Tag: sanya iyer

  • ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದ ಸೋನು ಶ್ರೀನಿವಾಸ್ ಗೌಡ

    ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆ ಇದೀಗ ಓಟಿಟಿಯಲ್ಲಿ ಸಖತ್ ಕಮಾಲ್ ಮಾಡುತ್ತಿದೆ. ಒಂದಲ್ಲಾ ಒಂದು ವಿಚಾರವಾಗಿ ದೊಡ್ಮನೆಯ ಕಾಳಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಸ್ಟಾರ್ ಆಗಿ ಮಿಂಚಿದ್ದ ಸೋನು, ಈಗ ಬಿಗ್ ಬಾಸ್ ಮನೆಯಲ್ಲೂ ಕೂಡ ಹೈಲೈಟ್ ಆಗಿದ್ದಾರೆ. ಎರಡನೇ ವಾರದ ಲಿಪ್ ರೀಡಿಂಗ್ ಟಾಸ್ಕ್‌ನಲ್ಲಿ ಸೋನು ಮಾತು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಸೋನು ಶ್ರೀನಿವಾಸ್ ಗೌಡ ತಾವು ಮಾತಿನಲ್ಲಿ ಮಾತ್ರ ಮುಂದೆ ಇರೋದಲ್ಲ. ಟಾಸ್ಕ್‌ನಲ್ಲಿಯೂ ತಾನು ಮುಂದು ಎಂಬುದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕೈಗೆ ಗಾಯವಾಗಿದ್ದರು ಕೂಡ ಕಬಡ್ಡಿ ಆಡಿ ತಂಡಕ್ಕೆ ಗೆಲುವನ್ನ ತಂದು ಕೊಟ್ಟಿದ್ದರು. ಇದೀಗ ಮತ್ತೊಂದು ಟಾಸ್ಕ್ ಲಿಪ್ ರೀಡಿಂಗ್‌ನಲ್ಲಿ ಸೋನು ಮಾತು ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಿನಿಮಾ ಸೋಲಿಗೆ ಪನ್ನಿರಿಗೆ ಕಟ್ಟುತ್ತಿರುವ ಜಿ.ಎಸ್.ಟಿ ಕಾರಣ: ನಿರ್ದೇಶಕ ಅನುರಾಗ್ ಕಶ್ಯಪ್

    ಲಿಪ್ ರೀಡಿಂಗ್ ಟಾಸ್ಕ್‌ನಲ್ಲಿ ಸೋನು ಮತ್ತು ಸಾನ್ಯ ಭಾಗಿಯಾಗಿದ್ದು, ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ವಾಕ್ಯವನ್ನ ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದು ಹೇಳಿರೋದು ಮನೆಯವರ ನಗುವಿಗೆ ಕಾರಣವಾಗಿದೆ. ಹೇಳುವುದಕ್ಕೂ ಕೇಳೂವುದಕ್ಕೂ ಸಮಯವಲ್ಲ ಎಂಬ ಟಾಸ್ಕ್ ಇದೀಗ ಮೋಡಿ ಮಾಡುತ್ತಿದೆ. ಈ ಟಾಸ್ಕ್‌ನ ಸಂಚಿಕೆ ಇಂದು ರಾತ್ರಿ ಓಟಿಟಿಯಲ್ಲಿ ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss: `ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯ ಅಯ್ಯರ್ ಹೇಳಿದ್ಯಾರಿಗೆ?

    Bigg Boss: `ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯ ಅಯ್ಯರ್ ಹೇಳಿದ್ಯಾರಿಗೆ?

    ಬಿಗ್ ಮನೆಯಲ್ಲಿ ತಮ್ಮ ಮುದ್ದು ಮಾತು, ವಿಶಿಷ್ಟ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಸ್ಪರ್ಧಿ ಸಾನ್ಯ ಅಯ್ಯರ್ ಕೂಡ, ಟಫ್ ಸ್ಪರ್ಧಿ ಎಂದರೆ ತಪ್ಪಾಗಲಾರದು. ಹಾಡು, ಡ್ಯಾನ್ಸ್, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಸಾನ್ಯ ಮನೆಯ ಹೈಲೈಟ್ ಆಗಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಜಶ್ವಂತ್‌ಗೆ ಸ್ವೀಟ್ ಆಗಿ ಪುಟ್ಟಗೌರಿ ಸಾನ್ಯ ಎಚ್ಚರಿಕೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯ ಕಿಚನ್‌ನಲ್ಲಿ ಜಶ್ವಂತ್ ಹಾಗೂ ಸಾನ್ಯಾ ಇದ್ದರು. ಈ ಸಂದರ್ಭದಲ್ಲಿ ಒಂದು ಡಬ್ಬಿಯ ಮುಚ್ಚಳ ತೆಗೆಯಲು ಜಶ್ವಂತ್ ಪ್ರಯತ್ನಿಸುತ್ತಿದ್ದರು. ಆದರೆ, ಮುಚ್ಚಳ ತೆಗೆಯಲು ಆಗುತ್ತಿರಲಿಲ್ಲ. ಈ ವೇಳೆ ಚಾಕು ತರುವಂತೆ ಸಾನ್ಯಾ ಬಳಿ ಕೋರಿದರು. ಸಾನ್ಯಾ ಚಾಕು ತರುವ ಮೊದಲೇ ಜಶ್ವಂತ್ ಅವರು ಬಾಕ್ಸ್ ಮುಚ್ಚಳ ತೆಗೆದಿದ್ದರು. ಇದನ್ನೂ ಓದಿ:ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ನಾನು ಚಾಕು ತಂದುಬಿಟ್ಟಿದ್ದೀನಿ. ಏನು ಮಾಡ್ಲಿ ಈಗ ಚಾಕುವಿನಿಂದ ನಿನಗೆ ಚುಚ್ಚಲೇ ಎಂದು ಸಾನ್ಯ ಕೇಳಿದರು. ಚಾಕುವಿನಿಂದ ಚುಚ್ಚಿ. ಏನೂ ತೊಂದರೆ ಇಲ್ಲ ಎಂದರು ಜಶ್ವಂತ್. ನಾನು ಚಾಕುವಿನಿಂದ ಚುಚ್ಚಲ್ಲ. ಎಂದು ಸಾನ್ಯ ಜಶ್ವಂತ್ ಕಾಲೆಳೆದಿದ್ದಾರೆ. ಇನ್ನು ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎಂದು ಮನೆಯವರಿಗೆ ಅನುಮಾನ ಮೂಡಿದ್ದರು. ನಮ್ಮಿಬ್ಬರ ಮಧ್ಯೆ ಒಳ್ಳೆಯ ಸ್ನೇಹವಿದೆ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಒಟ್ನಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ, ಸಾಕಷ್ಟು ಕಾರಣಗಳಿಂದ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್:  ವಾಶ್ ರೂಮ್ ನಲ್ಲಿದ್ದ ಜಿರಳೆ ಕಂಡು ಕಿರುಚಿದ ಸಾನ್ಯಾ ಅಯ್ಯರ್, ಸಹಾಯಕ್ಕೆ ಬಂದವನೇ ರೂಪೇಶ್

    ಬಿಗ್ ಬಾಸ್: ವಾಶ್ ರೂಮ್ ನಲ್ಲಿದ್ದ ಜಿರಳೆ ಕಂಡು ಕಿರುಚಿದ ಸಾನ್ಯಾ ಅಯ್ಯರ್, ಸಹಾಯಕ್ಕೆ ಬಂದವನೇ ರೂಪೇಶ್

    ಬಿಗ್ ಬಾಸ್ ಮನೆಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ನಟ ರೂಪೇಶ್ ಶೆಟ್ಟಿ ಮಧ್ಯೆ ಏನೋ ನೆಡೀತಾ ಇದೆ ಎನ್ನುವುದು ಸ್ವತಃ ಬಿಗ್ ಬಾಸ್ ಮನೆಯಲ್ಲಿರುವವರ ಅನುಮಾನ. ಈ ಜೋಡಿ ಕೂಡ ಅನುಮಾನ ಬರುವ ಹಾಗೆಯೇ ನಡೆದುಕೊಳ್ಳುತ್ತಿದೆ. ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ಇಬ್ಬರೂ ಹೇಳುತ್ತಿದ್ದರೂ, ಮತ್ತೆ ಮತ್ತೆ ಜೊತೆಯಾಗುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಬಲ ಬಂದಿದೆ.

    ಸಾನ್ಯಾ ನಿನ್ನೆ ವಾಶ್ ರೂಮ್ ನಲ್ಲಿದ್ದಾಗ, ಅವರ ಸಮೀಪದಲ್ಲೇ ಇದ್ದವರು  ರೂಪೇಶ್ ಶೆಟ್ಟಿ. ವಾಶ್ ರೂಮ್ ನಲ್ಲಿದ್ದ ಸಾನ್ಯಾ ಇದ್ದಕ್ಕಿದ್ದಂತೆ ಕಿರುಚಿಕೊಳ್ಳುತ್ತಾರೆ. ಆ ಹುಡುಗಿಗೆ ಏನೋ ಆಯಿತು ಎಂಬ ಆತಂಕದಿಂದ ವಾಶ್ ರೂಮ್ ಒಳಗೆ ಕಾಲಿಡುತ್ತಾರೆ ರೂಪೇಶ್. ಕೊನೆಗೆ ಅವರಿಗೆ ಗೊತ್ತಾಗಿದ್ದು, ವಾಶ್ ರೂಮ್ ಗೆ ಎಂಟ್ರಿ ಕೊಟ್ಟು ಸಾನ್ಯಾನ ಹೆದರಿಸಿದ್ದು ಜಿರಳೆ ಅಂತ. ಮೊದಲು ಇದನ್ನು ಆಚೆ ಹಾಕಿ ಎಂದು ಆ ಹುಡುಗಿ ಕಿರುಚುತ್ತಾಳೆ. ಅಲ್ಲೊಂದು ವಿಚಿತ್ರ ಸನ್ನಿವೇಶವೇ ಸೃಷ್ಟಿ ಆಗುತ್ತದೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್

    ಆತಂಕದಲ್ಲಿದ್ದ ಸಾನ್ಯಾರನ್ನು ಸಮಾಧಾನಿಸುವ ಬದಲು, ತನ್ನ ಕೈಯಲ್ಲಿ ಜಿರಳೆ ಹಿಡಿದುಕೊಳ್ಳುವ ರೂಪೇಶ್, ನಾನು ಹೇಳಿದಂತೆ ಕೇಳದೇ ಇದ್ದರೆ, ಇದನ್ನು ಆಚೆ ಹಾಕಲಾರೆ ಎಂದು ಸಾನ್ಯಾಗೆ ಮತ್ತಷ್ಟು ಭಯ ಹುಟ್ಟಿಸುತ್ತಾರೆ. ಕೊನೆಗೆ ನೀನು ಹೇಳಿದಂತೆ ನಾನು ಕೇಳುತ್ತೇನೆ ಎನ್ನುತ್ತಾಳೆ ಸಾನ್ಯ. ಅಲ್ಲಿಗೆ ಸಾನ್ಯ ಮತ್ತು ರೂಪೇಶ್ ಮಧ್ಯೆದ ಅನುಮಾನ ಮತ್ತಷ್ಟು ಗಟ್ಟಿಗೊಂಡಿದ್ದಂತೂ ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಬಿಗ್ ಬಾಸ್ ಮನೆಯಲ್ಲಿ ಒಂಟಿಯಾಗಿ ಹೋದವರು, ವಾಪಸ್ಸು ಜಂಟಿಯಾಗಿಯೇ ಬರುತ್ತಾರೋ ಎನ್ನುವಷ್ಟು ಪ್ರೇಮಕಥೆಗಳು ಅರಳುತ್ತಿವೆ. ಈಗಾಗಲೇ ಸ್ಫೂರ್ತಿ ಗೌಡ, ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ತ್ರಿಕೋನ ಪ್ರೇಮ ಶುರುವಾಗಿದೆ. ಯಾರು, ಯಾರನ್ನು ಲವ್ ಮಾಡುತ್ತಿದ್ದಾರೋ ಅವರಿಗೇ ಗೊತ್ತಿರುವ ವಿಚಾರವಾದರೂ, ಜನರಿಗೆ ತಮ್ಮ ಮೂವರೊಳಗೆ ಇನ್ನ್ಯಾರೋ ಇದ್ದಾರೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಲವ್ ಸ್ಟೋರಿ ಚಿಗುರೊಡೆಯುತ್ತಿದೆ.

    ಈಗಾಗಲೇ ಜೀವನಲ್ಲಿ ಒಂದು ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಸದಾ ಜೊತೆಯಾಗಿಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತದೆ. ತಮ್ಮ ನಡುವೆ ಏನೋ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಹೀಗಾಗಿ ದೊಡ್ಮನೆಯಲ್ಲಿ ಈ ಜೋಡಿಯ ಬಗ್ಗೆ ಗುಸುಗುಸು ಶುರುವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ರೂಪೇಶ್ ಮತ್ತು ತಮ್ಮ ನಡುವಿನ ಅತೀ ಸಲುಗೆ ಇರುವ ವಿಚಾರವು ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ತಿಳಿದಿದೆ ಎಂದು ಸ್ವತಃ ಸಾನ್ಯಾಗೂ ಗೊತ್ತಾಗಿದೆ. ಹಾಗಾಗಿಯೇ ಅವರು ಇದಕ್ಕೆ ಸ್ಪಷ್ಟ ಪಡಿಸಲು ಹೋಗುತ್ತಾರೆ. ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಈಗಲೂ ಪ್ರೇಮಿಗಳ ಲಕ್ಷಣಗಳಂತೆ ಗೋಚರಿಸುತ್ತಿರುವುದನ್ನು ಸ್ಪರ್ಧಿಗಳು ನೋಟಿಸ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking: ಕನ್ನಡ ಬಿಗ್ ಬಾಸ್ ಒಟಿಟಿ ಮನೆಗೆ ಈ ಸೆಲೆಬ್ರೆಟಿಗಳು ಪಕ್ಕಾ

    Breaking: ಕನ್ನಡ ಬಿಗ್ ಬಾಸ್ ಒಟಿಟಿ ಮನೆಗೆ ಈ ಸೆಲೆಬ್ರೆಟಿಗಳು ಪಕ್ಕಾ

    ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಒಟಿಟಿನಲ್ಲಿ ಪ್ರಸಾರವಾಗಲಿದೆ. ಯಾರೆಲ್ಲಾ ಬಿಗ್ ಬಾಸ್ ಒಟಿಟಿ ಸೀಸನ್ 1ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನ ನೋಡಲು ಇಡೀ ಕರ್ನಾಟಕವೇ ಕಾಯುತ್ತಿದೆ. ಹೀಗಿರುವಾಗ ಬಿಗ್ ಬಾಸ್ ಒಟಿಟಿಯಲ್ಲಿ ಈ ಬಾರಿ ಕನ್ನಡದ ಈ ಎಲ್ಲಾ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ ನೋಡಿ.

    ಬಿಗ್ ಬಾಸ್ ಶೋಗೆ ಎಲ್ಲಾ ಭಾಷೆಯಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಪ್ರತಿ ಸಲ ಹೊಸತನವನ್ನೇ ಹೊತ್ತು ತರುವ ಬಿಗ್ ಬಾಸ್ ಈ ಸಲ ಒಟಿಟಿನಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 6ರಂದು ಈ ಶೋಗೆ ಅದ್ದೂರಿ ಚಾಲನೆ ಸಿಗಲಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಎಂಬ ಕೌತಕ ಮೂಡಿಸಿದೆ. ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

    `ಪುಟ್ಟ ಗೌರಿ ಮದುವೆ’ ಧಾರಾವಾಹಿ ಮೂಲಕ ಪುಟ್ಟಗೌರಿ ಆಗಿ ಮನಗೆದ್ದ ನಟಿ ಸಾನ್ಯ ಅಯ್ಯರ್, ಒಂದಿಷ್ಟು ಶಾರ್ಟ್ ಮೂವಿ, ಆಲ್ಬಂ ಸಾಂಗ್, ಡ್ಯಾನ್ಸ್ ರಿಯಾಲಿಟಿ ಶೋ ಜನಪ್ರಿಯಯತೆ ಗಿಟ್ಟಿಸಿಕೊಂಡಿದ್ದ ಯುವ ನಟಿ ಇದೀಗ ಬಿಗ್ ಬಾಸ್ ಒಟಿಟಿ ಮೂಲಕ ರಂಜಿಸಲಿದ್ದಾರೆ.

    ಸಮಾಜಿಕ ಕಾರ್ಯಗಳ ಮೂಲಕ ಮನೆಮಾತಾಗಿರುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಎಂದೇ ಫೇಮಸ್ ಆಗಿರುವ ಯುವ ಸಮಾಜಮುಖಿ ಕಾರ್ಯಕರ್ತೆ ಅನು ಕೂಡ ಕಿರಿತೆರೆಯ ದೊಡ್ಮನೆಯಲ್ಲಿ ನೋಡಬಹುದಾಗಿದೆ.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಅದ್ಭುತ ಹಾಡುಗಾರ್ತಿಯಾಗಿ ಗುರುತಿಸಿಕೊಂಡಿರುವ ಆಶಾ ಭಟ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಇವರು ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದ ರೇಖಾ ವೇದವ್ಯಾಸ ಮತ್ತು ತರುಣ್ ಚಂದ್ರ, ನವೀನ್ ಕೃಷ್ಣ ಕೂಡ ಶೋನಲ್ಲಿ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ರೀಲ್ಸ್ ಮೂಲಕ ಪಡ್ಡೆಹುಡುಗರ ಗಮನ ಸೆಳೆದಿರುವ ಸೋಷಿಯಲ್ ಮೀಡಿಯಾವ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮತ್ತು ಭೂಮಿಕಾ ಬಸವರಾಜ್ ಕೂಡ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ತಿದ್ದಾರೆ.

    ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ, ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ರವಿ ಶ್ರೀವಾಸ್ತವ್ ಕೂಡ ಭಾಗಿಯಾಗಲಿದ್ದಾರೆ.

    ಬರ್ತಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಸೌಂಡ್ ಮಾಡ್ತಿರುವ ಕಾಫಿನಾಡು ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

    ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮ, ಸಿನಿಮಾ, ಕಿರುತೆರೆ, ರೇಡಿಯೋ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆಗಳಿಗೆ ಬಿಗ್ ಬಾಸ್ ಒಟಿಟಿನಲ್ಲಿ ಅವಕಾಶ ನೀಡಲಾಗಿದೆ. ಈ ಸ್ಪರ್ಧಿಗಳಲ್ಲಿ ಕೆಲವರು ಬಿಗ್‌ ಬಾಸ್‌ ಒಟಿಟಿ ನಂತರ ಬಿಗ್‌ ಬಾಸ್‌ ಸೀಸನ್‌ 9 ಶೋನಲ್ಲಿ ಕೂಡ ಭಾಗವಹಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]