Tag: Sanvi Sudeep

  • ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್‌ಗೆ (Varalaxmi Sarathkumar) ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್ ಪತ್ನಿ ಪ್ರಿಯಾ (Priya) ಹಾಗೂ ಮಗಳು ಸಾನ್ವಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿತ್ತಾ ತರುಣ್ ಸುಧೀರ್ ಚಿತ್ರತಂಡ?- ಅರಣ್ಯಾಧಿಕಾರಿ ಹೇಳೋದೇನು?

    ವರಲಕ್ಷ್ಮಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ನಡೆದಿದ್ದು, ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ.  ಈ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಭಾಗಿಯಾಗಿ ನಟಿಗೆ ಶುಭಕೋರಿದ್ದಾರೆ.

    ಅಂದಹಾಗೆ, ಮಾಣಿಕ್ಯ, ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿರೋ ವರಲಕ್ಷ್ಮಿಗೆ ನಟನ ಕುಟುಂಬದ ಜೊತೆ ಉತ್ತಮ ಒಡನಾಟವಿದೆ. ಕಳೆದ ವರ್ಷ ಹಸೆಮಣೆ ಏರಿದ ವರಲಕ್ಷ್ಮಿ ಮದುವೆಗೆ ಸುದೀಪ್ ಹಾಗೂ ಪತ್ನಿ ಹಾಜರಿ ಹಾಕಿದ್ದರು.

  • ತೆಲುಗಿನ ಸಂಗೀತ ನಿರ್ದೇಶಕ ತಮನ್‌ರನ್ನು ಭೇಟಿಯಾದ ಸುದೀಪ್ ಪುತ್ರಿ

    ತೆಲುಗಿನ ಸಂಗೀತ ನಿರ್ದೇಶಕ ತಮನ್‌ರನ್ನು ಭೇಟಿಯಾದ ಸುದೀಪ್ ಪುತ್ರಿ

    ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ಪುತ್ರಿ ಸಾನ್ವಿ ಸುದ್ದಿಯಲ್ಲಿದ್ದಾರೆ. ತೆಲುಗಿನ ಮ್ಯೂಸಿಕ್ ಡೈರೆಕ್ಟರ್ ತಮನ್‌ರನ್ನು (Music Director Thaman) ಸಾನ್ವಿ ಭೇಟಿಯಾಗಿದ್ದಾರೆ. ನೆಚ್ಚಿನ ಸಂಗೀತ ನಿರ್ದೇಶಕನನ್ನು ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ತಮನ್ ಎಸ್. ಅವರ ಸಂಗೀತ ನನಗಿಷ್ಟ. ಇವರ ಹಾಡುಗಳನ್ನು ತುಂಬಾನೇ ಕೇಳಿದ್ದೇನೆ. ಅವುಗಳಲ್ಲಿ ಎಲ್ಲವೂ ಇಷ್ಟ. ಆದರೆ ಇಲ್ಲಿಯವರೆಗೂ ಅವರನ್ನು ಭೇಟಿಯಾಗಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಒಂದಲ್ಲ ಒಂದು ದಿನ ನಿಮ್ಮ ಜೊತೆ ಕೆಲಸ ಮಾಡುವ ಕನಸಿದೆ. ನಿಮ್ಮನ್ನು ಭೇಟಿಯಾಗಿರೋದು ಕನಸು ನನಸಾದಂತೆ ಆಗಿದೆ. ನಿಮ್ಮ ಬೆಂಬಲದ ಮಾತುಗಳು ಖುಷಿ ಕೊಟ್ಟಿದೆ ಎಂದು ಸಾನ್ವಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಣ್ಣಾವ್ರ ಹುಟ್ಟುಹಬ್ಬದಂದು ಹೊಸ ಉದ್ಯಮದತ್ತ ಅಶ್ವಿನಿ

    ಸುದೀಪ್ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ರೆ, ಮಗಳು ಗಾಯಕಿಯಾಗಿ ಗುರುತಿಸಿಕೊಳ್ಳುವ ಹಂತದಲ್ಲಿದ್ದಾರೆ. ಅದ್ಭುತವಾಗಿ ಹಾಡುವ ಸಾನ್ವಿ ಇದೀಗ ‘ಜಿಮ್ಮಿ’ ಸಿನಿಮಾದ ಮೂಲಕ ಗಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ.

  • Bigg Boss: ಫಿನಾಲೆಯಲ್ಲಿ ಅಪ್ಪ, ಮಗಳ ಸ್ಪೆಷಲ್‌ ಫೋಟೋಶೂಟ್‌

    Bigg Boss: ಫಿನಾಲೆಯಲ್ಲಿ ಅಪ್ಪ, ಮಗಳ ಸ್ಪೆಷಲ್‌ ಫೋಟೋಶೂಟ್‌

    ಸ್ಯಾಂಡಲ್‌ವುಡ್ ಸ್ಟಾರ್‌ನಟ ಸುದೀಪ್ ಪುತ್ರಿ ಸಾನ್ವಿ ಸುದೀಪ್ (Sanvi Sudeep) ಅವರ ಹೊಸ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ‘ಬಿಗ್ ಬಾಸ್ ಫಿನಾಲೆ’ (Bigg Boss Finale) ದಿನ ತಂದೆ ಜೊತೆಗೆ ಕ್ಲಿಕ್ಕಿಸಿಕೊಂಡ ಸ್ಪೆಷಲ್ ಫೋಟೋವೊಂದನ್ನು ಸಾನ್ವಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಒಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾ ಹನುಮಾನ್: ಯಾವಾಗ? ಎಲ್ಲಿ?

     

    View this post on Instagram

     

    A post shared by Sanvi Sudeep (@sanvisudeepofficial)

    ಬಿಗ್ ಬಾಸ್ ಕನ್ನಡ 10ರ ಶೋಗೆ ಅದ್ಧೂರಿಯಾಗಿ ತೆರೆಬಿದ್ದಿದೆ. ಬಿಗ್ ಬಾಸ್ ಶೋನ ಶಕ್ತಿಯಾಗಿ 10 ವರ್ಷಗಳನ್ನು ಪೂರೈಸಿರೋ ಅಪ್ಪನಿಗೆ ‘ನಿಮ್ಮಂತೆ ಯಾರು ಅದನ್ನು ಮಾಡಲು ಸಾಧ್ಯವಿಲ್ಲ’ ಎಂದು ಸಾನ್ವಿ ಹಾಡಿಹೊಗಳಿದ್ದಾರೆ. ಹಾಗೆಯೇ ಅಪ್ಪನ ಜೊತೆಗಿನ ಸ್ಪೆಷಲ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Sanvi Sudeep (@sanvisudeepofficial)

    ಬಿಗ್ ಬಾಸ್ ಫಿನಾಲೆ ದಿನ ಸುದೀಪ್ (Sudeep) ಇದೇ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ, ಪುತ್ರಿ ಸಾನ್ವಿ ಕೂಡ ಆಗಮಿಸಿದ್ದರು. ಇದನ್ನೂ ಓದಿ:‘ಪುಷ್ಪ 2’ ಬಿಡುಗಡೆಗೆ 200 ದಿನವಷ್ಟೇ ಬಾಕಿ

    10 ವರ್ಷಗಳ ಕಾಲ ಸುದೀಪ್ ಅವರು ಬಿಗ್ ಬಾಸ್ (Bigg Boss) ತಂಡಕ್ಕೆ ಸಾಥ್ ನೀಡಿದಕ್ಕಾಗಿ ವಿಶೇಷವಾಗಿ ವಾಹಿನಿ ಫಿನಾಲೆ ದಿನ ಧನ್ಯವಾದ ತಿಳಿಸಿತ್ತು. ಅವರ ಸಲಹೆ ಮತ್ತು ಮಾರ್ಗದರ್ಶನದಿಂದ ಶೋ ಗೆಲ್ಲಲ್ಲು ಕಾರಣವಾಯ್ತು ಎಂದು ವಾಹಿನಿ ವಿಶೇಷ ಗೌರವವನ್ನು ಅರ್ಪಿಸಿತ್ತು. ಅಂದಹಾಗೆ ಈ ಬಾರಿ, ‌’ಬಿಗ್‌ ಬಾಸ್ ಸೀಸನ್ 10’ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ.

  • ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ನಟನ ಎಂಟ್ರಿ

    ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ನಟನ ಎಂಟ್ರಿ

    ಸ್ಯಾಂಡಲ್‌ವುಡ್‌ ಸ್ಟಾರ್ ನಟ ಕಿಚ್ಚ ಸುದೀಪ್ (Kichacha Sudeep) ಅವರ ಕುಟುಂಬದಿಂದ ಮತ್ತೊಬ್ಬ ಪ್ರತಿಭೆಯ ಎಂಟ್ರಿಯಾಗಿದೆ. ‘ಜಿಮ್ಮಿʼ (Jimmy)ಯಾಗಿ ಸಂಚಿತ್ ಸಂಜೀವ್ ಚಂದನವನದ ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

    ಕಿಚ್ಚ ಸುದೀಪ್ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev) ಅವರು ನಟನಾಗಿ ಮಿಂಚಬೇಕು ಎಂಬ ಕನಸನ್ನ ಕಟ್ಟಿಕೊಂಡು ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಸಂಚಿತ್ ಚೊಚ್ಚಲ ಸಿನಿಮಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿಚ್ಚ ಸುದೀಪ್, ಶಿವಣ್ಣ ಹಾಗೂ ರವಿಚಂದ್ರನ್ ಭಾಗಿಯಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಹಾಗೂ ಶಾಸಕ ಮುನಿರತ್ನ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಸಂಚಿತ್ ನಟನೆ, ನಿರ್ದೇಶನ ಮೊದಲ ಸಿನಿಮಾಗೆ ಪ್ರಿಯಾ ಸುದೀಪ್ (Priya Sudeep), ಲಹರಿ ಸಂಸ್ಥೆ (Lahari) ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡ್ತಿದ್ದಾರೆ. ಸಕಲ ತಯಾರಿ ಮಾಡಿಕೊಂಡೆ ಮಾವನ ದಾರಿಯಲ್ಲೇ ಸಂಚಿತ್ ಸಿನಿ ದುನಿಯಾಗೆ ಪಾದಾರ್ಪಣೆ ಮಾಡ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸಂಚಿತ್ ಲಾಂಚಿಂಗ್ ‘ಜಿಮ್ಮಿ’ ಚಿತ್ರದಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ‘ಜಿಮ್ಮಿ’ ಚಿತ್ರದ ಟೈಟಲ್ ಲಾಂಚ್ ವೇಳೆ ಲೈವ್ ಪರ್ಫಾಮೆನ್ಸ್ ನೀಡಿ ಸಾನ್ವಿ ಮೆಚ್ಚುಗೆ ಗಳಿಸಿದರು. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಸಾನ್ವಿ ಹಿನ್ನೆಲೆ ಗಾಯನ ಮಾಡಿದರು.

    ಜಿಮ್ಮಿ ಇದೊಂದು ಕ್ರೈಂ-ಡ್ರಾಮಾ ಕಥೆಯಾಗಿದ್ದು, ತಂದೆ ಮಗನ ಸೆಂಟಿಮೆಂಟ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಸುದೀಪ್ ಸಲಹೆಯಂತೆ ಸಂಚಿತ್ ತಯಾರಿ ಮಾಡಿಕೊಂಡಿದ್ದು, ಬಹುತೇಕ ಹೊಸಬರೇ ಕೂಡಿಕೊಂಡಿರುವ ಚಿತ್ರತಂಡ ಇದಾಗಿದೆ. ಒಟ್ಟಿನಲ್ಲಿ ಸುದೀಪ್ ಕುಟುಂಬದಿಂದ ಮತ್ತೊಬ್ಬ ನಟನ ಎಂಟ್ರಿಯಾಗುತ್ತಿರೋದು ಕಿಚ್ಚ ಫ್ಯಾನ್ಸ್ ಖುಷಿ ಕೊಟ್ಟಿದೆ.

  • ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

    ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

    ಸ್ಯಾಂಡಲ್‌ವುಡ್ (Sandalwood) ನಟ ಸುದೀಪ್ ಪುತ್ರಿ ಸಾನ್ವಿ (Sanvi Sudeep) ಇದೀಗ ಸುದ್ದಿಯಲ್ಲಿದ್ದಾರೆ. ತನ್ನ ಕ್ರಶ್ ಮದುವೆ ಮಾಡಿಕೊಂಡಿದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್ ಮೇಲೆ ಹುಡುಗಿಯರಿಗೆ ಕ್ರಶ್ ಆಗಿದ್ದರೆ, ಸುದೀಪ್ ಮಗಳಿಗೆ ಈ ಸ್ಟಾರ್ ನಟನ ಮೇಲೆ ಕ್ರಶ್ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

     

    View this post on Instagram

     

    A post shared by Sanvi Sudeep (@sanvisudeepofficial)

    ಕನ್ನಡ ಮತ್ತು ಸೌತ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಕಿಚ್ಚ ಸುದೀಪ್‌ಗೆ (Kiccha Sudeep) ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ ಹುಡುಗಿರ ಫ್ಯಾನ್ ಬೇಸ್ ಜಾಸ್ತಿಯೇ ಇದೆ. ಹುಡುಗಿಯರ ಕ್ರಶ್ ಆಗಿರುವ ಕಿಚ್ಚನ ಮೇಲೆ ಎಲ್ಲರೂ ಕಣ್ಣೀಟ್ಟರೇ, ಇಲ್ಲಿ ಸುದೀಪ್ ಪುತ್ರಿಗೆ ಬಾಲಿವುಡ್ (Bollywood) ನಟನ (Actor) ಮೇಲೆ ಕ್ರಶ್ ಆಗಿದೆ.

    ಎಲ್ಲರಿಗೂ ಒಬ್ಬರು ಕ್ರಶ್ ಇದ್ದೇ ಇರುತ್ತಾರೆ. ಇದೇ ನಟ, ಇದೇ ನಟಿ ಅಂದ್ರೆ ಭಾರೀ ಇಷ್ಟ ಅನ್ನೋ ಕ್ರೇಜ್ ಎಲ್ಲರಲ್ಲೂ ಇರುತ್ತದೆ. ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ದರು. ಬಾಲಿವುಡ್ ನಟ ಸಿದ್ಧಾರ್ಥ್‌ ಮೇಲೆ ಸಾನ್ವಿ ಕ್ರಶ್ ಆಗಿದ್ದು, ಅವರು ಕಿಯಾರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದ್ದಕ್ಕೆ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಿದ್-ಕಿಯಾರಾ ಮದುವೆ ಫೋಟೋ ಶೇರ್ ಮಾಡಿ ಅಳುವ ಇಮೋಜಿಯನ್ನ ಸಾನ್ವಿ ಹಾಕಿದ್ದರು. ಈ ಮೂಲಕ ಸುದೀಪ್ ಪುತ್ರಿ ಸಾನ್ವಿ ತಮ್ಮ ಕ್ರಶ್ ಯಾರು ಎಂಬುದನ್ನ ರಿವೀಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ಅವರ ಪುತ್ರಿ ಸಾನ್ವಿ ಅವರು ತಮ್ಮ ನೆಚ್ಚಿನ ನಟನಿಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಪ್ರೀತಿಯಿಂದ ವಿಶ್ ಮಾಡಿ ಸುದ್ದಿಯಾಗಿದ್ದಾರೆ.

    ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ಇಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ನೆಚ್ಚಿನ ನಟನಿಗೆ ಸಾನ್ವಿ ಸುದೀಪ್‍ಗೆ, ಬಾಲಿವುಡ್ ಸಿದ್ಧಾರ್ಥ್ ಎಂದರೆ ಬಲು ಇಷ್ಟ. ಹೀಗಾಗಿ ತುಂಬಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

    ಸಾನ್ವಿ ಅವರು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಫೋಟೋವನ್ನು ಶೇಋ ಮಾಡಿ ‘ ಹ್ಯಾಪಿ ಬರ್ತ್‍ಡೇ ಟು ಮೈ ಲವ್ ಎಂದು ಬರೆದುಕೊಂಡಿದ್ದಾರೆ. ಸಾನ್ವಿ ಹಲವು ಬಾರಿ ಸಿದ್ಧಾರ್ಥ್ ಅವರ ಫೋಟೋ ವೀಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಸಿದ್ಧಾರ್ಥ್ ಅವರಿಗೆ ಬಾಲಿವುಡ್ ಸೆಲೆಬ್ರೆಟಿಗಳು ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

  • ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದರೆ ಪ್ರೀತಿಯ ಅಪ್ಪ, ಅಮ್ಮಗೆ ಮಗಳು ಸಾನ್ವಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.

    sudeep priya

    ಸುದೀಪ್ ಹಾಗೂ ಪ್ರಿಯಾ 2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2004ರಲ್ಲಿ ಈ ದಂಪತಿಗೆ ಸಾನ್ವಿ ಜನಿಸಿದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 20 ವರ್ಷ ಕಳೆದಿದ್ದು, ಈ ಹಿನ್ನೆಲೆ ಸಾನ್ವಿ ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಹಾಗೂ ಪ್ರಿಯಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:  ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನ್ವಿ ಅಪ್ಪ, ಅಮ್ಮನ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕಿಚ್ಚ ದಂಪತಿಗೆ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೂ ಓದಿ:  ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?

     

    View this post on Instagram

     

    A post shared by Only Sudeepism (@only_sudeepism)

    ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಮನೆಯಲ್ಲಿಯೇ ಸರಳವಾಗಿ ಸುದೀಪ್ ದಂಪತಿ ಕೇಕ್ ಕಟ್ ಮಾಡಿದ್ದು, ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು – ಮಗಳಿಗೆ ಕಿಚ್ಚನ ವಿಶ್

    ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು – ಮಗಳಿಗೆ ಕಿಚ್ಚನ ವಿಶ್

    – ಎದೆಯೆತ್ತರ ಬೆಳದಿರೋ ಕನಸು ನೀನು

    ಬೆಂಗಳೂರು: ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು ಎಂದು ವಿಶೇಷ ಬೇಡಿಕೆ ಇಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಮುದ್ದು ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಇಂದು 16ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಚಾರವಾಗಿ ಮಗಳಿಗಾಗಿ ಸ್ಪೆಷಲ್ ವಿಶ್ ಮಾಡಿರುವ ಕಿಚ್ಚ, ಎದೆಯೆತ್ತರ ಬೆಳದಿರೋ ಕನಸು ನೀನು ಎಂದು ಮಗಳನ್ನು ಹಾಡಿಹೊಗಳಿದ್ದಾರೆ.

    ಮಗಳ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, ನಿನ್ನೆ ಮೊನ್ನೆ ಇದ್ದ ಹಾಗಿದೆ. ಹೇಗಪ್ಪಾ ನಂಬೋದು ನನ್ನ ಮಗಳಿಗೀಗ ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು. ನಿನ್ನಿಂದಲೇ ಕಲಿಯುವ ಕೂಸು ನಾನು. ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು ಎಂದು ಬರೆದು ಮಗಳ ಸವಿನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರ ಮಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದು, ಕಿಚ್ಚ ಸುದೀಪ್, ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಇರುವ ಫೋಟೋವನ್ನು ಕಾಮನ್ ಡಿಪಿ ಆಗಿ ಬಳಸಿ ಶುಭಾಕೋರುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಮಗಳ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಕೂಡ ಕಮೆಂಟ್ ಮಾಡಿದ್ದು, ತನ್ನ ನೆಚ್ಚಿನ ನಟನ ಮಗಳಿಗೆ ಶುಭಾಶಯ ತಿಳಿಸಿ ಹರಸಿದ್ದಾರೆ.

    ಕಿಚ್ಚ ಸುದೀಪ್ ಅವರು 2001 ಅಕ್ಟೋಬರ್ 18ರಂದು ಪ್ರಿಯಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮದುವೆಯಾದ ಮೂರು ವರ್ಷದ ನಂತರ ಅಂದರೆ 2004 ಮೇ 20ರಂದು ಹೆಣ್ಣು ಮಗು ಜನಿಸುತ್ತದೆ. ಈ ಹೆಣ್ಣು ಮಗುವೇ ಸಾನ್ವಿ ಸುದೀಪ್. ಸಾನ್ವಿ ಹುಟ್ಟಿದಾಗ ಚಿತ್ರರಂಗದಲ್ಲಿ ಆಗ ತಾನೇ ಗುರುತಿಸಿಕೊಳ್ಳುತ್ತಿದ್ದ ಸುದೀಪ್ ಈಗ ಭಾರತದ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಜೊತೆಗೆ ಹಾಲಿವುಡ್‍ನಲ್ಲೂ ನಟಿಸುತ್ತಿದ್ದಾರೆ.

    ಈಗ ಸದ್ಯ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದೆ. ಈ ಸಿನಿಮಾದ ನಂತರ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

  • ಕಿಚ್ಚನನ್ನು ಬಿಟ್ಟು ಮಗಳ ಜೊತೆ ಟ್ರಿಪ್ ಹೋಗಿಬಂದ ಪ್ರಿಯಾ ಸುದೀಪ್!

    ಕಿಚ್ಚನನ್ನು ಬಿಟ್ಟು ಮಗಳ ಜೊತೆ ಟ್ರಿಪ್ ಹೋಗಿಬಂದ ಪ್ರಿಯಾ ಸುದೀಪ್!

    ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಬಿಟ್ಟು ಪತ್ನಿ ಪ್ರಿಯಾ ಸುದೀಪ್ ತನ್ನ ಮಗಳು ಸಾನ್ವಿ ಜೊತೆ ಮೇಘಾಲಯ ಟ್ರಿಪ್‍ಗೆ ಹೋಗಿ ಬಂದಿದ್ದಾರೆ. ಸದ್ಯ ಅವರು ಟ್ರಿಪ್‍ಗೆ ಹೋದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರಿಗೆ ಕಾರು- ಬೈಕ್‍ಗಳಂದರೆ ಎಲ್ಲಿಲ್ಲದ ಕ್ರೇಜ್. ನೆಚ್ಚಿನ ಕಾರು ಬೈಕ್‍ಗಳನ್ನು ಖರೀದಿಸುವ ಕಿಚ್ಚ, ಕಾರು ಇಲ್ಲವೇ ಬೈಕ್ ಏರಿ ನೆಚ್ಚಿನ ಅಡ್ಡಗಳಲ್ಲಿ ರೌಂಡ್ ಹೊಡೆದು ಎಂಜಾಯ್ ಮಾಡುತ್ತಾರೆ. ಆದರೆ ಪತ್ನಿ ಪ್ರಿಯಾ ಸುದೀಪ್ ಕೊಂಚ ಟೈಮ್ ಸಿಕ್ಕರೆ ಸಾಕು ತಮಗೆ ಇಷ್ಟವಾದ ಜಾಗಕ್ಕೆ ತನ್ನ ಮುದ್ದಿನ ಮಗಳು ಸಾನ್ವಿಯನ್ನು ಕರೆದುಕೊಂಡು ಹೋಗಿ ಬಿಡುತ್ತಾರೆ.

    ಪ್ರಿಯಾಗೆ ಟ್ರಿಪ್ ಹೋಗೋದೆಂದರೆ ತುಂಬಾನೇ ಇಷ್ಟ. ಪುತ್ರಿ ಸಾನ್ವಿಗೆ ಸ್ಕೂಲ್ ರಜೆಯಿದ್ದು, ಪ್ರಿಯಾ ಫ್ರೀಯಾಗಿದ್ದರೆ ಸಾಕು, ತಮ್ಮ ಇಷ್ಟದ ತಾಣಕ್ಕೆ ಹೋಗಿ ಸಖತ್ ಎಂಜಾಯ್ ಮಾಡುತ್ತಾರೆ. ಪ್ರಿಯಾ ಸುದೀಪ್ ಮೊದಲಿನಿಂದಲೂ ಸಾಹಸ ಟ್ರಿಪ್‍ಗಳನ್ನು ಇಷ್ಟಪಡುತ್ತಾರೆ.

    ಪ್ರಿಯಾ ಈಗ ಸುದೀಪ್‍ರನ್ನು ಬಿಟ್ಟು ಮೇಘಾಲಯಕ್ಕೆ ಹೋಗಿ ಬಂದಿದ್ದಾರೆ. ಮೇಘಾಲಯದ ರಮಣೀಯ ತಾಣಗಳ ಸೊಬಗನ್ನು ಸವಿಯುತ್ತಾ, ಟ್ರಕ್ಕಿಂಗ್ ಮಾಡಿರುವ ಪ್ರಿಯಾ, ಸೋಷಿಯಲ್ ಮೀಡಿಯಾದಲ್ಲಿ ಮೇಘಾಲಯದ `ಮೆಘಾ’ ಅನುಭವವನ್ನು ಶೇರ್ ಮಾಡಿದ್ದಾರೆ.

    ಇತ್ತೀಚೆಗೆ ಪತ್ನಿ ಪ್ರಿಯಾ ಹಾಗೂ ಸಾನ್ವಿಯನ್ನು ಕರೆದುಕೊಂಡು ಸುದೀಪ್ ಹಾಲಿಡೇ ಟ್ರಿಪ್ ಹೋಗಿದ್ದರು. ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಫ್ಯಾಮಿಲಿ ಜೊತೆ ಮಲೇಷಿಯಾಗೆ ಹಾರಿದ್ದರು. ಏರ್ ಬಲೂನ್ ಏರಿ ಮೈಂಡ್ ರಿಫ್ರೆಶ್ ಮಾಡಿಕೊಂಡು ಸುದೀಪ್ ಕುಟುಂಬ ಮತ್ತೆ ಸಿಲಿಕಾನ್ ಸಿಟಿಗೆ ವಾಪಾಸ್ ಆಗಿತ್ತು.

    ಹಿಮಾಲಯ, ಮಲೇಷಿಯಾ, ಮೇಘಾಲಯ ಈ ಮೂರು ಆಲಯಗಳಿಗೆ ಭೇಟಿ ಕೊಟ್ಟು ಪ್ರಿಯಾ ಸಖತ್ ಎಂಜಾಯ್ ಮಾಡಿದ್ದಾರೆ.