Tag: sanya iyer

  • ಕಿರುತೆರೆ ನಟಿ ಸಾನ್ಯಾ ಅಯ್ಯರ್‌ಗೆ ಕಪಾಳಮೋಕ್ಷ

    ಕಿರುತೆರೆ ನಟಿ ಸಾನ್ಯಾ ಅಯ್ಯರ್‌ಗೆ ಕಪಾಳಮೋಕ್ಷ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್

    ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್

    `ಬಿಗ್ ಬಾಸ್’ ಖ್ಯಾತಿಯ(Bigg Boss) ಸಾನ್ಯ ಅಯ್ಯರ್ (Sanya Iyer) ಇದೀಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸಾನ್ಯ ತಾವು ಪದವಿ ಪಡೆದ ಖುಷಿಯಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

    ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಸಾನ್ಯ ಅಯ್ಯರ್ ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada 9) ಮೋಡಿ ಮಾಡಿದ್ದರು. ಇದೀಗ ಸಿನಿಮಾಗಾಗಿ ಒಳ್ಳೆಯ ಕಥೆಗಾಗಿ ಕಾಯ್ತಿರುವ ನಟಿ ತಾವು ಗ್ರಾಜುಯೇಟ್ ಆಗಿರುವ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ಸಾನ್ಯ ಅಯ್ಯರ್ ಅವರು ಮಾಸ್ ಮೀಡಿಯಾ ಆ್ಯಂಡ್ ಮಾಸ್ ಕಮ್ಯನಿಕೇಷನ್ ವಿಭಾಗದಲ್ಲಿ ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕ್ಷನ್ ಪಡೆದಿದ್ದಾರೆ. ನಾನು ಗ್ರಾಜುಯೇಟೆಡ್ ಗುರು ಸಂತಸದಿಂದ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಇದೀಗ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬೆನ್ನಲ್ಲೇ ನಟಿಗೆ ರೂಪೇಶ್ ಶೆಟ್ಟಿ ಜೊತೆ ಮದುವೆ ಯಾವಾಗ ಎಂದು ಕಾಮೆಂಟ್ ಮಾಡ್ತಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ನಡುವಿನ ಸ್ನೇಹ ನೋಡಿ, ಅಭಿಮಾನಿಗಳು ಇಬ್ಬರು ಪ್ರೀತಿಸುತ್ತಿದ್ದಾರೆ ಎಂದೇ ಭಾವಿಸಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    `ಬಿಗ್ ಬಾಸ್’ (Bigg Boss) ಖ್ಯಾತಿಯ ಸಾನ್ಯ ಅಯ್ಯರ್, (Sanya Iyer) ತಮ್ಮ ಸಿನಿಮಾಗಳ ವಿಚಾರಕ್ಕಿಂತ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಬಾರಿ ಸದ್ದು ಮಾಡ್ತಿದ್ದಾರೆ. ಸಾನ್ಯ ಮತ್ತು ರೂಪೇಶ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

    ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಹೈಲೈಟ್ ಆಗಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಕೂಡ ಹೊರಹೊಮ್ಮಿದ್ದರು. ಈ ಶೋ ಬಳಿಕವೂ ಸಾನ್ಯ ಮತ್ತು ರೂಪೇಶ್ ಸ್ನೇಹ ಮುಂದುವರೆದಿದೆ. ಹೀಗಿರುವಾಗ ಸಾನ್ಯ, ರೂಪೇಶ್ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ

    ಕರ್ನಾಟಕ ಕರಾವಳಿ ಭಾಗದ ವಿಶೇಷವಾಗಿ ಮಂಗಳೂರು, ದಕ್ಷಿಣ ಕನ್ನಡ ಭಾಗದಲ್ಲಿ ಶೆಟ್ಟಿ ಸಂಪ್ರದಾಯದಲ್ಲಿ (Shetty Ritual) ವಿವಾಹಿತ ಮಹಿಳೆಯರು ಈ ಉಂಗುರ ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹವಾಗಿರೋ ಸೂಚನೆ ಕೊಡುವ ಆಭರಣ ಇದೀಗ ಸಾನ್ಯ ಅಯ್ಯರ್ ಬೆರಳಿನಲ್ಲಿದೆ.

    ಈಗ ಸಾನ್ಯಾ ಅವರ ಬೆರಳಲ್ಲಿ ಈ ಉಂಗುರ ಕಾಣಿಸಿಕೊಂಡಿದ್ದು, ನಟಿ ಕದ್ದುಮುಚ್ಚಿ ಮದುವೆಯಾಗಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಸ್ನೇಹವೇ ಈ ಎಲ್ಲಾ ಸಂಶಯಗಳಿಗೆ ಕಾರಣವಾಗಿದೆ. ಸಾನ್ಯ, ರೂಪೇಶ್ ಇಬ್ಬರು ಒಬ್ಬರನೊಬ್ಬರು ಇಷ್ಟಪಡುತ್ತಿರುವ ವಿಚಾರ ನೇರವಾಗಿ ಅಲ್ಲದೇ ಇದ್ದರು. ಪರೋಕ್ಷವಾಗಿ ಬಿಗ್ ಬಾಸ್ ಮನೆಯಲ್ಲಿ (Bigg Boss House) ತಿಳಿಸಿದ್ದರು.

    ಫೋಟೋಶೂಟ್‌ನಲ್ಲಿ ಸಾನ್ಯ, ಶೆಟ್ಟಿ ಸಂಪ್ರದಾಯದ ಉಂಗುರ ಧರಿಸಿರುವುದು ಹಲವು ವದಂತಿಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಈ ಉಂಗುರವನ್ನ ಫ್ಯಾಷನ್‌ಗಾಗಿಯೂ ಬಳಸುತ್ತಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ, ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    `ರೋಡಿಸ್’ ಖ್ಯಾತಿಯ ನಂದು (Nandu) ಮತ್ತು ಜಶ್ವಂತ್ (Jashwanth) ಪ್ರೇಮ ಪಕ್ಷಿಗಳಾಗಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಕೂಡ ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು. ಬಿಗ್ ಬಾಸ್ ಶೋ (Bigg Boss Kannada) ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ನಂದು ಉತ್ತರ ಕೊಟ್ಟಿದ್ದಾರೆ.

    ಒಟಿಟಿ ಬಿಗ್ ಬಾಸ್‌ನಲ್ಲಿ ನಂದು ಮತ್ತು ಜಶ್ ಜೋಡಿಗಳಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈ ಶೋ ಬಳಿಕ ನಂದು ಮತ್ತು ಜಶ್ವಂತ್ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪರ್ಧಿ ನಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್‌ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಈ ಸಂಬಂಧ ಅಂತ್ಯಗೊಳಿಸುವ ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಯಾವಾಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಏನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಏನು ಹೇಳಬೇಡಿ, ಸಮಯ ಬಂದಾಗ ಅವನ ಏನು ಎಂಬುದನ್ನ ಅವನೇ ಪ್ರೂವ್ ಮಾಡುತ್ತಾನೆ ಎಂದು ಜಶ್ವಂತ್ ಬಗ್ಗೆ ಸಕರಾತ್ಮಕವಾಗಿ ನಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ. ಜಶ್ವಂತ್ ಜೊತೆಗಿನ ಬ್ರೇಕಪ್ ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಾನ್ಯ ಅಯ್ಯರ್‌ಗೆ (Sanya Iyer) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ತೆರೆಬಿದ್ದಿದೆ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೈಟ್ ಆಗಿದ್ದ ಸಾನ್ಯ (Sanya Iyer) ಮತ್ತು ರೂಪೇಶ್ ಶೆಟ್ಟಿ (Roopesh shetty) ಇದೀಗ ಶೋ ಬಳಿಕವೂ ತಮ್ಮ ಸ್ನೇಹವನ್ನ ಮುಂದುವರೆಸಿದ್ದಾರೆ. ಸದ್ಯ ಈ ಜೋಡಿಯ ಮೀಟಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಒಬ್ಬರಿಗೊಬ್ಬರು ಸಾಥ್ ಕೊಟ್ಟು ಬಂದಿದ್ದರು. ಇಬ್ಬರ ಫ್ರೆಂಡ್‌ಶಿಪ್ ಪ್ರೇಕ್ಷಕರ ಕಣ್ಣಿಗೆ ಹೈಲೈಟ್ ಆಗಿತ್ತು. ಇನ್ನೂ ದೊಡ್ಮನೆಯಲ್ಲಿ ಸಾನ್ಯ ಎಲಿಮಿನೇಷನ್ ಆದಾಗ ರೂಪೇಶ್ ಶೆಟ್ಟಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸಾನ್ಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.  ಈ ಶೋ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿದ್ದಾರೆ. ಒಟ್ಟಿಗೆ ಸಮಯ ಕಳೆದಿರುವ ಫೋಟೋ ಶೇರ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಕೊನೆಗೂ ಮುದ್ದಿನ ಶ್ವಾನ ಸಿಕ್ಕ ಖುಷಿಯಲ್ಲಿ ನಟಿ ಸುಧಾರಾಣಿ

    ದೊಡ್ಮನೆಯ ಆಟದ ನಂತರ ಸಾಲು ಸಾಲು ಸಂದರ್ಶನಗಳಲ್ಲಿ ರೂಪೇಶ್ ಬ್ಯುಸಿಯಾಗಿದ್ದರು. ಇದೀಗ ಕೊಂಚ ಬಿಡುವಾಗಿದ್ದು, ಸಾನ್ಯ ಅಯ್ಯರ್ ಅವರನ್ನ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಭೇಟಿಯಾಗಿದ್ದಾರೆ. ಒಟ್ಟಿಗೆ ಕಾಫಿ ಕುಡಿದು, ಸಮಯ ಕಳೆದಿದ್ದಾರೆ.

    ಈ ಶೋನಿಂದ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (Aravind Kp) ಜೊತೆಯಾದ್ರು. ದಾಂಪತ್ಯ ಜೀವನಕ್ಕೆ (Wedding) ಕಾಲಿಡುವ ಬಗ್ಗೆ ಅರವಿಂದ್ ಕೆಪಿ ಇತ್ತೀಚೆಗೆ ರಿವೀಲ್ ಮಾಡಿದ್ದರು. ಈಗ ಈ ಜೋಡಿಯ ಹಾದಿಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಸಾಗುತ್ತಿದ್ದಾರಾ ಎಂಬ ಪ್ರಶ್ನೆ ನೆಟ್ಟಿಗರನ್ನ ಕಾಡುತ್ತಿದೆ. ಮದುವೆಯ ಬಗ್ಗೆ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

    ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

    ಬಿಗ್ ಬಾಸ್ ಮನೆಯ (Bigg Boss House) ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ (Roopesh Shetty) ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ (Sanya Iyer) ಬಗ್ಗೆ ಅಚ್ಚರಿಯ ವಿಚಾರವೊಂದನ್ನ ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ.

    ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ನಡುವೆ ದೊಡ್ಮನೆಯಲ್ಲಿ ಸ್ಪೆಷಲ್ ಬಾಂಡ್‌ವೊಂದು ಕ್ರಿಯೆಟ್ ಆಗಿದೆ. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ಜೋಡಿ ದೊಡ್ಮನೆಯಲ್ಲಿ ಮೋಡಿ ಮಾಡಿತ್ತು. ಇನ್ನೂ ಸಾನ್ಯ ಎಲಿಮಿನೇಷನ್ (Elimination) ನಂತರ ಬಿಕ್ಕಿ ಬಿಕ್ಕಿ ಅತ್ತಿದ್ದ ರೂಪೇಶ್ ಶೆಟ್ಟಿ ಅವರ ಅಂದಿನ ನಡೆ ಮನೆಯಲ್ಲಿ ಹೇಗಿತ್ತು, ಬಳಿಕ ಹೇಗೆ ಬದಲಾದರು ಎಂಬುದನ್ನ ದೀಪಿಕಾ ದಾಸ್ (Deepika Das) ರಿವೀಲ್ ಮಾಡಿದ್ದಾರೆ.

    ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಫ್ರೆಂಡ್ಸ್ ಅಂತಾನೇ ಹೇಳಿಕೊಂಡಿದ್ದರು. ಆಗಾಗ ಮುನಿಸು, ಮನಸ್ತಾಪ ಆಗುತ್ತಿತ್ತು. ಅದನ್ನ ಅಲ್ಲಿಯೇ ಸರಿಮಾಡಿಕೊಳ್ಳುತ್ತಿದ್ದರು. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್‌ಗೆ ಸಾಕಷ್ಟು ವಿಚಾರ ಅರಿವಾಗಿದೆ. ಸಾನ್ಯ ಇದ್ದಾಗ ನಾನು ಟೈಮ್ ಕೊಡಲಿಲ್ಲ ಎಂದು ರೂಪೇಶ್ ಬೇಸರಮಾಡಿಕೊಂಡಿದ್ದರು. ಕಡೆಗೆ ಒಂದು ವಾರದ ನಂತರ ಹೊಸ ರೂಪೇಶ್ ಶೆಟ್ಟಿಯನ್ನೇ ನಾವು ನೋಡಿದ್ದೀವಿ ಎಂದು ದೀಪಿಕಾ ದಾಸ್ ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

    ಇನ್ನೂ ದೀಪಿಕಾ ದಾಸ್ ಅವರು, ಸೀಸನ್ 9ರ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್‌ ನಂತರ ಇದೀಗ ಸಿನಿಮಾಗಳತ್ತ ನಟಿ ಮುಖ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೂಪೇಶ್‌ ಶೆಟ್ಟಿ-ಸಾನ್ಯ ಅಯ್ಯರ್‌ ಬಗ್ಗೆ ದೀಪಿಕಾ ದಾಸ್‌ ಹೇಳೋದೇನು?

    ರೂಪೇಶ್‌ ಶೆಟ್ಟಿ-ಸಾನ್ಯ ಅಯ್ಯರ್‌ ಬಗ್ಗೆ ದೀಪಿಕಾ ದಾಸ್‌ ಹೇಳೋದೇನು?

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೆಸಾರ್ಟ್‌ನಲ್ಲಿ ರೂಪೇಶ್‌ -ಸಾನ್ಯ ಮಧ್ಯೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟ ರಾಕೇಶ್‌ ಅಡಿಗ

    ರೆಸಾರ್ಟ್‌ನಲ್ಲಿ ರೂಪೇಶ್‌ -ಸಾನ್ಯ ಮಧ್ಯೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟ ರಾಕೇಶ್‌ ಅಡಿಗ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ಬಿ‌ಗ್ ಬಾಸ್ ಮನೆಯ (Bigg Boss House) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer)  ಹೈಲೈಟ್ ಆಗಿದ್ದರು. ಬಿಗ್ ಬಾಸ್ ಮನೆಯ ಆಟ ಮುಗಿದ ಮೇಲೂ ಈ ಜೋಡಿ ಸಖತ್ ಸುದ್ದಿಯಲ್ಲಿದೆ. ಹೀಗಿರುವಾಗ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಅಡಿಗ (Rakesh Adiga) ಸ್ಪೋಟಕ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್, ಸಾನ್ಯ ಜೊತೆ ರಾಕೇಶ್ ಅಡಿಗ ಕೂಡ ಕಾಣಿಸಿಕೊಂಡಿದ್ದರು. ಇನ್ನೂ ರೂಪೇಶ್ ಮತ್ತು ಸಾನ್ಯ ಹಲವು ಬಾರಿ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ನಮ್ಮಿಬ್ಬರ ನಡುವೆ ಬೇರೇ ಎನಿಲ್ಲ ಎಂದು ಹೇಳಿದ್ದರು. ಆದರೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ನಡುವೆ ಪ್ರೇಮವಿದೆ ಎಂದೇ ವೀಕ್ಷಕರು ಊಹಿಸಿದ್ದರು. ಈ ಬಗ್ಗೆ ರಾಕೇಶ್ ಅಡಿಗ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ನಾನು ಒಟಿಟಿಯಲ್ಲಿರುವಾಗಲೇ ರೂಪೇಶ್ (Roopesh Shetty) ಮತ್ತು ಸಾನ್ಯಗೆ ಕೇಳಿದ್ದೆ, ನೀವಿಬ್ಬರು ಡೇಟಿಂಗ್ ಮಾಡ್ತೀರಾ ಅಂತಾ. ಇಲ್ಲಾ ಅಂತಾನೇ ಇಬ್ಬರು ಉತ್ತರ ಕೊಟ್ಟಿದ್ದರು. ಒಟಿಟಿ ಫಿನಾಲೆ ಬಳಿಕ ರೆಸಾರ್ಟ್‌ನಲ್ಲಿರುವಾಗ(Resort) 10 ದಿನ ಇರುವಾಗ ಅಲ್ಲಿ ಮೈಕ್ ಮತ್ತು ಕ್ಯಾಮೆರಾ ಇರಲಿಲ್ಲ ಅಲ್ಲೂ ಕೂಡ ನಾನು ಕೇಳಿದ್ದೀನಿ. ನೀವಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದೀರಾ ಅಂತಾ, ಆಗ ಇಲ್ಲಾ ಅಂತಾ ಇಬ್ಬರು ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದರು.

    ಒಟಿಟಿಯಲ್ಲಿರುವಾಗಲೇ ಇಬ್ಬರು ರೂಪೇಶ್ ಮತ್ತು ಸಾನ್ಯ ಒಟ್ಟಿಗೆ ಇದ್ದರು. ರೆಸಾರ್ಟ್‌ನಲ್ಲಿ ಇಬ್ಬರ ಬಾಂಡಿಂಗ್ ಮತ್ತಷ್ಟು ಸ್ಟ್ರಾಂಗ್ ಆಯ್ತು. ಸೀಸನ್ 9ರಲ್ಲಿ ಒಬ್ಬರಿಗೊಬ್ಬರು ಸರ್ಪೋಟ್ ಸಿಸ್ಟಮ್ ಆಗಿದ್ದರು. ಸಾನ್ಯ ಮೇಲೆ ರೂಪೇಶ್‌ಗೆ ತುಂಬಾ ನಂಬಿಕೆಯಿದೆ. ಅವಳು ಏನೇ ತನ್ನ ಒಳ್ಳೆಯದಕ್ಕೆ ಎನ್ನುವ ವಿಶ್ವಾಸವಿದೆ. ಹಾಗಾಗಿ ಸಾನ್ಯ ಎಲಿಮಿನೇಷನ್‌ನ (Elimination) ರೂಪೇಶ್‌ಗೆ ಒಪ್ಪಿಕೊಳ್ಳೋಕೆ ಸಾಧ್ಯವಾಗಲಿಲ್ಲ ಇದಾದ ಒಂದು ವಾರದ ಬಳಿಕ ರೂಪೇಶ್ ಶೆಟ್ಟಿ ಬದಲಾದರು. ಟಫ್ ಫೈಟ್ ಕೊಟ್ರು ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k