ದೊಡ್ಮನೆ ಬಿಗ್ ಬಾಸ್‌ನಲ್ಲಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಸ್ಪರ್ಧಿಗಳು ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಉದಯ್ ಸೂರ್ಯ, ಸಾನ್ಯ ಮತ್ತು ಜಶ್ವಂತ್ ಆಡಿರುವ ಮಾತು ಮನಸ್ತಾಪಕ್ಕೆ ಕಾರಣವಾಗಿದೆ. ಉದಯ್ ಆಡಿರುವ ಮಾತಿನಿಂದ ಮನೆಯ ಕಲಹಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಶೋ ಆರಂಭವಾದ ದಿನದಿಂದಲೂ ಸಾನ್ಯ ಮತ್ತು ರೂಪೇಶ್, ಸಾನ್ಯ ಮತ್ತು ಜಶ್ವಂತ್ ಬೋಪಣ್ಣ ಒಳ್ಳೆಯ ಸ್ನೇಹಿತರು ಆದರೆ ಇವರ ಸ್ನೇಹ, ಸಂಬಂಧದ ಬಗ್ಗೆ ಕೆಟ್ಟಾಗಿ ಉದಯ್ ಮಾತನಾಡಿದ್ದರು. ಈ ಎಲ್ಲಾ ವಿಚಾರಗಳು ಉದಯ್ ಸೂರ್ಯಗೆ ಮುಳುವಾಗಿದೆ. ಮನೆ ಮಂದಿ ಉದಯ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉದಯ್‌ಗೆ ಕ್ಲಾಸ್ ತರಟೆಗೆ ತೆಗೆದುಕೊಂಡಿದ್ದಾರೆ.

ಒಳ ಉಡುಪಿನ ವಿಚಾರಕ್ಕೆ ಸಂಬಂಧಿಸಿ ಸಾನ್ಯಾ ಹಾಗೂ ಉದಯ್ ನಡುವೆ ಒಂದು ಹಾಸ್ಯಮಯ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ಉದಯ್‌ಗೆ ಚೈತ್ರಾ ಕ್ಲೋಸ್ ಇದ್ದರು. ಹಾಸ್ಯದ ರೀತಿಯಲ್ಲಿ ನಡೆದ ಒಳ ಉಡುಪಿನ ವಿಚಾರವನ್ನು ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಚೈತ್ರಾ ಎದುರು ಬಣ್ಣಿಸಿದ್ದರು ಉದಯ್. ಇದು ಚೈತ್ರಾಗೆ ಇಷ್ಟವಾಗಿರಲಿಲ್ಲ.
ಗರ್ಲ್‌ಫ್ರೆಂಡ್ ನಂದು ಇದ್ದಾಗ ಜಶ್ವಂತ್ ಒಂದು ರೀತಿಯಲ್ಲಿ ಇರುತ್ತಾನೆ. ಅವಳು ಇಲ್ಲದ್ದಾಗ ಸಾನ್ಯ ಅಯ್ಯರ್ ಬಳಿ ಬೇರೆ ರೀತಿಯಲ್ಲಿ ಇರುತ್ತಾನೆ. ಕ್ಯಾಮೆರಾ ಇಲ್ಲದಿದ್ದರೆ ಇಲ್ಲಿ ಬೇರೆಯದೇ ಆಗುತ್ತಿತ್ತು. ಸಾನ್ಯಾಳನ್ನು ಬೀಳಿಸಿಕೊಳ್ಳಬೇಕು ಎಂಬುದು ರೂಪೇಶ್‌ಗೆ ಇದೆ ಎಂಬುದನ್ನೂ ಚೈತ್ರಾ ಎದುರು ಉದಯ್ ಹೇಳಿದ್ದರು. ಇದೀಗ ಉದಯ್ ಮಾತು ಸಾನ್ಯ ಕೋಪಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

ಇದೀಗ ಚೈತ್ರಾ, ಜಶ್ವಂತ್, ಸಾನ್ಯ, ಜಶ್ವಂತ್, ರೂಪೇಶ್, ನಂದು ಚರ್ಚಿಸಿದ ಬಳಿಕ ಎಲ್ಲರ ಎದುರಲ್ಲೇ ರೆಡ್ ಹ್ಯಾಂಡ್ ಆಗಿ ಉದಯ್ ಸಿಕ್ಕಿಹಾಕಿಕೊಂಡಿದ್ದಾರೆ. ಉದಯ್ ನಡೆಗೆ ಎಲ್ಲರೂ ಛೀಮಾರಿ ಹಾಕಿದ್ದಾರೆ.







ದೊಡ್ಮನೆಯಲ್ಲಿ ಭಿನ್ನ ಮನಸ್ಥಿತಿಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ದೇಹದ ಆಕಾರ, ರೂಪ ಎಲ್ಲವೂ ಬೇರೇ ಬೇರೇ ರೀತಿಯಲ್ಲಿ ಭಿನ್ನವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಹೊಟ್ಟೆ ನೋಡಿ ಕೆಲವರು ಟೀಕಿಸಿದ್ದರು. ಹಾಗೆಯೇ ಈ ವಿಚಾರವಾಗಿ ಗೂರೂಜಿ ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ:






ಇಲ್ಲಿ ಬೇರೆಯವರು ಮಾತಾಡಿದರೆ ಅವರಿಗೆ ಸಮಸ್ಯೆ ಇಲ್ಲ. ನಾನು ಅಯ್ಯರ್ ಮಾತಾಡಿದರೆ ಏನೇನೋ ಅರ್ಥ ಕಲ್ಪಿಸುತ್ತಾರೆ. ನಂಗೆ ಒಂದು ಅರ್ಥ ಆಗಿಲ್ಲ. ರಾತ್ರಿ ಹೊತ್ತು ಲೈಟ್ ಆಫ್ ಆದರೆ ಮಲಗಬಹುದುನಾ, ಮಲಗಬೇಕುನಾ ಎಂಬುದು ನನಗೆ ಗೊತ್ತಿಲ್ಲ ಎಂದಾಗ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಮಲಗಬಹುದು ಎಂದಿದ್ದಾರೆ. ಆದರೆ ರೂಪೇಶ್ ಸೋಮಣ್ಣ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ:












ಯಾರೋ ಸಂಬಂಧವನ್ನ ನಾನು ಡಾಮೇಜ್ ಮಾಡೋಕೆ ಬಂದಿಲ್ಲ. ನಿಮ್ಮ ವಿಚಾರ ನನಗೆ ಬೇಕಾಗುಯಿಲ್ಲ. ಆದರೆ ಮನೆಯ 80% ಜನರಿಗೆ ಇದೇ ಅಭಿಪ್ರಾಯವಿದೆ ಎಂದು ಸೋಮಣ್ಣ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಒಬ್ಬರ ಆಸಕ್ತಿಯಿಲ್ಲ ಅಂದ ಮೇಲೆ ಈ ವಿಚಾರವನ್ನಿಟ್ಟು ಚರ್ಚೆ ಮಾಡೋದೇನಿದೆ, ನಿಜವಾಗಲೂ ನಿಮ್ಮ ಮಾತಿಂದ ಬೇಜರಾಗಿದೆ ಎಂದು ಸಾನ್ಯ, ಸೋಮಣ್ಣ ಅವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈಗ ರೂಪೇಶ್ ಮತ್ತು ಸಾನ್ಯ ಬಗ್ಗೆ ಫುಲ್ ಮಾತು ಶುರುವಾಗಿದೆ.

