Tag: Santro

  • ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಬೆಂಗಳೂರು: ಸಿಲಿಕಾನ್‌ ಸಿಟಿ ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು (Bengaluru Rains), ಭಾರೀ ಅವಾಂತರಗಳನ್ನೂ ಸೃಷ್ಟಿಸಿದೆ. ಭಾರೀ ಮಳೆಗೆ ಆಕಾಶದೆತ್ತರಕ್ಕೆ ಬೆಳೆದಿದ್ದ ಮರಗಳು ನೆಲ ಕಚ್ಚಿವೆ. ಆಟೋ, ಕಾರು, ಮನೆಗಳ ಮೇಲೆ ಬಿದ್ದು ಜಖಂ ಆಗಿವೆ.

    ಬಸವೇಶ್ವರನಗರದ 17ನೇ ಕ್ರಾಸ್ ಬಳಿ ಮನೆ ಮುಂದೆ ಕಾರು ಪಾರ್ಕ್ ಮಾಡಿದ್ದ ಕಾರಿನ (Car) ಮೇಲೆ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿದೆ. ಮಳೆ ಬಂದು ನಿಂತರೂ ಹಲವೆಡೆ ಮನೆಯಲ್ಲೇ ಗೃಹಬಂಧನವಾಗಿ ಇರಬೇಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವೇಶ್ವರ ನಗರದ (Basaveshwaranagara) ಶಾರದಾ ಕಾಲೋನಿಯ ಬಳಿ ಬೃಹತ್ ಮರ ಮನೆ ಮೇಲೆ ಬಿದ್ದಿದೆ.

    ಬೃಹತ್‌ ಮರವೊಂದು ಎರಡಂತಸ್ತಿನ ಕಟ್ಟಡದ ಮೇಲೆ ಬಿದ್ದಿದೆ, ಜೊತೆಗೆ ಸ್ಯಾಂಟ್ರೋ ಕಾರಿನ ಮೇಲೆ ಬಿದ್ದು ಜಖಂ ಆಗಿದೆ. ರಸ್ತೆ ಉದ್ದಕ್ಕೂ ಏಳೆಂಟು ಮರಗಳು ಬಿದ್ದಿವೆ. ಇದನ್ನೂ ಓದಿ: Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ

    ನಗರದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೆಗಳು ಧರೆಗುರುಳಿವೆ. ಕರ್ನಾಟಕ ಲೇಔಟ್, ಬೆಮೆಲ್ ಲೇಔಟ್, ಕಿರ್ಲೋಸ್ಕರ್ ಕಾಲೋನಿ ಹಾಗೂ ಕುರುಬರಹಳ್ಳಿ ಮೇನ್ ರೋಡ್ ನಲ್ಲಿ ಮರಗಳು ಬಿದ್ದಿದ್ದು, ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಕಮಲಾನಗರದ ವಾಟರ್ ಟ್ಯಾಂಕ್ ಮುಖ್ಯ ರಸ್ತೆಯಲ್ಲಿಯೂ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ಕೆ. ಗೋಪಾಲಯ್ಯ ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬುರ್ಖಾ ವಿದ್ಯಾರ್ಥಿನಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ: ಪ್ರತಾಪ್‌ ಸಿಂಹ

  • ಮಾರುಕಟ್ಟೆಗೆ ಬಂದಿದೆ ಹೊಸ ಸ್ಯಾಂಟ್ರೋ- ಏನೇನು ವಿಶೇಷತೆಗಳಿವೆ? ಬದಲಾಗಿದ್ದು ಏನು? ಮೈಲೇಜ್ ಎಷ್ಟು?

    ಮಾರುಕಟ್ಟೆಗೆ ಬಂದಿದೆ ಹೊಸ ಸ್ಯಾಂಟ್ರೋ- ಏನೇನು ವಿಶೇಷತೆಗಳಿವೆ? ಬದಲಾಗಿದ್ದು ಏನು? ಮೈಲೇಜ್ ಎಷ್ಟು?

    ನವದೆಹಲಿ: ಒಂದೂವರೆ ದಶಕಗಳ ವರೆಗೆ ಮಧ್ಯಮ ಕುಟುಂಬದ ಪ್ರೀತಿಗೆ ಪಾತ್ರವಾಗಿದ್ದ ಹ್ಯುಂಡೈನ ಸ್ಯಾಂಟ್ರೋ ಈಗ ಮತ್ತೆ ಹೊಸ ಅವತರಣೆಯಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

    ಹೌದು, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಂಪೆನಿಯು, 1998 ರ ಸೆಪ್ಟೆಂಬರ್ 23 ರಲ್ಲಿ ತನ್ನ ಮೊದಲನೇ ಮಾದರಿಯ ಹ್ಯುಂಡೈ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯ ಬಳಿಕ ಸ್ಯಾಂಟ್ರೋ ಸುಮಾರು ಒಂದೂವರೆ ದಶಕಗಳವರೆಗೆ ಭಾರತದ ಮಾರುಕಟ್ಟೆಯಲ್ಲಿ ತನ್ನ ಆಧಿಪತ್ಯ ಸಾಧಿಸಿತ್ತು. ಅಲ್ಲದೇ ಮಧ್ಯಮ ಕುಟುಂಬದ ಪ್ರೀತಿಗೂ ಸಹ ಪಾತ್ರವಾಗಿತ್ತು. ಎಲ್ಲರೂ ಕ್ಯೂಟ್ ಫ್ಯಾಮಿಲಿಗೆ, ಕ್ಯೂಟ್ ಕಾರೆಂದೇ ಕರೆಯುತ್ತಿದ್ದರು. ಇದೀಗ ಹ್ಯುಂಡೈ ಮತ್ತೆ ನೂತನ ಅವತರಣೆಯಲ್ಲಿ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


    ನೂತನ ಸ್ಯಾಂಟ್ರೋ ಕಾರ್ ಹಳೆಯ ಸ್ಯಾಂಟ್ರೋಗಿಂತ ಸಂಪೂರ್ಣ ವಿಭಿನ್ನವಾಗಿದ್ದು, ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಅಲ್ಲದೇ ನೂತನ ಸ್ಯಾಂಟ್ರೋ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಟಾಟಾ ಟಿಯೋಗೋ, ಮಾರುತಿ ಸುಜುಕಿಯ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಸಹ ಹೇಳಲಾಗುತ್ತಿದೆ.

    ಹೊಸ ಸ್ಯಾಂಟ್ರೊ ಕಾರಿನ ವೈಶಿಷ್ಟ್ಯಗಳೇನು?
    ಎಂಜಿನ್ ಹಾಗೂ ಸಾಮರ್ಥ್ಯ:


    1.1 ಲೀಟರ್ ಪೆಟ್ರೋಲ್ ಎಪ್ಸಿಲಾನ್ ಶ್ರೇಣಿಯ 4 ಸಿಲಿಂಡರಿನ 1,086 ಸಿಸಿ ಎಂಜಿನ್ ಹೊಂದಿದ್ದು, 68 ಬಿಎಚ್‍ಪಿ, 99 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. 5 ಸ್ಪೀಡ್ ಎಂಟಿ(ಮ್ಯಾನುವಲ್ ಟ್ರಾನ್ಸ್‌ಮಿಷಿನ್) ಹಾಗೂ ಸ್ಮಾರ್ಟ್ ಎಎಂಟಿ(ಆಟೋಮ್ಯಾಟಿಕ್ ಟ್ರಾನ್ಸ್‌ಮಿಷಿನ್) ಹೊಂದಿದೆ. ಇದರ ಜೊತೆ 1.1 ಲೀಟರ್ ಸಿಎನ್‍ಜಿ ಎಂಜಿನ್ ಹೊಂದಿದ್ದು, 58 ಬಿಎಚ್‍ಪಿ ಹಾಗೂ 99 ಎನ್‍ಎಂ ಟಾರ್ಕ್ ಹೊಂದಿದೆ. ಇದರ ಜೊತೆ ಕಂಪನಿ ಫಿಟ್ಟೆಡ್ 8ಕೆಜಿಯ ಎಲ್‍ಪಿಜಿ ಗ್ಯಾಸ್ ಟ್ಯಾಂಕ್ ಕೂಡ ಇದೆ.

    ಸುತ್ತಳತೆ ಹಾಗೂ ಗ್ರೌಂಡ್ ಕ್ಲಿಯರೆನ್ಸ್:
    ಉದ್ದ 3,610 ಎಂಎಂ, ಅಗಲ 1,645 ಎಂಎಂ, ಎತ್ತರ 1,560 ಎಂಎಂ ಇದೆ. ವೀಲ್ ಬೇಸ್ 2,400 ಎಂಎಂ ಇದೆ. ಅಲ್ಲದೇ ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಇದೆ.

    ಸುರಕ್ಷತೆ:
    ಹೊಸ ಸ್ಯಾಂಟ್ರೋದ ಬಾಡಿಯನ್ನು ಬಲಿಷ್ಟ ಸ್ಟೀಲ್‍ನಿಂದ ರಚಿಸಲಾಗಿತ್ತು, ಶೇ.63 ರಷ್ಟು ಸಂರಚಚನೆಯನ್ನು ಹೊಂದಿದೆ. ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್‍ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ವ್ಯವಸ್ಥೆ ಇದೆ. ಮುಂಭಾಗದಲ್ಲಿ ಪ್ರಯಾಣಿಕ ಹಾಗೂ ಚಾಲಕನಿಗಾಗಿ ಎರಡು ಫ್ರಂಟ್ ಏರ್‍ಬ್ಯಾಗ್ ನ್ನು ಸಹ ಹೊಂದಿದೆ.

    ಹೊರ ವಿನ್ಯಾಸ:
    ಬಾಡಿ ಕಲರ್ಡ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಟೋನ್ ಬಂಪರ್, ಪವರ್ ವಿಂಡೋಸ್, ಮೈಕ್ರೋ ಆ್ಯಂಟಿನಾ, ಆರ್14 ಸ್ಟೀಲ್ ವೀಲ್ ಜೊತೆ ವೀಲ್ ಕವರ್, ಹಾಗೂ 14 ಇಂಚ್ ಅಲಾಯ್ ವೀಲ್, ಕೀಲೆಸ್ ಎಂಟ್ರಿ, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್ ಹೊಂದಿದೆ.

    ಒಳ ವಿನ್ಯಾಸ:
    ವಿಶಾಲ ಹಾಗೂ ನೂತನ ಡ್ಯಾಶ್‍ಬೋರ್ಡ್ ವಿನ್ಯಾಸ, ಆಡಿಯೋ ರಿಮೋಟ್ ಕಂಟ್ರೋಲ್, ಮಿರರ್ ಲಿಂಕ್ ಮತ್ತು ಸ್ಮಾರ್ಟ್ ಫೋನ್ ಆ್ಯಪ್, ಆಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್ ಪ್ಲೇ ವ್ಯವಸ್ಥೆ ಹೊಂದಿದೆ. 17.64 ಸೆಂ.ಮೀ.ನ ಟಚ್‍ಸ್ಕ್ರೀನ್ ಆಡಿಯೋ ವಿಡಿಯೋ ಸಿಸ್ಟಂ, ರಿಯರ್ ಪಾರ್ಸೆಲ್ ಟ್ರೇ, ರಿಯರ್ ಸೀಟ್ ಬೆಂಚ್ ಫೋಲ್ಡಿಂಗ್, ಪವರ್ ಪೋರ್ಟ್, ಯುಎಸ್‍ಬಿ ಪೋರ್ಟ್ ಇದೆ.

    ಬ್ರೇಕ್, ಸಸ್ಪೆನ್‍ಷನ್ ಹಾಗೂ ಇಂಧನ ಸಾಮರ್ಥ್ಯ:
    ಮುಂದುಗಡೆ ಡಿಸ್ಕ್ ಬ್ರೇಕ್, ಮೆಕ್‍ಫೆರ್ಸನ್ ಸ್ಟ್ರಟ್ ಸಸ್ಪೆನ್‍ಷನ್ ಹೊಂದಿದ್ದರೆ, ಹಿಂದುಗಡೆ ಡ್ರಮ್ ಬ್ರೇಕ್ ವ್ಯವಸ್ಥೆ ಹಾಗೂ ಕಪಲ್ಡ್ ಟಾರ್ಷನ್ ಬೀಮ್ ಆಕ್ಸೆಲ್ ಸಸ್ಪೆನ್‍ಷನ್, ಒಟ್ಟು 35 ಲೀಟರ್ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

    ಇತರೆ ಫೀಚರ್ ಗಳು:
    ಆರಾಮವಾಗಿರುವ ಸೀಟುಗಳು, ರೀಯರ್ ಎಸಿ ವೆಂಟ್ಸ್, ರಿಯರ್ ವೈಫರ್, ಸ್ಟೀಯರಿಂಗ್‍ನಲ್ಲೇ ಆಡಿಯೋ, ಬ್ಲೂಟೂತ್ ನಿಯಂತ್ರಣ ವ್ಯವಸ್ಥೆ, ಎಲೆಕ್ಟ್ರಾನಿಕ್ ಔಟ್‍ಸೈಡ್ ರಿಯರ್ ವಿವ್ಯೂ ಮಿರಸ್, ವಾಯ್ಸ್ ರೆಕಗ್ನೈಸಿಂಗ್ ಬಟನ್, ಫುಲ್ ಎರ್ ಕಂಟ್ರೋಲರ್ ಸಿಸ್ಟಮ್, ಪ್ಯಾಸೆಂಜರ್ ವ್ಯಾನಿಟಿ ಮಿರರ್ ಸಹ ಒಳಗೊಂಡಿದೆ.

    ಮೈಲೇಜ್ ಎಷ್ಟು?
    ಆಟೋಮೇಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‍ಎಐ) ಪರೀಕ್ಷೆಯ ವರದಿಗಳ ಪ್ರಕಾರ ಪ್ರತಿ ಲೀಟರ್‍ಗೆ 20.3 ಕಿ.ಮೀ ಮೈಲೇಜ್ ನೀಡುತ್ತದೆ.

    ಯಾವ ಬಣ್ಣಗಳಲ್ಲಿ ಲಭ್ಯವಿದೆ?
    ನೂತನ ಸ್ಯಾಂಟ್ರೋ ಇಂಪಿರಿಯಲ್ ಬೀಜ್, ಮರಿನಾ ಬ್ಲ್ಯೂ, ಫಿಯರಿ ರೆಡ್, ತೈಫೂನ್ ಸಿಲ್ವರ್, ಪೊಲಾರ್ ವೈಟ್, ಸ್ಟಾರ್ ಡಸ್ಟ್ ಮತ್ತು ಡಯಾನಾ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬೆಲೆ ಎಷ್ಟು?
    ಸ್ಯಾಂಟ್ರೋ ಕಾರಿನ ಪೆಟ್ರೋಲ್ ಮಾದರಿಯ ಅಂದಾಜು ಬೆಲೆ ಆವೃತ್ತಿಗಳ ಮ್ಯಾನುವಲ್ ಟ್ರಾನ್ಸ್‍ಮಿಷನ್ ಪೈಕಿ, ಡಿ-ಲೈಟ್ 3,89,900 ರೂ. ಎರ್ರಾ 4,24,900 ರೂ. ಮ್ಯಾಗ್ನ 4,57,900 ರೂ. ಸ್ಪೋರ್ಟ್ಸ್ 4,99,900 ಹಾಗೂ ಆ್ಯಸ್ತಾ 5,45,900 ರೂಪಾಯಿ ಇರಲಿದೆ.

    ಸಿಎನ್‍ಜಿ ಮಾದರಿ ಮ್ಯಾನುವಲ್ ಟ್ರಾನ್ಸ್‍ಮಿಷನ್ ಆವೃತ್ತಿಗಳ ಪೈಕಿ ಮ್ಯಾಗ್ನಾ 5,18,900 ರೂ. ಹಾಗೂ ಸ್ಪೋರ್ಟ್ಸ್ 5,46,900 ಇದೆ. ಪೆಟ್ರೋಲ್ ಮಾದರಿಯ ಸ್ಮಾರ್ಟ್ ಆಟೋಮ್ಯಾಟಿಕ್ ಆವೃತ್ತಿಯ ಮ್ಯಾಗ್ನಾಗೆ 5,23,900 ರೂ. ಹಾಗೂ ಸ್ಪೋರ್ಟ್ಸ್ ಮಾದರಿಗೆ 5,64,900 ರೂ. ಆಗಿರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
    ಅದ್ವೈತ್ ಹ್ಯುಂಡೈ
    #32, ರೆಸಿಡೆನ್ಸಿ ರಸ್ತೆ, ಬೆಂಗಳೂರು- 560025
    ಸೇಲ್ಸ್ – 97310-97310
    ಇಮೇಲ್ : sales@advaithhyundai.com
    ವೆಬ್‍ಸೈಟ್: www.advaithhyundai.com