಮಾ ಗಟ್ಟಿ ಸ್ಪರ್ಧಿಯಾಗಿ ಇತರರಿಗೆ ಸೆಡ್ಡು ಹೊಡೆದರು. ಆದರೆ ಅನುಪಮಾ ಧಿಡೀರ್ ಎಲಿಮಿನೇಷನ್(Elimination) ಅನೇಕರಿಗೆ ಶಾಕ್ ಕೊಟ್ಟಿತ್ತು. ಇದೀಗ ತಮ್ಮ ಬಿಗ್ ಬಾಸ್ ಜರ್ನಿಯ ಜೊತೆಗೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಅನುಪಮಾ ರಿಯಾಕ್ಟ್ ಮಾಡಿದ್ದಾರೆ.







