ದೊಡ್ಮನೆಯ ಕಾಳಗ ಶುರುವಾಗಿದೆ. ಇನ್ನೂ ಬಿಗ್ ಬಾಸ್ (Bigg Boss Season 9) ಮನೆಗೆ ಬಂದ ಮೇಲೆ ಕಡೆಯ ದಿನಗಳವರೆಗೂ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿ ಸ್ಪರ್ಧಿಯ ಆಸೆಯಾಗಿರುತ್ತದೆ. ಇದೀಗ ಮೊದಲ ವಾರವೇ 12 ಜನರನ್ನು ನಾಮಿನೇಟ್ ಆಗಿ ಡೇಂಜರ್ ಜೋನ್ ನಲ್ಲಿದ್ದಾರೆ.
ಕಿರುತೆರೆ ಲೋಕದ ಬಿಗ್ ಶೋ ಬಿಗ್ ಬಾಸ್ ಸೀಸನ್ 9ನಲ್ಲಿ ಒಟ್ಟು 18 ಜನರಿಗೆ ಅವಕಾಶ ಸಿಕ್ಕಿದೆ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಆಟ ಶುರುವಾದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್ ಸಂಬರ್ಗಿ (Prashant Sambargi) , ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್ (Sanya Iyer), ಮಯೂರಿ, ರೂಪೇಶ್ ರಾಜಣ್ಣ (Rupesh Rajanna), ಕ್ಯಾವ್ಯಶ್ರೀ ಅವರು ನಾಮಿನೇಟ್ ಆಗಿದ್ದಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ
ನಾಮಿನೇಟ್ ಆದವರು ಪ್ರತಿ ಟಾಸ್ಕ್ ಕೂಡ ಚೆನ್ನಾಗಿ ಆಡಲೇ ಬೇಕಾಗುತ್ತದೆ. ಮನೆಯ ಸದಸ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ವೀಕ್ಷಕರನ್ನು ಎಷ್ಟರಮಟ್ಟಿಗೆ ಮನರಂಜಿಸುತ್ತಾರೆ ಎಂಬುದೆಲ್ಲವೂ ಪರಿಗಣನೆಗೆ ಬರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಆಟ ಆಡಲು ಎಲ್ಲರೂ ಸಜ್ಜಾಗಿದ್ದಾರೆ. ಇನ್ನೂ ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ಶೆಟ್ಟಿ ಸದ್ಯಕ್ಕೆ ಸೇಫ್ ಆಗಿದ್ದಾರೆ.
ಇನ್ನೂ ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಈ ಬಾರಿ ಬಿಗ್ ಬಾಸ್‌ನಲ್ಲಿ ಪರಿಚಯಿಸಲಾಗಿದೆ. ಹೊಸಬರನ್ನು ಮತ್ತು ಹಳಬರನ್ನು ಜೋಡಿಯಾಗಿಸಿ ಟಾಸ್ಕ್ಗಳನ್ನು ಆಡಿಸಲಾಗುತ್ತಿದೆ. ಮೊದಲ ದಿನ ನಡೆದ ಟಾಸ್ಕ್ನಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಜೋಡಿ ವಿನ್ ಆಗಿದೆ. ಫಸ್ಟ್ ಟಾಸ್ಕ್ ಗೆದ್ದಿದ್ದಕ್ಕಾಗಿ ಏನಾದರೂ ಕೊಡಿ ಎಂದು ಬಿಗ್ ಬಾಸ್ ಬಳಿ ಪ್ರಶಾಂತ್ ಸಂಬರ್ಗಿ ಮನವಿ ಮಾಡಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.
ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ
ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿ, ಅಭಿಮಾನಿಗಳ ವಲಯದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡಿತ್ತು. ಓಟಿಟಿಯ 42 ದಿನಗಳ ಆಟಕ್ಕೆ ಕೊನೆಗೂ ಇದೀಗ ತೆರೆಬಿದ್ದಿದೆ. ಓಟಿಟಿ ಟಾಪರ್ ಆಗಿ ರೂಪೇಶ್ ಶೆಟ್ಟಿ(Roopesh Shetty) ಹೊರಹೊಮ್ಮಿದ್ದಾರೆ. ಅದಷ್ಟೇ ಅಲ್ಲ, ಟಿವಿ ಬಿಗ್ ಬಾಸ್‌ಗೆ ಎಂಟ್ರಿ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗೆ ಓಟಿಟಿಯ ಇನ್ನೂ ಮೂರು ಸ್ಪರ್ಧಿಗಳು ಟಿವಿ ಬಿಗ್ ಬಾಸ್‌ಗೆ(Bigg Boss9) ಆಯ್ಕೆ ಆಗಿದ್ದಾರೆ.
ಓಟಿಟಿಯ ಬಿಗ್ ಬಾಸ್ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸೀಸನ್ ಟಾಪರ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಆ ಎಲ್ಲಾ ಕೂತೂಹಲಕ್ಕೆ ಈಗ ತೆರೆ ಬಿದ್ದಿದೆ. ತುಳುನಾಡಿನ ಬಹುಮುಖ ಪ್ರತಿಭೆ ರೂಪೇಶ್ ದೊಡ್ಮನೆಯ ಓಟಿಟಿ ಸೀಸನ್ 1ರ ಟಾಪರ್ ಆಗಿದ್ದಾರೆ. ಜತೆಗೆ ಟಿವಿ ಬಿಗ್ ಬಾಸ್‌ಗೆ ಸ್ಪರ್ಧಿಸಲು ರೂಪೇಶ್ ಶೆಟ್ಟಿ ಭರ್ಜರಿ ಅವಕಾಶ ಸಿಕ್ಕಿದೆ. ಅವರ ಜೊತೆ ಆರ್ಯವರ್ಧನ್ ಗುರೂಜಿ,(Aryavardhan) ಸಾನ್ಯ ಅಯ್ಯರ್ (Sanya), ರಾಕೇಶ್ ಅಡಿಗ(Rakesh Adiga) ಬಿಗ್ ಬಾಸ್ ಸೀಸನ್ 9ರಲ್ಲಿ ರಂಜಿಸಲಿದ್ದಾರೆ. ಇದನ್ನೂ ಓದಿ:Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ
ಈ ಹಿಂದಿನ 8 ಸೀಸನ್‌ಗಳ ಕೆಲವು ಪ್ರವೀಣರ ಜೊತೆ ಹೊಸಬರು ಕೂಡ ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸೀಸನ್ ಬಿಗ್ ಬಾಸ್ ಈ ಹಿಂದಿನ ಸೀಸನ್‌ಗಿಂತ ವಿಭಿನ್ನವಾಗಿರಲಿದೆ. ಸೆ.25ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ.
Live Tv
[brid partner=56869869 player=32851 video=960834 autoplay=true]
ರೂಪೇಶ್ ಮತ್ತು ಸಾನ್ಯಾ ನಡುವೆ ಮನೆಯಲ್ಲಿ ಆಗಾಗ ಸಣ್ಣ ಸಣ್ಣ ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಒಂದು ಹಗ್ ಕೊಟ್ಟಿಲ್ಲದ ಕಾರಣಕ್ಕೋ, ಸಮಯ ಕೊಡದೆ ಇರುವ ಕಾರಣಕ್ಕೋ ಅದು ಜಗಳ ಅಲ್ಲ ಹೆಲ್ದಿ ಚರ್ಚೆಗಳು ನಡೆಯುತ್ತಲೆ ಇರುತ್ತವೆ. ಇವತ್ತು ಕೂಡ ಅಂತದ್ದೊಂದು ಸಣ್ಣ ಜಗಳವೇ ಆರಂಭವಾಗಿತ್ತು. ಆದರೆ ಮಧ್ಯೆ ಮಾಜಿ ಸ್ಪರ್ಧಿ ಉದಯ್ ಹೋಲಿಕೆ ರೂಪೇಶ್ ಮನಸ್ಸಿಗೆ ಅಗಾಧವಾದ ನೋವು ತಂದಿದೆ.
ಸಾನ್ಯಾ, ರೂಪೇಶ್ ಮತ್ತು ಸೋನು ಕೂತು ಬಿಟ್ಟರ್ ಬೆಟರ್ ಹೇಳುತ್ತಾ ಇದ್ದರು. ಆ ರೈಮ್ಸ್ ಅಷ್ಟು ಈಸಿಯಾಗಿಲ್ಲದ ಕಾರಣ ಕಷ್ಟಪಟ್ಟು ಸಾನ್ಯಾ ಹೇಳುತ್ತಾ ಇದ್ದಳು. ರೂಪೇಶ್ ಗಮನವಿಟ್ಟು ಕೇಳುತ್ತಾ ಇದ್ದ. ಆದ್ರೆ ರೂಪೇಶ್ ಪಕ್ಕದಲ್ಲಿ ಕೂತಿದ್ದ ಗುರೂಜಿ ಸಣ್ಣ ಚೇಷ್ಟೇ ಮಾಡಿದ್ದಾರೆ. ಅದು ಸಾನ್ಯಾಗೆ ಉರಿದು, ಅಲ್ಲಿಂದ ಮತ್ತೊಂದು ಸೋಫಾದ ಮೇಲೆ ಎದ್ದು ಹೋಗಿದ್ದಾಳೆ. ನಾವೂ ಎಷ್ಟು ಅಂತ ನೋಡುವುದು. ಬರೀ ನಿಮ್ಮದೇ ಕೇಳಬೇಕಾ. ಇದು ಫಸ್ಟ್ ಟೈಮ್ ಅಲ್ಲ ನೀವೂ ಹಿಂಗೆ ಮಾಡುತ್ತಾ ಇರುವುದು. ನಾನು ತಾಳ್ಮೆಯಿಂದ ಎಷ್ಟು ಸಲ ಅಂತ ಇರಲಿ. ಮಾತಾಡಿಕೊಳ್ಳಿ, ಏನಾದರೂ ಮಾಡಿಕೊಳ್ಳಿ. ತುಂಬಾ ಇರಿಟೇಟ್ ಮಾಡ್ತೀರಾ ಎಂದಿದ್ದಾಳೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?
ಆದ್ರೆ ರೂಪೇಶ್ ಬಾ ಇಲ್ಲಿಗೆ ಬಾ ಇಲ್ಲಿಗೆ ಅಂತ ಕರೆದರೂ ಸಾನ್ಯಾ ಬಂದಿಲ್ಲ. ನಿನ್ನೆ ರಾತ್ರಿಯೂ ಅದನ್ನೇ ಮಾಡಿದ್ದೀರಿ. ನಾನು ನೀವಿಬ್ಬರು ಇದ್ದ ಕಡೆ ನಾನು ಬರುವುದೇ ಇಲ್ಲ ಎಂದಿದ್ದಾಳೆ. ಆಗ ರೂಪೇಶ್, ಇದು ಮೊದಲ ಸಲ ತಾನೇ. ಬಾ ಇಲ್ಲಿಗೆ ಒಂದೇ ಒಂದು ಸಲ ಎಂದಿದ್ದಾನೆ. ಇದೆಲ್ಲಾ ಮುಗಿದರು ಸಾನ್ಯಾ ಮಾತ್ರ ಬರಲಿಲ್ಲ. ಕಡೆಗೆ ಎಲ್ಲಾ ಎದ್ದು ಹೋಗುವಾಗ ಗುರೂಜಿ, ನೀವಿಬ್ಬರು ಇಲ್ಲಿಯ ತನಕ ಮಾತನಾಡುತ್ತಲೇ ಇರಲಿಲ್ಲ ಹೊಸದಾಗಿ ಮಾತನಾಡುತ್ತಿದ್ದೀವಿ ಅನ್ನೋ ಥರ ಆಡುತ್ತಿರಲ್ಲ ಅಂದಿದ್ದಾರೆ. ಇದು ಸಾನ್ಯಾಗೆ ಕೋಪ ತರಿಸಿದೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!
ಸಾನ್ಯಾ ಬಳಿ ಬಂದು ರೂಪೇಶ್ ವಿವರಣೆ ನೀಡಿದ್ದಾನೆ. ಅದಕ್ಕೂ ಒಪ್ಪದೆ ಮತ್ತೆ ವಾದ ಮಾಡುತ್ತಲೇ ಇದ್ದಾಗ, ರೂಪೇಶ್, ಆಯ್ತು ಬಿಡು ಸಾರಿ ಎಂದಿದ್ದಾನೆ. ಇಬ್ಬರ ನಡುವೆ ಕೋಳಿ ಜಗಳ ಮುಂದುವರೆದಿದೆ. ನನ್ನದು ತಪ್ಪಲ್ಲ ನಿನ್ನದು ತಪ್ಪಲ್ಲ ಎಂದೇ ವಾದ ಮಾಡಿದ್ದಾರೆ.
ಮತ್ತೆ ರಾತ್ರಿ 9.30ಕ್ಕೆ ಮತ್ತೆ ರೂಪೇಶ್ ಸಾನ್ಯಾ ಮಾತು ಶುರು ಮಾಡಿದ್ದಾರೆ. ನಾನು ಆಗಲೇ ಕರೆದಾಗಲೂ ನೀನು ಬರಲೇ ಇಲ್ಲ. ಒಂದು ಹಗ್ ಬೇಕು ಅಂತ ಕರೆದೆ ಅಷ್ಟೇ ಎಂದಾಗ ಜಶ್ವಂತ್, ನೀವು ಕೂತಿದ್ರಿ. ಆಗ ನೀನು ಏನೋ ಅಂದೆ ಅದು ನಂಗೆ ಕ್ಲಾರಿಟಿ ಸಿಕ್ಕಿಲ್ಲ. ಅದಕ್ಕೆ ಹೋದೆ ಎಂದಿದ್ದಾನೆ ರೂಪೇಶ್. ಏನೋ ಅಂದೇ ನಂಗೆ ಕನೆಕ್ಟ್ ಅಲ್ಲ ಅಂತ ನಾನು ಹೋದೆ ಅಂದಾಗ ಸಾನ್ಯಾ ಅದೇನು ಅಂತ ಬಿಡಿಸಿ ಹೇಳು ಅಂದಿದ್ದಾಳೆ. ಆಗ ರೂಪೇಶ್ ವಿಚಾರ ಹೇಳುವುದಕ್ಕೆ ತಡಕಾಡಿದ್ದಾನೆ. ನಾನು ಬಂದಾಗ ನಿಮ್ಮಿಬ್ಬರ ಮಾತು ಕಟ್ ಆಯ್ತು. ಅದಕ್ಕೆ ನಾನು ಎದ್ದು ಹೋದೆ ಎಂದಿದ್ದಾನೆ. ಅದಾದ ಬಳಿಕ ಸಾನ್ಯಾ ಒಂದಷ್ಟು ವಿಚಾರಗಳನ್ನು ತೆಗೆದು ಮತ್ತೆ ವಾದ ಮಾಡಿದ್ದಾಳೆ. ವಾದವೆಲ್ಲಾ ಮುಗಿದ ಮೇಲೆ ನಾನು ನಿನ್ನ ಕ್ಯಾರೆಕ್ಟರ್‌ಗೂ ಅವನ ಕ್ಯಾರೆಕ್ಟರ್ ಹೋಲಿಕೆ ಮಾಡುತ್ತಿಲ್ಲ ಎಂದಾಗ ರೂಪೇಶ್ ಹಂಗೆಲ್ಲಾ ಮಾತನಾಡಬೇಡ. ಎಲ್ಲರಿಗೂ ಗೊತ್ತಾಗಲ್ಲ. ಅಂತದ್ದು ನಾನು ಏನು ಮಾಡಿದೆ ಎಂದಿದ್ದಾಳೆ.
ಮತ್ತೆ ವಾದ ಪ್ರತಿವಾದ ಮುಂದುವರಿದು ಮಾತು ಮತ್ತೊಂದು ಸೋಫಾಗೆ ಶಿಫ್ಟ್ ಆಗಿದೆ. ಸಣ್ಣ ಸಣ್ಣ ಕೋಪ ಇರಬೇಕು ಓಕೆ. ಆದರೆ ಅದನ್ನೇ ಕಾಂಪ್ಲಿಕೇಟ್ ಮಾಡಿದರೆ ಮತ್ತೆ ಇನ್ನೇನೋ ಆಗುತ್ತೆ ಎಂದು ರೂಪಿ ಹೇಳಿದ್ದಾನೆ. ಅದಕ್ಕೆ ಸಾನ್ಯಾ, ಈಗ ಏನಾಗಿದ್ದು ನಿಂಗೆ ಅವನ ಹೆಸರು ಎತ್ತಿದ್ದ ಎಂದಾಗ. ಎತ್ತಬೇಡ. ಅದು ನಂಗೆ ಇಷ್ಟವೂ ಇಲ್ಲ. ನೀನು ಒಂದು ವಿಚಾರಕ್ಕೆ ತೆಗೆದಿರುತ್ತೀಯಾ. ಅದು ಎಷ್ಟು ದೊಡ್ಡ ಪದ ಗೊತ್ತಾ. ನೀನು ಉದಯ್ ಥರ ಕಾಣುತ್ತೀಯಾ ಅಂತ ಛೀ.. ಆ ಥರ ಎಲ್ಲಾ ಯಾಕೆ ಮಾತನಾಡುತ್ತೀಯಾ. ಹಂಗೇನಾದರೂ ಕಾಣಿಸ್ತಾ ನಿಂಗೆ ಎಂದಾಗ ಸಾನ್ಯಾ ಕ್ಷಮೆ ಕೇಳಿದ್ದಾಳೆ. ಒಂದಷ್ಟು ಮಾತು ಕತೆಯ ಮೂಲಕ ಆ ಟಾಪಿಕ್ ಮುಗಿದಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿ (Bigg Boss Ott) ಇದೀಗ ಕಡೆಯ ಹಂತದಲ್ಲಿದೆ. ಓಟಿಟಿ ಸೀಸನ್ ಮುಗಿಯಲು ಒಂದೇ ವಾರ ಬಾಕಿಯಿದೆ. ದೊಡ್ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಇನ್ನು ನಂದಿನಿ ಮತ್ತು ಜಶ್ವಂತ್ ರಿಯಲ್ ಪ್ರೇಮಿಗಳಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ನಂದಿನಿ ಎಲಿಮಿನೇಟ್ ಆಗಿದ್ದಾರೆ. ಗರ್ಲ್‌ಫ್ರೆಂಡ್ ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಕ್ಲೋಸ್ ಆಗಿದ್ದಾರೆ.
ರಿಯಲ್ ಲೈಫ್‌ನಲ್ಲೂ ಪ್ರೇಮಿಗಳಾಗಿದ್ದ ನಂದಿನಿ (Nandini) ಮತ್ತು ಜಶ್ವಂತ್ (jashwanth) ದೊಡ್ಮನೆಗೆ ಕಾಲಿಟ್ಟಿದ್ದರು. ಒಂದು ವಾರದ ನಂತರ ಬಿಗ್ ಬಾಸ್ ಆದೇಶದಂತೆ ಪ್ರತ್ಯೇಕ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಮನೆಯಲ್ಲಿ ನಂದು ಮತ್ತು ಜಶ್ ಹಾಗೂ ಸಾನ್ಯ ಮತ್ತು ರೂಪೇಶ್ ಒಂದು ಟೀಮ್ ಆಗಿ ಹೈಲೈಟ್ ಆಗಿದ್ದರು. ಇನ್ನೂ ಸಾನ್ಯ ಜತೆಗಿನ ಜಶ್ವಂತ್ ಒಡನಾಟ ನಂದಿನಿಯ ಮುನಿಸಿಗೆ ಕಾರಣವಾಗಿತ್ತು. ಇವರಿಬ್ಬರ ಮಧ್ಯೆ ಮನಸ್ತಾಪ ಕೂಡ ಜಾಸ್ತಿಯಾಗಿತ್ತು.
ನಂದಿನಿ ಎಲಿಮಿನೇಷನ್ ಬಳಿಕ ಜಶ್ವಂತ್, ಸಾನ್ಯ ಜೊತೆ ಸಲುಗೆಯಿಂದ ಇರುವುದು ಮನೆಯ ಮಂದಿಯ ಗಮನಕ್ಕೆ ಬಂದಿದೆ. ನಂದುನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತಿನಲ್ಲಿ ಹೇಳಿದ್ದರು ಕೂಡ ನಡೆಯಲ್ಲಿ ಬೇರೆಯದ್ದೇ ವಿಚಾರ ಮನೆಯವರ ಗಮನಕ್ಕೂ ಬಂದಿದೆ. ಜಶ್ ಮತ್ತು ಸಾನ್ಯ ಹತ್ತಿರವಾಗುತ್ತಿದ್ದಂತೆ ರೂಪೇಶ್ ಅವರು ಟೆನ್ಷನ್ ಆಗಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಮಾತುಕಥೆ ಆಗಿದೆ. ಇದನ್ನೂ ಓದಿ:ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್
ದಿನ ಕಳೆದಂತೆ ಸಾನ್ಯ ಜೊತೆಗಿನ ಜಶ್ವಂತ್ ಸಲುಗೆ ನಂದಿನಿಗೆ ಬೇಸರ ತಂದಿತ್ತು. ಈ ವಿಚಾರವಾಗಿ ಸಾಕಷ್ಟು ಬಾರಿ ನಂದು ಬೇಸರ ಮಾಡಿಕೊಂಡಿದ್ದಾರೆ. ಜಶ್ ನನಗೆ ಸಮಯ ನೀಡುತ್ತಿಲ್ಲ ಎಂದು ಮುನಿಸಿಕೊಂಡಿದ್ದು ಇದೆ. ಇದಾದ ನಂತರ ನಂದಿನಿ, ಜಶ್ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಪೊಸೆಸಿವ್ ಎಂಬುದು ಎಲ್ಲರಿಗೂ ತಿಳಿಯಿತು. ಹೀಗಿರುವಾಗ ನಂದಿನ ಎಲಿಮಿನೇಷನ್ ನಂತರ ಸಾನ್ಯ ಜೊತೆ ಜಶ್ ಕ್ಲೋಸ್ ಆಗಿರುವುದು ಎಲ್ಲರ ಗಮನಕ್ಕೆ ಬಂದಿದೆ.
ನಂದು ಇದ್ದಾಗ ಸಾನ್ಯ, ರೂಪೇಶ್ ಜೊತೆ ಇರುತ್ತಿದ್ದರು. ಆದರೆ ಈಗ ಇವರಿಬ್ಬರ ಮಧ್ಯೆ ಜಶ್ವಂತ್ ಎಂಟ್ರಿ ಕೊಟ್ಟಿದ್ದಾರೆ. ಜಶ್ವಂತ್ ಈ ನಡೆಯಿಂದ ರೂಪೇಶ್ ಟೆನ್ಷನ್ ಮಾಡಿಕೊಂಡಿದ್ದಾರೆ. ಇನ್ನೂ ಬಿಗ್ ಬಾಸ್ ಓಟಿಟಿ ಗೆಲುವಿನ ಪಟ್ಟವನ್ನ ಗಿಟ್ಟಿಸಿಕೊಳ್ಳಲು ಒಂದೇ ವಾರ ಬಾಕಿಯಿದೆ. ಯಾರಿಗೆ ಟ್ರೋಫಿ ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ (Bigg boss ott) ಮನೆಯಲ್ಲಿ ಸೋಮಣ್ಣ (Somanna) ನೋಡಲು ಅಷ್ಟೇ ಖಡಕ್ ಆದರೆ ಮನಸ್ಸಲ್ಲಿ ಸಾಕಷ್ಟು ನೋವಿದೆ. ಅವರಿಗೆ ಅವರ ಸಂಗಾತಿ ಆಗಾಗ ತುಂಬಾ ನೆನಪಾಗುತ್ತಾರೆ. ಮೊದಲಿಗೇನೆ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಅವರ ನೆನಪುಗಳು ಆಗಾಗ ಸೋಮಣ್ಣ ಅವರಿಗೆ ಕಾಡುತ್ತಿವೆ ಎಂಬುದು ಮಾತ್ರ ಸತ್ಯ. ಇವತ್ತು ಮತ್ತೆ ಅವರ ಮನದ ದುಃಖದ ಕಟ್ಟೆ ಒಡೆದಿತ್ತು. ನೋಡುಗರಿಗೂ ಒಂದು ಕ್ಷಣ ಮತ್ತೆ ಅವರ ಸಾಂಸಾರಿಕ ಜೀವನ ಸರಿಯಾಗಬಾರದಾ ಎಂಬ ಭಾವನೆ ಬಂದಿದೆ.
ದೊಡ್ಮನೆಯಲ್ಲಿ 50 ಸಾವಿರಕ್ಕೆ ಒಂದು ಗೇಮ್ ನೀಡಿತ್ತು ಬಿಗ್ ಬಾಸ್. ದೊಡ್ಡ ಗಾತ್ರದ ಬಾಲುಗಳಿಗೆ ಟ್ಯಾಗ್ ಕಟ್ಟಿರುತ್ತಾರೆ. ಅದನ್ನು ಎಳೆದು ಬಾಲನ್ನು ತಬ್ಬಿ ನಿಲ್ಲಬೇಕು. ಬಾಲು ಹೆಂಗಿತ್ತು ಎಂದರೆ ಮನೆಯ ಸದಸ್ಯರಿಗಿಂದ ಡಬ್ಬಲ್ ಗಾತ್ರದಲ್ಲಿ ಇತ್ತು. ಬ್ಯಾಲೆನ್ಸ್ ಮಾಡುವುದಾದರೂ ಹೇಗೆ. ಅದು ಅರ್ಧ ಗಂಟೆ ಇಟ್ಟುಕೊಂಡು ನಿಂತರೆ ಎರಡು ಸಾವಿರ ರೂಪಾಯಿ. ಹೆಣ್ಣು ಮಕ್ಕಳೆಲ್ಲಾ ಕೆಲವೇ ನಿಮಿಷಕ್ಕೆ ಬಾಲನ್ನ ಬಿಟ್ಟು ಬಿಟ್ಟರು. ಗಂಡು ಮಕ್ಕಳಲ್ಲಿ ರಾಕೇಶ್, ಜಶ್ವಂತ್, ರೂಪೇಶ್ ಹಾಗೋ ಹೀಗೋ ಎರಡು ಗಂಟೆಗಳ ಕಾಲ ಅದನ್ನು ಸರಿದೂಗಿಸಿಕೊಂಡು ಬಂದಿದ್ದರು. ಸೋಮಣ್ಣ ಮತ್ತು ಗುರೂಜಿಗೆ ಅದೆಲ್ಲಿತ್ತೋ ಶಕ್ತಿ. ಮೂರು ಗಂಟೆಗಳ ಕಾಲ ನಿಂತಿದ್ದರು. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ
ಇನ್ನು ಈ ಆಟದಲ್ಲಿ ಮನೆ ಮಂದಿಯೆಲ್ಲರ ಶ್ರಮಕ್ಕೆ ಸಿಕ್ಕಿದ್ದು 44 ಸಾವಿರ. ಆದ್ರೆ ಸೋಮಣ್ಣ ಹಾಗೂ ಗುರೂಜಿಯ ಶ್ರಮಕ್ಕೆ ಬೋನಸ್ ಆಗಿ ಬಿಗ್ ಬಾಸ್ 6 ಸಾವಿರ ಕೊಟ್ಟು ರೌಂಡ್ ಫಿಗರ್ 50 ಸಾವಿರ ನೀಡಿದೆ. 5 ಲಕ್ಷ ಹಣದ ಗೇಮ್‌ನಲ್ಲಿ ಇದೇ ಫಸ್ಟ್ 50 ಸಾವಿರ ಒಂದು ಗೇಮ್‌ನಲ್ಲಿ ಸದಸ್ಯರು ಪಡೆದಿರುವುದು ಮನೆಯವರ ಖುಷಿಗೆ ಪಾತ್ರವಾಗಿದೆ. ಸಾನ್ಯಾ ಅಯ್ಯರ್, ಕೂಡ ಸೋಮಣ್ಣ ವಿಚಾರದಲ್ಲಿ ಸಖತ್ ಎಮೋಷನಲ್ ಆಗಿದ್ದಾಳೆ. ದಿಢೀರನೆ ಬಂದು ಕಾಲಿಗೆ ಬಿದ್ದು ಕಣ್ಣೀರು ಹಾಕಿದ್ದಾಳೆ. ಈ ಸಮಯದಲ್ಲಿ ಸೋಮಣ್ಣ ಅವರಿಗೆ ಏನಾಯ್ತೋ ಏನೋ ಅಳುವುದಕ್ಕೆ ಸ್ಟಾರ್ಟ್ ಮಾಡಿದ್ದಾರೆ. ತುಂಬಾ ಸೋತು ಬಿಟ್ಟಿದ್ದೀನಿ ಸಾನ್ಯಾ (Sanya iyer) ಅವರೇ. ಎಷ್ಟು ಕಷ್ಟಪಡಲಿ, ಎಷ್ಟೇ ಹಾರ್ಡ್ ವರ್ಕ್ ಮಾಡಲಿ, ಫೇಮ್ ಇದೆ, ನೇಮ್ ಇದೆ. ಫ್ಯಾಮಿಲಿ ಲೈಫ್ ನಲ್ಲಿ ಸೋತೆ. ಮನೆಯಲ್ಲಿ ಎಲ್ಲಾ ಇದ್ರು ಎಲ್ಲಾ ಕಳೆದುಕೊಂಡಿದ್ದೀನಿ. ಈಗ ಅನಾಥನ ಥರ ಬದುಕುತ್ತಾ ಇದ್ದೀನಿ ಎಂದು ಎಮೋಷನಲ್ ಆಗಿದ್ದಾರೆ.
ಅಲ್ಲಿಗೆ ಬಂದ ರಾಕೇಶ್ (Rakesh adiga) ಇದು ಖುಷಿಗೆ ತಾನೇ ಕಣ್ಣೀರು ಎಂದಾಗ ಹೌದು ಎಂದಿದ್ದಾರೆ. ಬಳಿಕ ಸೋಮಣ್ಣ ಕಣ್ಣೀರು ಹಾಕಿದ್ದಕ್ಕೆ ಸಮಾಧಾನ ಮಾಡಿ ನಾವೆಲ್ಲಾ ಇಲ್ವಾ ಬ್ರೋ ಎಂದಿದ್ದಾನೆ. ಸೋಮಣ್ಣ ದುಃಖದ ಮಾತು ಮುಂದುವರೆಸಿ, ಗಿವಪ್ ಆಗಬೇಕು, ಇಲ್ಲ ಹೊಸ ಬದುಕು ಕಟ್ಟಬೇಕು ಅಂತ ಇಲ್ಲಿಗೆ ಬಂದಿದ್ದು. ಮನೆಗೆ ಮಗ ಅಲ್ಲ ಎಂಬಂತೆ ನಾನು ಬದುಕಿದ್ದು ಎಂದು ಸೋಮಣ್ಣ ಭಾವುಕರಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ನಂದಿನಿ ಬದಲಾಗಿದ್ದು, ಜಶ್ವಂತ್‍ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ನೋಡುಗರಿಗೆ ಗೊತ್ತಾಗುತ್ತಿದೆ. ಜಶ್ವಂತ್ ಹೆಚ್ಚು ರಿಪ್ಲೇ ಮಾಡದೆ ಇರುವುದೆಲ್ಲವನ್ನು ಕಂಡಾಗ ಏನೋ ಮಿಸ್ ಹೊಡಿತಿದೆ ಎನಿಸುತ್ತದೆ. ಆದರೆ ಇದಕ್ಕೆಲ್ಲಾ ಕಾರಣ ಸಾನ್ಯಾ ಎಂಬ ಮನದಾಳದ ನೋವಂತು ಹೊರಬಂದಿದೆ.
ಜಶ್ವಂತ್ ರಾತ್ರಿ ಊಟ ಮಾಡುವಾಗ ನಂದಿನಿಯ ಕೈಹಿಡಿದುಕೊಂಡು ಹೋಲ್ಡ್ ಮೈ ಹ್ಯಾಂಡ್ ಅಂತ ಕೂಡ ಹೇಳಿದ್ದ. ಅದಕ್ಕೆ ನಂದಿನಿ ಪ್ರತಿಕ್ರಿಯಿಸಿ, ನಾನು ಯಾವತ್ತು ಹಿಡಿದ ಕೈಬಿಡುವುದಿಲ್ಲ. ಆದರೆ ಜೀವನ ಪೂರ್ತಿ ಜೊತೆಯಾಗಿರುತ್ತೀನಿ ಎಂದು ಅನ್ನಿಸಿದಾಗ ಮಾತ್ರ ಹ್ಯಾಂಡ್ ಹೋಲ್ಡ್ ಮಾಡಬೇಕು ಎಂದಿದ್ದಳು. ಆಗ ಜಶ್ವಂತ್, ನಂಬಿಕೆ ಇದೆ ಎಂದು ಹೇಳಿದ್ದ. ಇದಕ್ಕೆ ಜೋರು ನಕ್ಕ ನಂದಿನಿ, ನೀನೇ ತಾನೇ ಭವಿಷ್ಯದ ಬಗ್ಗೆ ಗೊತ್ತಿಲ್ಲ ಎಂದವನು ಎಂದಿದ್ದಳು. ಇದೆಲ್ಲ ಮುಗಿದ ಮೇಲೂ ನಂದಿನಿ, ಜಶ್ವಂತ್‍ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಏನೋ ಬೇಸರ ಅವಳ ಮನಸ್ಸನ್ನು ಕಾಡುತ್ತಿದೆ. ನೋವು ಆದರೂ, ದುಃಖ ಬಂದರೂ ಅದನ್ನು ಅದುಮಿಟ್ಟುಕೊಳ್ಳುತ್ತಿದ್ದಾಳೆ. ಅದೇ ಕಾರಣಕ್ಕೆ ಜಶ್ವಂತ್ ಬಿಟ್ಟು, ಸೋನು ಟೀಂನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾಳೆ.
ಇದಕ್ಕೆ ಉದಾಹರಣೆ ಎಂಬಂತೆ ಮಳೆ ಜೋರು ಸುರಿಯುತ್ತಿತ್ತು. ಆ ವೇಳೆ ಜಯಶ್ರೀ, ರಾಕೇಶ್, ಸೋನು ಕುಳಿತಿದ್ದರು. ಆಗ ಅಲ್ಲಿಗೆ ಬಂದ ನಂದಿನಿ, ಸ್ವಿಮ್ ಮಾಡುವುದಕ್ಕೆ ಸೋನುಳನ್ನು ಕರೆದಳು. ಖುಷಿಯಾಗುವಷ್ಟು ಸ್ವಿಮ್ ಮಾಡಿದಳು. ಅಲ್ಲಿಗೆ ಮಧ್ಯರಾತ್ರಿ 12 ಆಗಿತ್ತು. ನೇರ ಅಡುಗೆ ಮನೆಗೆ ಹೋದಳು. ಅಲ್ಲಿ ರೂಪೇಶ್‍ಗೆ ನಂದಿನಿಯ ಬದಲಾವಣೆ, ಮನಸ್ಸಿನ ನೋವು ಕೊಂಚ ಅರ್ಥವಾಗಿದೆ. ನೀನು ಸಾನ್ಯಾ ಹತ್ತಿರ ಮಾತನಾಡಿಲ್ವಾ ಎಂದಾಗ ಸಾನ್ಯಾ ಹತ್ರ ಅಲ್ಲ ಎಂದು ನಂದು ಮಾತು ಬದಲಾಯಿಸಿದ್ದಾಳೆ. ಇದನ್ನೂ ಓದಿ:‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ
ಆಗ ರೂಪೇಶ್ ಮತ್ತೆ ಬಲವಂತ ಮಾಡಿ ಕೇಳಿದ್ದಾನೆ. ಅದಕ್ಕೆ ಉತ್ತರ ಕೊಟ್ಟ ನಂದು ಅವನು ಹೊರಗಡೆ ಹೇಗೆ ಇದ್ದ ಆ ರೀತಿ ಇಲ್ಲಿ ಒಳಗಡೆ ಇಲ್ಲ. ಅವನಿಗೆ ಕಂಫರ್ಟ್ ನನ್ನ ಜೊತೆಗಿಂತ ಸಾನ್ಯಾ ಬಳಿ ಇದೆ ಅನಿಸುತ್ತಿದೆ ಎಂದಾಗ ರೂಪೇಶ್ ಸಮಾಧಾನ ಮಾಡಿದ್ದಾನೆ. ಏನು ಗೊತ್ತಾ ನಂಗೆ ಕೆಲವೊಂದು ವಿಚಾರಗಳು ಗೊತ್ತಾಗುತ್ತಿದೆ. ನಿಂಗೆ ಕಂಫರ್ಟ್ ಆಗುತ್ತಾ ಇಲ್ಲ. ನನಗೆ ಬೇಜಾರು ಆಗುತ್ತಾ ಇದೆ. ನನಗೆನೋ ಸಾನ್ಯಾಗೆ ಹೇಳಬೇಕು ಎನಿಸುತ್ತಿದೆ. ನಿನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು ಏನಾದರೂ ಮಾಡಬೇಕು ಎನಿಸುತ್ತಿದೆ ಎಂದು ರೂಪೇಶ್ ಹೇಳಿದಾಗ, ಒಂದು ಅವನು ತಾನಾಗಿ ಅರ್ಥ ಆಗಬೇಕು. ಇಲ್ಲ ಅವಳಿಗೆ ಅರ್ಥ ಆಗಬೇಕು. ನಾನು ಈ ದೃಶ್ಯವನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದೇನೆ. ಈಗ ಹೊರಗಡೆಯೂ ಈ ರೀತಿ ಆಗಬಹುದು. ನಾನು ಆ ಹುಡುಗಿಯರ ಬಳಿ ಹೋಗುವುದಕ್ಕೆ ಆಗಲ್ಲ. ನಾನು ಸರಿ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾಳೆ.
ಒಂದು ಕಡೆ ಅವನು ನಿನ್ನ ಬಾಯ್ ಫ್ರೆಂಡ್, ಇನ್ನೊಂದು ಕಡೆ ಇವಳು ನಿನ್ನ ಬೆಸ್ಟ್ ಫ್ರೆಂಡ್ ಇದೆ ಆಗುತ್ತಾ ಇರೋದು ಎಂದು ರೂಪೇಶ್ ಸಮಾಧಾನ ಅಷ್ಟರಲ್ಲಿ ಅಲ್ಲಿ ಬಂದ ಸಾನ್ಯಾ, ಜಶ್ವಂತ್ ಬಂದು ಹಳೆಯ ಶೋ ಬಗ್ಗೆ ಮಾತು ಪ್ರಾರಂಭಿಸುತ್ತಾರೆ. ರೋಡೀಸ್‍ನಲ್ಲಿದ್ದಾಗಲೂ ತುಂಬಾ ಟ್ರೈ ಮಾಡಿದ್ದೀನಿ. ಆ ಶೋನಿಂದ ಅವರ ಫ್ಯಾಮಿಲಿಯಲ್ಲಿ ನಿನ್ನ ಬಗ್ಗೆ ಬ್ಯಾಡ್ ಓಪಿನಿಯನ್ ಇತ್ತಂತೆ. ಅದನ್ನು ಇನ್ನೂ ಜಾಸ್ತಿ ಮಾಡುವುದಕ್ಕೆ ಇಷ್ಟ ಇಲ್ಲ ಎಂದಿದ್ದ ಎಂದು ಜಶ್ವಂತ್ ಬಗ್ಗೆ ಹೇಳಿದ್ದಾಳೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?
ಆಗ ಮಾತನಾಡಿದ ನಂದಿನಿ, ಫ್ಯಾಮಿಲಿ ಪ್ರೆಶರ್ ಇದೆ. ಇಬ್ಬರಿಗೂ ಫ್ಯಾಮಿಲಿನೇ ಫಸ್ಟ್. ಹಾಗಂತ ನನ್ನ ಜೊತೆ ಇದ್ದ ಕಂಫರ್ಟ್ ಬೇರೆಯವರ ಜೊತೆ ಇದ್ದರೆ ಹೆಂಗ್ ಅನಿಸಿತ್ತೆ ಅಂತ ಇನ್ ಡೈರೆಕ್ಟ್ ಆಗಿ ಸಾನ್ಯಾಗೆ ತಿರುಗೇಟು ನೀಡಿದ್ದಾಳೆ. ಇಲ್ಲಿ ನಾವೂ ಸ್ಟ್ರಾಂಗ್ ಆಗಿ ಇದ್ದರೆ ಅವರನ್ನು ಒಪ್ಪಿಸಬಹುದು. ಎಂಡ್ ಆಫ್ ದಿ ಡೇ ಅವರಿಗೆ ಬೇಕಾಗಿರುವುದು ಏನು ಮಗ ಹ್ಯಾಪಿಯಾಗಿರಬೇಕು. ಹ್ಯಾಪಿಯಾಗಿ ನಾನು ಇಟ್ಟುಕೊಳ್ಳುತ್ತೇನೆ ಎಂದಿದ್ದಾಳೆ.
ತಡರಾತ್ರಿಯಾದರೂ ಹೀಗೆ ಮುಂದುವರಿದ ಮಾತುಕತೆಯಲ್ಲಿ ನಂದಿನಿ ಡೈರೆಕ್ಟ್ ಆಗಿ ಸಾನ್ಯಾಗೆ ಹೇಳಿದ್ದಾಳೆ. ನಾವಿಬ್ಬರೆ ಡಿಫಿಕಲ್ಟ್ ಮಾಡಿಕೊಳ್ಳುತ್ತಾ ಇದ್ದೀವಿ. ನಾನೇನಾದರೂ ರೂಪಿ ಜೊತೆ ಮಾತನಾಡುವಾಗ ಜಶುನ ಕರೀತಿನಿ. ಆದರೆ ನೀವಿಬ್ಬರು ಮಾತನಾಡುವಾಗ ನಂಗೆ ಆ ಫೀಲ್ ಬರುತ್ತಾ ಇಲ್ಲ. ನೀವಿಬ್ಬರು ಮಾತನಾಡುವಾಗ ಬರಬೇಕು ಎನಿಸುತ್ತಿಲ್ಲ. ಇಟ್ಸ್ ಓಕೆ ಏನಾದರೂ ಮಾತನಾಡಿಕೊಳ್ಳಲಿ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೀನಿ ಅಂದಿದ್ದಾಳೆ. ಇಬ್ಬರು ಒಂದು ಹಗ್‍ನಲ್ಲಿ ಮಾತುಕತೆ ಮುಗಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ದೊಡ್ಮನೆಯಲ್ಲಿ ಈಗ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ. ಸ್ಪರ್ಧಿಗಳು ತಮ್ಮ ಯೋಚನೆಗೆ ಸರಿಹೋಗುವವರ ಜತೆ ಫ್ರೆಂಡ್ಸ್ ಮಾಡಿಕೊಂಡು, ಕೊಟ್ಟ ಟಾಸ್ಕ್ ಅನ್ನು ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿರುವ ಗೆಳೆತನವೆಂದರೆ ಸಾನ್ಯ ಮತ್ತು ರೂಪೇಶ್ ಜೋಡಿ. ಇದೀಗ ಮನೆಯಲ್ಲಿ ಇಬ್ಬರು ಮನಬಿಚ್ಚಿ ಮಾತನಾಡಿದ್ದಾರೆ.
ಬಿಗ್ ಬಾಸ್‌ನಲ್ಲಿ ಸಾನ್ಯಾ ಜತೆಗೆ ರೂಪೇಶ್‌ಗೆ ಉತ್ತಮ ಬಾಂಧವ್ಯ ಬೆಳೆದಿದೆ. ಈ ಬಗ್ಗೆ ಅವರು ಪರಸ್ಪರ ಮಾತನಾಡಿಕೊಂಡಿದ್ದಾರೆ. ಒಂದು ವೇಳೆ ನಿನ್ನ ಸಪೋರ್ಟ್ ಇಲ್ಲದೇ ಇದ್ದಿದ್ದರೆ ನಾನು ಕಳೆದುಹೋಗುತ್ತಿದ್ದೆ. ನನಗೆ ತುಂಬ ಕಷ್ಟ ಆಗುತ್ತಿತ್ತು. ನೀನು ನನಗೆ ಫ್ರೆಂಡ್ ಆದೆ. ಅದಕ್ಕೆ ಧನ್ಯವಾದ ಎಂದು ರೂಪೇಶ್ ಹೇಳಿದ್ದಾರೆ. ಅದನ್ನು ಕೇಳಿ ಸಾನ್ಯಾ ಕೂಡ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್
ತುಂಬಾ ಕ್ಲೋಸ್ ಆಗಿ ಕುಳಿತುಕೊಂಡು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್, ಸಾನ್ಯ ಬಳಿ ಹೇಳಿಕೊಂಡಿದ್ದಾರೆ. ನನಗೆ ಹುಡುಗರು ತುಂಬ ಫ್ರೆಂಡ್ಸ್ ಇದ್ದಾರೆ. ಆದರೆ ಹುಡುಗಿಯರಲ್ಲಿ ಯಾರೂ ಇಲ್ಲ. ನಿನ್ನ ಲಿಸ್ಟ್‌ನಲ್ಲಿ ನನ್ನನ್ನು ಮೊದಲಿಗೆ ಇಡು. ಯಾವುದೇ ಸಂದರ್ಭದಲ್ಲಿ ನಿನಗೆ ಸಹಾಯ ಬೇಕೆಂದರೂ ನನಗೆ ಫೋನ್ ಮಾಡು. ಎಷ್ಟೇ ಬ್ಯುಸಿ ಇದ್ದರೂ ನಾನು ಬರ್ತೀನಿ ಎಂದು ರೂಪೇಶ್ ಹೇಳಿದ್ದಾರೆ.
ಇಷ್ಟೆಲ್ಲ ಕೇಳಿಸಿಕೊಂಡು ಸಾನ್ಯಾ ಅಯ್ಯರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನ ಜೊತೆ ಇದ್ದಾಗ ನಾನು ಬೇರೆಯದೇ ರೀತಿಯ ಕಂಫರ್ಟ್ ಝೋನ್‌ನಲ್ಲಿರುತ್ತೇನೆ. ನಾನು ಏನು ಹೇಳಿದರೂ ನೀನು ಜಡ್ಜ್ ಮಾಡಲ್ಲ ಅಂತ ನನಗೆ ಗೊತ್ತು ಎಂದಿದ್ದಾರೆ ಸಾನ್ಯಾ. ನಾನು ಯಾವುದೇ ಹುಡುಗಿಯ ಮೇಲೆ ಅಪ್ಪಿತಪ್ಪಿಯೂ ಕೈ ಹಾಕಲ್ಲ. ನಂದಿನಿ ಮೈ ಸ್ವಲ್ಪ ಟಚ್ ಆದರೂ ನಾನು ಸಾರಿ ಎನ್ನುತ್ತೇನೆ ಎಂದು ರೂಪೇಶ್ ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ, ರೂಪೇಶ್ ಆಯ್ಕೆಯಾಗಿದ್ದಾರೆ. ಈ ಗೆಲುವನ್ನ ಸಾನ್ಯ ಕೂಡ ಮನಸಾರೆ ಹಾರೈಸಿ, ಖುಷಿಪಟ್ಟಿದ್ದರು.
ಹಲವು ಟ್ವಿಸ್ಟ್‌ಗಳಿಂದ ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಹೊರ ನಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯಲ್ಲಿ ಈ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ ತಮ್ಮ ತಮ್ಮ ಯೋಚನಾ ಲಹರಿಗೆ ಮ್ಯಾಚ್ ಆಗುವವರನ್ನು ಫ್ರೆಂಡ್ಸ್ ಮಾಡಿಕೊಂಡಿಕೊಂಡಿದ್ದಾರೆ. ಇದೀಗ ಸಾನ್ಯ ಜೊತೆಗಿನ ಜಶ್ವಂತ್ ಫ್ರೆಂಡ್‌ಶಿಪ್ ನಂದು ಮುನಿಸಿಗೆ ಕಾರಣವಾಗಿದೆ.
ದೊಡ್ಮನೆಯಲ್ಲಿ ಸಾನ್ಯ, ರೂಪೇಶ್, ನಂದು, ಜಶ್ವಂತ್, ಒಂದು ಟೀಂ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುವಾಗ ಜೋಡಿಯಾಗಿಯೇ ಬಂದಿದ್ದ ನಂದು ಮತ್ತು ಜಶ್ವಂತ್ ನಡುವೆ ಇದೀಗ ಮನಸ್ತಾಪ ಉಂಟಾಗಿದೆ. ಸಾನ್ಯ ಜತೆ ಜಶ್ವಂತ್ ಕ್ಲೋಸ್ ಆಗಿ ಮೂವ್ ಆಗಿರೋದನ್ನ ನೋಡಿ, ನಂದು ತನ್ನ ಬಾಯ್‌ಫ್ರೆಂಡ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾನ್ಯ ಮತ್ತು ರೂಪೇಶ್ ಕಪಲ್ ಆಗಿರೋದ ಅಥವಾ ನಾವು ಕಪಲ್ ಆ ಎಂದು ಜಶ್ವಂತ್ ಜತೆ ನಂದು ಮಾತನಾಡಿದ್ದಾರೆ. ಸಾನ್ಯ ಜೊತೆ ಸಖತ್ ಸಲಿಗೆಯಿಂದ ಇರೋದನ್ನ ನೋಡಿ, ನೋಡುವವರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ನೀವು ರೀತಿ ಕಾಣಿಸಿಕೊಳ್ಳಬೇಡಿ ಎಂದು ನಂದು ಜಶ್ವಂತ್‌ಗೆ ಹೇಳಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ
ಈ ವೇಳೆ ನೀನು ರೂಪೇಶ್ ಜತೆ ಕ್ಲೋಸ್ ಆಗಿದ್ಯಾ ಆದರೆ ನನಗೇನು ಸಮಸ್ಯೆ ಇಲ್ಲ ಎಂಬ ಜಶ್ವಂತ್ ಮಾತನಾಡಿದ್ದಾರೆ. ಈಗ ಎನು ಪ್ರೂವ್ ಮಾಡೋಕೆ ಟ್ರೈ ಮಾಡುತ್ತಿದ್ಯಾ ಎಂದು ನಂದು ಜಶ್ವಂತ್ ವಿರುದ್ಧ ಫುಲ್ ಗರಂ ಆಗಿದ್ದಾರೆ. ಸಾನ್ಯ ಜೊತೆಗಿನ ಜಶ್ವಂತ್ ಅತಿಯಾದ ಸಲುಗೆ ನೋಡಿ ನಂದು ಕಣ್ಣೀರು ಹಾಕಿದ್ದಾರೆ. ಜಶ್ವಂತ್ ಮತ್ತು ಸಾನ್ಯ ಫ್ರೆಂಡ್‌ಶಿಪ್ ಇದೀಗ ನಂದು ನಿದ್ದೆಗೆಡಿಸಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೊಡ್ಮನೆ ಇದೀಗ ಸಾಕಷ್ಟು ವಿಚಾರವಾಗಿ ಸೌಂಡ್ ಮಾಡುತ್ತಿದೆ. ಇನ್ನು ವಾರಾಂತ್ಯದ ಕಿಚ್ಚನ ಎಂಟ್ರಿಯ ಜೊತೆಗೆ ವೀಕೆಂಡ್‌ನಲ್ಲಿ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬ ವಿಷ್ಯವಾಗಿ ಕೂಡ ಫ್ಯಾನ್ಸ್ ಕ್ಯೂರಿಯಸ್ ಆಗಿರುತ್ತಾರೆ. ಇದೀಗ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಉದಯ್ ಸೂರ್ಯ ಮನೆಯಿಂದ ಹೊರ ಬಂದಿದ್ದಾರೆ.
ಪ್ರತಿ ವಾರವೂ ಮನೆಯಿಂದ ಒಬ್ಬಬ್ಬರೆ ಮನೆಯಿಂದ ಹೊರ ಬರುತ್ತಾರೆ. ಆರು ವಾರವಿರುವ ಈ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ಇದೀಗ ಉದಯ್ ಸೂರ್ಯ ಔಟ್ ಆಗಿದ್ದಾರೆ. ಮನೆಯಲ್ಲಿ ಇರುವಂತಹ ರೀತಿ, ವಾರದ ಪರ್ಫಾಮೆನ್ಸ್, ಆಡಿರುವ ಮಾತು ಎಲ್ಲಾ ಗಣನೆಗೆ ತೆಗೆದುಕೊಂಡು ಓರ್ವ ಸ್ಪರ್ಧಿಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತದೆ. ಈ ವಾರ ಮನೆಯಿಂದ ಉದಯ್ ಸೂರ್ಯ ಹೊರ ನಡೆದಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಗೆ ವಾರ್ನ್ ಮಾಡಿ ಕ್ಷಮೆ ಕೇಳು ಎಂದ ಗಟ್ಟಿಗಿತ್ತಿ ಸೋನು ಶ್ರೀನಿವಾಸ್ ಗೌಡ
ಇತ್ತೀಚಿನ ಎಪಿಸೋಡ್‌ನಲ್ಲಿ ಉದಯ್ ಸೂರ್ಯ, ಸಾನ್ಯ ಮತ್ತು ಜಶ್ವಂತ್ ಹಾಗೂ ರೂಪೇಶ್ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿರುತ್ತಾರೆ. ಬಳಿಕ ಈ ವಿಚಾರವೇ ಮನೆಯ ಚರ್ಚೆಗೆ ಕಾರಣವಾಗಿತ್ತು. ಉದಯ್ ನಡೆಗೆ ಮನೆಯ ಮಂದಿ ಛೀಮಾರಿ ಹಾಕಿದ್ದರು. ಉದಯ್ ಆಡಿರುವ ಮಾತೇ ಅವರಿಗೆ ಮುಳುವಾಗಿದೆ. ಇದೀಗ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯ ಆಟ ಉದಯ್‌ಗೆ ಅಂತ್ಯವಾಗಿದೆ.
Live Tv
[brid partner=56869869 player=32851 video=960834 autoplay=true]