Tag: Santosh Padmannavar

  • ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬಳ್ಳಾರಿ: ಬೆಳಗಾವಿಯಲ್ಲಿ ಉದ್ಯಮಿ ಸಂತೋಷ್ ಪದ್ಮನ್ನವರ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತನ ಕರಾಳ ಮುಖದ ಪರಿಚಯವಾಗಿದೆ. ಹತ್ಯೆಯಾದ ಉದ್ಯಮಿಯ ಮನೆ ತಪಾಸಣೆ ವೇಳೆ ಆತ ಬೇರೆ ಬೇರೆ ಹೆಣ್ಣುಗಳ ಜೊತೆ ಕಳೆದ ಖಾಸಗಿ ವೀಡಿಯೋಗಳಿರುವ 13 ಹಾರ್ಡ್ ಡಿಸ್ಕ್‌ಗಳು ಪತ್ತೆಯಾಗಿವೆ.

    ಡಿಸ್ಕ್‌ಗಳು, ಸಿಸಿಟಿವಿ ಡಿವಿಆರ್, ಮೂರು ಪೆನ್‍ಡ್ರೈವ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳನ್ನು ಪರಿಶೀಲನೆಗಾಗಿ ಎಫ್‍ಎಸ್‍ಎಲ್‍ಗೆ ಕಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಅ.9ರಂದು ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ಸಂಶಯ ಬಂದು ಅ.14ರಂದು ತಾಯಿ ಸೇರಿ 5 ಜನರ ವಿರುದ್ಧ ಸಂತೋಷ್‍ನ ಮಗಳು ಕೊಲೆ ಕೇಸ್ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದಾಗ, ಪತ್ನಿ ಉಮಾ ಹಾಗೂ ಇಬ್ಬರು ಫೇಸ್‍ಬುಕ್ ಗೆಳೆಯರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

    ತನಿಖೆ ವೇಳೆ ಹಾರ್ಡ್ ಡಿಸ್ಕ್‌ನಲ್ಲಿರುವ ಗಂಡನ ಅಶ್ಲೀಲ ವೀಡಿಯೋ ಕುರಿತು ಪತ್ನಿ ಉಮಾ ಮಾಹಿತಿ ನೀಡಿದ್ದಳು. ಅಲ್ಲದೇ ಮಕ್ಕಳೆದುರು ಕೂಡ ಬೆತ್ತಲಾಗಿ ಸಂತೋಷ್ ಓಡಾಡುತ್ತಿದ್ದ ಎಂದು ಹೇಳಿದ್ದಳು.

    ಪ್ರಕರಣ ಸಂಬಂಧ ಸಂತೋಷ್ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

  • ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಬೆಳಗಾವಿ: ಉದ್ಯಮಿ ಸಂತೋಷ ‌ಪದ್ಮನ್ನವರ (Santosh Padmannavar) ಕೊಲೆ ಪ್ರಕರಣದ (Murder Case) ಮೂವರು ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಬೆಳಗಾವಿಯಲ್ಲಿ (Belagavi) ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ಸಂತೋಷ ಪದ್ಮನ್ನವರ ಅಕ್ಟೋಬರ್ 9 ರಂದು ಮೃತಪಟ್ಟಿದ್ದರು. ತಂದೆಯ ಸಾವಿನ ಬಗ್ಗೆ ಪುತ್ರಿ ಸಂಜನಾ ಪದ್ಮನ್ನವರ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ಪ್ರಕರಣದ ಮೂವರು ಆರೋಪಿಗಳಾದ ಸಂತೋಷ ‌ಪತ್ನಿ ಉಮಾ ಪದ್ಮನ್ನವರ, ಶೋಭಿತ್‌ಗೌಡ, ಪವನ್ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.

    ಮಂಗಳೂರಲ್ಲಿ ತಲೆ ಮರೆಸಿಕೊಂಡಿದ್ದ ಶೋಭಿತ್‌ಗೌಡ, ಪವನ್ ವಶಕ್ಕೆ ಪಡೆದಿದ್ದ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಇಡೀ ದಿನ ವಿಚಾರಣೆ ಆದ ಬಳಿಕ ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿಗಳನ್ನು  14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದ್ದು ಮೂವರನ್ನೂ ಹಿಂಡಲಗಾ ಜೈಲಿಗೆ ಮಾಳಮಾರುತಿ ಠಾಣೆ ಪೊಲೀಸರು ರವಾನಿಸಿದ್ದಾರೆ.